ಬೈಂದೂರು: ಇಲ್ಲಿನ ಸುರಭಿ ಕಲಾಶಾಲೆಯ ಆಶ್ರಯದಲ್ಲಿ ಸ್ಥಳೀಯ ಆಶ್ರಮಶಾಲೆಯಲ್ಲಿ ಐದು ದಿನಗಳ ರಂಗಕಲಾ ಕಮ್ಮಟಕ್ಕೆ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸಾಹಿತ್ಯದಲ್ಲಿ ಒಬ್ಬ ವ್ಯಕ್ತಿಯ ಸೃಜನಶೀಲತೆ ಪ್ರಕಟಗೊಳ್ಳುತ್ತದಾದರೆ ರಂಗಕಲೆಯಲ್ಲಿ ಹಲವರ ಸೃಜಶೀಲತೆ ಮೇಳೈಸುತ್ತದೆ. ರಂಗಕಲೆಗೆ ಸಾಹಿತ್ಯದ ಮಿತಿಗಳನ್ನು ದಾಟುವ ಸಾಮರ್ಥ್ಯ ಇದೆ. ಅದು ಹೆಚ್ಚು ಶಕ್ತಿಶಾಲಿಯಾಗಿ ಪ್ರೇಕ್ಷಕರನ್ನು ತಲಪುತ್ತದೆ ಎಂದರು. ಕಮ್ಮಟದ ನಿರ್ದೇಶಕ ಉತ್ತರ ಕನ್ನಡದ ’ಚಿಂತನ’ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ, ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ ಮಾತನಾಡಿ ರಂಗಕಲೆಯ ಪ್ರಕ್ರಿಯೆಗಳನ್ನು ಬಳಸಿಕೊಂಡರೆ ಶಿಕ್ಷಣ ಹೆಚ್ಚು ಪರಿಣಾಮಕಾರಿಯೂ, ಆನಂದದಾಯಕವೂ ಆಗುತ್ತದೆ. ಅದೇ ಕಾರಣಕ್ಕಾಗಿ ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣದಲ್ಲಿ ರಂಗಕಲೆ ಬಳಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ. ಅದರ ಯಶಸ್ವಿ ಪ್ರಯೋಗಗಳು ಹಲವೆಡೆ ನಡೆದಿವೆ ಎಂದರು. ಬೈಂದೂರಿನ ಹಿರಿಯ ರಂಗ ಕಲಾವಿದರು, ಶಿಕ್ಷಕರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ಸುರಭಿಯ ನಿರ್ದೇಶಕ ಸುಧಾಕರ ಪಿ. ಬೈಂದೂರು ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪುರ: ಇಲ್ಲಿನ ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ ಅ.೨೬ ಸಂಜೆ ೪ಗಂಟೆಗೆ ಯಡ್ತರೆ ಮಂಜಯ್ಯ ಶೆಟ್ಟಿ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಲಿದೆ. ಸಮಾರಂಭವನ್ನು ಹಿರಿಯ ಉದ್ಯಮಿ ಆರ್. ಎನ್. ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದು ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎಂದು ಟ್ರಸ್ಟ್ ನ ಪ್ರಮುಖ ಅಪ್ಪಣ್ಣ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಈ ಭಾರಿ ಅಬುದಾಬಿಯ ಖ್ಯಾತ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಎ.ಜಿ. ಕೊಡ್ಗಿ, ನಿಟ್ಟೆ ವಿವಿ ಕುಲಾಧಿಪತಿ…
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಅಕ್ಟೋಬರ್ ತಿಂಗಳ ಕಾರ್ಯಕ್ರಮವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸುಪುತ್ರರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರ ಪ್ರಾಯೋಜಕತ್ವದಲ್ಲಿ ಅ.೧೮ರಂದು ಶ್ರೀಮತಿ ವರದಾ ಮಧುಸೂದನ ಐತಾಳ್‌ರ ನೇತೃತ್ವದ ಶ್ರೀ ಸಾಯಿ ಕಲಾ ಪ್ರತಿಷ್ಠಾನ ಶಿವಮೊಗ್ಗ ಇವರಿಂದ ದಕ್ಷ ಯಜ್ಞ ಮಹಿಳಾ ಯಕ್ಷಗಾನ ಜರುಗಿತು. ದಿ.ಯಜ್ಞನಾರಾಯಣ ಐತಾಳ್‌ರ ಸವಿ ನೆನಪಿಗಾಗಿ ನಿವೃತ್ತ ಹಿರಿಯ ಶಿಕ್ಷಕರಾದ ಶ್ರೀಮತಿ ಎಂ.ಎಂ. ಕ್ರಾಸ್ತಾ ಹಾಗೂ ಉಪ್ಪಿನಕುದ್ರು ರಮೇಶ್ ಐತಾಳ್‌ರನ್ನು ಸನ್ಮಾನಿಸಿದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ಕಾರ್ಯಕ್ರಮದ ಪ್ರಾಯೋಜಕರಾದ ಮಧುಸೂದನ ಐತಾಳ್ ಹಾಗೂ ರಾಮಕೃಷ್ಣ ಐತಾಳ್‌ರನ್ನು ಗೌರವಿಸಿದರು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಟಿ.ಎನ್.ಪ್ರಭು ತಲ್ಲೂರು ಉಪಸ್ಥಿತರಿದ್ದರು. ನಾಗೇಶ್ ಶ್ಯಾನುಭಾಗ್ ಹಾಗೂ ಉದಯ ಭಂಡಾರ್‌ಕಾರ್ ಕಾರ್ಯಕ್ರಮ ನಿರೂಪಿಸಿದ್ದರು.
ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ಶಾರದೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಬೈಂದೂರು: ಉತ್ಸವಗಳು ಪ್ರಕೃತಿ, ಸಂಸ್ಕೃತಿ, ಪರಂಪರೆ ಹಾಗೂ ಬಾಂಧ್ಯವ್ಯನನ್ನು ಗಟ್ಟಿಗೊಳಿಸುವುದರೊಂದಿಗೆ ನಮ್ಮೊಳಗಿನ ರಾಕ್ಷಸೀತನವನ್ನು ಹೋಗಲಾಡಿಸಿ ಮಾನವೀಯತೆಯನ್ನು ಹೊರತರಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ ಎಂದು ಉಪ್ಪುಂದ ಓಂಗಣೇಶ್ ಕಾಮತ್ ಅಭಿಪ್ರಾಪಟ್ಟರು. ಬೈಂದೂರು ಶ್ರೀಸೇನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. [quote bgcolor=”#ffffff” arrow=”yes” align=”right”]* ಜಾತಿ-ಧರ್ಮಗಳ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕದಡುವ ಇಂದಿನ ದಿನಗಳಲ್ಲಿ ಇಂತಹ ಉತ್ಸವಗಳ ಮೂಲಕ ಸೌಹಾರ್ದತೆಯ ಸಂದೇಶ ನೀಡುವ ಮೂಲಕ ನಮ್ಮೊಳಗಿನ ಬಾಂದವ್ಯ ಗಟ್ಟಿಗೊಳಿಸಬೇಕು.- ರಂಗಕರ್ಮಿ ಬಿ. ಗಣೇಶ ಕಾರಂತ್ ಬೈಂದೂರು[/quote] ಮಾಗಿದ ಮೇಲೆ ಬಾಗುವುದು ಪ್ರಕೃತಿ ನಿಯಮ. ಆದರೆ ಈಗಿನ ಕಾಲಘಟ್ಟದಲ್ಲಿ ಮಾಗಿದ ಮೇಲೆ ಬೀಗುವುದನ್ನು ಕಾಣುತ್ತೇವೆ. ತ್ಯಾಗಕ್ಕೆ ಯಾರು ಆದರ್ಶ ಹಾಗೂ ಮಾದರಿಯಾಗಿರುವರೋ ಅವರು ’ಯಜಮಾನ’ ಅನ್ನಿಸಿಕೊಂಡರೆ ನಮ್ಮೊಳಗಿನ ಕೆಟ್ಟವಿಚಾರಗಳನ್ನು ಕಳೆದುಕೊಳ್ಳಲು ಮತ್ತು ಚಿಂತನೆಗಳನ್ನು ಹಂಚಿಕೊಳ್ಳಲು ಇರುವ ಸ್ಥಳ ’ದೇವಸ್ಥಾನ’ ಎಂದರು.…
ಬೈಂದೂರು: ಉಪ್ಪುಂದ ದೇವಾಡಿಗ ಸಂಘ ಮಹಿಳಾ ಘಟಕದ ’ಪ್ರೇರಣಾ’ ವತಿಯಿಂದ ಮಹಿಳಾ ಜಾಗೃತಿ ಸಮಾವೇಶ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. ಸಮಾವೇಶ ಉದ್ಘಾಟಿಸಿದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಮಾತನಾಡಿ ಪುರುಷ ಪ್ರಧಾನ ಸಮಾಜದಲ್ಲಿ ಈಗ ಮಹಿಳೆಯರೂ ಅವರಿಗಿಂತ ಕಡಿಮೆ ಇಲ್ಲದ ರೀತಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಸಮಾಜ ಹಾಗೂ ಕುಟುಂಬದ ಎರಡು ಕಣ್ಣುಗಳಿದ್ದಂತೆ. ಆದರೆ ಈಗ ಸದಾ ದೌರ್ಜನ್ಯ, ಅತ್ಯಾಚಾರ, ಅಮಾನವೀಯ ಕೃತ್ಯಗಳಿಗೆ ಬಲಿಯಾಗುತ್ತಿರುವ ಮಹಿಳೆಯರು ಸಮಾಜದಲ್ಲಿ ಜಾಗೃತಗೊಂಡು ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದರು. ತಾಪಂ ಸದಸ್ಯೆ ಗೌರಿ ದೇವಾಡಿಗ ಮಹಿಳೆ ಮತ್ತು ಕುಟುಂಬದ ವಿಷಯವಾಗಿ ಮಾತನಾಡಿದರು. ನಾಗರತ್ನ ಸುರೇಶ್ ದೇವಾಡಿಗ, ಅಕ್ಷತಾ ವೆಂಕಟರಮಣ ದೇವಾಡಿಗ, ಜ್ಯೋತಿ ವೆಂಕಟರಮಣ, ಸಮಿತಿ ಕಾರ್ಯದರ್ಶಿ ಅಂಬಿಕಾ ಶ್ರೀಧರ ದೇವಾಡಿಗ ಉಪಸ್ಥಿತರಿದ್ದರು. ವಿನೋದಾ ಎಂ.ದೇವಾಡಿಗ ಸ್ವಾಗತಿಸಿ, ಮೇನಕಾ ವಂದಿಸಿದರು. ಶ್ರೀಲತಾ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಹಿಂದೂ ಸಂಪ್ರದಾಯದಂತೆ ಆಗಮಿಸಿದ ಮಹಿಳೆಯರಿಗೆ ಅರಸಿನ-ಕುಂಕುಮ ನೀಡಿ ಸ್ವಾಗತಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ…
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ರಾಮ ಸೇವಾ ಸಂಘ ನಡೆಸುವ 56 ನೇ ಶ್ರೀ ಶಾರದಾ ಪೂಜಾ ಮಹೋತ್ಸವದ ಶ್ರೀ ಶಾರದಾ ದೇವಿಯ ವಿಗ್ರಹ.
ಕುಂದಾಪುರ: ಇಲ್ಲಿನ ಕೋಟೇಶ್ವರದ ಗೌಡ ಸಾರಸ್ವತ ಬ್ರಾಹ್ಮಣರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಚಾತುರ್ಮಾಸ ವೃತ ಆಚರಿಸುತ್ತಿರುವ ಶ್ರೀ ಕಾಶೀ ಮಠಾಧೀಶ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮಿಗಳಿಂದ ನವರಾತ್ರಿಯ ಪರ್ವಕಾಲದಲ್ಲಿ ಶ್ರೀ ವೇದವ್ಯಾಸ ದೇವರು (ವೇದವ್ಯಾಸ ರಘುಪತಿ ದೇವರು) ಪ್ರತಿದಿನ ವಿವಿಧ ಅಲಂಕಾರಗಳೊಂದಿಗೆ ಪೂಜಿಸಲ್ಪಟ್ಟಿತು. ನವರಾತ್ರಿ ಹಾಗೂ ಸ್ವಾಮಿಗಳ ಚಾತರ್ಮಾಸದ ಪ್ರಯುಕ್ತ ದೇವಳದಲ್ಲಿ ಪ್ರತಿನಿತ್ಯವೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲಿದೆ. ಚಿತ್ರದಲ್ಲಿ ಐರಾವತ ವಾಹನ ಆರೂಢ, ಶೇಷ ವಾಹನ ಆರೂಢ, ಬೆಳ್ಳಿ ಗರುಡ ವಾಹನ ಆರೂಢ, ತೊಟ್ಟಿಲು ವಾಹನ ಆರೂಢ ಶ್ರೀ ವೇದವ್ಯಾಸ ದೇವರನ್ನು ಕಾಣಬಹುದು.
ಕುಂದಾಪುರ: ಭಾನುವಾರ ರಾತ್ರಿ ಶಿವಮೊಗ್ಗದ ಬಾಳೆಹೊನ್ನೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ತಾಲೂಕಿನ ಇಡೂರು-ಕುಜ್ಞಾಡಿಯ ಸುರೇಶ್ ಶೆಟ್ಟಿ ನೈಕಂಬ್ಳಿ (27) ಎಂಬುವವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಘಟನೆಯ ವಿವರ: ಇಡೂರು-ಕುಂಜ್ಞಾಡಿಯ ರಾಜು ಶೆಟ್ಟಿ ಎಂಬುವವರ ಮಗನಾದ ಸುರೇಶ್ ಶೆಟ್ಟಿ ಬಾಳೆಹೊನ್ನೂರಿನ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ರಜೆ ಇದ್ದ ಕಾರಣ ದೇವಸ್ಥಾನಕ್ಕೆ ತೆರಳಿದ್ದ ಅವರು ದೇವರ ದರ್ಶನ ಪಡೆದು ಬೇರೊಂದು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಟ್ಯಾಕ್ಟರ್ ವೊಂದಕ್ಕೆ ಢಿಕ್ಕಿಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಬೇರೊಂದು ನೌಕರಿ ಹುಡುಕಿದ್ದ ಅವರು ಒಂದೆರಡು ದಿನಗಳಲ್ಲಿ ಊರಿಗೆ ಹಿಂತಿರುಗುವವರಿದ್ದರು ಎನ್ನಲಾಗಿದೆ. ಸ್ನೇಹಜೀವಿಯಾಗಿದ್ದ ಸುರೇಶ್ ನಿಧನ ಸುದ್ದಿ ಕೇಳುತ್ತಿದ್ದಂತೆ ಅವರ ಕಂಪೆನಿಯ ಎಲ್ಲಾ ಸಹೋದ್ಯೋಗಿಗಳು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಇತ್ತಿಚಿಗಷ್ಟೇ ಮೃತ ಸುರೇಶ್ ಶೆಟ್ಟಿಯವರ ತಂದೆ ರಾಜು ಶೆಟ್ಟಿ ಅವರ ಇಡೂರಿನಲ್ಲಿರುವ ಅಂಗಡಿಗೆ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿತ್ತು. ಈಗ ಮಗನನ್ನು ಕಳೆದುಕೊಂಡ…
ಕುಂದಾಪುರ: ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾದ ಕಂಡ್ಲೂರು ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೆರೆಮರೆಯಲ್ಲಿ ಕೋಮು ಸಂಘರ್ಷ ಮುಂದುವರಿದಿದೆ. ಪೊಲೀಸರ ಶಾಂತಿ ಸಭೆಯ ಬಳಿಕವೂ ಯಾರೋ ಕಿಡಿಗೇಡಿಗಳು ಶಾರದೋತ್ಸವಕ್ಕಾಗಿ ಹಾಕಿದ್ದ ಹಿಂದೂ ಧರ್ಮದ ಭಗವಧ್ವಜಕ್ಕೆ ಭಾನುವಾರ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯ ವಿವರ: ಕಂಡ್ಲೂರಿನಲ್ಲಿ ನಡೆಸಲುದ್ದೇಶಿಸಿರುವ 50ನೇ ವರ್ಷದ ಶಾರದೋತ್ಸದ ಪ್ರಯುಕ್ತ ಪೇಟೆಯ ಸುತ್ತಲೂ ಬಂಟಿಗ್ಸ್, ಬ್ಯಾನರ್, ಬಾವುಟಗಳನ್ನು ಹಾಕಲಾಗಿತ್ತು. ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ಸಲುವಾಗಿ ಭಾನುವಾರ ರಾತ್ರಿ ವೇಳೆಗೆ ಕಂಡ್ಲೂರು ಸೇತುವೆಯ ಸಮೀಪ ರಸ್ತೆಯ ಮೇಲ್ಬಾಗದಲ್ಲಿ ಹಾಕಲಾಗಿದ್ದ ಕೇಸರಿ ಭಗವಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಕಂಡ್ಲೂರಿನಲ್ಲಿ ವಾರದ ಹಿಂದಷ್ಟೇ ಶಾರದೋತ್ಸವದ ವಿಚಾರವಾಗಿಯೇ ಹಿಂದೂ ಯುವಕರ ಮೇಲೆ ಅನ್ಯಕೋಮಿನ ಹುಡುಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆ ಪೈಕಿ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಕೋಮು ಸೂಕ್ಷ್ಮ ಪ್ರದೇವಾದ್ದರಿಂದ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಸಿದ್ದರು. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ…
ಕುಂದಾಪುರ: ಪಶ್ಚಿಮ ಘಟ್ಟ ಜೀವ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನಲಾದ ಪ್ರದೇಶಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಪ್ರಥಮವಾಗಿ ಗಡಿ ಗುರುತಿಸುವಿಕೆ, ಭೌಗೋಳಿಕ ಸಮೀಕ್ಷೆಯನ್ನು ಮಾಡಬೇಕಾಗಿತ್ತು. ಆ ಕೆಲಸ ಆಗದೇ ಇವತ್ತು ಗೊಂದಲಗಳು ಉಂಟಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೋಷರೋಪಣೆಯನ್ನು ಮಾಡುವುದನ್ನು ಬಿಟ್ಟು ರೈತರು, ಜನಸಾಮಾನ್ಯರ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕಾಗಿದೆ. ಜನರಿಗೆ ಮತ್ತೆ ಮತ್ತೆ ಸಮಸ್ಯೆಗಳು ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದರು. ವಂಡ್ಸೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಅರಣ್ಯ ಇಲಾಖೆಯ ವಿಶ್ರಾಂತಿದಾಮದಲ್ಲಿ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಿಂದ ವಂಡ್ಸೆ ಗ್ರಾಮವನ್ನು ಕೈ ಬಿಡಬೇಕು ಎನ್ನುವ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್‌ಕರ್ ಮಾತನಾಡಿ, ಈ ಹಿಂದೆ 35ಗ್ರಾಮಗಳು ಉಡುಪಿ ಜಿಲ್ಲೆಯಲ್ಲಿ ವರದಿ ವ್ಯಾಪ್ತಿಗೆ ಬಂದಿತ್ತು. ನಂತರ ಅದು 22ಕ್ಕೆ ಇಳಿದಾಗ ವಂಡ್ಸೆ ಗ್ರಾಮ ವರದಿಯ ವ್ಯಾಪ್ತಿಯಿಂದ ಹೊರಗೂಳಿಯಿತು. ಮತ್ತೆ ಹೇಗೆ ಸೇರ್ಪಡೆಗೊಂಡಿತ್ತು…
