ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ೧೬ನೇ ಹಂತದ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ಜಾಗೃತಿ ಫಲಕ ಹಾಗೂ ಜಾಗೃತಿ ಘೋಷದೊಂದಿಗೆ ಕೋಡಿ ನಾಗರಿಕ ವೃಂದದವರಿಗೆ ಕಡಲತೀರ ಮತ್ತು ಪರಿಸರ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾಗೃತಿ ಅಭಿಯಾನವು ಊರಿನ ವಿವಿಧೆಡೆಯಲ್ಲಿಸಂಚರಿಸುವುದರೊಂದಿಗೆ, ಸುಂದರ ತಾಣ ಸೀ ವಾಕ್ ನಲ್ಲಿ ಅಂತ್ಯಗೊಂಡಿತು. ತದನಂತರದಲ್ಲಿ ಕೋಡಿ ಕಡಲತೀರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ- ಶಿಕ್ಷಕೇತರರು, ವಿದ್ಯಾರ್ಥಿಗಳು , ಆಡಳಿತ ಮಂಡಳಿಯ ಸದಸ್ಯರು , ರಕ್ಷಕ – ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಊರಿನ ಗಣ್ಯರು ಹಾಗೂ ಪರಿಸರ ಪ್ರಿಯರು ಈ ೧೬ ನೇ ಅಭಿಯಾನದಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡರು. ಈ…
Author: ನ್ಯೂಸ್ ಬ್ಯೂರೋ
ಕ್ರೀಷ್ಮಾ ಆರ್ನೋಜಿ | ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶೋಕಿರಣ ಕಟ್ಟಡದಲ್ಲಿ ಆಯೋಜಿತವಾಗಿರವ ಕಲಾಮೇಳದಲ್ಲಿ ಭಾರತದ ವಿವಿಧ ರಾಜ್ಯಗಳ ಬುಡಕಟ್ಟು ಜನಾಂಗಗಳ ಅದ್ಭುತ ಲೋಕವೇ ಅನಾವರಣಗೊಂಡಿದೆ. ಇಲ್ಲಿ ಬುಡಕಟ್ಟು ಸಮುದಾಯಗಳ ಬದುಕಿನ ವಿವಿಧ ಸ್ವರೂಪ ಸೆರೆಹಿಡಿದಿರುವ ಫೋಟೋಗಳು ಹಲವರನ್ನು ಸೆಳೆಯುತ್ತಿವೆ. ಒಂದೊಂದು ಪೋಟೋ ಬುಡಕಟ್ಟು ಜನಾಂಗದ ಜೀವನಶೈಲಿಯ ವಿಶೇಷತೆಯನ್ನು ಪರಿಚಯಿಸುತ್ತದೆ. ಈ ಪೋಟೋಗಳನ್ನು ಕ್ಲಿಕ್ಕಿಸಿದವರು ಛಾಯಾಚಿತ್ರಗಾರರಾದ ಅಂದೆಕಾರ್ ಸತೀಶ್ ಲಾಲ್. ತೆಲಂಗಾಣ ರಾಜ್ಯದ ಹೈದರಾಬಾದ್ನರಾದ ಇವರು ಕಳೆದ ೨೦ ವರ್ಷಗಳಿಂದ ಬುಡಕಟ್ಟು ಸಂಬಂಧಿತ ಬದುಕಿನ ವಿವರಗಳನ್ನು ಫೋಟೋಗಳ ಮೂಲಕ ದಾಖಲಿಸುತ್ತಿದ್ದಾರೆ. ಹೀಗೆ ದಾಖಲಿಸಿದ ಫೋಟೋಗಳೇ ಜಾಂಬೂರಿ ಕಲಾಮೇಳದ ವಿಶೇಷ ಆಕರ್ಷಣೆಯಾಗಿವೆ. ಬುಡಕಟ್ಟು ಪೋಟೋಗ್ರಪಿ ಪ್ರದರ್ಶನದಲ್ಲಿ ತೆಲಂಗಾಣದ ಗೊಂಡಾ, ಕೋಯಾ, ಒಡಿಶಾದ ಭೂಮಿಯಾ, ಲಂಜಿಯಾ ಸಾರೋ, ಡೋಂಗ್ರಿಯಾ, ಬೊಂಡಾ ಬುಡಕಟ್ಟು, ಮಧ್ಯಪ್ರದೇಶದ ಬೈಗಾ, ನಾಗಾಲಾಂಡ್ನ ಕೊನ್ಯಾಕ್, ಆಂಧ್ರಪ್ರದೇಶದ ವಾಲ್ಮೀಕಿ ಬುಡಕಟ್ಟು, ಅರುಣಾಚಲ ಪ್ರದೇಶದ ಅಪತಾನಿ, ಗುಜರಾತ್ನ ರಾಬರಿ, ಕುತ್ತಿಯಾ ಕೊಂಡ್, ರಾಜಸ್ಥಾನದ ಜತ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾಂಬೂರಿಯ ಹಲವಾರು ಮೇಳಗಳಲ್ಲಿ ತಿಂಡಿ ತಿನಿಸು, ಕರಕುಶಲ ವಸ್ತುಗಳು, ವರ್ಣಮಯ ಕಿವಿಯೋಲೆಗಳ ಅಂಗಡಿ, ಹೀಗೆ ಹತ್ತಾರು ಬಗೆಯ ಮಳಿಗೆಗಳಿವೆ. ಈ ಎಲ್ಲಾ ಅಂಗಡಿ ಮುಂಗಟ್ಟುಗಳ ನಡುವೆ ಆಕರ್ಷಿಣೀಯವಾಗಿ ಕಂಡದ್ದು, ಬ್ಯಾಟರಿ ರೋಬೋಟ್ ಯಂತ್ರ. ಘಮಘಮಿಸುವ ಗೋಬಿ, ರುಚಿಕರ ಚುರುಮುರಿ ಬಿಟ್ಟು ನೆರೆದಿರುವ ಅನೇಕರು ಬಹಳ ಕುತೂಹಲದಿಂದ ಆ ಯಂತ್ರದ ಬಳಿ ಹೋಗುತ್ತಿದ್ದರು. ಹೋದವರೆಲ್ಲರೂ ಒಂದು ಹೆಡ್ಫೋನ್ಸ್ ಹಾಕಿಕೊಂಡು ಏನೋ ಕೇಳುತ್ತಿದ್ದರು. ಕೇಳುಗರ ಮುಖದಲ್ಲಿ ಆಶ್ಚರ್ಯ, ನಗು ಎಲ್ಲ ಭಾವನೆಗಳ ಅನಾವರಣವಾಗುತ್ತಿತ್ತು. ಈ ಕೌತುಕಮಯ ಜನರು ಸೇರಿದ್ದ ಜಾಗವನ್ನು ಹತ್ತಿರ ಹೋಗಿ ನೋಡಿದಾಗ ಅದು ಭವಿಷ್ಯ ನುಡಿಯುವ ರೋಬೋಟ್! ಕೇವಲ ೨೦ ರೂಪಾಯಿ ಕೊಟ್ಟು ಹೆಡ್ಫೋನ್ ಕಿವಿಗೆ ಹಾಕಿದರೆ ಸಾಕು ಅದು ಭವಿಷ್ಯ ಹೇಳುತ್ತದೆ. ಕೇಳುವ ಮುಂಚಿತವಾಗಿ ಯಾವುದೇ ಮಾಹಿತಿ ನೀಡದಿದ್ದರೂ ದೇಹದ ತಾಪಮಾನದ ಆಧಾರದ ಮೇಲೆ ಭವಿಷ್ಯ ಹೇಳುವ ಈ ರೋಬೋರ್ಟ್ ನಿಜಕ್ಕೂ ವಿಶೇಷ. ಮೂಲತಃ ಬೆಂಗಳೂರಿನ ಬರಗೂರಿನವರಾದ ಜನಾರ್ಧನ್ ಸುಮಾರು ಇಪ್ಪತ್ತು ವರ್ಷಗಳಿಂದ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ರ್ಟೀಯ ಸಾಂಸ್ಕೃತಿಕ ಜಾಂಬೂರಿಯ ಕಲಾಮೇಳದ ವಿಶೇಷ ನಾರಿನ ಅಂಗಡಿಯೊಂದು ಜನರ ಆಕರ್ಷಣೆಯ ಕೇಂದ್ರವಾಗಿದೆ. ಪ್ಲಾಸ್ಟಿಕ್ನಿಂದ ಉಂಟಾಗುವ ಅಪಾಯವನ್ನು ಅರಿತ ಅದೆಷ್ಟೋ ಜನರು ದಿನಬಳಕೆಗಾಗಿ ಪ್ಲಾಸ್ಟಿಕ್ಗೆ ಪರ್ಯಾಯವನ್ನು ಹುಡುಕಿಕೊಂಡಿದ್ದಾರೆ. ಪರಿಸರ ಪೂರಕ ಮತ್ತು ಆರೋಗ್ಯಕರವಾದ ವಸ್ತುಗಳನ್ನು ಬಳಸುವುದರಿಂದ ಆಗುವಂತಹ ಉಪಯೋಗಗಳನ್ನು ಸ್ವತಃ ಅರಿತ ತುಮಕೂರಿನ ಶಿವಣ್ಣ ಅವರು ತುಪ್ಪದ ಹೀರೇಕಾಯಿ ನಾರಿನ ಉತ್ಪಾದನೆಯ ಅಂಗಡಿಯೊಂದನ್ನು ಪ್ರಾರಂಭಿಸಿದ್ದಾರೆ. ಈ ಮಳಿಗೆಯಲ್ಲಿ ನಾರಿನ ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಅತಿಯಾದ ಪರಿಸರ ಮಾಲಿನ್ಯದಿಂದಾಗಿ ಇತ್ತೀಚೆಗೆ ಚರ್ಮ ರೋಗಗಳ ಪ್ರಮಾಣ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಚರ್ಮ ರೋಗದಿಂದ ರಕ್ಷಣೆ ಪಡೆಯಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವ ಸದುದ್ದೇಶದಿಂದ ತುಪ್ಪದ ಹೀರೇಕಾಯಿಂದ ತಯಾರಾದ ಮೈ ಉಜ್ಜುವ ನಾರು, ಮತ್ತು ಬೆನ್ನು ಉಜ್ಜುವ ಬ್ರಶ್ ಸಿದ್ಧಪಡಿಸಿದ್ದಾರೆ. ಇವರ ಮಳಿಗೆಯ ಪ್ರತಿಯೊಂದು ಉತ್ಪನ್ನಗಳು ನೈಸರ್ಗಿಕವಾಗಿಯೇ ಸಿದ್ಧವಾಗಿವೆ ಎಂಬುದು ಬಹಳ ವಿಶೇಷ. ಇದಲ್ಲದೇ ಮೊಳಕಾಲು ನೋವು ಮತ್ತು ಕೀಲು ನೋವಿನ ನಿವಾರಣೆಗೆ…
ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಬಾಹ್ಯಾಕಾಶ ಕ್ಷೇತ್ರವೆಂಬುವುದು ಹಲವು ಕೌತುಕ ಮತ್ತು ರೋಚಕ ಸಂಗತಿಗಳ ತಾಣ. ಗ್ರಾಮೀಣರೂ ಸೇರಿದಂತೆ ಹಲವು ಮಕ್ಕಳಿಗೆ ಸರಿಯಾದ ಮಾಹಿತಿಯ ಕೊರತೆಯಿಂದ ಈ ಕ್ಷೇತ್ರದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ಮತ್ತು ಸೌರ ಮಂಡಲ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ವಿಜ್ಞಾನ ಮೇಳದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದಿಂದ ಸಂಚಾರಿ ಬಸ್ ಮತ್ತು ಮೇಳದ ಒಳಗೆ ರಾಕೆಟ್ ಉಡಾವಣಾ ವಾಹನ ಮತ್ತು ವಿವಿಧ ಕೃತಕ ಉಪಗ್ರಹಗಳ ಮಾದರಿಗಳನ್ನು ಪ್ರದರ್ಶಿಸಲಾಗುತ್ತಿದೆ. ನುಡಿಸಿರಿ ವೇದಿಕೆಯ ಪಕ್ಕದಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಂಚಾರಿ ಬಸ್ನಲ್ಲಿ ಜಿ.ಎಸ್.ಎಲ್.ವಿ, ಪಿ.ಎಸ್.ಎಲ್.ವಿ., ಎ.ಎಸ್.ಎಲ್.ವಿ, ಎಸ್.ಎಲ್.ವಿ-೩, ಆರ.ಎಲ್.ವಿ. ಟಿ.ಡಿ ರಾಕೆಟ್ ಉಡಾವಣಾ ವಾಹನಗಳ ಮಾದರಿ, ಭಾರತದ ಮೊದಲ ಕೃತಕ ಉಪಗ್ರಹವಾದ ಆರ್ಯಭಟ, ರೋಹಿಣಿ, ಭಾಸ್ಕರ, ಇನ್ಸಾಟ್ ಮತ್ತು ಆಸ್ಟ್ರೋಸಾಟ್ ಮೊದಲಾದ ಕೃತಕ ಉಪಗ್ರಹಗಳ ಮಾದರಿ, ಚಂದ್ರಯಾನ…
ಮಹಾಂತೇಶ ಚಿಲವಾಡಗಿ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ರಸ್ತೆ ಅಪಘಾತಗಳನ್ನು ತಡೆಯುವ ತಾಂತ್ರಿಕ ಆವಿಷ್ಕಾರದ ಪ್ರಯೋಗದ ?ಅಟೊಮ್ಯಾಟಿಕ್ ಸಿಗ್ನಲ್ ಲೈಟ್? ಮಾದರಿಯನ್ನು ಉಜಿರೆಯ ಎಸ್.ಡಿ.ಎಂ ಸೆಕೆಂಡರಿ ಫ್ರೌಡಶಾಲೆಯ ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ವಾಹನಗಳು ಹೆದ್ದಾರಿಯನ್ನು ಹಾದುಹೋಗುವಾಗ ಎದುರಿಸುವ ಅಡೆತಡೆಗಳನ್ನು ತಡೆಯುವ ಮುನ್ಸೂಚಕ ಮಾದರಿಯಾಗಿ ಇದು ಪ್ರಾಮುಖ್ಯತೆ ಪಡೆದಿದೆ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯಲ್ಲಿ ಆಯೋಜಿತವಾಗಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ವಿಜ್ಞಾನ ಮೇಳದಲ್ಲಿ ಈ ಮಾದರಿ ಜನಮೆಚ್ಚುಗೆ ಪಡೆಯುತ್ತಿದೆ. ಕಚ್ಚಾರಸ್ತೆಗಳ ಮೂಲಕ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸ್ಥಳಕ್ಕೆ ತಲುಪುವ ಮುಂಚಿನ ಹಾದಿಯಲ್ಲಿಯೇ ಸೆನ್ಸಾರ್ಗಳನ್ನು ಅಳವಡಿಸಿ ಚಾಲಕರನ್ನು ಸಿಗ್ನಲ್ಗಳ ಮೂಲಕ ಎಚ್ಚರಿಸಿ ಹೆದ್ದಾರಿಗೆ ತಲುಪುವ ವೃತ್ತದಲ್ಲಿ ವಾಹನದಟ್ಟಣೆಯಾಗದಂತೆ ಈ ತಂತ್ರಜ್ಞಾನ ನೋಡಿಕೊಳ್ಳುತ್ತದೆ. ಸಮಯದ ಉಳಿತಾಯ, ವಾಹನ ದಟ್ಟಣೆ ಮತ್ತು ಈ ಕಾರಣಕ್ಕಾಗಿಯೇ ಆಗುವ ಅಪಘಾತಗಳನ್ನು ಈ ಮಾದರಿ ತಡೆಯುತ್ತದೆ. ಹೆದ್ದಾರಿಗೆ ಜೋಡಣೆಯಾಗುವ ಮುಂಚಿನ ಕಚ್ಚಾರಸ್ತೆಯಲ್ಲಿ ಮೂರು ಸೆನ್ಸರ್ಗಳನ್ನು ಅಳವಡಿಸಲು ಈ ತಾಂತ್ರಿಕ ಮಾದರಿ ಸೂಚಿಸುತ್ತದೆ. ಮೊದಲನೆಯ ಸೆನ್ಸರ್ ಹತ್ತಿರ ಬಂದಾಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ರಕ್ತದಾನದ ಕುರಿತು ಭಿತ್ತಿಪತ್ರಗಳಲ್ಲಿ ಅರಿವು ಮೂಡಿಸಿದ್ದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಕೆಂಪು ಬಣ್ಣದ ವಸ್ತ್ರ ಧರಿಸಿ ರಕ್ತದಾನದ ಜಾಗೃತಿ ಮೂಡಿಸುವ ಚಿತ್ರಗಳನ್ನು ಸ್ವತಃ ತಾನೇ ಬಿಡಿಸಿಕೊಂಡು ಅರಿವು ಮೂಡಿಸುತ್ತಿದ್ದಾರೆ. ದಾವಣಗೆರೆಯ ಮಹಡಿಮನೆ ಶಿವಕುಮಾರ್ ರಕ್ತದಾನದ ಅರಿವು ಮೂಡಿಸುವ ಉದ್ದೇಶದಿಂದಲೇ ಆಳ್ವಾಸ್ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪಾಲ್ಗೊಂಡಿರುವುದು ವಿಶೇಷ. ಇಲ್ಲಿಯವರೆಗೆ ೯೦ ಬಾಟಲಿ ರಕ್ತದಾನ ಮಾಡಿರುವ ಇವರು ಈಗಲೂ ಅಗತ್ಯವಿರುವವರಿಗೆ ರಕ್ತದಾನ ಮಾಡಲು ತಯಾರಿದ್ದಾರೆ. ತನ್ನ ಮರಣಾನಂತರ ನೇತ್ರದಾನ ಹಾಗೂ ದೇಹದಾನ ಮಾಡಲು ಇಚ್ಛಿಸಿರುವ ಇವರು ದೇಶಾದ್ಯಂತ ರಕ್ತದಾನದ ಕುರಿತು ತಿಳುವಳಿಕೆ ಮೂಡಿಸುವ ಆಂದೋಲನ ಕೈಗೊಳ್ಳುವ ಸದಾಶಯ ಹೊಂದಿದ್ದಾರೆ. ಚಿಂತಾಜನಕ ಆರೋಗ್ಯ ಪರಿಸ್ಥಿಯಲ್ಲಿದ್ದ ಶಿವಕುಮಾರ್ ಅವರ ತಂಗಿಗೆ ಎಂಟು ಬಾಟಲಿ ರಕ್ತದ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ರಕ್ತದೊರೆಯದೇ ಸಾವಿಗೀಡಾದ ತಂಗಿಯ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂಬ ಕಾಳಜಿಯೊಂದಿಗೆ ರಕ್ತದಾನಕ್ಕೆ ಮುಂದಾದರು. ಅತ್ಯುತ್ಸಾಹದೊಂದಿಗೆ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ದೂರದರ್ಶಿತ್ವ, ಉದಾತ್ತ ಚಿಂತನೆ, ಕಾರ್ಯತತ್ಪರತೆಯ ಮೂಲಕ ಅನೇಕರಿಗೆ ಮಾದರಿಯಾಗಿದ್ದ ಡಾ. ಬಿ. ಯಶೋವರ್ಮ ಅವರ ವ್ಯಕ್ತಿತ್ವದ ಸ್ಫೂರ್ತಿದಾಯಕ ಆಯಾಮವನ್ನು ಹೊಸ ಪೀಳಿಗೆಗೆ ದಾಟಿಸುವ ಸದುದ್ದೇಶದೊಂದಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ತನ್ನ ಕ್ಯಾಂಪಸ್ನ ನೂತನ ಕಟ್ಟಡವೊಂದಕ್ಕೆ ಯಶೋಕಿರಣ ಎಂದು ಹೆಸರಿರಿಸಿ ನಮನ ಸಲ್ಲಿಸಿದೆ. ಈ ಕಟ್ಟಡಕ್ಕೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಿಂದಲೇ ವಿದ್ಯುಕ್ತ ಚಾಲನೆ ದೊರಕಿದೆ. ಜಾಂಬೂರಿನ ಸಂದರ್ಭದಲ್ಲಿ ಆಳ್ವಾಸ್ ಕ್ಯಾಂಪಸ್ನ ಯಶೋಕಿರಣದಲ್ಲಿ ಜರುಗುತ್ತಿರುವ ಕಲಾಮೇಳವು ಡಾ. ಬಿ. ಯಶೋವರ್ಮರ ಕ್ರಿಯಾಶೀಲ ಚಿಂತನೆಗಿದ್ದ ವೈವಿಧ್ಯತೆಯನ್ನೇ ಬಿಂಬಿಸುತ್ತಿದೆ. ಡಾ. ಬಿ. ಯಶೋವರ್ಮ ಅವರು ಸಾಹಿತ್ಯ, ಕಲೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಆಡಳಿತಾತ್ಮಕ ಪ್ರಕ್ರಿಯೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿದವರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಹತ್ತುಹಲವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಯೋಗಗಳನ್ನು ನಡೆಸಿದವರು. ಹೆಸರೇ ಸೂಚಿಸುವಂತೆ ತಮ್ಮ ಯಶಸ್ಸಿನೊಂದಿಗೆ ವಿದ್ಯಾರ್ಥಿಗಳ ಹಾಗೂ ಬೋಧಕವರ್ಗದ ಯಶಸ್ಸಿಗೆ ಕಾರಣರಾದವರು. ತಮ್ಮ ವ್ಯಕ್ತಿತ್ವದಿಂದ ಎಲ್ಲರಿಗೂ ಬಹುಬೇಗ ಹತ್ತಿರವಾಗುತ್ತಿದ್ದ ಯಶೋವರ್ಮ ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಾಡು ಮತ್ತು ಪರ್ವತಗಳು ಚಾರಣ ಪ್ರಿಯರಿಗೆ ಒಂದು ವಿಶಿಷ್ಠ ಪ್ರಪಂಚ. ಜಾಂಬೂರಿಯ ಸಂಭ್ರಮದ ನಡುವೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿದ್ಯಾಗಿರಿಯಲ್ಲಿ ನಿರ್ಮಿಸಿರುವ ಟ್ರಕ್ಕಿಂಗ್ ಪಾತ್, ಆಳ್ವಾಸ್ ಆವರಣದಲ್ಲಿ ಹೊಸ ಲೋಕವನ್ನೇ ತೆರೆದಿಟ್ಟಿದೆ. ಎತ್ತರದ ಗುಡ್ಡೆ, ಇಳಿಜಾರು, ತಗ್ಗು ಪ್ರದೇಶ, ಪ್ರಾಣಿಗಳ ಗೊಂಬೆ ಆಕೃತಿಗಳು, ಹುಲಿ- ಸಿಂಹಗಳ ಘರ್ಜನೆ, ಪ್ರಾಣಿ, ಹಕ್ಕಿಗಳ ದ್ವನಿ, ಹರಿಯುವ ನೀರು, ಜಲಪಾತ, ಕೃತಕವಾಗಿ ತಯಾರಿಸಿದ ಸೇತುವೆ ಈ ಎಲ್ಲವೂ ಚಾರಣದ ಅನುಭವವನ್ನೇ ನೀಡುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಮಾರ್ಗದ ಎರಡು ಬದಿಯಲ್ಲಿ ಹಗ್ಗವನ್ನು ಹಾಕಲಾಗಿದ್ದು ಇವುಗಳ ಸಹಾಯದಿಂದ ಎಲ್ಲಾ ವಯಸ್ಸಿನವರು ಚಾರಣ ಅನುಭವ ಪಡೆಯಬಹುದು. ಜಾಂಬೂರಿಗೆ ಬಂದ ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಕರ್ಷಣೀಯ ಸ್ಥಳವಾಗಿದೆ ಟ್ರಕಿಂಗ್ ಪಾತ್. ಈ ಕುರಿತು ಮಂಗಳೂರಿನ ಅಮೀನ್ ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರಕಿಂಗ್ ಪಾತ್ ಒಂದು ಮಿನಿ ಚಾರಣದ ಹಾಗೆ ಇದೆ. ಬಹಳ ಚೆನ್ನಾಗಿ ನಿರ್ಮಿಸಲಾಗಿದೆ. ಮುಂಜಾಗ್ರತಾ ಕ್ರಮಗಳು ಬಹಳ ಸಹಾಯಕವಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಈ ಟ್ರಕಿಂಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ‘ಸವಿತಕ್ಕ ಅಳ್ಳಿ ಬ್ಯಾಂಡ್’ ಕಾರ್ಯಕ್ರಮವು ಕನ್ನಡದ ತತ್ವಪದಕಾರರ ತಾತ್ವಿಕ ಗೀತೆಗಳು ಮತ್ತು ಆಧುನಿಕ ಕವಿಗಳ ಕಾವ್ಯಕಾಣ್ಕೆ ಆಧಾರಿತ ಸಂಗೀತ ಮಾಧುರ್ಯವನ್ನು ಕಟ್ಟಿಕೊಟ್ಟಿತು. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಸವಿತಕ್ಕ ಮತ್ತು ಬಳಗದ ಕಲಾವಿದರು ತತ್ವಪದ ಮತ್ತು ಆಧುನಿಕ ಕಾವ್ಯದ ರಸವತ್ತಾದ ಸಂಯೋಜನೆಯೊಂದಿಗಿನ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಖ್ಯಾತ ಗಾಯಕಿ ಸವಿತಕ್ಕ, ರಾಜೀವ ಅಗಳಿ, ಓಂಬ್ಬೆ ಗೌಡ್ರು, ಬಸಂಜಿ ಪ್ರಸಾದ, ಯಶಸ್ವಿನಿ ಅವರ ಸುಮಧುರ ಧ್ವನಿಯ ಮೂಲಕ ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳ ಆಸ್ವಾದ ಪ್ರೇಕ್ಷಕರಿಗೆ ದಾಟಿಕೊಂಡಿತು. ಸವಿತಕ್ಕ ಅವರು ?ಹಾವಾದ್ರು ಕಚ್ಚಬಾರ್ದಾ? ಮತ್ತು ?ಸೋಜಗಾದ ಸುಜಿ ಮಲ್ಲಿಗೆ ಅವರು ಪ್ರಸ್ತುತಪಡಿಸಿದ ತಕ್ಷಣ ವ್ಯಾಪಕ ಚಪ್ಪಾಳೆಗಳ ಮೆಚ್ಚುಗೆ ವ್ಯಕ್ತವಾಯಿತು. ಅವರು ಹಾಡಿದ ? ಯಾಕೆ ಬಡಿದಾಡ್ತಿ ತಮ್ಮ ? ಹಾಡು ಯುವ ಮನಸುಗಳನ್ನು ಸೆಳೆಯಿತು. ರಾಜೀವ ಅಗಳಿ ಬೇಂದ್ರೆ…
