ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉದ್ಯಮಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಅವರಿಗೆ ರಾಷ್ಟ್ರೀಯ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ಘೋಷಣೆಯಾಗಿದೆ. ಶ್ರೀನಿಧಿ ಫೌಂಡೇಶನ್ ಹಾಗೂ ನಮ್ಮವರಿಗಾಗಿ ನಮ್ಮ ಧ್ವನಿ ಸಮಾಜಮುಖಿ ಸೇವಾ ಸಂಘ ಕರ್ನಾಟಕ ಸಹಯೋಗದೊಂದಿಗೆ ಗೋವಾದ ರವೀಂದ್ರ ಕಲಾ ಭವನದಲ್ಲಿ ಅ.13ರಂದು ಆಯೋಜಿಸಲಾದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ಹಾಗೂ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ನೇತ್ರತ್ವದಲ್ಲಿ. ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರ ಸಹಬಾಗಿತ್ವದಲ್ಲಿ ಹಾಗೂ ಮೊಗವೀರ ಮಹಜನ ಸೇವಾ ಸಂಘ.ರಿ.ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇವರ ಸಹಕಾರದೊಂದಿಗೆ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ವಠಾರದಲ್ಲಿ ವನ ಮಹೋತ್ಸವ ಆಯೋಜಿಸಲಾಯಿತು. ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್., ಕುಂದರ್ ಇವರು ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇದರ ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಇವರು ಸಾಂಕೇತಿಕವಾಗಿ ಗಿಡ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ, ಮಾಜಿ ಅಧ್ಯಕ್ಷರಾದ ಎಮ್.ಎಮ್ ಸುವರ್ಣ, ಮಹಾಜನ ಸೇವಾ ಸಂಘದ ಶಾಖಾ ಕಾರ್ಯದರ್ಶಿ ಪ್ರಭಾಕರ್ ಎನ್ ಸೇನಾಪುರ, ಘಟಕದ ಗೌರವ ಅಧ್ಯಕ್ಷ ಉಮೇಶ್ ಬಡಾಕೆರೆ, ಮೊಗವೀರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ (CA) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುದೀಪ್ ಕೆ, ಸುಮಾ, ಸುಚಿತಾ ಬಿ ಸಿ, ಅನಘಾ, ಬಿ ಸಿದ್ದಾರ್ಥ್ ಪೈ, ಹೆಗ್ಡೆ ಅನಿರುದ್ಧ್ ರಮೇಶ್, ಅಭಿಷೇಕ್ ಪಿ ಎಸ್, ವಿಂದ್ಯಾ ವಿನಯ್ ಹೆಗಡೆ, ಎಸ್ ಅನುರಾಜ್ ಇವರು ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿಎ ಇಂಟರ್ ಮೀಡಿಯೆಟ್ ಗೆ ಅರ್ಹತೆ ಗಳಿಸಿದ್ದಾರೆ. ಸುದೀಪ್ ಕೆ 261 ಅಂಕ, ಸುಮಾ 250 ಅಂಕ, ಸುಚಿತಾ ಬಿ ಸಿ 223 ಅಂಕ, ಅನಘಾ 219 ಅಂಕ, ಬಿ ಸಿದ್ದಾರ್ಥ್ ಪೈ 214 ಅಂಕ, ಹೆಗ್ಡೆ ಅನಿರುದ್ಧ್ ರಮೇಶ್ 210 ಅಂಕ, ಅಭಿಷೇಕ್ ಪಿ ಎಸ್ 209 ಅಂಕ, ವಿಂದ್ಯಾ ವಿನಯ್ ಹೆಗಡೆ 203 ಅಂಕ, , ಎಸ್ ಅನುರಾಜ್ 200 ಅಂಕವನ್ನು ಗಳಿಸುವ ಮೂಲಕ ಅಮೋಘ ಸಾಧನೆಗೈದಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್ 2023ರಲ್ಲಿ ನೆಡೆಸಿದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ವಿತಾ ಎ (286), ಕೃತಿಕಾ (248), ಪೌರ್ಣಮಿ ಐತಾಳ್ (243), ಪ್ರೇಕ್ಷಿತಾ (243), ದೀಕ್ಷಿತಾ ಗೋಪಾಲ್ (238), ಚಿರಾಗ್ ಮೆಂಡನ್ (232), ಶ್ರಾವ್ಯ ಪೂಜಾರಿ (227), ಸುಜನಾ(223), ಆಶಿಷ್ ಶೆಟ್ಟಿ(222), ತರುಣ್ (218), ಅಶ್ವಿತಾ (216), ಸುಜೇತಾ ಶೆಟ್ಟಿ (214), ಅಖಿಲೇಶ್ (211), ಪೂಜಾ ಶೇಟ್(210), ಸೂರಜ್ ಆಚಾರ್ (208), ನಿಶಿತಾ (207), ತೇಜಸ್ವಿ ಪೋಜಾರಿ (207), ಛಾಯ ಕಿರಣ್ (205), ಸುಶ್ಮಿತಾ (200), ಶ್ರಾವ್ಯ ಭಟ್ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಿಕ್ಷಪ್ರಭ ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಈ ಸಂಸ್ಥೆ ಏರ್ಪಡಿಸುವ “ಯಕ್ಷಗಾನ ಉತ್ಸವ” ಕಾರ್ಯಕ್ರಮ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಯಕ್ಷಗಾನ ಪೂರ್ವರಂಗ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸರು & ಖ್ಯಾತ ಮೃದಂಗ ವಾದಕರಾದ ಆಗಿರುವ ಎ.ಪಿ ಪಾಠಕ್ & ಮಟ್ಟಿ ರಾಮಚಂದ್ರ ರಾವ್ ಉದ್ಘಾಟಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ “ವೀರ ಅಭಿಮನ್ಯು” & ಭಕ್ತ ಚಂದ್ರಹಾಸ” ಎನ್ನುವ ಕಥಾ ಪ್ರಸಂಗ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ವಾರ್ತಾಧಿಕಾರಿಗಳಾದ ಸಹನಾ ಎಮ್, ಲಕ್ಷ್ಮೀ ನರಸಿಂಹ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪಿ.ಸಿ ಮುಕುಂದ ರಾವ್, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಅಶೋಕ್ ಎನ್ ಚಲವಾದಿ ಸಂಸ್ಥೆಯ ಗುರುಗಳಾದ ಗೌರಿ ಕೆ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಪ್ಟೆಂಬರ್ 10 ರಂದು ನಡೆಯುವ ಬೆಳ್ಳಿ ಹಬ್ಬದ ಲೋಗೋ & ಬ್ಯಾನರ್ ಬಿಡುಗಡೆಗೊಳಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಧಿಕ ಶ್ರಾವಣದ ಏಕಾದಶಿಯ ಪ್ರಯುಕ್ತ ರಾಮಕೃಷ್ಣ ಕುಟೀರದಲ್ಲಿ ಬೆಳಿಗ್ಗೆ 8 ಘಂಟೆ ಯಿಂದ ಸಂಜೆ 6 ರ ತನಕ ಭಕ್ತಿ, ಭಾವ ಪೂರ್ಣವಾದ ವಿವಿಧ ಕಾರ್ಯಕ್ರಮಗಳು ನಡೆದವು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ರಾಮಕೃಷ್ಣ ಶೇರುಗಾರ್, ಶಿಕ್ಷಕರಾದ ಆನಂದ್ ಮದ್ದೋಡಿ, ಕೇಶವ ನಾಯ್ಕ, ಜ್ಯೋತಿ ಎಚ್.ಎಸ್., ಯಶೋಧ ಅಡಿಗ ಭಾಗವಹಿಸಿದ್ದರು. ಈ ವೇಳೆ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಆಶ್ರಮದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ಬೈಂದೂರಿನ ಶ್ರೀ ರಾಮ ವಿವಿದೋದ್ದೇಶ ಟ್ರಸ್ಟಿನಿಂದ ಆಶ್ರಮದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ನೀಡಲಾಯ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ 2023-24ನೇ ಸಾಲಿನ ಯೋಗಾಸನ ಸ್ಪರ್ಧೆ ಹೇರಂಜಾಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕಂಬದಕೋಣೆ ಇಲ್ಲಿಯ ವಿದ್ಯಾರ್ಥಿನಿಯರು ತಾಲೂಕು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದು ನಾಲ್ಕು ವಿದ್ಯಾರ್ಥಿನಿಯರು, ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಹಾಗೆ ಒಂದು ವಿದ್ಯಾರ್ಥಿ ಸಹ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ. ಇವರಿಗೆ ಉಪ ಪ್ರಾಂಶುಪಾಲರು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ (ರಿ) ಕೋಟೇಶ್ವರ ಮತ್ತು ಶ್ರೀ ರಾಮ ಸೇವಾ ಸಂಘ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ರವರ ಸಹಯೋಗದೊಂದಿಗೆ ಗೌಡ ಸಾರಸ್ವತ ಸಮಾಜ (ಜಿ.ಎಸ್.ಬಿ) ಬಾಂಧವರಿಗೆ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ರಾಪಿಡ್ ಚೆಸ್ ಪಂದ್ಯಕೂಟ ಕೊಂಕಣ್ ಟ್ರೋಫಿ – 2023ರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ದಿನೇಶ ಕಾಮತ್, ಈ ಆಟದ ಮೂಲ ಭಾರತ. ಚದುರಂಗವೆನ್ನುವ ಹೆಸರಿನಿಂದ ಪ್ರಾರಂಭಗೊಂಡು ನಂತರ ವಿವಿಧ ಕಾಲಘಟ್ಟದಲ್ಲಿ ಹೊಸ ರೂಪವನ್ನು ಪಡೆದು ಚೆಸ್ ಎನ್ನುವ ಹೆಸರಿನಿಂದ ವಿಶ್ವದಾದ್ಯಂತ ಪ್ರಖ್ಯಾತಗೊಂಡಿತು. ನಮ್ಮ ಸಮಾಜದಲ್ಲಿ ಈ ಆಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಡುವಂತಾಗಲಿ ಹಾಗೂ ಇಂತಹ ಪಂದ್ಯಕೂಟದಿಂದ ಆಟಗಾರರಿಗೆ ಉತ್ತಮ ವೇದಿಕೆ ನಿರ್ಮಾಣವಾಗಲಿ. ಪಂದ್ಯಾಟವನ್ನು ಆಯೋಜಿಸಿ, ಎಲ್ಲರನ್ನೂ ಒಗ್ಗೂಡಿಸುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಸಕ್ತ ಸಾಲಿನ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2022ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಇಂದ್ರ ಕುಮಾರ್ ಹೆಚ್. ಬಿ ಅವರ ” ಎತ್ತರ” ಕಾದಂಬರಿಗೆ ದೊರೆತಿದೆ. ಕಥೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇವರು ಸರಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಲೇಖಕರುಗಳಾದ ಡಿ.ಎಸ್.ಚೌಗುಲೆ, ಶ್ರೀನಿವಾಸ ಮೂರ್ತಿ, ಅನುಪಮಾ ಪ್ರಸಾದ್ ಅವರು ನಿರ್ಣಾಯಕರಾಗಿ ಸಹಕರಿಸುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಕೆಪಿಎಸ್ ಪ್ರೌಢಶಾಲೆ ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಶಾಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ಸ್ಥಳೀಯ ಉದ್ಯಮಿ ಪ್ರಭಾಕರ್ ಕುಂಭಾಶಿ ಉದ್ಘಾಟಿಸಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಪ್ರಾಮುಖ್ಯತೆ ಕೇವಲ ಒಬ್ಬರ ಫಿಟ್ನೆಸ್ಗೆ ಸೀಮಿತವಾಗಿಲ್ಲ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಯಶಸ್ವಿ ಜೀವನಕ್ಕೆ ಆಧಾರವಾಗಿದೆ ಎಂದರು ಸಂಸ್ಥೆಯ ಉಪಪ್ರಾಂಶುಪಾಲರದ ಚಂದ್ರಶೇಖರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯು ಸ್ಥಿತಿಸ್ಥಾಪಕತ್ವ, ಪರಿಶ್ರಮ ಮತ್ತು ಸಹಬಾಳ್ವೆ ಮನೋಭಾವದ ಗುಣಗಳನ್ನು ಅಭಿವೃದ್ಧಿಪಡಿಸುವ ಅದ್ಭುತ ಮಾರ್ಗವಾಗಿದೆ ಎಂದರು. ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರ್ವೀಕ್ಷಣಾಧಿಕಾರಿ ರವೀಂದ್ರ ನಾಯಕ್ ಯುವಜನ ಮತ್ತು ಸಬಲೀಕರಣ ಇಲಾಖೆಯ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ ಸಂಸ್ಥೆಯ ಪ್ರಾಂಶುಪಾಲೆ ಸುಶೀಲಾ ಹೊಳ್ಳ ಉಪಸ್ಥಿತರಿದ್ದರು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಂಕರ್ ನಾಯ್ಕ್ ಲೆಕ್ಕಪರಿಶೋಧಕರು ಕೋಟೇಶ್ವರ ಇವರು ಬಹುಮಾನಗಳನ್ನು…
