ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ್ ಸಂಪದ ಯೋಜನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ ನಿಗದಿಪಡಿಸಲಾಗಿರುವ ಘಟಕವಾರು/ವರ್ಗವಾರು ಗುರಿಗಳ ವಿವರ ಇಂತಿದೆ :ಹೊಸ ಮೀನು ಕೃಪಿ ಕೊಳಗಳ ನಿರ್ಮಾಣ (Construction of Biofloc ponds for freshwater ares including Inputs of Rs.4lakhs/ha), ಕಡಲಚಿಪ್ಪು ಕೃಷಿ -ಮಸ್ಸೆಲ್ಸ್, ಕಲ್ಲ, ಕ್ಲಾಮ್ಸ್, ಮತ್ತು ಇತ್ಯಾದಿ (Bivalve cultivation ((mussels, clams, pearl etc.), ಬ್ಯಾಕ್ ಯಾರ್ಡ್ ಮಿನಿ ಆರ್.ಎ.ಎಸ್ ಘಟಕ ಸ್ಥಾಪನೆ (Establishment of Backyard mini RAS Units) 30 ಟನ್ ಸಾಮರ್ಥ್ಯದ ಐಸ್ ಪ್ಲಾöಯಂಟ್/ಕೋಲ್ಡ್ ಸ್ಟೋರೇಜ್ ನಿರ್ಮಾಣ (Construction of Ice plant/Cold storage of 30 ton capacity), ಐಸ್ ಪ್ಲಾöಯಂಟ್/ಕೋಲ್ಡ್ ಸ್ಟೋರೇಜ್ ಗಳ ನವೀಕರಣ ((Modernization of Ice plant/Cold storage),…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಅಂಕಿತಾ ಹಾಗೂ ವಾಣಿಜ್ಯ ವಿಭಾಗದ ದೀಪ್ತಿ ಅವರಿಗೆ ಕಾಲೇಜಿನ ಸಂಚಾಲಕರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ನೊಂದವರ ಧ್ವನಿಯಾಗಿ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿರುವ ನೇರ ನಡೆ ನುಡಿಯ ಉದಯ ಕುಮಾರ್ ತಲ್ಲೂರು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಅವರನ್ನು ಗೌರವಿಸಿರುವುದು ಅವರ ಸಾಮಾಜಿಕ ಸೇವೆಗೆ ಸಂದ ಗೌರವ ಹಾಗೂ ಇಡೀ ಸಮುದಾಯಕ್ಕೆ ನೀಡಿದ ಗೌರವವಾಗಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ ಹೇಳಿದರು. ಅಮೆರಿಕಾದ ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಂಶೋಧನಾ ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಉದಯ ಕುಮಾರ್ ತಲ್ಲೂರು ಅವರನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗೌರವಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಸದಸ್ಯ ಬಿ. ರಾಘವೇಂದ್ರ ಪೈ ಶುಭ ಹಾರೈಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮಾಜಿ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ ಮಾಜಿ ಸದಸ್ಯೆ ಶಾಂತಿ ಖಾರ್ವಿ, ಗ್ರಾಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಳೆಯಾಶ್ರಿತ ಕೃಷಿ ನೀತಿ ಅನ್ವಯ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನ ಗುರಿಯನ್ನು ಹೊಂದಿ ಅನುಷ್ಠಾನಗೊಂಡಿರುವ ಕೃಷಿ ಭಾಗ್ಯ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮರುಜಾರಿಗೊಳಿಸಲಾಗಿರುತ್ತದೆ. ಅದೇ ರೀತಿ ಕೃಷಿ ಭಾಗ್ಯ-ಎಸ್.ಡಿ.ಎಂ.ಎಫ್ ಯೋಜನೆಯನ್ನು ಜಿಲ್ಲೆಯ ಬರ ಪೀಡಿತ ಬ್ರಹ್ಮಾವರ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಡೀಸೆಲ್/ ಪೆಟ್ರೋಲ್/ ಸೋಲಾರ್ ಪಂಪ್ ಸೆಟ್ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ, ಸೂಕ್ಷ್ಮ (ತುಂತುರು/ ಹನಿ) ನೀರಾವರಿ ಘಟಕದಡಿ ಎಲ್ಲಾ ವರ್ಗದ ರೈತರಿಗೆ ಶೇ. 90 ರಷ್ಟು ಸಹಾಯಧನ ಹಾಗೂ ಕೃಷಿ ಹೊಂಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಗ್ನಿ ದಿವ್ಯದಲ್ಲಿ ಸ್ಪುಟಗೊಂಡು ಬಂಗಾರ ಮೆರುಗು ಪಡೆಯುವಂತೆ ಸಂಘರ್ಷದ ಕುಲುಮೆಯಲ್ಲಿ ಹದಗೊಂಡು ಲೋಕಕ್ಕೆ ಮಾದರಿಯಾಗ ಹೊರಟ ಸಮಾಜವಿದ್ದರೆ ಅದು ಗೌಡಸಾರಸ್ವತ ಸಮಾಜ. ತಮ್ಮ ಬುದ್ಧಿ ಚಾತುರ್ಯದಿಂದ ರಾಜಾಶ್ರಯಗಳಿಸಿ ವ್ಯಾಪಾರ ವಹಿವಾಟುಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ಕೊಂಕಣಿ ಸಮಾಜ ಸಾಮಾಜಿಕವಾಗಿ ಬದುಕಿದಷ್ಟು ಬೇರೆ ಯಾವ ಸಮಾಜವೂ ಬದುಕಿಲ್ಲ ಎಂದು ಶಿರಾಲಿ ಎಸ್ಜಿಎಂ ದೇವಳದ ಅಧ್ಯಕ್ಷ ಗೋಪಿನಾಥ ಕಾಮತ್ ಹೇಳಿದರು. ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಇಲ್ಲಿನ ಯುವ ಜಿಎಸ್ಬಿ ಸೇವಾ ಸಂಘ ಆಯೋಜಿಸಿರುವ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋವಾ ಪೋರ್ಚುಗೀಸರ ವಶವಾದ ಮೇಲೆ ಅಲ್ಲಿನ ಹಿಂದೂಗಳ ದುರ್ದಿನಗಳು ಆರಂಭಗೊಂಡು ಲಕ್ಷಾಂತರ ಕುಟುಂಬಗಳು ಬಲಾತ್ಕಾರದ ಮತಾಂತರಕ್ಕೆ ಒಳಗಾದವು. ಕೇಳದವರನ್ನು ಜೀವಂತ ಸುಡಲಾಯಿತು. ಒಂದಷ್ಟು ಜನ ತಮ್ಮ ಹುಟ್ಟೂರನ್ನು ತೊರೆದು ಕುಲದೇವರ ಪೀಠಗಳನ್ನು ಹೊತ್ತು ರಾತೋರಾತ್ರಿ ವಲಸೆ ಹೊರಟರು ಈ ಮಹಾವಲಸೆ ಕೇರಳದ ಕೊಚ್ಚಿಯವರೆಗೂ ಸಾಗಿತು. ಸ್ಥಳೀಯ ಸಂಸ್ಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಕೊಂಕಣರು ಬದುಕು ಕಟ್ಟಿಕೊಂಡರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಪಂಚಾಯತ್ರಾಜ್ ಒಕ್ಕೂಟದ ವತಿಯಿಂದ ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಮತ್ತು ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ಭಾಗವಹಿಸಲಿ:ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡೆ ಯುವ ಕೆಡಿಪಿ ಸಭೆಗಳಿಗೆ ಅಧಿಕಾರಿ ಗಳು ಬರುತ್ತಾರೆ. ಪಂಚಾಯಿತಿ ಮಟ್ಟದಲ್ಲಿ ನಡೆ ಯುವಸಭೆಗಳಿಗೆ ಬರುತ್ತಿಲ್ಲ, ಪಂಚಾಯಿತಿ ಸ್ಥಳೀಯ ಸರಕಾರವಾಗಿದ್ದು, ಎಲ್ಲ ಅಧಿ ಕಾರಿಗಳಿಗೆ ಭಾಗವಹಿಸುವಿಕೆ ಅಗತ್ಯ ಎಂದು ಪಂಚಾಯಿತಿ ಸದಸ್ಯರು ಪ್ರತಿಪಾದಿಸಿ ದರು. ಗ್ರಾಮ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ವರ್ಗ ಭಾಗವಹಿಸುವ ನಿಯಮ ಸರಕಾರ ಜಾರಿಗೆ ತರಬೇಕಾಗು ತ್ತದೆ. ಈ ಬಗ್ಗೆ ಸಮಾಲೋಚನೆ ಅವಶ್ಯ ಎಂದು ಪಂಚಾಯತ್ ರಾಜ್ ವಿಶ್ಲೇಷಕ ಟಿ.ಬಿ.ಶೆಟ್ಟಿ ಹೇಳಿದರು. ಕಳೆದ 2 ವರ್ಷಗಳಿಂದ ನರೇಗಾದಲ್ಲಿ ಕೈಗೊಳ್ಳುವ ಕ್ರಿಯಾಯೋಜನೆ ಜಾರಿಗೆ ವೆಂಡರ್ಗಳೇ ಮುಂದೆ ಬರುತ್ತಿಲ್ಲ. ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿಯುತ್ತಿದೆ ಎಂದು ಪಂಚಾಯಿತಿ ಪ್ರತಿನಿಧಿಗಳು ಆರೋಪಿಸಿದರು. ಇದಕ್ಕೆ ಸಂಸದ ಕೋಟ ಶ್ರೀನಿವಾಸ ಅವರು ಪ್ರತಿಕ್ರಿಯಿಸಿ ನರೇಗಾ ಸಂಬಂಧಿತ ಅಧಿಕಾರಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2024-25ನೇ ಸಾಲಿನ ಉತ್ತಮ ಪ್ರಾಚಾರ್ಯ ರಾಜ್ಯ ಪ್ರಶಸ್ತಿಗೆ ಕುಂದಾಪುರ ಸರಕಾರಿ ಪ. ಪೂ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ. ಜಿ. ಅವರು ಭಾಜನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಮಕೃಷ್ಣ ಅವರು ಬೆಳೆಯೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮೈಸೂರು ವಿವಿಯಲ್ಲಿ ಪದವಿ ಹಾಗೂ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ. ಪೂ. ಶಿಕ್ಷಣ ಇಲಾಖೆಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿದ್ದರು. ಕೊಪ್ಪ ಸರಕಾರಿ ಪ. ಪೂ.ಕಾಲೇಜಿನಲ್ಲಿ 10 ವರ್ಷ, ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನಲ್ಲಿ 15 ವರ್ಷ ಉಪನ್ಯಾಸಕರಾಗಿದ್ದು, ಕಳೆದ 6 ವರ್ಷಗಳಿಂದ ಪ್ರಾಂಶುಪಾಲರಾಗಿದ್ದಾರೆ. ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಸ್ತುತ ವರ್ಷದಲ್ಲಿ 1391 ವಿದ್ಯಾರ್ಥಿಗಳು ಓದುತ್ತಿದ್ದು, ಬೇಡಿಕೆ ಇರುವ ಕಂಪ್ಯೂಟರ್ ಸೈನ್ಸ್ ಹಾಗೂ ಸಂಖ್ಯಾಶಾಸ್ತ್ರ ವಿಷಯವನ್ನು ಸೈನ್ಸ್ ಹಾಗೂ ಕಾಮರ್ಸ್ ವಿಭಾಗದೊಂದಿಗೆ ಜೋಡಿಸಿ ಹೆಚ್ಚಿನ ವಿದ್ಯಾರ್ಥಿಗಳನ್ನುಕಾಲೇಜಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯೋಗ ಶೀಲತೆ ಜತೆಗೆ ಪುಸ್ತಕ ಗ್ರಂಥ ಭಂಡಾರ, ಜಿ. ಪಂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಮಂಗಳೂರು, ಪ್ರವರ್ತಿತ ಮದರ್ ತೆರೇಸಾ ಪದವಿಪೂರ್ವ ಕಾಲೇಜು ಶಂಕರನಾರಾಯಣ, ಕುಂದಾಪುರ, ಇಲ್ಲಿನ ವಿದ್ಯಾರ್ಥಿಗಳು ಸೈಂಟ್ ಅಲೋಷಿಯಸ್ ಕಾಲೇಜ ಡೀಮಡ್ ಟು ಬಿ. ಯೂನಿವರ್ಸಿಟಿ ಮಂಗಳೂರು ಆ.31ರಂದು ನಡೆದ ಪದವಿಪೂರ್ವವಿದ್ಯಾರ್ಥಿಗಳ ಅಲೋಷಿಯನ್ ಫೆಸ್ಟ್ ವೈವಿಧ್ಯಮಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯದ ಹಲವು ಪದವಿಪೂರ್ವ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ಶಂಕರನಾರಾಯಣ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಹತ್ತರವಾದ ಸಾಧನೆಯನ್ನು ಮಾಡಿರುತ್ತಾರೆ. ಅಲ್ಲಿ ಹಮ್ಮಿಕೊಳ್ಳಲಾದ ವಿಭಿನ್ನ ಸ್ಪರ್ಧೆಗಳಾದ ಬಿಸಿನೆಸ್ ಮ್ಯಾನೇಜರ್ ಸ್ಪರ್ಧೆಯಲ್ಲಿ ನಿಶಾ ದ್ವಿತೀಯ, ಪಿಯುಸಿ ವಾಣಿಜ್ಯ ವಿಭಾಗ ಪ್ರಥಮ. ಐಟಿ ಮ್ಯಾನೇಜರ್ ಸ್ಪರ್ಧೆಯಲ್ಲಿ ಶ್ರೇಯಸ್ ಶೆಟ್ಟಿ ತೃತೀಯ , ಹಾಗೂ ಬಿಸಿನೆಸ್ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ, ವಾಣಿಜ್ಯ ವಿಭಾಗದ ಆದಿತ್ಯ.ಬಿ ಮತ್ತು ಆದಿತ್ಯ. ಡಿ ಪ್ರಥಮ.ಪ್ರಾಡಕ್ಟ್ ಲಾಂಚಿಂಗ್ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ದೃಶ್ಯ ಮತ್ತು ಅಭಿನಯ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ . ಇದಲ್ಲದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಒಂದೇ ಭಾಷೆ, ಸಂಸ್ಕೃತಿ, ಜನಾಂಗವೇ ಶ್ರೇಷ್ಠ ಎಂಬ ಭಾವನೆ ಅಪಾಯಕಾರಿ. ಬಹುತ್ವವನ್ನು ಗೌರವಿಸುವುದು ಮುಖ್ಯ. ಮೌಢ್ಯವನ್ನು ಮೌಲ್ಯವಾಗಿ ಭಿತ್ತುತ್ತಿರುವ ವ್ಯವಸ್ಥೆಯ ನಡುವೆ ವೈಚಾರಿಕತೆಯನ್ನು ಬೆಳೆಸುವ ಶಿಕ್ಷಣ, ಸಂಘಟನೆ, ಸಾಹಿತ್ಯ ಇನ್ನಷ್ಟು ಬೇಕಾಗಿದೆ ಎಂದು ಕಥೆಗಾರ ದಯಾನಂದ ಹೇಳಿದರು. ಅವರು ಮಂಗಳವಾರ ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು ಆಯೋಜಿಸಿದ್ದ 13ನೇ ಡಾ. ಹೆಚ್. ಶಾಂತರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದರು. ಯುವಜನತೆ ಸಾಹಿತ್ಯ ಹಾಗೂ ಓದಿನಿಂದ ವಿಮುಖರಾಗಿದ್ದಾರೆ ಅನ್ನೋದು ಬಹುಕಾಲದ ಮಾತು. ಆದರೆ ಸಾಹಿತ್ಯದ ಆಸಕ್ತಿ ಇರುವವರು ಎಲ್ಲಾ ಕಾಲದಲ್ಲೂ ಇದ್ದಾರೆ. ಸಾಹಿತ್ಯ ಮಾತ್ರ ವ್ಯಕ್ತಿಯನ್ನು ಚಿಂತನೆಗೆ ಹಚ್ಚುತ್ತದೆ. ಭೌದ್ಧಿಕ ಬೆಳವಣಿಗೆಯ ದಾರಿಯಾಗಿದೆ. ಅಂಬೇಡ್ಕರ್ ಅವರಿಗೆ ಓದು ವಿಮೋಚನೆಯ ಸಾಧ್ಯತೆಯಾಗಿ ಕಂಡಿತ್ತು ಎಂದರು. ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರಾಗಿದ್ದ ಪತ್ರಕರ್ತ, ಕಥೆಗಾರ ಡಾ. ಟಿ.ಎಸ್. ಗೊರವ ಗಜೇಂದ್ರಗಡ ಅವರು ಮಾತನಾಡಿ ಬುದ್ಧನ ಕಿವಿ ಕಥಾಸಂಕಲನದ ಕತೆಯಲ್ಲಿ ಬರುವ ಪಾತ್ರಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಆ.27ರಿಂದ 31ರವರೆಗೆ ನಡೆದ ರಾಜ್ಯಮಟ್ಟದ ಎನ್.ಎಸ್.ಎಸ್. ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕ ಸುಜಯ್ ಶೆಟ್ಟಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಗುಂಪು ಸ್ಪರ್ಧೆಯಲ್ಲಿ ಪ್ರಹಸನ ಮತ್ತು ಸಮೂಹಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 21 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ ಈ ಯುವಜನೋತ್ಸವ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅತೀ ಹೆಚ್ಚು ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ಸಮಗ್ರ ಪ್ರಶಸ್ತಿಪಡೆದಿದ್ದಾರೆ. ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
