Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಚ್ಚಳಿಯದಂತೆ ಹೆಜ್ಜೆ ಗುರುತಗಳನ್ನು ಬಿಟ್ಟು ಹೋದ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೆ ನೆನೆಯಲು ಮೂಡಬಿದ್ರೆ ಆಳ್ವಾಸ್ ಕಾಲೇಜು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಸಂಯೋಜನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿಯ ಕೃಷಿಸಿರಿ ವೇದಿಕೆ ಸಾಕ್ಷಿಯಾಯಿತು. ಹಚ್ಚ ಹಸಿರು ತೋಟದ ನಡುವೆ ಇಳಿ ಸಂಜೆಯಲ್ಲಿ ಪ್ರಾರಂಭವಾದ ಜೈನ್ ಬೀಟ್ಸ್ ಶ್ರವಣಬೆಳಗೋಳ ತಂಡದ ಪುನೀತ್ ನಮನ ಕಾರ್ಯಕ್ರಮ ಮೈ ನವಿರೇಳಿಸುವಂತೆ ಮಾಡಿದ್ದಂತೂ ಸತ್ಯ. ಸರ್ವೇಶ್ ಜೈನ್ ಮತ್ತು ತಂಡದಿಂದ ಕರುನಾಡ ರತ್ನನ ರಸಸಂಜೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಹಾಡುಗಳು ಅನುರಣಿಸುತ್ತಿದ್ದವು. ಗಣಪತಿಯ ಹಾಡಿನಿಂದ ಪ್ರಾರಂಭವಾಗಿ, ನಂತರ ಗುರುಗಳಿಗೆ ವಂದಿಸಿ, ಕನ್ನಡ ನಾಡು ನುಡಿಯನ್ನು ಅದರ ಪರಿಸರ ಸಂಸ್ಕೃತಿಯನ್ನು ಗಂಧದ ಗುಡಿ ಎಂದು ಕರೆದ ಗಂಧದ ಗುಡಿ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಹಾಡನ್ನು ಕನ್ನಡಾಂಬೆಯ ಪಾದಚರಣಗಳಿಗೆ ಅರ್ಪಿಸುತ್ತಾ ಸರ್ವೇಶ್ ಜೈನ್, ಸೌಮ್ಯಾ ಜೈನ್, ಸಮರಾಗ ಜೈನ್, ಮತ್ತು ಮಾಸ್ಟರ್ ಅಪರಾಜಿತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವೃತ್ತಿಯಲ್ಲಿ ಭಿನ್ನತೆ ಇದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿ ಬಣ್ಣಹಚ್ಚಿ ಸಾಂಸ್ಕೃತಿಕ ಹಿರಿಮೆಯನ್ನು ಸಾರಿದರು ಜಾಂಬೂರಿ ಮೆರವಣಿಗೆಯ ಕಲಾವಿದರು. ಕರ್ನಾಟಕ, ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ ಕಲಾವಿದರ ವೃತ್ತಿ ಜೀವನದ ಬಗ್ಗೆ ಕುತೂಹಲವಿದೆಯೆ? ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳದ ‘ಹರಿಶ್ರೀ ಕಲಾಸಮಿತಿ’ಯ ತಂಡದ ಕಲಾವಿದನಿಗೆ ಸುಬ್ರಹ್ಮಣ್ಯ ದೇವರ ವೇಷ ಧರಿಸುವುದೆಂದರೆ ವಿಶೇಷ ಆಸಕ್ತಿ. ಸುಬ್ರಹ್ಮಣ್ಯ ದೇವರ ವೇಷಧಾರಣೆಯ ಮೂಲಕ ಅವರದ್ದು ಅನನ್ಯ ಭಕ್ತಿಯ ಸಮರ್ಪಣೆ. ವೃತ್ತಿ ರಂಗದಲ್ಲಿರುವವರು ಮಾತ್ರವಲ್ಲದೆ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸ್ವ-ಇಚ್ಛೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಪಾಣೆ ಮಂಗಳೂರು ಶಾರದಾ ಚೆಂಡೆ’ಯ ತಂಡದಲ್ಲಿಯೂ ಯುವ ಪ್ರತಿಭಾನಿತ್ವರಿದ್ದು ವಿದ್ಯಾರ್ಥಿಗಳು ತಂಡದ ಸದಸ್ಯರಾಗಿದ್ದುದದು ವಿಶೇಷವಾಗಿತ್ತು. ಆಟೋ ಚಾಲಕ, ಪೇಂಟರ್ ಹೀಗೆ ವಿಭಿನ್ನ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದವರು ಯಾವುದೇ ವಯಸ್ಸಿನ ಹಂಗಿಲ್ಲದೆ ವಿದ್ಯಾರ್ಥಿಗಳಿಂದ ಹಿಡಿದು, ವಯಸ್ಕರೂ ಸೇರಿದಂತೆ ಕರಗ, ಗೊಂಬೆ ವೇಷ, ಪುರವಂತಿಕೆ, ಕತಕ್ಕಳಿ, ದೇವ ನೃತ್ಯ, ನವಿಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದರೆ: ಹಲಸಿನ ಹಣ್ಣು ಸiಗ್ರ ಪೋಷಕಾಂಶ ಒಳಗೊಂಡ ಮತ್ತು ಎಲ್ಲರೂ ಇಷ್ಟಪಡುವ ಹಣ್ಣು. ಆದರೆ ಸರ್ವ ಋತುಮಾನಗಳಲ್ಲಿ ಈ ಹಣ್ಣು ಸಿಗದು ಎಂಬುದು ಎಲ್ಲರ ಅಳಲು. ಅದಕ್ಕೆ ಉತ್ತರವೆಂಬಂತೆ ವರ್ಷದ ಹೆಚ್ಚಿನ ದಿನಗಳಲ್ಲಿ ಫಲಕೊಡುವ ‘ಅದ್ಭುತ ಹಲಸು’ ಎಂಬ ಹೆಸರಿನ ಒಂದು ಹಲಸಿನ ಹಣ್ಣಿನ ಗಿಡಗಳ ಮಳಿಗೆ ಜಾಂಬೂರಿಯ ಕೃಷಿಸಿರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಪುತ್ತೂರು ಬಳಿಯ ಅಳಕೆಮಜಲಿನ ನಿವಾಸಿಯಾಗಿರುವ ಅನಿಲ್ ಅವರು ಜ್ಯಾಕ್ ಅನಿಲ್ ಎಂದೇ ಪ್ರಸಿದ್ದರಾದವರು. ಕಳೆದೆರಡು ದಶಕಗಳಿಂದ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹಲಸಿನ ತಳಿಯ ವಿಚಾರದಲ್ಲಿ ಇವರು ವಿಶೇಷ ಜ್ಞಾನವನ್ನು ಹೊಂದಿದ್ದಾರೆ. ಇದಲ್ಲದೆ ಆಯಾಯ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಸಿ ಕಟ್ಟುವುದರಲ್ಲಿ ಕೂಡ ಬಹಳ ಪರಿಣತಿ ಪಡೆದಿದ್ದಾರೆ. ಅನಿಲ್ ಅವರ ಈ ಮಳಿಗೆಯಲ್ಲಿ ಒಂದೂವರೆ ವರ್ಷದಲ್ಲಿ ಫಲ ಕೊಡುವ ‘ನೆನ್ನಿತ್ತಾಯಿ’ ಎಂಬ ಹಲಸಿನ ಗಿಡಕ್ಕೆ ತುಂಬಾ ಬೇಡಿಕೆಯಿದೆ. ಈ ಹಣ್ಣಿನ ಗಿಡಗಳು ಇತರ ಹಲಸಿನ ಹಣ್ಣಿನ ಮರಗಳ ರೀತಿಯಲ್ಲಿ ಬೃಹದಾಕಾರದಲ್ಲಿ ಬೆಳೆಯದೆ, ಗಿಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದರೆ: ಅಲ್ಲಿ ಕುರುಕ್ಷೇತ್ರದ ಪ್ರಸಂಗ, ವಾಲಿ ಸುಗ್ರೀವರ ಕಾಳಗ, ಕಿತ್ತೂರಿನ ವೀರ ರಾಣಿ ಚೆನ್ನಮ್ಮ ತನ್ನ ಸೈನಿಕರಿಗೆ ಹುರಿದುಂಬಿಸುವ ಹಾಡು, ರೇಣುಕಾ ಮಹಾತ್ಮೆ ಹಾಗೂ ವೀರ ಅಭಿಮನ್ಯು ಮುಂತಾದ ಪ್ರಸಂಗವನ್ನು ದೊಡ್ಡಾಟದ ಹಾಡುಗಳ ಮೂಲಕ ತೋರಿಸುವ ಅದ್ಭುತ ಸನ್ನಿವೇಶಕ್ಕೆ ಆಳ್ವಾಸ್‌ನ ಕೃಷಿ ಸಿರಿ ವೇದಿಕೆ ಸಾಕ್ಷಿಯಾಗಿತ್ತು. ಹೌದು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿ-೨೦೨೨ ಇದರ ಆಶ್ರಯದಲ್ಲಿ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೃಷಿ ಸಿರಿ ವೇದಿಕೆಯಲ್ಲಿ ಹಾವೇರಿಯ ಶಿಗ್ಗಾಂವ್‌ನ ಸವರಾಜ ಶಿಗ್ಗಾಂವ್ ಮತ್ತು ತಂಡದಿಂದ ‘ದೊಡ್ಡಾಟದ ಹಾಡುಗಳು’ ಎಂಬ ಕಾರ್ಯಕ್ರಮ ಮೂಡಿಬಂದಿತು. ದೊಡ್ಡಾಟದ ಗಣೇಶನ ಸ್ತುತಿಯೊಂದಿಗೆ ದೊಡ್ಡಾಟದ ಹಾಡುಗಳ ಕಾರ್ಯಕ್ರಮವು ಪ್ರಾರಂಭವಾಯಿತು. ಅನಂತರದಲ್ಲಿ ಕುರುಕ್ಷೇತ್ರದ ದೊಡ್ಡಾಟದ ಪ್ರಸಂಗದ ಹಾಡು, ರೇಣುಕಾ ದೇವಿಯ ಭಕ್ಕಿಯಲ್ಲಿ ಸುಗಿಸುವ ನಯನ ಮನೋಹರ ಪದ, ವೀರ ಅಭಿಮನ್ಯು ಪ್ರಸಂಗದಲ್ಲಿ ಅಭಿಮನ್ಯು ಯುದ್ದಕ್ಕೆ ಹೊರಡುವ ಸಂದರ್ಭದಲ್ಲಿ ಆತನ ತಾಯಿ ಸುಭದ್ರೆ ಪೋಗಬೇಡವೋ ಬಾಲ ಎನ್ನುವ ಪದ, ರಾಮಾಯಣದಲ್ಲಿ ಬರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಖ್ಯಾತ ಹಿನ್ನಲೆ ಗಾಯಕ ಶಂಕರ್ ಮಹಾದೇವನ್ ತಂಡದಿಂದ ಜಾಂಬೂರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂಗೀತ ರಸಸಂಜೆಗೆ ಐವತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರಿಗೆ ನವೋಲ್ಲಾಸ ನೀಡಿತು. ಜಾಂಬೂರಿಯ ಎರಡನೇ ದಿನ ವನಜಾಕ್ಷಿ ಕೆ . ಶ್ರೀಪತಿ ಭಟ್ ವೇದಿಕೆಯಲ್ಲಿ ಶಂಕರ ಮಹಾದೇವನ್ ತಮ್ಮ ಮುಂಬೈ ತಂಡದೊಂದಿಗೆ ಕನ್ನಡ, ಹಿಂದಿ, ತಮಿಳು ಸೇರಿ ಕೆಲವು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡಿದರು. ಗಣನಾಯಕಯಾಕ ಗಣದೈವತಾಯ ಎಂದು ವಿಘ್ನವಿನಾಶಕ ಗಣಪತಿಯನ್ನು ತಮ್ಮ ಸುಮಧುರ ಗಾಯನದ ಮೂಲಕ ಸ್ಮರಿಸುತ್ತಾ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರಾರಂಭಿಸಿದರು. ಬಳಿಕ ಅತಿರಥಾ ಮಹಾ ರಥಾ ಸಾರಥಿ ಎನ್ನುತ್ತಾ ಸೇರಿರುವ ಐವತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರೊಂದಿಗೆ ಸಂಗೀತ ಜುಗಲ್-ಬಂದಿ ನಡೆಸಿದರು. ಪ್ರೆಟ್ಟಿ ವುಮೆನ ಹಾಡಿದರು. ಇಸ್ ದ್ ಟೈಮ್ ಟು ಡಿಸ್ಕೋ ಎನ್ನುತ್ತಾ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಟ್ರಿಬ್ಯುಟ್ ಟು ಪುನೀತ್, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಕಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದಿರಿ: ಸಾರಂಗಿ ಎಂದರೆ ಸಂಗೀತಕ್ಕಿರುವ ಸಮಗ್ರತೆಯ ಮಾಧುರ್ಯವನ್ನು ಹಿಡಿದಿಡುವ ಪರಿಭಾಷೆ. ಈ ಪರಿಭಾಷೆಗಿರುವ ಮಧುರ ಅನುಭೂತಿಯನ್ನು ದಾಟಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ‘ಜಾಂಬೂರಿ’ಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾರಂಗಿ ನುಡಿಸಿದ ಸಫ್ರಾಜ್ ಖಾನ್. ಸಾರಂಗಿಯ ಮೂಲಕ ಹೊರಹೊಮ್ಮಬಹುದಾದ ಎಲ್ಲಾ ಬಗೆಯ ಶಾಸ್ತ್ರೀಯ ಮಾಧುರ್ಯವನ್ನು ಅವರು ದಾಟಿಸಿದ ವೈಖರಿ ವಿಶೇಷವಾಗಿತ್ತು. ರಾಗದ ಏರಿಳಿತಗಳ ಜೊತೆಗಿನ ಶಾಸ್ತ್ರೀಯವಾದ ಹೊಸದೊಂದು ಭಾವಲೋಕವನ್ನು ಸೃಷ್ಟಿಸುವಲ್ಲಿ ಅವರು ಯಶಸ್ವಿಯಾದರು. ಸಾರಂಗಕ್ಕೆ ಇರುವ ಅನನ್ಯಶಕ್ತಿಯನ್ನು ತಮ್ಮ ಕರಕೌಶಲ್ಯದ ಮೂಲಕ ಮನಗಾಣಿಸಿಸಾರಂದ ಶೈಲಿ ಆಪ್ತವಾಗಿತ್ತು. ಸಾರಂಗಿ ಭಾರತೀಯ ತಂತಿವಾದ್ಯವಾಗಿದ್ದು ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಳಲ್ಲಿ ಹೆಚ್ಚುಬಳಕೆಯಲ್ಲಿದೆ. ಇದರ ಶಕ್ತಿಯನ್ನು ಮನವರಿಕೆ ಮಾಡಿಕೊಡುವ ಹಾಗೆ ಸರ್ಫರಾಜ್ ಖಾನ್ ಅವರು ಸಾರಂಗಿ ನುಡಿಸಿದರು. ಚಿಕ್ಕ ಕುತ್ತಿಗೆಯ ಮೂರು ತಂತಿ ವಾದ್ಯದ ನಾದದ ಮಧುರ ವೈಖರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಾರಂಗಿಯ ರಚನೆಗಳನ್ನು ನುಡಿಸುವವರು ತುಂಬಾ ಅಪರೂಪ ಆದರೆ ಸರ್ಫರಾಜ್ ಖಾನ್ ಅವರು ಸತತ ಒಂದು ಗಂಟೆಗಳ ಕಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ದಿ.ಉಪೇಂದ್ರ ಐತಾಳ್ ಸ್ಮಾರಕ ‘ಕೃಷಿ ಪರಿಶ್ರಮ ಪುರಸ್ಕಾರಕ್ಕೆ ಸದಾಶಿವ ಐತಾಳ್, ದಿ. ರಾಘವೇಂದ್ರ ಉರಾಳ ಸ್ಮಾರಕ ‘ಸಂಶೋಧಕ ಸಾಧಕ ಪುರಸ್ಕಾರ’ ಕ್ಕೆ ಪ್ರದೀಪ್ ಬಸ್ರೂರು, ದಿ.ಡಾ. ಆನಂದ ಶೆಟ್ಟಿ ಸ್ಮಾರಕ ‘ಆದರ್ಶ ಶಿಕ್ಷಕ ಪುರಸ್ಕಾರ’ ಕ್ಕೆ ಭಾಸ್ಕರ ಪೂಜಾರಿ, ದಿ ಮನೋಹರ್ ತೋಳಾರ್ ಸ್ಮಾರಕ ಕ್ರೀಡಾ ಪುರಸ್ಕಾರಕ್ಕೆ ಶಿವನಾರಾಯಣ ಐತಾಳ್ ಅವರನ್ನು ಆಯ್ಕೆ ಮಾಡಲಾಗಿದೆ. ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಿಸೆಂಬರ್ ೨೪ ರಂದು ಸಂಜೆ ೫ ಗಂಟೆಗೆ ನಡೆಯುವ ಅನೂಹ್ಯ-2022 (ನಾವೀನ್ಯದ ಗೌಜಿ) ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಡಾ| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ಜರುಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಜಾಂಬೂರಿಯ ಕೃಷಿ ಮತ್ತು ಆಹಾರ ಮೇಳದಲ್ಲಿ ಬಗೆ ಬಗೆಯ ಪಾನೀಯಗಳು ಮಾರಾಟವಾಗುತ್ತಿದೆ. ಆ ಪೈಕಿ ತೆಂಗಿನ ಮರದ ಇನ್ನೂ ಅರಳದ ಗರಿಗಳನ್ನು ಹದಗೊಳಿಸಿ ಶೀಥಲೀಕೃತ ಪೆಟ್ಟಿಗೆಯ ಮೂಲಕ ಸಂಗ್ರಹಿಸುವ ಕಲ್ಪರಸವೂ ಒಂದಾಗಿದೆ. ಅರೇ..! ಇದು ಅಮಲಿನ ಪದಾರ್ಥ ‘ನೀರಾ’ ಅಲ್ಲವಾ? ಎಂದು ಕೇಳಬೇಡಿ. ಇದು ಅಮಲು ಮುಕ್ತವಾದ ಸಿಹಿಯಾದ ಪಾನೀಯವಾಗಿದೆ. ಎಳೆನೀರಿಗೆ ಹೋಲಿಸಿದರೆ ಸತ್ವ ಮತ್ತು ಪೋಷಕಾಂಶಗಳು ಕಲ್ಪರಸದಲ್ಲಿಯೇ ಹೆಚ್ಚಿರುತ್ತದೆ. ಕಲ್ಪರಸ ಸಂಗ್ರಹಿಸುವ ತಂತ್ರಜ್ಞಾನವನ್ನು ಕಾಸರಗೋಡಿನ ಸಿ.ಪಿ.ಸಿಆರ್,ಐ ಸಂಸ್ಥೆ ಅಭಿವೃದ್ದಿ ಪಡಿಸಿದ್ದು ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಉಡಪಿಯ ಕೊಕೊನಟ್ ಕಂಪನಿ ಇದನ್ನ ವೈಜ್ಞಾನಿಕವಾಗಿ ತಯಾರಿಗೆ ಮೌನ್ಯವರ್ಧಿತ ಉತ್ಪನ್ನವನ್ನಾಗಿ ಮಾರಾಟ ಮಾಡುತ್ತಿದೆ. ತೆಂಗಿನ ಮರವನ್ನು ಹತ್ತಿ ಹೋಂಬಾಳೆಯನ್ನ ಹದಗೊಳಿಸಿ ಅದರ ರಸವನ್ನ ಪೆಟ್ಟಿಗೆಯಲ್ಲಿ ಸಂಗ್ರಹಿಸಿ ನಂತರ ಮಾರಾಟವಾಗುವ ತನಕ ಅದನ್ನ ೪ ಡಿಗ್ರಿಗಿಂತ ಕಡಿಮೆ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಬಳಿಕ ಮೌಲ್ಯವರ್ಧಿತ ಪೊಟ್ಟಣವನ್ನಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ‘ಜಾಂಬೂರಿ’ಯ ಎರಡನೇ ದಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶಿವಮೊಗ್ಗದ ನೌಷಾದ್ ಮತ್ತು ನಿಷಾದ್ ಹರ್ಲಾಪುರ್ ಸಹೋದರರ ‘ಹಿಂದೂಸ್ಥಾನಿ ಗಾಯನ’ ಪ್ರೇಕ್ಷಕರನ್ನು ರಂಜಿಸಿತು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ರಸಸ್ಥಾಪನೆಯಲ್ಲಿ ಮೊದಲಿಗೆ ಮುಲ್ತಾನಿ ರಾಗದಲ್ಲಿ ಹಾಡಿದರು. ನಂತರ ವಿಘ್ನವಿನಾ?ಕನನ್ನು ಪ್ರಾಥಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ‘ಸುಂದರ ಸುರಜನ್’ ಹಾಡು ಮುಲ್ತಾನಿ ರಾಗದಲ್ಲಿ ಅದ್ಭುತವಾಗಿ ಮೂಡಿದ್ದು ಪ್ರೇಕ್ಷಕರು ಅದಕ್ಕೆ ತಲೆದೂಗಿದರು. ಮುಂದೆ ಪುರಂದರ ದಾಸರ ‘ಕಲಿಯುಗದೊಳು ಹರಿನಾಮವ ನೆನೆದರೆ’ ಎಂಬ ಕೀರ್ತನೆಯು ವಿಶೇಷವಾಗಿ ಮೂಡಿಬಂದಿತು. ಪುಟ್ಟರಾಜು ಗವಾಯಿಗಳ ‘ಶಂಕರಿಯೇ ಶುಭಕರಿಯೇ’ ದೇವಿವಚನವು ಸಂಗೀತ ಪ್ರಿಯರ ಮನತಣಿಸುವಲ್ಲಿ ಯಶಸ್ವಿಯಾಯಿತು. ಒಂದೂವರೆ ಗಂಟೆಗಳ ಕಾಲ ನಡೆದ ಈ ಸಂಗೀತ ರಸದೌತಣದಲ್ಲಿ ನೌಷಾದ್ ಮತ್ತು ನಿಷಾದ್ ಹರ್ಲಾಪುರ್ ಸಹೋದರರಿಗೆ ತಬಲಾ ವಾದಕ ವಿನಾಯಕ್ ಸಾಗರ್, ಹಾರ್ಮೋನಿಯಂನಲ್ಲಿ ಪುಟ್ಟರಾಜ್ ಕೀರೇಶ್ ಹಾಗೂ ತಾಂಪೂರ್‌ನಲ್ಲಿ ಸುನೀಲ್ ಮತ್ತು ಶೃತಿ ಸಾಥ್‌ನೀಡಿದರು. ವರದಿ: ತೇಜಶ್ವಿನಿ ಕಾಂತರಾಜ್, ದ್ವಿತೀಯ ವರ್ಷ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕಿವಿಗೆ ತಂಪೆರೆಯುವ, ಮನಕ್ಕೆ ಮುದ ನೀಡುವ ಉತ್ತರ ಕರ್ನಾಟಕ ಶೈಲಿಯ ಜಾನಪದ ಗಾಯನವು ಜಾಂಬೂರಿಯಲ್ಲಿ ಗಮನ ಸೆಳೆಯಿತು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜರುಗುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಅಂಗವಾಗಿ ಗುರುವಾರ ‘ಕೃಷಿಸಿರಿ ವೇದಿಕೆ’ಯಲ್ಲಿ ಮೂಲಕ ಶರಣಪ್ಪ ವಡಿಗೇರಿ ಬಳಗದ ‘ಜಾನಪದ ಗಾಯನ’ ನೆರೆದಿದ್ದವರನ್ನು ಮುದಗೊಳಿಸಿದರು. ಜಾನಪದ ಗಾಯನದ ಜೊತೆಗೆ ವೈಚಾರಿಕ ಸ್ಫೂರ್ತಿ ನೀಡುವ ಅವರ ಸಹಜ ಮಾತುಗಳು ಚಿಂತನೆಯನ್ನೂ ದಾಟಿಸುವಲ್ಲಿ ಯಶಸ್ವಿಯಾದವು. ಸತತ ಒಂದು ಗಂಟೆಯ ಅವಧಿಯಲ್ಲಿ ಐದು ಹಾಡುಗಳನ್ನು ಹಾಡಿದ ಅವರು ಗಾಯನದ ನಡುವೆ ಮೌಲಿಕ ಮಾತುಗಳನ್ನಾಡಿದರು. ಆ ಮಾತುಗಳಿಗೆ ಪೂರಕವಾದ ತಾತ್ವಿಕ ಚಿಂತನೆಯನ್ನು ಹೊಳೆಸುವಂಥ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ‘ಯಾರ ಮನಿ ಯಾರ ಹೊಲ’ ಎಂಬ ಗೀತೆಯುಜನಪ್ರಿಯ ಶೈಲಿಯ ಭಾವುಕತೆಯ ಮೂಲಕ ಅಲ್ಲಿದ್ದವರನ್ನು ಸೆಳೆಯಿತು. ಈ ಹಾಡಿನಲ್ಲಿ ಮನುಷ್ಯನ ಸ್ವಾರ್ಥಬುದ್ಧಿಯಕುರಿತುತೀಕ್ಷ್ಣಟೀಕೆಇತ್ತು. ಬದಲಾದಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಸ್ವಾರ್ಥದಕಾರಣಕ್ಕಾಗಿಯೇ ಅರ್ಥ ಕಳೆದುಕೊಳ್ಳುತ್ತಿರುವ ಕೊರಗಿನಧ್ವನಿ ಇತ್ತು. ಮನುಷ್ಯನುಇನ್ನಷ್ಟು ಉದಾತ್ತಗೊಳ್ಳಬೇಕಾದ ಅಗತ್ಯತೆಯನ್ನುಗಾಯನದ…

Read More