ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೆರ್ಗಾಲು ಮಟ್ಟಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಮೊಗೇರಿ ಸೂರ್ಯ ಸಿದ್ಧಾಂತ ಫೌಂಡೇಶನ್ ಮತ್ತು ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ ಇವರ ಸಹಯೋಗದೊಂದಿಗೆ ಶ್ರಾವಣ ಸಂಧ್ಯಾ ಕಾರ್ಯಕ್ರಮ ಮತ್ತು ಸೂರ್ಯ ಸಿದ್ಧಾಂತ ಫೌಂಡೇಶನ್ ದಶಮಾನೋತ್ಸವದ ಆ.25 ರವಿವಾರ ಮಧ್ಯಾಹ್ನ 2.30ರಿಂದ ನಡೆಯಲಿದೆ. ಸೂರ್ಯ ಸಿದ್ಧಾಂತ ಫೌಂಡೇಶನ್ ನಿರ್ದೇಶಕರಾದ ಉಪ್ಪುಂದ ಚಂದ್ರಶೇಖರ ಹೊಳ್ಳರು ಕಾರ್ಯಕ್ರಮದ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಲಿದ್ದಾರೆ. ವಿದ್ವಾನ್ ಭರತ್ ಐತಾಳ್ ಅವರು ಪಂಚಾಂಗ ಶ್ರವಣ ಮತ್ತು ಧಾರ್ಮಿಕ ಪ್ರವಚನ ನೆಡೆಸಿಕೊಡುವರು. ಸಭಾಧ್ಯಕ್ಷರಾಗಿ ಯು. ಸಂದೇಶ್ ಭಟ್, ಅಧ್ಯಕ್ಷರು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯ, ಮುಖ್ಯ ಅತಿಥಿಗಳಾಗಿ ವರಮಹಾಲಕ್ಷ್ಮಿ ಹೊಳ್ಳ, ಅರುಣ್ ಶಾನುಭೋಗ, ಅನುಪಮ ಅಡಿಗ, ವೀಣಾ ಕೆ. ಹೆಬ್ಬಾರ್ ಭಾಗವಹಿಸುವರು. ಪರಿಷತ್ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ ಮತ್ತು ಲಲಿತ ಸಹಸ್ರನಾಮ ಪಠಣ ಮತ್ತು ರಕ್ಷಾ ಬಂಧನದ ಕಾರ್ಯಕ್ರಮವಿರುತ್ತದೆ. ಪರಿಷತ್ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಗೌರವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಜೋಗಿ ಸಮಾಜ ಸೇವಾ ಸಂಘ ರಿ. ಘಟಕ ಇದರ 2024 -26ನೇ ಸಾಲಿನ ಅಧ್ಯಕ್ಷರಾಗಿ ಕೊಲ್ಲೂರಿನ ಚಂದ್ರ ಜೋಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಜೋಗಿ ಹಳಗೇರಿ, ಕೋಶಾಧಿಕಾರಿಯಾಗಿ ರವೀಂದ್ರ ಜೋಗಿ ನಾಡ ಗುಡ್ಡೆಯಂಗಡಿ, ಉಪಾಧ್ಯಕ್ಷರಾಗಿ ನಾಗೇಶ್ ಜೋಗಿ ಹಳಗೇರಿ, ಜಗದೀಶ್ ಜೋಗಿ ಹಳಗೇರಿ, ನಾಗೇಂದ್ರ ಜೋಗಿ ಕೊಲ್ಲೂರು ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗುಳ್ಳಾಡಿಯ ಯುವ ನಿರೂಪಕ ನಿತಿನ್ ಶೆಟ್ಟಿ ಅವರಿಗೆ ಟಿಎನ್ಐಟಿ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ಸ್ 2024ರಲ್ಲಿ ಅವರ ಹಿನ್ನೆಲೆ ಧ್ವನಿಗಾಗಿ ಬೆಸ್ಟ್ ವಾಯ್ಸ್ ಓವರ್ ಪ್ರಶಸ್ತಿ ಲಭಿಸಿದೆ. ಮೂಲತಃ ಕುಂದಾಪುರದ ಬೇಳೂರು ಗ್ರಾಮದ ಗುಳ್ಳಾಡಿಯವರಾಗಿದ್ದು, ಅದ್ಭುತ ಕಂಠಸಿರಿ, ಇಂಪಾದ ಹಿನ್ನೆಲೆ ಧ್ವನಿ ಯೊಂದಿಗೆ ಮನೆ ಮಾತಾಗಿರುವ ನಿತಿನ್ ಶೆಟ್ಟಿ ಟಿವಿ9 ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪುಂದ ಇದರ 51ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಲಾಯಿತು. ಧಾರವಾಡದ ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ. ಇದರ ಅಧ್ಯಕ್ಷರಾದ ಯು. ಬಿ. ಶೆಟ್ಟಿ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂದೇಶ್ ಭಟ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಸದಸ್ಯರಾದ ರವೀಂದ್ರ ಪ್ರಭು, ರಂಜನಾ ಶೆಟ್ಟಿ, ಮಂಜು ದೇವಾಡಿಗ ಅರೆಹಾಡಿ, ವಕೀಲರಾದ ರಂಜಿತ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಪಂಚಾಯತ್ ಮಾಜಿ ಸದಸ್ಯರಾದ ಗೌರಿ ದೇವಾಡಿಗ, ಪಾಂಡುರಂಗ ಖಾರ್ವಿ, ಶಂಕರ್ ನಾರಾಯಣ ಭಟ್, ವೆಂಕಟರಮಣ ಭಟ್, ಓಂಕಾರ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಬೈಂದೂರು ಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ – ಗಮ್ಮತ್ತ್” ಕಾರ್ಯಕ್ರಮವನ್ನು ಅಗಸ್ಟ್ 25ರ ಭಾನುವಾರ ಬೆಳಿಗ್ಗೆ 9ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಕೆಸರುಗದ್ದೆ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮುಂದಾಳು, ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ಹೇಳಿದರು. ಅವರು ಬೈಂದೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಮೊದಲ ಭಾರಿಗೆ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮದುಮಗ ನಾಪತ್ತೆಯಾದ ಕಾರಣ ಸೋಮವಾರ ನಡೆಯಬೇಕಾಗಿದ್ದ ಮದುವೆ ರದ್ದುಗೊಂಡ ಘಟನೆ ನಡೆದಿದೆ. ಉಪ್ಪುಂದದ ಯುವಕನೊಂದಿಗೆ ಮರವಂತೆಯ ಹುಡುಗಿಗೆ ವಿವಾಹ ಸೋಮವಾರ ನಾಗೂರಿನಲ್ಲಿ ನಿಗದಿಯಾಗಿತ್ತು. ಎರಡು ಕಡೆಯವರು ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಹುಡುಗ ಸಹಕಾರಿ ಸಂಘದಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಯವರು ಪರಸ್ಪರ ಮಾತು ಕತೆಯ ಮೂಲಕ ಒಪ್ಪಿ ಮದುವೆಗೆ ದಿನ ನಿಶ್ಚಯ ಮಾಡಿದ್ದರು. ಅದರಂತೆ ಮದುಮಗ ಸೇರಿದಂತೆ ಮನೆಯವರು ಸಕಲ ತಯಾರಿ ಮಾಡಿ ಕೊಂಡಿದ್ದರು.ಆ.18ರಂದು ಹುಡುಗನ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದರು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದುಕೊಂಡು, ಮನೆಯಲ್ಲಿ ಇಟ್ಟು ಕೆಲವೊಂದು ವಸ್ತುಗಳನ್ನು ತರಲು ಇದೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದ. ಮೊಬೈಲ್, ಚಿನ್ನದ ಬ್ರೇಸ್ಲೆಟ್ನ್ನು ಮನೆಯಲ್ಲಿ ಇಟ್ಟು ಹೋದ ಮದುಮಗ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ. ಮೆಹಂದಿಯ ಸಂಭ್ರಮದಲ್ಲಿದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಹುಡುಗ ನಾಪತ್ತೆ ವಿಷಯ ತಿಳಿದು ಸಂಬಂಧಿಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೆಲವು ನಿಯಮ ಬದಲಾವಣೆ ಮಾಡಿರುವುದರಿಂದ ತೊಂದರೆಯಾಗುತ್ತಿದ್ದು, ನಿಯಮ ಸಡಿಲಗೊಳಿಸುವಂತೆ ಆಗ್ರಹಿಸಿ ಎನ್.ಎಸ್.ಯು.ಐ ಕುಂದಾಪುರ ತಾಲೂಕು ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಕಾಲೇಜಿನಲ್ಲಿ ಅವಧಿ ಮಧ್ಯದಲ್ಲಿ ತರಗತಿಗೆ ರಜೆ ಹಾಕಲು, ಬೆಳಿಗ್ಗೆ ತಡವಾಗಿ ತರಗತಿಗೆ ತೆರಳಲು ಮೊದಲಿನಿಂದಲೂ ಅನುಮತಿ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು, ಎಲ್ಲಾ ದಿನವೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ದೂರದ ಪ್ರದೇಶದಿಂದ ಬರುವವರಿಗೆ ಕೆಲವೊಮ್ಮೆ ಮೊದಲ ತರಗತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ನಿಯಮ ಬದಲಾವಣೆ ಮಾಡಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇನ್ನು ತುರ್ತು ಕೆಲಸಕ್ಕೆ ಒಂದು ತರಗತಿಗೆ ರಜೆ ಹಾಕಿ ಹೋಗಲು, ಲೈಬ್ರೆರಿಗೆ ಹೋಗಲು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕಾಲೇಜು ಆಡಳಿತ ಮಂಡಳಿ ಏಕಾಏಕೀ ನಿಯಮ ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಗಿದೆ. ಆಡಳಿತ ಮಂಡಳಿ ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸುವಂತೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು. ಕಾಲೇಜು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ರಜತಾದ್ರಿ ಉಡುಪಿ, ಹಾಗೂ ನಿವೇದಿತಾ ಪ್ರೌಢ ಶಾಲೆ ಜಂಟಿಯಾಗಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ – ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ – ಪ್ರಣವ್ ಕೆ. ಶೇರಿಗಾರ್, ಮಾನ್ಯ, ಅಕ್ಷತಾ ಶೆಟ್ಟಿ, ಹರ್ಷಿಣಿ, ಸೋನಿಕಾ ಆರ್. ಅವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲಯನ್ಸ್ ಜಿಲ್ಲೆ ವತಿಯಿಂದ ಅತಿವೃಷ್ಠಿಯಿಂದ ನಷ್ಟ ಹೊಂದಿದ ಬಡ ಕುಟುಂಬದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮವು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾರಮಣ ಪ್ರಭು ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಜಿಲ್ಲೆ 317ಸಿ, ವಲಯ 5 ಹಾಗೂ 6ರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಲಯನ್ಸ್ ಕ್ಲಬ್ ಇಂಟರ್ನ್ಯಾಶನಲ್ ಫೌಂಡೇಶನ್ ವತಿಯಿಂದ ನೀಡಲ್ಪಟ್ಟ ಆರ್ಥಿಕ ಸಹಾಯವನ್ನು, ಆಹಾರ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹಾಗೂ ಡಿಸ್ಟ್ರಿಕ್ಟ್ ಅಂಬಾಸಿಡರ್ ಅರುಣ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಜಿಲ್ಲೆಯ 21 ಕ್ಲಬ್ಗಳ ವ್ಯಾಪ್ತಿಯಲ್ಲಿರುವ 189 ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮ ವಿಶ್ವಾಸ ತುಂಬಲಾಯಿತು. ಜನರ ಸಂಕಷ್ಟದ ಸಮಯದಲ್ಲಿ ಲಯನ್ಸ್ ಅವರ ಸಹಾಯಕ್ಕೆ ಧಾವಿಸುತ್ತದೆ. ಎಂದು ಗವರ್ನರ್ ಮಹಮ್ಮದ್ ಹನೀಫ್ ಹೇಳಿದರು. ಲಯನ್ಸ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ಗಳಾದ ಲಯನ್ ವಿ. ಜಿ. ಶೆಟ್ಟಿ, ಪ್ರಥಮ ವೈಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ. ಉಚಿತ ತರಬೇತಿ, ಉಚಿತ ವಸತಿ ವ್ಯವಸ್ಥೆ, ಊಟ, ಉಪಹಾರದ ಜತೆಗೆ ವೀಸಾ ಹಾಗೂ ವಿಮಾನ ಟಿಕೆಟ್ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಲಿದ್ದು, ವಿದೇಶಿ ಭಾಷೆ ಕಲಿತು, ವಿದೇಶದಲ್ಲಿ ಉದ್ಯೋಗ ಮಾಡಬಹುದು. ಇಂತಹದ್ದೊಂದು ಅವಕಾಶ ಬೈಂದೂರಿಗೆ ಇದೇ ಮೊದಲ ಬಾರಿಗೆ ಬಂದಿದೆ. ಸಮೃದ್ಧ ಬೈಂದೂರು ವತಿಯಿಂದ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಅಂತಾರಾಷ್ಟ್ರೀಯ) ಹಾಗೂ ಅಜಿನುರಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ಆಗಸ್ಟ್ 31ರಂದು ಬೈಂದೂರಿನ ಜೆ. ಎನ್. ಆರ್. ಅಡಿಟೋರಿಯಂನಲ್ಲಿ ನಡೆಯಲಿದೆ. ಇದೊಂದು ಅಂತಾರಾಷ್ಟ್ರೀಯ ಉದ್ಯೋಗ ಮೇಳವಾಗಿದ್ದು ಜಪಾನ್, ಮಲೇಷಿಯಾ, ಜರ್ಮನ್, ಕ್ರೋವೆಷಿಯಾ, ಗಲ್ಫ್ ರಾಷ್ಟ್ರಗಳ ವಿವಿಧ ಕಂಪೆನಿಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳು, ಪದವೀಧರರು, ಪಿಯುಸಿ ಓದಿರುವರು ಹೀಗೆ ಎಲ್ಲ ವರ್ಗದವರಿಗೂ ವಿದೇಶದಲ್ಲಿ ಉದ್ಯೋಗಾವಕಾಶ ಪಡೆಯಬಹುದಾದ ವ್ಯವಸ್ಥೆ ಇದರಲಿಲ್ಲದೆ. ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಕೋರ್ಸ್, ತಾಂತ್ರಿಕೇತರ ಕೋರ್ಸ್ ಹೀಗೆ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಉದ್ಯೋಗಳು ಲಭ್ಯವಿದೆ. ಕೇಂದ್ರ ಸರ್ಕಾರದ ಅಧೀನ…
