ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಎಡಿಸಿ ಜಿ.ಎಸ್.ಮಮತಾ ದೇವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಉಸ್ತುವಾರಿ ಸಚಿವರು ಗಣರಾಜ್ಯೋತ್ಸವದ ಸಂದೇಶ ನೀಡಿ, ಡಾ|| ಬಿ.ಆರ್ ಅಂಬೇಡ್ಕರ್ರವರು ತಮ್ಮ ಅನುಭವ ಜ್ಞಾನ, ಅಧ್ಯಯನ, ದೂರದೃಷ್ಟಿಯ ಒಳನೋಟಗಳಿಂದ ಸಮಾಜದ ಎಲ್ಲಾ ಶೋಷಿತ ಜನ ಸಮುದಾಯದ ಏಳಿಗೆಗೆ, ಸಹಬಾಳ್ವೆಯಿಂದ ಮುಖ್ಯ ವಾಹಿನಿಗೆ ಬಂದು ಎಲ್ಲರಂತೆ ಬದುಕುವ ಅವಕಾಶಗಳನ್ನು ಕಲ್ಪಿಸುವ ಶ್ರೇಷ್ಠ ಸಂವಿಧಾನವನ್ನು ರಚಿಸಿ ಈ ಮೂಲಕ ಮಾನವತೆಯ ಉಳಿವು ಏಳಿಗೆ ಹಾಗೂ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಬೈಂದೂರಿನ ಅನುದೀಪ್ ಹಾಗೂ ಮಿನುಷಾ ದಂಪತಿಗೆ ಈ ವರ್ಷ ಭಾಗವಹಿಸಲು ಪ್ರಧಾನಮಂತ್ರಿ ಕಚೇರಿಯಿಂದ ಆಹ್ವಾನ ಬಂದಿದ್ದು, ಹೊಸದಿಲ್ಲಿಗೆ ತೆರಳಿದ್ದಾರೆ. 2020ರ ನವೆಂಬರ್ನಲ್ಲಿ ವಿವಾಹವಾಗಿದ್ದು ಅವರು, ಹನಿಮೂನ್ ಬದಲಿಗೆ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛತೆ ಮೂಲಕ ಗುರುತಿಸಿಕೊಂಡಿದ್ದರು. ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ನಲ್ಲಿ ಉಲ್ಲೇಖ ಮಾಡಿದ್ದರು. ಬೀಚ್ ಸ್ವಚ್ಛತೆಯ ಪಣತೊಟ್ಟ ದಂಪತಿಗಳು ಪ್ರತಿದಿನ ಸಂಜೆ 2ಗಂಟೆ ಶ್ರಮದಾನ ಮಾಡಿ ತೀರದಲ್ಲಿ ಬಿದ್ದಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್, ಚಪ್ಪಲಿ ಹೀಗೆ 9 ದಿನಗಳ ಅವಧಿಯಲ್ಲಿ ಹೀಗೆ ಸುಮಾರು 800ಕೆ.ಜಿಯಷ್ಟು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ. ಇದು ಪ್ರಧಾನಿಗಳ ಗಮನವನ್ನೂ ಸೆಳೆದಿತ್ತು. ಬೈಂದೂರು ತಾಲೂಕಿನ ಕಳವಾಡಿಯವರಾದ ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್. ತಮ್ಮದೇ ಸ್ವುಡಿಯೋ1 ಪ್ರೊಡಕ್ಷನ್ ಮೂಲಕ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಮಿನುಷಾ ಫಾರ್ಮಾಸಿಟಿಕಲ್ ಕಂಪನಿ ಉದ್ಯೋಗಿ. ತಮ್ಮ ಮದುವೆಯ ನೆನಪು ಬಹುಕಾಲ ಉಳಿಯ ಇದನ್ನೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಬೈಂದೂರು ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಮಂಗಳವಾರ ಬೈಂದೂರು ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಶ್ರೀರಾಮ್ ಫೈನಾನ್ಸ್ ಲಿ. ಉಡುಪಿ ಕ್ಲಸ್ಟರ್ ಹೆಡ್ ಸದಾಶಿವ ಅಮೀನ್ ಕಟ್ಟೆಗುಡ್ಡೆ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪ್ಪುಂದ ಮೂರ್ತೆದಾರರ ಸೇವಾ ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ವಕೀಲ ರಾಮಚಂದ್ರ ನಾಯ್ಕ್, ಉದ್ಯಮಿಗಳಾದ ಕೃಷ್ಣ ಮದ್ದೋಡಿ, ತಮಸಿರ್, ಶ್ರೀರಾಮ್ ಫೈನಾನ್ಸ್ನ ಗಣಪತಿ ನಾಯ್ಕ್, ಕ್ಲಸ್ಟರ್ ಸೇಲ್ಸ್ ಹೆಡ್ ಸದಾನಂದ ಪೈ, ರಿಜಿನಲ್ ಹೆಡ್ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕರಾದ ಮಹೇಶ್ ಪೂಜಾರಿ ಸ್ವಾಗತಿಸಿದರು. ಕರುಣಾಕರ ಕೆ. ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ಶಾಖಾ ವ್ಯವಸ್ಥಾಪಕರಾದ ರಾಘವೇಂದ್ರ ಸ್ವಾಮಿ ಇವರು ವಂದಿಸಿದರು. 130 ವಿದ್ಯಾರ್ಥಿಗಳಿಗೆ ತಲಾ 3500 ರೂ ನಂತೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮ ಎಂದರೆ ಕಾಲ್ಪನಿಕ ವ್ಯಕ್ತಿಯಲ್ಲ. ಭಗವಂತನ ರೂಪದಲ್ಲಿ ಭೂಮಿಯಲ್ಲಿ ನೆಲೆಸಿ ಅದ್ಭುತ ಲೀಲೆಗಳನ್ನು ಸೃಷ್ಟಿಸಿ ಪ್ರತಿ ಭಕ್ತರ ಹೃದಯದಲ್ಲಿ ವಿರಾಜಮಾನನಾಗಿರುವ ಚೇತನ ಎಂದು ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಮಹಾರಾಜ್ ಅವರು ಹೇಳಿದರು. ಯಳಜಿತದ ಶ್ರೀ ರಾಮಕೃಷ್ಣ ಕುಟೀರ, ಹಿಂದೂ ಐಕ್ಯ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದೊಂದಿಗೆ ಸೋಮವಾರ ಶ್ರೀ ರಾಮೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕೋಟಿ ರಾಮ ನಾಮ ಜಪ ಯಜ್ಞ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆಶೀರ್ವಚನ ನೀಡಿದರು. ಪ್ರಭು ಶ್ರೀರಾಮ ಇಡೀ ಭಾರತವನ್ನು ವ್ಯಾಪಿಸಿಕೊಂಡಿದ್ದಾನೆ. ದೇಶದ ಯಾವುದೇ ಮೂಲೆಗೆ ತೆರಳಿದರೂ ರಾಮನ ಕುರಿತಾದ ಒಂದಿಲ್ಲೊಂದು ಪುರಾಣ ಕಥೆಗಳಿವೆ. ಕರ್ನಾಟಕದಲ್ಲಿಯೂ ರಾಮ ಓಡಾಡಿದ ಅನೇಕ ಕುರುಹುಗಳಿವೆ. ಹನುಮಂತ ದೇವರು ಅಂಜನಾದ್ರಿಯವರು ಎಂಬುದೇ ಹೆಮ್ಮೆ. ಕರ್ನಾಟಕದ ಶಿಲೆಯಿಂದಲೇ ರಾಮಲಲ್ಲಾನ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದರು. ರಾಮಾಯಣ ಭಾರತದ ಸಂಸ್ಕೃತಿಯ ಅಡಿಪಾಯ. ಅದು ಸಾಮಾನ್ಯರಿಗೂ ಧರ್ಮಮಾರ್ಗವನ್ನೂ, ಬದುಕನ್ನು ಜಯಿಸುವ ದಾರಿಯನ್ನು ತೋರಿದೆ. ರಾಮನಾಪ ಜಪವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಸತ್ಯನಾಥ ಸ್ಟೋರ್ಸ್ ಬ್ರಹ್ಮಾವರ ಬಟ್ಟೆ ಮಳಿಗೆ ವತಿಯಿಂದ ಸಾರ್ವಜನಿಕರಿಗೆ 5700 ಜಿಲೇಬಿಗಳನ್ನು ಹಂಚಲಾಯಿತು. ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಜಿಲೇಬಿ ವಿತರಣೆ ಮಾಡಲಾಯಿತು. ಅಲ್ಲದೆ, ತೀರ್ಥಹಳ್ಳಿಯ ಸತ್ಯನಾಥ ಸ್ಟೋರ್ಸ್ ಬಟ್ಟೆ ಮಳಿಗೆ ವತಿಯಿಂದ ತೀರ್ಥಹಳ್ಳಿ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಸತ್ಯನಾಥ ಸ್ಟೋರ್ಸ್ ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪದಲ್ಲಿ ಬಟ್ಟೆ ಮಳಿಗೆ ಹೊಂದಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆ ಪಶು ಚಿಕಿತ್ಸಾಲಯದ ಬಳಿ ಸಣ್ಣದೊಂದು ಗೂಡಂಗಡಿಯಲ್ಲಿ ಚಪ್ಪಲಿ ಕೊಡೆ ದುರಸ್ತಿ ಕಾಯಕ ಮಾಡುವ ಮಣಿಕಂಠ ಅವರು ದೆಹಲಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಫಲಾನುಭವಿಯಾಗಿರುವ ಅವರು, ಪಡೆದ ಸಾಲದ ಕಂತನ್ನು ಅವಧಿ ಪೂರ್ವದಲ್ಲಿ ಮರುಪಾವತಿಸಿರುವುದರಿಂದ ಗಣರಾಜ್ಯೋತ್ಸವಕ್ಕೆ ಆಹ್ವಾನ ಬಂದಿದೆ. ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಸಿಎಂ ಸ್ವನಿಧಿ ಯೋಜನೆಯಡಿ ಪಡೆದ 10 ಸಾವಿರ ಸಾಲವನ್ನು ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿ ಇಲಾಖೆ ಮೆಚ್ಚುಗೆ ಗಳಿಸಿದ ಮಣಿಕಂಠನಿಗೆ ಇಲಾಖೆ ಮತ್ತೆ 20 ಸಾವಿರ ರೂ. ಸಾಲ ನೀಡಿತು. ಪಡೆದ ಸಾಲದಲ್ಲಿ ಮಳೆ ಗಾಲದಲ್ಲಿ ಬೇಕಾಗುವ ಚಪ್ಪಲಿ, ಕೊಡೆ ಮಾರಾಟ ಮಾಡಿ ಯಶಸ್ವಿ ಆದರು. ಪಡೆದ ಸಾಲ ಐದೇ ತಿಂಗಳಲ್ಲಿ ಮರುಪಾವತಿಸಿದರು. ಸಾಲಾ ಮನ್ನ ಬಡ್ಡಿರಹಿತ ಸಾಲ ಅಂತ ಉಚಿತ ಸಿಗುತ್ತಾ ಅಂತ ಪಡೆದ ಸಾಲ ಕಟ್ಟಲು ಮೀನಾಮೇಶ ಎಣಿಸುವ ಜನರ ಮಧ್ಯೆ ಮಣಿಕಂಠ ವಿಭಿನ್ನವಾಗಿ ಕಾಣುತ್ತಾರೆ. ಇಲಾಖೆ ಮಣಿಕಂಠ ಪ್ರಾಮಾಣಿಕತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿಯ ಪ್ರತಿಷ್ಠೆ ಅಂಗವಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವು ದೇವಸ್ಥಾನಗಳು, ರಾಮಮಂದಿರ ಮೊದಲಾದೆಡೆ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಸಿಹಿ ಹಂಚುವಿಕೆ ಸೇರಿದಂತೆ ವಿವಿಧ ಕಾರ್ಯಕ್ರಗಳು ನಡೆದವು. ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ವಿಶೇಷ ಅಲಂಕಾರ,ಮಹಾಪೂಜೆ ನಡೆಯಿತು. ಕುಂಭಾಸಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮ ದೇವರ ಮೂರ್ತಿ ಹಾಗೂ ಶ್ರೀರಾಮ ದೇವರಿಗೆ ಆನೆಗುಡ್ಡೆಯಲ್ಲಿ ವಿಶೇಷ ಪೂಜೆ ನಡೆಯಿತು.ತದನಂತರ ಬೆಳ್ಳಿ ರಥೋತ್ಸವ ನಡೆಸಲಾಯಿತು. ಕುಂದಾಪುರ ಬೈಂದೂರು ಕೋಟ ಮೊದಲಾದೆಡೆ ರಾಮೋತ್ಸವದ ಅಂಗವಾಗಿ ಮೆರವಣಿಗೆ ನಡೆಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ರಜತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನೂತನವಾಗಿ ನಿರ್ಮಿಸಿದ ಸೈಕಲ್ ಸ್ಟ್ಯಾಂಡ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಇತ್ತಿಚಿಗೆ ನಡೆಯಿತು, ಸೈಕಲ್ ಸ್ಟ್ಯಾಂಡ್ ಉದ್ಘಾಟನೆಯನ್ನು ಮಾಜಿ ಆಡಳಿತ ಮಂಡಳಿಯ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿಯವರು ನೆರವೇರಿಸಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಆಡಳಿತ ಮಂಡಳಿ ಸದಸ್ಯರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ ಮತ್ತು ಮಾಜಿ ಆಡಳಿತ ಮಂಡಳಿ ಸದಸ್ಯ ಡಾ.ಅತುಲ್ ಕುಮಾರ ಶೆಟ್ಟಿ ನೆರವೇರಿಸಿದರು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ದಾನಿಗಳು ಆದ ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಆಡಳಿತ ಮಂಡಳಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿಯವರು ವಹಿಸಿದರು, ಮುಖ್ಯ ಅತಿಥಿಗಳಾಗಿ ಶಾಲಾ ಮಹಾ ಪೋಷಕರಾದ ಶಿವರಾಮ ಶೆಟ್ಟಿ ದೇವಲ್ಕುಂದ, ಚಂದ್ರಶೇಖರ್ ಶೆಟ್ಟಿ, ಕಾನ್ ಬೇರು, ದಿನಕರ ಶೆಟ್ಟಿ ನಿಡೂಟ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ ಎಲ್ ಜಯರಾಮ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್ ಬೈಂದೂರು, ಪ್ರಾದೇಶಿಕ ಸಾರಿಗೆ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೈಂದೂರು ವಲಯದ ಎಲ್ಲಾ ಶಾಲೆಗಳ ಶಾಲಾವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ “ರೋಟರಿ ಜಿಲ್ಲಾ ಕಾರ್ಯಕ್ರಮ ರಸ್ತೆ ಸುರಕ್ಷತೆಯ ” ಅಂಗವಾಗಿ ಶಾಲಾ ವಾಹನದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಗಾರ ಉಪ್ಪಂದದ ರೈತ ಸಿರಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಬೈಂದೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಅವರು ಉದ್ಘಾಟಿಸಿ ಮಾತನಾಡಿ, “ಮಕ್ಕಳು ಬಹಳ ಸೂಕ್ಷ್ಮ ಮತ್ತು ಅವರೇ ನಮ್ಮ ಭವಿಷ್ಯ ; ಅವರ ಸುರಕ್ಷತೆಯ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಿದರು ಕೂಡ ಅದು ಕಡಿಮೆಯೇ ,ಪ್ರತಿದಿನ ಪ್ರತಿ ಕ್ಷಣ ಮೈಯೆಲ್ಲಾ ಕಣ್ಣಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿ ಮಾತು ಹೇಳಿದರು. ಬೈಂದೂರು ತಹಶೀಲ್ದಾರರಾದ ಪ್ರದೀಪ್ ಆರ್ ಅವರು ಉಡುಪಿ ಜಿಲ್ಲಾ ಆರ್.ಟಿ.ಓ ರವಿಶಂಕರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪರ್ಸ್ ನಲ್ಲಿದ್ದ ಕರಿಮಣಿ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹುಬ್ಬಳ್ಳಿ ಬೆಂಡಗೇರಿ ಮೂಲದ ಬೀಬಿ ಜಾನ್(58) ಹಾಗೂ ಪಾರವ್ವ (54) ಎಂದು ಗುರುತಿಸಲಾಗಿದೆ. ಮದುವೆ ನಿಮಿತ್ತ ಖರೀದಿಸಿ ತಂದ ಕರಿಮಣಿ ಸರವನ್ನು ಬ್ಯಾಗಿನಲ್ಲಿಟ್ಟು ಡಿ.27ರಂದು ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಪೂಜೆಗೆ ಹೋಗಿದ್ದ ವೇಳೆ ಕಳ್ಳರು ಚಿನ್ನಾಭರಣವಿದ್ದ ಪರ್ಸ್ ಕಳವು ಮಾಡಿದ್ದರು. ಕುಂದಾಪುರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡವು ಸಿಸಿಟಿವಿ ಮತ್ತು ಇತರ ತಾಂತ್ರಿಕ ದಾಖಲೆ ವಿಶ್ಲೇಷಿಸಿ, ಪ್ರಕರಣ ದಾಖಲಾದ ಮೂರೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದರು. ಇವರಿಂದ ಕಳವುಗೈದ 3.5 ಲಕ್ಷ ಮೌಲ್ಯದ 51.900 ಗ್ರಾಂ ತೂಕದ ಚಿನ್ನದ ಕರಿಮಣಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕಾರ್ಯಾಚರಣೆಯನ್ನು ಉಡುಪಿ ಎಸ್ಪಿ…
