ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜನಸಾಮಾನ್ಯರ ಬಾಯಲ್ಲಿ ನಿರೂರಿಸುವ ದೇಹಕ್ಕೆ ಪೌಷ್ಠಿಕತೆ ಒದಗಿಸುವ ಹಣ್ಣುಗಳ ರಾಜನೆಂದು ಪ್ರಸಿದ್ಧಿ ಪಡೆದಿರುವ ವಿವಿದ ಬಗೆಯ ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉಡುಪಿ ನಗರದ ದೊಡ್ಡಣ್ಣಗುಡ್ಡೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ 20 ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 16 ರಿಂದ 19 ರವರೆಗೆ ನಡೆಯಲಿದೆ ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾsಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್ ಸಹಿತ ನಾನ ತಳಿಯ ಒಟ್ಟು 40 ಟನ್ಗೂ ಹೆಚ್ಚು ಮಾವು ಮೇಳದಲ್ಲಿ ಲಭ್ಯವಿದೆ. ಮಾವು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.17: ತನ್ನದೆಯಾದ ಕಲ್ಪನೆಯ ಮೂಲಕ ಛಾಯಾಗ್ರಹಣ ಮಾಡುದರ ಮೂಲಕ ಒಂದೋಂದು ಚಿತ್ರಗಳಿಗು ಅವಿನಾಭಾವ ಸಂಭಂಧ ಸೃಷ್ಟಿ ಮಾಡುವ ಕಲಾಕಾರರು ಛಾಯಾಗ್ರಾಹಕರು. ಯಾವುದೇ ಚಿತ್ರ ಕೇವಲವಲ್ಲ ಹಾಗೂ ಆ ಚಿತ್ರವನ್ನು ಸೃಷ್ಟಿಸಿದ ಕಲಾವಿದ,ಛಾಯಾಗ್ರಾಹಕ ಯಾವತ್ತು ಕೇವಲ ಅನ್ನಿಸಿಕೊಳ್ಳುದಿಲ್ಲ ಸಮಾಜದಲ್ಲಿ ಛಾಯಗ್ರಾಹಕರ ಮೌಲ್ಯ ಅಪಾರವಾದದ್ದು ಎಂದು ಪತ್ರಕರ್ತ ಲಕ್ಷ್ಮೀ ಮಚ್ಚಿನ ಹೇಳಿದರು. ಅವರು ಕುಂದಾಪುರದ ಶ್ರೇಯಸ್ಸ್ ಇನ್ ಸಭಾಂಗಣದಲ್ಲಿ ಶುಕ್ರವಾರ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ, ಬೈಂದೂರು ವಲಯದ ವತಿಯಿಂದ ಆಯೋಜಿಸಲಾದ ಕ್ಯಾನಾನ್ ಕಾರ್ಯಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ,ಬೈಂದೂರು ವಲಯದ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದ್ದರು. ಈ ಸಂಧರ್ಭದಲ್ಲಿ ಕ್ಯಾನಾನ್ ತರಬೇತುದಾರ ಮ್ಯಾತಿಯು, ವ್ಯವಹಾರ ವ್ಯವಸ್ಥಾಪಕ ಅಜಯ್, ಸಂಘದ ಗೌರವಾಧ್ಯಕ್ಷರಾದ ಶ್ರೀಧರ್ ಹೆಗ್ಡೆ, ಸಲಹಾ ಸಮಿತಿ ಆದ್ಯಕ್ಷ ದಿನೇಶ್ ಗೋಡೆ, ನಿಕಟ ಪೂರ್ವ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಮಠ, ಕೋಶಾಧಿಕಾರಿ ಹರೀಶ್ ಹಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿಕೋಟ: ವಿದ್ಯಾರ್ಥಿಗಳು ರಜಾ ದಿನಗಳಲ್ಲಿ ಮೋಜು ಮಸ್ತಿಗೆ ಸಮಯ ಮೀಸಲಿಡದೆ, ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಲವಾರು ವಿಷಯಗಳ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. ಮಕ್ಕಳಲ್ಲೂ ಕನಸು ಕಾಣುವ ತುಡಿತವಿರುತ್ತದೆ, ಆ ಕನಸಿಗೆ ಬಣ್ಣ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಸುಶೀಲ ಸೋಮಶೇಖರ್ ಅವರು ಹೇಳಿದರು. ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಮೂರು ದಿನಗಳ ಆರ್ಟ್ ಕ್ಯಾಂಪ್ ಆರಾಧನಾ-2024 (ಬೆರಳುಗಳಲ್ಲಿ ಭಾವಗೀತೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಕಾರಂತ ಥೀಮ್ ಪಾರ್ಕ್ನಲ್ಲಿ ಮಕ್ಕಳಿಗಾಗಿ ಹಲವಾರು ಚಟುವಟಿಕೆ, ತರಬೇತಿ ನಡೆಯುತ್ತಿರುತ್ತದೆ ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಚಿತ್ರಕಲಾ ಶಿಕ್ಷಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಇಲ್ಲಿನ ಉಪ್ಪುಂದ ಶಾಲೆಬಾಗಿಲುನಲ್ಲಿ ಜೆಸಿಐ ಉಪ್ಪುಂದದ ವಿಶಂತಿ ಮಹೋತ್ಸವ ಜೆಸಿಐ ಸಂಭ್ರಮ 2024 ಜರುಗಿತು. ಕಾರ್ಯಕ್ರಮವನ್ನು ಜೆ.ಎನ್.ಎಸ್ ಕನ್ಸ್ಟ್ರಕ್ಷನ್ ಗ್ರೂಪ್ ಆಫ್ ಘಟಪ್ರಭಾ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಜಯಶೀಲ ನಾರಾಯಣ ಶೆಟ್ಟಿ ದೀಪ ಪ್ರಜ್ವಲಿಸಿ 20 ರ ಸವಿನೆನಪಿಗಾಗಿ 20 ಬಲೂನುಗಳನ್ನು ಹಾರಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಪಕಾಧ್ಯಕ್ಷರಾದ ದಿವಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕೇವಲ 15 ಸದಸ್ಯರನ್ನು ಕೂಡಿಕೊಂಡು 2005ರಲ್ಲಿ ಉದ್ಘಾಟನೆಗೊಂಡ ಈ ಸಂಸ್ಥೆ ಕ್ರಮೇಣ ಈ ಭಾಗದ ಜನರ ಸಹಕಾರದಿಂದ ಇಂದು 20 ನೇ ವರ್ಷಕ್ಕೆ ಕಾಲಿರಿಸಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಉಪ್ಪುಂದ ಹೊಳೆಕಡಿಮನೆ ವೆಂಕಟೇಶ್ ಪೂಜಾರಿ ಹಾಗೂ ಕಳೆದ 20 ವರ್ಷಗಳಿಂದ ಜೆಸಿಐ ಉಪ್ಪುಂದ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪುಂದ ದೇವಾಡಿಗರ ಸಂಘದ ಗೌರವಾಧ್ಯಕ್ಷರಾದ ಜನಾರ್ದನ ದೇವಾಡಿಗ ಉದ್ಯಮಿಗಳು ಮುಂಬೈ, ವಲಯ 15 ಅಧ್ಯಕ್ಷರಾದ ಸೆನೆಟರ್ ಗಿರೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ತಾಲೂಕಿನ ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ನೂತನ ಅಧ್ಯಕ್ಷರಾಗಿ ನೀರಾಡಿಮಕ್ಕಿ ಸಂದೇಶ್ ಕಾಂಚನ್, ಕಾರ್ಯದರ್ಶಿಯಾಗಿ ಕಿರಣ್ ಆಚಾರ್ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಸುಬ್ಬಣ್ಣ ಕೋಣಿ, ಉಪಾಧ್ಯಕ್ಷರಾಗಿ ಮಹೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಗಜೇಂದ್ರ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಪೂಜಾರಿ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ ಚಂದನ್, ಸುಧೀರ್ ಪೂಜಾರಿ, ಅಂಕಿತಾ, ತನುಜಾ, ತೇಜಸ್ವಿನಿ, ಕ್ರೀಡಾ ಕಾರ್ಯದರ್ಶಿ ಮಂಜುನಾಥ ಪೂಜಾರಿ, ಜಯಪ್ರಶಾಂತ್ ಪೂಜಾರಿ, ಈಶ್ವರ ಪೂಜಾರಿ, ಪವನ್, ನಿತ್ಯಾನಂದ (ರಾಮ) ,ಮಹೇಶ್ ಬಂಗೇರ,ಶ್ರೇಯಸ್, ಲೆಕ್ಕಪರಿಶೋಧಕರಾದ ರಘು.ವಿ ಪೂಜಾರಿ, ಮನೋಹರ ಹೆಚ್.ಎಂ.ಟಿ, ಉದಯ ಮಲ್ಲನಬೆಟ್ಟು, ಬಾಬು ಬೆನಕ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾದ ಸುಬ್ಬಣ್ಣ ಕೋಣಿಯವರ ಮಾರ್ಗದರ್ಶನದಲ್ಲಿ 26ನೇ ವಾರ್ಷೀಕೋತ್ಸವದ ಆಯವ್ಯಯ ಮಂಡನೆ ಹಾಗೂ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸುವುದು ಶ್ಲಾಘನೀಯ. ನಮ್ಮ ಸಮಾಜದ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಗೈಯಲು ಅಗತ್ಯವಿರುವ ತರಬೇತಿ ಕೇಂದ್ರ ಸ್ಥಾಪಿಸಲು ಶ್ರಮಿಸುವುದಾಗಿ ಜಿಎಸ್ಬಿ ಸಮಾಜದ ಯುವ ನಾಯಕ ನಂದನ್ ಮಲ್ಯ ಹೇಳಿದರು. ಅವರು ಕೋಟೇಶ್ವರದಲ್ಲಿ ಇಲ್ಲಿನ ಕೊಂಕಣಿ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಜಿಎಸ್ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ ರೋಯ್ಸ್ ಯುಪಿವಿಸಿ ಡೋರ್ಸ್ & ವಿಂಡೋಸ್ ಕೊಂಕಣಿ ಎಕ್ಸ್ಪ್ರೆಸ್ ಪ್ರೀಮಿಯರ್ ಲೀಗ್ 2024 ಉದ್ದೇಶಿಸಿ ಮಾತನಾಡಿದರು. ಉದ್ಯಮಿ ಆಟಕೆರೆ ವಿಶ್ವನಾಥ ಪೈ ಮಾತನಾಡುತ್ತಾ ಕ್ರಿಕೆಟ್ ಆಟದ ತಮ್ಮ ಅನುಭವವನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಕ್ರೀಡೆ ಹಾಗೂ ಕಲೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ್ ಕಾಮತ್ ಇಂತಹ ಹಲವಾರು ಪಂದ್ಯಕೂಟ ಸಮಾಜದ ಪ್ರತಿ ಊರಿನಲ್ಲಿ ನಡೆಯಬೇಕು. ಜಿಎಸ್ಬಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾಧಿಕಾರಿಗಲ ಕಛೇರಿಯ ಐಟಿ ನಿರ್ದೇಶಕ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮಂಜುನಾಥ ಆನಂದ ( 53 ವಷ೯) ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಕೋಟದವರಾದ ಮಂಜುನಾಥ್ ಅವರು ಕುತ್ಪಾಡಿಯಲ್ಲಿ ನೆಲೆಸಿದ್ದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇ ತಂತ್ರಾಂಶ ನಿವ೯ಹಣೆ, ಚುನಾವಣಾ ಸಮಯ ಐ.ಟಿ. ಎಪ್ಲಿಕೇಶನ್ ನಿವ೯ಹಣೆ ಮಾಡಿರುವುದು, 2007ರಲ್ಲಿ ಉಡುಪಿ ಜಿಲ್ಲೆಯ ಡಿಸಿ ಕಚೇರಿಯಲ್ಲಿ ಪ್ರಥಮವಾಗಿ PLO ( ಪೇಪರ್ ಲೆಸ್ ಆಫೀಸ್) ನ್ನು ಆರಂಭಿಸಿದ ಸಮಯ ಎನ್ಐಸಿ. ಮುಖ್ಯಸ್ಥರಾಗಿ ಕೆಲಸ ನಿವ೯ಹಣೆ, ಜಿಲ್ಲಾ ವೆಬ್ಸೈಟ್ ನಿವ೯ಹಣೆಯ ಜವಾಬ್ದಾರಿ ಹೊತ್ತಿದ್ದರು. ಮೃತರು ಪತ್ನಿ ಗೀತಾ, ಮಕ್ಕಳಾದ ಗ್ರೀಷ್ಮಾ, ರೋಷ್ನಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೋಟದಲ್ಲಿ ನಡೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಕರ ದಿನದಂದು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ತೋಟಗಾರಿಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಜಯಶೀಲ ಶೆಟ್ಟಿ ನೆರವೆರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಬಿ.ಎಮ್. ಸುಕುಮಾರ್ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ನಾರಾಯಣ ನಾಯಕ್, ಜ್ಞಾನಸುಧಾ ಸಂಸ್ಥೆಯ ಸಂಸ್ಥಾಪಕರಾದ ಸುಧಾಕರ್ ಶೆಟ್ಟಿ, ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ, ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೂತನ ಪ್ರಯೋಗಾಲಯವು ಹೊಸ ತಂತ್ರಜ್ಷಾನವನ್ನು ಒಳಗೊಂಡ 66 ಗಣಕ ಯಂತ್ರಗಳನ್ನು ಒಳಗೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಮೇ.15: 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸತತ 11ನೇ ಬಾರಿ ಶೇ.100 ರಷ್ಟು ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದು ಒಟ್ಟು 41 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲಿ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳಾದ ಪ್ರಥಮ್ ಜಿ. ಕಾಂಚನ್ (476), ಅನ್ಸಿ ಸಿ. ಶೆಟ್ಟಿ (459), ನಿಶಾ ರಾಜೇಶ್ (453), ಇಶಾನ್ (450), ಟಿ. ಶ್ರೇಯಸ್ ನಾಯಕ್ (445), ವರ್ಷಿತ್ ಯು ಶೆಟ್ಟಿ (444), ನಿಶ್ಚಿತ್ ಎ.ಎಸ್ (440), ಕಲ್ಪಿತ ಡಿ ಮಣೂರು (436), ಟಿ ಶಾಶ್ವತ್ ನಾಯಕ್ (436), ಪ್ರಥಮ್ ಮಯ್ಯ (431), ಬ್ರಾಹ್ಮಿ ಶೆಟ್ಟಿ( 410), ಆರುಶ್ ಎಸ್ ಪೂಜಾರಿ (408), ಧನ್ಯಶ್ರೀ( 407), ರಚನ (405) ಅಂಕಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗನ್ನು ಶಾಲಾ ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ , ಶಾಲಾ ಮ್ಯಾನೆಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ.15: ಮೋಟರ್ ಸೈಕಲ್ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಕೂರಿನ ಗುಲ್ವಾಡಿ ಡ್ಯಾಮ್ ಸಮೀಪ ಮಂಗಳವಾರ ಸಂಜೆ ನಡೆದಿದೆ. ಬಳ್ಕೂರು ಬಸವ ಪೂಜಾರಿ (55) ಮೃತ ದುರ್ದೈವಿ. ಕಂಡ್ಲೂರು ಯಿಂದ ಬಸ್ರೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಟಿಪ್ಪರ್ ಲಾರಿ ಬಸ್ರೂರುಯಿಂದ ಬಳ್ಕೂರು ಕಡೆಗೆ ಹೋಗುತ್ತಿದ್ದ ಟಿವಿಎಸ್ ಮೋಟರ್ ಸೈಕಲ್ಗೆ ನೇರ ಡಿಕ್ಕಿ ಹೊಡೆದಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
