ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕಲೋಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಭೆ ಸಮಾರಂಭ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಸುವಿಧಾ ತಂತ್ರಾಂಶದ ಮೂಲಕ ಅನುಮತಿ ಪಡೆಯಬೇಕೆಂದ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ .ಕೆ ರವರು ತಿಳಿಸಿದರು . ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಪ್ರಿಂಟರ್ ಮತ್ತು ಪಬ್ಲಿಷರ್ಸ್ ಗಳ ಮಾಲೀಕರರೂಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಅನುಮತಿ ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕೆಂದರು. ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸಲಾಗುವುದು. ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು , ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸ ಬೇಕೆಂದರು. ಮಾದರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ, ಹೇರಿಕುದ್ರುವಿನ ಗಂಗಾಧರ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅತ್ಯಂತ ಆರೋಗ್ಯಪೂರ್ಣರಾಗಿದ್ದ ಅವರು ಮಾರ್ಚ್ 13ರಂದು ಬೆಳಿಗ್ಗೆ 6 ಗಂಟೆಗೆ ಹಠಾತ್ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ತತ್ ಕ್ಷಣವೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಲಾಗಿತ್ತು. ಆದರೆ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿರುವುದು ಸ್ಪಷ್ಟಗೊಂಡ ಹಿನ್ನಲೆಯಲ್ಲಿ ಆ ನಂತರದಲ್ಲಿ ಉಡುಪಿಯ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ದಿವಂಗತ ಆಸ್ಕರ್ ಫರ್ನಾಂಡೀಸ್, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ ಹೆಗ್ಡೆ ಮುಂತಾದ ನಾಯಕರುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಅನುಯಾಯಿಯಾಗಿದ್ದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿದ್ದ ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ಉತ್ತಮವಾದ ಗೌರವವನ್ನು ಪಡೆದಿದ್ದಾರೆ. ಆ ನಿಟ್ಟಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಗವಂತನಿಗೆ ಯಾರಲ್ಲಿ ಏನಿಲ್ಲ, ಏನು ಕೊಡಬೇಕು ಎನ್ನೋದು ಗೊತ್ತಿರುತ್ತದೆ. ಭಗವಂತನಲ್ಲಿ ಬೇಡುವುದಾದರೆ ಜ್ಞಾನಕೇಳು. ಆಧ್ಯಾತ್ಮ ದಾರಿಯಲ್ಲಿ ಸಾಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಚಿಕ್ಕವಯಸ್ಸಲ್ಲಿ ಮಕ್ಕಳಿಗೆ ಆಧ್ಯಾತ್ಮ ದಾರಿಯಲ್ಲಿ ಸಾಗುವಂತೆ ನೋಡಿಕೊಂಡರೆ ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ಆಗುತ್ತಾರೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠ ಕಿರಿಯ ಯತಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಹಟ್ಟಿಯಂಗಡಿ ದಿ.ರಾಮಚಂದ್ರ ಭಟ್ ಸಂಕಲ್ಪದಂತೆ ಅವರ ಮಕ್ಕಳು ಹಾಗೂ ಭಕ್ತರ ಸಹಕಾರದಲ್ಲಿ ನಿರ್ಮಿಸಿದ ಹಟ್ಟಿಯಂಗಡಿ ನೂತನ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಲೋಕಾರ್ಪಣೆ, ಶಿಖರ ಸ್ಥಾಪನೆ ನೆರವೇರಿಸಿ ಮಾತನಾಡಿದರು. ಮನುಷ್ಯರ ಸ್ವಭಾವ ಒಂದೇತರನಾಗಿರದೆ ಶ್ರದ್ದೆ ಹೊರಟುಹೋಗುತ್ತದೆ. ಭಗವಂತನಲ್ಲಿ ಸ್ಥಿರವಾದ ಭಕ್ತಿ ಬೇಡು. ಜ್ಞಾನ ಕೊಡುವವನು ಭಗವಂತನಾಗಿದ್ದರಿಂದ ವಿದ್ಯೆ ಕರುಣಿಸುವಂತೆ ಬೇಡು. ಐಶ್ವರ್ಯ, ವಿದ್ಯೆ, ಧನಕನಕ ಎಲ್ಲವನ್ನೂ ಕೊಟ್ಟ ದೇವರ ದರ್ಶನ ಮಾಡುವುದಕ್ಕೆ ಬರುವ ಭಕ್ತರಿದ್ದು, ಭಗವಂತನಿಗೆ ಎಲ್ಲಾ ಗೊತ್ತಿದ್ದು, ಕೊಡುವುದನ್ನು ಕೊಟ್ಟೇಕೊಡುತ್ತಾನೆ. ದೇವಸ್ಥಾನ ದೇವರ ದರ್ಶನ ಮಾಡುವುದು ಎಲ್ಲವನ್ನೂ ಕೊಟ್ಟ ಭಗವಂತಿಬಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ವತಿಯಿಂದ ನಡೆಸಲ್ಪಟ್ಟ ಜೆ.ಇ.ಇ. ಮೈನ್ಸ್ ಬಿ. ಆರ್ಕ್ (B.Arch) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ರ ಪ್ರಥಮ ಹಂತದ ಪರೀಕ್ಷೆಯಲ್ಲಿ ದುರ್ಗಾಶ್ರೀ ಎಂ 99.1312779 ಪರ್ಸಂಟೈಲ್, ಆದಿತ್ಯ ಅಲಗೌಡ ಪಾಟೀಲ್ 98.5573008, ಪವನ್ ಕೆ. ಎಸ್ 96.1256545 ಪರ್ಸಂಟೈಲ್ ಗಳಿಸಿದ್ದಾರೆ. ಅದರಂತೆಯೇ ಜೆ.ಇ.ಇ ಮೈನ್ಸ್ ಬಿ ಪ್ಲಾನಿಂಗ್ ನಲ್ಲಿ ಸಾನ್ವಿಕುಮಾರ್ 92.7239106, ಸಚೇತ್ ದಯಾನಂದ ಬಿ. ಎಸ್ 85.7935359 ಪರ್ಸಂಟೈಲ್ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್, ಹನ್ನೊಂದು ವಿದ್ಯಾರ್ಥಿಗಳು 85 ಕ್ಕಿಂತ ಹೆಚ್ಚು ಪರ್ಸಂಟೈಲ್ , ಹದಿನೇಳು ವಿದ್ಯಾರ್ಥಿಗಳು 80 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿದ್ದಾರೆ. ಜನವರಿ ತಿಂಗಳಿನಲ್ಲಿ ನಡೆದ ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿಯೂ ಕ್ರಿಯೇಟಿವ್ ನ 26 ವಿದ್ಯಾರ್ಥಿಗಳು 97 ಕ್ಕಿಂತ ಹೆಚ್ಚು ಪರ್ಸಂಟೈಲ್ ಗಳಿಸಿರುವುದನ್ನು ಗಮನಿಸಬಹುದಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮಣೆ ಹಾಕಲಾಗಿದ್ದು, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡಲಾಗಿದೆ. ಇತರೇ ಕ್ಷೇತ್ರಗಳು:ಮೈಸೂರು-ಯದುವೀರ್ ಒಡೆಯರ್ಹಾವೇರಿ-ಬಸವರಾಜ ಬೊಮ್ಮಾಯಿಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆಬೆಂಗಳೂರು ಕೇಂದ್ರ-ಪಿಸಿ ಮೋಹನ್ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯಬೆಂಗಳೂರು ಗ್ರಾಮಾಂತರ-ಮಂಜುನಾಥ್ಚಿಕ್ಕೋಡಿ- ಅಣ್ಣಾ ಸಾಹೇಬ್ ಜೊಲ್ಲೆಬಾಗಲಕೋಟೆ- ಪಿ.ಸಿ, ಗದ್ದಿಗೌಡರವಿಜಯಪುರ- ರಮೇಶ್ ಜಿಗಜಿಣಿಗಿಕಲಬುರಗಿ- ಉಮೇಶ ಜಾಧವ್ಬೀದರ್- ಭಗವಂತ ಖೂಬಾ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮಾ.13 : ಬೆಲೆಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬಲ ನೀಡಲು ಗ್ಯಾರಂಟಿಗಳನ್ನು ನೀಡುವ ಮೂಲಕ ಬಡವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಸರ್ಕಾರದ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಉಡುಪಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ಅಭಿವೃದ್ಧಿ ಕಾಮಾಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 2023 ರ ಜೂನ್ 11 ಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯಲ್ಲಿ 87 ಲಕ್ಷ ಮಹಿಳೆಯರು 33 ಕೋಟಿ ರೂ.ಗಳ ವೆಚ್ಚದಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ . ಗೃಹಜ್ಯೋತಿ ಯೋಜನೆಯಡಿ 311652 ಜನ ಲಾಭ ಪಡೆಯುತ್ತಿದ್ದು, ಇದಕ್ಕಾಗಿ 114 ಕೋಟಿ ರೂ. ವ್ಯಯಿಸಲಾಗುತ್ತಿದೆ. ಅನ್ನಭಾಗ್ಯ 766000 ಜನರಿಗೆ ಉಚಿತ ಅಕ್ಕಿ ನೀಡಲಾಗುತ್ತಿದೆ. ರಾಜ್ಯದ ಬಡವರಿಗೆ ಅಕ್ಕಿ ನೀಡಲು ನಿರಾಕರಿಸಿದ ಬಿಜೆಪಿಯ ಕೇಂದ್ರ ಸರ್ಕಾರ ಎಂದಿಗೂ ಸಮಾಜಿಕ ನ್ಯಾಯದ ಪರವಾಗಿ ಇಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರ ಕೆಲಸ ಮಾಡುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಂಡ್ಸೆಯ ಶ್ರೀ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ದಿ|ನಾರಾಯಣ ಗಾಣಿಗರ ಸ್ಮರಣಾರ್ಥ ನಾರಾಯಣ ಗಾಣಿಗರ ಕುಟುಂಬದವರು ಕೊಡಮಾಡುವ ವಂಡ್ಸೆ ನಾರಾಯಣ ಗಾಣಿಗ ಪ್ರಶಸ್ತಿ-2024ಕ್ಕೆ ಬಡಗುತಿಟ್ಟಿನ ಯಕ್ಷಗಾನ ಸಾಂಪ್ರದಾಯಿಕ ಶೈಲಿಯ ಭಾಗವತ, ಯಕ್ಷಗುರು, ಮದ್ದಳೆವಾದಕರಾದ ವಿಶ್ವೇಶ್ವರ ಸೋಮಯಾಜಿ ಮೋರ್ಟು ಇವರನ್ನು ಆಯ್ಕೆ ಮಾಡಲಾಗಿದೆ. ಮೋರ್ಟು ಶಿವರಾಮ ಸೋಮಯಾಜಿ ಮತ್ತು ಮೀನಾಕ್ಷಿ ದಂಪತಿಗಳ ಪುತ್ರರಾಗಿ ೧೯೫೦ರಲ್ಲಿ ಜನಿಸಿದ ಇವರು ಯಕ್ಷಗಾನದ ಬಗ್ಗೆ ಆಕರ್ಷಿತರಾಗಿ ಬೆಳ್ಳಾಲದ ವೆಂಕಟಾಚಲ ಹೆಬ್ಬಾರ್ ಅವರ ಬಳಿ ತಾಳ ಅಭ್ಯಾಸ ಮಾಡಿದರು. ಕದಳಿಯ ಸೀತಾರಾಮ ಮಧ್ಯಸ್ಥ, ಜನ್ಸಾಲೆ ನಾಗಪ್ಪಯ್ಯವರ ಗರಡಿಯಲ್ಲಿ ಮದ್ದಳೆಯ ನುಡಿತಗಳನ್ನು ಸಾಂಪ್ರದಾಯಕವಾಗಿ ಅಭ್ಯಾಸಿಸಿ ಬಳಿಕ ಮಾರ್ವಿ ವಾದಿರಾಜ ಹೆಬ್ಬಾರ್ ಅವರಲ್ಲಿ ಭಾಗವತಿಕೆಯನ್ನು ಕರಗತ ಮಾಡಿಕೊಂಡರು. 1976ರಲ್ಲಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಳಿ ಭಾಗವತಿಕೆಯ ರಂಗತಂತ್ರದ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡರು. ಕಮಲಶಿಲೆ, ಮಾರಣಕಟ್ಟೆ, ಮಂದಾರ್ತಿ, ಕೊಡವೂರು, ಪೆರ್ಡೂರು, ಶಿವರಾಜಪುರ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯಲ್ಲಿ ಸುಸಜ್ಜಿತವಾದ ನಿರ್ಮಾಣಗೊಂಡಿರುವ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿ ಲೋಕಾರ್ಪಣೆಗೆಗೊಂಡಿತು. ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್ ಅವರು ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಿ, ರುದ್ರಭೂಮಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಶ್ರೀ ಮಹಾಂಕಾಳಿ ಹಿಂದು ರುದ್ರಭೂಮಿಯ ಪ್ರಮುಖ ರವಿಶಂಕರ ಖಾರ್ವಿ, ಗಂಗೊಳ್ಳಿಯ ಖಾರ್ವಿಕೇರಿಯಲ್ಲಿ ಹಿಂದು ರುದ್ರ ಭೂಮಿ ನಿರ್ಮಾಣವಾಗಬೇಕೆಂದು ಈ ಭಾಗದ ಜನರ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಸರಕಾರ ಖಾರ್ವಿಕೇರಿಯಲ್ಲಿ ಸುಮಾರು ೨೦ ಸೆಂಟ್ಸ್ ಜಾಗವನ್ನು ಮಂಜೂರು ಮಾಡಿದ್ದಲ್ಲದೆ ಸುಮಾರು ೧೫ ಲಕ್ಷ ರೂ. ಅನುದಾನವನ್ನು ನೀಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶವ ದಹನಕ್ಕೆ ಸಿಲಿಕಾನ್ ಛೇಂಬರ್ನ್ನು ಕೊಡುಗೆಯಾಗಿ ನೀಡಿದ್ದು, ಒಟ್ಟು ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ಹಿಂದು ರುದ್ರಭೂಮಿಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದರು. ರುದ್ರಭೂಮಿಯಲ್ಲಿ ವಿದ್ಯುತ್ ಸಂಪರ್ಕದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ, ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆ ಮತ್ತು ಇಬ್ಬರು ಮಾಜಿ ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ ಮತ್ತು ಎಂಪಿ ಕುಮಾರಸ್ವಾಮಿ ಅವರು ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. 2023ರ ವಿಧಾನಸಭಾ ಚುನಾವಣೆಯಲ್ಲಿ ಈ ಇಬ್ಬರು ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಜಯಪ್ರಕಾಶ್ ಹೆಗ್ಡೆ ಅವರನ್ನು ವಿಧಾನ ಪರಿಷತ್ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಉಚ್ಚಟಿಸಿತ್ತು. ಬಳಿಕ ಅವರು ಬಿಜೆಪಿ ಸೇರಿದ್ದರು. ಬಳಿಕ ಅವರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ, ಇಂಧನ ಸಚಿವ ಕೆ ಜೆ ಜಾರ್ಜ್ ಸಮ್ಮುಖದಲ್ಲಿ ಈ ಮೂವರು ತಮ್ಮ ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದುಡಿಮೆಯು ಮನುಷ್ಯನನ್ನು ನಿಸ್ವಾರ್ಥಿಯನ್ನಾಗಿ ಮಾಡುತ್ತದೆ ಬೆವರು ಎಂದರೆ ಅದು ಶ್ರಮಸಂಸ್ಕೃತಿಯ ಪ್ರತೀಕ ಹೀಗಾಗಿ ಬೆವರು ಅತ್ಯಂತ ಶ್ರೇಷ್ಠ ವಾದುದು ಆದರೆ ಬೆವರನ್ನು ನಿಕೃಷ್ಟವಾಗಿ ನೋಡುವ ಮನಸ್ಥಿಯಿಂದ ನಮ್ಮ ಸಮಾಜ ಹೊರಗೆ ಬರಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹೇಳಿದರು. ಅವರು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸ್ವಂತ ಕಚೇರಿ”ಬೆವರು” ಉದ್ಘಾಟಿಸಿ ಮಾತನಾಡಿದರು. ಬೆವರಿನ ಮಹತ್ವವನ್ನು ಅರಿತಿದ್ದ ಮಹಮ್ಮದ್ ಪೈಗಂಬರ್ ಕಾರ್ಮಿಕನ ಬೆವರು ಆರಿಹೋಗುವ ಮುನ್ನ ಅವರ ಕೂಲಿಯನ್ನು ನೀಡಬೇಕು ಎಂದು ಪ್ರತಿಪಾದಿಸಿದ್ದರು. ಸುಮಾರು 4 ಸಾವಿರ ಮಂದಿ ನಿರ್ಮಾಣ ಕಾರ್ಮಿಕರು ತಮ್ಮ ಬೆವರು ಹಾಗೂ ಶ್ರಮದಿಂದ ಕಟ್ಟಿರುವ ಈ ಕಾರ್ಮಿಕ ಕಚೇರಿಯು ಭವಿಷ್ಯದಲ್ಲಿ ಕಾರ್ಮಿಕರ ವರ್ಗದ ಅರಿವು ಹಾಗೂ ಜಾಗೃತಿ ಕೇಂದ್ರವಾಗಿ ರೂಪಗೊಳ್ಳಲಿ ಎಂದು ಅವರು ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ…
