Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ 2022ನೇ ಸಾಲಿನ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನ ದೃತಿ ಎಸ್, ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರದ ವಿದ್ಯಾರ್ಥಿನಿ ಮಾನ್ವಿ ಆರ್, ಸ.ಹಿ.ಪ್ರಾ.ಶಾಲೆ ಮಣೂರು ಪಡುಕೆರೆ ವಿದ್ಯಾರ್ಥಿ ಲಕ್ಷ್ಮೀಶ ಟಿ ಶ್ರೀಯಾನ್ , ಕೆ.ಪಿ.ಎಸ್ ಬಿದ್ಕಲ್ಕಟ್ಟೆ ವಿದ್ಯಾರ್ಥಿನಿ ಶ್ರೀ ನಿತಾ ಎನ್, ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ.ಶಾಲೆ ಗಂಗೊಳ್ಳಿ ವಿದ್ಯಾರ್ಥಿ ಸಂಜಿತ್ ಎಂ, ಸ.ಹಿ.ಪ್ರಾ.ಶಾಲೆ ಮಣೂರು-ಪಡುಕೆರೆ ವಿದ್ಯಾರ್ಥಿನಿ ಲಿಖಿತಾ, ಶ್ರೀ ದು.ಪ.ಅ.ಹಿ.ಪ್ರಾ.ಶಾಲೆ ಮಂದಾರ್ತಿ ವಿದ್ಯಾರ್ಥಿನಿ ಸಿರಿ, ರೋಟರಿ ಕೇಂದ್ರೀಯ ಶಾಲೆ ವಿದ್ಯಾರ್ಥಿನಿ ಇಶಾ ಪ್ರದೀಪ್ ದೇವಾಡಿಗ, ಮಿಲಾಗ್ರೀಸ್ ಆಂಗ್ಲ ಮಾಧ್ಯಮ ಶಾಲೆ ಕಲ್ಯಾಣಪುರ ವಿದ್ಯಾರ್ಥಿನಿ ಪ್ರವಣ್ಯ ಯು ರಾವ್, ಸ.ಹಿ.ಪ್ರಾ.ಶಾಲೆ ಚಿತ್ರಪಾಡಿ ವಿದ್ಯಾರ್ಥಿನಿ ಅನ್ವಿತಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ಕಟ್ಟೆ ವಿದ್ಯಾರ್ಥಿ ಆದೀಶ ಪಿ.ಬಿ,ಶ್ರೀ ರವಿ ಶಂಕರ ವಿದ್ಯಾಮಂದಿರ ಕೊಂಚಾಡಿ ಶಾಲೆ ವಿದ್ಯಾರ್ಥಿನಿ ಪ್ರಾಪ್ತಿ ಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ರಾಣಿ ಬಲೆ ಮೀನುಗಾರರ ಒಕ್ಕೂಟದ ವತಿಯಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಧನುರ್ ಸಂಕ್ರಾಂತಿಯಿಂದ ವೃಷಭ ಸಂಕ್ರಾಂತಿ ವರೆಗಿನ ಉತ್ಸವದ ಅಂಗವಾಗಿ ಶುಕ್ರವಾರದಂದು ಶ್ರೀ ದೇವಿಗೆ ಬೆಳಿಗ್ಗೆ ಏಕದಶ ರುದ್ರಾಭಿಷೇಕ, ರಾತ್ರಿ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿಯೊಂದಿಗೆ ಬೆಳ್ಳಿ ರಥೋತ್ಸವ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಪ್ರಕಾಶ್ ಉಡುಪ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಗಳು ಜರುಗಿದವು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಸಂಘದ ಪದಾಧಿಕಾರಿಗಳು ಹಾಗೂ ರಾಣಿ ಬಲೆ ಮೀನುಗಾರ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಾಭೈರವ ದೇವರ ಅಷ್ಟಬಂಧ ಸಹಿತ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ ಜರುಗಿತು. ಇದನ್ನೂ ಓದಿ:► ಜೀರ್ಣೋದ್ಧಾರ ಕಾರ್ಯದಲ್ಲಿ ಹಳಗೇರಿ ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ – https://kundapraa.com/?p=63270 . ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿಗಳಾದ ರಘುರಾಮ ಮಧ್ಯಸ್ಥರ ಮಾರ್ಗದರ್ಶನದಂತೆ ಕ್ಷೇತ್ರ ಜೋಯಿಸರಾದ ರಾಮಚಂದ್ರ ನಾವುಡ ತೆಂಕಬೆಟ್ಟು ಇವರ ನೇತೃತ್ವದಲ್ಲಿ ನಡೆದವು. ಈ ಸಂದರ್ಭದಲ್ಲಿ ಕೆ. ಕೃಷ್ಣ ಪೂಜಾರಿ ಮುಂಬೈ, ದಯಾನಂದ ಜೋಗಿ ನಾವುಂದ, ನವೀನ್ ಚಂದ್ರ ಜೋಗಿ ಕಾಪು, ಸುಕೇಶ್ ಕುಮಾರ ಶೆಟ್ಟಿ ಹಳಗೇರಿ, ನಾಗೇಶ್ ಜೋಗಿ ಕೆಳಮನೆ, ನರಸಿಂಹ ಹಳಗೇರಿ ರಮೇಶ ದೇವಾಡಿಗ ನಾಗೂರು, ಸುಬ್ರಮಣ್ಯ ಜೋಗಿ ಕೆಳಮನೆ ಹಾಗೂ ನಂಬಿದ ಭಕ್ತಾಭಿಮಾನಿಗಳು, ಕುಟುಂಬಸ್ಥರು ಹಾಜರಿದ್ದರು. ಜನವರಿ 26ರಿಂದ ಮೊದಲ್ಗೊಂಡು 30ರ ಪರ್ಯಂತ ಶ್ರೀ ಕಾಲಾಭೈರವ ದೇವರ ಅಷ್ಟಬಂಧ ಸಹಿತ ಪುನರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲಾಕ್ಷೇತ್ರ – ಕುಂದಾಪುರ ಟ್ರಸ್ಟ್ ಆಗಿ ಉನ್ನತೀಕರಣಗೊಂಡಿದ್ದು, ಕಲಾಕ್ಷೇತ್ರದ ನವೀಕೃತ ಕಛೇರಿಯಲ್ಲಿ ಟ್ರಸ್ಟ್ನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿಗಳು ಉಳಿಯಬೇಕಾದರೆ ಕಲೆ ಉಳಿಯಬೇಕು, ಅಂತಹ ಕೆಲಸವನ್ನು ಹಲವು ವರ್ಷಗಳಿಂದ ಕಲಾಕ್ಷೇತ್ರ ಮಾಡುತ್ತಾ ಬಂದಿದೆ. ಸಂಗೀತದ ಆಕರ್ಷಣೆ ಯಾರನ್ನೂ ಖಿನ್ನತೆಗೆ ಒಳಗಾಗಲು ಬಿಡುವುದಿಲ್ಲ, ಆಕಸ್ಮಾತ್ ಖಿನ್ನತೆಗೆ ಒಳಗಾದವ ಸಂಗೀತ ಕೇಳುವ ಹವ್ಯಾಸವನ್ನು ಬೆಳೆಸಿಕೊಂಡರೆ ಅದರಿಂದ ಹೊರಬರಲು ಸಾಧ್ಯವಿದೆ ಹಾಗಾಗಿ ನಮ್ಮ ತೊಡಕುಗಳನ್ನು ಪರಿಹರಿಸಬಲ್ಲ ಏಕೈಕ ಸಾಧನವೆಂದರೆ ಅದು ಸಂಗೀತ ಎಂದರು. ಹಿರಿಯ ಚೇತನ ಪ್ರಕಾಶ್ ಯಡಿಯಾಳ್ ನೆನಪಿನಲ್ಲಿ ನಿರ್ಮಿಸಿದ ಪ್ರತಿಧ್ವನಿರಹಿತ ಹವಾನಿಯಂತ್ರಿತ ಕಿರುಸಭಾಂಗಣವಾದ ’ಪ್ರಕಾಶಾಂಗಣ’ ಮತ್ತು ಸಿತಾರ್ ಕಲಾವಿದ ವಿದ್ವಾನ್ ಅವಿನಾಶ ಹೆಬ್ಬಾರರ ನೆನಪಿನಲ್ಲಿ ನಿರ್ಮಿಸಿದ ’ಅವಿನಾಶೀ ರಂಗ’ ಎಂಬ ವೇದಿಕೆಯನ್ನು ಕ್ರಮವಾಗಿ ಜ್ಯೋತಿ ಪ್ರಕಾಶ್ ಯಡಿಯಾಳ್ ಮತ್ತು ಶಾರದಾಂಬಾ ಅವಿನಾಶ್ ಹೆಬ್ಬಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಎ.ಎಸ್.ಎನ್. ಹೆಬ್ಬಾರ್ ಮಿತ್ರತ್ವದ ಮಹತ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿ 2022-23ನೇ ಸಾಲಿನ ರಾಷ್ತ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನೇರವೇರಿತು. ಬೈಂದೂರಿನ ವಲಯ ಅರಣ್ಯಾಧಿಕಾರಿಗಳಾದ ಸಿದ್ದೇಶ್ವರ ಕೆ. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಪರಿಸರವನ್ನು ಉಳಿಸುವಲ್ಲಿ ಮತ್ತು ಉತ್ತಮ ಪರಿಸರವನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ, ಪ್ರತಿಯೊಬ್ಬ ವಿದ್ಯಾರ್ಥಿಯು ಒಂದೊಂದು ಗಿಡವನ್ನು ನೆಡುವ ಸಂಕಲ್ಪ, ಬೇಸಿಗೆ ಅವಧಿಯಲ್ಲಿ ಪಕ್ಷಿಗಳಿಗೆ ನೀರನ್ನು ನೀಡುವುದು ಹೀಗೆ ಹಲವು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಪ್ರಾಂಶುಪಾಲರಾದ ಡಾ. ರಘು ನಾಯ್ಕ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿದ್ದ ತಮ್ಮ ಹಿಂದಿನ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧1ರ ಯೋಜನಾಧಿಕಾರಿ ನಾಗರಾಜ ಶೆಟ್ಟಿ, ಪ್ರಾಧ್ಯಾಪಕರಾದ ಮೋಹನಕುಮಾರ, ಶ್ರೀ ಹೆಚ್ ಜೆ, ಸವಿತಾ ಎಸ್, ಮಣಿಕಂಠ ಉಪಸ್ಥಿತರಿದ್ದರು. ಮನಿಷಾ ದ್ವಿತೀಯ ಬಿ ಬಿ ಎ ಕಾರ್ಯಕ್ರಮದ ನಿರೂಪಣೆ, x…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಕೀಲರ ರಕ್ಷಣಾ ಕಾಯಿದೆಯನ್ನು ಬೆಳಗಾವಿಯ ಅಧಿವೇಶನದಲ್ಲಿ ಜಾರಿಗೆ ತರುವಂತೆ ಒತ್ತಾಯಿಸಿ ಬೈಂದೂರು ವಕೀಲರ ಸಂಘವು ಬೈಂದೂರು ನ್ಯಾಯಾಲಯದಿಂದ ತಹಶೀಲ್ದಾರ ಅವರ ಕಚೇರಿಯ ವರೆಗೆ ಜಾಥ ನಡೆಸಿ, ಬೈಂದೂರು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೈಂದೂರು ವಕೀಲ ಸಂಘದ ಅಧ್ಯಕ್ಷರಾದ ಮೋಬಿ ಪಿ.ಸಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ದೇವಿದಾಸ್ ಮೇಸ್ತ, ಲಿಂಗಪ್ಪ ಆರ್ ಮೇಸ್ತ, ಮೊಹಮ್ಮದ್ ಇಲಿಯಾಸ್ ಹಾಗೂ ಬೈಂದೂರು ವಕೀಲ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿದ ಶ್ರೀಕಾಂತ್ ಹೆಗ್ಡೆ ಮಾತನಾಡಿ ತಕ್ಷಣವೇ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.17: ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಅವುಗಳ ಲಕ್ಷಣಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆಗಿಂದಾಗ್ಗೆ ಅರಿವು ಮೂಡಿಸಿದ್ದಲ್ಲಿ ಮಾತ್ರ ಜನರು ರೋಗಗಳಿಂದ ದೂರ ಉಳಿಸಲು ಸಾಧ್ಯ. ಈ ಬಗ್ಗೆ ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ರೋಗ ರುಜಿನಗಳು ಹವಾಮಾನಕ್ಕೆ ಅನುಗುಣವಾಗಿ ಹರಡುತ್ತವೆ. ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ವರ್ಷದ ಮೊದಲನೇ ಮಾಸದಿಂದ ಕೊನೆಯ ಮಾಸದವರೆಗೆ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದಲ್ಲಿ ಸಮಾಜವು ಆರೋಗ್ಯಯುಕ್ತವಾಗಿ ಇರಲು ಸಾಧ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಕಡಿತಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ಗಳು, ಆರೋಗ್ಯ ಇಲಾಖೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಜಾನಪದ ಸಂಶೋಧಕ ಹಾಗೂ ಹಿರಿಯ ಸಾಹಿತಿ ಪ್ರೊ. ಎ.ವಿ. ನಾವಡ ಅವರಿಗೆ ಈ ಬಾರಿಯ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ನೀಡಲಾಗುವುದು ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿನಿಧಿ ಪ್ರತಿಷ್ಠಾನದ ರಾಮ್ ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.24 ರಂದು ಸಂಜೆ 4ಕ್ಕೆ ಬಸ್ರೂರಿನ‌ ಶ್ರೀ ಶಾರದಾ ಕಾಲೇಜಿನಲ್ಲಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನಡೆಯುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ 88 ನೇ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಅಶಕ್ತರಿಗೆ ದತ್ತಿನಿಧಿ ವತಿಯಿಂದ ಸಹಾಯ ಧನ ವಿತರಣೆ ಮಾಡಲಾಗುವುದು.‌ ಸಭಾ ಕಾರ್ಯಕ್ರಮದ ಬಳಿಕ ನೃತ್ಯ ನಿಕೇತನ ಕೊಡವೂರು ಅವರಿಂದ ನೃತ್ಯ ಸಿಂಚನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ್ ರೈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಡಿ.16: ಇಲ್ಲಿನ ಗಾಂಧಿ ಮೈದಾನವು ಮಿಲಿಟರಿ ಗ್ರೌಂಡ್ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಪುರಭವನ ನಿರ್ಮಾಣದಿಂದ ಪ್ರಸ್ತುತ ಮೈದಾನದಲ್ಲಿ ನಡೆಯುತ್ತಿರುವ ಯಾವ ಚಟುವಟಿಕೆಗೂ ತೊಂದರೆಯಾಗುವುದೂ ಇಲ್ಲ. ಬಳಕೆಯಾಗದ ಮೈದಾನದ ಒಂದು ಭಾಗದಲ್ಲಷ್ಟೇ ಸಾರ್ವಜನಿಕರಿಗೆ ಉಪಯೋಗವಾಗಲಿರುವ ಪುರಭವನ ನಿರ್ಮಾಣವಾಗಲಿದೆ. ಸ್ಥಳಕ್ಕೆ ಬಂದು ವಾಸ್ತವಾಂಶ ಅರಿಯದೇ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಜಿಪಂ ಮಾಜಿ ಸದಸ್ಯ ಟಿ. ಬಾಬು ಶೆಟ್ಟಿ ಹೇಳಿದರು. ಅವರು ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರು ತಾಲೂಕಿಗೆ ಸಂಸದರು, ಶಾಸಕರ ಪ್ರಯತ್ನದಿಂದ ಹೆಚ್ಚಿನ ಅನುದಾನ ದೊರೆತಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದರು. 3.45 ಎಕ್ರೆ ಜಾಗ ಕ್ರೀಡಾ ಇಲಾಖೆ & 1.50 ಎಕ್ರೆ ನಗರಾಭಿವೃದ್ಧಿ ಇಲಾಖೆಗೆ ಈಗಾಗಲೇ ಹಸ್ತಾಂತರವಾಗಿದೆ. 4.95ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಪುರಭವನ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಆರಂಭವಾಗಲಿದೆ. ಕ್ರೀಡಾ ಇಲಾಖೆಯ ಮೂಲಕ ಮೈದಾನ ಅಭಿವೃದ್ಧಿಗಾಗಿ ಪ್ರತ್ಯೇಕ ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಅನುದಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಬಿವಿಪಿ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪದವಿ ಕಾಲೇಜು, ಭಂಡಾರ್‌ಕಾರ‍್ಸ್ ಕಾಲೇಜು ಹಾಗೂ ಕೋಟೇಶ್ವರ ಕಾಗೇರಿ ವರದರಾಜ ಶೆಟ್ಟಿ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಮಿನಿ ವಿಧಾನ ಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಫಲಿತಾಂಶ ಕ್ಲಪ್ತ ಸಮಯದಲ್ಲಿ ಪ್ರಕಟವಾಗುತ್ತಿಲ್ಲ. ಪರೀಕ್ಷೆ ಮುಗಿದು ವರ್ಷ ಹತ್ತಿರವಾದರೂ ಮೌಲ್ಯಮಾಪನ ನೆನೆಗುದಿಗೆ. ಅಂಕಪಟ್ಟಿ ಇಲ್ಲದೆ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣ, ಉದ್ಯೋಗ ದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಾಗದಿದ್ದರೆ ಮಂಗಳೂರು ವಿವಿ ಕುಲಪತಿ ಕುರ್ಚಿ ಖಾಲಿಮಾಡಲಿ ಎಂದು ಎಚ್ಚರಿಕೆ ನೀಡಿದರು. ಕೋಟೇಶ್ವರ ಕಾಗೇರಿ ವರದರಾಜ ಶೆಟ್ಟಿ ಪದವಿ ಕಾಲೇಜು ವಿದ್ಯಾರ್ಥಿ ಪ್ರಮುಖ್ ರಾಹುಲ್ ಶೆಟ್ಟಿ ಮಾತನಾಡಿ, ಅಂಕಪಟ್ಟಿ ಬರದ ಕಾರಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಆಗುತ್ತಿಲ್ಲ. ಅಂಕಪಟ್ಟಿಕೊಳ್ಳಲು ಬೈಂದೂರಿನಿಂದ ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಹೋಗುವುದಕ್ಕೆ ಸಾವಿರಾರು ರೂ. ಖರ್ಚು ಮಾಡಿದರು ಸಹ ಅದೇ ದಿನದಲ್ಲಿ ಅಂಕಪಟ್ಟಿ ಸಿಗುವುದಿಲ್ಲ. ಎರಡು ಮೂರು…

Read More