ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 20.09.2023 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆ, ನೌಕಾ ಪಡೆ, ವಾಯುಪಡೆ ಹಾಗೂ ಸಿವಿಲ್ ಸರ್ವಿಸ್ ಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಭಾರತೀಯ ಸೇನಾ ಶಾರ್ಟ್ ಸರ್ವಿಸ್ ಕಮಿಷನ್ – 54ನೇ ಕೋರ್ಸಿಗೆ ಆಯ್ಕೆಗೊಂಡಿರುವ ಭರತ್ ಬಾಬು ದೇವಾಡಿಗ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಷ್ಮಿಶ್ ಕುಂದರ್ ಹಾಗೂ ರಾಷ್ಟ್ರೀಯ ಕರಾಟೆ ಪಟು ಅಜಯ್ A ದೇವಾಡಿಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರದ್ಧಾ ವಂದಿಸಿ, ಸಾನಿಕ ಶೆಟ್ಟಿ ಸ್ವಾಗತಿಸಿ, ಸಿಂಚನ ಅತಿಥಿಗಳನ್ನು ಪರಿಚಯಿಸಿದರು. ರಝಿನಾ ಬಾನು ಕಾರ್ಯಕ್ರಮ ನಿರ್ವಹಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ನಾಟಾ(NATA) ಪರೀಕ್ಷೆಯ ತರಬೇತಿಯ ಕುರಿತಾಗಿ ಮಾಹಿತಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯ ಅಗತ್ಯತೆಯ ಕುರಿತು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಂಗಳೂರಿನ ಶ್ರೀ ಚಂದ್ರಶೇಖರ್ ರವರು ನಾಟಾ(NATA) ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರಾದ ಶ್ರೀ ರಮೇಶ್ ಪೂಜಾರಿ,ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಉಪನ್ಯಾಸಕ ಅಭಿಜಿತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರ ಸಂಘ ನಿ. ಬೈಂದೂರು ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸದಸ್ಯರ ಸಭೆ ಇತ್ತೀಚೆಗೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅಧ್ಯಕ್ಷರಾದ ಅನಸೂಯ ಶೇಟ್ ವಹಿಸಿದ್ದರು. ಆಶಾ ಕಿಶೋರ್ ಪ್ರಾರ್ಥಿಸಿದರು.ಸಂಸ್ಥೆಯ ಸಿಬ್ಬಂದಿ ಆಶಾ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೆಹನಾ ಸುಲ್ತಾನಾ ಅವರು ಸಂಘದ ವಾರ್ಷಿಕ ವರದಿ, ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಕು. ಆಶಾ, ನಿರ್ದೇಶಕರಾದ ಗೀತಾ. ಎಸ್, ಲಕ್ಷ್ಮೀ ಬೈಂದೂರು, ಗಿರಿಜಾ, ಸಾವಿತ್ರಿ, ಮಾಲತಿ, ಪ್ರೇಮಾ, ಅಂಬಿಕಾ, ಶ್ಯಾಮಲಾ, ಅಲಿಯಾ ನಾಜ್, ನೇತ್ರಾವತಿ, ಸರಳಾ ಮುಂತಾದವರು ಉಪಸ್ಥಿತರಿದ್ದರು. ಪತ್ರಕರ್ತ ಅಂದಕಾ ಎ.ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಹಿರ್ಗಾನದಲ್ಲಿರುವ ಕ್ರಿಯೇಟಿವ್ ವಿದ್ಯಾಸಂಸ್ಥೆಯಲ್ಲಿ ಗಣೇಶ ಚಥುರ್ತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಂಜಾನೆ ಕಾರ್ಕಳದ ಎಣ್ಣೆಹೊಳೆಯಿಂದ ತೆರೆದ ವಾಹನದಲ್ಲಿ ಗಣೇಶನ ಮೂರ್ತಿಯನ್ನು ಕಾಲೇಜಿಗೆ ಮೆರವಣಿಗೆ ಮುಖಾಂತರ ಕರೆತರಲಾಯಿತು. ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ವಿಶೇಷವಾಗಿ ಗಣಹೋಮ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಗಣೇಶ ಚತುರ್ಥಿಯ ಮಹತ್ವದ ಕುರಿತು ಮಾತನಾಡಿದರು. ತದನಂತರ ಶ್ರೀ ದೇವಿ ಬಯಲಾಟ ಸಮಿತಿ ರಂಗನಪಲ್ಕೆ ತಂಡದಿಂದ ಅಸಹಾಯಕ ಬಡರೋಗಿಗಳ ಸಹಾಯಾರ್ಥ ಹುಲಿಕುಣಿತ ಪ್ರದರ್ಶನ ನಡೆಯಿತು. ಮಧ್ಯಾಹ್ನ ಮಹಾಪೂಜೆ ಮತ್ತು ಸಾಯಂಕಾಲ ರುದ್ರಶಿವ ಮೂಡಬಿದ್ರೆ ತಂಡದಿಂದ ನಾಸಿಕ್ ಬ್ಯಾಂಡ್ ಹಾಗೂ ಸಾಯಂಕಾಲ 4.30 ಗಂಟೆಗೆ ದುರ್ಗಾಪರಮೇಶ್ವರಿ ಜೋಡುರಸ್ತೆ ಇವರಿಂದ ಹುಲಿಕುಣಿತ ನಡೆಯಿತು. ಸಂಜೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕುಕ್ಕುದಕಟ್ಟೆಯವರೆಗೆ ಕರೆದೊಯ್ದು ಹತ್ತಿರದ ನದಿಯಲ್ಲಿ ಜಲಸ್ಥಂಬನಗೊಳಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಅಶ್ವತ್ ಎಸ್.ಎಲ್, ಆದರ್ಶ ಎಂ.ಕೆ. ಅಮೃತ್ ರೈ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಶೆಟ್ಟಿ ಮತ್ತು ಸುನೀಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಂಬಳ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ದಿ. ಸುರೇಶ್ ಪೂಜಾರಿ ಕಾಡಿನತಾರು ಅವರ ಸ್ಮರಣಾರ್ಥ, ಬೈಂದೂರು ತಾಲೂಕು ಕಂಬಳ ಸಮಿತಿ ಸಹಯೋಗದೊಂದಿಗೆ 25ನೇ ವರ್ಷದ ಮಿಯ್ಯಾಣಿ ಕಂಬಳೋತ್ಸವ ಸೆ.24ರ ಬೆಳಿಗ್ಗೆ 10ಗಂಟೆಯಿಂದ, ಮಿಯ್ಯಾಣಿ ಕಾಡಿನತಾರುವಿನಲ್ಲಿ ನಡೆಯಲಿದೆ. ಹಗ್ಗ ಅತೀ ಕಿರಿ, ಹಗ್ಗ ಕಿರಿಯ, ಹಗ್ಗ ಹಿರಿಯ ಹಾಗೂ ಹಲಗೆ ಮುಕ್ತ ವಿಭಾಗಲ್ಲಿ ಸ್ಪರ್ಧೆ ನಡೆಯಲಿದ್ದು ವಿಜೇತ ಕೋಣಗಳಿಗೆ ಹಾಗೂ ಕೋಣ ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಈ ಕಂಬಳೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಸಂತೋಷ್ ಪೂಜಾರಿ ಕಾಡಿನಾರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಬಾಲ ಗೋಪಾಲ ಬಾಲರಾಧೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಬಾಲರಾಧೆ ಬಾಲಗೋಪಾಲರಾಗಿ ವರ್ಣಮಯ ವಸ್ತ್ರಾಲಂಕಾರದೊಂದಿಗೆ ಕೃಷ್ಣ ರಾಧೆಯರ ವಿವಿಧ ಅವತಾರಗಳನ್ನು ಪ್ರದರ್ಶಿಸುವ ಮೂಲಕ ನೆರೆದವರ ಗಮನ ಸೆಳೆದರು. ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರು ಹಾಗೂ ನೃತ್ಯ ಸಂಯೋಜಕರಾದ ಜಗದೀಶ್ ಬನ್ನಂಜೆ ಇವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೈಮಾ ಅವಾರ್ಡ್ಸ್ – ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2022ನೇ ಸಾಲಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಕಾಂತಾರ ಸಿನಿಮಾಗೆ ಹಲವು ವಿಭಾಗದಲ್ಲಿ ಪ್ರಶಸ್ತಿಗಳು ಹರಿದುಬಂದಿದೆ. ಕಾಂತಾರ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ ಹಾಗು ಅತ್ಯುತ್ತಮ ನಟ, ಸಪ್ತಮಿ ಗೌಡ ಅವರಿಗೆ ಅತ್ಯುತ್ತಮ ನಟಿ, ಅಚ್ಚುತ ಕುಮಾರ್ ಅವರಿಗೆ ಖಳನಟ, ಪ್ರಕಾಶ್ ತುಮಿನಾಡು ಅವರಿಗೆ ಅತ್ಯುತ್ತಮ ಹಾಸ್ಯನಟ, ಅಜನೀಶ್ ಬಿ. ಲೋಕನಾಥ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ, ವಿಜಯ ಪ್ರಕಾಶ್ ಅವರಿಗೆ ಅತ್ಯುತ್ತಮ ಗಾಯಕ ಹಾಗೂ ಪ್ರಮೋದ್ ಮರವಂತೆ ಅವರಿಗೆ ಅತ್ಯುತ್ತಮ ಸಾಹಿತಿ, ಮುಕೇಶ್ ಲಕ್ಷ್ಮಣ್ ಅವರಿಗೆ ವಿಶೇಷ ಮೆಚ್ಚುಗೆ ಪ್ರಶಸ್ತಿ ದೊರೆತಿದೆ. 2022ರ ಸೆಪ್ಟೆಂಬರ್ 30ರಂದು ಬಿಡುಗಡೆ ಆದ ಕಾಂತಾರ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ನಟನೆಗೆ ಫಿದಾ ಆಗಿದ್ದರು. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯ ಹೆಚ್ಚು ಗಮನ ಸೆಳೆದಿತ್ತು. ಕರಾವಳಿಯ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ‘ಕಾಂತಾರ’ ಸಿನಿಮಾದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವರದಿ ಸಾಲಿನಲ್ಲಿ 219 ಕೋಟಿ ರೂ. ಗಳಿಗೂ ಮಿಕ್ಕಿ ವ್ಯವಹಾರವನ್ನು ನಡೆಸಿ, 167.96 ಲಕ್ಷ ರೂ. ನಿವ್ಹಳ ಲಾಭ ಗಳಿಸಿದೆ. ಈ ಬಾರಿ ಸೊಸೈಟಿಯ ಸದಸ್ಯರಿಗೆ ಶೇ.17 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ನಾಗರಾಜ್ ಕಾಮಧೇನು ಹೇಳಿದರು. ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ರಜತ ಮಹೋತ್ಸವ ಸಭಾಭವನದಲ್ಲಿ ಭಾನುವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರದಿ ವರ್ಷದಲ್ಲಿ 6308.38 ಲಕ್ಷ ರೂ. ಠೇವಣಿ ಹೊಂದಿದ್ದು, 4833.99 ಲಕ್ಷ ರೂ. ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. 985.55 ಲಕ್ಷ ರೂಪಾಯಿಗಳನ್ನು ವಿವಿಧ ನಿಧಿಗಳಲ್ಲಿ ಸಂಚಯಿಸಲಾಗಿದೆ. ಬ್ಯಾಂಕಿನ ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ತ್ವರಿತ ಸ್ಪಂದನೆ, ಪಾರದರ್ಶಕ ಆಡಳಿತ ವ್ಯವಸ್ಥೆ, ತಂತ್ರಜ್ಞಾನ ಬಳಕೆ, ತಜ್ಞರ ಸಲಹೆಗಳೊಂದಿಗೆ ಸೊಸೈಟಿಯನ್ನು ಗ್ರಾಹಕ ಸ್ನೇಹಿ ಸಂಸ್ಥೆಯನ್ನಾಗಿಸಲು ಆಡಳಿತ ಮಂಡಳಿ ಬದ್ಧತೆಯನ್ನು ಹೊಂದಿದೆ ಎಂದು ನುಡಿದರು. ಸಭೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬಿಜೆಪಿ ಎಮ್ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ ಇನ್ನೋರ್ವ ವ್ಯಕ್ತಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋಡಿಯ ವ್ಯಕ್ತಿಯೋರ್ವರಿಗೆ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ಅವರಿಂದ ಸುಮಾರು ಐದು ಲಕ್ಷ ರೂಪಾಯಿಯನ್ನು ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ ಬಳಿಕ ಹಣವನ್ನೂ ಮರಳಿಸದೆ ವಂಚಿಸಿದ್ದಾರೆಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಡಿ ನಿವಾಸಿ ಸುದಿನ ಎಂಬವರು ಮೀನು ವ್ಯಾಪಾರವನ್ನು ನಡೆಸುತ್ತಿದ್ದರು. 2015 ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿದ್ದು, ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನವಿದ್ದು, ಹಲವು ಮಂತ್ರಿಗಳು, ಸಚಿವರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ಹೇಳಿ ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ಬಳಿಕ ಚೈತ್ರಾ ಕುಂದಾಪುರ ಪದೇ ಪದೇ ಕರೆ ಮಾಡಿ ಸುದಿನ ಅವರಿಂದ 2018 ರಿಂದ 2022ರ ವರೆಗೆ ಸುಮಾರು ರೂಪಾಯಿ ಐದು…
ಕುಂದಾಪ್ರ ಡಾಟ್ ಕಾಂ ಸುದ್ದಿಬೈಂದೂರು: ಕಾರ್ಪೆಂಟರ್ ವೃತ್ತಿಯಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡು ಜನಾನುರಾಗಿಯಾಗಿದ್ದ ತಗ್ಗರ್ಸೆ ಗ್ರಾಮದ ಆಚಾರ್ಕೇರಿ ನಿವಾಸಿ ಗೋವಿಂದ ಆಚಾರ್ಯ (65) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಮಡದಿ, ಐವರು ಪುತ್ರರು, ಓರ್ವ ಪುತ್ರಿ ಕುಟುಂಬಿಕರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
