Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ 2023) ಫಲಿತಾಂಶವು ಬಿಡುಗಡೆಯಾಗಿದ್ದು, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಇ.ಟಿ 2023 ರ ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳ ಪೈಕಿ, ಲತೀಫಾ ರಫಾ 897 ರ್ಯಾಂಕ್‌ನೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. ಅನ್ವಿತ್ ಶೆಟ್ಟಿ 1042 ರ್ಯಾಂಕ್ ಪಡೆಯುವುದರ ಮೂಲಕ ನಮ್ಮ ಸಂಸ್ಥೆಗೂ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ನಮ್ಮ ಸಂಸ್ಥೆಯ ಅನುಶ್ರೀ ಶೆಟ್ಟಿ 1420 ನೇ ರ್ಯಾಂಕ್, ಪುರುಷೋತ್ತಮ್ 1763 ನೇ ರ್ಯಾಂಕ್ , ಶ್ರೀನಿಧಿ ಶೆಟ್ಟಿ 1977 ನೇ ರ್ಯಾಂಕ್, ನಿಹಾಲ್ ಎನ್ ಶೆಟ್ಟಿ 2235 ನೇ ರ್ಯಾಂಕ್ , ಸಿಂಚುಶ್ರೀ ಎನ್ 2284 ನೇ ರ್ಯಾಂಕ್, ಸಂಚಿತಾ ವೈ ಎಮ್. 2499 ನೇ ರ್ಯಾಂಕ್ , ಪ್ರಣೀತಾ 2502 ನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.16: ಪಶ್ಚಿಮ ವಲಯದ 32 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಐಜಿಪಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಕುಂದಾಪುರ ನಗರ ಪೊಲೀಸ್ ಠಾಣೆಗೆ ವಿನಯ್ ಕೊರ್ಲಹಳ್ಳಿ, ಗಂಗೊಳ್ಳಿ ಪೊಲೀಸ್ ಠಾಣೆಗೆ ಹರೀಶ್ ನಾಯ್ಕ್, ಶಂಕರನಾರಾಯಣ ಪೊಲೀಸ್ ಠಾಣೆಗೆ ನಾಸೀರ್ ಹುಸೇನ್, ಕೊಲ್ಲೂರು ಪೊಲೀಸ್ ಠಾಣೆಗೆ ಜಯಶ್ರೀ ಅವರನ್ನು ವರ್ಗಾಯಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ: ತಾಲೂಕಿನ ಬೇಳೂರು ಗ್ರಾಮದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿರುವ ವೇಳೆ ಪತ್ತೆ ಹಚ್ಚಿ ಗೋವುಗಳನ್ನು ರಕ್ಷಿಸಲಾಗಿದೆ. ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಮೂರು ಗೋವುಗಳನ್ನು ರಕ್ಷಿಸಿದ್ದಾರೆ. ಹಸುಗಳನ್ನು ಏಸ್ ಗಾಡಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮಧುವನ ಮಾರ್ಗವಾಗಿ ಸಾಗಿಸುತ್ತಿರುವ ವೇಳೆಯಲ್ಲಿ ಸ್ಥಳೀಯರ ಮಾಹಿತಿಯಂತೆ ಗಸ್ತಿನಲ್ಲಿದ್ದ ಎಎಸ್ಐ ಗಣೇಶ್ ಪೈ ಹಾಗೂ ಸಿಬ್ಬಂದಿಗಳು ವಾಹನವನ್ನು ಬೆನ್ನಟ್ಟಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ವತಿಯಿಂದ ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಇಲ್ಲಿ ಹಮ್ಮಿಕೊಂಡ ರಕ್ತದಾನ ಕ್ಷೇತ್ರದ ಸಾಧಕರಿಗೆ ಸನ್ಮಾನ, ಈ ವೇದಿಕೆಯಲ್ಲಿ ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಸದಸ್ಯರು ಹಾಗೂ ರಕ್ತದಾನಿಗಳಾದ ಅರವಿಂದ ಉಪ್ಪಿನಕುದ್ರು, ಮಹೇಂದ್ರ ಉಪ್ಪಿನಕುದ್ರು, ದಿನೇಶ್ ಕಾಂಚನ್ ಬಾರಿಕೇರೆ, ರೇಷ್ಮಾ ಮಾರ್ಟಿಸ್ ಶಂಕರಪುರ, ಆದರ್ಶ್ ಉಪ್ಪಿನಕುದ್ರು, ಗೌರೀಶ್ ಹಳ್ಳಿಹೊಳೆ ಅವರನ್ನು ಸನ್ಮಾನಿಸಲಾಯಿತು. ಅಭಯಹಸ್ತ ಟ್ರಸ್ಟ್ ಕಳೆದ ಮೂರು ವರ್ಷಗಳಲ್ಲಿ ರಕ್ತದಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಇದುವರೆಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ,ದ.ಕ, ಉ.ಕ,ಬೆಂಗಳೂರು ಹಾಗೂ ವಿದೇಶದಲ್ಲಿ( ದುಬೈ) ದಾಖಲೆಯ 147 ರಕ್ತದಾನ ಶಿಬಿರ ಹಾಗೂ ನಿತ್ಯ ತುರ್ತು ಕರೆಗೆ ರಕ್ತದಾನಿಗಳ ಪೂರೈಕೆ ಒಟ್ಟಾರೆಯಾಗಿ ಇದುವರೆಗೆ ದಾಖಲೆಯ 17000 ಯೂನಿಟ್ ರಕ್ತ ಸಂಗ್ರಹಿಸಿದ (2020 – 21 ಸಾಲಿನಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಂಘಟನೆ) ರಾಜ್ಯದ ಪ್ರತಿಷ್ಠಿತ ಸಂಘಟನೆಯಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯದ ಕರಾವಳಿಯಲ್ಲಿ ಕಾಣಿಸಿಕೊಂಡ ಬಿಪರ್ಜಾಯ್ ಚಂಡಮಾರುತದಿಂದಾಗಿ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿದ್ದು, ಪರಿಣಾಮವಾಗಿ ಫಿಷರೀಸ್ ರಸ್ತೆ ಬಿರುಕು ಕಾಣಿಸಿಕೊಂಡಿದೆ. ಕಳೆದ ಭಾರಿ ಕಡಲಕೊರೆತದಿಂದಾಗಿ ಕಾಂಕ್ರೀಟ್ ಮಾಡಲಾಗಿದ್ದ ಫಿಶರಿಸ್ ರಸ್ತೆ ಸಂಪೂರ್ಣ ಕೊಚ್ಚಿಹೊಗಿದ್ದಲ್ಲದೇ ಸಮುದ್ರ ಬದಿಯ ಮನೆಯ ಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿತ್ತು. ಸ್ವತಃ ಮುಖ್ಯಮಂತ್ರಿ, ಕಂದಾಯ ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಾತ್ಕಾಲಿಕ ಪರಿಹಾರ ಒದಗಿಸಿದ್ದರು. ಈ ಭಾರಿಯ ಕಡಲಕೊರೆತದ ಹೊಡೆತಕ್ಕೆ ರಸ್ತೆ ಮತ್ತೆ ಕೊಚ್ಚಿ ಹೋಗುವ ಸಾಧ್ಯತೆ ಎದುರಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗುರುರಾಜ ಗಂಟಿಹೊಳೆ ಅವರು, ಕಡಲತಡಿಯ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾನು, ಇಲಾಖೆ ಇದೆ. ತುರ್ತು ಸಂದರ್ಭದ ಎಲ್ಲಾ ಅಗತ್ಯ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಭರವಸೆ ನೀಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.16: ಪ್ರಸಕ್ತ ಸಾಲಿನಲ್ಲಿ ಕ.ರಾ.ರ.ಸಾ.ನಿ ರಿಯಾಯಿತಿ ದರದ ವಿದ್ಯಾರ್ಥಿ ಬಸ್ಪಾಸ್ ಸೌಲಭ್ಯ ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸಹ ರೂ.3೦ ಸೇವಾ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದ್ದು, ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ಸ್ ಪಾಸುಗಳನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ https://ksrtc.karnataka.gov.in/studentpass ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ಸಂ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮತ್ಸ್ಯ ಸಂಪತ್ತು ವೃದ್ದಿ ಮತ್ತು ಮೀನುಗಾರರ ಶ್ರೇಯಸ್ಸಿಗಾಗಿ ಗಂಗೊಳ್ಳಿ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದಲ್ಲಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಇವರು ದುರ್ಗಾಹೋಮ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶಂಕರ ಖಾರ್ವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಖಾರ್ವಿ ಲೈಟ್ಹೌಸ್, ಮೋಹನ್ ಖಾರ್ವಿ, ರಾಜೇಶ್ ಸಾರಂಗ, ಸರೋಜಿನಿ, ಜ್ಯೋತಿ ಖಾರ್ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾರ್ಕಳ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಜಾಗೃತಿ ಕೆ ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17 ನೇ ರ‍್ಯಾಂಕ್‌, ಪಶುವೈದ್ಯಕೀಯದಲ್ಲಿ 107ನೇ ರ‍್ಯಾಂಕ್‌, ಬಿ. ಎನ್‌ ವೈ ಎಸ್‌ ನಲ್ಲಿ 53 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್‌ ವಿಭಾಗದಲ್ಲಿ 112 ನೇ ರ‍್ಯಾಂಕ್‌ ಪಡೆದಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಅಭಯ್‌ ಎಸ್‌ ಎಸ್‌ 99 ನೇ ರ‍್ಯಾಂಕ್‌, ಆದಿತ್ಯ ಹೊಳ್ಳ 201 ನೇ ರ‍್ಯಾಂಕ್‌, ಪ್ರಣವ್‌ ಪಿ ಸಂಜಿ 294 ನೇ ರ‍್ಯಾಂಕ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ 492 ನೇ ರ‍್ಯಾಂಕ್‌, ಉದ್ಭವ್‌ ಎಂ ಆರ್‌ 843 ನೇ ರ‍್ಯಾಂಕ್‌, ಸಾತ್ವಿಕ್‌ ಎಸ್‌ ಶೆಟ್ಟಿ 920 ನೇ ರ‍್ಯಾಂಕ್‌…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜೂ.15: ದೇಶವನ್ನ ಆರ್ಥಿಕವಾಗಿ ಮತ್ತು ಎಲ್ಲಾ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟçವನ್ನಾಗಿರುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಇಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು, ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಸಹ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು, ತಮ್ಮ ಅಭಿವೃಧ್ದಿಯ ಜೊತೆಗೆ ದೇಶದ ಅಭಿವೃಧ್ದಿಗೂ ಕೈ ಜೋಡಿಸಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ನೀಟ್ ಪ್ರವೇಶ ಪರೀಕ್ಷೆಯ ಉತ್ತಮ ಸಾಧನೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಮರ್ ಪುರಾಣಿಕ್ 544/720, ಐಶ್ವರ್ಯ ಖಾರ್ವಿ 482/720,ತನಿಷಾ 459/720 ಅಂಕಗಳನ್ನು ಪಡೆದು ಅರ್ಹತೆಯನ್ನು ಪಡೆದಿದ್ದಾರೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ

Read More