Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿರುವ ಹೊತ್ತಿನಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಗಳಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದ್ದರೂ 108 ವರ್ಷದ ವೃದ್ಧೆಯೂರ್ವರು ಸ್ವತಃ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ತಗ್ಗರ್ಸೆಯ ನಿವಾಸಿ ಚಂದು ದೇವಾಡಿಗ ಅವರು ಸ್ವತಃ ತಗ್ಗರ್ಸೆ ಸ.ಹಿ.ಪ್ರಾ ಶಾಲೆಯ ಮತಗಟ್ಟೆಯೊಳಕ್ಕೆ ನಡೆದು ಬಂದು ಅತ್ಯುತ್ಸಾಹದಿಂದಲೇ ಮತ ಚಲಾಯಿಸಿ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿದ್ದರೂ, ಮತಗಟ್ಟೆಗೆ ತೆರಳಿ ಮತದಾನ ಮಾಡುವುದಾಗಿ ಚಂದು ದೇವಾಡಿಗ ಅವರು ಮೊದಲೇ ತಿಳಿಸಿದ್ದರಿಂದ ಮತಗಟ್ಟೆಗೆ ಬರಲು ಅವಕಾಶ ಮಾಡಿಕೊಡಲಾಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಬೆಳಿಗ್ಗೆ ಮತದಾನ ಮಾಡಿದರು. ಅವರು ಮೊಳಹಳ್ಳಿಯ ನಾಲ್ಕನೇ ವಾರ್ಡಿನ ಮತಗಟ್ಟೆ ಕೈಲ್ಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಬೆಳಿಗ್ಗೆ ಮತದಾನ ಮಾಡಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಅಮಾಸೆಬೈಲು ಮಚ್ಚಟ್ಟು ಶಾಲೆಯಲ್ಲಿ ತಮ್ಮ ಪತ್ನಿಯೊಂದಿಗೆ ತೆರಳಿ ಮತ ಚಲಾಯಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡದ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟೂರು ಕೆರಾಡಿಯಲ್ಲಿ ಮತದಾನ ಮಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ 1ನೇ ಬೂತ್‍ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ ಅವರು, ಮತದಾನ ನಮ್ಮೆಲ್ಲರ ಹಕ್ಕುಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‍ನಲ್ಲಿ ಮತ ಚಲಾಯಿಸಿದ  ಅವರು, ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ.. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ ಎಂದು ಕರೆ ನೀಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಕಂಚಿಕಾನ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಂಚಿಕಾನ್‌ ಮತಗಟ್ಟೆಗೆ ತೆರಳಿದ ಅವರು ಸರತಿ‌ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಕನ್ಯಾನ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೇ.10ರಂದು ನಡೆಯಲಿರುವ ಚುನಾವಣೆಗೆ ಸಿದ್ಧರಾಗಿರುವ ಅಧಿಕಾರಿಗಳು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಿ ತಮ್ಮತಮ್ಮ ಕೇಂದ್ರಗಳಿಗೆ ಅಗತ್ಯವಿರುವ ಮತದಾನ ಯಂತ್ರ ಮತ್ತು ಅನ್ಯ ಪರಿಕರಗಳನ್ನು ಸ್ವೀಕರಿಸಿ, ತಮಗೆ ನಿಗದಿಗೊಳಿಸಿದ ವಾಹನಗಳಲ್ಲಿ ತೆರಳಿದರು. ಕುಂದಾಪುರ ಚುನಾವಣಾಧಿಕಾರಿ ರಶ್ಮಿ ಅವರ ನೇತೃತ್ದಲ್ಲಿ ಕುಂದಾಪುರ ಕ್ಷೇತ್ರದ ಮಸ್ಟರಿಂಗ್ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಹಾಲ್ನಲ್ಲಿ ನಡೆದರೆ, ಬೈಂದೂರು ಚುನಾವಣೆ ಜಗದೀಶ ಗಂಗಣ್ಣನವರ್ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ಮಸ್ಟರಿಂಗ್ ಕಾಲೇಜಿನ ಹಾಲ್ನಲ್ಲಿ ನಡೆಯಿತು. ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಯಂತ್ರ ಸಹಿತ ಮತಕೇಂದ್ರಕ್ಕೆ ತೆರಳಿದರು. ಸಿಬ್ಬಂದಿ ಹಾಜರಾತಿ ದಾಖಲಿಸಲು ಮತ್ತು ಪರಿಕರಗಳನ್ನು ವಿತರಿಸಲು ಸೆಕ್ಟರ್ ಅಧಿಕಾರಿಗಳ ನೇತೃತ್ವದ ವಿಭಾಗಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಸಂಬಂಧಿಸಿದ ವಿವರಗಳ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿತ್ತು. ಬೆಳಗ್ಗಿನಿಂದ ಬಂದ ಸಿಬ್ಬಂದಿ ಫಲಾಹಾರ ಪೂರೈಸಿ, ತಮ್ಮ ವಿಭಾಗದಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ಪರಿಕರಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು. 246 ಮತಗಟ್ಟೆಗಳಿಗೆ ನಿಯೋಜಿಸಲಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಚಿತ್ತೂರು ಸರಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 623 ಅಂಕ ಪಡೆದು ರಾಜ್ಯಕ್ಕೇ ತೃತೀಯ ಸ್ಥಾನ ಪಡೆದಿದ್ದಾಳೆ. ಏಳನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿನಿ ಯಾವುದೇ ಟ್ಯೂಷನ್ ತರಬೇತಿ ಇಲ್ಲದೆ ತನ್ನ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ ಗ್ರಾಮೀಣದ ಭಾಗದ ಪ್ರತಿಭೆ. ಬೆಳ್ಳಾಲ ಗ್ರಾಮದ ನಂದ್ರೋ ಳ್ಳಿ ಸುಧಾಕರ ಆಚಾರ್ಯ ಮತ್ತು ಯಶೋಧ ದಂಪತಿಯ ಪುತ್ರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲಾ ಮಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀಲಹರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈಕೆ ಹೆಮ್ಮಾಡಿ ಶ್ರೀಧರ ದೇವಾಡಿಗ ಹಾಗೂ ಲಲಿತಾ ದಂಪತಿಯ ಕಿರಿಯ ಪುತ್ರಿ. ಎಸ್ಸೆಸ್ಎಲ್ಸಿ ಪರೀಕ್ಷೆಯಲ್ಲಿ 620ಕ್ಕೂ ಹೆಚ್ಚಿನ ಅಂಕದ ನಿರೀಕ್ಷೆ ಮಾಡಿದ್ದೆ. ನಿರೀಕ್ಷೆಗಿಂತ ಹೆಚ್ಚಿನ ಅಂಕ ಬಂದಿರುವುದು ಖುಷಿ ತಂದಿದ್ದು, ಇನ್ನೂ ಹೆಚ್ಚಿನ ಸಾಧನಗೆ ಪ್ರೇರಣೆ ನೀಡಿದೆ. ಮುಂದೆ ಪಿಸಿಎಂಬಿ ತೆಗೆದುಕೊಂಡು ವೈದ್ಯಳಾಗಬೇಕು ಎನ್ನುವು ಕನಸಿದೆ. ಡ್ರಾಯಿಂಗ್, ಓದು, ಸಾಹಿತ್ಯ ಡಾನ್ಸ್ ಇತರೆ ಹವ್ಯಾಸಗಳಾಗಿದ್ದು, ಮನೆಯಲ್ಲಿ ಪೋಷಕರ ಪ್ರೋತ್ಸಾಹ, ಶಾಲಾ ಶಿಕ್ಷಕರ ಮಾರ್ಗದರ್ಶನ ಯಶಸ್ಸಿನ ಹಿಂದಿದೆ. ಯಾವುದೇ ಟೂಶನ್ಗೆ ಹೋಗದೆ ಅಂದಿನ ಪಾಠ ಅಂದೇ ಓದುವ ಜೊತೆ ಬೆಳಗ್ಗೆ ಹಾಗೂ ಸಂಜೆ ನಿಯಮಿತ ಓದು ಎಸ್ಸೆಸ್ಎಲ್ಸಿಯಲ್ಲಿ 624 ಅಂಕ ಪಡೆಯಲು ಕಾರಣ ಎಂದು ಶ್ರೀಲಹರಿ ತಿಳಿಸಿದ್ದಾಳೆ. ಮಗಳ ಓದಿಗೆ ಬೆಂಬಲವಾಗಿ ಇದ್ದರೂ ಇಷ್ಟೇ ಅಂಕಪಡೆಯಬೇಕು. ಹೀಗೆ ಓದಬೇಕು ಅಂತ ಮಗಳ ಮೇಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಅಕ್ಷಿತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಹಾಗೂ ತಾಲೂಕು ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿದ್ದಾಳೆ. ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಯವರು ಅಭಿನಂದಿಸಿದ್ದಾರೆ.

Read More