Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ರಿ. ಮತ್ತು ಕನ್ನಡಿಗರು ದುಬಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಅರಬ್ಬರ ನಾಡಿನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬದ ಪೂರ್ವಭಾವಿ ಸಮಾಲೋಚನಾ ಸಭೆ ಮತ್ತು ಪತ್ರಿಕಾಗೊಷ್ಠಿ ಕಾರ್ಯಕ್ರಮ ದುಬಾಯಿನ ಓಮೆಗಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಫ್, ಕನ್ನಡಿಗರು ದುಬಾಯಿ ಮತ್ತು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಅಧ್ಯಕ್ಷರಾದ ಸದನ್ ದಾಸ್ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇದರ ಸಾಂಸ್ಕೃತಿಕ ಮತ್ತು ಕಲೆ ಸಮಿತಿಯ ರಾಜ್ಯಾಧ್ಯಕರು ಆಗಿರುವ ರವಿಸಂತೋಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದ ಮುಂದಿನ ರೂಪುರೇಷೆಗಳು ಮತ್ತು ಕಾರ್ಯಕ್ರಮದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಸದನ್ ದಾಸ್ ಅವರು ವಿವರಿಸಿದರು. ಮುಖ್ಯ ಅತಿಥಿ ರವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೆಳಕಿನ ಹಬ್ಬ ದೀಪಾವಳಿಯ ಅಂಗವಾಗಿ ಬೈಂದೂರಿನ ಪ್ರಸಿದ್ಧ ಮೊಬೈಲ್ ಮಾರಾಟ ಸಂಸ್ಥೆ ಪ್ರೀತಿ ಮೊಬೈಲ್ಸ್‌ನಲ್ಲಿ ಮೊಬೈಲ್ ಪೋನ್ ಖರೀದಿಯ ಮೇಲೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಯಾವುದೇ ಬ್ಯಾಂಡಿನ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಐರನ್ ಬಾಕ್ಸ್, ಬ್ಲೂಟೂತ್, ಸ್ಕ್ರೀನ್ ರಿಪ್ಲೆಸ್’ಮೆಂಟ್, ಸ್ಪಾರ್ಟ್ ವಾಚ್ ಸೇರಿದಂತೆ ವಿವಿಧ ಉಡುಗೊರೆಗೊಳು ದೊರೆಯಲಿದೆ. ಅಲ್ಲದೇ ಪ್ರತೀ ಸ್ಮಾರ್ಟ್ ಫೋನ್ ಫೆಸ್ಟ್ ಮೂಲಕ ಟಿವಿಎಸ್ ಸ್ಕೂಟರ್, ಎಲ್.ಇ.ಡಿ ಟಿವಿ ಸೇರಿದಂತೆ ವಿವಿಧ ಉಡುಗೊರೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಸ್ಮಾರ್ಟ್ ಫೋನ್’ಗಳನ್ನು ಸುಲಭ ಕಂತುಗಳಲ್ಲಿಯೂ ಖರೀದಿಸಬಹುದಾಗಿದ್ದು, ದೀಪಾವಳಿಯ ಸಂದರ್ಭ ಈ ಎಲ್ಲಾ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಪ್ರೀತಿ ಮೊಬೈಲ್ಸ್ ಬೈಂದೂರುಪಂಚಾಯತ್ ಕಟ್ಟಡ, ಪೊಲೀಸ್ ಸ್ಟೇಷನ್ ಎದುರುಗಡೆ ಬೈಂದೂರುಮೊಬೈಲ್ – 8861087889 Advt News

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ, ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ, ಉತ್ಸುಕತೆಯನ್ನು ಮತ್ತು ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮನೋಭಾವವನ್ನು ಮತ್ತು ಜೀವನ ಸಾರ್ಥಕತೆಯ ಸಾರವನ್ನು ‘ಸ್ವಯಂ ಪ್ರೇರಿತ ರಕ್ತದಾನ ನೀಡುತ್ತದೆ ಎಂದು ಶಿಬಿರವನ್ನು ಬೈಂದೂರು ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು. ಮೊಗವೀರ ಯುವ ಸಂಘಟನೆ ರಿ. ಬೈಂದೂರು-ಶಿರೂರು ಘಟಕದ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ, ರಕ್ತನಿಧಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಬೈಂದೂರು, ರಕ್ತನಿಧಿ ಕೇಂದ್ರ ಇವರುಗಳ ಸಹಯೋಗದಲ್ಲಿ ‘ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ’ ಮತ್ತು ‘ಯುವ ರೆಡ್ ಕ್ರಾಸ್ ಘಟಕ’ ಉದ್ಘಾಟಿಸಿ ಮಾತನಾಡಿದರು ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ಅಧ್ಯಕ್ಷರಾದ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ…

Read More

ನಾಗರಾಜ್ ಶೆಟ್ಟಿ ನೈಕಂಬ್ಳಿ, ಸಾಂಸ್ಕೃತಿಕ ಸಂಘಟಕ | ಕುಂದಾಪ್ರ ಡಾಟ್ ಕಾಂಕರಾವಳಿಗರ ಆರಾಧನಾ ಕಲೆ ಯಕ್ಷಗಾನ. ಕರ್ನಾಟಕದ ಗಂಡು ಕಲೆ ಕೂಡ ಹೌದು. ಸುಮಾರು ಒಂದು ಸಾವಿರ ವರ್ಷದಿಂದ ಕಾಲದಿಂದ ಕಾಲಕ್ಕೆ ಹಲವಷ್ಟು ಬದಲಾವಣೆ ಆಗುತ್ತಲೇ ಸಾಗಿ ಬಂದಿದೆ. ಆರಂಭದಲ್ಲಿ ಪೌರಾಣಿಕ ಕಥೆಗಳ ಯಕ್ಷಗಾನ, ದಶಕಗಳು ಉರುಳಿದಂತೆ ಸಾಮಾಜಿಕ ಕಥೆಗಳು, ಆ ನಂತರ ಕಾಲ್ಪನಿಕ ಕಥೆಗಳು ಕೂಡ ರಂಗಸ್ಥಳದಲ್ಲಿ ಪ್ರದರ್ಶನ ಕಂಡವು. ಇವೆಲ್ಲವನ್ನೂ ಕಾಲಘಟ್ಟದ ಬದಲಾವಣೆಗಳಂತೆ ವಿಭಾಗಿಸಬಹುದು. ಆದರೆ ಇತ್ತೀಚಿನ ಯಕ್ಷಗಾನವನ್ನು ಬಹು ಮುಖ್ಯವಾಗಿ ಎರಡು ವಿಭಾಗ ಮಾಡಬಹುದು. ಕರೋನ ಪೂರ್ವ ಯಕ್ಷಗಾನ ಮತ್ತು ಕರೋನೋತ್ತರ ಯಕ್ಷಗಾನ. ಕರೋನ ಬಂದ ನಂತರ ಯಕ್ಷಗಾನದಲ್ಲಿ ಹಲವಷ್ಟು ಬದಲಾವಣೆ ಆಗಿದೆ. ಯಕ್ಷಗಾನವೆಂದರೆ ರಾತ್ರಿಗೆ ಆರಂಭ ಎನ್ನುತ್ತಿದ್ದ ಹರಕೆ ಮೇಳಗಳು ಕೂಡ ಮಧ್ಯಾಹ್ನವೇ ಯಕ್ಷಗಾನ ಶುರು ಮಾಡುವ ಸಂದರ್ಭ ಬಂದಿತ್ತು. ಪ್ರೇಕ್ಷಕರು ಇಲ್ಲದೇ ಆಟ ಮಾಡಲೇಬೇಕಾದ ಅನಿವಾರ್ಯ ಬಂದಾಗ ಫೇಸ್ಬುಕ್ ಮತ್ತು ಯುಟ್ಯೂಬ್ ಲೈವ್ ಮೂಲಕ ಯಕ್ಷಗಾನ ಆಗಿದೆ. ಲೈವ್ ಕೊಟ್ಟು ಆನ್ಲೈನ್ ಪ್ರೇಕ್ಷಕರಿಗೆ ಯಕ್ಷಗಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳವು ಪ್ರಕರಣ ಆರೋಪಿ ಜೈಲಿಗೆ ಕರೆದೊಯ್ಯುವಾಗ ಪೊಲೀಸರಿಂದ ಎಸ್ಕೇಪ್ ಆದ ಘಟನೆ ನಡೆದಿದೆ. ಮೊಬೈಲ್ ಅಂಗಡಿಯಲ್ಲಿ ಕಳವು ಮಾಡಿದ ಮೊಹಮ್ಮದ್ ರಾಹಿಕ್ (22) ಎಂಬಾತನನ್ನು ಕರೆದೊಯ್ಯುವಾಗ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿಯನ್ನು ಕುಂದಾಪುರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದರಿಂದ ಹಿರಿಯಡ್ಕ ಸಬ್ ಜೈಲಿಗೆ ಕರೆದೊಯ್ಯುವಾಗ ಜೈಲ್ ಸಮೀಪವೇ ಆರೋಪಿ ತಪ್ಪಿಸಿಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಬೀಜಾಡಿ ಸಮೀಪದಲ್ಲಿ ಮೊಬೈಲ್ ಅಂಗಡಿ ಕಳವು ಪ್ರಕರದಲ್ಲಿ ರಾಹೀಕ್ ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದರು. ತಪ್ಪಿಸಿಕೊಂಡ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದ ಕರ್ಣಾಟಕ ಬ್ಯಾಂಕ್ ಎಂ.ಡಿ. ಮಹಾಬಲೇಶ್ವರ ಭಟ್ ಎಂ.ಎಸ್ ಅವರು ಆಯ್ಕೆಯಾಗಿದ್ದಾರೆ. ಕೋಟದ ಪಂಚವರ್ಣ ಯುವಕ ಮಂಡಲ ರಜತಮಹೋತ್ಸವ ಸಂಭ್ರಮಾಚರಣೆಯ ಹಿನ್ನಲ್ಲೆಯಲ್ಲಿ ಕೋಟದ ಅಮೃತೇಶ್ವರಿ ದೇವಳದ ಸಮೀಪ ವರುಣತೀರ್ಥ ಕೆರೆ ಸನಿಹದಲ್ಲಿ ನ.15 ಹಾಗೂ 16 ರಂದು ಆಯೋಜಿಸಲಾಗುವ ಕನ್ನಡರಾಜ್ಯೋತ್ಸವ ಕಾರ್ಯಕ್ರಮ ಸದ್ಭಾವನಾ 2022 ಶೀರ್ಷಿಕೆಯಡಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯೊಂದಿಗೆ ಬೆಳ್ಳಿಯ ಶಾಶ್ವತ ಫಲಕ ನೀಡಿ ಗೌರವಿಸಲಾಗುತ್ತದೆ. ಪಂಚವರ್ಣ ವಿಶೇಷ ಪುರಸ್ಕಾರವನ್ನು ಸಮೃದ್ಧಿ ಮಹಿಳಾ ಮಂಡಲ ಚೇರ್ಕಾಡಿ ಬ್ರಹ್ಮಾವರ, ವಿಶೇಷ ಅಭಿನಂದನೆಯನ್ನು ಮಂಗಳೂರಿನ ಸೇವ್ ಲೈಫ್ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಅರ್ಜುನ್ ಭಂಡಾರ್ಕರ್, ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ, ಪ್ರತಿಭಾ ಪುರಸ್ಕಾರವನ್ನು ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತ ಸಮೃದ್ಧಿ ಕುಂದಾಪುರ ನೀಡಿ ಗೌರವಿಸಲಾಗುತ್ತದೆ. ಎರಡು ದಿನಗಳ ಕಾಲ ಹಮ್ಮಿಕೊಳ್ಳುವ ರಜತ ಸಂಭ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ, ಅನಾರೋಗ್ಯ ಪಿಡಿತರಿಗೆ, ಅಶಕ್ತರಿಗೆ ಸಹಾಯ, ವಿದ್ಯಾರ್ಥಿ ವೇತನ,…

Read More

ಕುಂದಾಪುರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು 76ನೇ ತಿಂಗಳ ಕಾರ್ಯಕ್ರಮ ಜರುಗಿತು. ಗೊಂಬೆಯಾಟ ಅಕಾಡೆಮಿಗೆ ಜನರೇಟರ್ ಕೊಡುಗೆಯಾಗಿ ನೀಡಿದ ಉಡುಪಿ ವೆಂಟನಾ ಫೌಂಡೇಶನ್ ಟ್ರಸ್ಟೀ ಶಿಲ್ಪಾ ಭಟ್ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ತಮ್ಮ ಫೌಂಡೇಶನ್ ನಿಂದ ಕಲೆ ಮತ್ತು ಸಂಸ್ಕೃತಿಯ ವಿಭಾಗದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಪ್ರಥಮ ಕೊಡುಗೆಯಾಗಿ ಜನರೇಟರ್ ನೀಡಿದ್ದೇವೆ. ಮುಂದೆ ಈ ಸಂಸ್ಥೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಅಂತ ಶುಭ ಹಾರೈಸಿದರು. ವಸಂತಿ ಆರ್. ಪಂಡಿತ್ ಹಾಗೂ ತಂಡದವರ ವಿಷ್ಣು ಸಹಸ್ರನಾಮದಿಂದ ಪ್ರಾರಂಭವಾಯಿತು. ವೇದಿಕೆಯಲ್ಲಿ ಕುಂದಪ್ರಭ ವಾರ ಪತ್ರಿಕೆಯ ಸಂಪಾದಕರಾದ ಯು.ಎಸ್. ಶೆಣೈ, ರೂಪಾ ಪ್ರಭು, ವೆಂಟನಾ ಫೌಂಡೇಶನ್ ಸದಸ್ಯರಾದ ರವೀಂದ್ರ ರಾವ್, ಶೈಲಜಾ ರಾವ್, ರಮೇಶ್ ಭಟ್, ಗಾಯಕಿ ಜಯಮಾಲಾ ಶೆಣೈ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ತಮ್ಮ ಸಂಸ್ಥೆಗೆ ಬೆಳಕು ನೀಡಿದ ವೆಂಟನಾ ಫೌಂಡೇಶನ್, ಉಡುಪಿ ಇವರಿಗೆ…

Read More

ಕುಂದಾಪುರ ಡಾಟ್ ಕಾಂ ಸುದ್ದಿ.ಉಡುಪಿ,ಅ.19: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.1ರಂದು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ, ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನ.1 ರಂದು ಉಡುಪಿ ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನಡೆಸಿ, ಸಂದೇಶ ನೀಡಲಿದ್ದಾರೆ. ಸಮಾರಂಭದಲ್ಲಿ ಪೊಲೀಸ್, ಅಬಕಾರಿ, ಅರಣ್ಯ, ಗೃಹರಕ್ಷಕ, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಾಯತು ನಡೆಯಲಿದ್ದು, ನಂತರದಲ್ಲಿ ಶಾಲಾ ವಿದ್ಯಾಥಿಗಳಿಂದ ಗುಂಪು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ಆಯ್ಕೆಯಾದ ಗಣ್ಯರಿಗೆ ಸನ್ಮಾನ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಜನಪ್ರನಿಧಿಗಳು, ಗಣ್ಯರು ಸೇರಿದಂತೆ ಶಿಷ್ಠಾಚಾರದಂತೆ ಎಲ್ಲರನ್ನೂ ಆಹ್ವಾನಿಸಬೇಕು. ಸಾರ್ವಜನಿಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಜ್ಯದ ಕರಾವಳಿಯ ಜಿಲ್ಲೆಗಳ ಮೀನುಗಾರಿಕೆಗೆ ಕೇಂದ್ರದಿಂದ ಸೀಮೆಎಣ್ಣೆಯನ್ನು ಕೂಡಲೆ ರಾಜ್ಯಕ್ಕೆ ಬಿಡುಗಡೆ ಮಾಡಲು ಕ್ರಮವಹಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು, ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇಲಾಖೆಯ ಜಂಟಿ ಕಾರ್ಯದರ್ಶಿ ನವನೀತ್ ಕೊಠಾರಿ, ಭಾ ಆ ಸೇ, ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ 2472 KL ಮಂಜೂರಾತಿ ಮಾಡಿದ್ದು ಬಾಕಿ ಉಳಿದಿರುವ 21618 KL ಸೀಮೆಎಣ್ಣೆಯನ್ನು ಸಹ ಕೂಡಲೇ ಬಿಡುಗಡೆ ಮಾಡುವಂತೆ ಸಂಸದರು ಕೋರಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ, ಜಂಟಿ ಕಾರ್ಯದರ್ಶಿಗಳು ಒಂದು ವಾರದ ಒಳಗಾಗಿ ಮಂಜೂರಾತಿ ಆದೇಶವನ್ನು ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

Read More