ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಕರ್ನಾಟಕದ ಯುವಜನರಿಗೆ ಉದ್ಯೋಗ ಮತ್ತು ವೃತ್ತಿ ಅವಕಾಶಗಳನ್ನು ಅವರದೇ ಪ್ರದೇಶದಲ್ಲಿ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ Jobs Express 2026 – ಜಾಬ್ ಮೇಳ, ತಾಲೂಕಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಐಎಂಜೆ ಇನ್ಸ್ಟಿಟ್ಯೂಷನ್ಸ್, ಕುಂದಾಪುರ ಹಾಗೂ 1M1B (A Million for a Billion) Foundation ವತಿಯಿಂದ, ಕರ್ನಾಟಕ ಸರ್ಕಾರ, ಮೈಕ್ರೋಸಾಫ್ಟ್ ಹಾಗೂ MeitY ಸಹಭಾಗಿತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಕರಾವಳಿ ಕರ್ನಾಟಕದ ವಿದ್ಯಾರ್ಥಿಗಳು, ಪದವೀಧರರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕೈಗಾರಿಕೆಗಳ ಪ್ರಮುಖ ಕಂಪನಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಮಹತ್ವದ ವೇದಿಕೆಯಾಯಿತು. ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ:Jobs Express 2026ಕ್ಕೆ ಒಟ್ಟು 1,526 ಮಂದಿ ನೋಂದಣಿ ಮಾಡಿಕೊಂಡಿದ್ದು, 1000ಕ್ಕೂ ಮಂದಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸಕ್ರಿಯವಾಗಿ ಭಾಗವಹಿಸಿದರು. ಭಾಗವಹಿಸಿದ ಅಭ್ಯರ್ಥಿಗಳು ವಿವಿಧ ಕಂಪನಿಗಳ ಉದ್ಯೋಗಾವಕಾಶಗಳಿಗೆ ಒಟ್ಟು 2,728 ಅರ್ಜಿಗಳನ್ನು ಸಲ್ಲಿಸಿದರು. ವಿವಿಧ ಹುದ್ದೆಗಳು ಮತ್ತು ಕಂಪನಿಗಳ ನೇಮಕಾತಿ ಪ್ರಕ್ರಿಯೆಯ ಆಧಾರದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮುವುದರ ಮೂಲಕ ವೆರಿ ರೇ. ಫಾದರ್ ಪ್ರತ್ರವೋ ರೋಲಿಂಗ್ ಟ್ರೋಫಿ ಮತ್ತು ಶಾಶ್ವತ ಫಲಕವನ್ನು 18ನೇ ಬಾರಿಗೆ ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡವು ಸೆಮಿಫೈನಲ್ನಲ್ಲಿ ಮಂಗಳೂರು ವಿ.ವಿ ಕ್ಯಾಂಪಸ್, ಕೊಣಾಜೆ ತಂಡವನ್ನು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ತಂಡವು ವಿವೇಕಾನಂದ ಕಾಲೇಜು, ಪುತ್ತೂರು ತಂಡವನ್ನು ಸೋಲಿಸಿ ಫೈನಲ್ಗೆ ತೇರ್ಗಡೆ ಹೊಂದಿದ್ದವು. ಫೈನಲ್ನ್ನು ಆಳ್ವಾಸ್ ಕಾಲೇಜು ತಂಡವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ತಂಡವನ್ನು ಪರಾಭವಗೊಳಿಸಿ ಶಾಶ್ವತ ಫಲಕ ಮತ್ತು ಪಾರಿತೋಷಕವನ್ನು ಪಡೆದುಕೊಂಡಿತು. ಆಳ್ವಾಸ್ ತಂಡದ ಅನ್ನಪೂರ್ಣ ಉತ್ತಮ ಹಿಡಿತಗಾರ್ತಿ ಮತ್ತು ಭಾರತಿ ದೇವಾಡಿಗ ಉತ್ತಮ ದಾಳಿಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜನಪದರು ತಮ್ಮ ನಿತ್ಯದ ಅನುಭವ, ಸನ್ನಿವೇಶಕ್ಕೆ ತಕ್ಕಂತೆ ಗಾದೆಗಳನ್ನು ರಚಿಸಿದರು. ಜೀವನದ ದರ್ಶನಗಳಾದ ಗಾದೆಗಳಲ್ಲಿ ಬದುಕಿನ ಮರ್ಮ ಇದೆ. ಅವುಗಳನ್ನು ಅರಿತು ಬಾಳುವ ಮೂಲಕ ಕಲಿತ ವಿದ್ಯೆ ಅಂಕಕಷ್ಟೇ ಸೀಮಿತವಾಗದೆ, ಸಂಸ್ಕಾರದ ಬದುಕಿಗಾಗಬೇಕು ಎಂದು ನೇತಾಜಿ ಹಿರಿಯ ಪ್ರಾಥಮಿಕ ಶಾಲೆ, ಕಂಡ್ಲೂರಿನ ನಿವೃತ್ತ ಮುಖ್ಯ ಶಿಕ್ಷಕ ಎ. ಜಯಕರ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಕನ್ನಡ ಗಾದೆಗಳ ಬಗೆಗಿನ ಸಂವಾದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಕುಂದಗನ್ನಡ ಸಂಘದ ಸಂಯೋಜಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಕುಂದಗನ್ನಡ ಸಂಘದ ಸಂಯೋಜಕಿ ರಶ್ಮಿತಾ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಸನಾತನ ಪರಂಪರೆ ಹಾಗೂ ಹಿಂದೂ ಸಂಸ್ಕೃತಿಯ ಜೀವನಮೌಲ್ಯಗಳು ಜಗತ್ತಿನಾದ್ಯಂತ ಅದೆಷ್ಟೋ ಜನರನ್ನು ಆಕರ್ಷಿಸುತ್ತಿವೆ. ಇದಕ್ಕೆ ಮತ್ತೊಂದು ಜೀವಂತ ನಿದರ್ಶನವಾಗಿ ಕಂಡುಬಂದಿದ್ದಾರೆ ವಿದೇಶಿ ಮಹಿಳೆ ‘ಗೌರಿʼ. ಮೂಲತಃ ಸ್ವೀಡನ್ ದೇಶದವರಾಗಿದ್ದು, ಪ್ರಸ್ತುತ ಸ್ಪೇನ್ನಲ್ಲಿ ನೆಲೆಸಿರುವ ಇವರು, ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನು ಹುಡುಕಿಕೊಂಡು ಕುಂದಾಪುರಕ್ಕೆ ಬಂದಿರುವುದು ವಿಶೇಷ. ಹಲವು ವರ್ಷಗಳಿಂದ ಹಿಂದೂ ಧರ್ಮ ಮತ್ತು ಪರಂಪರೆಗೆ ಮಾರುಹೋಗಿರುವ ಗೌರಿ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪ್ರಕೃತಿ ಪ್ರೇಮ, ಗೋಸಂರಕ್ಷಣೆ ಹಾಗೂ ಯೋಗ-ಧ್ಯಾನಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ತಮಗೆ ಬಿಡುವು ಸಿಕ್ಕಾಗಲೆಲ್ಲ ಭಾರತಕ್ಕೆ ಆಗಮಿಸುವ ಇವರು, ಕುಂದಾಪುರ ತಾಲೂಕಿನ ಆಲೂರಿನ ‘ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ’ಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಇಲ್ಲಿನ ಹಸಿರು ಪರಿಸರದಲ್ಲಿ ಯೋಗ, ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ, ಗೋಶಾಲೆಯಲ್ಲಿ ಗೋವುಗಳೊಂದಿಗೆ ಕಾಲ ಕಳೆಯುವುದು ಇವರ ನೆಚ್ಚಿನ ದಿನಚರಿ. ಹಿಂದೂ ಧರ್ಮದ ಮೇಲಿನ ಅಪಾರ ಭಕ್ತಿಯಿಂದಾಗಿ ಇವರು ತಮ್ಮ ಮೂಲ ಹೆಸರನ್ನು ‘ಗೌರಿ’ ಎಂದು ಬದಲಿಸಿಕೊಂಡಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು ವತಿಯಿಂದ ‘Wednesday Learning Series’ ಅಂಗವಾಗಿ ‘ವಾಕ್ – ಸ್ಟೆಪ್ ಬೈ ಸ್ಟೆಪ್ ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮವು ಬುಧವಾರ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ, ಜೀವನದಲ್ಲಿ ಗುರಿ ಸಾಧಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಮುನ್ನಡೆಯುವಿಕೆ, ನಿರಂತರ ಪ್ರಯತ್ನ ಹಾಗೂ ಸಕಾರಾತ್ಮಕ ಮನೋಭಾವದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಸ್ತುಗಳು ಮತ್ತು ಸನ್ನಿವೇಶಗಳನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ಒಳ್ಳೆಯದನ್ನು ಕಂಡುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿಯೊಂದು ಹೆಜ್ಜೆಯೂ ವ್ಯಕ್ತಿಯ ಬೆಳವಣಿಗೆ ಹಾಗೂ ಯಶಸ್ಸಿನತ್ತ ಕೊಂಡೊಯ್ಯುವ ರೀತಿಯನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಹೊಂದಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಪ್ರೇರೇಪಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾರದೋತ್ಸವ ಕಾರ್ಯಕ್ರಮಗಳು ಗ್ರಾಮದ ಒಗ್ಗಟ್ಟಿನ ಪ್ರತೀಕವಾಗಿದೆ. ಸಾಂಸ್ಕೃತಿಕ ಸಂಭ್ರಮದ ನಡುವೆ ಸಾಮಾಕಜಿಕ ಬದ್ಧತೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಿದೆ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಹೇಳಿದರು. ಅವರು ಮಂಗಳವಾರ ಪಾಂಡೇಶ್ವರ ಶಾಲಾ ಸಭಾಂಗಣದಲ್ಲಿ 33ನೇ ವರ್ಷದ ಪಾಂಡೇಶ್ವರ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಧಾರ್ಮಿಕತೆಯ ಮೂಲಕ ಸಮಾಜ ಒಳಿತು ಕಾಣಲಿ ಎಂದು ಹಾರೈಸಿದರು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ, ಉಪಾಧ್ಯಕ್ಷೆ ಲೀಲಾವತಿ ಗಂಗಾಧರ್, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಮಿತಿಯ ಹಿರಿಯರಾದ ಕೆ.ವಿ ರಮೇಶ್ ರಾವ್, ಗಂಗಾಧರ ಆಚಾರ್, ನಾರಾಯಣ ಆಚಾರ್, ದೇವದಾಸ್ ಸಾಲಿಯಾನ್, ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ, ಉಷಾ ಗಣೇಶ್, ಜ್ಯೋತಿ, ಆಶಾ, ರವಿ.ಪಿ.ಜಿ, ಮೋಹನ್ ಪಾಂಡೇಶ್ವರ, ರವಿಕಿರಣ್, ಬ್ರಿಜೇಶ್, ವಿಘ್ನೇಶ್ವರ ಆಚಾರ್, ವಿಜೇತ ಆಚಾರ್, ವಿಜಯ ಆಚಾರ್, ಪ್ರಮೋದ್ ಪೂಜಾರಿ, ರಘುರಾಮ ಪೂಜಾರಿ, ಅಭಿಜಿತ್ ಪಾಂಡೇಶ್ವರ, ವೆಂಕಟೇಶ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ನಾವುಂದದ ಬಡಾಕೆರೆ ಕ್ರಾಸ್ ಬಳಿ ರಾ.ಹೆ. 66ರಲ್ಲಿ ಎರಡು ಕಾರುಗಳ ನಡುವಿನ ಅಪಘಾತದಲ್ಲಿ, ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಶಿರೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿಯಾದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿವೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಬಡಾಕೆರೆ ಕಡೆಯಿಂದ ಬರುವ ವಾಹನಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದು ನಿಲ್ಲುವ ಪರಿಸ್ಥಿತಿ ಇರುವುದರಿಂದ, ಇಲ್ಲಿ ಸೂಕ್ತ ಸರ್ವಿಸ್ ರಸ್ತೆ, ತಿರುವು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಿದ್ದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನವರು ನೀಡಿದ ಮೂರು ಕಂಪ್ಯೂಟರ್ ಹಾಗೂ ಒಂದು ಪ್ರಿಂಟರ್ ಹಸ್ತಾಂತರಿಸಲಾಯಿತು. ಮಂಗಳೂರು ವಲಯದ ಸಿ.ಎಸ್.ಆರ್ ಯೋಜನೆಯ ಮುಖ್ಯಸ್ಥರಾದ ಪ್ರಸಾದ್ ಕುಮಾರ್ ಅವರು ಮುಖ್ಯ ಶಿಕ್ಷಕರಾದ ಸೋಮ ನಾಯಕ್ ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಶಾಲೆಯ ಉತ್ತರೋತ್ತರ ಪ್ರಗತಿಯನ್ನು ಕೊಂಡಾಡಿದರು. ಈ ಎಲ್ಲಾ ಪ್ರಗತಿಗೆ ಕಾರಣೀಕರ್ತರಾದ ವಾರ್ಷಿಕೋತ್ಸವ ಸಮಿತಿ ಮತ್ತು ಎಸ್ಡಿಎಂಸಿಯನ್ನು ಅಭಿನಂದಿಸಿದರು. ಕಾರ್ಯಕ್ರಮವನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಅವರು ಸಿಎಸ್ಆರ್ ಸಹಾಯಧನವನ್ನು ಶಾಲೆಗೆ ತಂದ ಬಗೆಯನ್ನು ವಿವರಿಸಿದರು. ನೆಲ್ಸನ್ ಡಿಸೋಜ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಉಡುಪಿ ಕ್ಲಸ್ಟರ್ನ ಮುಖ್ಯಸ್ಥರನ್ನು ಸಂಪಿಗೆಡಿ ಸಂಜೀವ್ ಶೆಟ್ಟಿ ಅವರು ಗೌರವಿಸಿದರು. ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್ನ ಪ್ರವೀಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಧುನಿಕ ನಗರಾಭಿವೃದ್ಧಿಯೊಂದಿಗೆ ಪ್ರಕೃತಿ ಸಂರಕ್ಷಣೆ, ಐತಿಹಾಸಿಕ ಪರಂಪರೆ, ಸಾರ್ವಜನಿಕ ಸಾರಿಗೆ, ಸ್ವಚ್ಛತೆ ಹಾಗೂ ದೇಶೀಯ ಉತ್ಪಾದನೆಗೆ ಸಮಾನ ಆದ್ಯತೆ ನೀಡಿರುವ ರಷ್ಯಾದ ಅಭಿವೃದ್ಧಿ ದೃಷ್ಟಿಕೋನವು ವಿಶಿಷ್ಟ ಅನುಭವ ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಅವರು ಆಳ್ವಾಸ್ನ ರೋಸ್ಟ್ರಮ್ ಸ್ಪೀಕರ್ಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿನ ರಷ್ಯಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡ ಅವರು, ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಎತ್ತರದ ಕಟ್ಟಡಗಳು ಮತ್ತು ಹೊಸ ಮೂಲಸೌಕರ್ಯಗಳಿಂದ ಅಳೆಯಲಾಗದು. ಪ್ರಕೃತಿಯೊಂದಿಗೆ ಬದುಕುವ ವಿಧಾನ, ಪರಂಪರೆಯನ್ನು ಉಳಿಸಿಕೊಳ್ಳುವ ಮನೋಭಾವ, ಸ್ಥಳೀಯ ಉತ್ಪಾದನೆಯ ಮೇಲಿನ ನಂಬಿಕೆ ಮತ್ತು ಸಾರ್ವಜನಿಕ ಬದುಕಿನ ಶಿಸ್ತು ಕೂಡ ಅಭಿವೃದ್ಧಿಯ ಮಾನದಂಡಗಳಾಗಬೇಕು ಎಂದರು. ನಗರಾಭಿವೃದ್ಧಿಯೊಂದಿಗೆ ಪ್ರಕೃತಿಯ ಸಹಬಾಳ್ವೆ:ರಷ್ಯಾದ ನಗರ ಯೋಜನೆಯಲ್ಲಿ ಪ್ರಕೃತಿಗೆ ನೀಡಿರುವ ಸ್ಥಾನ ತಮ್ಮ ಗಮನಸೆಳೆಯಿತು ಎಂದರು. ವೇಗವಾಗಿ ಬೆಳೆಯುತ್ತಿರುವ ನಗರಗಳ ನಡುವೆಯೂ ವಿಶಾಲ ಹಸಿರು ಪ್ರದೇಶಗಳು, ಉದ್ಯಾನಗಳು, ವಾಕಿಂಗ್ ಪಥಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ರೂಪಿಸಿರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸುದೀರ್ಘ ಸೇವೆ ಸಲ್ಲಿಸಿ ತನ್ನ ಆಡಳಿತ ಅವಧಿಯಲ್ಲಿ ಕಾಲೇಜಿನ ದಾಖಲಾತಿ ಹಾಗೂ ಫಲಿತಾಂಶದಲ್ಲಿ ಗಣನೀಯ ಬದಲಾವಣೆ ತರಲು ಶ್ರಮಿಸಿದ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ. ಅವರು ಸೇವಾ ನಿವೃತ್ತಿಯ ಹೊಸ್ತಿಲಲ್ಲಿ ಅವರನ್ನು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು. ಅವರು ಮೂಲತಃ ಸಾಗರ ತಾಲೂಕಿನ ಬಿಳಿಯೂರಿನವರು. ಇದೇ ಸಂಸ್ಥೆಯಲ್ಲಿ 13 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು 5 ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡು ಕಾಲೇಜಿನ ಶೈಕ್ಷಣಿಕ ಏಳಿಗೆಗೆ ದುಡಿದಿರುತ್ತಾರೆ. ಅವರನ್ನು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ಅವರ ಆತ್ಮೀಯರು, ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಶೇಖರ್ ಮಣೂರು, ಶಿವಾನಂದ ನಾಯಕ, ಗಣಪತಿ ಬಿ.ಆರ್. ಪ್ರಾಂಶುಪಾಲರುಗಳಾದ ವಿಶ್ವನಾಥ್ ಕರಬ, ಗಣಪತಿ ಅವಭೃತ, ನಿವೃತ್ತ ಪ್ರಾಂಶುಪಾಲ ರಾಜೀವ ನಾಯ್ಕ್ ಉಪಸ್ಥಿತರಿದ್ದರು.
