ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಿವಿಧ ಸಾಮ್ರಾಜ್ಯಗಳ ಸ್ಥಾಪನೆಯಲ್ಲೂ ಸುಶಾಸನ ನಲೆಸುವಂತೆ ಮಾಡುವಲ್ಲಿಯೂ ಸಾವಿರಾರು ವರ್ಷಗಳಿಂದ ಆಳುವ ಪ್ರಭುಗಳಿಗೆ ಸಲಹೆ ನೀಡುತ್ತಾ ಸ್ಪೂರ್ತಿಯ ಸೆಲೆಯಾಗಿ ಲೋಕ ಹಿತಕ್ಕಾಗಿ ಶ್ರಮಿಸುತ್ತಾ ಬಂದಿದೆ ವಿಪ್ರ ಸಮಾಜ. ಬದಲಾದ ಇಂದಿನ ಕಾಲ ಘಟ್ಟದಲ್ಲಿ ಸನಾತನ ಧರ್ಮ ಹಲವು ವಿಧದ ದಾಳಿ ಎದುರಿಸುತ್ತಿದೆ. ಸದಾಚಾರ, ಸಂಪನ್ನರಾಗಿ ಸಂಸ್ಕಾರ ಯುತ ಬದುಕನ್ನ ಅನುಸರಿಸುವ ಮೂಲಕ ದೇಶ, ಸಮಾಜ ಮತ್ತು ಧರ್ಮ ರಕ್ಷಣೆಗೆ ನಮ್ಮ ಕೊಡುಗೆ ನೀಡಬೇಕು ಎಂದು ಲೇಖಕ, ನಿವೃತ್ತ ಸೈನಿಕ ಬೈಂದೂರು ಚಂದ್ರಶೇಖರ ನಾವುಡ ಹೇಳಿದರು. ಅವರು ಉಪ್ಪುಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ೨೭ನೇ ವಾರ್ಷಿಕ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ಆನಂತಪದ್ಮನಾಭ ಬಾಯರಿ ಜ್ಯೋತಿ ಬೆಳಗಿಸಿ ಅಧಿವೇಶನ ಉದ್ಘಾಟಿಸಿ ಮಾತನಾಡುತ್ತಾ ನೂತನವಾಗಿ ರಚನೆಯಾಗಿರುವ ಕರ್ನಾಟಕ ಸರಕಾರದ ಬ್ರಾಹ್ಮಣ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾಡಿ ಮೈದಾನದಲ್ಲಿ ಜರುಗಿದ ದೇವಲ್ಕುಂದ ಪ್ರೀಮಿಯರ್ ಲೀಗ್-2022 ರ ಸೂಪರ್ ಸಿಕ್ಸ್ ಪಂದ್ಯಾಟದಲ್ಲಿ ದುರ್ಗಾ ವಾರಿಯರ್ಸ್ ಬಾಳಿಕೆರೆ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡು ದಿನಗಳ ಕಾಲ ಜಾಡಿಯ ಮೈದಾನದಲ್ಲಿ ಬಗ್ವಾಡಿ, ದೇವಲ್ಕುಂದ, ಬಾಳಿಕೆರೆ ಆಟಗಾರರಾಗಿ ನಡೆದ ಡಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾಟದಲ್ಲಿ ಜಯಂತ್ ಕುಂದರ್ ಹಾಗೂ ಪ್ರಥ್ವಿರಾಜ್ ಶೆಟ್ಟಿ ಮಾಲೀಕತ್ವದ ದುರ್ಗಾ ವಾರಿಯರ್ಸ್ ತಂಡವು ಸೋನು ಶೆಟ್ಟಿ ಮಾಲೀಕತ್ವದ ಎಮ್.ಸಿ.ಸಿ ತಂಡದ ವಿರುದ್ದ ಗೆಲುವು ಸಾಧಿಸಿ ಮಹಾವಿಷ್ಣು ಟ್ರೋಫಿ-2022 ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಚಾಂಪಿಯನ್ ಆಗಿ ಹೊರಹೊಮ್ಮಿದ ದುರ್ಗಾ ವಾರಿಯರ್ಸ್ ತಂಡಕ್ಕೆ ಒಂದು ಲಕ್ಷ ನಗದು ಹಾಗೂ ಶಾಶ್ವತ ಫಲಕ ಮತ್ತು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡ ಎಮ್ ಸಿ ಸಿ ತಂಡಕ್ಕೆ ಅರವತ್ತು ಸಾವಿರ ನಗದು ಹಾಗೂ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಯಿತು. ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದುರ್ಗಾ ವಾರಿಯರ್ಸ್ ನ ರೋಶನ್ ಪೂಜಾರಿ, ಉತ್ತಮ ದಾಂಡಿಗ ಬಗ್ವಾಡಿ ಸೂಪರ್ಕಿಂಗ್ಸ್ ನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಭಿವೃದ್ಧಿ ಕಾರ್ಯಗಳು ಮತ್ತು ಮಾಹಿತಿ ಕಾರ್ಯಕ್ರಮಗಳು ಜನರಿಗೆ ತಲುಪಿದಾಗ ಮಾತ್ರ ಪಂಚಾಯತ್ ಇನ್ನಷ್ಟು ಬೆಳವಣಿಗೆ ಕಾಣಲು ಸಾಧ್ಯವಿದೆ. ಮಾನವ ಅಭಿವೃದ್ಧಿಯಾದರೇ ಮಾತ್ರ ಎಲ್ಲವೂ ಅಭಿವೃದ್ಧಿಯಾದಂತೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ಉದ್ಯೋಗ ಖಾತ್ರಿ ಮೂಲಕ ಇಂದು ಗ್ರಾಮಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ. ಮಕ್ಕಳ ಬೇಡಿಕೆಗಳನ್ನು ಆದಷ್ಟು ಈಡೇರಿಸಲಾಗಿದೆ. ನಮ್ಮ ವ್ಯಾಪ್ತಿ ಬಿಟ್ಟು ಸರಕಾರದ ಗಮನಕ್ಕೆ ಹೋಗಬೇಕಾದ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಅನುದಾನ ತಂದು ಕೆಲಸಗಳನ್ನು ಮಾಡಲು ಪಂಚಾಯತ್ ಬದ್ಧವಾಗಿದೆ ಎಂದು ಗೋಪಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಹೇಳಿದರು. ಗೋಪಾಡಿ ಗ್ರಾಮ ಪಂಚಾಯತ್ನ ನೇತೃತ್ವದಲ್ಲಿ ಸುವರ್ಣಸೌಧ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು 3380 ಜನಸಂಖ್ಯೆ ಇರುವ ಪುಟ್ಟ ಗ್ರಾಮ ಪಂಚಾಯತ್ ಈ ಗೋಪಾಡಿ ಗ್ರಾಮ ಪಂಚಾಯತ್. ಜನಸಂಖ್ಯೆಗೆ ಅನುಗುಣವಾಗಿ ಸರಕಾರದ ಅನುದಾನಗಳು ಪಂಚಾಯತ್ಗಳಿಗೆ ಬರಲಿದೆ. ಕಳೆದ 2 ವರ್ಷಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಮರವಂತೆಯಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರದ ಸಹಕಾರದೊಂದಿಗೆ ರಾಜ್ಯ ಮಟ್ಟದ ಜಲಜಾನಪದೋತ್ಸವ ಆಯೋಜಿಸಲಾಗಿತ್ತು. ಮಾಜಿ ಶಾಸಕ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಾವೆಲ್ಲ, ನಮ್ಮ ಸ್ವಂತಿಕೆಯನ್ನು ಮಸುಕಾಗದಂತೆ ಕಾಪಾಡಿಕೊಳ್ಳಬೇಕಿದೆ. ನಮ್ಮ ಕಲೆ, ಸಂಸ್ಕೃತಿ, ಆಚಾರ, ವಿಚಾರವನ್ನು ಮರೆಯಬಾರದು. ಈ ನಾಡಿನ ಮಣ್ಣಿನ ಗುಣ, ಭಾರತೀಯತೆಯನ್ನು ಉಳಿಸೋಣ. ಆಧುನೀಕತೆಯ ಭರಾಟೆಯಲ್ಲಿ ನಮ್ಮ ಜನಪದೀಯ ಕಲೆಗಳು ಅಳಿದು ಹೋಗುತ್ತಿದ್ದು, ಅದನ್ನು ಉಳಿಸುವ ಜತೆಗೆ ಮಹತ್ವದ ಬಗೆಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಹೊಣೆಗಾರಿಕೆ ನಮ್ಮೆಲ್ಲರದು. ಕಾರಂತರು ಹೇಳಿದಂತೆ ನದಿ, ಕಡಲು, ಬೆಟ್ಟಗಳಲ್ಲಿ ಸಿಗುವಷ್ಟು ಶಾಂತಿ ಬೇರೆಲ್ಲೂ ಸಿಗದು. ಅಂತಹ ಪವಿತ್ರವಾದ ಸ್ಥಳದಲ್ಲಿ ಈ ನಮ್ಮ ಜಾನಪದ ಉತ್ಸವವನ್ನು ಆಯೋಜಿಸಿರುವುದು ಸ್ತುತ್ಯಾರ್ಹ ಎಂದರು. ಪಾರಂಪರಿಕ ವಸ್ತು ಪ್ರದರ್ಶನವನ್ನು ಉದ್ಯಮಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಮಂದಾರ ಕಲಾವೇದಿಕೆ ಬೀದರ್ ಕೊಡಮಾಡುವ 2022ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಕೊಲ್ಲೂರು ಗ್ರಾಮದ ಮಾವಿನಕಾರಿನ ಭರತ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿದೆ. ಅವರ ಧಾರ್ಮಿಕ ಕಾರ್ಯ ಹಾಗೂ ಸಾಮಾಜಿಕ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ಪ್ರದಾನಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾವಿನಕಟ್ಟೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಕಲಿತ 2005-06ನೇ ಸಾಲಿನ ವಿದ್ಯಾರ್ಥಿಗಳು ಸುಮಾರು 1 ಲಕ್ಷ ಮೊತ್ತದ ಸೌಂಡ್ ಸಿಸ್ಟಮ್ ಹಾಗೂ ವಾಟರ್ ಫ್ಯೂರಿಫೈ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಎಚ್. ಕುಶಲ್ ಶೆಟ್ಟಿ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿಗಳು, ಶಾಲಾ ಅದ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರ ಬ್ಯಾಂಕ್ನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಆನಂದ ಬಿಲ್ಲವ ಮತ್ತು ಉಪಾಧ್ಯಕ್ಷರಾಗಿ ವಾಸುದೇವ ಶೇರುಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೇತೃತ್ವದಲ್ಲಿ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಆನಂದ ಬಿಲ್ಲವ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಾಸುದೇವ ಶೇರುಗಾರ್ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು. ನಿರ್ದೇಶಕರಾದ ಶ್ರೀನಿವಾಸ ಜತ್ತನ್, ಮಾಧವ ಖಾರ್ವಿ, ಸುಭಾಶ್ಚಂದ್ರ ಪೂಜಾರಿ, ಗೋಪಾಲ ನಾಯ್ಕ್, ಚಂದ್ರಶೇಖರ ಪೂಜಾರಿ, ಪ್ರೇಮಾ ಪೂಜಾರಿ, ಯಮುನಾ, ಚಂದ್ರಮತಿ ಡಿ.ಹೆಗ್ಡೆ, ನಾಗರಾಜ ಎಂ., ಲಕ್ಷ್ಮಣ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೌಟುಂಬಿಕ ಕಲಹದ ಕಾರಣದಿಂದ ಮಗನೇ ತಂದೆಯನ್ನು ಹತ್ಯೆಗೈದ ಅಮಾನುಷ ಘಟನೆ ತಾಲೂಕಿನ ಗೋಪಾಡಿ ಗ್ರಾಮದಲ್ಲಿ ನಡೆದಿದೆ. ಗೋಪಾಡಿಯ ಹಾಲಾಡಿ ಮನೆ ನಿವಾಸಿ ನರಸಿಂಹ ಮರಕಾಲ(74) ಕೋಲೆಯಾದ ವ್ಯಕ್ತಿ. ಆರೋಪಿ ಪುತ್ರನನ್ನು ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ. ಆರೋಪಿ ರಾಘವೇಂದ್ರ ಜಾಗದ ವಿಚಾರದಲ್ಲಿ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದು, ಪ್ರತ್ಯೇಕವಾಗಿ ವಾಸವಿದ್ದ. ಶನಿವಾರ ರಾತ್ರಿ ರಾಘವೇಂದ್ರ ಮನೆಯ ಅಂಗಳದಲ್ಲಿ ಕಸಕಡ್ಡಿಗೆ ಬೆಂಕಿ ಹಾಕಿದ್ದಾನೆ. ಪಕ್ಕದಲ್ಲಿ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಅವರು ಬೆಂಕಿಗೆ ನೀರು ಹಾಕಿ ಆರಿಸಲು ಹೋದ ವೇಳೆ ರಾಘವೇಂದ್ರ ಏಕಾಏಕಿ ತಂದೆ ಮೇಲೆ ಮುಗಿಬಿದ್ದು, ಮನೆಯ ಒಳಗಿದ್ದ ಕಬ್ಬಿಣದ ಕೊಡಲಿಯನ್ನು ತಂದು ನರಸಿಂಹ ಮರಕಾಲ ಅವರ ತಲೆಗೆ ಮುಖಕ್ಕೆ ಬಲವಾಗಿ ಕಡಿದಿದ್ದಾನೆ. ಅಲ್ಲೇ ಸ್ಥಳದಲ್ಲಿದ್ದ ನರಸಿಂಹ ಅವರ ಪುತ್ರಿ ತಪ್ಪಿಸಲು ಹೋದಾಗ ಅವರಿಗೂ ಕೊಡಲಿಯನ್ನು ಬೀಸಿ ಗಾಯಗೊಳಿಸಿದ್ದಾನೆ. ನರಸಿಂಹ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಟಕದ ಪಾತ್ರಗಳೇ ನಿಜ. ನಮ್ಮ ಬದುಕೇ ನಾಟಕೀಯವಾಗಿದೆ ಎಂದೆನಿಸುವ ಮಟ್ಟಿಗೆ ಇಂದಿನ ಬದುಕು ಬದಲಾಗಿದೆ. ನಾಟಕದ ಪಾತ್ರಗಳಿಂದ ನಾವು ಕಲಿತು ಅಳವಡಿಸಿಕೊಳ್ಳುವುದು ಸಾಕಷ್ಟಿದೆ ಎಂದು ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಯೋಜಿತ ಅಧ್ಯಕ್ಷ ಡಾ. ರಘು ನಾಯ್ಕ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಸೋಮವಾರ ಸುರಭಿ ರಿ. ಬೈಂದೂರು ಸಂಸ್ಥೆ ಮಾ.25 ರಿಂದ 28ರ ತನಕ ಆಯೋಜಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ನಾಟಕೋತ್ಸವ ಜೀವನ ಪಾಠ ಕಲಿಸಲೊಂದು ದಾರಿಯಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಮಾ.19: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಆಚರಣೆ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಸಾರ್ವಜನಿಕರೂ ಕೂಡ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಎಫ್ಎಸ್ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ:ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ…
