Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ನಾಟಕದ ಪಾತ್ರಗಳೇ ನಿಜ. ನಮ್ಮ ಬದುಕೇ ನಾಟಕೀಯವಾಗಿದೆ ಎಂದೆನಿಸುವ ಮಟ್ಟಿಗೆ ಇಂದಿನ‌ ಬದುಕು ಬದಲಾಗಿದೆ. ನಾಟಕದ ಪಾತ್ರಗಳಿಂದ ನಾವು ಕಲಿತು ಅಳವಡಿಸಿಕೊಳ್ಳುವುದು ಸಾಕಷ್ಟಿದೆ ಎಂದು ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಯೋಜಿತ ಅಧ್ಯಕ್ಷ ಡಾ. ರಘು ನಾಯ್ಕ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಸೋಮವಾರ ಸುರಭಿ ರಿ. ಬೈಂದೂರು ಸಂಸ್ಥೆ ಮಾ.25 ರಿಂದ 28ರ ತನಕ ಆಯೋಜಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ನಾಟಕೋತ್ಸವ ಜೀವನ ಪಾಠ ಕಲಿಸಲೊಂದು ದಾರಿಯಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದ್ದರು. ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ ಕಾರ್ಯಕ್ರಮ‌ ನಿರೂಪಿಸಿದರು. ನಿರ್ದೇಶಕ ಸುಧಾಕರ ಪಿ. ಬೈಂದೂರು ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ,ಮಾ.19: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಆಚರಣೆ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು. ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಸಾರ್ವಜನಿಕರೂ ಕೂಡ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಎಫ್ಎಸ್ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ:ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಮಾ.19: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹಯಾಗದ ನಂತರ (ವೃಷಭಲಗ್ನ) ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ದೇವಳದಲ್ಲಿ ಮಾ.18ರಿಂದ ಮಾ.27ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದೆ. ಮಾ.19ರ ರಾತ್ರಿ ಮಯೂರಾರೋಹಣೋತ್ಸವ, ಮಾ.20ರ ರಾತ್ರಿ ಡೋಲಾರೋಹಣೋತ್ಸವ, ಮಾ.21ರ ರಾತ್ರಿ ಪುಷ್ಪಮಂಟಪಾರೋಹಣೋತ್ಸವ, ಮಾ.22ರ ರಾತ್ರಿ ವೃಷಭಾರೋಹಣೋತ್ಸವ, ಮಾ.23ರ ರಾತ್ರಿ ಗಜಾರೋಹಣೋತ್ಸವ, ಮಾ.24ರ ಬೆಳಿಗ್ಗೆ ಶಿಖರ ಪ್ರತಿಷ್ಠೆ, ಸಂಜೆ ಹಿರೇರಂಗಪೂಜೆ, ರಾತ್ರಿ ಸಿಂಹಾರೋಹಣೋತ್ಸವ ಜರುಗಲಿದೆ. ಮಾ.25ರಂದು ಬೆಳಿಗ್ಗೆ ಮುಹೂರ್ತ ಬಲಿ, ಕ್ಷಿಪ್ರಬಲಿ, ರಥಬಲಿ ನಂತರ ಮಧ್ಯಾಹ್ನ ಮಿಥುನ ಲಗ್ನ ಮುಹೂರ್ತದಲ್ಲಿ ರಥಾರೋಹಣ ನಡೆಯಲಿದೆ. ಸಂಜೆ ಶ್ರೀಮನ್ಮಹಾರಥೋತ್ಸವ ಜರುಗಲಿದೆ. ಮಾ.26ರ ರಾತ್ರಿ ಓಕುಳಿ, ಅವಭೃತಸ್ನಾನಾದಿ ಕರ್ಮಗಳು ನಡೆಯಲಿದ್ದು, ಮಾ೨೭ರ ಬೆಳಿಗ್ಗೆ ಅಶ್ವಾರೋಹಣೋತ್ಸವದ ಬಳಿಕ ಮಹಾಪುರ್ಣಾಹುತಿ, ಧ್ವಜಾವರೋಹಣ, ಪೂರ್ಣಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆಯಾಗಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪುರಸಭಾ ವ್ಯಾಪ್ತಿಯಲ್ಲಿಯೇ ಪ್ರವೇಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದು, ಶುಕ್ರವಾರ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದಾಪುರ ಎಲ್.ಐ.ಸಿ ರಸ್ತೆ ಬಳಿ ಮೆಸ್ಕಾಂ ಕಛೇರಿ ಎದುರುಗಡೆ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಎರಡುವರೆ ತಿಂಗಳ ಒಳಗಡೆ ಕಾರ್ಯಗತಗೊಳ್ಳಲಿದೆ. ಇಲ್ಲಿ ಸರ್ವೀಸ್ ರಸ್ತೆಯನ್ನು ವಿಸ್ತಾರಗೊಳಿಸಿಕೊಂಡು ಹೆದ್ದಾರಿ ಮಟ್ಟದಲ್ಲಿಯೇ ನಗರಕ್ಕೆ ಪ್ರವೇಶ ನೀಡಲಾಗುವುದು. ಅದೇ ರೀತಿ ಆಚೆ ಕಡೆಯಲ್ಲಿಯೂ ಕೂಡಾ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾ.30ರ ಒಳಗೆ ಮೇಲ್ಸೇತುವೆಗೆ ದಾರಿದೀಪಗಳ ಅಳವಡಿಸಲಾಗುವುದು ಎಂದರು. ಅದೇ ರೀತಿ ಹೆದ್ದಾರಿ ದಾಟುವ ಕುರಿತಂತೆ ವಿದ್ಯಾರ್ಥಿಗಳ ಬೇಡಿಕೆಗೂ ಸ್ಪಂದನ ನೀಡಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ನೀಡುವ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಯೋಜನಾ ನಿರ್ದೇಶಕರಿಗೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ.18: ಇಲ್ಲಿನ ಟಿಟಿ (ತಾತ್ಯಾ ಟೋಪೆ) ರಸ್ತೆ ಆಶ್ರಯ ಕಾಲನಿಯಲ್ಲಿನ ಮಕ್ಕಳ ಉದ್ಯಾನವನವನ್ನು ಇದೀಗ ಸ್ವಚ್ಛಗೊಳಿಸಲಾಗಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕುಂದಾಪ್ರ ಡಾಟ್ ಕಾಂ ವರದಿ ಪ್ರಕಟಿಸಿದ ಬಳಿಕ ಪಾರ್ಕ್ ತುಂಬೆಲ್ಲಾ ಹರಡಿಕೊಂಡಿದ್ದ ಮದ್ಯ ಬಾಟಲ್‌ಗಳು, ಕಸದ ರಾಶಿಯನ್ನು ತೆರವು ಮಾಡಿ ಗಿಡಗಂಟಿಯನ್ನೆಲ್ಲಾ ಕಡಿದು ಸ್ವಚ್ಛಗೊಳಿಸಿದೆ. ಈ ಪರಿಸರದ ಮಕ್ಕಳಿಗೆ ಆಟವಾಡಲು, ನಾಗರಿಕರಿಗೆ ಸಂಜೆಯ ವಿಹಾರಕ್ಕಾಗಿ ಪುರಸಭೆ ನಿರ್ಮಿಸಿದ್ದ ಉದ್ಯಾನವನವು ಸಾರ್ವಜನಿಕರ ನಿರಾಸಕ್ತಿ ಹಾಗೂ ಪುರಸಭೆಯ ನಿರ್ವಹಣೆ ಇದ್ದಲೇ ಪಾಳು ಕೊಂಪೆಯಂತಾಗಿತ್ತು. ರಾಶಿ ರಾಶಿ ಮದ್ಯದ ಬಾಟೆಲ್, ಬಾಟೆಲ್ ಚೂರುಗಳು, ಕಸದ ರಾಶಿಯಿಂದಲೇ ತುಂಬಿಕೊಂಡಿತ್ತು. ಸದ್ಯ ಪಾರ್ಕ್ ಸ್ವಚ್ಛ ಮಾಡಿದ ನಂತರ ರಾತ್ರಿವೇಳೆ ಯಾರೂ ಪಾರ್ಕ್ ಪ್ರವೇಶಿಸದಂತೆ ಗೇಟಿಗೆ ಬೀಗ ಹಾಕುವ ವ್ಯವಸ್ಥೆ ಮಾಡಲಾಗಿತ್ತಾದರೂ ಮತ್ತೆ ದುಷ್ಕರ್ಮಿಗಳು ತಡೆಬೇಲಿ ಕಿತ್ತು ವಿಕೃತಿ ಮೆರೆದಿದ್ದಾರೆ. ಇಂತಹ ಚಟುವಟಿಕೆಗಳ ಬಗ್ಗೆ ನಿಗಾ ಇಡಲು ಲೈವ್ ಟ್ರ್ಯಾಕಿಂಗ್ ಸಿಸಿ ಕ್ಯಾಮರಾ, ಪಾರ್ಕ್ ಒಳಾಂಗಣದಲ್ಲಿ ಸುಂದರ ಕೈದೋಟಗಳನ್ನು ನಿರ್ಮಿಸುವ ಅಗತ್ಯವಿದೆ. ಪಾರ್ಕ್ ಬಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯರಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ ನಿರ್ದೇಶನದ ಕುರಿದೊಡ್ಡಿ ಕುರುಕ್ಷೇತ್ರ, ಚೋರ ಚರಣದಾಸ, ಬಾವಿ ಕಳೆದಿದೆ, ಬೆನಕನ ಕೆರೆ ಮೊದಲಾದ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಬೆನಕನ ಕೆರೆ ನಾಟಕದ ಬೆನಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅದ್ಭುತ ನಟನೆಯ ನಂತರ, ಆ ಪಾತ್ರದ ‘ಬೆನಕ’ ಎಂಬ ಹೆಸರು ಇವರಿಗೇ ಅಂಟಿಕೊಂಡು ಬೆನಕ ಆಚಾರ್ಯ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯತೊಡಗಿದರು. ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರು ನಿರ್ಮಿಸಿ ನಿರ್ದೇಶಿಸಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮಾ.17: ಮಾನವೀಯ, ಸೇವಾ ಕಾರ್ಯಗಳಿಗೆ ಸದಾ ಸ್ಪಂದಿಸುವ ನೆಂಪು ಫ್ರೆಂಡ್ಸ್ ಹಾಗೂ ನೆಂಪು ಫ್ರೀಮಿಯರ್ ಲೀಗ್ ಸಂಘಟಕರು ಥಲೆಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿರುವ ಕಟ್‌ಬೇಲ್ತೂರಿನ ಶ್ಯಾಮಲ ಚರಣ್ ಕುಮಾರ್ ಅವರ ನಾಲ್ಕು ವರ್ಷದ ಮಗು ಪವನ್ ಕುಮಾರ್ ಚಿಕಿತ್ಸೆಗೆ ರೂ. 70,000 ಹಣವನ್ನು ಸಂಗ್ರಹಿಸಿ ಹಸ್ತಾಂತರಿಸಿದೆ. ಥಲೆಸ್ಸಿಮಿಯ ಮೇಜರ್ ಎನ್ನುವ ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಈ ಮಗುವಿನ ಚಿಕಿತ್ಸೆಗೆ ಸುಮಾರು 40 ಲಕ್ಷ ಹಣದ ಅವಶ್ಯಕತೆ ಇರುವುದನ್ನು ಮನಗಂಡ ನೆಂಪು ಫ್ರೆಂಡ್ಸ್ ಸದಸ್ಯರು ತಮ್ಮಿಂದಾದ ಆರ್ಥಿಕ ನೆರವು ನೀಡುವ ತೀರ್ಮಾನ ಮಾಡಿದರು. ಅದರಂತೆ ನೆಂಪು ಫ್ರೆಂಡ್ಸ್ ಮತ್ತು ನೆಂಪು ಫ್ರೀಮಿಯರ್ ಲೀಗ್ (ಎನ್.ಪಿ.ಎಲ್) ಇವರ ಸಹಾಯ ಹಸ್ತದಿಂದ 70,000 ಮೊತ್ತವನ್ನು ಮಗುವಿನ ಮನೆಗೆ ತೆರಳಿ ಮಗುವಿಗೆ ಹಸ್ತಾಂತರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮವು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಇತ್ತೀಚಿಗೆ ನಡೆದ ಅಹಿತಕರ ಘಟನೆಗಳು ಮತ್ತು ಕೋಮು ಸಂಬಂಧಿತ ಘರ್ಷಣೆಗಳಿಂದ ಮುಂಬರುವ ಹೋಳಿ ಹಬ್ಬದ ಆಚರಣೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಬೇಕು. ಕೋವಿಡ್-೧೯ ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಹೇಳಿದರು. ಹೋಳಿ ಹಬ್ಬದ ಪೂರ್ವಭಾವಿಯಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಸರ್ವಧರ್ಮೀಯರ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೆರವಣಿಗೆ ಮತ್ತು ಇತರ ಕಾರ್ಯಕ್ರಮದ ವೇಳೆ ಅನ್ಯ ಧರ್ಮಿಯರಿಗೆ ಘೋಷಣೆ ಕೂಗುವುದು, ಅಸಂವಿಧಾನಿಕ ಭಾಷೆ ಉಪಯೋಗಿಸುವುದು, ರಾಜಕೀಯ ಪ್ರೇರಿತ ಘೋಷಣೆ ಕೂಗದಂತೆ, ಅನ್ಯ ಧರ್ಮಿಯರ ಭಾವನೆಗಳಿಗೆ ಧಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೆರವಣಿಗೆ ಸಂದರ್ಭ ಅಸಭ್ಯ, ಅಶಿಸ್ತು ವರ್ತನೆ ಮಾಡದಂತೆ ಸಮಾಜದ ಮುಖಂಡರು ನೋಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾದಲ್ಲಿ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ವಿರುದ್ಧ ಕಾನೂನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮಾ.15: ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾರಂಭವಾಗಿ ಇಡೀ ದೇಶದಲ್ಲಿ ಸಂಘರ್ಷಕ್ಕೆ ಎಡೆ ಮಾಡಿದ್ದ ಹಿಜಾಬ್ ವಿವಾದ ಕುರಿತು ಮಹತ್ವದ ತೀರ್ಪು ಹೊರಬಿದ್ದಿದ್ದು, ಸರ್ಕಾರದ ಆದೇಶ ಕಾನೂನು ಬದ್ದವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರಸಂಹಿತೆಯನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ. ಸರ್ಕಾರ ಆದೇಶ ಕಾನೂನು ಬದ್ದವಾಗಿದೆ. ಹಿಜಾಬ್ ಧರಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯ ಎನ್ನುವ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ. ಎಂ. ಖಾಜಿ ಅವರನ್ನು ಒಳಗೊಂಡ ಪೀಠವು ತೀರ್ಪು ಪ್ರಕಟಿಸಿದೆ. 11 ದಿನ ಸುದೀರ್ಘ ವಿಚಾರಣೆ ನಡೆಸಿದ್ದ ಪೂರ್ಣ ಪೀಠವು ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿತ್ತು. ಸರಿ ಸುಮಾರು 23.5 ತಾಸು ವಿಚಾರಣೆ ಆಲಿಸಿರುವ ಪೀಠವು 17 ದಿನಗಳ ಬಳಿಕ ತೀರ್ಪು ಪ್ರಕಟಿಸಿದೆ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಿಜಾಬ್…

Read More

ಪ್ರಶಾಂತ್ ಸೂರ್ಯ ಸಾಬ್ರಕಟ್ಟೆ | ಕುಂದಾಪ್ರ ಡಾಟ್ ಕಾಂ ಲೇಖನದ.ಕ – ಉಡುಪಿ ಜಿಲ್ಲೆಯಲ್ಲಿ ಕುಡುಬಿ ಮತ್ತು ಮರಾಠಿ ಜನಾಂಗದವರು ಒಂದು ವಿಶಿಷ್ಠ ಜನಪದ ಆಚರಣೆಯಾಗಿ ಹೋಳಿ ಹಬ್ಬ ಸಂಭ್ರಮಿಸುತ್ತಾರೆ. ಅಮವಾಸ್ಯೆಯ ಮೊದಲು ಗೋವಾದಿಂದ ಮೂಲ ದೇವರ (ಮಲ್ಲಿಕಾರ್ಜುನ) ಉತ್ಸವ ಮೂರ್ತಿಯನ್ನು ತಂದು ಕೂಡುಕಟ್ಟಿನ ಹಿರಿಯ ಮನೆಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ಆಕರ್ಷಕ ವೇಷಭೂಷಣ:ಹೋಳಿ ಹಬ್ಬದ ಸಮಯದಲ್ಲಿ ಕುಡುಬಿ ಜನಾಂಗದ ವೇಷಭೂಷಣ ನೋಡುವುದೇ ಒಂದು ಹಬ್ಬ. ತಲೆಗೆ ’ಅಬ್ಬಲಿ ಹೂವಿನಿಂದ’ ಮಾಡಿದ ಮುಂಡಾಸು ಅವರ ಎದುರು ಕಡೆ ಹಟ್ಟಿಮುದ್ದ ಹಕ್ಕಿಯ ಚೆಂದದ ಗರಿ; ಹಾಗೆಯೇ ವಿಶೇಷವಾದ ಉಡುಪುಗಳು,ಮೈ ಮೇಲೆ ಬಿಳಿಯ ನಿಲುವಂಗಿ, ಅಂಗಿಯ ಮೇಲೆ ಬಣ್ಣ ಬಣ್ಣದ ಪಟ್ಟೆಯ ದಾರ ಕಾಲಿಗೆ ಗೆಜ್ಜೆ, ಕೈಯಲ್ಲಿ ಬಾರಿಸುವ ಗುಮ್ಮಟೆ ಇದರ ಧ್ವನಿ ವಿಶೇಷವಾಗಿರುತ್ತದೆ. ಅವರ ಹಾದಿಯಲ್ಲಿ ಸಾಗುತ್ತಿದ್ದರೆ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ ಕಣ್ಣಿಗೆ ಹಬ್ಬ. ಕುಣಿತ-ಕೋಲಾಟ ಕಣ್ಣಿಗೆ ತಂಪು:ಹೋಳಿ ವರ್ಷದ 5 ದಿನ ಕುಡುಬಿ ಜನಾಂಗದವರು ಸಂಭ್ರಮಿಸುವ ಹಬ್ಬ.…

Read More