Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು,ಮೇ.19: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 85.63% ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ. ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579 ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 85.63% ಫಲಿತಾಂಶ ಬಂದಿರುವುದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 309 ವಿದ್ಯಾರ್ಥಿಗಳು 624 ಅಂಕ ಪಡೆಯುವ ಮೂಲಕ ಎರಡನೇ…

Read More

ನಮ್ಮ ಭಾರತೀಯ ಆಹಾರ ಪದ್ದತಿಯಲ್ಲಿ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಇವುಗಳು ಔಷಧಿಯ ಗುಣಗಳನ್ನು ಹೊಂದಿದೆ. ಈಗಿನ ವರ್ತಮಾನದ ಕಾಲದಲ್ಲಿ ಅಡುಗೆಯಲ್ಲಿ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಇರಲೇಬೇಕು. ಸಾರು, ಪಲ್ಯ ಇವುಗಳಿಗೆ ಕೊತ್ತಂಬರಿ ಸೊಪ್ಪು, ಕರಿ ಬೇವಿನ ಎಲೆ ಇಲ್ಲ ಅಂದರೆ ಅಡುಗೆ ಸಂಪೂರ್ಣವಾದಂತೆ ಅನಿಸುವುದಿಲ್ಲ. ಮನೆಯಲ್ಲಿಯೇ ಕರಿಬೇವು, ಕೊತ್ತಂಬರಿ ಗಿಡ ಇದ್ದರೆ ಅಡುಗೆಗೆ ಬೇಕಾಗಿರುವುದನ್ನು ಕಿತ್ತು ತಾಜಾ ಬಳಸಬಹುದು. ಇಲ್ಲಾ ಅಂದರೆ ಅಂಗಡಿಯಿಂದ ತಂದು ಫ್ರಿಡ್ಜ್‌ನಲ್ಲಿಟ್ಟು ಬಳಸುತ್ತೇವೆ. ಆದರೆ ಫ್ರಿಡ್ಜ್ನಲ್ಲಿಟ್ಟರೂ ಅದನ್ನು ಸರಿಯಾದ ರೀತಿಯಲ್ಲಿ ಇಡದಿದ್ದರೆ ಅದರ ತಾಜಾತನ ಹೋಗುತ್ತದೆ. ಕೊತ್ತಂಬರಿ ಹಾಗೂ ಕರಿಬೇವು ಒಂದೆರಡು ತಿಂಗಳವರೆಗೆ ಒಣಗದಂತೆ ಇರಿಸಲು ಕೆಲವೊಂದು ಸಲಹೆ ನೀಡಲಾಗಿದೆ. ಕರಿಬೇವು ಸಂಗ್ರಹಿಸಿಡುವ ವಿಧಾನ: ಎಲೆಯನ್ನು ಅದರ ದಂಟಿನಿಂದ ತೆಗೆದು ಸ್ವಚ್ಛಗೊಳಿಸಿ ಸ್ವಚ್ಛ ಬಟ್ಟೆಯಲ್ಲಿ ಹಾಕಿ ಒತ್ತಿ, ಆಗ ನೀರು ಹೀರಿಕೊಳ್ಳುವುದು. ನಂತರ ಎಲೆಯನ್ನು ಅಗಲವಾದ ಪ್ಲೇಟ್ನಲ್ಲಿ ಹಾಕಿ ಎರಡರಿಂದ-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಅದು ಒಣಗಿದ ಮೇಲೆ ಗಾಳಿಯಾಡದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಡಿದು ಬಂದು ಗಲಾಟೆ ಮಾಡಿದ ಪತಿ, ತನ್ನ ಪತ್ನಿಯನ್ನು ಕೈಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ವಂಡಾರು ಗ್ರಾಮದ ಕಟ್ಟೆಕೊಡ್ಲು ಎಂಬಲ್ಲಿ ನಡೆದಿದೆ. ಕಟ್ಟೆಕೊಡ್ಲು ನಿವಾಸಿ ಅನಿತಾ (35) ಕೊಲೆಗೀಡಾಗಿದ್ದು, ತಲೆಮರೆಸಿಕೊಂಡಿರುವ ಅವರ ಪತಿ, ಕೊಲೆ ಆರೋಪಿ ಸುರೇಂದ್ರ ನಾಯ್ಕ(42) ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರೇಂದ್ರ ನಾಯ್ಕ ಸುಮಾರು 15 ವರ್ಷಗಳ ಹಿಂದೆ ಅನಿತಾ ಅವರನ್ನು ಮದುವೆ ಆಗಿದ್ದು, ಕಟ್ಟೆಕೊಡ್ಲುವಿನಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಕೊಂಡಿದ್ದ ಸುರೇಂದ್ರ ನಾಯ್ಕಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಪ್ರತಿದಿನ ಕುಡಿದು ಬರುತ್ತಿದ್ದ ಸುರೇಂದ್ರ ನಾಯ್ಕ, ಪತ್ನಿ ಮತ್ತು ಮಕ್ಕಳಿಗೆ ವಿಪರೀತವಾಗಿ ಹೊಡೆಯುತ್ತಿದ್ದನು ಎಂದು ದೂರಲಾಗಿದೆ. ಈತ ಮೇ.17ರ ರಾತ್ರಿ ಮನೆಯಲ್ಲಿ ಅನಿತಾಗೆ ಕೈಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅನಿತಾ, ಸ್ಥಳದಲ್ಲಿಯೇ ಮೃತಪಟ್ಟರು. ಪತ್ನಿಯ ಕೊಲೆಗೈದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಪಂಚಾಯತಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಶೆಡ್ತಿ (48) ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುರೂರಿನ ಮನೆಯಿಂದ ಸಂಬಂಧಿಯ ಬೈಕಿನಲ್ಲಿ ಹೊರಟಿದ್ದ ಲಲಿತಾ ಶೆಟ್ಟಿ ಅವರಿಗೆ, ಹಲಗೇರಿ ಸಮೀಪ ಬೈಕ್ ಹೊಂಡ ತಪ್ಪಿಸುವವಾದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿ ಮಧ್ಯ ಸಾವಿಗೀಡಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದ್ಮಾವತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಕನ್ನಡ ಸಿನೆಮಾ ಮೇ.20ರ ಶುಕ್ರವಾರ ಭಾರತ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ಸಂಜೆ 4ಗಂಟೆಯ ಶೋ ಮೂಲಕ ತೆರೆಕಾಣಲಿದೆ. ಈ ಬಗ್ಗೆ ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ತೇಜಸ್ವಿ ವಿಘ್ನೇಶ್ ಮಾಹಿತಿ ನೀಡಿ ಭಾರತ್ ಸಿನಿಮಾಸ್ ಕುಂದಾಪುರ, ಮಣಿಪಾಲ್, ಮಂಗಳೂರು, ಶಿವಮೊಗ್ಗದಲ್ಲಿ ಪ್ರತಿನಿತ್ಯ ಸಂಜೆ 4ಗಂಟೆಗೆ ಒಂದು ಶೋ ಪ್ರದರ್ಶನ ಕಾಣಲಿದೆ ಎಂದರು. ಚಿತ್ರವು ಮೂರು ವಿಭಾಗವನ್ನು ಹೊಂದಿದ್ದು ಪ್ರಮುಖ ಭಾಗವನ್ನು ತೇಜಸ್ವಿ ವಿಘ್ನೇಶ ನಿರ್ದೇಶನ ಮಾಡಿದ್ದು, ಉಪ ಕಥೆಯನ್ನು ಬಾಸುಮಾ ಕೊಡಗು ಹಾಗೂ ತಮಿಳು ವಿಭಾಗದ ಉಪಕಥೆಯ ನಿರ್ದೇಶನವನ್ನು ಶಿವ.ಕೆ ಅವರಿಗೆ ವಹಿಸಲಾಗಿತ್ತು. ಚಿತ್ರದ ನಿರ್ದೇಶನ ಹಾಗೂ ನಿರ್ಮಣ ಜವಾಬ್ದಾರಿ ಹೊತ್ತಿರುವುದು ಕುಂದಾಪುರ ಯುವಕ. ಕುಂದಾಪುರದ ದಿನೇಶ್ ಶೇರುಗಾರ್ ಹಾಗೂ ಪದ್ಮಾವತಿ ದಂಪತಿಗಳ ಪುತ್ರರಾದ ತೇಜಸ್ವಿ ವಿಘ್ನೇಶ್ ಅವರ ಚೊಚ್ಚಲ ನಿರ್ದೇಶನದ ಸಿನೆಮಾ ‘ಶಾಂತಿಯನ್ನು ಕಾಪಾಡಿಕೊಳ್ಳಿ’.ವಿಘ್ನೇಶ್ ಕಳೆದ 15 ವರ್ಷಗಳಿಂದ ಸಿನೆಮಾ ಇಂಡಸ್ಟ್ರೀಯಲ್ಲಿ ತೊಡಗಿಕೊಂಡಿದ್ದು, ಚುಕ್ಕಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಸ್ಥೆಯನ್ನು ಆರಂಭಿಸುವುದು ಸುಲಭ; ಆದರೆ ಅದನ್ನು ದೀರ್ಘಕಾಲ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಒಂದು ಸವಾಲು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಎಸ್. ರಾಜು ಪೂಜಾರಿ ಹೇಳಿದರು. ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ಸಂಪನ್ನವಾದ ’ಸಾಧನಾ 40ರ ನಲಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಧನಾ ಸಮಾಜ ಸೇವಾ ವೇದಿಕೆ 40 ವರ್ಷಗಳುದ್ದಕ್ಕೆ ತನ್ನ ಸೇವೆ, ಸಂಸ್ಕೃತಿ, ಮನೋಲ್ಲಾಸ ಎಂಬ ಅರ್ಥಪೂರ್ಣ ಧ್ಯೇಯವನ್ನು ಸಾಕಾರಗೊಳಿಸಲು ನಿರಂತರ ಶ್ರಮಿಸಿದೆ. ಮರವಂತೆಗೆ ಕೆಲವು ಶಾಶ್ವ್ವತ ಕೊಡುಗೆಗಳ ಜತೆಗೆ, ಇಲ್ಲಿನ ಜನಸಮುದಾಯಕ್ಕೆ ಬಹುಮುಖಿಯಾದ ಸೇವೆ ಸಲ್ಲಿಸಿದೆ. ಸಂಸ್ಥೆ ಜನರ ಬೆಂಬಲವನ್ನು ಮತ್ತು ಸಮರ್ಪಿತ ಮನೋಭಾವದ ಸದಸ್ಯರನ್ನು ಪಡೆದಿರುವುದರಿಂದ ಅದಕ್ಕೆ ಅಳಿವಿನ ಭೀತಿ ಇಲ್ಲ ಎಂದು ಅವರು ಹೇಳಿದರು. ಸಾಧನಾ ಅಧ್ಯಕ್ಷ ಚಂದ್ರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಧನ್ಯತಾ ಶ್ಯಾನುಭಾಗ್ ಪ್ರಾರ್ಥನೆ ಹಾಗೂ ಸಾಧನಾ ಕುರಿತು ಕೆ. ಮಹಾಬಲ ಮತ್ತು ಮಂಜುನಾಥ ಮಧ್ಯಸ್ಥ ರಚಿಸಿದ ಗೀತೆಗಳನ್ನು ಹಾಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದಾರ್ಥಿಗಳಿಗೆ ವಿದ್ಯಾನಿಧಿ ಹಾಗೂ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಸೋಮವಾರ ಜರುಗಿತು. ಉಡುಪಿ ಜಿಲ್ಲಾ ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ವಿದ್ಯಾನಿಧಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ಕೆಲವು ವರ್ಷಗಳ ಹಿಂದೆ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ಸ್ವಾಮಿ ಸತ್ಯಸ್ವರೂಪಾನಂದರ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಳೆದ 21 ವರ್ಷಗಳಿಂದಲೂ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ. ಲಿ. ಕಂಪೆನಿ ವತಿಯಿಂದ ಕೇರಳದ ತಿರುವನಂತಪುರದಲ್ಲಿ ನಡೆದ ೧೭ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಪರೀಕ್ಷೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕುಂದಾಪುರದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸ್ಪರ್ಧೆಯ ವಿವಿಧ ಭಾಗಗಳಲ್ಲಿ ಸ್ಪರ್ಧಿಸಿದ ೨೦ ವಿದ್ಯಾರ್ಥಿಗಳಲ್ಲಿ ೫ ಮಂದಿ ಪ್ರಥಮ, ನಾಲ್ವರು ದ್ವಿತೀಯ, ನಾಲ್ವರು ತೃತೀಯ ಹಾಗೂ ಉಳಿದ ೭ ಮಂದಿ ವಿದ್ಯಾರ್ಥಿಗಳು ಇನ್ನುಳಿದ ಸ್ಥಾನಗಳನ್ನು ಪಡೆದು ಪ್ರಶಸ್ತಿ ಗಳಿಸಿದ್ದಾರೆ. ದಿವ್ಯ, ಭುವನ್ ಬಿ. ಕಾಂಚನ್, ಪರ್ವದಿ ಪಿ.ಎಂ., ವೇದಿಕ್ ವಿ.ದೇವಾಡಿಗ, ಅರ್ಥವ್ ಕೊಠಾರಿ ಪ್ರಥಮ ಸ್ಥಾನ ಪಡೆದುಕೊಂಡರು. ತನ್ವಿ, ಪ್ರಕುಲ್ ಮೆಂಡನ್, ಅಕ್ಷೆಭ್ಯ ರೈ, ಹಂಶಿಕಾ ದ್ವಿತೀಯ, ಸರ್ವಶ್ರೀ, ಕ್ರಿಸ್ಟಿನ್ ಪಿಂಟೋ, ಶಿಖರ್ ಮೆಂಡನ್, ಆದ್ಯಾ ಎನ್.ಕಾಂಚನ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಧನುಷ್ ಎಸ್. ಕಾವೇರಿ, ದಿಶಾಂತ್, ಪ್ರಶ್ವಿತ್, ಸ್ಕಂದನ ಆರ್. ಕಾಂಚನ್ ಚತುರ್ಥ ಸ್ಥಾನವನ್ನೂ, ಸ್ಟಾರೆಲ್, ಅಮೋಘ್ ಪೈ, ಹಾರ್ದಿಕ್ ಬಿಲ್ಲವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹಲವಾರು ಶೈಕ್ಷಣಿಕ ಯೋಜನೆಗಳ ಮೂಲಕ ಅವಕಾಶ ಮಡಿಕೊಟ್ಟಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. ಉಡುಪಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಬೈಂದೂರಿನಲ್ಲಿ ಸುಮಾರು 4.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಶಿಷ್ಠ ವರ್ಗ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಜೀವನದ ಮೌಲ್ಯಗಳನ್ನು ಹಾಗೂ ಸಾಧನೆಯ ದಾರಿಯನ್ನು ಕಂಡುಕೊಳ್ಳಬಹುದು. ಈ ವಿದ್ಯಾರ್ಥಿ ನಿಲಯದಲ್ಲಿ ಕಲಿಯುವ ಮಕ್ಕಳು ಅತ್ಯಂತ ಶ್ರದ್ಧೆಯಿಂದ ವ್ಯಾಸಾಂಗ ಮಾಡುವ ಮೂಲಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದರೆ ಯೋಜನೆಯ ಸಾರ್ಥಕತೆ ದೊರೆಯುತ್ತದೆ ಎಂದರು. ರಾಜ್ಯದಾದ್ಯಂತ 2,439 ವಿದ್ಯಾರ್ಥಿ ನಿಲಯಗಳಿದ್ದು, ಒಟ್ಟು 19,863 ಬಾಲಕ, ಬಾಲಕಿಯರು ಈ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಕಾರಣಿಕ ಕ್ಷೇತ್ರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ರಾಜಗೋಪುರ ಸಮರ್ಪಣಾ ಹಾಗೂ ಉದ್ಘಾಟನಾ ಸಮಾರಂಭ ಮೇ.21ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಜರುಗಲಿದೆ ಎಂದು ಯು.ಬಿ.ಎಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಯು.ಬಿ. ಶೆಟ್ಟಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಶಾಲಾ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಎಂಟು ವರ್ಷಗಳ ಹಿಂದೆ ತಾಯಿ ದುರ್ಗಾಪರಮೇಶ್ವರಿಗೆ ರಾಜಗೋಪುರ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡಿದ್ದೆ. ಮೂರು ವರ್ಷದ ಹಿಂದೆ ಸಂಕಲ್ಪ ಮಾಡಿ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ರಾಜಗೋಪುರವನ್ನು ಉದ್ಘಾಟಿಸಲಿದ್ದಾರೆ ಎಂದರು. ಧಾರ್ಮಿಕ ಸಭಾ ಕಾರ್ಯಕ್ರಮ:ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ರಾಜಗೋಪುರವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭವನ್ನು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು…

Read More