ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.8: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಹೆಚ್ಚುವರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ಜಿಲ್ಲೆಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ, ಹೊರಡಿಸಲಾದ ಆದೇಶದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ. ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮAದಿರ, ಆಡಿಟೋರಿಯಂ, ಜಿಮ್ ಮತ್ತು ಯೋಗ ಕೇಂದ್ರ ಹಾಗೂ ಈಜುಕೊಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 100 ಸಾಮರ್ಥ್ಯದೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯಾಚರಿಸಲು ಅನುಮತಿ ನೀಡಲಾಗಿದ್ದು, ನಿಗಧಿತ ಆಸನ ಸಾಮರ್ಥ್ಯವನ್ನು ಮೀರಿರಬಾರದು. ಎರಡು ಡೋಸ್ ಲಸಿಕೆ ಪ್ರಮಾಣ ಪತ್ರ ಹೊಂದಿರುವ, ರೋಗ ಲಕ್ಷಣರಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಪ್ರವೇಶ ಸಮಯದಲ್ಲಿ ಥರ್ಮಲ್ ಸ್ಕಾö್ಯನ್ ಬಳಸಿ ಜ್ವರ ಲಕ್ಷಣಗಳ ಕುರಿತು ತಪಾಸಣೆ ನಡೆಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿರುತ್ತದೆ. ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮAದಿರ, ಆಡಿಟೋರಿಯಂಗಳಲ್ಲಿ ಸಾರ್ವಜನಿಕರು ಪ್ರದರ್ಶನ ಸಮಯ ಸೇರಿದಂತೆ ಎಲ್ಲಾ ಸಮಯದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಿರುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ.8: ಮಹಿಳೆಯರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಬದಲು ಆ ಸಮಸ್ಯೆಗಳಿಗೆ ಕಾರಣ ಏನೆಂದು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದು ರಾಷ್ಟಿçÃಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಹೇಳಿದರು. ಅವರು ಬ್ರಹ್ಮಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಉಡುಪಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಮತ್ತು ಕಾರ್ಕಳ ಇವರ ಸಹಯೋಗದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ದೌರ್ಜನ್ಯಕ್ಕೊಳಗಾದ ಯಾವುದೇ ಮಹಿಳೆ ಸಂಬAಧಪಟ್ಟ ವ್ಯಾಪ್ತಿಯ ಸಖೀ ಒನ್ ಸ್ಟಾಪ್ ಸೆಂಟರ್ನ ಮೂಲಕ ನೆರವು ಪಡೆದುಕೊಳ್ಳಬಹುದು. ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರುವುದು ತಪ್ಪೆಂಬ ಕೀಳರಿಮೆಯಿಂದ ಹೊರಬಂದು ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಬಹುದಾಗಿದ್ದು, ಸಂಬAದಪಟ್ಟ ಅಧಿಕಾರಿಗಳು ಕೂಡ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಮಹಿಳಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹಳಗೇರಿ ಕೈಗಾರಿಕಾ ವಲಯ ಅಭಿವೃದ್ಧಿ ಪಡಿಸುವ ಸಂದರ್ಭ ಪರಂಭೂಕು ಜಾಗವನ್ನು ವಿರಹಿತಗೊಳಿಸುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ಮರೆಮಾಚಿ ಏಪಕ್ಷಿಯ ನಿರ್ಣಯ ಕೈಗೊಳ್ಳಲಾಗಿದೆ. ಇದು ಲ್ಯಾಂಡ್ ರೆವೆನ್ಯೂ ಆಕ್ಟ್ ಉಲ್ಲಂಘನೆಯಾಗಿದೆ ಎಂದು ರೈತ ಮುಖಂಡ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಹಳಗೇರಿಯ ಸರ್ವೆ ನಂ. 166/ಪಿ1ರ 53 ಎಕರೆ ಜಾಗವನ್ನು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೀ ಪುಡ್ ಪಾರ್ಕ್ ಮಾಡುವುದನ್ನು ವಿರೋಧಿಸಿ ನಾಗೂರಿನಲ್ಲಿ ಭಾನುವಾರ ಹಮ್ಮಿಕೊಂಡ ಖಂಡನಾ ಸಭೆ ಉದ್ದೇಶಿಸಿ ಮಾತನಾಡಿದರು. ಹೋರಾಟದ ನೇತೃತ್ವ ವಹಿಸಿರುವ ನಳೀನ ಕುಮಾರ್ ಶೆಟ್ಟಿ ಮಾತನಾಡಿ ಕೈಗಾರಿಕಾ ವಲಯ ಮಾಡುವ ಹಿಂದೆ ಕೆಲವೇ ಉದ್ಯಮಿಗಳ ಹಿತಾಸಕ್ತಿ ಅಡಗಿದೆ. ಕೈಗಾರಿಕಾ ವಲಯದಿಂದ ಆಗುವ ತೊಂದರೆಗಳ ಬಗ್ಗೆ ಈಗಾಗಲೇ ಸರಕಾರಕ್ಕೆ ತಿಳಿಸಲಾಗಿದೆ. ಸ್ಥಳೀಯನ್ನು ವಿಶ್ವಾಸಕ್ಕೆ ಪಡೆಯದೇ ಕೈಗಾರಿಕಾ ವಲಯ ಮಾಡಿರುವುದು ಸರಿಯಾದ ಕ್ರಮವಲ್ಲ. ಊರಿಗೆ ಇದರಿಂದ ತೊಂದರೆಯೇ ಹೆಚ್ಚಿದೆ. ಕೈಗಾರಿಕಾ ವಲಯ ನಿರ್ಮಾಣದಿಂದ ಹಳಗೇರಿ, ತೆಂಕಬೆಟ್ಟು, ಗುಮ್ಮಿತೋಟ, ಕಂಬದಕೋಣೆ, ನಾಗೂರು, ಚಿತ್ರಾಡಿ, ಗುಂಜಾನುಗುಡ್ಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಸೋಮವಾರವೂ ಮುಂದುವರಿದಿದೆ. ಕುಂದಾಪುರ ಕಾಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಖಾಸಗಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಕುಂದಾಪುರ ಕಾಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ, ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದರು. ಕಾಲೇಜು ಆವರಣದೊಳಕ್ಕೆ ಇಬ್ಬರಿಗೂ ಪ್ರವೇಶ ನಿರಾಕರಿಸಿದ್ದರಿಂದ ಮೂವರು ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿದರೆ, ವಿದ್ಯಾರ್ಥಿಗಳು ಕೆಸರಿ ಶಾಲು ಕಳಚಿ ತರಗತಿ ಪ್ರವೇಶಿಸಿದರು. ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು, ಹಿಜಾಬ್ ಧರಿಸುವುದಕ್ಕೆ ಪ್ರತಿರೋಧಿಸಿ ಕೇಸರಿ ಶಾಲು ಧರಿಸಿ ಬಂದು ಮಾರ್ಗಮಧ್ಯದಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ಕಾಲೇಜು ಆವರಣದೊಳಕ್ಕೆ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದವರಿಗೆ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದರು. ಎಲ್ಲಾ ಕಾಲೇಜುಗಳ ಎದುರು ಪೊಲೀಸ್ ಬಂದೋವಸ್ತ್ ಏರ್ಪಡಿಸಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರದಲ್ಲಿ ಕಳೆದ ನಾಲ್ಕು ದಿನಗಳಿಂದ ಮುನ್ನಲೆಗೆ ಬಂದ ಹಿಜಾಬ್ ವಿವಾದ ಸೋಮವಾರವೂ ಮುಂದುವರಿದಿದ್ದು, ಕುಂದಾಪುರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಬಂದಿದ್ದರು. ರಾಜ್ಯ ಸರಕಾರ ಕಾಲೇಜು ಆವರಣದೊಳಕ್ಕೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಹೊರತಾಗಿ ಇತರರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿದ್ದರಿಂದ ಪ್ರಾಂಶುಪಾಲರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ವಿದ್ಯಾರ್ಥಿನಿಯರು ಒಪ್ಪದ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಯಿತು. ಕುಂದಾಪುರ ಕಾಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ, ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದರು. ಕಾಲೇಜು ಆವರಣದೊಳಕ್ಕೆ ಇಬ್ಬರಿಗೂ ಪ್ರವೇಶ ನಿರಾಕರಿಸಿದ್ದರಿಂದ ಮೂವರು ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗಿದರೆ, ವಿದ್ಯಾರ್ಥಿಗಳು ಕೆಸರಿ ಶಾಲು ಕಳಚಿ ತರಗತಿ ಪ್ರವೇಶಿಸಿದರು. ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ಕೆಲವು ವಿದ್ಯಾರ್ಥಿಗಳು, ಹಿಜಾಬ್ ಧರಿಸುವುದಕ್ಕೆ ಪ್ರತಿರೋಧಿಸಿ ಕೇಸರಿ ಶಾಲು ಧರಿಸಿ ಬಂದ ಘಟನೆಯೂ ನಡೆಯಿತು. ಕಾಲೇಜು ಆವರಣದೊಳಕ್ಕೆ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿದವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಶಿರೂರು ಮೈದಿನಪುರದಿಂದ ಶಿರೂರು ಗ್ರಾಮ ಪಂಚಾಯತ್ ಸದಸ್ಯಉದಯ ಪೂಜಾರಿಯವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಯುವಕರ ತಂಡ ಭಾನುವಾರ ಪಾದಯಾತ್ರೆ ಮೂಲಕ ತೆರಳಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಗರಡಿ ಅದ್ಯಕ್ಷರಾದ ಎಸ್. ರಾಜು ಪೂಜಾರಿ ಅವರು ಪಾದಯಾತ್ರೆ ಮೂಲಕ ಆಗಮಿಸಿದ ಯುವಕರಿಗೆ ಅಭಿನಂದನೆ ಸಲ್ಲಿಸಿ ಪಾದಯಾತ್ರೆಯ ನೇತೃತ್ವ ವಹಿಸಿದ ಉದಯ ಪೂಜಾರಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗರಡಿ ಅರ್ಚಕರಾದ ಗಣೇಶ್ ಪೂಜಾರಿ, ಪ್ರಮುಖರಾದ ಗಣೇಶ್ ಎಲ್. ಪೂಜಾರಿ, ಶಿವರಾಮ ಪೂಜಾರಿ, ಅಚ್ಚುತ್ ಬಿಲ್ಲವ, ಮಂಜು ಬಿಲ್ಲವ ಶಿರೂರು, ಅಣ್ಣಪ್ಪ ಪೂಜಾರಿ ಯಡ್ತರೆ, ಶೇಖರ್ ಪೂಜಾರಿ ಉಪ್ಪುಂದ, ಶಾಂತಾನಂದ ಪೂಜಾರಿ, ಮಂಜುನಾಥ ಪೂಜಾರಿ,ಚಂದ್ರ ಪೂಜಾರಿ, ಸುಧಾಕರ ಪೂಜಾರಿ, ಲೋಕೇಶ ಪೂಜಾರಿ, ಪ್ರವೀಣ್ ಗಾಣಿಗ, ಕಿಶನ್ ಪೂಜಾರಿ, ನಾಗರಾಜ ಪೂಜಾರಿ, ಕೋಟಿ ಪೂಜಾರಿ, ಸಂದೇಶ ಪೂಜಾರಿ, ವಿಜಯ ಪೂಜಾರಿ, ಬ್ರಹ್ಮೇಶ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕೊಂಕಣ ರೈಲ್ವೆ ಕಾರ್ಪೊರೇಷನ್, ಗ್ರಾಮಪಂಚಾಯತ್ ಕಂದಾವರ, ಎಂಐಟಿ ಕಾಲೇಜು ಕುಂದಾಪುರ (ಎನ್ಎಸ್ಎಸ್), ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಮತ್ತು ಚಂದನ ಯುವಕ ಮಂಡಲ ಬೀಜಾಡಿ-ಗೋಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣೆ, ರಾಷ್ಟ್ರ ಸೇವಿಕಾ ಕುಂದಾಪುರ, ಅರಣ್ಯ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ರೈಲು ನಿಲ್ದಾಣ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ರೈಲು ನಿಲ್ದಾಣದ ಸ್ಬಚ್ಚತೆ, ರೈಲು ನಿಲುಗಡೆ, ಸೇವೆಗಳ ಬಗ್ಗೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಅದರ ಭಾಗವಾಗಿ ವಿವಿಧ ಸಂಘಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ರೈಲು ನಿಲ್ದಾಣದ ಪರಿಸರವನ್ನು ಸ್ವಚ್ಛಗೊಳಿಸುವ ಹಾಗೂ ಪರಿಸರದಲ್ಲಿ ಗಿಡ ನೆಡುವ ಕಾರ್ಯಕೈಗೊಳ್ಳಲಾಗಿದೆ. ಇಲ್ಲಿನ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು. ಇದೇ ಸಂದರ್ಭ ಕುಂದಾಪುರ ರೈಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.06: ಕೇಂದ್ರ ಸರ್ಕಾರದ ಜನ ವಿರೋಧಿ ಬಜೆಟ್ ವಿರುದ್ದ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸಿಐಟಿಯು ಸಂಚಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಿಐಟಿಯು ಸಂಚಾಲಕ ಎಚ್. ನರಸಿಂಹ ಮಾತನಾಡಿ, ಏಷ್ಯಾದ ಮೂರನೇ ದೊಡ್ಡ ಬಜೆಟ್ ಎಂದು ಬಣ್ಣಿಸಿ ಜನ ಸಾಮಾನ್ಯರಿಗೆ ಕೊಡಮಾಡುವ ಎಲ್ಲಾ ಹಣಕಾಸು ಕಡಿತ ಮಾಡಲಾಗಿದೆ. ಬಂಡವಾಳ ಹೂಡಿಕೆ ನೆಪದಲ್ಲಿ ದೇಶದ ಜನರ ಆಸ್ತಿ ಮಾರಾಟ ಮಾಡಿ ಕಾರ್ಪೋರೇಟ್ ಲೂಟಿಗೆ ಬಜೆಟ್ ಮಂಡಿಸಿರುವುದು ಸ್ಪಷ್ಟವಾಗಿದೆ. ರಸಗೊಬ್ಬರ, ಆಹಾರ, ಉದ್ಯೋಗ ಖಾತ್ರಿ, ಕೃಷಿಗೆ ಸಂಬಂಧಿಸಿದಂತೆ ಇರುವ ಎಲ್ಲಾ ಹಣ ಕಡಿತ ಮಾಡಿದ ಜನ ದ್ರೋಹಿ ಬಜೆಟ್ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮಹಾಬಲ ವಡೇರಹೋಬಳಿ,ಬಲ್ಕೀಸ್, ಪ್ರಕಾಶ್ ಕೋಣಿ,ಲಕ್ಷ್ಮಣ ನೇತೃತ್ವವ ವಹಿಸಿದ್ದರು. ಚಂದ್ರಶೇಖರ ವಿ. ಸ್ವಾಗತಿಸಿದರು. ರಾಜು ದೇವಾಡಿಗ ವಂದಿಸಿದರು. ಬಜೆಟ್ ವಿರೋಧಿಸಿ ಕೃಷಿಕೂಲಿಕಾರರ ಪ್ರತಿಭಟನೆ:ಬೈಂದೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ,ಕನಿಷ್ಟ ನೂರು ದಿನ ಉದ್ಯೋಗ ನೀಡಲು ರೂಪಾಯಿ 2.64…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಅಯೋಧ್ಯೆ ರಾಮ ಮಂದಿರದ ‘ಶ್ರೀ ರಾಮ ದಿವ್ಯ ಬ್ರಹ್ಮರಥ’ ನಿರ್ಮಾಣಕ್ಕೆ ದಾರು ಮುಹೂರ್ತದ ಮೂಲಕ ಶನಿವಾರ ಚಾಲನೆ ನೀಡಲಾಯಿತು. ರಥ ಶಿಲ್ಪಿ ಲಕ್ಚ್ಮೀನಾರಾಯಣ ಆಚಾರ್ಯರು ಕಚ್ಚು ಹಾಕುವ ಮೂಲಕ ಚಾಲನೆ ನೀಡಿದರು. ಹನುಮದ್ ಜನ್ಮಭೂಮಿ ಕಿಷ್ಕಿಂಧಾ ಕ್ಷೇತ್ರದ ಶ್ರೀ ಗೋವಿಂದಾನಂದ ಸರಸ್ವತೀ ಸ್ವಾಮೀಜಿ, ಆನೆಗುಂದಿ ಮಠ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ರಥ ನಿರ್ಮಾಣ ಕಾರ್ಯದಲ್ಲಿ ಉಪಸ್ಥಿತರಿದ್ದು ಆಶೀರ್ವಚಿಸಿದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಹೈಕೋರ್ಟ್ ನಿವೃತ್ತ ನ್ಯಾಯಾದೀಶ ಕುಮಾರ್, ಕೋಟೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಕೋಣಿ ಕೃಷ್ಣಾನಂದ ಕಾರಂತ ಇದ್ದರು. ಶ್ರೀ ರಾಮ ದಿವ್ಯ ಬ್ರಹ್ಮರಥ ಬೃಹತ್ ಸಾಗುವಾನಿ ಮರ:ಶ್ರೀ ರಾಮ ಮಂದಿರಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ 84 ಅಡಿ ಎತ್ತರದ “ಶ್ರೀ ರಾಮ ದಿವ್ಯ ಬ್ರಹ್ಮರಥ” ನಿರ್ಮಾಣಕ್ಕಾಗಿ ಬೃಹತ್ ಸಾಗುವಾನಿ ಮರದ ಬೊಡ್ಡೆಗಳನ್ನು ಹೊತ್ತ ವಾಹನ ಆಂಧ್ರಪ್ರದೇಶದ ವಾರಂಗಲ್ ನಿಂದ ಬುಧವಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಚಕ್ರ ನದಿಗೆ ಕಟ್ಟು-ತೊಪ್ಲು ನಡುವೆ ನಿರ್ಮಿಸಲಾದ ವೆಂಟೆಡ್ ಡ್ಯಾಂ ಸಮರ್ಪಕ ನಿರ್ವಹಣೆ ಇಲ್ಲದೇ ಕೃಷಿಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆ ಅರಿತು ವಾರದೊಳಗೆ ಡ್ಯಾಂಗೆ ಹಲಗೆ ಅಳವಡಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಯ ಎದುರು ಪ್ರತಿಭಟನೆ ನಡೆಸುವುದಾಗಿ ಉಡುಪಿ ಜಿಲ್ಲಾ ರೈತ ಸಂಘದ ತ್ರಾಸಿ ವಲಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಎಚ್ಚರಿಸಿದ್ದಾರೆ. ಹೆಮ್ಮಾಡಿ, ಕಟ್ಬೇಲ್ತೂರು, ಹಕ್ಲಾಡಿ ಪಂಚಾಯತ್ ನಡುವಿನ ಚಕ್ರ ನದಿಗೆ ಕಟ್ಟು ತೊಪ್ಲು ಭಾಗದಲ್ಲಿ ನಿರ್ಮಿಸಲಾಗಿರುವ ಡ್ಯಾಂ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಇಲ್ಲಿನ ಡ್ಯಾಂ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ವೆಂಟೆಡ್ ಡ್ಯಾಂನಿಂದಾಗಿ ಹಕ್ಲಾಡಿ, ಕುಂದಬಾರಂದಾಡಿ, ನೂಜಾಡಿ, ವಂಡ್ಸೆ, ಕರ್ಕುಂಜೆ, ದೇವಲ್ಕುಂದ, ಕಟ್ಬೇಲ್ತೂರು ಮತ್ತು ಹೆಮ್ಮಾಡಿ ಗ್ರಾಮಗಳಿಗೆ ಕೃಷಿ ನೀರಿನ ಉಪಯೋಗದೊಂದಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿಗಾಗಿ ಯೋಜನೆ ರೂಪಿಸಲಾಗಿದ್ದು, ಇಲಾಖೆಯ ಅಸಮರ್ಪಕ ನಿರ್ವಹಣೆಯಿಂದಾಗಿ…
