ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ನ.15ರಿಂದ ಮೊದಲ್ಗೊಂಡು ನ.22ರ ತನಕ ಉತ್ಸವ ನಡೆಯಲಿದ್ದು, ನ.20ರಂದು ಶನಿವಾರ ವಾರ್ಷಿಕ ಶ್ರೀ ಮನ್ಮಹಾ ರಥೋತ್ಸವ ನಡೆಯಲಿದೆ. ಉತ್ಸವದ ಪುರ್ವಭಾವಿಯಾಗಿ ವಾರ್ಷಿಕ ಮನ್ಮಹಾ ರಥೋತ್ಸವಕ್ಕೆ ಧ್ವಜಾರೋಹಣ, ಧಾರ್ಮಿಕ ವಿಧಿವಿಧಾನದೊಂದಿಗೆ ಚಾಲನೆ ನೀಡಲಾಯಿತು. ಸಾಮೂಹಿಕ ಪ್ರಾರ್ಥನೆ, ಮಹಾ ಸಂಕಲ್ಪ, ಪುಣ್ಯಾಹ ನಾಂದಿ, ಧ್ವಜ ವಾಹನ ಅದಿವಾಸ, ಅಸ್ತ್ರಹೋಮದೊಂದಿಗೆ ಇತರ ಧಾರ್ಮಿಕ ವಿವಿಧಾನಗಳೊಂದಿಗೆ ಕೊಡಿ ಮರವನ್ನು ಧ್ವಜಸ್ತಂಭಕ್ಕೆ ನಿಲ್ಲಿಸಿ ಸಿಂಹದ ಫೋಟೋವನ್ನು ಏರಿಸುವುದರೊಂದಿಗೆ ಹಾಗೂ ಧ್ವಜ ಬಲಿ ಮಾಡಿ ಉತ್ಸವಕ್ಕೆ ಚಾಲನೆ ಲಾಯಿತು. ತಂತ್ರಿ ಮಂಜುನಾಥ ಅಡಿಗೆ ಮಾರ್ಗದರ್ಶನದಲ್ಲಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ನ.15ರಿಂದ ನ.19ರವರೆಗೆ ಧ್ವಜಾ ರೋಹಣೋತ್ಸವ, ಗಜಾರೋಹಣೋ ತೃವ, ಆಶ್ವಾರೋಹಣೋತ್ಸವ, ಮಯೂರ ವಾಹನೋತ್ಸವ, ಪುಷ್ಪಕ ಸಿಂಹಾರೋಹ ಹೋತ್ಸವ ಜರುಗಲಿದ್ದು, 21ರಂದು ಚೂರ್ಣೋತ್ಸವ ಹಾಗೂ 22ರಂದು ಧ್ವಜಾರೋಹಣ ನಗರೋತ್ಸವ ವೈಭವ ದಿಂದ ನಡೆಯಲಿದೆ. ಮನ್ಮಹಾ ರಥೋತ್ಸವ ಸಂದರ್ಭ ಉಪ್ಪುಂದ ಬಿಜೂರು ಪರಿಸರದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರಥಮ ವ?ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಆಳ್ವಾಸ್ ಆಗಮನ 2021-22ರ ಸರಣಿ ಕಾರ್ಯಕ್ರಮದ ಭಾಗವಾಗಿ, ಐದನೇ ದಿನ ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕ ಹಾಗೂ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಜೀವನದಲ್ಲಿ ಒಳ್ಳೆಯ ಅಂಶಗಳನ್ನು ರೂಢಿಸಿಕೊಳ್ಳಲು ಬಾಹ್ಯವಾಗಿ ಹಾಗೂ ಆಂತರಿಕವಾಗಿ ಹೆಚ್ಚಿನ ಶ್ರಮದ ಅಗತ್ಯವಿದೆ. ನಮ್ಮ ಸ್ನೇಹಿತರ ಬಳಗದಿಂದ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು, ಹಾಗೂ ಅವನತಿಯ ದಾರಿಯನ್ನು ಹಿಡಿಯಲು ಸಾಧ್ಯ. ಆದ್ದರಿಂದ ನಮ್ಮ ಸಮೃದ್ಧಿಗಾಗಿ ‘ಸಬ್ಕಾ ಸುನನಾ, ದಿಲ್ಕಾ ಕರನ್’ ತತ್ವವನ್ನು ಅನುಸರಿಸಿದರೆ ಜೀವನ ಸುಖಕರವಾಗಿರಲು ಸಾಧ್ಯ ಎಂದರು. ಉಪನ್ಯಾಸದಲ್ಲಿ ಪರೀಕ್ಷಾ ಭಯ, ಸಾಮಾಜಿಕ ಆತಂಕ, ಖಿನ್ನತೆ, ಹೊಂದಾಣಿಕೆಯ ಸಮಸ್ಯೆ, ಕಾಲೇಜುಗಳು ಎದುರಿಸುತ್ತಿರುವ ಸವಾಲುಗಳು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳು, ಈ ವಿಷಯದ ಅಗತ್ಯತೆ, ಅದನ್ನು ನಿರ್ವಹಿಸುವ ವಿಧಾನಗಳು, ಸವಾಲಿನ ಪರಿಹಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಕೋವಿಡ್ ನಿರೋಧಕ ಲಸಿಕೆಯೇ ಮದ್ದು, ಇದನ್ನು ಪ್ರತಿಯೊಬ್ಬರಿಗೂ ಮನೆ ಮನೆಗೆ ಭೇಟಿ ನೀಡಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಕೂರ್ಮಾರಾವ್ ಎಂ ಹೇಳಿದರು. ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನ ಅನುಷ್ಠಾನ ಕುರಿತ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2,95,375 ಮನೆಗಳಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ, ಕೋವಿಡ್ ನಿರೋಧಕ ಲಸಿಕೆ ಪಡೆಯದೇ ಇರುವವರ ವಿವರವನ್ನು ಪಡೆಯುವುದರ ಜೊತೆಗೆ ಅವರುಗಳು ಲಸಿಕೆ ಪಡೆಯುವಂತೆ ಅರಿವು ಮೂಡಿಸಿ, ಲಸಿಕೆ ನೀಡಬೇಕು ಎಂದರು. ಲಸಿಕಾ ಕಾರ್ಯಕ್ರಮವು ನವೆಂಬರ್ 16 ರಿಂದ ನವೆಂಬರ್ 30 ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಸಾರ್ವಜನಿಕರು ಹಾಗೂ ಸಮುದಾಯ ಮುಖಂಡರು ಮನೆ ಮನೆ ಭೇಟಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಹಕರಿಸಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಗ್ರಾಮದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಕಾರ್ಯಕ್ರಮವು ನವೆಂಬರ್ 18ರಿಂದ 20ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಬಾರ್, ರೆಸ್ಟೋರೆಂಟ್ ಮತ್ತು ವೈನ್ಶಾಪ್ಗಳಲ್ಲಿ ಮದ್ಯ ಮಾರಾಟವನ್ನು ನವೆಂಬರ್ 18 ರ ಬೆಳಗ್ಗೆ 6 ರಿಂದ ನವೆಂಬರ್ 19ರ ರಾತ್ರಿ 12ರ ವರೆಗೆ ನಿಷೇಧಿಸಲಾಗಿದೆ. ಅಬಕಾರಿ ಕಾಯ್ದೆ 1965 ಕಲಂ 21 ರನ್ವಯ ಕುಂದಾಪುರ ಪೊಲೀಸ್ ಠಾಣಾ ಸರಹದ್ದಿನ ಕೋಟೇಶ್ವರ, ಹಂಗಳೂರು ಹಾಗೂ ಗೋಪಾಡಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಅಬಕಾರಿ ಸನ್ನದುಗಳನ್ನು ಮುಚ್ಚುವಂತೆ ಹಾಗೂ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿಲುಮೆ-2021(ಭರವಸೆಯ ತಂಗಾಳಿ) ಕಾರ್ಯಕ್ರಮದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು. ಸುಮಾರು ೨೫೦ ಮಕ್ಕಳು ತಯಾರಿಸಿದ ಪೈಟಿಂಗ್ಸ್, ಕಲಾಕೃತಿಗಳ ಪ್ರದರ್ಶನ ನಡೆಯಿತು. ವಿಶೇಷ ಅಂಚೆ ಚೀಟಿ ಪ್ರದರ್ಶನ:ಕನ್ನಡ ನಾಡು ನುಡಿ ಪ್ರತಿಬಿಂಬಿಸುವ ಹಾಗೂ ಮಕ್ಕಳ ದಿನಾಚರಣೆಯ ವಿಶೇಷತೆ ಒಳಗೊಂಡ ಅಂಚೆ ಚೀಟಿ ಪ್ರದರ್ಶನವನ್ನು ಕಲ್ಯಾಣಪುರ ಶ್ರೀಲಕ್ಷ್ಮೀನಾರಾಯಣ ನಾಯಕ್ ಅವರು ಪ್ರದರ್ಶಿಸಿದರು. ಅಲ್ಲದೇ ವಿವಿಧ ದೇಶಗಳ ಅಂಚೆ ಚೀಟಿ, ಮತ್ತು ನಾಣ್ಯಗಳ ಪ್ರದರ್ಶನ ಹಾಗೂ ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಸ ನಾಣ್ಯ ಆಕರ್ಷಿಸಿದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರದ ಐತಿಹಾಸಿಕ ಶ್ರೀ ದೇವರ ವಾರ್ಷಿಕ ಜಾತೆ ಕೊಡಿಹಬ್ಬ ನ.19ರಂದು ನಡೆಯಲಿದ್ದು, ಹಬ್ಬದ ಧಾರ್ಮಿಕ ವಿಧಿಗಳು, ದೇವರ ಪುರಮೆರವಣಿಗೆ ಈಗಾಗಲೇ ಆರಂಭಗೊಂಡಿವೆ. ಹವಾಮಾನ – ವೈಪರೀತ್ಯದಿಂದಾಗಿ ಸುರಿಯುತ್ತಿರುವ ದೇವಳದ ಭಕ್ತರಿಗೆ ವ್ಯಾಪಾರಿಗಳಲ್ಲಿ ಹಬ್ಬದ ಉತ್ಸಾಹವನ್ನೇ ಕುಂದಿಸಿ ದಂತಿದೆ. ನ.12ರಿಂದ ಮೊದಲ್ಗೊಂಡು ಹಬ್ಬದ ಕಾರ್ಯಕ್ರಮಗಳು ನ.20ರವರೆಗೂ ನಡೆಯುತ್ತವೆ. ದೇವಳ ವ್ಯವಸ್ಥಾಪನಾ ಸಮಿತಿಯು ಪೂರ್ವ ತಯಾರಿಗಳನ್ನೂ ನಡೆಸಿದ್ದು, ಸರಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದೆ. ಸಾರ್ವಜನಿಕ ಭಕ್ತಾಭಿಮಾನಿಗಳೂ ಸರ್ಕಾರದ ಸೂಚನೆಯನ್ನು ಅನುಸರಿಸಿ ಸರಳ ಹಬ್ಬಾಚರಣೆಗೆ ಸಹರಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ಸವಗಳ ವಿವಿರ: ನ.17ರಂದು ರಂಗೋತ್ಸವ, ಅಶ್ವವಾಹ ಸೋತ್ಸವ, ನ.18ರಂದು ಸಿಂಹವಾಹ ನೋತ್ಸವ, ನ.19ರಂದು ಬೆಳಿಗ್ಗೆ 11.50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರ ಥೋತ್ಸವ ಜರುಗಲಿದೆ. ನ.20ರಂದು ಚೂರ್ಣೋತ್ಸವ ಅವಶೃತ ಸ್ನಾನ, ರಾತ್ರಿ ಮರ್ಕೋಡು, ಮಲ್ಯಾಡಿ, ಮತ್ತು ತೆಕ್ಕಟ್ಟೆ ನಾಡವರಿಂದ ಓಕುಳಿ ಸೇವೆ ನಡೆಯಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಬಿಜೆಪಿಯ ನೇತೃತ್ವದಲ್ಲಿ ನ.19ರಂದು ಉಡುಪಿ ಪುರಭವನದಲ್ಲಿ ನಡೆಯಲಿರುವ ‘ಜನ ಸ್ವರಾಜ್’ ಯಾತ್ರೆ ಹಾಗೂ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುಕುಮಾರ್ ಶೆಟ್ಟಿ, ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ರವಿ ಅಮೀನ್, ಉಪ್ಪುಂದ ಆನಂದ್ ಖಾರ್ವಿ ಉಪಸ್ಥರಿದ್ದರು. ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರಕಾಶ್ ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನಮ್ಮ ಮನಸ್ಸುನ್ನು ಗುರಿಯೆಡೆಗೆ ಕೇಂದ್ರೀಕರಿಸಿ ಕಾರ್ಯಪ್ರವೃತ್ತರಾದರೆ ಈ ಜನತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಶಸ್ಸು ನಾವು ಅದನ್ನು ಎಷ್ಟು ಶ್ರಮದಿಂದ ಸಾಧಿಸಲು ಬಯಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾರ್ಗಿಲ್ ವೀರ ಯೋಧ ನವೀನ್ ನಾಗಪ್ಪ ತಿಳಿಸಿದರು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ – ಆಳ್ವಾಸ್ ಆಗಮನ 2021-22ರ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನನ್ನು ಸಾಧಿಸಲು ಬಯುಸುತ್ತೀರಿ ಎಂಬುದನ್ನು ಈಗಲೇ ನಿರ್ಧರಿಸಿ. ಆ ಗುರಿಯನ್ನು ಸಾಧಿಸಲು ತನ್ನಿಂದ ಅಸಾಧ್ಯ ಎಂಬ ಭಾವನೆ ಎಂತಹ ಪರಿಸ್ಥಿತಿಯಲ್ಲೂ ಬರಕೂಡದು. ನಿಮ್ಮ ಅಧಮ್ಯ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು. ತಾನು ಇಂಜಿನಿಯರಿಂಗ್ ಮುಗಿಸಿ ಭಾರತೀಯ ಸೈನ್ಯಕ್ಕೆ ಅಧಿಕಾರಿಯಾಗಿ ಸೇರ್ಪಡೆಗೊಂಡಾಗ, ಹಲವರು ತನ್ನ ಆಯ್ಕೆಯನ್ನು ಹೆದರಿಸಿ ಮೂದಲಿಸಿದವರಿಗೆ, ತಾನು ಸೈನ್ಯ ಸೇರಿ ಹಣ, ಐಶ್ವರ್ಯ, ಅಂತಸ್ತುನ್ನು ಸಂಪದಿಸುತ್ತೇನೋ ಗೊತ್ತಿಲ್ಲ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಅರ್ಹರಿರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವುದರೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 9.99 ಲಕ್ಷ ಜನರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕಲು ಗುರುತಿಸಲಾಗಿದ್ದು, ಈಗಾಗಲೇ 9.22 ಲಕ್ಷ ಜನರಿಗೆ ಪ್ರಥಮ ಡೋಸ್ ಲಸಿಕೆ ನೀಡುವುದರೊಂದಿಗೆ, 93.5 ರಷ್ಟು ಪ್ರಗತಿಯಾಗಿದೆ. ಇದುವರೆಗೆ 2 ನೇ ಡೋಸ್ ಗೆ ಅರ್ಹರಿರುವ 6.29 ಲಕ್ಷ ಮಂದಿಯಲ್ಲಿ 5.81 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ. 58.16 ರಷ್ಟು ಮಂದಿ 2 ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಇದುವರೆಗೆ ಲಸಿಕೆಯನ್ನು ಪಡೆಯದೇ ಇರುವವರು ಶೇ.8 ರಷ್ಟಿದ್ದು, ಇವರುಗಳು ಅನ್ಯ ಕಾರಣಗಳಿಂದ ಲಸಿಕೆ ಪಡೆಯಲು ಬಾರದೇ ಇರುವುದು ಕಂಡು ಬಂದಿರುತ್ತದೆ, ಇವರುಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಹಾಗೂ ಸಮಾಜದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ಶಿಪ್ ಪಡೆದುಕೊಂಡದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ ಸ್ಥಾನ, ಪ್ರಹಸನದಲ್ಲಿ ದ್ವಿತೀಯ ಸ್ಥಾನ ಹಾಗೂ ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ತೃತೀಯ ಸ್ಥಾನವನ್ನು ಗಳಿಸುವ ಮುಖೇನ ಅತಿ ಹೆಚ್ಚು ಬಹುಮಾನ ಗಳಿಸಿದ ತಂಡವಾಗಿ ಚಾಂಪಿಯನ್ಶಿಪ್ ಪಡೆದರು. ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ, ವೈಷ್ಣವಿ, ಶ್ರೇಯ ಖಾರ್ವಿ, ಪ್ರಭಾಕರ್, ಅಭಿಷೇಕ, ಆದಿತ್ಯ,ರಾಹುಲ್,ಮಹಿಮಾ, ರಂಜಿತಾ, ರಕ್ಷಿತಾ, ಪೂಜಾ, ಸಾಯಿರಾಜ್, ಹರೀಶ್, ಕಿರಣ್, ವಿನಾಯಕ, ದೀಕ್ಷಾ, ತ್ರಿಶಾ, ಸುಹಾನಾ, ಶ್ರೇಯಾ ಮತ್ತು ಸುಮಂತ್ ಭಾಗವಹಿಸಿದ್ದರು. ಗಂಗೊಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್…
