ಕುಂದಾಪ್ರ ಡಾಟ್ ಕಾಂ ವರದಿಕುಂದಾಪುರ: ಪಂಜರ ಮೀನು ಕೃಷಿಯಲ್ಲಿನ ನಷ್ಟದಿಂದ ಸಾವರಿಸಿಕೊಳ್ಳುವ ಹೊತ್ತಿಗೆ ಮತ್ತೆ ಪಂಚರ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಕಳೆದ ಮೂರು ದಿನದಿಂದ ಅಲ್ಲೊಂದು ಇಲ್ಲೊಂದು ಪಂಜರ ಮೀನು ಸಾಯುತ್ತಿದ್ದು ಭಾನುವಾರ ಸಾವುಗಳ ಸಂಖ್ಯೆ ದಿಢೀರಾಗಿ ಹೆಚ್ಚಿಗಿದ್ದು ಕೃಷಿಕರನ್ನು ಆತಂಕಕ್ಕೆ ನೂಕಿದೆ. ಕಳೆದ ಬಾರಿ ಬೈಂದೂರು ಹಾಗೂ ಕುಂದಾಪುರ ಪರಿಸರದಲ್ಲಿ ಮೀನುಗಳ ಸಾವಾಗಿದ್ದು ಈ ಬಾರಿ ಕುಂದಾಪುರದ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ಸಾವು ಹೆಚ್ಚಾಗಿ ಕಂಡುಬಂದಿದೆ. ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡಿದ್ದು ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜ ಮೀನು ಸಾಕಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಅಚಾನಕ್ ಸಾವುನಿಂದ ಕಂಗೆಟ್ಟಿದ್ದಾರೆ. ನಿಗೂಢವಾಗಿ ಸತ್ತ ಮೀನುಗಳ ಹೊಂಡ ತೆಗೆದು ಹೂಳುತ್ತಿದ್ದಾರೆ. ಕಲುಷಿತ ನೀರು ಮೀನು ಸಾವಿಗೆ ಕಾರಣ?ಪಂಜರದ ಮೀನು ಸಾವಿಗೆ ಕುಲಷಿತ ನೀರೇ ಕಾರಣ ಎಂದು ಕೃಷಿಕರು ಆರೋಪಿಸಿದ್ದಾರೆ. ಹೋಟೆಲ್, ಆಸ್ಪತ್ರೆ ಸಮುಚ್ಚಯದ ನೀರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕಾಸರಗೋಡು,ಅ.16: ಎಡನೀರು ಮಠದಲ್ಲಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ, ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ “ರಂಗಾಂತರಂಗ”ವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅನಾವರಣಗೊಳಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರ ಬಳಿ ಕೆಲ ಸಮಯ ಚೆಂಡೆ ಮದ್ದಳೆ ಕಲಿತ ಸಂದರ್ಭವನ್ನು ನೆನಪಿಸಿ, ವಿಜಯದಶಮಿಯ ಈ ಪರ್ವ ಕಾಲದಲ್ಲಿ ಪುಸ್ತಕ ಬಿಡುಗಡೆಗೊಂಡದ್ದು ಸುಯೋಗವೆಂದರು. ಲಕ್ಷ್ಮೀಶ ಅಮ್ಮಣ್ಣಾಯರ ಮಠದ ಜತೆಗಿನ ದೀರ್ಘ ಕಾಲಿಕ ಒಡನಾಟವನ್ನು ನೆನಪಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಲಕ್ಷ್ಮೀಶ ಅಮ್ಮಣ್ಣಾಯರ ಕಲಾಮೌಲ್ಯ ಮತ್ತು ಶಿಸ್ತು ಇವನ್ನು ಉಲ್ಲೇಖಿಸಿ ತಾನು ಹೃದಯತುಂಬಿ ಮುನ್ನುಡಿ ಬರೆದ ಪುಸ್ತಕಗಳಲ್ಲಿ ಇದೂ ಒಂದು ಎಂದರು. ವಿಶ್ವ ರಂಗಭೂಮಿಯ ದೃಷ್ಟಿಯಿಂದ ಯಕ್ಷಗಾನ ಕಲಾವಿದರ ಕುರಿತಾದ ಪುಸ್ತಕಗಳು ಇನ್ನಷ್ಟು ಬರಬೇಕು ಎಂದರು. ಸಮಾರಂಭದಲ್ಲಿ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ, ಗೀತಾ ಅಮ್ಮಣ್ಣಾಯ, ಭಾಗವತ ದಿನೇಶ ಅಮ್ಮಣ್ಣಾಯ, ಅರ್ಥಧಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆಶ್ರಮದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರತಿನಿತ್ಯ ಆಶ್ರಮದ ವಿದ್ಯಾರ್ಥಿಗಳಿಂದ ನಿತ್ಯೋಪಾಸನ ಮಂತ್ರಗಳೊಂದಿಗೆ ಗಣಪತ್ಯಧರ್ಮಶೀರ್ಷ, ದೇವಿಯ ವಿವಿಧ ಸ್ತುತಿಗಳು, ಲಲಿತ ಸಹಸ್ರನಾಮ, ಸಪ್ತಶತಿ ಪರಾಯಣ, ಉಪನಿಷತ್ ಪಠಣ, ದೇವಿ ಪಾರಾಯಣ, ಭಗವದ್ಗೀತೆ, ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲಿಸ್ ಇತ್ಯಾದಿ ಸ್ತೋತ್ರಗಳ ಪಠಣ ನಡೆಯಿತು. ದುರ್ಗಾಷ್ಟಮಿಯಂದು ವಿಶೇಷವಾಗಿ ಕುಮಾರಿ ದುರ್ಗಾ ಪೂಜೆ ನಡೆಯಿತು. ಮಾತೆಯರಾದ ಯಶೋಧಾ ಅಡಿಗ ವಂಡ್ಸೆ ಹಾಗೂ ನಾಗಶ್ರೀ ಮಧ್ಯಸ್ಥ ಕೋಟ ಕುಮಾರಿ ದುರ್ಗಾ ಪೂಜೆ ನೆರವೇರಿಸಿದರು. ಮಹಾನವಮಿಯಂದು ವಿದ್ಯಾರ್ಥಿಗಳಿಂದ ಚಂಡಿಕಾ ಪಾರಾಯಣದ ದೇವಿ ಸ್ತುತಿಗಳ ಸಾಮೂಹಿಕ ಪಠಣ, ವಿಜಯದಶಮಿಯಂದು ವಿದ್ಯಾ ಪ್ರಧಾನ, ದೆವಿ ಮಹಾತ್ಮೆಯ ಕಥನ ಪಠಣ ಜರುಗಿದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಜಡ್ಕಲ್ ಬೀಸಿನಪಾರೆಯ ಮೂಕಾಂಬಿಕಾ ಪ್ರೌಢಶಾಲೆಯುಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಅಭಿಯಾನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಮ್ಮ ಬಳಿ ಆಗೋದನ್ನ ನಾವೇ ಪರಿಹರಿಸುತ್ತೇವೆ, ಸಾಧ್ಯವಾಗದಿದ್ದರೆ ಸರಕಾರಕ್ಕೆ ಬರೆಯುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಅಹವಾಲುದಾರರಿಗೆ ಮನವಿ, ಸ್ಪಷ್ಟನೆಯ ಬಳಿಕ ಪ್ರತಿಕ್ರಿಯಿಸಿದ ಅವರು ವಿಕಲಚೇತನರ ಬಸ್‌ಪಾಸ್ ರಾಜ್ಯ ಹಾಗೂ ಖಾಸಗಿ ಬಸ್‌ಗಳಿಗೂ ವಿಸ್ತರಣೆ, ಅಂಗನವಾಡಿ ತೆರೆಯಲು ಅವಕಾಶವಿದ್ದರೆ ಸರಕಾರದ ಗಮನಕ್ಕೆ, ಜಡ್ಕಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಸರಕಾರಿ ಜಾಗ ಗುರುತಿಸಿದ್ದು ಗಡಿ ಗುರುತು ಮಾಡಲು ತಹಶಿಲ್ದಾರರಿಗೆ ಸೂಚನೆ, ನ್ಯಾಯಾಲದಲ್ಲಿರುವ ಜಾಗದ ವ್ಯಾಜ್ಯಗಳಿಗೆ ಅಭಿಯಾನದಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು. ವಿಕಲಚೇತನ ರಾಜು ಪೂಜಾರಿ ಅವರ ಬಸ್ ಪಾಸ್ ಕಿ.ಮೀ ವ್ಯಾಪ್ತಿ ವಿಸ್ತರಣೆ ಹಾಗೂ ಖಾಸಗಿ ಬಸ್ಸಿನಲ್ಲಿ ಕೂಡ ವಿಕಲಚೇತನರಿಗೆ ಬಸ್ ಪಾಸ್ ನೀಡಬೇಕು ಹಾಗೂ ಎಪಿಎಲ್ ಕಾರ್ಡುದಾರರಿಗೂ ಪಿಂಚಣಿ ದೊರೆಯಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಪಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜದಿಂದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ 35ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭದಲ್ಲಿ ಶುಕ್ರವಾರ ಶಾರದಾ ಪುರಮೆರವಣಿಗೆ ಶಾರದಾ ಮೂರ್ತಿಯ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ ಹಾಗೂ ಇನ್ನಿತರ ಕಲಾತಂಡಗಳು ಪುರಮೆರವಣಿಗೆಗೆ ಮೆರಗು ನೀಡಿದ್ದವು. ಈ ವೇಳೆ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಪಟ್ವಾಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದಡ್ಡು, ಗೌರವ ಅಧ್ಯಕ್ಷ ಗುರುರಾಜ ಹೋಬಳಿದಾರ್, ಕಾರ್ಯದರ್ಶಿ ರಾಘವೇಂದ್ರ ಎನ್. ತಗ್ಗರ್ಸೆ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವ ಜೊತೆಗೆ ಸರಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಹೇಳಿದರು. ಅವರು ಶನಿವಾರ ಜಡ್ಕಲ್ ಗ್ರಾಮದ ಬಿಸಿನಪಾರೆಯ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಸರಕಾರದ ಸೌಲಭ್ಯಗಳಿಂದ ವಂಚಿತರಾದ ವಿಕಲಚೇತನರು, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆ ಪರಿಹಾರಕ್ಕೆ ಈ ಅಭಿಯಾನದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಈ ಅಭಿಯಾನ ಕೋವಿಡ್ ಎರಡನೇ ಅಲೆಯ ಬಳಿಕ ಮತ್ತೆ ಜಡ್ಕಲ್ ಗ್ರಾಮದಿಂದ ಆರಂಭಗೊಳ್ಳುತ್ತಿದ್ದು, ಕಂದಾಯ ಇಲಾಖೆಯ ಸಮಸ್ಯೆಗಳು, ಕೃಷಿ ಸಂಬಂಧಿತ ಯೋಜನೆಗಳ ಮಾಹಿತಿ ಸೇರಿದಂತೆ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಾಗುತ್ತದೆ ಎಂದರು. ಜಡ್ಕಲ್ ಗ್ರಾಮ ಜಿಲ್ಲಾ ಕೇಂದ್ರದಿಂದ ದೂರವಿರುವುದರಿಂದ ಈ ಗ್ರಾಮ ಆಯ್ದುಕೊಳ್ಳಲಾಗಿದೆ ಜೊತೆಗೆ ಜಡ್ಕಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಒಂದು ದಶಕದಿಂದ ಜನಮನ ರಂಜಿಸಿದ ಇನಿದನಿ ಕಾರ್ಯಕ್ರಮ ಜನವರಿ 9ಕ್ಕೆ ನಿಗದಿಯಾಗಿದೆ. ಕಲಾಕ್ಷೇತ್ರ-ಕುಂದಾಪುರ ಕಛೇರಿಯಲ್ಲಿ ಇನಿದನಿ ದಿನಾಂಕ ನಿಗದಿ ಪಡಿಸಿದ ಗಣ್ಯರು ಕಾರ್ಯಕ್ರಮದ ತಯಾರಿಗೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಕುಂದಾಪುರ ಹಲವು ಪ್ರಥಮಗಳಿಗೆ ಕಾರಣವಾದ ಇತಿಹಾಸವಿದೆ. ಅದಕ್ಕೆ ಇನಿದನಿಯೂ ಸೇರ್ಪಡೆಯಾಗಿದೆ. ಅಷ್ಟೊಂದು ಸಂಖ್ಯೆಯಲ್ಲಿ ಸಂಗೀತ ಕಲಾಸಕ್ತರು 4-5 ಗಂಟೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಅಂತಾದರೆ ಅದರ ಸೆಳೆತಕ್ಕೆ ಇನಿದನಿಯ ಗುಣಮಟ್ಟವೇ ಕಾರಣವಾಗಿದೆ. ಹಾಗಾಗಿ ಇನಿದನಿ ಪ್ರಸ್ತುತಿ ಮಾಡುವ ಕಲಾಕ್ಷೇತ್ರ-ಕುಂದಾಪುರ, ಕುಂದಾಪುರಕ್ಕೊಂದು ಹೆಮ್ಮೆಯ ಸಂಸ್ಥೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಡಾ. ಆದರ್ಶ ಹೆಬ್ಬಾರ್ ಮಾತನಾಡುತ್ತಾ ನಾನು ವೃತ್ತಿಯಲ್ಲಿ ವೈದ್ಯ, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಸನ್ನಿವೇಶಗಳು ಬಹಳಷ್ಟು ಇರುತ್ತದೆ. ಆಗ ನಮ್ಮ ಮನಸ್ಸಿಗೆ ಮುದ ನೀಡುವ, ಒತ್ತಡವನ್ನು ನಿವಾರಿಸುವ ಎಕೈಕ ಔಷಧಿ ಎಂದರೆ ಅದು ಸಂಗೀತ. ಅದೆಷ್ಟೋ ಬಾರಿ ಇನಿದನಿ ನೋಡಬೇಕೆಂದು ಆಗಮಿಸಿದಾಗಲೆಲ್ಲ ಕೂರಲು ಸ್ಥಳಾವಕಾಶವಿಲ್ಲದೆ ನಿಂತುಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಂದೂ ಧರ್ಮೀಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ ಎಂಬ ಆರೋಪದಡಿ ನ್ಯಾಯಾಂಗ ಬಂಧಿತರಾಗಿದ್ದ ಕುಂದಾಪುರ ಹಳ್ಳಾಡಿ- ಹರ್ಕಾಡಿ ನಿವಾಸಿಗಳಾದ ಜ್ಯೋತಿ ಪ್ರಕಾಶ್, ರವಿ ಮನೋಹರ್, ಪ್ರಕಾಶ್ ಕುಂದರ್ ಅವರಿಗೆ ಪ್ರಥಮ ದರ್ಜೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಬ್ರಹ್ಮಾವರ ಸ್ಯಾಬರಕಟ್ಟೆ ನಿವಾಸಿ ಆನಂದ (36) ಅವರು ಆರೋಪಿಗಳು ಎರಡು ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಮತಾಂತರ ಮಾಡಲು ಪ್ರಯತ್ನಪಟ್ಟಿದ್ದರು ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಕೀಲರು ರಾಜಕೀಯ ದುರುದ್ದೇಶದಿಂದ ಆರೋಪಿಗಳ ಮೇಲೆ ಸುಳ್ಳು ದೂರು ದಾಖಲಾಗಿದೆ ಎಂದು ವಾದ ಮಂಡಿಸಿದ್ದರು. ಆರೋಪಿಗಳ ಪರ ಉಡುಪಿ ಯುವ ನ್ಯಾಯವಾದಿಗಳಾದ ಅಸದುಲ್ಲಾ ಕಟಪಾಡಿ, ಪ್ರದೀಪ್ ಪಿ.ಜೆ ಮತ್ತು ಆದಿತ್ಯ ಬೈಲೂರು ವಾದಿಸಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕಳೆದ ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗುಡುಗು ಸಹಿತ ಮಳೆ ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ವಾರದ ಮೊದಲು ಅಚಾನಕ್ ಉಂಟಾಗಿದ್ದ ಬಿರುಗಾಳಿ ಅಬ್ಬರಕ್ಕೆ ತಲ್ಲಣಗೊಂಡಿದ್ದ ರೈತರು ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಉತ್ತಮ ಮುಂಗಾರು ಹಿನ್ನಲೆಯಲ್ಲಿ ಈ ಭಾರಿ ಉತ್ತಮ ಫಸಲಿದೆ. ಕರಾವಳಿಯಲ್ಲಿ ಕಟಾವಿಗೆ ರೈತರು ಅಣಿಯಾಗುತ್ತಿರುವಾಗಲೇ ಮಳೆ ಆರಂಭಗೊಡಿದೆ. ಮಲೆನಾಡು ಪ್ರಾಂತ್ಯದಲ್ಲಿಯೂ ರೈತರು ಮನೆಯಂಗಳ ಸಜ್ಚುಗೊಳಿಸುವ ತಯಾರಿಯಲ್ಲಿದ್ದಾರೆ. 14 ಸಾವಿರ ಹೆಕ್ಟೇರ್ ಭತ್ತ ಕೃಷಿ:ಕುಂದಾಪುರ ತಾಲೂಕಿನಲ್ಲಿ 202-21ನೇ ಸಾಲಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಕೃಷಿಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 500 ಹೆಕ್ಟೇರ್ ಹೆಚ್ಚುವರಿ ಮುಂಘಾರು ಕೃಷಿ ಆಗಿದೆ. ವರಾಹಿ ನೀರಿನ ಲಭ್ಯತೆ ಹಿನ್ನಲೆಯಲ್ಲಿ ಮಲೆನಡು, ನಡುಬಯಲು ಭಾಗದಲ್ಲಿಯೂ ಹಡಿಲು ಬಿದ್ದ ಭೂಮಿಯಲ್ಲೂ ಭತ್ತ ಚಿಗುರಿದೆ. ಹದವಾದ ಮಳೇಯ ದೆಸೆಯಿಂದ ಸಸಿಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದು ತೆನೆಯ ಗೊಂಚಲು ಸಮೃದ್ದತೆಯಿಂದ ಕೂಡಿದೆ. ಬೆಳೆದು ನಿಂತ ಪೈರು ಮಳೆ ನೀರಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ತರುಣ ಕಲಾವೃಂದ ರಿ. ಇದರ ನೂತನ ಅಧ್ಯಕ್ಷರಾಗಿ ರವೀಂದ್ರ ಜಿ. (ರಾಮಕೃಪಾ) ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೊ.ಶಿವಾನಂದ ಕಾರಂತ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳಿಗೆ ಕಲಾವೃಂದದ ಸದಸ್ಯರು ಶುಭಾಶಯ ಕೋರಿದ್ದಾರೆ.
