ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇಂಡಿಯಾ ಟುಡೇ ನಿಯತಕಾಲಿಕೆಯ 2022ನೇ ಸಾಲಿನ ಎಂಡಿಆರ್‌ಎ ಸಮೀಕ್ಷೆ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜಿನ ವಿವಿಧ ವಿಭಾಗಗಳು ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಶ್ರೇಣಿಗಳನ್ನು ಪಡೆದುಕೊಂಡಿವೆ. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗಕ್ಕೆ 37ನೇ ರ‍್ಯಾಂಕ್, ಪದವಿ ವಿಜ್ಞಾನ ವಿಭಾಗಕ್ಕೆ 122ನೇ ರ‍್ಯಾಂಕ್, ಕಲಾ ವಿಭಾಗಕ್ಕೆ 123, ಬಿಸಿಎ 135, ಬಿಬಿಎ 147 ಹಾಗೂ ವಾಣಿಜ್ಯ ವಿಭಾಗವು 175ನೇ ರ‍್ಯಾಂಕ್ ಪಡೆದುಕೊಂಡಿವೆ. ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಕಲಿಕೆಗೆ ಅಗತ್ಯವಿರುವ ಸೌಕರ್ಯಗಳು , ಸ್ವೀಕೃತ ಅರ್ಜಿಗಳ ಗುಣಮಟ್ಟ, ಉದ್ಯೋಗ ಭದ್ರತೆ, ವ್ಯಕ್ತಿತ್ವ ಹಾಗೂ ನಾಯಕತ್ವ ಕೌಶಲ್ಯ ಹಾಗೂ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ಗುರುತಿಸಿ ಈ ಶ್ರೇಣಿಗಳನ್ನು ನೀಡಲಾಗುತ್ತದೆ. ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಟಗರಿಯಲ್ಲಿ ಅಖಿಲ ಭಾರತ ಮಟ್ಟದ ಟಾಪ್ ಕಾಲೇಜುಗಳಲ್ಲಿ 10ನೇ ರ‍್ಯಾಂಕ್ ಗಳಿಸಿದೆ. ಕಳೆದ ಬಾರಿಯ ಆಲ್ ಇಂಡಿಯಾ ರ‍್ಯಾಂಕಿAಗ್‌ನಲ್ಲಿ ಪತ್ರಿಕೋದ್ಯಮ ವಿಭಾಗಕ್ಕೆ 40ನೇ ರ‍್ಯಾಂಕ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಜು.12: ಕಡಿಮೆ ವೆಚ್ಚ, ನಿರ್ವಹಣೆ, ಮಾನವ ಶ್ರಮ ಹಾಗೂ ವಿದ್ಯುಚ್ಚಕ್ತಿ ಇದ್ಯಾವುದರ ಅಗತ್ಯವೂ ಇಲ್ಲದೇ, ಪರಿಸರಕ್ಕೂ ಪೂರಕವಾಗಿ ಕಾರ್ಯನಿರ್ವಹಿಸಬಲ್ಲ ಯಶಸ್ವಿ ಜೈವಿಕ ತಂತ್ರಜ್ಞಾನ ಮ್ಯಾಕ್ ಬಯೋ ಡೈಜಿಸ್ಟರ್ (MAK Bio – Digester) ಸೆಫ್ಟಿಕ್ ಟ್ಯಾಂಕ್/ಎಸ್.ಟಿ.ಪಿ ಕರ್ನಾಟಕದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹಾಲ್ಕಲ್ ಸದಾನಂದ ಹಾಲ್‌ನಲ್ಲಿ ಉತ್ಪಾದನಾ ಸಂಸ್ಥೆ ಮ್ಯಾಕ್ ಇಂಡಿಯಾ (MAK India Limited) ಹಾಗೂ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ಮೇಡ್ ಇನ್ ಇಂಡಿಯಾ ಎಂಐಐ (Made in India MII Pvt. Ltd) ಪ್ರತಿನಿಧಿಗಳ ಸಮ್ಮುಖದಲ್ಲಿ ಸೋಮವಾರ ಲಾಂಚ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮ್ಯಾಕ್ ಇಂಡಿಯಾ ಲಿಮಿಟೆಡ್ ಸಂಸ್ಥಾಪಕರಾದ ಮಾಣಿಕಂ ಅತ್ತಪ್ಪ ಗೌಂಡರ್, ಸಂಸ್ಥೆಯ ಹಿರಿಯ ವಿಜ್ಞಾನಿ ಶಿವಕುಮಾರ್ ರಾಮನ್, ಮೇಡ್ ಇನ್ ಇಂಡಿಯಾ ಸಂಸ್ಥೆಯ ಪ್ರಮುಖರಾದ ಕೆ. ವೆಂಕಟೇಶ ಕಿಣಿ, ರಾಜೀವ್ ಕುಮಾರ್ ಉಪಸ್ಥಿತರಿದ್ದರು. ಕರ್ನಾಟಕದಲ್ಲಿ ಮೊದಲ ಭಾರಿಗೆ ಬೈಂದೂರು ಪ್ಯಾಲೇಸ್ ಹಾಗೂ ದೇವಿ ಮೂಕಾಂಬಿ ಅಪಾರ್ಟ್‌ಮೆಂಟ್‌ಗಳಿಗೆ ಈ ಯೋಜನೆಯನ್ನ ಅಳವಡಿಸಲಾಗುತ್ತಿದೆ. ಬಯೋ ಡೈಜಿಸ್ಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದದ ಮೂಡುಗಣಪತಿ ದೇವಸ್ಥಾನದ ಬಳಿಯ ಮೊಬೈಲ್ ಜೋನ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಮೂರು ದಿನದಲ್ಲಿ ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮುರುಡೇಶ್ವರ ಮಾವಳ್ಳಿಯ ನಿವಾಸಿಗಳಾದ ಮೊಹಮ್ಮದ್ ಇಫ್ಜಲ್ (27), ಮಹಮ್ಮದ್ ಅಸೀಮ್ ಡೊನ್ನಾ (20), ಮಹಮ್ಮದ್ ರಫಿ (21) ಹಾಗೂ ಭಟ್ಕಳದ ಮೊಹಮ್ಮದ್ ರಾಹಿಕ್ (22) ಬಂಧಿತ ಆರೋಪಿಗಳು. ಉಪ್ಪುಂದ ಅಂಬಾಗಿಲುವಿನಲ್ಲಿರುವ ಮೊಬೈಲ್ ಜೋನ್ ಎಂಬ ಅಂಗಡಿಯಲ್ಲಿ ಜುಲೈ 5ರ ರಾತ್ರಿ ಅಂಗಡಿಯ ಶೆಟರ್ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಅಂಗಡಿಯಲ್ಲಿದ್ದ 3500 ರೂ. ನಗದು, 25 ಸಾವಿರ ರೂ. ಬೆಲೆಬಾಳುವ 17 ಕೀ ಪ್ಯಾಡ್ ಮೊಬೈಲ್ ಪೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್ ಗೆ ಉಪಯೋಗಿಸುವ ಪವರ್ ಬ್ಯಾಂಕ್ ಹಾಗೂ ಬ್ಲೂಟೂತ್ ಕಳವುಗೈದಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33,500 ರೂ. ಆಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಡವರ ಡಾಕ್ಜರ್ ಎಂದೇ ತಾಲೂಕಲ್ಲಿ ಪ್ರಸಿದ್ದರಾಗಿದ್ದ ಜನಾನುರಾಗಿ ಹಂಗಳೂರಿನ ವೈದ್ಯ ಡಾ. ಎ.ಎಸ್. ಕಲ್ಕೂರು (87) ಅಂಕದಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾದರು. ಡಾ.ಕಲ್ಕೂರ ಕಾಲೇಜ್ ವಿದ್ಯಾಭ್ಯಾಸದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಮಸಿಸ್ಟಾಗಿ ವೃತ್ತಿಜೀವನ ಆರಂಭಿಸಿದರು. ವೈದ್ಯರಾಗಿ ಸೇವೆ ಮುಂದುವರಿಸಿ ನಂತರ ಕೆಲಸಕ್ಕೆ ರಾಜಿನಾಮೆ ನೋಡಿ ಕುಂದಾಪುರ ಮುಖ್ಯರಸ್ತೆಯಲ್ಲಿ ಕ್ಲಿನಿಕ್ ತೆರೆದು ವೈದ್ಯ ವೃತ್ತಿ ಆರಂಭಿಸಿದರು. 53 ವರ್ಷ ಕುಂದಾಪುರಲ್ಲಿ ವೈದ್ಯವೃತ್ತಿ ನಂತರ ವಯಸ್ಸಿನ ಹಿನ್ನೆಲೆಯಲ್ಲಿ ಕ್ಲಿನಿಕ್ ಬಂದ ಮಾಡಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಇವರು ಕನಿಷ್ಟ 5 ಹಾಗೂ ಗರಿಷ್ಟ 30 ರೂ.ಗಿಂತ ಹೆಚ್ಚಿಗೆ ಶುಲ್ಕ ತೆಗೆದುಕೊಂಡ ದಾಖಲೆಯೇ ಇಲ್ಲ. ಕುಂದಾಪುರದಲ್ಲಿ ಕಡಿಮೆ ಆಸ್ಪತ್ರೆ ವೈದ್ಯರಿದ್ದ ಕಾಲದಲ್ಲಿ ಕೇವಲ ಮಾತ್ರೆ, ಶಿರಪ್ ಮೂಲಕ ನೂರಾರು ಜನರ ಪ್ರಾಣ ಉಳಿಸಿದ್ದು, ಏನಾದರು ಅನಾರೋಗ್ಯ ಕಾಣಿಸಿಕೊಂಡರೆ ಕಲ್ಕೂರು ಡಾಕ್ಟರ್ ಹತ್ರ ಹೋದ್ರೆ ಗುಣ ಮಾಡ್ತ್ರು ಎನ್ನುವಷ್ಟು ಪ್ರಸಿದ್ದರಾಗಿದ್ದರು. ನಾಟಕ ಕಲಾವಿದರು, ಯಕ್ಷಗಾನ ಪ್ರೇಮಿಯಾಗಿದ್ದು, ಸಾಹಿತ್ಯ ಸಂಗೀತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.8: ಜಿಲ್ಲೆಯಲ್ಲಿ ಜುಲೈ 1ರಿಂದ ಈತನಕ ಇದುವರೆಗೆ 832 ಮಿಮಿ ಮಳೆಯಾಗಿದೆ. ಪ್ರತಿವರ್ಷ ವಾಡಿಕೆ ಮಳೆ 367 ಮಿಮಿ ಇರುತ್ತಿತ್ತು. ಜು.7ರಂದು 127.8 ಮಿ.ಮೀ .ಮಳೆಯಾಗಿದ್ದು, ಕುಂದಾಪುರ – 109.3 ಮಿ.ಮೀ, ಬೈಂದೂರು – 126.1 ಮಿ.ಮೀ, ಹೆಬ್ರಿ – 136.2 ಮಿ .ಮೀ , ಉಡುಪಿ – 78.3, ಬ್ರಹ್ಮಾವರ – 81.5, ಕಾಪು – 65.3, ಕಾರ್ಕಳ – 120.4 ಮಿ.ಮೀ ಮಳೆಯಾಗಿದೆ. ಅತಿವೃಷ್ಟಿಗೆ ಒಟ್ಟು ಅಂದಾಜು 24.73 ಕೋಟಿಯಷ್ಟು ನಷ್ಟವಾಗಿದೆ. ಅತಿವೃಷ್ಟಿಯಿಂದಾಗಿ 250 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಲೋಮೀಟರ್, ಗ್ರಾಮೀಣ ಭಾಗದ 685 ಕಿಲೋಮೀಟರಿನಷ್ಟು ರಸ್ತೆ, ಜಿಲ್ಲಾ ಹಾಗೂ ರಾಜ್ಯಮಟ್ಟದ 7.5 ಕಿಮೀ ಮುಖ್ಯ ರಸ್ತೆ ಹಾಳಾಗಿದ್ದು, 13 ಸೇತುವೆಗಳು ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 1515 ವಿದ್ಯುಚ್ಛಕ್ತಿ ಕಂಬಗಳು ಬಿದ್ದುಹೋಗಿವೆ, 47 ಕಿಲೋಮೀಟರ್ ರಷ್ಟು ವಿದ್ಯುತ್ ತಂತಿಗಳು ಹಾಳಾಗಿದ್ದು, 64 ಮನೆಗಳಿಗೆ ಭಾಗಶಃ ಹಾನಿಯಾಗಿ ಒಟ್ಟು ಅಂದಾಜು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.8: ಜಿಲ್ಲೆಯಲ್ಲಿ ಜುಲೈ 10 ರಂದು ಆಚರಿಸಲಾಗುವ ಬಕ್ರೀದ್ ಹಬ್ಬ ಆಚರಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆಯಡಿ ವಿವಿಧ ತಂಡಗಳನ್ನು ರಚಿಸಿ, ಕಣ್ಗಾವಲು ಇರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದ್ದಾರೆ. ಅವರು ಇಂದು ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ, ಬಕ್ರೀದ್ ಹಬ್ಬ ಆಚರಣೆ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ರಚಿಸಿರುವ ಜಿಲ್ಲಾ ಸಮಿತಿಯೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಾದ್ಯಂತ ಇರುವ ಚೆಕ್ ಪೋಸ್ಟ್ಗಳಲ್ಲಿ ಅನಧಿಕೃತವಾಗಿ ಜಾನುವಾರುಗಳು ಸಾಗಾಣಿಕೆ ಆಗದಂತೆ ನಿಗಾ ಇರಿಸುವಂತೆ ಸೂಚಿಸಿದ ಅವರು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಿದರು. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಲ್ಲಿ ಅವುಗಳ ರಕ್ಷಣೆಗಾಗಿ ಗುರುತಿಸಿದ ಗೋಶಾಲೆಗಳಲ್ಲಿ ಸಂರಕ್ಷಣೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಗೋಹತ್ಯೆ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೋಲೀಸ್ ಠಾಣೆ ಅಧಿಕಾರಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.8: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಮತ್ತು 169ಎ ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿರುವ ಎಲ್ಲಾ ರಸ್ತೆ ಮೂಲಭೂತ ಸಮಸ್ಯೆಗಳನ್ನು ಹತ್ತು ದಿನಗಳ ಒಳಗೆ ಸಂಪೂರ್ಣವಾಗಿ ಬಗೆಹರಿಸಿ, ಈ ಕುರಿತು ಪೂರ್ಣ ವರದಿಯನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತ ಸೂಚಿಸುವ ಸಭೆಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೂ ಸಹ ಗೈರು ಹಾಜರಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮತ್ತು ಇತರೆ ಕಾರ್ಯಗಳನ್ನು ಸುಗಮವಾಗಿ ಮಾಡಲು ಜಿಲ್ಲಾಡಳಿತದ ನೆರವು ಬೇಕಿದ್ದಲ್ಲಿ, ಜಿಲ್ಲಾಡಳಿತ ನೀಡುವ ಎಲ್ಲಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಕುರಿತು ನೀಡಿರುವ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯುಗಪುರುಷ ಪತ್ರಿಕೆಯ ಸಂಸ್ಥಾಪಕ ಕೊಡತ್ತೂರು ಅನಂತಪದ್ಮನಾಭ ಉಡುಪರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಕೊ. ಅ. ಉಡುಪ ಪ್ರಶಸ್ತಿಗೆ ಈ ಬಾರಿ ಕವಿ ಸಾಹಿತಿ ಚಿಂತಕ ಡಾ. ವಸಂತಕುಮಾರ ಪೆರ್ಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಪ್ರಕಾಶಕ – ಸಂಪಾದಕ ಕೆ. ಭುವನಾಭಿರಾಮ ಉಡುಪ ತಿಳಿಸಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಫಲಕ, ಪ್ರಶಸ್ತಿಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಇದೇ ತಿಂಗಳ 24 ರಂದು ಕಿನ್ನಿಗೋಳಿಯಲ್ಲಿ ಜರಗಲಿರುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಉಡುಪರು ತಿಳಿಸಿದರು. ಪ್ರತಿಭಾವಂತ ಕವಿಯಾಗಿ, ಸಾಹಿತಿಯಾಗಿ ಚಿಂತಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯದ ಜೊತೆಗೆ ಪತ್ರಿಕೆ, ರೇಡಿಯೋ, ಟಿ. ವಿ. ಮುಂತಾದ ಸಮೂಹ ಮಾಧ್ಯಮಗಳಲ್ಲಿ ಹಾಗೂ ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲೂ ಪರಿಣಿತರು. ಒಳ್ಳೆಯ ವಾಗ್ಮಿ ಮತ್ತು ವಿದ್ವಾಂಸರೆಂದು ಗುರುತಿಸಲ್ಪಟ್ಟವರು. ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿರುವ ಡಾ. ಪೆರ್ಲರ ಕವನಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪೋಷಕರ ಮತ್ತು ವಿದ್ಯಾರ್ಥಿಗಳ ಅಭಿರುಚಿ ವಿಭಿನ್ನವಾದರೂ ಸಹ ಸದ್ಯ ವಿದ್ಯಾರ್ಥಿಗಳ ಅಭಿರುಚಿಗೆ ಪ್ರೋತ್ಸಾಹ ದೊರೆಯಬೇಕು. ಹುಟ್ಟೂರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದಎರಡು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ಕಾರ್ಯಕ್ಕೆ ಮುಂದಾಗಿದ್ದು, ಇದು ಲಾಭಕ್ಕಾಗಿ ಮಾಡಿದ ವ್ಯವಹಾರವಲ್ಲ. ಈ ಸತ್ಕಾರ್ಯದಿಂದ ಹೃದಯ ತುಂಬಿದೆ. ನಮ್ಮ ಎರಡೂ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮಕ್ಕಳ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು ಎಂಬ ನೆಲೆಯಲ್ಲಿ ನಮ್ಮ ಸಂಸ್ಥೆಗೆ ನೂತನ ಹದಿನೈದು ಬಸ್‌ಗಳನ್ನು ಖರೀದಿಸಲಾಗಿದೆ. ಇದು ಈ ಎರಡೂ ಶಾಲೆಗಳನ್ನು ಟ್ರಸ್ಟಿನ ಸುಪರ್ದಿಯಲ್ಲಿ ತೆಗೆದುಕೊಂಡ ಮೊದಲ ದಿನದ ಯೋಚನೆಯಾಗಿತ್ತು ಎಂದು ಯುಬಿಎಸ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಯು.ಬಿ. ಶೆಟ್ಟಿ ಹೇಳಿದರು. ಇಲ್ಲಿನ ಯುಬಿಎಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಗುರುವಾರ ಟಾಟಾ ಸಂಸ್ಥೆಯ ನೂತನ ಐದು ಶಾಲಾ ಬಸ್‌ಗಳನ್ನು ಲೋಕಾರ್ಪಣೆ ಮಾತನಾಡಿದರು. ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆಯಾಗಬೇಕು ಎಂಬ ನಿಟ್ಟಿನಲ್ಲಿ ವಾಹನವನ್ನು ಖರೀದಿಸಲಾಗಿದೆ. ಮುಂದಿನ ದಿನದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿಯಿಂದ ರಚನಾತ್ಮಕ ಕೆಲಸಗಳ ಜೊತೆಗೆ ನೆಲ, ಜಲ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ಆಗಬೇಕಿದ್ದು, ಪ್ರತಿಯೋರ್ವ ರೋಟರಿ ಸದಸ್ಯರು ಇದರೊಂದಿಗೆ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲೆ 3182 ಝೋನ್-1 ಇದರ ಸಹಾಯಕ ಗವರ್ನರ್ ಡಾ. ಉಮೇಶ್ ಪುತ್ರನ್ ಹೇಳಿದರು. ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಬುಧವಾರ ಕ್ಲಬ್‌ನ ಈ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಚ್. ಉದಯ ಆಚಾರ್ ಅವರಿಗೆ ರೋಟರ್ ಕಾಲರ್ ಹಸ್ತಾಂತರಿಸಿ ಮಾತನಾಡಿದರು. ರೋಟರಿ ಜಿಲ್ಲೆ 3182ನಿಂದ ಪ್ರಸಕ್ತ ಸಾಲಿನಲ್ಲಿ ಕಲಿಕಾ ಸಾಮರ್ಥ ನ್ಯೂನ್ಯತೆ ಇರುವ ಮಕ್ಕಳ ಅಭ್ಯುದಯಕ್ಕೆ ಸಂಬಂಧಿಸಿದ ಯೋಜನೆಗಳು, ಅಂಗಾಂಗ ಹಾಗೂ ಚರ್ಮ ದಾನ, ಸ್ತ್ರೀ ಸಬಲೀಕರಣ, ಇಲೆಕ್ಟ್ರಾನಿಕ್ಸ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಕಾರ್ಯನಿರ್ವಹಿಸಲಾಗುತ್ತದೆ ಎಂದ ಅವರು ಸೇವಾಕಾಂಕ್ಷಿ ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢಿಕರಿಸಿ ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನ ಗುರುತಿಸುತ್ತಾರೆ. ಒಬ್ಬರಿಂದಾಗದ ಕೆಲಸ ಸಂಸ್ಥೆಯ ಮೂಲಕ ಮಾಡಬಹುದು. ಹೀಗಾಗಿ ಎಲ್ಲರ…
