Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪೋಷಕ ಶಿಕ್ಷಕರ ಸಭೆಯು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಂದಾಪುರ ಪೋಲಿಸ್ ಸಬ್ ಇನ್ಸಪೆಕ್ಟರ್‌ಯಾದ ನಂಜಾ ನಾಯ್ಕ್ ಎನ್., ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, 9ನೇ ತರಗತಿ ಪರೀಕ್ಷಾ ತಯಾರಿಯಲ್ಲಿ ಪೋಷಕರ ಪಾತ್ರ ಹಾಗೂ ಮೊಬೈಲ್ ಫೋನಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರು ತಮ್ಮ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಹರಿಸಿ, ತಾವೇ ಅವರಿಗೆ ಮಾದರಿಯಾಗಿದ್ದು, ಅವರನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ ಹಾಗೂ ಉಪಪ್ರಾಂಶುಪಾಲರಾದ ಸುಜಯ್ ಕೋಟೆಗಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ನೇತ್ರಾವತಿ ನಿರೂಪಿಸಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬೈಂದೂರು ಅಭಿವೃದ್ಧಿಯಲ್ಲಿ ಹೊಸಾಡು ಸುಬ್ರಾಯ ಶೇರುಗಾರ್ ಅವರ ಕೊಡುಗೆ ಅಪಾರ ಎಂದು ಮಾಜಿ ಸಚಿವ ಜೆ. ಕೃಷ್ಣ ಪಾಲೇಮರ್ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಜೈಸಿರಿ-2026ರ ಪ್ರಯುಕ್ತ ಆಯೋಜಿಸಿದ ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಕರಣೆಯ ಸಾಂಸ್ಕೃತಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲೆ ಮತ್ತು ಸಾಹಿತ್ಯಕ್ಕೆ ಉಡುಪಿ ಜಿಲ್ಲೆ ದೇಶದಲ್ಲಿಯೇ ಖ್ಯಾತಿ ವಡೆದಿದ್ದು, ಈ ಜಿಲ್ಲೆಯು ಅನೇಕ ಪ್ರತಿಭಾವಂತರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ. ಬೈಂದೂರಿನ ಸುರಭಿ ಕೂಡ ತನ್ನದೇ ಆದ ಸಮಾನ ಲೋಕಕಟ್ಟಿಕೊಂಡು ವಿಶೇಷವಾಗಿ ಈ ಭಾಗದ ಮಕ್ಕಳಿಗೆ ಬಾಲ್ಯದಿಂದಲೇ ಸಾಂಸ್ಕೃತಿಕವಾಗಿ ಬೆಳೆಸುತ್ತಿರುವುದು ಎಂದರು. ಹೃದ್ರೋಗ ತಜ್ಞ ಡಾ. ಎಚ್. ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ನೃತ್ಯಗುರು ನಟರಾಜ ಗಂಗೊಳ್ಳಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಡಾ. ಶಿವರಾಮ ಕಾರಂತ ಬಾಲ ಪ್ರಶಸ್ತಿ ಪುರಸ್ಕೃತೆ ತ್ರೀಷಾ ಅವರನ್ನು ಗೌರವಿಸಲಾಯಿತು. ಸೇವಾ ಸಂಗಮ ಶಿಶುಮಂದಿರ ಅಧ್ಯಕ್ಷ ಮಂಜುನಾಥ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ದೂರದರ್ಶನ ಚಂದನದ ಉದಯ ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ರಾಮ ಬಿಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ಬೈಂದೂರು ಪ್ರವಾಸಿ ಬಂಗಲೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿಜಯವಾಣಿಯ ನರಸಿಂಹ ನಾಯಕ್, ಕೋಶಾಧಿಕಾರಿಯಾಗಿ ಉದಯವಾಣಿಯ ಕೃಷ್ಣ ಬಿಜೂರು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ವಿಫೋರ್ ನ್ಯೂಸ್‌ನ ಜಯಪ್ರಕಾಶ್ ವಿ. ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಯಡಾಡಿ-ಮತ್ಯಾಡಿಯಲ್ಲಿ ನಡೆದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಸ್ಮರಣ ಶಕ್ತಿಯ ತಂತ್ರಗಳುಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜೆ.ಸಿ.ಐ. ತರಬೇತುದಾರರು ಹಾಗೂ ಶಿಕ್ಷಕರಾದ ಅಶೋಕ್ ತೆಕ್ಕಟ್ಟೆ ಅವರು ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸ್ಮರಣ ಶಕ್ತಿಯ ವಿವಿಧ ತಂತ್ರಗಳನ್ನು ಮನವರಿಕೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್‌ಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ವಿಘ್ನೇಶ್ವರ ಅಡಿಗ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ ಜಪ್ತಿ, ಸಾಕು ಜಪ್ತಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಸವಿತಾ, ರಾಧಾ, ಚೈತ್ರ ಹುಣ್ಸೆಮಕ್ಕಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕಿ ಸಿಂಚನ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.  

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮುಂದಿನ ಪೀಳಿಗೆಗೆ ನಾವು ಪರಿಶುದ್ಧ ಪ್ರಕೃತಿಯನ್ನು ಬಿಟ್ಟುಹೋಗಬೇಕು. ಅಂತಹ ಮಹಾನ್‌ ಕಾರ್ಯವನ್ನು ಮುನಿಯಾಲು ಸಂಜೀವಿನಿ ಗೊಧಾಮದ ಮೂಲಕ ರಾಮಕೃಷ್ಣ ಆಚಾರ್ಯರು ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮಠದ  ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು. ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಶುಕ್ರವಾರ ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿಯನ್ನು ಪ್ರದಾನ ಸಡಗರದಲ್ಲಿ ಆಶೀರ್ವಚನ ನೀಡಿದರು. ಕೃಷಿಯಿಂದಲೇ ದೇಶದ ಭವ್ಯ ಬೆಳವಣಿಗೆ ಸಾಧ್ಯವಿದೆ. ಅದು ಮುಂದಿನ ಅನಿವಾರ್ಯ ಕೂಡ ಆಗಲಿದೆ, ಅಂತಹ ಮಹಾನ್‌ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು, ಪ್ರಕೃತಿ ನಾಶ ಮಾಡಿದರೆ, ಮನುಷ್ಯ ನಾಶವಾದಂತೆ. ಪ್ರಕೃತಿ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರ್ಥ. ಪ್ರಕೃತಿಯನ್ನು ನಾಶ ಮಾಡಿ ಬೆಳವಣಿಗೆ ಎನ್ನುವುದು ಹುಚ್ಚುತನ. ನಮ್ಮ ಕ್ಷಣಿಕ ಸಂತೋಷಕ್ಕೆ ಮುಂದಿನ ಪೀಳಿಗೆಗೆ ನಾವೇನು ಕೊಡುಗೆ ನೀಡುತ್ತೇವೆ. ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಈ ಶುದ್ಧವಾಗಿರಬೇಕು. ಗೋಧಾಮದಲ್ಲಿ ಕೃಷಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಾಪುರ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಯು ಚಾನೆಲ್ ನ ನಾಗರಾಜ ರಾಯಪ್ಪನಮಠ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಅಸ್ಟ್ರೋ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕುಂದಾಪುರದ ಕೋಯ ಕುಟ್ಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಉದಯವಾಣಿಯ ಸತೀಶ್ ಆಚಾರ್ ಮತ್ತು ಕುಂದ ಪ್ರಭದ ಸಂತೋಷ್ ಕುಂದೇಶ್ವರ, ಕೋಶಾಧಿಕಾರಿಯಾಗಿ ಕನ್ನಡ ಪ್ರಭಾದ ಶ್ರೀಕಾಂತ್ ಹೆಮ್ಮಾಡಿ, ಕಾರ್ಯದರ್ಶಿಗಳಾಗಿ ವಿಜಯವಾಣಿಯ ಮಂಜುನಾಥ ಶೆಣೈ ಜನ್ನಾಡಿ ಹಾಗೂ ದಾಯ್ಜಿ ವಲ್ಡ್೯ ನ ರಾಘವೇಂದ್ರ ಬಿ. ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಪ್ರಶಾಂತ್ ಪಾದೆ, ನಾಗರಾಜ ವಂಡ್ಸೆ, ಶ್ರೀಕರ್ ಎಸ್., ಸತೀಶ್ ಎಂ.ಬಿ., ವಿನಯ ಪಾಯಸ್, ಎಂ. ನಿತ್ಯಾನಂದ, ಸಂತೋಷ್ ಶೆಟ್ಟಿ, ಜಗದೀಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಎರಿಳಿತಗಳು ಸಹಜ. ಸಾಂಸ್ಕೃತಿಕ ಕ್ಷೇತ್ರದ ಪಯಣಗಳು ಜೀವನಾನುಭವ ನೀಡುತ್ತದೆ. ಮಾತ್ರವಲ್ಲದೆ ನನ್ನಂಥ ಸಾವಿರಾರು ಜನರಿಗೆ ಬದುಕು ನೀಡಿದೆ. ನೂರಾರು ಶ್ರೇಷ್ಟ ಪ್ರಶಸ್ತಿಗಳನ್ನು ಪಡೆದಿದ್ದರು ಸಹ ಜನರ ನಡುವೆ ಗುರುತಿಸಿ ದೊರೆಯುವ ಗೌರವ ಅತೀ ಶ್ರೇಷ್ಟವಾಗಿರುತ್ತದೆ. ಬಿಂದುಶ್ರೀ ಪ್ರಶಸ್ತಿ ಸಾರ್ಥಕತೆಯ ಸಂತೃಪ್ತಿಯಾಗಿದೆ. ಜೀವನದ ಕೊನೆ ಉಸಿರಿರುವ ತನಕ ಕಲಾ ಸೇವೆಯ ಮೂಲಕ ಸಮಾಜದ ಋಣ ತೀರಿಸುವ ಜವಬ್ದಾರಿ ಇದೆ ಎಂದು ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನಚಿತ್ರ ನಟಿ ಉಮಾಶ್ರೀ ಹೇಳಿದರು. ಅವರು ಸುರಭಿ ರಿ. ಬೈಂದೂರು ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನ ಇದರ 26ನೇ ವರ್ಷದ ಅಂಗವಾಗಿ ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಿಯ ಸಾಂಸ್ಕೃತಿಕೋತ್ಸವದ ಪ್ರಯುಕ್ತ ಬೈಂದೂರು ಶಾರದಾ ವೇದಿಕೆಯಲ್ಲಿ ಎರಡನೇ ದಿನದ ಸುರಭಿ ಜೈಸಿರಿ 2026ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸ್ವೀಕರಿಸಿ ಮಾತನಾಡಿದರು. ಬೈಂದೂರು ಶಾಸಕ ಗುರುರಾಜ ಗಂಟೆಯೊಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಅಯೋಜಿಸಿದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಅಪೂರ್ವ ವೈಷ್ಣವಿ (3ನೇ ಸ್ಥಾನ) ಹಾಗೂ ಸುಕೃತಿ ಪಡಿಯಾರ್ (7ನೇ ಸ್ಥಾನ) ವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕದ ವತಿಯಿಂದ “ಸಂಕಲ್ಪದಿಂದ ವಿಜಯದೆಡೆಗೆ- ಭಾರತೀಯ ತಂತ್ರಜ್ಞಾನದ ಉತ್ಕರ್ಷ” ಎಂಬ ವಿಷಯದ ಕುರಿತಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಕ್ಷಣಾ ಸಚಿವಾಲಯದ ಡಿಆರ್‌ಡಿಓ ಸಂಸ್ಥೆಯ ಜಯಪ್ರಕಾಶ್ ರಾವ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಅವರು ಭಾರತದಲ್ಲಿ ರಕ್ಷಣಾ ವಲಯದ ವೇಗವಾದ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ “ಆಪರೇಷನ್ ಸಿಂಧೂರ್” ಕುರಿತು ವಿವರಿಸಿದರು. ದೇಶ ಸೇವೆಗೆ ಯುವಕರು ರಕ್ಷಣಾ ಪಡೆಗಳಿಗೆ ಸೇರುವಂತೆ ಕರೆ ನೀಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಯುವಕರನ್ನು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ಉದಾಹರಿಸಿ, ವಿದ್ಯಾರ್ಥಿಗಳು ಕನಸು ಕಾಣಬೇಕು ಮತ್ತು ಅದನ್ನು ಸಾಧಿಸಲು ಪರಿಶ್ರಮಿಸಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಬಿಸಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ವರ್ಣ ರಾಣಿ, ಉಪನ್ಯಾಸಕ ಸಂಯೋಜಕಿ ಶ್ರೀಮತಿ ಭಾರತಿ ಗಾಣಿಗ, ವಿದ್ಯಾರ್ಥಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೈಸೂರು ವಿಭಾಗ ಮಟ್ಟದ ಪತ್ರಕರ್ತರಿಗೆ ಸಂವಿಧಾನ ಮತ್ತು ಪತ್ರಿಕೋದ್ಯಮ, ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಬಳಕೆ ಕುರಿತಂತೆ ಫೆಬ್ರವರಿ 27ರಂದು, ಕೊಡಗಿನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಸಹಕಾರಿಯಾಗಲಿದೆ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮೈಸೂರು ವಿಭಾಗದ (ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ) ಜಿಲ್ಲೆಯ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/ZJ4X7NjBodXmzeUu5  ನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 22ರ ವರೆಗೆ ವಿಸ್ತರಿಸಲಾಗಿದೆ. ತರಬೇತಿಯ ಆಯ್ಕೆ ಕುರಿತಂತೆ ಅಕಾಡೆಮಿಯ ತೀರ್ಮಾನವೇ ಅಂತಿಮ ಎಂದು ಅಕಾಡೆಮಿಯ ಕಛೇರಿ ಪ್ರಕಟಣೆ ತಿಳಿಸಿದೆ.

Read More