ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.23: ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಬಲಗೊಳ್ಳುವ ಅಗತ್ಯವಿದ್ದು, ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡಾಗ ಮಾತ್ರ ಎಲ್ಲಾ ಚುನಾವಣೆಯನ್ನೂ ಸಂಘಟನಾತ್ಮಕವಾಗಿ ಎದುರಿಸಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು. ಅವರು ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ಗಂಗೊಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿ ತನ್ನನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಗ್ರಾ.ಪಂ. ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪರಿಷತ್ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾ.ಪಂ.ಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು. ಎಲ್ಲೆಲ್ಲ ಅಗತ್ಯವಿದೆ ಅನ್ನುವುದನ್ನು ತಿಳಿಸುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ ಎಂದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಪಕ್ಷ ಭಾವನಾತ್ಮಕವಾಗಿ ಜನರನ್ನು ಮರುಳು ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದರಿಂದ ವಿಚಲಿತರಾಗದೇ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವಿಧಾನಸಭಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ 2020-21 ನೇ ಸಾಲಿನ ಪರೀಕ್ಷೆಯಲ್ಲಿ ಮಂಗಳೂರಿನ ಬೆಸೆಂಟ್ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ಮನಿಲ ಮಂಜುನಾಥ್ ಖಾರ್ವಿ ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬಯೋಕೆಮಿಸ್ಟ್ರಿ ಪ್ರೊಫೆಸರ್ ಡಾ| ಶಿವಾನಂದ ನಾಯಕ್ ಬಿ. ಅವರು ಮಂಡಿಸಿದ ಟೈಪ್-2 ಡಯಾಬಿಟಿಸ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುನ್ನತ ವಿಜ್ಞಾನ ಡಾಕ್ಟರೇಟ್ (ಡಿ.ಎಸ್ಸಿ) ಪದವಿ ದೊರೆತಿದ್ದು, ಎ.23ರಂದು ನಡೆಯುವ 40ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ. ಡಾ ಶಿವಾನಂದ ನಾಯಕ್ ಬಿ ಇವರು ಮೂಲತಃ ಉಡುಪಿಯವರಾಗಿದ್ದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 14 ವರ್ಷಗಳ ಕಾಲ ಬಯೋಕೆಮಿಸ್ಪಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಂತರ ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ 16 ವರ್ಷಗಳ ಕಾಲ ಪ್ರೊಫೆಸರ್ ಮತ್ತು ಡೆಪ್ಯುಟಿ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಪ್ರೊಫೆಸರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಚೆನ್ನೈನ ಚೆನ್ನೈನ ಶ್ರೀ ರಾಮಚಂದ್ರ ವಿಶ್ವವಿದ್ಯಾನಿಲಯದ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬೋಧನಾ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸುಮಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಗಾಂಧಿಮೈದಾನ ಪಾರ್ಶ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಶುಕ್ರವಾರ ನಾಗರಿಕರು ಮೌನ ಪ್ರತಿಭಟನೆ ನಡೆಸಿದರು. ಬೈಂದೂರು ಗಾಂಧಿ ಮೈದಾನ ಸಂರಕ್ಷಣಾ ಸಮಿತಿಯ ಪ್ರಮುಖ, ಸಮಾಜ ಸೇವಕ ಸುಬ್ರಹಣ್ಯ ಬಿಜೂರು ಮನವಿ ನೀಡುವ ವೇಳೆ ಮಾತನಾಡಿ, ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಗಾಂಧಿ ಮೈದಾನ (ಕ್ಯಾಂಪಸ್ ಗ್ರೌಂಡ್) ಸ,ನಂ156/3ಎ3ಎ 8.89 ಎಕ್ರೆ ವಿಸ್ತೀರ್ಣವನ್ನು ಹಾಗೂ 153/3ಬಿ 0.20 ಸೆಂಟ್ಸ್ ವಿಸ್ತೀರ್ಣವನ್ನು ಹೊಂದಿದ್ದು, ಮೈದಾನವು ರಕ್ಷಣಾ ಇಲಾಖೆಗೆ ಸೇರಿದೆ. ಮೈದಾನವನ್ನು ಅವಲಂಭಿಸಿ ಸುತ್ತಲಿನ ಶಾಲಾ ಕಾಲೇಜುಗಳ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಚುನಾವಣೆಯ ಸಂದರ್ಭ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಗಳಿಗೆ ಮೈದಾನ ಬಳಕೆಯಾಗುತ್ತಿದೆ. ವಿವಿಧ ಶಿಬಿರ, ಉತ್ಸವ, ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲು ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ವಾಕಿಂಗ್, ವಿವಿಧ ಕ್ರೀಡಾ ತರಬೇತಿಗಳಿಗೂ ಮೈದಾನ ಬಳಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೈದಾನವನ್ನು ತುಂಡರಿಸಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾಗುತ್ತಿದ್ದು, ಇದರು ಸರಿಯಾದ ಕ್ರಮವಲ್ಲ. ಮತ್ತೆ ಇದೇ ಮೈದಾನದಲ್ಲಿ ಪುರಭವನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ್ಯಾಂಕ್ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ್ಯಾಂಕ್ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಕಳೆದ 12 ವರ್ಷಗಳಿಂದ ಸರಾಸರಿ 25ಕ್ಕಿಂತಲೂ ಅಧಿಕ ರ್ಯಾಂಕ್ಗಳನ್ನು ಪಡೆಯುತ್ತಾ ವಿವಿ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಪದವಿ, ಸ್ನಾತಕೋತ್ತರ ಹಾಗೂ ಬಿಪಿಎಡ್ ವಿಭಾಗದಲ್ಲಿ ಒಟ್ಟು 11 ಪ್ರಥಮ ರ್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ 4 ದ್ವಿತೀಯ ರ್ಯಾಂಕ್, 5 ತೃತೀಯ ರ್ಯಾಂಕ್, 1 ಚತುರ್ಥ ರ್ಯಾಂಕ್, ಪದವಿ ಹಾಗೂ ಬಿ.ಎಡ್ನಲ್ಲಿ ಎರಡು 6ನೇ ರ್ಯಾಂಕ್, ಪದವಿ ವಿಭಾಗದಲ್ಲಿ ಎರಡು 8ನೇ ರ್ಯಾಂಕ್, ಒಂದು 10ನೇ ರ್ಯಾಂಕ್ ಗಳಿಸಿದೆ. ಪದವಿ ವಿಭಾಗ:ಬಿ.ಎ ವಿಭಾಗದಲ್ಲಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ (89.19% ) ಪ್ರಥಮ ರ್ಯಾಂಕ್, ಚುಮ್ತಾಂಗ್ (88.33%) ದ್ವಿತೀಯ ರ್ಯಾಂಕ್, ಫಾತಿಮ ಮುಸ್ಕಾನ್ ಜಿ ಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮದ್ಯದ ನಶೆಯಲ್ಲಿದ್ದ ಚಾಲಕನೋರ್ವ ಮುಳ್ಳಿಕಟ್ಟೆಯಿಂದ ಯದ್ವಾ-ತದ್ವಾ ಗ್ಯಾಸ್ ಟ್ಯಾಂಕರ್ ಚಲಾಯಿಸಿ ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ನಡೆದಿದೆ. ಮಂಗಳೂರಿಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಮಧ್ಯಾಹ್ನ ಸುಮಾರಿಗೆ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಉಡುಪಿಗೆ ತೆರಳುತ್ತಿದ್ದ ಸ್ಥಳೀಯರಾದ ಪ್ರದೀಪ್ ಮುಳ್ಳಿಕಟ್ಟೆ, ತನ್ನ ಕಾರಿನಲ್ಲಿ ಟ್ಯಾಂಕರ್ ಒವರ್ ಟೇಕ್ ಮಾಡಿ ನಿಲ್ಲಿಸಲು ಸೂಚಿಸಿದ್ದರೂ ಮದ್ಯದ ನಶೆಯಲ್ಲಿದ್ದ ಟ್ಯಾಂಕರ್ ಚಾಲಕ ಸೀದಾ ಟ್ಯಾಂಕರ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ರಾ.ಹೆ. 66 ರ ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆಯುತ್ತಾ ಸಾಗುತ್ತಿದ್ದ ಟ್ಯಾಂಕರನ್ನು ಹೆಮ್ಮಾಡಿ ಸರ್ಕಲ್ ಸಮೀಪ ನಿಲ್ಲಿಸಲು ಯತ್ನಿಸಿದಾಗ ಮತ್ತೆ ಮುಂದೆ ಸಾಗಿದ್ದು, ಬಳಿಕ ತಲ್ಲೂರು ಸರ್ಕಲ್ ಬಳಿ ಬೈಕ್ ಸವಾರರ ನೆರವಿನೊಂದಿಗೆ ಟ್ಯಾಂಕರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಪ್ರದೀಪ್ ಮುಳ್ಳಿಕಟ್ಟೆ ಪೊಲೀಸರಿಗೆ ಕರೆಮಾಡಿದ್ದು, ಕುಂದಾಪುರ ಸಂಚಾರಿ ಠಾಣೆಯ ಉಪನಿರೀಕ್ಷಕಿ ಸುಧಾ ಪ್ರಭು ಸ್ಥಳಕ್ಕೆ ಆಗಮಿಸಿ ಗ್ಯಾಸ್ ಟ್ಯಾಂಕರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಯಶಸ್ವಿ ಛಾಯಗ್ರಾಹಕನು ತಾನು ಸೆರೆಹಿಡಿಯುವ ಚಿತ್ರದಲ್ಲಿ ಅಗತ್ಯವಿರುವ ಅಂಶವನ್ನು ಅಳವಡಿಸಿ, ಅನಗತ್ಯ ಅಂಶಗಳನ್ನು ಉಪೇಕ್ಷಿಸಿದರೆ ಚಂದದ ಛಾಯಾಚಿತ್ರ ಮೂಡಲು ಸಾಧ್ಯ. ಉತ್ತಮ ಛಾಯಾಚಿತ್ರ, ಬೆಳಕು, ಬಣ್ಣ ಹಾಗೂ ವಸ್ತುಗಳ ವ್ಯವಸ್ಥಿತ ಸಂಯೋಜನೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಹೆಚ್. ಸತೀಶ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ’ ಫೋರಂ ವತಿಯಿಂದ ಆಯೋಜಿಸಿದ್ದ ‘ಫೊಟೋಗ್ರಫಿ’ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಛಾಯಾಗ್ರಾಹಣ ಒಂದು ನಿಪುಣ ಕಲೆ. ಕ್ಯಾಮರಾ ಸೆರೆಹಿಡಿಯುವ ಪ್ರತಿಯೊಂದು ಫೋಟೋವು ಒಂದೊಂದು ಸಂದೇಶವನ್ನು ನೀಡುವಂತಿರಬೇಕು. ಉತ್ತಮ ಛಾಯಗ್ರಾಹಕ ಬಣ್ಣ ಹಾಗೂ ಬೆಳಕಿನ ಸಂಯೋಜನೆಯ ಕೌಶಲ್ಯವನ್ನು ಅರಿತಿರಬೇಕು. ಕ್ರಿಯಾತ್ಮಕವಾಗಿ ಚಿತ್ರಗಳನ್ನು ತೆಗೆಯದೇ ಹೋದರೆ ಅವುಗಳನ್ನು ಅಂದಗೊಳಿಸಲು ತಾಂತ್ರಿಕವಾಗಿ ಹೆಣಗಾಡಬೇಕಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪೊರ್ಲು ಸ್ಟುಡಿಯೋದ ಮಾಲಕ ಜಿನೇಶ್ ಪ್ರಸಾದ್ ಹಾಗೂ ವಿಭಾಗ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹನಾ ಫಾತಿಮಾ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.22: ಬ್ರಹ್ಮಾವರ ಪಶುವೈದ್ಯಕೀಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಅವರು ಕುಮಾರ್ ಶೆಟ್ಟಿ ಎನ್. ಅವರು ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದು, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸೇವೆಗೈದ ರಾಜ್ಯ ಸರಕಾರಿ ನೌಕರರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಸರಕಾರ ಆದೇಶಿಸಿದ್ದು, ಅದರಂತೆ ಡಾ. ಅರುಣ್ ಕುಮಾರ್ ಶೆಟ್ಟಿ ಅವರ ಗುಣಮಟ್ಟದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಡಾ. ಅರುಣ್ ಕುಮಾರ್ ಶೆಟ್ಟಿಯವರು ಗುಲ್ವಾಡಿ ಗ್ರಾಮದ ಕರ್ಕಿಯವರಾಗಿದ್ದು, ಪಶುವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದು ವಂಡ್ಸೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದವರು. ಬಳಿಕ ವಿವಿಧೆಡೆ ಸೇವೆ ಸಲ್ಲಿಸಿ ಕೋಟ ಆಸ್ಪತ್ರೆಗೆ ಮುಖ್ಯ ಪಶುವೈದ್ಯಾಧಿಕಾರಿಯಾಗಿ ಭಡ್ತಿ ಪಡೆದರು. ಪ್ರಸ್ತುತ ಬ್ರಹ್ಮಾವರ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಆಗಿ ಮುಂಭಡ್ತಿ ಹೊಂದಿ ಸೇವೆ ಸಲ್ಲಿಸುತ್ತಿದ್ದು, ಸತತ 20 ವರ್ಷಗಳಿಂದ ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್ / ಅಕ್ಟೋಬರ್ 2021ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳಿಗೆ ದೊರಕಿವೆ. ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಯಡ್ತರೆ ಗ್ರಾಮದ ಹೆನ್ರಿ ರೊಡ್ರಿಗಸ್ ಮತ್ತು ಗ್ರೆಟಾ ರೊಡ್ರಿಗಸ್ ಅವರ ಪುತ್ರಿ ಸೊಲಿಟಾ ರೊಡ್ರಿಗಸ್ ಅವರಿಗೆ ಮೂರನೇ ರ್ಯಾಂಕ್ ದೊರೆತಿದೆ. ವಾಣಿಜ್ಯ ಪದವಿಯಲ್ಲಿ ಕುಂದಾಪುರದ ಪ್ರದೀಪ ಸಿ. ಶಾನಭಾಗ್ ಮತ್ತು ರಾಜೇಶ್ವರಿ ಅವರ ಪುತ್ರಿ ವೈಷ್ಣವಿ ಪಿ. ಶಾನಭಾಗ್ಗೆ ಏಳನೇ ರ್ಯಾಂಕ್ ಮತ್ತು ಕಂಪ್ಯೂಟರ್ ಸೈನ್ಸ್ ಪದವಿಯಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯ ಸುಕುಮಾರ ಶೆಟ್ಟಿ ಮತ್ತು ಸುಜಾತ ಅವರ ಪುತ್ರಿ ಸೌಜನ್ಯ ಅವರಿಗೆ ಹತ್ತನೇ ರ್ಯಾಂಕ್ ದೊರೆತಿದೆ. ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರು ವಿ.ವಿ.ಯ 2020-21ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಬಿ.ಸಿ.ಎ. ಪದವಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಸುಮಧುರ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರರು ಅಭಿನಂದನೆ ಸಲ್ಲಿಸಿದ್ದಾರೆ.
