ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಪ್ರಾಯೋಜಿತ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ತಂಡ ಪ್ರಶಸ್ತಿ ಜಯಿಸಿದೆ. ಫೈನಲ್ ಪಂದ್ಯದಲ್ಲಿ ಅಭಿ ಕೋಟ ಸರ್ವಾಂಗೀಣ ಆಟದ ಫಲವಾಗಿ, ಪಾರಂಪಳ್ಳಿ ಕ್ರಿಕೆಟರ್ಸ್ ತಂಡ ಸೋಲಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಅಭಿ ಕೋಟ, ಬೆಸ್ಟ್ ಬ್ಯಾಟ್ಸ್ಮನ್ ಪುಂಡಲೀಕ ಸಾಸ್ತಾನ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿ ಯೋಗೀಶ್ ಕೋಟ ತನ್ನದಾಗಿಸಿಕೊಂಡರು. ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಚಿನ್ ಕೋಟೇಶ್ವರ, ಬೆಸ್ಟ್ ಬ್ಯಾಟ್ಸ್ಮನ್ ಗಣೇಶ್ (ಬೀಜಾಡಿ) ಟೊರ್ಪೆಡೋಸ್, ಬೆಸ್ಟ್ ಬೌಲರ್ ಸಚಿನ್ ಶೆಟ್ಟಿ ಪಡೆದುಕೊಂಡರು. ಸಮಾರೋಪ:ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಡಿ, ಯುವ ಆಟಗಾರರ ಭಾಗವಹಿಸುವಿಕೆಯಿಂದ ಟಿ.ಸಿ.ಎ ೭ ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.೧೦ ಓವರ್ ಗಳಲ್ಲಿ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ. ಉಡುಪಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ರಾಮ ನವಮಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮ ಭಾನುವಾರ ಕುಂದಾಪುರ ವ್ಯಾಸರಾಜ ಕಲಾ ಮಂದಿರದಲ್ಲಿ ಜರುಗಿತು. ಸಮಾಜದ 31 ವಟುಗಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನವನ್ನೂ ಮಠದ ಅರ್ಚಕ ವಿಜಯ ಪೇಜಾತ್ತಾಯ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಎಂ. ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು, ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೊಡು,ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸೇವಾ ಸಂಘದ ಅಧ್ಯಕ್ಷ ಎಚ್.ಟಿ.ನರಸಿಂಹ ಮತ್ತು ಆಡಳಿತ ಮಂಡಳ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಜೆಪಿ ಕುಂದಾಪುರ ಮಂಡಲ ಯುವಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆಯಿತು. ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಕಾರ್ಯಕ್ರಮದ ಕುರಿತು ಮಾತನಾಡಿದರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಯುವಮೋರ್ಚಾ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ ಉಪಾಧ್ಯಕ್ಷರಾದ ಕಿರಣ್ ಕೊಡ್ಗಿ, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ರಾಜ್ ಶಾಂತಿ ನಿಕೇತನ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಬಂಗೇರಾ,ಸುನಿಲ್ ಖಾರ್ವಿ,ಕುಂದಾಪುರ ನಗರ ಪ್ರಾಧಿಕಾರ ಅಧ್ಯಕ್ಷರಾದ ವಿಜಯ್ ಎಸ್ ಪೂಜಾರಿ, ಪುರಸಭೆ ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಅಂಕದ ಕಟ್ಟೆ,ಕಾರ್ಯದರ್ಶಿ ದೀಕ್ಷಿತ್ ಶೆಟ್ಟಿ,ಸಫಲ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ಕೋಟಿ ಪೂಜಾರಿ ಆಶ್ರಯ್ ಶೆಟ್ಟಿ ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್ ವಂದೇ ಮಾತರಂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಕ್ವಾಡಿಯಲ್ಲಿ ಗುರುಕುಲ ವಿದ್ಯಾಸಂಸ್ಥೆ ಆಯೋಜಿಸಿದ್ದ ಚಿಲಿಪಿಲಿ ಬೇಸಿಗೆ ಶಿಬಿರದ ಇತ್ತಿಚಿಗೆ ಉದ್ಘಾಟನೆಗೊಂಡಿತು. ಬೆಂಗಳೂರು ಕಪೆಲ್ಲಾ- ದ ಸೌಂಡ್ ಸಂಸ್ಥಾಪಕರು ಮೈಥಿಲಿ ಉದ್ಘಾಟಿಸಿ ಮಾತನಾಡಿ ಬೇಸಿಗೆ ಶಿಬಿರವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಸಹಾಯವಾಗುವುದು, ಜೊತೆಗೆ ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಅವರ ಸ್ವತಂತ್ರ ಕಲಿಕೆಗೆ ಇದು ಸಹಾಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ ನ ಜಂಟಿ ಕಾರ್ಯನಿರ್ವಾಹಕಿ ಅನುಪಮ .ಎಸ್ ಶೆಟ್ಟಿ ಮಾತನಾಡಿ ಮಕ್ಕಳ ರಜಾಕ್ಕೊಂದು ಮಜಾ ನೀಡುವುದರ ಜೊತೆಗೆ ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡುವ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲಿ ಈ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಮೋಹನ್. ಕೆ, ಕಾಲೇಜು ಪ್ರಾಂಶುಪಾಲರಾದ ಅರುಣ್ ಡಿಸಿಲ್ವಾ, ಶಿಬಿರದ ಇನ್ನೋರ್ವ ಮಾರ್ಗದರ್ಶಕಿ ಸಂಧ್ಯಾ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.11: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ರಾಮನವಮಿ ದಿನದಂದು ವಿಜೃಂಭಣೆಯಿಂದ ಜರುಗಿತು. ರಥೋತ್ಸವ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿಗಳು ನಡೆದವು. ಕುಂದಾಪುರ ತೇರು ಎಂದೇ ಪ್ರಸಿದ್ಧವಾಗಿರುವ ಜಿಎಸ್ಬಿ ಸಮುದಾಯದ ಪೇಟೆ ಶ್ರೀ ವೆಂಕಟರಮಣ ರಥೋತ್ಸವವನ್ನು ನೋಡಲು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ರಥಾರೂಡ ಶ್ರೀ ವೆಂಕಟರಮಣ ದೇವರ ರಥವನ್ನು ಸ್ಪರ್ಷಿಸುವ ವಿಶಿಷ್ಟ ಪ್ರಕ್ರಿಯೆ ರಥ ಬಳುವಳಿಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ರಥಕ್ಕೆ ಸ್ಪರ್ಷಿಸಿ ಆಶಿರ್ವಾದ ಪಡೆದರು. ದೇವಳದ ಆಡಳಿತ ಮೊಕ್ತೇಸರ ಕೆ. ಮೋಹನದಾಸ ಶೆಣೈ, ಜತೆ ಮೊಕ್ತೇಸರರಾದ ಕೆ. ವಿವೇಕ್ ಪೈ, ಎಂ. ಸುಬ್ರಾಯ ಪೈ ಸೇರಿದಂತೆ ಸಮಿತಿಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಮನವಮಿಯ ಅಂಗವಾಗಿ ತಾಲೂಕಿನ ಏಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಭಾನುವಾರ ಬೆಳಿಗ್ಗೆಯಿಂದ ಶ್ರೀ ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸ್, ವಿಷ್ಣುಸಹಸ್ರನಾಮ ಪಠಣ, ರಾಮಭಜನೆ ಬಳಿಕ ಪೂಜೆಯೊಂದಿಗೆ ಪ್ರಸಾದ ವಿತರಣೆ ನಡೆಯಿತು. ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಂತ್ರಜ್ಞಾನ ಎಷ್ಟೇ ಬೆಳೆದರೂ ಪರ್ಯಾಯ ವಿಶ್ವವನ್ನೂ, ಜೀವಂತಿಕೆಯ ಅನುಭೂತಿಯನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಕಲೆಯ ಆಸ್ವಾದನೆಗೆ ಬೇಕಿರುವ ರಸಾನುಭವ ಹಾಗೂ ಬ್ರಹ್ಮಾನುಭವ ನೇರವಾಗಿ ಪಾಲ್ಗೊಳ್ಳುವಿಕೆಯಿಂದ ಪಡೆಯಲು ಸಾಧ್ಯವಿದೆ ಎಂದು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಹೇಳಿದರು. ಅವರು ಶನಿವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾದ ರಂಗಪಂಚಮಿ -2022 ನಾಟಕೋತ್ಸವವನ್ನು ಉದ್ಫಾಟಿಸಿ ಮಾತನಾಡಿ ನಾಲ್ಕು ದಶಕಗಳನ್ನು ಕಂಡ ಲಾವಣ್ಯ, ತಲೆಮಾರುಗಳ ಅನುಭವವನ್ನು ಕಟ್ಟಿಕೊಂಡು ಗಟ್ಟಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಲಾವಣ್ಯದ ಅಧ್ಯಕ್ಷರಾದ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಶುಭಶಂಸನೆಗೈದರು. ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಅತಿಥಿಗಳಾಗಿದ್ದರು. ಹಿರಿಯ ನಾಗರಿಕ ಪ್ರಶಸ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಎ.10: ಪಾಪ ಕ್ರತ್ಯಗಳಿಂದ ಕೆಟ್ಟು ಹೋಗಿದ್ದ ಲೋಕದ ಕಲ್ಯಾಣಕ್ಕಾಗಿಯೇ ಯೇಸು ಹುಟ್ಟಿದ್ದು, ದೇವರ ಯೋಜನೆಯಂತೆ ತನ್ನ ಜೀವ ಬಲಿದಾನ ಮಾಡಿ ಜಗತ್ತನ್ನು ಪಾಪ ವಿಮೋಚನೆ ಮಾಡುವುದೇ ಆತನ ಗುರಿಯಾಗಿತ್ತು. ಯೇಸುವಿನ ಮರಣದ ನಂತರ ಅಸಂಖ್ಯಾತ ಜನರು ಯೇಸುವಿಗೆ ನಂಬತೊಡಗಿದರು ಎಂದು ತ್ರಾಸಿ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಧರ್ಮಗುರು ವಂ|ಮ್ಯಾಕ್ಷಿಮ್ ಡಿಸೋಜಾ ಸಂದೇಶ ನೀಡಿದರು. ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದ (ಫಾಮ್ ಸಂಡೆ) ಬಲಿದಾನ ಅರ್ಪಿಸಿ ಪ್ರವಚನ ನೀಡಿದರು. ಅದಕ್ಕೂ ಮೊದಲು ಅವರು ಗರಿಗಳನ್ನು ಆಶಿರ್ವಾದಿಸುವ ಸಂಸ್ಕಾರ ನೇರವೇರಿಸಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗರಿಗಳ ಭಾನುವಾರದ ಸಂಸ್ಕಾರದಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂಸ್ಕಾರದಲ್ಲಿ ಭಾಗವಹಿಸಿದರು. ಬೈಂದೂರಿನ ಹೋಲಿಕ್ರಾಸ್ ಚರ್ಚ್ನಲ್ಲಿಯೂ ಗರಿಗಳ ಭಾನುವಾರ’ವನ್ನು ಇರ್ಗಜಿಯ ಧರ್ಮಗುರು . ಪಾ. ವಿನ್ಸೆಂಟ್ ಕುವೆಲ್ಲೊ ರವರ ನೇತ್ರತ್ವದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಹಿರಿಯ ರಂಗಕರ್ಮಿ ಜೀವನರಾಂ ಸುಳ್ಯ ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಅಧಿಕಾರ ಸ್ವೀಕರಿಸಿದರು. ಜೀವನರಾಂ ಅವರು ಹಲವು ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಪ್ರಶಸ್ತಿ ಪಡೆದಿದ್ದು, ಅವರ ನಿರ್ದೇಶನದ ಮಹಾಮಾಯಿ, ಪಂಜರ ಶಾಲೆ, ಧೂತವಾಕ್ಯ ಹಾಗೂ ಇನ್ನಿತರ ಹಲವು ನಾಟಕಗಳು ಜನಪ್ರಿಯವಾಗಿದೆ. ಮೂಲತ: ಯಕ್ಷಗಾನ ಕುಟುಂಬದಿಂದ ಬಂದ ಜೀವನ್ರಾಂ ನಾಟಕಗಳಲ್ಲಿ ಯಕ್ಷಗಾನ, ಜಾದೂ, ಜಾನಪದವನ್ನು ಅಳವಡಿಸಿದ ಜನಪ್ರಿಯ ನಿರ್ದೇಶಕರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿಮೂಡುಬಿದಿರೆ: 2021ನೇ ಶೈಕ್ಷಣಿಕ ವರ್ಷಕ್ಕಾಗಿ ನಡೆದ ರಾಷ್ಟ್ರಮಟ್ಟದ ನೀಟ್ಪರೀಕ್ಷೆ ಆಧಾರಿತ ಎಂ.ಬಿ.ಬಿಎಸ್(ಒಃಃS) ವೈದ್ಯಕೀಯ ಶಿಕ್ಷಣದ ಸೀಟ್ಗಳು ಹಂಚಿಕೆಯಾಗಿದ್ದು 377 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಈ ವರ್ಷ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಒಂದು ವರ್ಷದಲ್ಲಿ ಒಂದು ಕಾಲೇಜಿನಿಂದ ಪ್ರವೇಶ ಪಡೆದ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲೆ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸಂದಿದೆ. ದೇಶದ ಪ್ರತಿಷ್ಠಿತ ಎಐಐಎಂಎಸ್ (AIIMS) ದೆಹಲಿಗೆ ಇಬ್ಬರು ವಿದ್ಯಾರ್ಥಿಗಳು (ಹರ್ಷಿತಾ ಗಂಗಾಧರಪ್ಪ ನೆಗಲೂರು ಮತ್ತು ಶೈಕ್ಷಾ ನಾಯಕ ಬಿ ಪಿ), ಎಐಐಎಂಎಸ್ (AIIMS) ರಾಯಬರೇಲಿಗೆ ಒಬ್ಬ ವಿದ್ಯಾರ್ಥಿ (ರಕ್ಷಿತ್ ಪರೀಕ್) ಆಯ್ಕೆಯಾಗಿದ್ದು, ಪುಣೆಯಲ್ಲಿರುವ ಆರ್ಮ್ಡ್¥sóÉÇರ್ಸಸ್ ಮೆಡಿಕಲ್ ಕಾಲೇಜ್ಗೆ ಒಬ್ಬ ವಿದ್ಯಾರ್ಥಿ (ಶಿವರಾಜ್ ಎಮ್ ಉಮ್ಮಜಪ್ಪನ್ವರ್)-ಹೀಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಇದರೊಂದಿಗೆ ರಾಜ್ಯದ ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 213 ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟದಲ್ಲಿ…
