ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿಯಿಂದ ತಲ್ಲೂರು ಕಡೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರು ಢಿಕ್ಕಿಯಾದ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ಜಾಲಾಡಿಯಲ್ಲಿ ನಡೆದಿದೆ. ಹೆಮ್ಮಾಡಿ ಸಂತೋಷನಗರ ನಿವಾಸಿ ರಾಮ ಕುಲಾಲ್ (೬೦) ಮೃತ ದುರ್ದೈವಿ. ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಸೈಕಲ್‌ನಲ್ಲಿ ತೆರಳುತ್ತಿರುವ ರಾಮ ಕುಲಾಲ್ ಅವರು, ಡಿವೈಡರ್ ಬದಿಯಿಂದ ರಸ್ತೆಯ ಎಡಗಡೆಗೆ ಸೈಕಲ್ ತಿರುಗಿಸಿದ ಪರಿಣಾಮ ಹಿಂದಿನಿಂದ ಬಂದ ಕಾರು ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸೈಕಲ್‌ನಲ್ಲಿದ್ದ ರಾಮ ಕುಲಾಲ್ ಅವರು ಕೆಲ ದೂರ ಹೋಗಿ ಬಿದ್ದಿದ್ದು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿತ್ತು. ಗಂಗೊಳ್ಳಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ತಕ್ಷಣ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. ರಾಮ ಕುಲಾಲ್ ಅವರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಹೆಮ್ಮಾಡಿ ಘಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನ ಬೆಂಗಳೂರಿನಲ್ಲಿದ್ದ ಅವರು ನಿನ್ನೆಯಷ್ಟೇ ಊರಿಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಿವೃತ್ತ ಸೈನಿಕ ರಾಜೇಶ ಮೊಗವೀರ ಅವರನ್ನು ರೋಟರಿ ಕ್ಲಬ್ ವತಿಯಿಂದ ಇಲ್ಲಿನ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ಕಾರ್ಯದರ್ಶಿ ನಾರಾಯಣ ಇ.ನಾಯ್ಕ್, ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ಸಂಸ್ಥೆಯ ಮಾಜಿ ಅಧ್ಯಕ್ಷರಾದ ಉಮೇಶ ಮೇಸ್ತ, ಬಿ.ಲಕ್ಷ್ಮೀಕಾಂತ ಮಡಿವಾಳ, ಜನಾರ್ದನ ಪೂಜಾರಿ ಪೆರಾಜೆ, ಪ್ರದೀಪ ಡಿ.ಕೆ., ವಾಸುದೇವ ಶೇರುಗಾರ್, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗಂಗೊಳ್ಳಿ ರೋಟರಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೌಲ್ಯಗಳು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಶಿಥಿಲವಾಗಿದೆ. ಹಣ, ಅಧಿಕಾರ ಹಾಗೂ ಪ್ರಚಾರದ ಆಧಾರದಲ್ಲಿಯೇ ಅದನ್ನು ಅಳೆಯಲಾಗುತ್ತಿದೆ. ಎಲ್ಲವನ್ನೂ ಕೈಯಂಚಲ್ಲಿ ಪಡೆಯುವಷ್ಟು ಸಲೀಸಾಗಿ ಮುಂದುವರಿದಿರುವ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಮರುಸ್ಥಾಪನೆಯಾಗಬೇಕಿದೆ ಎಂದು ಸಾಹಿತಿ, ಚಿಂತಕ ವಿವೇಕಾನಂದ ಹೆಚ್. ಕೆ ಹೇಳಿದರು. ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯು ಮಂಗಳವಾರ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿರುವ ವಿವೇಕಾನಂದ ಹೆಚ್. ಕೆ ಅವರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ ಕೆಟ್ಟವರು, ವಂಚಕರು ಈ ಸಮಾದಲ್ಲಿ ವಿಜ್ರಂಭಿಸುತ್ತಾರೆ ಎಂಬ ಭಾವನೆ ಇದೆ. ಕೆಲವು ವರ್ಷಗಳ ಹಿಂದೆ ಒಳ್ಳೆಯವರಿಗೆ ಸಮಾಜದಲ್ಲಿ ಗೌರವವಿತ್ತು. ಇಂದೂ ಅಂತಹ ಒಳ್ಳೆಯತನಕ್ಕೆ ಗೌರವಕೊಡುವ ಕಾರ್ಯವಾಗಬೇಕಿದೆ. ಮನ, ಮನೆ ಹಾಗೂ ಮತಗಳಲ್ಲಿ ಬದಲಾವಣೆಯಾದರೆ ಮುಂದಿನ ಹದಿನೈದು ವರ್ಷಗಳಲ್ಲಿ ಮೌಲ್ಯಗಳ ಮರುಸ್ಥಾಪನೆ ಮಾಡಬಹುದಾಗಿದೆ. ಯಾವುದೇ ಕ್ಷೇತ್ರದ ಕೆಟ್ಟ ವ್ಯಕ್ತಿಗಳನ್ನು ನಿರ್ಲಕ್ಷಿಸಿ ಒಳ್ಳೆಯವರನ್ನು ಗೌರವಿಸುವ ಕಾರ್ಯ ನಮ್ಮಿಂದ ಆರಂಭವಾದರೆ ಮುಂದಿನ ಪೀಳಿಗೆಯಾದರೂ ನೆಮ್ಮದಿಯಿಂದ ಬದುಕಬಹುದು ಎಂದರು. ಮೌಲ್ಯಗಳ ಉದ್ದೀಪನಕ್ಕಾಗಿ ಪಾದಯಾತ್ರೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ವಿವೇಕಾನಂದ ಹೆಚ್. ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಕ್ಷೇಮಪಾಲನೆಯತ್ತ ಕಾಳಜಿ ವಹಿಸಲು ಪ್ರತ್ಯೇಕ ವಿಭಾಗ ಆರಂಭಿಸಲಾಗಿದೆ. ಪರಿಣತ ವ್ಯಕ್ತಿಯ ನೇತೃತ್ವದಲ್ಲಿ ಕೆಲಸ ಮಾಡುವ ಈ ವಿಭಾಗ ವಿಶಿಷ್ಟ ವಿಧಾನಗಳನ್ನು ಬಳಸಿಕೊಂಡು ತನ್ನ ಉದ್ದೇಶ ಸಾಧಿಸುತ್ತದೆ ಎಂದು ಹೊಸಾಡಿನ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ ಹೇಳಿದರು. ಅವರು, ಡಾನ್ ಬಾಸ್ಕೊ ಶಾಲೆಯ ಬೋಧಕ, ಬೋಧಕೇತರರಿಗಾಗಿ ಈಚೆಗೆ ನಡೆಸಿದ ಮಾನಸಿಕ ಆರೋಗ್ಯ ಮತ್ತು ಕ್ಷೇಮಪಾಲನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಆಪ್ತ ಸಮಾಲೋಚಕಿಯಾಗಿ ಕೆಲಸಮಾಡುತ್ತಿರುವ ರಕ್ಷಿತಾ ಎನ್. ಜೆ ಈ ವಿಷಯದಲ್ಲಿ ವಿಶೇಷ ಶಿಕ್ಷಣದ ಜತೆಗೆ ಅಂತರರಾಷ್ಟ್ರೀಯ ಸಂಸ್ಥೆಯೊಂದರಿಂದ ಚಿಕಿತ್ಸಕ ಆಟಗಳು ಮತ್ತು ಚಿಕಿತ್ಸಾ ಪರಿಣತಿ ಪಡೆದುಕೊಂಡಿದ್ದಾರೆ. ಅವರು ಮಾನಸಿಕ ಸಮಸ್ಯೆ ಇರುವ ಮತ್ತು ವಿಶೇಷ ಅಗತ್ಯ ಇರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ. ಅದರೊಂದಿಗೆ ಮಕ್ಕಳಲ್ಲಿ ಮಾನಸಿಕ ಸಮಸ್ಯೆ ಉದ್ಭವಿಸಿದಾಗ ಚಿಕಿತ್ಸಕ ಆಟಗಳು, ಆಪ್ತ ಸಮಾಲೋಚನೆ ಹಾಗೂ ಪಾರಸ್ಪರಿಕ ಕ್ರಿಯೆಗಳ ಮೂಲಕ ಅದನ್ನು ಹೇಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಸಭೆಯ ಯುಜಿಡಿ ಕಾಮಗಾರಿ ಫಿಟ್‌ವೆಲ್ ನಿರ್ಮಿಸಲು ಅಗತ್ಯವಿರುವ ಸ್ಥಳ ಖರೀದಿಗಾಗಿ ಸರ್ಕಾರವು ದುಪ್ಪಟ್ಟು ಹಣ ಪಾವತಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಮಾಡದ ಹೊಳೆ ಬದಿ ಜಾಗದಲ್ಲಿ ನಷ್ಟ ಪರಿಹಾರ ಎಂದು ತೋರಿಸಿ ಒಟ್ಟು 97 ಲಕ್ಷ ಜಾಗದ ಮಾಲೀಕರಿಗೆ ಸಂದಾಯ ಮಾಡಲಾಗಿದೆ. ಪುರಸಭೆ ಸದಸ್ಯರ ಅವಗಹಣೆಗೆ ತರದೇ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯ ಮಾಡಿರುವ ಹಿಂದಿನ ಉದ್ದೇಶವೇನು. ಜಾಗ ಖರೀದಿಗಾಗಿ ಸಂದಾಯ ಮಾಡಿರುವ ಹಣ ಕುರಿತು ತನಿಖೆ ನಡೆಸಬೇಕು ಎಂದು ಪುರಸಭೆ ಆಡಳಿತ ಪಕ್ಷ ಸದಸ್ಯ ಗಿರೀಶ್ ದೇವಾಡಿಗ ಹೇಳಿದ್ದಾರೆ. ಕುಂದಾಪುರ ಪುರಸಭೆ ಡಾ| ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಮಾತಿಗೆ ಸಭೆಯಲ್ಲಿ ಸಮಮತ ವ್ಯಕ್ತವಾಗಿದ್ದು, ತನಿಕೆಗೆ ಆಗ್ರಹಿಸಿದ್ದಾರೆ. ಸರ್ಕಾರದ ದರಪಟ್ಟಿ ಹಾಗೂ ಭೂ ಮಾಲೀಕರಿಗೆ ಕೊಟ್ಟ ಪರಿಹಾರಕ್ಕೆ ಭಾರಿ ವ್ಯತ್ಯಾಸವಿದೆ. ಸಮಿತಿ ನಿಗದಿ ಮಾಡಿದ ದರಪಟ್ಟಿಯ ಬಗ್ಗೆ ಪುರಸಭೆ ಸಭೆಯಲ್ಲಿ ಗಮನಕ್ಕೆ ತಾರದೆ ಬರೋಬ್ಬರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂಪಾರು ರೋಟರಿ ಕ್ಲಬ್‌ನಿಂದ ಪದಗ್ರಣ ಕಾರ್ಯಕ್ರಮ ಇಲ್ಲಿನ ವಂಡ್ಸೆ ಅತ್ರಾಡಿ ವಿಜಯಾ ಮಕ್ಕಳ ಕೂಟ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ರೋಟರಿ ನೂತನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಹಾಯಕ ರಾಜ್ಯಪಾಲ ಧನಂಜಯ ಪ್ರಭು ಪದಗ್ರಹಣ ನೆರವೇರಿಸಿದರು. ವಲಯ ಸೇನಾನಿ ಗಂಗಾಧರ ಉಡುಪ ಸಂಸ್ಥೆ ಕೈಪಿಡಿ ಧರ್ಪಣ ಬಿಡುಗಡೆ ಮಾಡಿದರು. ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, 43 ಬಾರಿ ರಕ್ತದಾನ ಮಾಡಿದ ಸಮಾಜ ಸೇವಕ ರಾಘವೇಂದ್ರ ನೆಂಪು ಅವರನ್ನು ಸನ್ಮಾನಿಸಲಾಯಿತು. ನೂತನ ರೋಟರಿ ಸದಸ್ಯರಾಗಿ ನಿವೃತ್ತ ಪ್ರೌಢಶಾಲಾ ಶಿಕ್ಷಕ ನರಸಿಂಹ ನಾಯ್ಕ್ ಅವರ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ರೋಟರಿ ನಿಕಟಪೂರ್ವ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡುಬಗೆ, ಮಾಜಿ ಕಾರ‍್ಯದರ್ಶಿ ಸುರೇಂದ್ರ ಶೆಟ್ಟಿ ಇದ್ದರು. ಆನಂದ ಮಾಸ್ಟರ್ ಸ್ವಾಗತಿಸಿದರು. ದಿನೇಶ್ ಪೂಜಾರಿ ಗೊರಟೆ ಪ್ರಾರ್ಥಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಬಿ. ಬಿ. ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕ ಆಯೋಜಿಸಿದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಕುಂದಾಪುರ ಮೂಲದ ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೈನ್ಯದ ಸಿಕ್ಕಿಂ ಮತ್ತು ಸಿಯಾಚಿನ್ ದಿನಗಳನ್ನು ನೆನಪಿಸಿ ರೋಮಾಂಚನಗೊಳಿಸಿದರು. ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿಯೂ ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಕಾರ್ಗಿಲ್ ಯುದ್ಧದ ಆ ಸಂದರ್ಭಗಳು ಮತ್ತು ಮತ್ತು ಆಗಿನ ದೇಶದ ಪರಿಸ್ಥಿತಿ ಬಗ್ಗೆ ವಿವರಿಸಿದರು. ಆಪರೇಶನ್ ಸಫೇದ್ ಸಾಗರ್, ಆಪರೇಶನ್ ತಲ್ವಾರ್, ಆಪರೇಶನ್ ವಿಜಯ್ ಹೀಗೆ ಕ್ಷಿಪ್ರಗತಿಯಲ್ಲಿ ವಿರೋಧಿಗಳನ್ನು ಮೆಟ್ಟಿನಿಂತ ಭಾರತ ಸೈನ್ಯದ ಪರಾಕ್ರಮ, ಯೋಗಿಂದರ್ ಸಿಂಗ್ ಯಾದವ್, ಸೌರಭ್ ಕಾಲಿಯಾ ಹೀಗೆ ಅನೇಕ ಸೈನಿಕರ ಸಾಹಸಗಾಥೆಗಳನ್ನು ಸ್ಮರಿಸಿದರು. ದೇಶ ಭಕ್ತಿ ಮತ್ತು ದೇಶಪ್ರೇಮ ಪ್ರತಿದಿನದ ನಮ್ಮ ಜೀವನದಲ್ಲಿ ಸದಾ ಜಾಗೃತವಾಗಿರಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕಳೆದ ಎರಡು ವರ್ಷಗಳಿಂದ ಕರೋನಾ ಅನೇಕರ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಸಹಸ್ರಾರು ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಈ ವರ್ಷ ಕರೋನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಪ್ರಾಣ ಹಾನಿಯಾಗಿದ್ದು, ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಮೇಲೆ ಪರಿಣಮ ಬೀರುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರು ವಿಶ್ಲೇಷಿಸುತ್ತಿದ್ದಾರೆ. ಕರೋನಾ ೩ನೇ ಅಲೆಯನ್ನು ಎದುರಿಸುವ ಸಲುವಾಗಿ ಮಕ್ಕಳನ್ನು ರಕ್ಷಿಸಲು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಾತೆಯರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮಗಳನ್ನು ಅಳವಡಿಸಿಕೊಂಡು ಮಕ್ಕಳಿಗೂ ಕೂಡ ಇದನ್ನು ಕಲಿಸಿಕೊಡಬೇಕಿದೆ. ಕರೋನಾವನ್ನು ಧೈರ್ಯದಿಂದ ಎದುರಿಸಲು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಅರೋಗ್ಯಕರ ಜೀವನಕ್ಕೆ ಪೂರಕವಾದ ಚಟುವಟಿಕೆಗಳನ್ನು ನಿರಂತವಾಗಿ ಮಾಡಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಶಿಲ್ಪಾ ಹೇಳಿದರು. ರಾಷ್ಟ್ರ ಸೇವಿಕಾ ಸಮಿತಿ ಕುಂದಾಪುರ ಮತ್ತು ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಶಾರದಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.27: ಕಾರಿನಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ. ಇದಿನಬ್ಬ ಸಾಹೀದ್ ಆರೋಪಿಯಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಗಿದ್ದೇನು:ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ವಿಲ್ಪೇಡ್ ಡಿ’ಸೋಜಾ (50) ಅವರು ಸಮವಸ್ತ್ರದಲ್ಲಿ ಇತರ ಸಿಬ್ಬಂದಿಗಳ ಜೊತೆಗೆ ಕರ್ತವ್ಯದಲ್ಲಿದ್ದು ಕೋವಿಡ್ -19 ಮಾರ್ಗಸೂಚಿಯಂತೆ ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮಾಸ್ಕ್ ಧರಿಸದೇ ತಿರುಗಾಟ ಮಾಡುವವರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ 4 ಜನ ಪ್ರಯಾಣ ಮಾಡುತ್ತಿದ್ದನ್ನು ನೋಡಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಮಾಸ್ಕ್ ಧರಿಸದೆ ಪ್ರಯಾಣ ಮಾಡುತ್ತಿದ್ದ ಬಗ್ಗೆ ವಿಚಾರಿಸುತ್ತಿರುವಾಗ ಕಾರಿನ ಚಾಲಕ ಆರೋಪಿ ಇದಿನಬ್ಬ ಸಾಹೀದ್ ಕಾರಿನಿಂದ ಇಳಿದು ಬಂದು ಹೆಡ್ ಕಾನ್ಸ್ಟೆಬಲ್ ವಿಲ್ಪೇಡ್ ಡಿ’ಸೋಜಾ ಮೈ ಮೇಲೆ ಬಿದ್ದು ಕೈಯಿಂದ ಬೆನ್ನಿಗೆ ಹಾಗೂ ಕಪಾಳಕ್ಕೆ ಹೊಡೆದು ಹಲ್ಲೆಮಾಡಿ ಸಮವಸ್ತ್ರವನ್ನು ಹರಿದು ಹಾಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಬಳಲುತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗುವಂತೆ ಬೈಂದೂರು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೆ ರಮೇಶ್ ಗಾಣಿಗ, ಗ್ರಾಮ ಪಂಚಾಯತ್ ಸದಸ್ಯ ಕೆ ಪ್ರಕಾಶ್ ಪೂಜಾರಿ, ಕಾಂಗ್ರೆಸ್ ಮುಖಂಡ ವಾಸುದೇವ್ ಯಡಿಯಾಳ, ಚಂದ್ರ ಬಳೆಗಾರ, ವಾಸು ಮೊಗವೀರ, ನಾರಾಯಣ ಶೆಟ್ಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕೆ. ರಮೇಶ್ ಗಾಣಿಗ ಕುಟುಂಬದವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಒಂದು ಹೊತ್ತಿನ ಅನ್ನದಾನ ಸೇವೆಯನ್ನು ನೀಡಿದರು.
