Author: ನ್ಯೂಸ್ ಬ್ಯೂರೋ

ನಮ್ಮಲ್ಲಿ ಹೆಚ್ಚಿನವರು ಮುಖಕ್ಕಾಗಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ, ಆದರೆ ನಮ್ಮ ಪಾದಗಳಿಗೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಅದಕ್ಕೂ ಒಮ್ಮೊಮ್ಮೆ ಆರೈಕೆ ಬೇಕಾಗುತ್ತದೆ. ಬೊಜ್ಜು, ಸರಿಯಾಗಿ ಅಳವಡಿಸದ ಬೂಟುಗಳು, ದೀರ್ಘಕಾಲದವರೆಗೆ ನಿಂತಿರುವುದು, ಶುಷ್ಕ ಚರ್ಮ, ಸರಿಯಾದ ಆರೈಕೆ ಮತ್ತು ನೈರ್ಮಲ್ಯದ ಕೊರತೆಯಿಂದಾಗಿ ಹಿಮ್ಮಡಿಗಳು ಸಾಮಾನ್ಯವಾಗಿ ಒಡೆಯುತ್ತದೆ. ಈ ಲೇಖನದಲ್ಲಿ ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಯ ಸಮಸ್ಯೆ ನಿವಾರಣೆಗೆ ಕೆಲವು ಮನೆಮದ್ದುಗಳ ಮಾಹಿತಿಯನ್ನು ನೀಡಲಾಗಿದೆ. ಬಾಳೆಹಣ್ಣು: ವಿಟಮಿನ್ ಎ, ಬಿ 6 ಮತ್ತು ಸಿ ಒಳಗೊಂಡಿರುವ ಬಾಳೆಹಣ್ಣಿನ ಪೋಷಕಾಂಶಗಳ ಸಮೃದ್ಧಿಯು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಚರ್ಮವನ್ನು ಚೆನ್ನಾಗಿ ಹೈಡ್ರೀಕರಿಸುತ್ತದೆ. ಬಾಳೆಹಣ್ಣು ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಪಾದಗಳನ್ನು ತೇವವಾಗಿರಿಸುತ್ತದೆ ಮತ್ತು ಚರ್ಮ ಒಣಗುವುದನ್ನು ತಡೆಯುತ್ತದೆ. ಬಳಸುವ ವಿಧಾನ: 2 ಮಾಗಿದ ಬಾಳೆಹಣ್ಣು ಮ್ಯಾಶ್ ಮಾಡಿ, ನಯವಾದ ಪೇಸ್ಟ್ ಆಗಿ ತೆಗೆದುಕೊಳ್ಳಿ. ಬಲಿಯದ ಬಾಳೆಹಣ್ಣುಗಳು ಚರ್ಮಕ್ಕೆ ಒಳ್ಳೆಯದಲ್ಲದ ಆಮ್ಲವನ್ನು ಹೊಂದಿರುವುದರಿಂದ ಅದನ್ನು ತಪ್ಪಿಸಿ. ಕಾಲ್ಬೆರಳ ಉಗುರುಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೇಸಿಐ ಬೈಂದೂರು ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಜೇಸಿ ವಲಯ 15ರ ಉಪಾಧ್ಯಕ್ಷ ಜೆಎಫ್‌ಎಫ್ ನಾಗೇಶ್ ನಾವಡ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಪ್ರತಿಯೊಂದು ಜೀವಿಗೆ ಉಸಿರಾಡಲು ಗಾಳಿ ಅತ್ಯವಶ್ಯ, ಪರಿಸರ ಕಾಳಜಿ ಇಂದು ಪ್ರಮುಖವಾಗಿದ್ದು, ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿದೆ ಎಂದರು. ಜೇಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೇಸಿ ಶ್ರೀಧರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜೇಸಿ ಬೈಂದೂರು ಸಿಟಿಯ ವಲಯಾಧಿಕಾರಿ ಜೇಸಿ ಮಣಿಕಂಠ ಎಸ್, ಘಟಕದ ಪೂರ್ವಾಧ್ಯಕ್ಷೆ ಜೇಸಿ ಪ್ರಿಯದರ್ಶಿನಿ ಬೆಸ್ಕೂರು, ಘಟಕದ ಜೇಸಿರೇಟ್ ಅಧ್ಯಕ್ಷೆ ಜೇಸಿರೆಟ್ ಅನಿತಾ ಆರ್. ಕೆ. ಮರವಂತೆ, ಘಟಕದ ಉಪಾಧ್ಯಕ್ಷರಾದ ಜೇಸಿ ಸಕ್ಕು ಕಲ್ಮಕ್ಕಿ, ಜೇಸಿ ಸೌಮ್ಯ, ಜೇಸಿ ಸುಶಾಂತ್ ಆಚಾರ್, ಘಟಕದ ಖಜಾಂಚಿ ಜೇಸಿ ಪ್ರೇಮಾ ವಿ. ಶೆಟ್ಟಿ, ಸದಸ್ಯರಾದ ಜೇಸಿ ರಾಘವೇಂದ್ರ ಹೊಳ್ಳ, ಜೇಸಿ ಸುಮಾ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಸುಮಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ರೋಟರಿ ರೈತ ಬಂಧು ಕಾರ್ಯಕ್ರಮದ ಅಡಿಯಲ್ಲಿ ಗಂಗೊಳ್ಳಿಯ ಕೃಷಿಕ ಗಣಪತಿ ಶೇರುಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಣಪತಿ ಶೇರುಗಾರ ಅವರ ಗದ್ದೆಯಲ್ಲಿ ನಾಟಿಯ ಸಮಯದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್‌ನ ಅಧ್ಯಕ್ಷ ರಾಜೇಶ ಎಂ.ಜಿ. ಅವರು ಗಣಪತಿ ಶೇರುಗಾರ್ ಅವರನ್ನು ಗೌರವಿಸಿದರು. ಕಾರ್ಯದರ್ಶಿ ನಾರಾಯಣ ಇ. ನಾಯ್ಕ, ವಲಯ ಸೇನಾನಿ ಕೆ. ರಾಮನಾಥ ನಾಯಕ, ಬಿ. ಲಕ್ಷ್ಮೀಕಾಂತ ಮಡಿವಾಳ, ಜಯಂತಿ ಶೇರುಗಾರ ಹಾಗೂ ಊರಿನ ರೈತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೋಟ ಪಿಎಸ್‌ಐ ಸಂತೋಷ್ ಬಿ.ಪಿ ನೇತೃತ್ವದ ತಂಡ ಬಂಧಿಸಿದೆ. ಕೋಟತಟ್ಟು ಪಡುಕೆರೆಯ ಇಬ್ರಾಹಿಂ ಅಲಿಯಾಸ್ ಆಕಾಶವಾಣಿ ಇಬ್ರಾಹಿಂ (55) ಬಂಧಿತ ಆರೋಪಿ. ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವಾಗ ಕೋಟದ ವರುಣತೀರ್ಥ ಕೆರೆ ಸಮೀಪ ಅಡ್ಡಗಟ್ಟಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಸುಮಾರು 1ಕೆ.ಜಿ 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ:  ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ನೂಜಾಡಿ ದಿ. ಅಶೋಕ್ ಕುಮಾರ್ ಶೆಟ್ಟಿ ಸ್ಮರಣಾರ್ಥ ನೂಜಾಡಿಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ದಿ. ಅಶೋಕ್ ಕುಮಾರ್ ಶೆಟ್ಟಿ ಪತ್ನಿ, ಪುತ್ರ ಮತ್ತು ನೂಜಾಡಿ ಭವಾನಿ ಸೂರಪ್ಪ ಶೆಟ್ಟಿ ಕುಟುಂಬದವರು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ವಿನ್ಯಾಸದ ಬಸ್ ನಿಲ್ದಾಣ ನಿರ್ಮಿಸಿದ್ದರು. ಈ ಸಂದರ್ಭ ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್ ಮೊಗವೀರ, ಮಾಜಿ ಅಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ, ಸದಸ್ಯ ಪ್ರವೀಣ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ. ಚಂದ್ರಶೇಖರ ಶೆಟ್ಟಿ, ರೋಶನ್ ಶೆಟ್ಟಿ ನೂಜಾಡಿ, ವೇ.ಮೂ.ಕೃಷ್ಣ ಭಟ್ ನೂಜಾಡಿ, ಅಭಿಮನ್ಯು ಇದ್ದರು. ಹಕ್ಲಾಡಿ ಎಸ್ಸೆಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಪ್ರೌಢಶಾಲಾ ಶಿಕ್ಷಕ ಡಾ.ಕಿಶೋರ್ ಕುಮಾರ್ ಶೆಟ್ಟಿ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಹ್ಮಾವರದ ಉಪ್ಪಿನಕೋಟೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ. ಗಂಗೊಳ್ಳಿ ಮೂಲದ ವಿಶಾಲ ಗಾಣಿಗ (35) ಕೊಲೆಯಾದ ಮಹಿಳೆ. ಕುತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಿರುವ ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪತಿಯೊಂದಿಗೆ ವಿದೇಶದಿಂದ ಆಗಮಿಸಿದ್ದ ಆಕೆ ಬ್ರಹ್ಮಾವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ತನ್ನ ತಂದೆ ಹಾಗೂ ಮಗಳ ಜೊತೆಗೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗುವವರಿದ್ದರು. ದಾರಿಮಧ್ಯೆ, ಬ್ಯಾಂಕಿನ ಕೆಲಸ ಇರುವ ಕಾರಣ ಅದನ್ನು ಮುಗಿಸಿ ಗಂಗೊಳ್ಳಿ ಮನೆಗೆ ಬರುವುದಾಗಿ ಹೇಳಿ ಮರಳಿ ಬ್ರಹ್ಮಾವರಕ್ಕೆ ತೆರಳಿದ್ದರು. ಆದರೆ, ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿ ಬ್ರಹ್ಮಾವರಕ್ಕೆ ತಂದೆ ಬಂದಿದ್ದು, ಆ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಮಧ್ಯಾಹ್ನ ಬ್ಯಾಂಕ್ ಕೆಲಸ ಮುಗಿಸಿ ಹಿಂದಿರುಗುವ ವೇಳೆ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ. ವಿಷ್ಣುವರ್ಧನ್, ಎ.ಎಸ್.ಪಿ. ಕುಮಾರಚಂದ್ರ ಸಹಿತ ಪೊಲೀಸ್ ಅಧಿಕಾರಿಗಳು ತೆರಳಿ, ತನಿಖೆ ನಡೆಸುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋರೊನಾ ನಡುವೆಯೇ ಇದೀಗ ಝೀಕಾ ವೈರಸ್ ತಲ್ಲಣ ಸೃಷ್ಟಿಸುತ್ತಿದೆ. ಈಗಾಗಲೇ ಕೇರಳದಲ್ಲಿ ಝೀಕಾ ವೈರಸ್ ಖಚಿತ ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ, ಝೀಕಾ ವೈರಸ್ ಹರಡುವ ವಿಧಾನ, ರೋಗಲಕ್ಷಣಗಳ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದು ಹಾಗೂ ಇದನ್ನು ತಡೆಯುವ ನಿಟ್ಟನಲ್ಲಿ ಈ ಕೆಳಗಿನ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದ್ದಾರೆ. ಹರಡುವ ವಿಧಾನ: • ಡೆಂಗ್ಯೂ/ಚಿಕುನ್ಗುನ್ಯಾ,ವೆಸ್ಟ ನೈಲ್ ಹಾಗೂ ಹಳದಿ ಜ್ವರವನ್ನು ಹರಡುವಂತಹ ಸೊಳ್ಳೆಗಳಾದ ಈಡೀಸ್ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಝೀಕಾ ವೈರಸ್ ಖಾಯಿಲೆಯು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. • ಝೀಕಾ ವೈರಸ್ ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೇ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ ಹಾಗೂ ಬೈಂದೂರು ಶಾಸಕರ ಸಹಭಾಗಿತ್ವದಲ್ಲಿ ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್ ಶಿವಮೊಗ್ಗ, ಪಿಇಎಸ್ ಶಿವಮೊಗ್ಗ ಹಾಗೂ ಆರೋಗ್ಯ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಶಿರೂರಿನಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ವಾಕ್ಸಿನ್ ಅಗತ್ಯವಾಗಿ ಪಡೆಯಬೇಕಿದೆ. ದೇಶಾದ್ಯಂತ ವಾಕ್ಸಿನ್ ನೀಡುವ ಕಾರ್ಯ ನಡೆಯುತ್ತಿದೆ. ವಾಕ್ಸಿನ್ ಪಡೆದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಉದಾಹರಣೆಗಳು ಕಡಿಮೆ. ಮೂರನೇ ಅಲೆಯೂ ಕೂಡ ಬರಬಹುದೆಂದು ತಜ್ಞರ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಆರೈಕೆದಾರರಿಗೆ ವಾಕ್ಸಿನ್ ನೀಡುವ ಸಲುವಾಗಿ ಲೋಕಸಭಾ ಸದಸ್ಯರ ಮುತುವರ್ಜಿಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಗೇರು ಪ್ಲಾಂಟೇಶನ್ ಇದ್ದು ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ಸಿಂಪಡಿಸಿದ್ದರಿಂದ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಹಲವು ಕುಟುಂಬಗಳ ಆಶಾಕಿರಣ ಅಶೋಕ ಕುಮಾರ್ ಶೆಟ್ಟಿ ಅವರು ಅಧಿಕಾರದ ಸ್ಥಾನದ ಆಸೆಗಾಗಿ ಪಕ್ಷವನ್ನು ಆಶ್ರಯಿಸಿದವರಲ್ಲ. ಸೇವೆಗಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಆರೆಸ್ಸೆಸ್ ಹಿನ್ನಲೆಯಿಂದ ಬಂದಿದ್ದ ಇವರು ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಪಕ್ಷದ ಹಿತದ ಜೊತೆಗೆ ಊರಿನ ಅಭಿವೃದ್ಧಿಯ ಕಾಳಜಿಯೇ ಇವರಿಗೆ ಪ್ರಧಾನವಾಗಿತ್ತು. ಆಕಸ್ಮಿಕವಾಗಿ ಮರಣ ಹೊಂದಿದ ಆರೆಸ್ಸೆಸ್‌ನ ಸಕ್ರಿಯ ಕಾರ್ಯಕರ್ತ ರಾಜೇಶ್ ಉಪ್ಪಿನಕುದ್ರು ಸಂಘದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಂಘದ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಅವರ ಅಕಾಲಿಕವಾಗಿ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವತಿಯಿಂದ ನಾವುಂದ ಮಾಲಸಾ ಮಾಂಗಲ್ಯ ಆರ್ಕೇಡ್‌ನಲ್ಲಿ ಭಾನುವಾರ ಜರಗಿದ ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಇವರ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಂಚಭಾಷಾ ಲೇಖಕಿ ಪಾರ್ವತಿ ಜಿ ಐತಾಳ್ ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಸಾಧನೆ ಸದಾ ಕಾಲ ಪ್ರೇರಣೆ ನೀಡುವಂತದ್ದು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಮನ್ನಣೆ ಸಿಗಲೇ ಬೇಕಿದೆ ಎಂದು ಖ್ಯಾತ ಕಲಾವಿದೆ ಸಾಹಿತಿ ಪೂರ್ಣಿಮಾ ಸುರೇಶ್ ಹೇಳಿದರು. ಅವರು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಸಂಪಾದಕತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಸಮಗ್ರ ಕೃತಿಗಳ ಪರಿಚಯವುಳ್ಳ ‘ಸುರಗಂಗೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅನುವಾದ ಕ್ಷೇತ್ರದಲ್ಲೂ ಕೂಡ ತಮ್ಮ ಸ್ವಂತಿಕೆಯಿಂದ ಕೃತಿಗಳಿಗೆ ಜೀವ ತುಂಬುವ ಪಾರ್ವತಿ ಐತಾಳ್ ಸಾಹಿತ್ಯ ತಪಸ್ವಿನಿ. ಹೊಸ ಚಿಗುರುಗಳನ್ನು ಬೆಳೆಸುವಲ್ಲಿ ಅವರ ಕಾರ್ಯವೈಖರಿ ಅಭಿನಂದನೀಯ ಎಂದು ಅವರು ಹೇಳಿದರು. ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಮತ್ತು ಲೇಖಕಿ ಸುಮತಿ ಶೆಣೈ ಶುಭಾಶಂಸನೆಗೈಯುತ್ತ ಮಾತನಾಡಿ ಇಂಥ ಪುಸ್ತಕಗಳು ಉದಯೋನ್ಮುಖ ಬರಹಗಾರರಿಗೆ ಬಹುದೊಡ್ಡ ಪ್ರೇರಣೆಯನ್ನು ನೀಡುವಂತಹವು. ಇದು…

Read More