ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಬಹುದಾದ ಹಿನ್ನಲೆಯಲ್ಲಿ, ಮಕ್ಕಳೊಂದಿಗೆ ಮಕ್ಕಳ ಸ್ನೇಹಿಯಾಗಿ ಬೆರೆತು, ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿ, ಕೋವಿಡ್ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ, ಮಕ್ಕಳ ಸಮಾಲೋಚಕರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಹ ಮಕ್ಕಳ ಸಮಾಲೋಚಕರನ್ನು ನೇಮಿಸಿ. ಮಕ್ಕಳ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವ ಎಂ.ಎಸ್.ಡಬ್ಯೂ ಮತ್ತು ಮನ:ಶಾಸ್ತ್ರದ ವಿದ್ಯಾರ್ಥಿಗಳಿಗೆ, ಮಕ್ಕಳೊಂದಿಗೆ ಬೆರೆತು, ಮಕ್ಕಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮತ್ತು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಮನವೊಲಿಸುವ ವಿಧಾನಗಳ ಬಗ್ಗೆ ಸೂಕ್ತ ತರಬೇತಿ ನೀಡಿ, ಅವರನ್ನು ಟೆಲಿಕೌನ್ಸಿಲಿಂಗ್ ಸೇವೆಗಳಿಗೆ ಸಹ ನಿಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾದ ಎನ್.ಗುರುರಾಜ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2021ನೇ ಸಾಲಿನ ಪತ್ರಿಕಾದಿನದ ಗೌರವವನ್ನು ಅವರ ಪರ್ಕಳದ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎನ್. ಗುರುರಾಜ್ ಅವರು, ಮುದ್ರಣ ಮಾಧ್ಯಮ ಇಂದಿಗೂ ವಿಶ್ವಹಾರ್ಹತೆಯನ್ನು ಉಳಿಸಿಕೊಳ್ಳಲು ಎನ್ ಗುರುರಾಜ್ ಅವರಂತಹ ಅನೇಕ ಹಿರಿಯ ಪತ್ರಕರ್ತರು ಮಾಡಿದ ನಿಸ್ವಾರ್ಥ ಪತ್ರಕರ್ತರ ಅಪೂರ್ವ ಸೇವೆ ಕಾರಣವಾಗಿದೆ. ಗುರುರಾಜ್ ಸದಾ ಅಭಿನಂದನಾರ್ಹರು ಎಂದು ಹರಿಕೃಷ್ಣ ಪುನರೂರು ಹೇಳಿದರು. ಪತ್ರಿಕೋದ್ಯಮ ಸಂದಿಗ್ದತೆಯನ್ನು ಎದುರಿಸುತ್ತಿದೆ, ಹೀಗೆ ವಿಶ್ರಾಂತರನ್ನು ಗೌರವಿಸುವುದು ಸಂತೋಷದ ವಿಷಯ ಎಂದು ಹೇಳಿದರು. ವಿಶ್ರಾಂತ ಜೀವನ ನಡೆಸುತ್ತಿರುವ ಸಾಧಕರನ್ನು ಅವರವರ iನೆಗೆ ತೆರಳಿ ಗೌರವಿಸುವ ಸಂಪ್ರದಾಯ ವಿನೂತನವಾದುದು. 13 ವರ್ಷಗಳಿಂದ ನಿರಂತರ ಹೀಗೆ ಹಿರಿಯರೆಡೆಗೆ ನಮ್ಮ ನಡಿಗೆ ಮಾಡುತ್ತಿರುವ ಡಾ. ಶೇಖರ ಅಜೆಕಾರು ಅವರ…
ಪ್ರೆಶರ್ ಕುಕ್ಕರ್ ಮಹಿಳೆಯರ ಫೆವರೇಟ್ ಅಡುಗೆ ಸಾಧನ. ಆದರೆ ಸರಿಯಾಗಿ ಬಳಸದಿದ್ದರೆ ತುಂಬಾ ಅಪಾಯಕಾರಿ ಅಡುಗೆ ಸಾಧನವೂ ಹೌದು ಎಂದು ನಿಮಗೆ ತಿಳಿದಿದೆಯೇ? ಶಾಖ ಮತ್ತು ಒತ್ತಡದಿಂದ ಅಡುಗೆ ತಯಾರಿಸುವ ಈ ಸಾಧನದ ಯಾವುದೇ ಭಾಗ ಹಾನಿಗೊಳಗಾದರೆ ಅಪಾಯ ಎದುರಾಗಬಹುದು. ಹಾಗಾಗಿ ಅಪಾಯ ತಡೆಯಲು ಈ ಕೆಳಗೆ ಸೂಚಿಸಲಾಗಿರುವ ವಿಚಾರಗಳು ನೆನಪಿರಲಿ ಕುಕ್ಕರ್ ತುಂಬುವಂತೆ ಮಾಡಬೇಡಿ:ಒತ್ತಡ ಮತ್ತು ನೀರಿನ ಮೂಲಕ ಆಹಾರ ಬೇಯುವ ಕುಕ್ಕರ್ ನಲ್ಲಿ ಉಸಿರಾಟಕ್ಕೆ ಸ್ಥಳವಿಲ್ಲದಿದ್ದಾಗ, ಆಹಾರ ಹೇಗೆ ಬೇಯ್ಯುತ್ತದೆ ಹೇಳಿ? ಆಗಲೇ ಅದು ಸಿಡಿಯುವುದು. ಆದ್ದರಿಂದ, ನೀವು ಮೂರನೇ ಎರಡು ಅಂದರೆ ಕುಕ್ಕರಿನ ಮುಕ್ಕಾಲು ಭಾಗದಷ್ಟು ಮಾತ್ರ ಆಹಾರ ಸೇರಿಸಿ, ಮತ್ತು ಬೇಯಿಸಿದಾಗ ಉಬ್ಬುವ ಆಹಾರ ಇದ್ದರೆ, ಅರ್ಧದಷ್ಟು ಭಾಗವನ್ನು ಮಾತ್ರ ಭರ್ತಿ ಮಾಡಿ. ಸಾಕಷ್ಟು ನೀರು ಸೇರಿಸಿ:ಪ್ರೆಶರ್ ಕುಕ್ಕರ್‌ನ ಕಾರ್ಯವಿಧಾನದ ಪ್ರಕಾರ, ಶಾಖ ಮತ್ತು ಒತ್ತಡವನ್ನು ಸೃಷ್ಟಿಸಲು ಇದಕ್ಕೆ ಸಾಕಷ್ಟು ದ್ರವ / ನೀರು ಬೇಕಾಗುತ್ತದೆ, ಆದ್ದರಿಂದ ನೀವು ಸಾಕಷ್ಟು ನೀರು / ದ್ರವವನ್ನು ಸೇರಿಸಿದ್ದೀರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ಆಚರಿಸಲಾಯಿತು. ಶ್ರೀ ಗುರು ನಿತ್ಯಾನಂದ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಆರ್. ಕೆ. ಬಿಲ್ಲವ, ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 182 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 45 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಸನ್ನಾ ಪೈ 600ಕ್ಕೆ 600 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಿಫ್ಜಾ (597) ಮತ್ತು ಸನತ್ (594) ಅಂಕ ಪಡೆದಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದ ನಮಿತಾ ವಿ. ಶೇಟ್ 595 ಅಂಕಗಳನ್ನು ಗಳಿಸಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಬುದ್ಧ ಸಮಾಜ ನಿರ್ಮಾಣ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಉನ್ನತ ಆಶಯವನ್ನಿರಿಸಿಕೊಂಡು ರಾಜ್ಯಾದ್ಯಂತ ಕಳೆದ 8 ತಿಂಗಳಿಂದ ಸುಮಾರು 8000 ಕಿ.ಮೀ. ಕ್ರಮಿಸಿರುವ ಬೆಂಗಳೂರಿನ ಸಾಹಿತಿ ಸಮಾಜಸೇವಕ ಹೆಚ್. ಕೆ. ವಿವೇಕಾನಂದ ಅವರ ಪಾದಯಾತ್ರೆಯು ಕುಂದಾಪುರ ತಾಲೂಕಿನ ಸಿದ್ದಾಪುರಕ್ಕೆ ಬಂದು ತಲುಪಿತು. ಪಾದಯಾತ್ರೆ ಹೆಬ್ರಿಯಿಂದ ಶಂಕರನಾರಾಯಣ ತಲುಪುತ್ತಿದ್ದಂತೆ ಸಿದ್ಧಾಪುರ ಹಸಂಗಡಿ ರೋಟರಿ ಕ್ಲಬ್, ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ, ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸಾರ್ವಜನಿಕರು ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು. ಈ ಸಂಧರ್ಭ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಲಕ್ಷ್ಮಿನಾರಾಯಣ ಉಡುಪ, ಲೇಖಕ ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ ಹೊಸಂಗಡಿ ರೋಟರಿ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ, ಯಕ್ಷ ನುಡಿಸಿರಿ ಬಳಗದ ಕಾರ್ಯದರ್ಶಿ ಭೋಜರಾಜ ಶೆಟ್ಟಿ, ಸುಭಾಷ್ ಯಡಿಯಾಳ, ನಮಿತಾ ಯಡಿಯಾಳ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಜನತಾ ಕಾಲನಿ ನಿವಾಸಿ ಶಂಕರ ಖಾರ್ವಿ-ಪಾರ್ವತಿ ದಂಪತಿಯ ಪುತ್ರ ಸುಭಾಸ್ ಖಾರ್ವಿ(28) ಗುಲಾಯ್ನ್ ಬೇರ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತಿದ್ದು, ಅವರ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ (ಆಸ್ಪತ್ರೆ ಸಂಖ್ಯೆ: 03444242). ಚಿಕಿತ್ಸೆಗೆ ರೂ 4 ಲಕ್ಷ ವೆಚ್ಚವಾಗುವುದೆಂದು ಆಸ್ಪತ್ರೆಯ ನ್ಯೂರೊಲಜಿ ವಿಭಾಗದ ಮುಖ್ಯಸ್ಥೆ ಡಾ. ಅಪರ್ಣಾ ಪೈ ದೃಢೀಕರಿಸಿದ್ದಾರೆ. ಸುಭಾಸ್ ಅವರ ತಂದೆ ಹೃದ್ರೋಗಕ್ಕೆ ಮತ್ತು ತಾಯಿ ಪಾರ್ವತಿ ಥೈರಾಯ್ಡ್ ಸಂಬಂಧಿ ಕಾಯಿಲೆಗೆ ನಿರಂತರ ಔಷಧಿ ಸೇವಿಸುತ್ತಿದ್ದಾರೆ. ಕೇವಲ ದಿನದ ದುಡಿಮೆಯಿಂದ ಬದುಕಬೇಕಾದ ಕುಟುಂಬ ಸುಭಾಸ್ ಚಿಕಿತ್ಸೆಗೆ ಹಣ ಹೊಂದಿಸಲು ಸಾದ್ಯವಾಗದೇ ಅವರು ದಾನಿಗಳ, ಸಂಘಟನೆಗಳ ನೆರವು ಯಾಚಿಸಿದ್ದಾರೆ. ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ (ಐಎಫ್‌ಎಸ್‌ಸಿ ಕೋಡ್: ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್‌ನ(ಐಎಫ್‌ಎಸ್‌ಸಿ ಕೋಡ್: 0ಸಿಎನ್‌ಆರ್‌ಬಿ0010282) 02822250002001 ಸಂಖ್ಯೆಯ ಉಳಿತಾಯ ಖಾತೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ. ಸಹಕಾರಿ ಸಂಘದ ಅವ್ಯವಹಾರ ತನಿಖೆ ಮಾಡಿ ತಪ್ಪಿತಸ್ತರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಮುಂದೆ ಧರಣಿ ನಡೆಸುವುದಾಗಿ ಸಂಘದ ಸದಸ್ಯ ಬಿ. ಟಿ. ಮಂಜುನಾಥ ಪೂಜಾರಿ ಎಚ್ಚರಿಸಿದ್ದಾರೆ. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಉಡುಪಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಅವರು ಮಾಮೂಲಿ ಅರ್ಜಿ ಎಂದು ಪರಿಗಣಿಸಿ ತಮ್ಮ ಕೈಕೆಳಗಿನ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆಯುತ್ತಿದ್ದರೂ ತಮಗೆ ಏನು ಸಂಬಂಧ ಇಲ್ಲ ಎಂಬಂತೆ ವರ್ತಿಸಿ ಮಾಹಿತಿ ನೀಡಲು ಅವಕಾಶ ಇಲ್ಲ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದಾರೆ. ಆ ನಂತರ ಕುಂದಾಪುರ ಸಹಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ರಾಜೇಶ ಎಂ.ಜಿ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಾರಾಯಣ ಇ. ನಾಯ್ಕ್, ನಿಕಟಪೂರ್ವ ಅಧ್ಯಕ್ಷರಾಗಿ ಬಿ.ಲಕ್ಷ್ಮೀಕಾಂತ ಮಡಿವಾಳ, ನಿಯೋಜಿತ ಅಧ್ಯಕ್ಷೆಯಾಗಿ ಸುಗುಣ ಆರ್.ಕೆ., ಉಪಾಧ್ಯಕ್ಷರಾಗಿ ಪ್ರವೀಣ ಒಲಿವೇರಾ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಪೂಜಾರಿ, ಖಜಾಂಚಿ ನಾಗರಾಜ ಶೆಟ್ಟಿ, ನಿರ್ದೇಶಕರಾಗಿ ಉಮೇಶ ಮೇಸ್ತ, ಪ್ರದೀಪ ಡಿ.ಕೆ., ವಾಸುದೇವ ಶೇರುಗಾರ್, ಚಂದ್ರಕಲಾ ಟಿ., ಜನಾರ್ದನ ಪೂಜಾರಿ ಪೆರಾಜೆ ಶಿವಾನಂದ ಪೂಜಾರಿ, ಪ್ರೇಮಾ ಸಿ.ಎಸ್., ಎಚ್. ಗಣೇಶ ಕಾಮತ್, ಅಶೋಕ ದೇವಾಡಿಗ, ರಾಮನಾಥ ನಾಯಕ್ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ 2021ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ನೊಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್ ಅವರು ವರ್ಚುವಲ್ ವೇದಿಕೆಯ ಮೂಲಕ ಚಾಲನೆ ನೀಡಿದ್ದು, ಆರೋಗ್ಯ ಸೇವೆಗಳಿಗೆ ಈ ಕಾರ್ಡ್ ಉತ್ತಮ ಪ್ರಯೋಜನ ಹೊಂದಿದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಉಪ ವ್ಯವಸ್ಥಾಪಕರಾದ ಕೃಷ್ಣಪ್ರಸಾದ್ ಹೇಳಿದರು. ಅವರು ಶುಕ್ರವಾರ ಕುಂದಾಪುರದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ಅವರಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ ಹಸ್ತಾಂತರಿಸಿದಬಳಿಕ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಅವಿಭಾಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ…
