ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ.177 ಕೋಟಿ ವ್ಯವಹಾರ ನಡೆಸಿ ರೂ 27.6 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಲಾಭಾಂಶ ಘೋಷಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಸೋಮವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂಘವು 19 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದ್ದು, ಕುಂದಾಪುರ ಶಾಖೆ ಸ್ವಂತ ನಿವೇಶನ ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಉತ್ತಮ ಠೇವಣಿ ಹಾಗೂ ಸಾಲ ವಸೂಲಾತಿ ಮಾಡಿದ ಸಿದ್ಧಾಪುರ ಶಾಖೆಯ ಪ್ರಬಂಧಕಿ ಕವಿತಾ ಪೂಜಾರಿ ಹಾಗೂ ಸಿಬ್ಬಂದಿ ರವೀಂದ್ರ ಪೂಜಾರಿ, ಹಾಲಾಡಿ ಶಾಖೆಯ ಪ್ರಬಂಧಕ ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿಯನ್ನು ಗುರುತಿಸಲಾಯಿತು. ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನುಕೆರೆ ಗ್ರಾಮದ ಶಾರದಾ ಅಚ್ಯುತ್ ಗಾಣಿಗ ಇವರ ಮನೆಗೆ ತಡ ರಾತ್ರಿ ಬಡಿದ ಭಾರೀ ಸಿಡಿಲಿಗೆ ಮನೆ ಸಂಪೂರ್ಣ ಹಾನಿಯಾಗಿ ಜಖಂಗೊಂಡ ಘಟನೆ ನಡೆದಿದೆ. ಮಧ್ಯರಾತ್ರಿ ಒಂದೇ ಸಮನೆ ಸುರಿದ ಗಾಳಿ ಮಳೆಗೆ ಏಕಾಎಕಿ ಬಡಿದ ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆ, ಮೇಲ್ಚಾವಣಿ, ವಿದ್ಯುತ್ ಉಪಕರಣಗಳು ಸೇರಿದಂತೆ ವಿದ್ಯುತ್ ಲೈನ್ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಸುಮಾರು 5 ಲಕ್ಷ ಹೆಚ್ಚು ಹಾನಿ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ ಮನೆಯ ಯಜಮಾನತಿ ವಯೋವೃದ್ಧೆ ಶಾರದಾ ಗಾಣಿಗ (80) ನಿದ್ದೆಯ ಮಂಪರಿನಲ್ಲಿದ್ದು ಆಘಾತಕೊಳ್ಳಗಾಗಿದ್ದು ಅದೃಷ್ಟವಶಾತ್ ಕುಟುಂಬ ಸದಸ್ಯರು ಯಾವುದೇ ಪ್ರಾಣಾಪಯವಿಲ್ಲದೇ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಒ ಸುನೀಲ್, ವಿಎ ದೀಪಿಕಾ ಶೆಟ್ಟಿ, ಗಾಣಿಗ ಸಮಾಜದ ಮುಖಂಡರಾದ ನಾಗರಾಜ ಗಾಣಿಗ ಸಾಲಿಗ್ರಾಮ, ಅರುಣ್ ಗಾಣಿಗ ತೆಕ್ಕಟ್ಟೆ ಬೇಟಿ ನೀಡಿ…
ಕುಂದಾಪ್ರ ಡಾಟ್ ಕಾಂ ಸದ್ದಿ.ಕುಂದಾಪುರ: ಇಂದಿನ ಆಧುನಿಕ ಜಗತ್ತಿನ ಪ್ಯಾಷನ್ ಲೋಕದಲ್ಲಿ ಲಕ್ಷಗಟ್ಟಲೇ ಹಣ ನೀಡಿ ನಾಯಿಗಳನ್ನು ಸಾಕುತ್ತಾರೆ. ಇದರಿಂದ ಶ್ರೀಮಂತಿಕೆ ಎಂಬುಂದನ್ನು ತೋರ್ಪಡಿಸುವುದು ಬಿಟ್ಟರೆ ಬೇರೆ ಯಾವುದೇ ಲಾಭಗಳಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಗೆ ಪ್ರತಿ ಮನೆಗೊಂದು ಗೋವುಗಳನ್ನು ಸಾಕಬೇಕಾಗಿದೆ. ಗೋವು ನಮ್ಮ ಮನೆಯ ದೇವರು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಜಿಲ್ಲಾ ಸಹಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದರು. ಅವರು, ವಿಶ್ವ ಹಿಂದೂ ಪರಿಷದ್ ಬಜರಂಗದಳ ಕುಂದಾಪುರ ಪ್ರಖಂಡ ಬೀಜಾಡಿ ವಲಯದ ನೇತೃತ್ವದಲ್ಲಿ ಗೋಪಾಡಿ ಶ್ರೀ ಚಿಕ್ಕು ಅಮ್ಮ ದೈವಸ್ಥಾನದ ವಠಾರದಲ್ಲಿ 2ನೇ ವರ್ಷದ ಸಾಮೂಹಿಕ ಗೋಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ಮುಂಜಾನೆ ಹಾಸಿಗೆಯಿಂದ ಎದ್ದ ಬಳಿಕ ಗೋವಿನ ಮುಖ ಮೊದಲು ನೋಡಿದರೆ ಅದೆಷ್ಟೂ ನಮ್ಮ ಕರ್ಮವನ್ನು ತೊಳೆದ ಫಲಗಳು ನಮಗೆ ಸಿಗುತ್ತದೆ. ಸಾರ್ವಜನಿಕರಲ್ಲಿ ಗೋವುಗಳ ಬಗ್ಗೆ ಜಾಗೃತಿ ಮತ್ತು ಸನಾತನ ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಇತಂಹ ಸಾಮೂಹಿಕ ಗೋಪೂಜೆಯನ್ನು ದೇಶದ್ಯಾಂತ ವಿಶ್ವ ಹಿಂದೂ ಪರಿಷತ್…
ಅಮಾವಾಸ್ಯೆ ಸ್ನಾನಕ್ಕಿಳಿದ ಕೋಟಿಲಿಂಗೇಶ್ವರ ದೇವರು ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಾಣ ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರ ಕೊಡಿ ಹಬ್ಬದ ಪ್ರಯುಕ್ತ ದೇವರ ಅಮಾವಾಸ್ಯೆ ಸ್ನಾನದ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆಯಿತು. ದೇವಳದ ವಠಾರದಿಂದ ಹೊರಟ ಶ್ರೀ ಕೋಟಿಲಿಂಗೇಶ್ವರ ದೇವರು ದೊಡ್ಡೋಣಿ ರಸ್ತೆಯ ಮೂಲಕ ಬೀಜಾಡಿ ಅಮಾವಾಸ್ಯೆ ಕಡು ಕಡಲ ತೀರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಸ್ನಾನದ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ದೇವರು ಸಾಗುವ ರಸ್ತೆಯ ಉದ್ದಕ್ಕೂ ಭಕ್ತರು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ಹಾಗೂ ರಸ್ತೆಯ ಮೇಲೆ ರಂಗೋಲಿ ಮತ್ತು ಸ್ವಾಗತ ಮಂಟಪಗಳನ್ನು ರಚಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಪಂಚವಾದ್ಯಗಳು ಸೇರಿದಂತೆ ದೇವರ ನಾಮಸ್ಮರಣೆಯ ಘೋಷಣೆಗಳು ದೇವರ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.07: ನಮ್ಮ ಹಿರಿಯರ ಆಚರಣೆಗಳಲ್ಲಿ ವೈಜ್ಞಾನಿಕ ಅರ್ಥ ಇರುತ್ತದೆ. ಅದನ್ನೆಲ್ಲ ಅನುಸರಿಸಿದ ಕಾರಣಕ್ಕೆ ಅವರು ಆಯುಷ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಂಡಿದ್ದರು ಎಂದು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ದೀಪಾವಳಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಎಲ್ಲಾ ಹಬ್ಬದ ಆಚರಣೆಯ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ ಮುಖ್ಯ ಅತಿಥಿಗಳಾಗಿದ್ದ ಕುಂದಗನ್ನಡದ ಹಾಸ್ಯ ಪ್ರತಿಭಾವಂತ ಚೇತನ್ ಶೆಟ್ಟಿ ನೈಲಾಡಿ ದೀಪಾವಳಿಯ ಬಲೀಂದ್ರ ಕರೆಯುವಿಕೆ ವೈಶಿಷ್ಟ್ಯತೆ, ಹಬ್ಬದ ಕ್ರಮಗಳನ್ನು ಹಾಗೂ ಅದರ ಮಹತ್ವವನ್ನು ರಸವತ್ತಾಗಿ ವಿವರಿಸಿದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹಬ್ಬದ ಸಂಭ್ರಮವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಉಪನ್ಯಾಸಕಿ ಪ್ರವೀಣಾ ಪೂಜಾರಿ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಾರ್ಜಾ,ಅ.7: ಅರಬ್ ರಾಷ್ಟ್ರದಲ್ಲಿರುವ ಎಲ್ಲ ಕನ್ನಡಿಗರ ಪರವಾಗಿ, ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಶನಿವಾರ ಸಂಜೆ ಶಾರ್ಜಾ ದ ಮಕಾನಿ ರೆಸ್ಟೋರೆಂಟ್ ಆಯೋಜಿಸಲಾಗಿತ್ತು. ಪುನೀತ್ ಅವರ ಅಭಿಮಾನಿಗಳಾದ ಸದನ್ ದಾಸ್, ಮಧು ಗೌಡರ್ ಹಾಗೂ ವಿಜಯ್ ಗುಜ್ಜರ್ ಇವರ ಮುಂದಾಳ್ವತದಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಅರಬ್ ರಾಷ್ಟ್ರದಲ್ಲಿ ನೆಲೆಸಿರುವಂತಹ ಅನೇಕ ಕನ್ನಡ ಪ್ರಿಯರು ಹಾಗೂ ಪುನೀತ್ ಅಭಿಮಾನಿಗಳು ಸೇರಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಹಾಗೂ ಮೌನಾಚರಣೆ ಮಾಡುವುದರ ಮೂಲಕ ಮನದಾಳದ ಮೂಕವೇದನೆಯನ್ನು ಅಭಿವ್ಯಕ್ತಗೊಳಿಸಿದರು. ನಂತರ ಅಭಿಮಾನಿಗಳು, ಪುನೀತ್ ಅವರ ಗುಣಗಾನ ಮಾಡುವುದರ ಮೂಲಕ, ಅವರು ಮಾಡಿರುವಂತಹ ಒಳ್ಳೆಯ ಕಾರ್ಯಕ್ರಮವನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ಚರ್ಚಿಸಿದರು. ಆದಷ್ಟು ಬೇಗ ಬ್ಲಡ್ ಡೊನೇಷನ್ ಕ್ಯಾಂಪ್ ಮಾಡುವುದರ ಜೊತೆಗೆ, ಮುಖ್ಯವಾಗಿ ದೇಹದ ಅಂಗಾಂಗಗಳನ್ನು ದಾನ ಮಾಡುವುದರ ಬಗ್ಗೆ ಮಹತ್ವದ ಕಾರ್ಯಕ್ರಮಕ್ಕೆ ನಾಂದಿಯನ್ನು ಆಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಡಿಗ ಮನೆತನದ ಕಾಲುದೀಪವೊಂದು ಸಮುದ್ರೋಲ್ಲಂಘನ ಮಾಡಿ ವಿಶ್ವದ ದೊಡ್ಡಣ್ಣ ಎಂದೆನಿಸಿಕೊಂಡ ಅಮೇರಿಕಾ ಅಧ್ಯಕ್ಷರ ದೀಪಾವಳಿ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಕುಂದಾಪುರ ತಾಲೂಕು ಕಕ್ಕುಂಜೆ ಗ್ರಾಮದ ಅಡಿಗ ಕುಟುಂಬದ ಕಾಲುದೀಪದಲ್ಲಿ ಅಮೆರಿಕಾದ ಪ್ರಥಮ ಪ್ರಜೆ ಜೋ ಬೈಡನ್ ದೀಪ ಬೆಳಗಿ ಶುಭಕೋರಿದ್ದರು. ಈ ದೀಪದ ಸಂಬಂಧ ಬೆಳೆಸಿದವರು ಜೋ ಬೈಡನ್ ಪತ್ನಿ ಜಿಲ್ ಬೈಡನ್. ಸಂಬಂಧ ಜೋಡಿಸಿದವರು ಅನಿವಾಸಿ ಭಾರತೀಯ ಕಕ್ಕುಂಜೆಯ ಮಾಲಾ ಅಡಿಗ. ಮೂಲತಃ ಕಕ್ಕುಂಜೆಯವರಾದ ಮಾಲಾ ಅಡಿಗ ಅವರು ಅಮೇರಿಕಾದಲ್ಲಿಯೇ ನೆಲೆಸಿದ್ದು, ಜಿಲ್ ಬೈಡನ್ ಅವರ ನೀತಿ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಾಯಿಗೆ ಬಳುವಳಿಯಾಗಿ ಬಂದಿದ್ದ ಕಾಲುದೀಪವನ್ನು ತಮ್ಮ ಬಳಿ ಇರಿಸಿಕೊಂಡಿದ್ದ ಮಾಲಾ ಅಡಿಗ ಅವರಿಗೆ, ಅಧ್ಯಕ್ಷರ ಪತ್ನಿ ಜಿಲ್ ಬೈಡನ್ ದೀಪದ ಬೇಡಿಕೆ ಇಟ್ಟಿದ್ದರಿಂದ ತಮ್ಮ ಮನೆಯಲ್ಲಿದ್ದ ಕಾಲು ದೀಪ ಒದಗಿಸಿದ್ದರು. ಅದೇ ಕಾಲುದೀಪ ಜೋ ಬೈಡನ್ ಹಾಗೂ ಜಿಲ್ ಬೈಡನ್ ಬೆಳಗಿಸಿ ಭಾರತೀಯರಿಗೆ ಶುಭಾಶಯ ಕೋರಿದ್ದರು. ಇದನ್ನೂ ಓದಿ:► ಕುಂದಾಪುರದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪಿನಕುದ್ರು ಕಾಮತ್ ಕುಟುಂಬ ವಿಶಿಷ್ಟವಾದ ಯಕ್ಷಗಾನ ಗೊಂಬೆಯಾಟ ಪರಂಪರೆಯನ್ನು 350 ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದೆ ಎನ್ನುವುದು ಈ ಅಪೂರ್ವದ ಕಲೆಯ ಬಗೆಗೆ ಇದ್ದ ಅವರ ಪ್ರೀತಿ, ಬದ್ಧತೆಯನ್ನು ತೋರಿಸುತ್ತದೆ. ಈಗ ಹಮ್ಮಿಕೊಂಡಿರುವ ’ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಅಭಿಯಾನ ಈ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನ ಇನ್ನೊಂದು ಪರಿಣಾಮಕಾರಿ ಹೆಜ್ಜೆ ಎನಿಸಲಿದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವದ ನಿಮಿತ್ತ ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಆಯೋಜಿಸಿರುವ ’ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಅಭಿಯಾನವನ್ನು ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಗೊಂಬೆಯಾಟವನ್ನು ವಿದೇಶಗಳಲ್ಲೂ ಪರಿಚಯಿಸಿದ ಕೀರ್ತಿ ಇಂದು ಆರನೆಯ ತಲೆಮಾರಿನ ಪ್ರಾಯೋಜಕರಾಗಿ ಮುನ್ನಡೆಸುತ್ತಿರುವ ಭಾಸ್ಕರ ಕೊಗ್ಗ ಕಾಮತರಿಗೆ ಸೇರುತ್ತದೆ. ಕರಾವಳಿಯ ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರ್ಕಾರ ಆದೇಶದಂತೆ ಮುಜರಾಯಿ ಇಲಾಖೆಯ ಅಧೀನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಿತು. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಹೆಚ್. ಎಸ್. ಗೋಪೂಜೆ ನೆರವೇರಿಸಿ ಮಾತನಾಡಿ, ಗೋವಿನ ಎಲ್ಲಾ ಉತ್ಪನ್ನಗಳು ಕೂಡ ಸಂಪತ್ತಾಗಿದ್ದು, ಎಲ್ಲಾ ರೀತಿಯ ಔಷಧಿಗಳು ಸಿಗುತ್ತಿದೆ. ಗೋಧಾಮದ ಮೂಲಕ ಲೋಕಕಲ್ಯಾಣ ನಡೆಯಲಿ. ಗೋಪೂಜೆ ಬಗೆಗಿನ ವಿಜ್ಞಾನದ ಸಂಗತಿ ತಿಳಿದಿದ್ದರಿಂದ ಹಿಂದಿನ ಕಾಲದಲ್ಲಿ ಮನೆಯಲ್ಲಿನ ತಾಯಿ ಮಕ್ಕಳಿಗೆ ಗೋವಿನ ಮಹತ್ವವನ್ನು ತಿಳಿಯ ಪಡಿಸುತ್ತಿದ್ದರು ಎಂದರು. ಈ ಸಂದರ್ಭದಲ್ಲಿ ದೇವಳದ ಪ್ರದಾನ ಅರ್ಚಕ ಪ್ರಕಾಶ್ ಉಡುಪ, ದೇವಸ್ಥಾನ ಮಾಜಿ ಆಡಳಿತ ಧರ್ಮದರ್ಶಿ ಜಯರಾಮ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಬೈಂದೂರು ಘಟಕದ ಅಧ್ಯಕ್ಷ ಸುಧಾಕರ ಶೆಟ್ಟಿ ನೆಲ್ಯಾಡಿ, ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ದೇವಾಡಿಗ, ದೇವಳದ ಅರ್ಚಕ ಯು.ಸಂದೇಶ್ ಭಟ್, ಹಾಗೂ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಭಿಮಾನಿಗಳು ಗೋಪೂಜೆಯಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಾಡೋಜ ಡಾ. ಜಿ. ಶಂಕರ ಅವರಿಂದ ಪುನರ್ ನಿರ್ಮಾಣಗೊಂಡ ಉಮಾರಮಾ ಸಹಿತ ಶ್ರೀ ಕ್ಷೇತ್ರ ಹೊಳೆಶಂಕರನಾರಾಯಣ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದ ಮೇರೆಗೆ ಗೋಪೂಜೆ ಜರಗಿತು. ಗೋ ಪೂಜೆಯಲ್ಲಿ ಕ್ಷೇತ್ರದ ಆರ್ಚಕರು, ಆಡಳಿತ ಮಂಡಳಿ, ಅಭಿವೃದ್ಧಿ ಮಂಡಳಿ ಹಾಗೂ ಭಕ್ತರು ಪಾಲ್ಗೊಂಡರು.
