ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆನ್ ಸೈಟ್ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದ್ದು, ಕೋವಿಡ್ ಹಾಗೂ ಇತರೆ ಆಕ್ಸಿಜನ್ ಆಗತ್ಯವಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು, ಪ್ರತಿನಿತ್ಯ 80 ಸಿಲಿಂಡರ್ನಷ್ಟು ಆಕ್ಸಿಜನ್ ಉತ್ಪಾದನೆಯಾಗಲಿದೆ. ರಾಜ್ಯದಲ್ಲಿ ಒಟ್ಟು 40 ಕಡೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಮಂಜೂರಾತಿ ದೊರೆತಿದ್ದು, ಉಡುಪಿ ಜಿಲ್ಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ತಾಲೂಕು ಆಸ್ಪತ್ರೆಗೆ 390 ಎಲ್.ಪಿ.ಎಂ ಸಾಮರ್ಥ್ಯದ ಆನ್ ಸೈಟ್ ಆಕ್ಸಿಜನ್ ಉತ್ಪಾದನಾ ಘಟಕ ದೊರೆತಿದೆ. ಬೈಂದೂರು ಸರಕಾರಿ ಆಸ್ಪತ್ರೆ ಆವರಣದ ಪ್ರತ್ಯೇಕ ಕಟ್ಟಡದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು, ವಿದ್ಯುತ್ ಹಾಗೂ ಗುತ್ತಿಗೆ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಒಂದು ತಿಂಗಳ ಒಳಗೆ ಆಕ್ಸಿಜನ್ ಘಟಕ ಸೇವೆಗೆ ಲಭ್ಯವಾಗಿದೆ. ಉತ್ಪಾದನೆಯಾಗಲಿರುವ ಆಕ್ಸಿಜನ್ ಬೇರೆಡೆ ಸಾಗಿಸಲು ಸಾಧ್ಯವಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆಗೆ ಈ ಘಟಕ ಲಭ್ಯವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಊರ್ಮನಿ ಅಂಗಡಿ.ಕಾಂ ಈಗ ಸ್ಥಳೀಯ ದಿನಸಿ ವಿತರಣೆ, ಹಣ್ಣುಗಳು, ತರಕಾರಿಗಳು ಮತ್ತು ದೈನಂದಿನ ಅಗತ್ಯತೆಗಳನ್ನು ತಮ್ಮ ಪೋಟೆಲ್‌ನಲ್ಲಿ ಪರಿಚಯಿಸಿದ್ದು ಕುಂದಾಪುರ ಪಟ್ಟಣದಿಂದ 5 ಕಿಲೋಮೀಟರ್ ಸುತ್ತಲಿನ ವಾಪ್ತಿಯಲ್ಲಿ ಡೆಲಿವರಿ ಸೇವೆ ನೀಡಲಾಗುತ್ತಿದೆ. ಪ್ರಸ್ತುತ ಕುಂದಾಪುರ ಪಟ್ಟಣ, ಕೋಡಿ, ಕೋಟೇಶ್ವರ, ಹೇರಿಕುದ್ರು ಮತ್ತು ತಲ್ಲೂರು ಪ್ರದೇಶಗಳಿಗೆ ದಿನಸಿ ವಿತರಣೆ ಸೇವೆ ಲಭ್ಯವಾಗಲಿದೆ. ಈ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸುರಕ್ಷಿತವಾಗಿರಲು ಮತ್ತು ವಸ್ತುಗಳನ್ನು ಆರ್ಡರ್ ಮಾಡಲು ಸಹಾಯ ಮಾಡಲು ಉದ್ದೇಶಿಸಿದೆ. ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ 100% ಆನ್‌ಲೈನ್ / ನಗದು-ಕಡಿಮೆ ಪಾವತಿ ಮತ್ತು ZERO-TOUCH ವಿತರಣೆಯನ್ನು ಅನುಸರಿಸುತ್ತಿದೆ. ಪ್ರಸ್ತುತ ವಹಿವಾಟು ಸಮಯವು 1 ದಿನಕ್ಕಿಂತ ಕಡಿಮೆಯಿದೆ ಆದರೆ ಮುಂಬರುವ ದಿನಗಳಲ್ಲಿ ಟಿ-ಎ-ಟಿ ಅನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳು ಪಾಲಿಸಲಾಗುತ್ತಿದೆ. ಎಲ್ಲಾ ವಸ್ತುಗಳನ್ನು ಪಟ್ಟಣದ ಜನಪ್ರಿಯ ಸೂಪರ್ ರ್ಮಾರ್ಕೆಟ್ಗಳಿಂದ ಮತ್ತು 100% ಇತ್ತೀಚಿನ / ತಾಜಾ ಸ್ಟಾಕ್ಗಳಿಂದ ಪಡೆಯಲಾಗುತ್ತದೆ. ಸಿಸ್ಟಮ್ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ ಪ್ರತಿ ಆರ್ಡರ್ ಮೇಲೆ ನಾಮಮಾತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಮೇ.6: ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಸಾಲಿಗ್ರಾಮ ಗುಂಡ್ಮಿಯ ಡಾ. ಜಿ. ಭಾಸ್ಕರ್ ಮಯ್ಯ (70 ವ) ಹೃದಯಾಘಾತಕ್ಕೆ ಒಳಗಾಗಿ ಇಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ಕೋವಿಡ್ ಸೊಂಕು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕಳೆದ ನಾಲ್ಕು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದ ಇವರು ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅಧ್ಯಯನ ಮಾಡಿದ್ದರು. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ. ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ ಮತ್ತು 52 ಪುಸ್ತಕಗಳನ್ನು, ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ. ಜಿ. ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಒಂಟಿತನ, ಪರಕೀಯಪ್ರಜ್ಞೆ ಕುರಿತ ‘ಅಜನಬೀಪನ್: ಏಕ್ ಸೈದ್ಧಾಂತಿಕ್ ಅನುಶೀಲನ್’ ಸಂಶೋಧನಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ /ಅರೆಅಲೆಮಾರಿ ವಿದ್ಯಾರ್ಥಿಗಳಿಂದ 2020-21 ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ , ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಶುಲ್ಕ ವಿನಾಯಿತಿ, ವಿದ್ಯಾ ಸಿರಿ-ಊಟ ಮತ್ತು ವಸತಿ ಸಹಾಯಯೋಜನೆ ಮತ್ತು ನರ್ಸಿಂಗ್ ವಿದ್ಯಾಥಿಗಳಿಗೆ ಶಿಷ್ಯ ವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 15 ರ ವರೆಗೆ ವಿಸ್ತರಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು http://www.ssp.postmatric.karnataka.gov.in/ ಅಥವಾ ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ-8050770005/8050770004, ಇ-ಮೇಲ್ bcwd.scholarship@karnataka.gov.in ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪಡಿತರ ಚೀಟಿಯಲ್ಲಿ ಅಕ್ಷರ ಅಂಕೆಯ ಅಥವಾ 12 ಅಂಕಿಗಳಿಗಿಂತ ಭಿನ್ನವಾದ ಸಂಖ್ಯೆ ನೀಡಿರುವ ಪಡಿತರಚೀಟಿಗಳಿಗೆ (ಉದಾ: bnlr1234567,ctd 12345678 ) ಇದೀಗ 12 ಅಂಕಿಗಳ ಹೊಸ ಸಂಖ್ಯೆಯನ್ನು ನೀಡಲಾಗಿದೆ. ಸಾರ್ವಜನಿಕರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ , ತಮ್ಮ ಪಡಿತರ ಚೀಟಿ /ಆಧಾರ್ ಅಥವಾ ಪಡಿತರ ಚೀಟಿ ಸಂಖ್ಯೆ ನೀಡಿದಾಗ , ಬದಲಾಗಿರುವ ಪಡಿತರ ಚೀಟಿ ಸಂಖ್ಯೆಯನ್ನು ನೀಡಲು ಮತ್ತು ನಿಮ್ಮ ಪಡಿತರ ಚೀಟಿಯ ಮೇಲೆ ಬರೆಯಲು ನ್ಯಾಯಬೆಲೆ ಅಂಗಡಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಬದಲಾಗಿರುವ ಹೊಸ ಪಡಿತರ ಚೀಟಿ ಸಂಖ್ಯೆಯನ್ನು ಬಳಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳನ್ನು ಸಂಪರ್ಕಿಸಲು ಕೋರಿದ್ದು, ಈ ವಿಷಯವಾಗಿ ಯಾವುದೇ ಸಮಸ್ಯೆಗಳಿದ್ದಲ್ಲಿ ತಾಲೂಕಿನ ಆಹಾರ ಶಿರಸ್ತೇದಾರ್/ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು ಮತ್ತು ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಬಹುದು ಎಂದು ಆಹಾರ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಆಕ್ಸಿಜನ್ ಬೆಡ್ ಹಾಗೂ ಬೆಡ್‌ಗಳ ಸಮಸ್ಯೆ ಇಲ್ಲ, ಯಾರೂ ಆತಂಕಗೊಳ್ಳಬೇಕಾಗಿಲ್ಲ. ಜಿಲ್ಲೆಯಲ್ಲಿ 43 ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಗುರುತಿಸಲಾಗಿದೆ. 1924 ಬೆಡ್‌ಗಳಿದ್ದು, 960 ಅಕ್ಸಿಜನ್ ಬೆಡ್‌ಗಳಿವೆ. ಈಗ 245 ಬೆಡ್‌ಗಳು ಮಾತ್ರ ಭರ್ತಿಯಾಗಿದ್ದು, 736 ಅಕ್ಸಿಜನ್ ಬೆಡ್ ಖಾಲಿ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅವರು ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಂದಾಪುರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 89 ಮಂದಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 145 ಮಂದಿ ಒಟ್ಟು 234 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎನ್ನುವ ಸಾಕಷ್ಟು ದೂರುಗಳು ಬರುತ್ತಿದ್ದು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲು ತಾಲೂಕು ಮಟ್ಟದ ಅಧಿಕಾರಿಯೋರ್ವರನ್ನು ನೋಡೆಲ್ ಅಧಿಕಾರಿಯಾಗಿ ನಿಯೋಜಿಸಲಾಗುವುದು. ನಾಳೆಯಿಂದಲೇ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಓರ್ವ ಅಧಿಕಾರಿ ನೋಡೆಲ್ ಅಧಿಕಾರಿಯಾಗಿ ಕೊರೊನಾ ಮೀಸಲು ಬೆಡ್ಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಗಣನೀಯವಾಗಿ ಏರಿಕೆಯಾಗಿದ್ದು ಬುಧವಾರ 1,655 ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 879, ಕುಂದಾಪುರ, ಬೈಂದೂರು ತಾಲೂಕಿನ 399, ಕಾರ್ಕಳ, ಹೆಬ್ರಿ ತಾಲೂಕಿನ 370 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಮೂವರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಒಟ್ಟು 1654 ಪ್ರಕರಣಗಳಲ್ಲಿ 409 ಸಿಂಟಮಿಕ್ ಹಾಗೂ 1246 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 48 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 1607 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಇಂದು ಉಡುಪಿಯ 81 ವರ್ಷ, 65 ವರ್ಷ ವೃದ್ದ ಹಾಗೂ ಉಡುಪಿಯ 53 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 433 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 3925 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2200 ಮಂದಿಗೆ ಕೋವಿಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜಿನ್ ಮತ್ತು ರೆಮ್ಡಿಸಿವರ್ ಸರಬರಾಜು ಮಾಡುವ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಬುಧವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿಯ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಗೆ ಪ್ರತೀ ದಿನ ಅಗತ್ಯವಿರುವ ರೆಮ್ಡಿಸಿವರ್ ಕುರಿತು , ಪ್ರತೀ ದಿನ ವರದಿಯನ್ನು ನೀಡಿ ಹಾಗೂ ಆಕ್ಸಿಜಿನ್ ಕೊರತೆಯಾಗದಂತೆ , ನಿರಂತರವಾಗಿ ಸರಬರಾಜು ಮತ್ತು ದಾಸ್ತಾನು ಇರುವಂತೆ ಎಚ್ಚರವಹಿಸಿ, ಜಿಲ್ಲೆಗೆ ಆಗತ್ಯವಿರುವ ರೆಮ್ಡಿಸಿವರ್ ಮತ್ತು ಆಕ್ಸಿಜಿನ್ ಒದಗಿಸುವ ಕುರಿತಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಆದರೆ ಇದರ ಆಡಿಟ್ ನಡೆಸಿ, ಅಗತ್ಯ ಪ್ರಮಾಣದಲ್ಲಿ, ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಿ, ಅನಗತ್ಯ ಪೋಲಾಗದಂತೆ ತಡೆಯಿರಿ ಎಂದು ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹೋಂ ಐಸೋಲೇಶನ್ ನಲ್ಲಿ ಇರಲು ಅಗತ್ಯ ವ್ಯವಸ್ಥೆಯಿಲ್ಲದಿರುವವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಕೆಲವು ದಿನಗಳಿಂದ ಕುಂದಾಪುರ ತಾಲೂಕಿನಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುತಿದ್ದು, ಕಳೆದ ವರ್ಷದಂತೆ ಸೋಂಕು ಹರಡುವಿಕೆ ತಡೆಯುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾದಂತೆ ಕಾಣುತ್ತಿದೆ. ಜನತಾ ಕರ್ಫ್ಯೂ ಕಾರಣದಿಂದ ಬೇರೆಡೆ ವ್ಯವಹಾರ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಜನರು ಊರಿಗೆ ಆಗಮಿಸಿದ್ದು ಅವರಿಗೆ ಮನೆಗಳಲ್ಲಿ ಹೋಂ ಐಸೋಲೇಶನ್ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಮತ್ತು ಪ್ರಾಥಮಿಕ ಸಂಪರ್ಕದಲ್ಲಿರುವವರು ಬೇಕಾಬಿಟ್ಟಿ ತಿರುಗಾಡುತ್ತಿರುವುದು ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಂಡು ಹೋಂ ಐಸೋಲೇಶನ್ಗೆ ಸರಿಯಾದ ವ್ಯವಸ್ಥೆ ಇಲ್ಲದವರಿಗೆ ಮತ್ತು ಆಸ್ಪತ್ರೆಗೆ ಸೇರಬೇಕಾದ ಅಗತ್ಯವಿಲ್ಲದವರಿಗೆ ಶೀಘ್ರವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಪಿಡ್ ಟೆಸ್ಟ್ ಕಿಟ್ ಹೆಚ್ಚಿಸುವುದು, ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಅಂಬುಲೆನ್ಸ್ ಸೇವೆ ಒದಗಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕಾರಂತರ ಬದುಕಿನ ಪ್ರತಿ ಹೆಜ್ಜೆಯೂ ಸ್ಪೂರ್ತಿದಾಯಕವಾಗಿದ್ದು, ಅವರ ಬದುಕು-ಬರವಣಿಗೆ ಮುಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಆ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ ಕಾರಂತರ ಕುರಿತಾದ ಕೆಲಸವನ್ನು ನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ ಹೇಳಿದರು. ಅವರು ಇತ್ತೀಚಿಗೆ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ರಂಗ ಮಂದಿರ, ಗ್ರಂಥಾಲಯ, ಅಂಗನವಾಡಿ, ಆರ್ಟ್ ಗ್ಯಾಲರಿ, ವೀಕ್ಷಿಸಿದರು. ಈ ಸಂದರ್ಭದಲ್ಲಿ ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ಶ್ರೀಪ್ರಕಾಶ್ ಹಂದಟ್ಟು, ವಿಕಾಸ ಸೌಧದ ಸಿಬ್ಬಂದಿ ಕೋಟ ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.
