ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಅಭಯಹಸ್ತ ಸಂಸ್ಥೆಗೆ ಯಾವುದೇ ರೋಗಿಯ ಆಶೀರ್ವಾದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಆಯೋಜಿಸುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ 6 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 40,000 ಯೂನಿಟ್ ರಕ್ತ ಸಂಗ್ರಹಿಸಿರುವುದು ಅಭಯಹಸ್ತ ಸಂಸ್ಥೆಯ ಸಮಾಜದ ಸೇವೆಗೆ ಹಿಡಿದ ಕೈಗನ್ನಡಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾನ ಮನಸ್ಕರ ಸಹಕಾರದಲ್ಲಿ ಅಭಯಹಸ್ತವು ಇಂತಹ ಸಾಧನೆ ಮಾಡಿರುವುದು ಇತರ ಸಮಾಜಸೇವಾ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವಾದ ಹೆಗ್ಗುರುತು – 300 ( ಪೊಡವಿಗೊಡೆಯನ ಪದತಲದಲ್ಲಿ ಅಭಯಹಸ್ತ 300ನೇ ರಕ್ತದಾನ ಶಿಬಿರದ ಮೈಲುಗಲ್ಲು) ಎಂಬ ಯಶಸ್ವಿ ಸಮಾರಂಭವನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತಾಯಿ-ತಂದೆಯರ ಆಶೀರ್ವಾದವನ್ನು ಪಡೆಯಲು ’ನಮಾಮಿ ಶಕ್ತಿಚರಣಮ್’ ಎಂಬ ಹೆಸರಿನಲ್ಲಿ ಮಾತೃವಂದನಾ ಕಾರ್ಯಕ್ರಮವು ನೆರವೇರಲ್ಪಟ್ಟಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಪಾದ ತೊಳೆದು, ಆರತಿ ಬೆಳಗಿ, ಗೌರವಿಸಿದರು. ಬಾರ್ಕೂರಿನ ಖ್ಯಾತ ವಾಗ್ಮಿಗಳಾದ ಎನ್. ಆರ್. ದಾಮೋದರ ಶರ್ಮರು ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಭಾರತ ದೇಶವನ್ನು ವೇದಗಳು ಮತ್ತು ಇತಿಹಾಸಗಳು ಕರ್ಮದ ನೆಲ, ಧರ್ಮದ ನೆಲ ಹಾಗೂ ಸಾಧನೆಯ ನೆಲವೆಂದು ಕೊಂಡಾಡಿವೆ. ಇಲ್ಲಿ ಜನಿಸುವ ಜನರು ಮೌಲ್ಯಗಳನ್ನೊಳಗೊಂಡ ಭಾವನಾತ್ಮಕ ಜೀವನ ನಡೆಸುತ್ತಾರೆ. ನಮ್ಮ ದೇಶವು ಉತ್ತಮವಾಗಿ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾರ್ಥಿಗಳಲ್ಲಿ ಸತ್ಸಂಸ್ಕಾರ ಹಾಗೂ ಉತ್ತಮ ಗುಣಗಳನ್ನು ಬೆಳೆಸುವುದು ಅಗತ್ಯ. ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಸ್ಪಷ್ಟ ಜ್ಞಾನ ನೀಡಬೇಕು. ಇತಿಹಾಸವನ್ನು ಅರಿತ ವ್ಯಕ್ತಿಯು ಭವಿಷ್ಯವನ್ನು ದೃಢವಾಗಿ ನಿರ್ಮಿಸಬಹುದು. ಮಕ್ಕಳು ’ಮಾತೃದೇವೋ ಭವ’ ಎಂಬ ಮಹತ್ವದ ಮಾತಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಕಳಿಹಿತ್ಲುಮನೆ ಶ್ರೀ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಪನ್ನಗೊಂಡಿತು. ಶ್ರೀ ಸೀತಾಳಿ ನವದುರ್ಗೆ ಹಾಗೂ ಪರಿವಾರ ದೈವಗಳ ಪುನ: ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಸಂಜೆ ಗುರು ಗಣಪತಿ ಪೂಜೆ, ಮಹಾಸಂಕಲ್ಪದೊಂದಿಗೆ ಆರಂಭಗೊಂಡಿತು. ಬಳಿಕ ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಪ್ರತಿಷ್ಠಾ ಅಧಿವಾಸ ಪೂಜೆ, ಪ್ರತಿಷ್ಠಾ ಹೋಮ, ಪಂಚವಿಂಶತಿ ಕಲಶ ಸ್ಥಾಪನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬುಧವಾರ ಬೆಳಿಗ್ಗೆ 10.11 ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೀತಾಳಿ ನವದುರ್ಗೆ ಹಾಗೂ ಪರಿವಾರ ದೈವಗಳ ಪುನ: ಪ್ರತಿಷ್ಠಾ ಮಹೋತ್ಸವ ನಡೆಯಿತು. ಬಳಿಕ ಜೀವ ಕುಂಭಾಭಿಷೇಕ, ಕಲಾಭಿವೃದ್ಧಿ ಹೋಮ, ತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಪುರೋಹಿತರಾದ ಜಿ. ಲಕ್ಷ್ಮೀನಾರಾಯಣ ಭಟ್ ಮತ್ತು ಜಿ.ರವೀಶ್ ಭಟ್ ನೇತೃತ್ವದಲ್ಲಿ ಪುನ: ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ಫಿಸಿಯೋಥೆರಪಿ, ಐಎಂಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ಗಳ ಸಹಯೋಗದಲ್ಲಿ ಇನ್ನೋಹೆಲ್ತ್ ಹೆಲ್ತ್ಕೇರ್ ಸೆಮಿನಾರ್ 2026 ಕಾಲೇಜು ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಉದಯಕುಮಾರ್ ಶೆಟ್ಟಿ ಅವರು ಶಿಸ್ತಿನ ಮಹತ್ವ, ಆರೋಗ್ಯಕರ ಜೀವನಶೈಲಿ ಮತ್ತು ಆಧುನಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಬಗ್ಗೆ ಮಾತನಾಡಿದರು. ಅವರ ಪ್ರೇರಣಾದಾಯಕ ಭಾಷಣವು ವಿದ್ಯಾರ್ಥಿಗಳನ್ನು ಸೆಮಿನಾರ್ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭವಿಷ್ಯದ ವೃತ್ತಿಜೀವನ ಸವಾಲುಗಳಿಗೆ ಸಿದ್ಧರಾಗಲು ಉತ್ತೇಜಿಸಿತು. ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ, ಇಂತಹ ಸೆಮಿನಾರ್ಗಳು ವೃತ್ತಿ ನಿರ್ಮಾಣಕ್ಕೆ ಹೇಗೆ ಸಹಕಾರಿಯಾಗುತ್ತವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭವಿಷ್ಯದ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಹೇಗೆ ಸಿದ್ಧಗೊಳಿಸುತ್ತವೆ ಎಂಬುದನ್ನು ವಿವರಿಸಿದರು. ವಿದ್ಯಾರ್ಥಿಗಳು ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ತಮ್ಮ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಉದ್ಘಾಟನಾ ಕಾರ್ಯಕ್ರಮವು ಸಾಂಪ್ರದಾಯಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕುಂಭಾಸಿ ಗ್ರಾಮದ ಮೊಬೈಲ್ ಟವರ್ ಒಂದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ‘ತೇಜ ಟೆಕ್ನಿಕಲ್ ಸರ್ವೀಸ್’ ಸಂಸ್ಥೆಯಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿರುವ ನಾಗಕುಮಾರ್ ಸಿ.ಆರ್. ಅವರು ಕುಂಭಾಸಿ ಗ್ರಾಮದ ಸರ್ವೇ ನಂಬ್ರ 12*11 ರಲ್ಲಿರುವ ಟವರ್ಗೆ ಕಳೆದ ಸೆಪ್ಟೆಂಬರ್ನಲ್ಲಿ 24 ಸೆಲ್ಗಳಿರುವ ಎಕ್ಸೈಡ್ ಕಂಪೆನಿಯ ಬ್ಯಾಟರಿ ಬ್ಯಾಂಕ್ ಅಳವಡಿಸಿದ್ದರು. ಈ ಟವರ್ನ ನಿರ್ವಹಣೆಯನ್ನು ಟೆಕ್ನೀಶಿಯನ್ ಅವಿನಾಶ್ ಶೆಟ್ಟಿ ಅವರಿಗೆ ವಹಿಸಲಾಗಿತ್ತು. ಫೆ.8 ರಂದು ಅವಿನಾಶ್ ಶೆಟ್ಟಿ ಅವರು ಪರಿಶೀಲನೆ ನಡೆಸಿದಾಗ ಬ್ಯಾಟರಿಗಳು ಸುಸ್ಥಿತಿಯಲ್ಲಿದ್ದವು. ಆದರೆ, ಫೆ.10 ರಂದು ಪುನಃ ಭೇಟಿ ನೀಡಿದಾಗ ಬ್ಯಾಟರಿ ಬ್ಯಾಂಕ್ನಲ್ಲಿದ್ದ 8 ಬ್ಯಾಟರಿಗಳನ್ನು ಕಿಡಿಗೇಡಿಗಳು ಕಳವು ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೊಂಕಣಿ ಭಾಷಾಭಿಮಾನದೊಂದಿಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳಗಿಸುವುದರಲ್ಲಿ ಕೊಂಕಣಿಗರು ಒಂದಾಗಿ ಸಾಮರಸ್ಯದಿಂದ ಬಾಳಿರಿ ಎಂದು ಶಿರೂರು ಅಧ್ಯಕ್ಷರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ ಹೇಳಿದರು. ಅವರು ಶಿರೂರಿನ ಹಡವಿನಕೋಣೆ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು “ಕೊಂಕಣಿ ಸಂಭ್ರಮ್” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಭಾ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಕೊಂಕಣಿ ಭಾಷೆಯನ್ನು ಮನೆಮನೆಗಳಲ್ಲಿ ಮಾತಾಡುವ ಮುಖಾಂತರ ಎಲ್ಲರೂ ಸಮಾನತೆಯ ಭಾವನೆಯನ್ನು ಹೊಂದಿ. ಅಕಾಡೆಮಿ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾಮ ಪಂಚಾಯತ್ ಸದಸ್ಯ ಶಂಕರ ಡಿ. ಮೇಸ್ತ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿ ನೂರು ಮಹಮದ್, ಶಿರೂರು ಶ್ರೀ ವೆಂಕಟರಮಣ ದೇವಸ್ಥಾನ ಪದಾಧಿಕಾರಿಯಾದ ಪ್ರಸಾದ ಪ್ರಭು, ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯ ಮೋಹನ್…
ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನ, 2.33 ಕೋಟಿ ರೂ. ಮೀಸಲು ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ ರಸ್ತೆಯನ್ನು (ಕಿ.ಮೀ. 30.75 ರಿಂದ 51.60ರವರೆಗೆ) ಎರಡು ಲೇನ್ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ ಉದ್ದೇಶದಿಂದ ಕಾರ್ಯಸಾಧ್ಯತಾ ಅಧ್ಯಯನ, ವಿವರವಾದ ಯೋಜನಾ ವರದಿ (ಡಿಪಿಆರ್), ಸಮೀಕ್ಷೆ ಹಾಗೂ ಭೂ ಯೋಜನೆ ತಯಾರಿಕೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೆಂಡರ್ ಆಹ್ವಾನಿಸಿದೆ. ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿದ್ದು, ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು, ವಿವರವಾದ ಭೂ-ತಾಂತ್ರಿಕ ತನಿಖೆಗಳಿಗೆ ಮೀಸಲಾದ ಬಜೆಟ್ ನಿಬಂಧನೆಗಳೊಂದಿಗೆ, ಅವಕಾಶ ಕಲ್ಪಿಸಲಾಗಿದೆ. ದಶಕಗಳಿಂದಲೂ ಬಾಕಿ ಉಳಿದಿದ್ದ ಆಗುಂಬೆ ಘಾಟ್ ಮೇಲ್ದರ್ಜೆಗೇರಿಸುವ ಜನರ ಬೇಡಿಕೆಗೆ ಇದು ಸ್ಪಷ್ಟ, ನಿರ್ಣಾಯಕ ಮತ್ತು ಆಡಳಿತಾತ್ಮಕವಾಗಿ ಮೊದಲ ಹೆಜ್ಜೆಯಾಗಿದೆ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಉತ್ತಮ ಕರ್ತವ್ಯ ನಿರ್ವಹಣೆಗೆ ಪ್ರಶಸ್ತಿ ಪಡೆದ ಪೋಸ್ಟ್ಮೆನ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಕೊಲ್ಲೂರಿನ ರವೀಂದ್ರ ಎಂಬವರ ಮಗ ಮಂಜುನಾಥ ಕೆ. ಆರ್. (31) ಎಂದು ಗುರುತಿಸಲಾಗಿದೆ. ಕೊಲ್ಲೂರಿನಲ್ಲಿ ಪೋಸ್ಟ್ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಸುಮಾರು 4 ತಿಂಗಳ ಹಿಂದೆ ಉತ್ತಮ ಅಂಚೆ ಕರ್ತವ್ಯ ಮಾಡಿದ ಕಾರಣಕ್ಕೆ ಪ್ರಶಸ್ತಿ ದೊರೆತಿತ್ತು. ಬಳಿಕ ಕೊಲ್ಲೂರಿನಲ್ಲಿಯೂ ಈ ಬಗ್ಗೆ ಸನ್ಮಾನ ಮಾಡಲಾಗಿತ್ತು. ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಕೊಲ್ಲೂರಿನ ಮಹಾಲಕ್ಷ್ಮಿ ಹೊಟೇಲ್ ಹಿಂಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕಂಡ್ಲೂರು ಬ್ರಿಡ್ಜ್ ಸೇತವೆ ಬಳಿ ವಾರಾಹಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಮರಳುಗಾರಿಕೆಗೆ ಫೆ.10ರಂದು ಬೆಳಗಿನ ಜಾವ ದಾಳಿ ನಡೆಸಿದ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರಾದ ಸಂತೋಷ ಎ. ಕಾಯ್ಕಿಣಿ ಅವರಿಗೆ ಬಂದ ಮಾಹಿತಿಯಂತೆ ರಾತ್ರಿ 2 ಗಂಟೆಗೆ ದಾಳಿ ನಡೆಸಿದಾಗ ವರಾಹಿ ನದಿಯಿಂದ ಮರಳನ್ನು ತೆಗೆದು ದೋಣಿಯಲ್ಲಿ ಪೊದೆಯ ಕಡೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿ ಅಡಗಿಕೊಂಡರು. ಸಮೀಪದ ಮರಳು ಧಕ್ಕೆಯಾದ ಕೆ.ಆರ್.ಐ.ಡಿ.ಎಲ್ ಮರಳು ಧಕ್ಕೆಗೆ ಹೋಗಿ ಅಲ್ಲಿಂದ ದೋಣಿಯಲ್ಲಿ ಹೋದ ಪೊಲೀಸರು ಆರೋಪಿಗಳು ದೋಣಿ ನಿಲ್ಲಿಸಿದ ಸ್ಥಳಕ್ಕೆ ಹೋಗಿ ಮರಳು ತುಂಬಿದ 4 ದೋಣಿಗಳನ್ನು ಹಾಗೂ ಅದರಲ್ಲಿದ್ದ ಆಪಾದಿತರನ್ನು ಕರೆದುಕೊಂಡು ಬಂದರು. ಹಳ್ನಾಡು ಮರಳು ಧಕ್ಕೆಯಲ್ಲಿ ಆರೋಪಿಗಳನ್ನು ವಿಚಾರಿಸಿದಾಗ, ಆರೋಪಿಗಳು ಹಳ್ನಾಡು ಮರಳು ಧಕ್ಕೆಯಲ್ಲಿ ಕೆಲಸದವರಾದ ರಾಮಶಂಕರ ರಾಜಬೀರ್ (35), ರಾಮ ಕುಮಾರ್ (40) ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮದ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ರಿ. ಮಲ್ಪೆ, ಡಬ್ಲ್ಯೂ ವಿ.ಎಸ್ ಇಂಡಿಯಾ ಫ್ರೆಂಡೋ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಬೈಂದೂರು ಇದರ ಸಹಯೋಗದಲ್ಲಿ ದೇಸೀ ನಾಯಿಗಳ ಸಂತಾನಹರಣ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಇಲ್ಲಿನ ರೋಟರಿ ಕ್ಲಬ್ನಲ್ಲಿ ನಡೆಯಿತು. ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ. ಪಡುವರಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪಶು ವೈದ್ಯಾಧಿಕಾರಿ ಶಂಕರ ಶೆಟ್ಟಿ ಮಾತನಾಡಿ, ಬೀದಿ ನಾಯಿಗಳ ಕಾಟ ಪ್ರತಿ ಗ್ರಾಮದಲ್ಲೂ ಅತ್ಯಧಿಕವಾಗಿದೆ.ಇವುಗಳ ನಿಯಂತ್ರಣಕ್ಕೆ ಕ್ರಿಯಾತ್ಮಕ ಯೋಜನೆಗಳ ಅಗತ್ಯವಿದೆ. ಈನಿಟ್ಟಿನಲ್ಲಿ ಇಂತಹ ಸಂಘಟನೆಗಳ ಪ್ರಯತ್ನ ಉತ್ತಮವಾಗಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಅಧಿಕಾರಿ ಐ. ನಾರಾಯಣ, ಪೊಂಡೋ ಫೌಂಡೇಶನ್ ಪ್ರಿಯಾಂಕ ಜೋನ್, ಜಿಲ್ಲಾ ಅಧ್ಯಕ್ಷ ತನ್ವೀರ್, ಚೈತ್ರಾ ಯಡ್ತರೆ, ರಾಜು ಕೆ. ಶ್ವೇತಾ, ಡಾ.ಚೇತನ್ ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
