ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅನುದೀಪ್ ಹೆಗ್ಡೆ-ವಿನುಷ್ಕಾ ದಂಪತಿ ಸಮೀಪದ ಸೋಮೇಶ್ವರ ಕಡಲತೀರವನ್ನು ಸ್ಥಳೀಯರ ಜತೆಸೇರಿ ತ್ಯಾಜ್ಯಮುಕ್ತಗೊಳಿಸಿ, ಪ್ರಧಾನಿಯ ಮನ್ಕೀ ಬಾತ್ನಲ್ಲಿ ಉಲ್ಲೇಖಗೊಂಡು ರಾಷ್ಟ್ರವ್ಯಾಪಿ ಸುದ್ದಿಯಾದ ಬೆನ್ನಲ್ಲೇ ದೊಂಬೆ ತೀರದಲ್ಲಿ ಸುತ್ತಲಿನ ೨೧ ಮಕ್ಕಳು ಸೋಮವಾರ ಅವರ ಕಾರ್ಯವನ್ನು ಅನುಕರಿಸಿ ಗಮನ ಸೆಳೆದಿದ್ದಾರೆ. ಅಲ್ಲಿ ನೂತನ ಮನೆ ನಿರ್ಮಾಣ ಮಾಡುತ್ತಿರುವ ಪ್ರಿಯಾಂಕಾ ಎಂಬುವರು, ತೀರದಲ್ಲಿ ಸಂಗ್ರಹವಾಗಿರುವ ಕಸಕಡ್ಡಿಗಳಿಂದ ಪರಿಸರ ಕಲುಷಿತ ಆಗುತ್ತಿರುವುದನ್ನು ಕಂಡು ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸುತ್ತಮುತ್ತಲಿನ ಮಕ್ಕಳಿಗೆ ಪ್ರೇರಣೆ ನೀಡಿದರು. ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ತನ್ನ ಇಬ್ಬರು ಎನ್ಸಿಸಿ ಸ್ನೇಹಿತೆಯರೊಂದಿಗೆ ಮಕ್ಕಳನ್ನು ಸೇರಿಕೊಂಡರು. ಅನುದೀಪ್ ಹೆಗ್ಡೆ ಬಂದು ಅವರೆಲ್ಲರನ್ನು ಉತ್ತೇಜಿಸಿದರು. ಎಲ್ಲ ಸೇರಿ ಸುಮಾರು ೨೦೦ ಕೆಜಿ ಆಗುವಷ್ಟು ತ್ಯಾಜ್ಯ ಸಂಗ್ರಹಿಸಿದರು. ಕೊನೆಯಲ್ಲಿ ಅನುದೀಪ್ ಹೆಗ್ಡೆ, ಮನೆಗಳಲ್ಲಿ, ಪರಿಸರದಲ್ಲಿ ಒಟ್ಟಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುವ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ತಾವು ಹೊಸದಾಗಿ ಕಂಡುಕೊಂಡ ಈ ವಿನೂತನ ಪರಿಸರಪರ ಹವ್ಯಾಸದ ಬಗ್ಗೆ ಮಾತನಾಡಿದ ಹೆಗ್ಡೆ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಮಾರ್ಚ್ ತಿಂಗಳನಿಂದ ಈ ದಿನದ ತನಕ ಕೋವಿಡ್ 19ರ ವಿರುದ್ಧ ಹೋರಾಟ ಮಾಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸುವುದು ಶ್ಲಾಘನೀಯ. ಕುಂದಾಪುರದ ಈ ಲಯನ್ಸ್ ಕ್ಲಬ್ ಕಳೆದ ಮಾರ್ಚ್ನಿಂದಲೆ ನಮಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಾ ಬಂದಿದೆ. ಈ ರೀತಿಯ ಬೆಂಬಲ ಸಂಘ ಸಂಸ್ಥೆಗಳಿಂದ ಸಿಕ್ಕಿದ್ದಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಕುಂದಾಪುರದ ತಾಲೂಕು ಅಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು. ಅವರು ಕುಂದಾಪುದ ಲಯನ್ಸ್ ಕ್ಲಬ್ಗೆ ಅತಿಥಿಯಾಗಿ ಆಗಮಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಕೋವಿಡ್ ೧೯ರ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಿಯಾಗಿ ಕರ್ತವ್ಯ ನಿಭಾಯಿಸಿದ ಡಾ ನಾಗಭೂಷಣ ಉಡುಪ ಅವರನ್ನು ಕ್ಲಬ್ನ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಮ್ಮಾಡಿ ಸುಜನ್ ಕುಲಾಲ್ ಇವರಿಗೆ ಶಿಕ್ಷಣಕ್ಕೊಸ್ಕರ ರೂ 15000ವನ್ನು ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ಪ್ರಶಾಂತರವರಿಗೆ ರೂ 15000 ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ನ ಅಧ್ಯಕ್ಷರಾದ ಲಯನ್ ಚಂದ್ರಶೇಖರ ಕಲ್ಪತರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾಡಳಿತದ ಉಪಯೋಗಕ್ಕಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ, 22 ಲಕ್ಷ ರೂ ಮೌಲ್ಯದ ಸುಸಜ್ಜಿತ ಅಂಬುಲೈನ್ಸ್ನ್ನುಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಬ್ಯಾಂಕ್ ನ ಮುಖ್ಯ ಪ್ರಬಂಧಕ . ಮಂಜುನಾಥ್ ಭಟ್ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಡಿಹೆಚ್ ಓ ಡಾ. ಸುದೀರ್ ಚಂದ್ರ ಸೂಡಾ, ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ , ಕರ್ನಾಟಕ ಬ್ಯಾಂಕ್ನ ಕೆಂಧ್ರ ಕಚೇರಿಯ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲ್ ದಾಸ್ ಪೈ, ಉಡುಪಿ ವಿಬಾಗದ ಎಜಿಎಂ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ್, ದೇಶ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು, ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಕಾಡೆಮಿಯ ವಿವಿಧ ಪ್ರಶಸ್ತಿ, ಫೆಲೋಶಿಪ್ ಮತ್ತು ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಮತ್ತು ಇತರೆ ವಿವರಗಳನ್ನು ಅಕಾಡೆಮಿಯ ವೆಬ್ಸೈಟ್ https://kstacademy.in/kn ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29721550/ 29721549 ಅನ್ನು ಸಂಪರ್ಕಿಸುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುಬ್ರಹ್ಮಣ್ಯ ಪಡುಕೋಣೆ ಮತ್ತು ಎಸ್. ಜನಾರ್ದನ ಮರವಂತೆ ಇವರು ‘ಜನಾಧಿಕಾರ’ ಪುಸ್ತಕವನ್ನು ಕೆ. ಪ್ರತಾಪಚಂದ್ರ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು. ಹಸ್ತಾಂತರಿಸಿದ ಪುಸ್ತಕಗಳನ್ನು ಸ್ವೀಕರಿಸಿದ ರೈತಸಂಘದ ಅಧ್ಯಕ್ಷ, ವಿಧಾನ ಪರಿಷತ್ತಿನ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ರಾಜ್ಯದ ಗ್ರಾಮ ಪಂಚಾಯಿತಿಗಳು ಜನಸಹಭಾಗಿತ್ವದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಡೆಸಬೇಕು. ಅದಕ್ಕಾಗಿ ಜನಪ್ರತಿನಿಧಿಗಳಿಗೆ ಇರುವಂತೆ, ಜನರಿಗೂ ಅದರ ಕುರಿತಾದ ಅರಿವು ಇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ರೈತಸಂಘದ 1200 ಸದಸ್ಯರಿಗೆ ಎಸ್. ಜನಾರ್ದನ ಮರವಂತೆ ಸಂಕಲಿಸಿ, ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ‘ಜನಾಧಿಕಾರ’ ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ. ಎಂದು ಹೇಳಿದರು ರಾಜಕೀಯೇತರ ಸಂಘಟನೆಯಾದ ರೈತಸಂಘವು, ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಜತೆ ಸೇರಿಕೊಂಡು ವಾರಾಹಿ ನೀರಾವರಿ ಯೋಜನೆ, ಸಿಆರ್ಝಡ್ ನಿರ್ಬಂಧ, ಕಸ್ತೂರಿ ರಂಗನ್ ವರದಿ, ಉಡುಪಿಗೆ ನೀರು ಪೂರೈಸುವ ಮಾರ್ಗದಲ್ಲಿರುವ ಗ್ರಾಮಗಳಿಗೆ ನೀರು ಪೂರೈಕೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಡೀಮ್ಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರೋಟರಿ ಕ್ಲಬ್ ಬೈಂದೂರು ಇಲ್ಲಿಗೆ ರೋಟರಿ ಜಿಲ್ಲೆ 3182ನ ಗವರ್ನರ್ ರೋ. ಪಿ.ಎಚ್.ಎಫ್. ರಾಜಾರಾಮ್ ಭಟ್.ಬಿ.ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಕ್ಲಬ್ ಅಸೆಂಬ್ಲಿಯ ಮೂಲಕ ಇದುವರೆಗಿನ ಕಾರ್ಯಚಟುವಟಿಕೆಗಳ ಪರಾಮರ್ಶೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು..ಹಾಗೂ ರೋಟರಿ ಕ್ಲಬ್ ಬೈಂದೂರು ಇದರ ಸಾಮಾಜಿಕ ಕಳಕಳಿ ಸಮಾಜಮುಖಿ ಕಾರ್ಯಕ್ರಮಗಳು ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.. ರೈತಬಂಧು ಕಾರ್ಯಕ್ರಮದಡಿಯಲ್ಲಿ ರೈತ ಮುಖಂಡರು, ಪ್ರಗತಿಪರ ರೈತರು ,ಸಹಕಾರಿ ಧುರೀಣರಾದ ಎಸ್ ಪ್ರಕಾಶ್ ಚಂದ್ರಶೆಟ್ಟಿ ಅವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.. ರೋಟರಿ ಕ್ಲಬ್ ಬೈಂದೂರು ಇದರ ಅಧ್ಯಕ್ಷರಾದ ರೋ.ಯು. ಗೋಪಾಲಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಭೇಟಿಯ ಸಂದರ್ಭದಲ್ಲಿ ಝೋನ್ 1ರ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್ ನಾಗಭೂಷಣ ಉಡುಪ ರೋಟರಿ ಜಿಲ್ಲೆ 3182ನ ಪಥಮ ಮಹಿಳೆ ರೋ.ವರದಾಂಬ, ವಲಯ ಸೇನಾನಿ ರೋ.ಐ ನಾರಾಯಣ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2021-22 ನೇ ಸಾಲಿನ ನಿಯೋಜಿತ ಅಧ್ಯಕ್ಷರಾಗಿ ರೋ.ಡಾ. ಪ್ರವೀಣ್ ಶೆಟ್ಟಿ ಕಾರ್ಯದರ್ಶಿಯಾಗಿ ರೋ.ಮಂಗೇಶ ಶಾನುಬಾಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಂಗ ಪ್ರಸ್ತುತಿ ’ಸಾಹೇಬ್ರು ಬಂದವೇ’ ನಾಟಕವು ಕುಂದಾಪುರ ಕಾಗೇರಿ ಹಾಗೂ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಆಳ್ವಾಸ್ ನುಡಿಸಿರಿ ಘಟಕ ಕುಂದಾಪುರ, ಯುವ ಮೆರೀಡಿಯನ್ ಹಾಗೂ ಉಡುಪಿ ಜಿಲ್ಲಾ ಕಸಾಪ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ಕಾರ್ಯಕ್ರಮವನ್ನು ಕ್ಯಾಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ ಉದ್ಘಾಟಿಸಿದರು. ಈ ಸಂದರ್ಭ ಯುವ ಮೆರೀಡಿಯನ್ನ ಉದಯಕುಮಾರ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಕರ್ನಾಟಕ ಅರೆಭಾಷೆ ಅಕಾಡೆಮಿಯ ಸದಸ್ಯ ಎ. ಟಿ. ಕುಸುಮಾಕರ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ರಂಗ ನಿರ್ದೇಶಕರಾದ ರವಿರಾಜ್ ಹೆಚ್.ಪಿ, ಜೀವನರಾಂ ಸುಳ್ಯ, ಸಂಘಟಕ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ನರೇಂದ್ರಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಸುರಭಿ ರಿ. ಬೈಂದೂರು, ಜೆಸಿಐ ಬೈಂದೂರು ಸಿಟಿ ಹಾಗೂ ಸಂಚಲನ ರಿ. ಹೊಸೂರು ನೇತೃತ್ವದಲ್ಲಿ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷತೆ ವಹಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಶಾಲೆ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಅವರಿಗೆ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲೆ. ಇದರ ಆಶ್ರಯದಲ್ಲಿಉಡುಪಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿತ್ರಿಭಾಯಿ ಫುಲೆ ಸಾಧಕ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸತ್ಯನಾ ಕೊಡೇರಿ ಅವರು ಶೈಕ್ಷಣಿಕ ಚಿಂತಕ, ವಾಗ್ಮಿ, ಸಾಹಿತಿ, ವಿಮರ್ಶಕ, ನಾಟಕ ನಿರ್ದೇಶಕ, ಚಿತ್ರಗಾರ, ಹಾಡುಗಾರ ಹೀಗೆ ಎಲ್ಲಾ ರಂಗಗಳಲ್ಲೂ ಸ್ರಜನಶೀಲ ವ್ಯಕ್ತಿಯಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಗುರುತಿಸಿಕೊಂಡಿದ್ದು ಪ್ರಸ್ತುತ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೈಂದೂರಿನಲ್ಲಿ ಕರ್ನಾಟಕ ಅರೆಭಾಷೆ ಅಕಾಡೆಮಿಯ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪ್ರ ಕನ್ನಡ ಭಾಷೆ ತನ್ನ ಮೂಲ ಸೊಗಡು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಅದರ ಪುನಶ್ಚೇತನಕ್ಕೆ ಅಕಾಡೆಮಿ ರಚಿಸಲು ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳೊಂದಿಗೆ ಪ್ರಸ್ತಾಪಿಸಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಸೋಮವಾರ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು, ಜೆಸಿಐ ಬೈಂದೂರು ಸಿಟಿ ಹಾಗೂ ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಂಗ ಪ್ರಸ್ತುತಿ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪ್ರ ಕನ್ನಡ ಭಾಷಿಕರಲ್ಲಿ ಕರಾವಳಿಯ ಕ್ರೀಯಾಶೀಲತೆ ಹಾಗೂ ಘಟ್ಟದ ಗಡಸುತನ ಮೇಳೈಸಿದ್ದು, ಉಳಿದೆಲ್ಲಾ ಪ್ರದೇಶಗಳಿಗಿಂತ ಭಿನ್ನವಾಗಿದೆ. ಕುಂದಾಪುರದ ಜನರ ನೇರವಾಗಿ ಮಾತನಾಡಿದರೂ, ಅಪಾರ ಪ್ರೀತಿ ವಿಶ್ವಾಸವನ್ನು ಹೊಂದಿದವರಾಗಿದ್ದಾರೆ ಎಂದು ಇಲ್ಲಿನ ಜನಸಂಸ್ಕೃತಿಯನ್ನು ಶಾಸಕರು ಬಣ್ಣಿಸಿದರು. ಸುಳ್ಯದ ಅರೆಭಾಷೆಗೂ ಕುಂದಾಪುರದ ಕುಂದಾಪುರ ಕನ್ನಡಕ್ಕೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಲ್ವಾಡಿ ಗ್ರಾಮ ಕೌಜೂರು ಬಳಿ ಮುತಾಲಿಬ್ ಎಂಬವರ ಮನೆ ಹಿಂಭಾಗ ಅಕ್ರಮ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಮುತಾಲಿಬ್ ಎಂಬವರ ಮನೆ ಹಿಂಬಾಗದಲ್ಲಿ ಶೇಖರಿಸಿಟ್ಟ 1.86 ಲಕ್ಷ ರೂ. ಮೌಲ್ಯದ 248 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಂಡ್ಲೂರು ಎಸ್ಸೈ ರಾಜ ಕುಮಾರ್, ಸುಧಾ ಪ್ರಭು ಕುಂದಾಪುರ ಆಹಾರ ಇಲಾಖೆ ನಿರೀಕ್ಷಕ ಹೆಚ್. ಎಸ್. ಸುರೇಶ್ ದಾಳಿ ನಡೆಸಿದ್ದು, ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
