Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮನುಷ್ಯರಲ್ಲಿ ಜಾತಿ, ಮತ, ಭೇದ ತೊರೆದು ಸಮಾನತೆ ಸಾರುವ ಕನಕದಾಸರ ಚಿಂತನೆ ಮತ್ತು ತತ್ವಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು,ಸಾರ್ವಕಾಲಿಕ ಸತ್ಯ ಆಗಿವೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ನಡೆದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಅಂದಿನ ಕಾಲದಲ್ಲಿದ್ದ ಜಾತಿ ಭೇದ ಭಾವಗಳ ಕುರಿತು ಕನಸದಾಸರು ತಮ್ಮ ಕೀರ್ತನೆಗಳಲ್ಲಿ ತಿಳಿಸಿದ್ದು, ಇಂದಿಗೂ ಸಮುದಾಯಗಳಲ್ಲಿ ಈ ಅಸಮಾನತೆ ಕಂಡು ಬರುತ್ತಿದ್ದು, ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಅಸಮಾನತೆ ತೊಡೆಯಲು ಸಾಧ್ಯವಿದೆ. ಯಾವುದೇ ವ್ಯಕ್ತಿ ಅಹಂಕಾರದಿAದ ಶ್ರೇಷ್ಠನಾಗಲು ಸಾಧ್ಯವಿಲ್ಲ ಎಂಬುದನ್ನು ತಮ್ಮ ರಾಮ ಧಾನ್ಯ ಚರಿತ್ರೆ ಕೃತಿಯ ಮೂಲಕ ಮಾನವಕುಲಕ್ಕೆ ತಿಳಿಸಿದ್ದಾರೆ ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಧವಿದೆ ಎಂದರು. ಕನಕದಾಸರ ಜೀವನ ಮತ್ತು ವ್ಯಕ್ತಿತ್ವದ ಕುರಿತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಎಲ್ಲಾ ನಾಯಕರ ಸಂಘಟಿತ ಹೋರಾಟದಿಂದ ಕಾಂಗ್ರೆಸ್ ಪಕ್ಷ ಮತ್ತೆ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು. ಅವರು ಸೋಮವಾರ ಇಲ್ಲಿನ ವೈಷ್ಣವಿ ಕಾಂಪ್ಲೆಕ್ಸ್‌ನಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿ ಉದ್ಘಾಟಿಸಿ ಶುಭಹಾರೈಸಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಆರಂಭಿಸಲಾಗಿದ್ದು ಪ್ರತಿ ಕ್ಷೇತ್ರದಲ್ಲಿ ಏಳು ಸಾವಿರ ಸದಸ್ಯರುನ್ನು ನೊಂದಾಯಿಸುವ ಗುರಿ ಹೊಂದಲಾಗಿದೆ ಎಂದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೇರಲು ಎಲ್ಲಾ ಕಾರ್ಯಕರ್ತರ ಬೆಂಬಲ ಬಹುಮುಖ್ಯ. ನೂತನ ಕಛೇರಿ ಆರಂಭದ ಜೊತೆಗೆ ಮುಂಬರುವ ಚುನಾವಣೆಗೆ ಒಗ್ಗಟ್ಟಾಗಿ ಹೋರಾಡಿ ಗೆಲ್ಲುವ ಬಗ್ಗೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆಪಿಸಿಸಿ ಸದಸ್ಯರುಳಾದ ರಘುರಾಮ ಶೆಟ್ಟಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿನ ಅಧ್ಯಾಪಕರ ಆರ್ಥಿಕ ಸಹಾಯದೊಂದಿಗೆ ಪ್ರತಿವರ್ಷದಂತೆ ಈ ಬಾರಿ ಕೂಡ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಲಾಯಿತು. ಜಿ. ಎಸ್. ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್. ಗಣೇಶ್ ಕಾಮತ್ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಉಪಪ್ರಾಂಶುಪಾಲರಾದ ಉಮೇಶ್ ಕರ್ಣಿಕ್ ಮತ್ತು ಅಧ್ಯಾಪಕರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಆರಂಭದ ದಿನಗಳಲ್ಲಿ ಇಲ್ಲಿನ ಅಧ್ಯಾಪಕ ವೃಂದ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಭರಿಸಿ ಉಚಿತವಾಗಿ ನೋಟು ಪುಸ್ತಕಗಳನ್ನು ಕೂಡ ವಿತರಿಸಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬೈಂದೂರು ತಾಲೂಕಿನ ತ್ರಾಸಿ ವಲಯದ ಗುಜ್ಜಾಡಿ ನಾಗದೇವತೆ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರ ತಾಲೂಕಿನ ಅರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಅವರು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆ ಹಾಗೂ ಅದರಿಂದ ರಕ್ಷಣೆ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಮನೆಯ ಸುತ್ತಮುತ್ತಲಿನ ಪ್ರದೇಶ ಮತ್ತು ಮನೆಯನ್ನು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ಶುಗರ್ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ನಡೆಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಶುಭ ಹಾರೈಸಿದರು. ಮರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಸಹಾಯಕಿ ಅನಿಸ್ಕರಿ ಅರೋಗ್ಯ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಧಿಕಾರಿ ಗೀತಾ, ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ್. ಸೇವಾಪ್ರತಿನಿಧಿ ಮಹಾಲಕ್ಷ್ಮೀ, ಸಂಯೋಜಕಿ ವೀಣಾ, ಆಶಾ ಕಾರ್ಯಕರ್ತೆ ಜ್ಯೋತಿ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಕಟಾ ಮತ್ತು ಕುಮಿಟೊ ಭಾಗದಲ್ಲಿ ವಿಜೇತರಾದ ಗಂಗೊಳ್ಳಿಯ ಕೆ.ಡಿ.ಎಫ್ ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿಟಿ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ತರಬೇತುದಾರರಾದ ಟಿ ಶಶಾಂಕ್ ಶೆಣೈ ಇವರಿಗೆ ತರಬೇತಿ ನೀಡಿದ್ದರು. ಶ್ಯಾಮ್ ಜಿ. ಪೂಜಾರಿ (ಕಟಾ ಬೆಳ್ಳಿ )ರೋನಕ್ ಖಾರ್ವಿ (ಕಟಾ ಕಂಚು ) ಸೆನ್ ಸಾಯಿ. ಟಿ. ಶಶಾಂಕ ಶೆಣೈ (ತರಬೇತುದಾರರು- ಕಟಾ ಚಿನ್ನ )ಸಾನ್ವಿ ಖಾರ್ವಿ (ಕಟಾ ಕಂಚು, ಕುಮಿಟಿ ಕಂಚು )ವೃತಿಕಾ ಖಾರ್ವಿ (ಕಟಾ ಕಂಚು ) ಅಕ್ಷತಾ ಖಾರ್ವಿ (ಕುಮಿಟಿ ಬೆಳ್ಳಿ, ಕಟಾ ಕಂಚು ).ಕೌಶಿಕ್ ಖಾರ್ವಿ (ಕುಮಿಟಿ ಬೆಳ್ಳಿ, ಕಟಾ ಕಂಚು ) ಶ್ರೀ ಶಾನ್ ಖಾರ್ವಿ (ಕಟಾ ಚಿನ್ನ ಕುಮಿಟಿ ಕಂಚು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ವೈದ್ಯ ಸಂಘ ಐಎಂಎ ಕುಂದಾಪುರದ ಆಶ್ರಯದಲ್ಲಿ ನಾರಾಯಣ ಹಾರ್ಟ್ ಸಿಟಿ ಬೆಂಗಳೂರು ಇವರ ಸಹಯೋಗದಲ್ಲಿ ಸಿಎಂಇ (ಮುಂದುವರಿದ ವೈದ್ಯಕೀಯ ಶಿಕ್ಷಣ)ದ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕುಂದಾಪುರದ ಹೋಟೆಲ್ ಸಹನಾದಲ್ಲಿ ನೆರವೇರಿತು ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಶುಶ್ರುತ್ ಶೆಟ್ಟಿ ಭಾಗವಹಿಸಿ ‘recent advances in GI surgery and oncology’ ಬಗ್ಗೆ, ಡಾ. ಮಯೂರ್ ಶೆಟ್ಟಿ ‘ body contouring’ ಬಗ್ಗೆ, ಡಾ ಸೌರಭಾ ಕುಮಾರ್ ‘recent advances in radiation oncology ‘ಬಗ್ಗೆ ಮಾತನಾಡಿ ಚಿಂತನ ಮಂಥನ ನೆಡೆಸಿದರು. ಐಎಂಎ ಕುಂದಾಪುರದ ಅಧ್ಯಕ್ಷ ಎಲಬು ಕೀಲು ತಜ್ಞರಾದ ಡಾ ಸಂದೀಪ ನಾವಡ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಡಾ. ಸಂದೀಪ್ ಶೆಟ್ಟಿ ಅರವಳಿಕೆ ತಜ್ಞರು ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ 2021 ರ ಜನವರಿ 16 ರಿಂದ ಕೋವಿಡ್-19 ಲಸಿಕಾಕರಣ ಪ್ರಾರಂಭಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರಿಗೆ, ಭಾರತ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮತ್ತು ರಾಜ್ಯ ಸರಕಾರದಿಂದ ಗುರುತಿಸಿದ ಮುಂಚೂಣಿ ಕಾರ್ಯಕರ್ತೆಯರಿಗೆ ಹಾಗೂ ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಲಸಿಕೆ ನೀಡಲು ಪ್ರಾರಂಭಿಸಲಾಯಿತು. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು 9,99,000 ಗುರಿಯನ್ನು ಜಿಲ್ಲೆಗೆ ರಾಜ್ಯ ಸರ್ಕಾರದಿಂದ ನಿಗದಿಪಡಿಸಿದ್ದು, ಇದುವರೆಗೆ 1ನೇ ಡೋಸ್ ಲಸಿಕೆಯನ್ನು 9,24,639 (92.56%) ಜನರಿಗೆ ನೀಡಲಾಗಿದೆ ಹಾಗೂ ಇವರಲ್ಲಿ ಈಗಾಗಲೇ 6,11,569 (61.22%) ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ಸಹ ನೀಡಲಾಗಿದೆ. ಕೋವಿಡ್ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯದವರಿಗೆ ಕೋವಿಡ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಎರಡನ್ನೂ ತಡೆಗಟ್ಟಲು 18…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ನ.21: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ನೀಲಾವರ ಸುರೇಂದ್ರ ಅಡಿಗ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು ಸತತ ಮೂರನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಸ್ವರ್ಧಿಸಿದ್ದು ನೀಲಾವರ ಸುರೇಂದ್ರ ಅಡಿಗ- 437, ಸುಬ್ರಹ್ಮಣ್ಯ ಬಾಸ್ರಿ- 400, ಸುಬ್ರಹ್ಮಣ್ಯ ಭಟ್- 394 ಮತಗಳನ್ನು ಪಡೆದಿದ್ದಾರೆ. ಬ್ರಹ್ಮಾವರ ತಾಲೂಕುಸುರೇಂದ್ರ ಅಡಿಗ : 29ಸುಬ್ರಹ್ಮಣ್ಯ ಬಾಸ್ರಿ : 52ಸುಬ್ರಹ್ಮಣ್ಯ ಭಟ್ : 10 ಕುಂದಾಪುರ ತಾಲೂಕುಸುರೇಂದ್ರ ಅಡಿಗ 92ಸುಬ್ರಹ್ಮಣ್ಯ ಬಾಸ್ರಿ :51ಸುಬ್ರಹ್ಮಣ್ಯ ಭಟ್ :96 ಕಾಪು ತಾಲೂಕುಸುರೇಂದ್ರ ಅಡಿಗ :29ಸುಬ್ರಹ್ಮಣ್ಯ ಬಾಸ್ರಿ :23ಸುಬ್ರಹ್ಮಣ್ಯ ಭಟ್ :24 ಹೆಬ್ರಿ ತಾಲೂಕುಸುರೇಂದ್ರ ಅಡಿಗ :28ಸುಬ್ರಹ್ಮಣ್ಯ ಬಾಸ್ರಿ :37ಸುಬ್ರಹ್ಮಣ್ಯ ಭಟ್ :43 ಕಾರ್ಕಳ ತಾಲೂಕುಸುರೇಂದ್ರ ಅಡಿಗ : 64ಸುಬ್ರಹ್ಮಣ್ಯ ಬಾಸ್ರಿ :9ಸುಬ್ರಹ್ಮಣ್ಯ ಭಟ್ : 13 ಉಡುಪಿ ತಾಲೂಕುಸುರೇಂದ್ರ ಅಡಿಗ 41ಸುಬ್ರಹ್ಮಣ್ಯ ಬಾಸ್ರಿ :137ಸುಬ್ರಹ್ಮಣ್ಯ ಭಟ್ : 57 ಬೈಂದೂರು ತಾಲೂಕುಸುರೇಂದ್ರ ಅಡಿಗ :37ಸುಬ್ರಹ್ಮಣ್ಯ ಬಾಸ್ರಿ :17ಸುಬ್ರಹ್ಮಣ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಮೇಲ್ ವಾದ್ಯ ಸಿಬ್ಬಂದಿ, ಜೊಯಿಸರ ಹಿತ್ಲು ನಿವಾಸಿ ಕುಪ್ಪಯ್ಯ ದೇವಾಡಿಗ (62) ಅವರು ದೇವರ ಸೇವೆಯಲ್ಲಿಯುವಾಗಲೇ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಹನಾಯಿ ವಾದ್ಯ ನುಡಿಸುತ್ತಿದ್ದ ಕುಪ್ಪಯ್ಯ ದೇವಾಡಿಗ ಅವರಿಗೆ ಶನಿವಾರ ಮುಂಜಾನೆ 3.30ರ ಸುಮಾರಿಗೆ ದಿಡೀರ್ ಎದೆನೋವು ಕಾಣಿಸಿಕೊಂಡ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಈರ್ವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ರಾಜ್ಯ ಸರ್ಕಾರದ ಸಚಿವ ವಿ. ಸುನಿಲ್ ಕುಮಾರ್, ಎಸ್. ಅಂಗಾರ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದಿರೆ ಹಾಗೂ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

Read More