ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ| ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್(ರಿ.)ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಕುಂದಗನ್ನಡ ಕಟ್ಟುವಲ್ಲಿ ಪ್ರಧಾನ ಭೂಮಿಕೆ ವಹಿಸಿದ ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಪುರಸ್ಕಾರಕ್ಕೆ ಕುಂದಕನ್ನಡಕ್ಕೆ ಹೊಸ ಭಾಷ್ಯ ಬರೆದ, ಕರ್ನಾಟಕದ ಮೂಲೆ ಮೂಲೆಗೂ ಕುಂದಕನ್ನಡ ಕಂಪನ್ನು ಪಸರಿಸಿದ, ಮಾತಿನಮೋಡಿಯ ಮೂಲಕ ಎಲ್ಲರನ್ನು ನಗುವಿನ ಲೋಕಕ್ಕೆ ಕರೆದೊಯ್ಯಬಲ್ಲ, ಕುಂದಕನ್ನಡ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಅವರು ಆಯ್ಕೆಯಾಗಿದ್ದಾರೆ. ಕಾರಂತ ಥೀಮ್ ಪಾರ್ಕ್‌ನಲ್ಲಿ ಜುಲೈ ೧೪ರಂದು ರಂದು ಅಪರಾಹ್ನ ೨ ಗಂಟೆಗೆ ನಡೆಯುವ ತಿಂಗಳ ಸಡಗರ -ತಿಂಗಳ ಪುರಸ್ಕಾರ ತೊಳ್ಸಂಬಟ್ಟೆ-೨೦೧೯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಮನು ಹಂದಾಡಿ ಅವರ ವಿಶೇಷ ಉಪನ್ಯಾಸ ಹಾಗೂ ಅಮೃತ ಉಪಾಧ್ಯ ಅವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಘು ತಿಂಗಳಾಯ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಟಿ-ರಂಗಕರ್ಮಿ ಶ್ರೀಮತಿ ಪೂರ್ಣಿಮ ಸುರೇಶ್ ಅವರನ್ನು ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಅಮೋಘ (ರಿ) ಹಿರಿಯಡ್ಕ ಇವರಿಂದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಗೌರವಿಸಲಾಯಿತು. ಏಕವ್ಯಕ್ತಿ ನಾಟಕದಲ್ಲಿ ಸಿರಿ ಪಾತ್ರವನ್ನು ತುಂಬಾ ಸುಂದರವಾಗಿ ನಿರ್ವಹಿಸಿದರು ಈ ಸಂದರ್ಭದಲ್ಲಿ ಕ.ಸ.ಪ ಜಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ, ಸಾಂಸ್ಕೃತಿಕ ಪಾರ್ವತಿ ಜಿ. ಐತಾಳ್, ಕಸಾಪದ ನಾರಾಯಣ ಮಡಿ ಹಾಗೂ ಅಮೋಘ ತಂಡದ ಸದಸ್ಯರು ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಅಪಘಾತಗಳು ಹೆಚ್ಚುತ್ತಿದ್ದು, ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತ ವಲಯ ಹಾಗೂ ಜನನಿಭೀಡ ಸ್ಥಳಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಇಂತಹ ರಸ್ತೆ ಸುರಕ್ಷತಾ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಂಡು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಮಾಹಿತಿ ನೀಡಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಹೇಳಿದರು. ಅವರು ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಭಾನುವಾರ ಜರಗಿದ ಬ್ಯಾರಿಕೇಡ್ ಹಸ್ತಾಂತರ ಸಮಾರಂಭದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಎಸ್‌ಐ ಸುದರ್ಶನ್, ಹೊಸಾಡು ಗ್ರಾಪಂ ಸದಸ್ಯರಾದ ರಮೇಶ್ ಆಚಾರ್, ಸೀತಾರಾಮ ಶೆಟ್ಟಿ, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಕಿಶೋರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2018 ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕುಂದಾಪುರದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ಮತ್ತು ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ಯವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2017 ನೇ ಸಾಲಿನಲ್ಲಿ ಕನ್ನಡಕ್ಕೆ ತಮ್ಮ ಗುಲ್ವಾಡಿ ಟಾಕೀಸ್ ನಿರ್ಮಾಣದ ” ರಿಸರ್ವೇಶನ್ ” ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ( ರಜತ ಕಮಲ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ( ಬಿಫ್ಸ್ 2018) ನ್ನು ತಂದು ಕೊಟ್ಟಿರುವ ಗುಲ್ವಾಡಿ ಪ್ರಸ್ತುತ ಕನ್ನಡದ ಹಿರಿಯ ಲೇಖಕಿ ನಾಡೋಜ ಡಾ. ಸಾ. ರಾ. ಅಬುಬಕ್ಕರ್ ಅವರ ಕಥೆಯನ್ನಾಧರಿಸಿ ಮೊದಲ ಬಾರಿಗೆ ತನ್ನದೆ ಚಿತ್ರಕಥೆ ಮತ್ತು ನಿರ್ದೇಶನದ ಇನ್ನು ಹೆಸರಿಡದ ಬ್ಯಾರಿ ಮತ್ತು ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ. ಬ್ಯಾರಿ ಭಾಷೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಚಿತ್ರವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೂಡ್ಲಕಟ್ಟೆ ಇಂಜಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜುನಾಥ, ಗುರುಚರಣ್, ಸಂದೇಶ ಹೆಗ್ಡೆ ಮತ್ತು ಶ್ವೇತಾ ರವರು ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜ್‌ರವರ ಮಾರ್ಗದರ್ಶನದಲ್ಲಿ ಅಗ್ರಿಕಲ್ಚರ್ ಡಾಕ್ಟರ್ ಎನ್ನುವ ರೊಬೊಟ್ ತಯಾರಿಸಿದ್ದಾರೆ. ಅಗ್ರಿಕಲ್ಚರ್ ಡಾಕ್ಟರ್ ರೊಬೊಟ್ ಸ್ವಯಂಚಾಲಿತವಾಗಿದ್ದು, ಹೊಲದಲ್ಲಿರುವ ಪೈರಿನ ರೋಗ ರುಜಿನಗಳನ್ನು ಪತ್ತೆಹಚ್ಚಿ ಅದಕ್ಕೆ ಬೇಕಾಗುವ ಕ್ರಿಮಿನಾಶಕ ಮತ್ತುಇತರೆ ಔಷಧಗಳನ್ನು ಸಿಂಪಡಿಸುತ್ತದೆ. ಯಾವುದೇ ಮಾನವನ ಸಹಾಯವಿಲ್ಲದೆ ಕಾರ್ಯನಿರ್ವಹಿಸಲಿದ್ದು, ಅನೇಕ ಉಪಯೋಗಕಾರಿ ಲಕ್ಷಣಗಳನ್ನು ಹೊಂದಿದೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ನೀರಿನಾಂಶವನ್ನು ಕೂಡ ಪತ್ತೆ ಹಚ್ಚುವ ಮಾಹಿತಿಯನ್ನು ನೀಡುತ್ತದೆ. ವೈದ್ಯನ ತರಹ ಕೆಲಸಮಾಡಲಿದ್ದು, ರೈತನು ತಮ್ಮ ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ನಿವಾರಣೆ ಹೇಗೆ ಮಾಡುವುದು ಎಂಬ ವ್ಯಥೆಯನ್ನು ದೂರ ಮಾಡಲಿದೆ. ಈ ರೊಬೊಟ್ ಕಾರ್ಯನಿರ್ವಹಿಸಲು ಬೇಕಾಗುವ ವಿದ್ಯುತ್‌ನ್ನು ಸೌರಶಕ್ತಿಯ ಮೂಲಗಳಿಂದ ಪಡೆಯವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ರೊಬೊಟ್ ಮೇಲೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಬಂಧ ಮಂಡಿಸಿದ್ದು, ಬಹುಮಾನಗಳು ಬಂದಿರುತ್ತದೆ. ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: 2019ರ ಪತ್ರಿಕಾ ದಿನದ ಗೌರವವನ್ನು ಹಿರಿಯ ಪತ್ರಿಕೋದ್ಯಮಿ, ಉದಯವಾಣಿ ಸಮೂಹದ ಟಿ. ಸತೀಶ.ಯು.ಪೈ ಅವರಿಗೆ ನೀಡಲಾಗುತ್ತಿದ್ದು ಬೆಂಗಳೂರಿನ ಪತ್ರಕರ್ತರ ವೇದಿಕೆ(ರಿ) ಯ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದನ್ವಯ ಗೌರವಕ್ಕೆ ಪಾತ್ರವಾಗುವ 12 ನೇ ಹಿರಿಯರು ಇವರಾಗಿದ್ದಾರೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಸುಧೀರ್ಘ ಕಾಲ ಉದಯವಾಣಿ ಸಮೂಹ ಸಂಸ್ಥೆಗಳ ಮೂಲಕ ಪತ್ರಿಕೋದ್ಯಮವನ್ನು ಸಮರ್ಥವಾಗಿ ಮುನ್ನಡೆಸಿದ ಅವರಿಗೆ ಉದಯವಾಣಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಗೌರವವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎಂ.ವಿ ಕಾಮತ್, ಅಂಬಾತನಯ ಮುದ್ರಾಡಿ, ಬಿ.ಸಿ ರಾವ್ ಶಿವಪುರ, ಕು.ಗೋ, ಬಿ.ಎ. ಸನದಿ, ರಾಘವ ನಂಬಿಯಾರ್, ಎ.ಎಸ್.ಎನ್ ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಉಡುಪಿ ವಾಸುದೇವ ಭಟ್, ದಾಮೋದರ ಐತಾಳ್ ಮತ್ತು ಕಾಸರಗೋಡಿನ ಮಲಾರ್ ಜಯರಾಮ ರೈ ಅವರಿಗೆ ಈ ಗೌರವವನ್ನು ಸಮರ್ಪಿಸಲಾಗಿತ್ತು. ಮಣಿಪಾಲದ ಅನಂತ ನಗರದ ಅವರ ನಿವಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಕೆ.ದಿನಕರ ಶೆಟ್ಟಿ ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಜೂ.27ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಿತು. ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುತ್ತಿದ್ದ ಕೆ. ದಿನಕರ ಶೆಟ್ಟಿ ಅವರು ಇದೀಗ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಈ ಹಿಂದೆಯೂ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೋಶಾಧಿಕಾರಿಯಾಗಿ ತೆರಿಗೆ ಇಲಾಖೆಯ ಸಂಜಯ ನಾಯಕ್ ಆಯ್ಕೆಯಾದರು. ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಡಾ| ನಾಗಭೂಷಣ ಉಡುಪ ಆಯ್ಕೆಯಾದರು. ಚುನಾವಣಾಧಿಕಾರಿಕಾರಿಯಾಗಿ ಪರಮೇಶ್ವರ ಬಾಸ್ತ್ರಿ ಕಾರ್ಯನಿರ್ವಹಿಸಿದರು. ಆಯ್ಕೆಗೆ ಸಹಕರಿಸಿದ ಎಲ್ಲ ಸರಕಾರಿ ನೌಕರರಿಗೆ ನೂತನ ಅಧ್ಯಕ್ಷ ಕೆ.ದಿನಕರ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನ ಹಾಗೂ ಗೋ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗೋವುಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಯನ್ನು ವಿಡಂಬನೆ ಮಾಡಿ ಮತಿಯ ದ್ವೇಷಕ್ಕೆ ಎಡೆಮಾಡಿಕೊಡುತ್ತಿದೆ. ಯಾವುದೇ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಗೋವುಗಳ ಕಳ್ಳತನ ಮಾಡುತ್ತಿರುವುದು ಛೇದಕರ. ತಾಲೂಕಿನಲ್ಲಿ ಗೋವುಗಳ ಪಾಲನೆಗಾಗಿ ಕಾದಿರಿಸಿರುವ ಗೋಮಾಳದ ಜಾಗವನ್ನು ಗುರುತಿಸಿ ಗೋವುಗಳ ಪಾಲನೆಗೆ ಅವಕಾಶ ಮಾಡಿಕೊಡುವುದು, ಏಳಜಿತದಲ್ಲಿ ಮನೆಯಿಂದ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಆ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಗೋವು ಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೈಂದೂರು ರೋಟರಿ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಬಳಿಕ ಮೆರವಣಿಗೆಯಲ್ಲಿ ತಹಶಿಲ್ದಾರರ ಕಛೇರಿಗೆ ಸಾಗಿಬಂದು ಬೈಂದೂರು ತಹಶೀಲ್ದಾರರು ಹಾಗೂ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶಿಣವ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ಮನೆಗೆ ತೆರಳುತ್ತಿದ್ದ ವೇಳೆ ಗದ್ದೆಯ ಅಂಚಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹಂಗಾರಕಟ್ಟೆ ನಿವಾಸಿ ಸುರೇಶ್ ತಿಂಗಳಾಯ (೩೭) ಮೃತ ದುರ್ದೈವಿ. ಶುಕ್ರವಾರ ಸಂಜೆ ಸುರೇಶ್ ಶಾಲೆಯಿಂದ ಮನೆಗೆ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಹಂಗಾರಕಟ್ಟೆಯ ತಮ್ಮ ಮನೆಯ ಸಮೀಪದ ಗದ್ದೆಯಂಚಿನಲ್ಲಿ ಹೋಗುತ್ತಿರುವ ಸಂದರ್ಭ ಸ್ಕಿಡ್ ಆಗಿ ಗದ್ದೆಗೆ ಬಿದ್ದಿದ್ದಾರೆ. ಈ ಸಂದರ್ಭ ಕೆಸರು ಗದ್ದೆಯಲ್ಲಿ ಕವುಚಿ ಬಿದ್ದ ಪರಿಣಾಮ ಮೇಲೇಳಲಾರದೇ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅವಿವಾಹಿತರಾಗಿರುವ ಸುರೇಶ್ ತಿಂಗಳಾಯ ಕಳೆದ ಹನ್ನೆರಡು ವರ್ಷಗಳಿಂದ ವೆಂಕಟರಮಣ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಸ್ನೇಹಮಯ ವ್ಯಕ್ತಿತ್ವದ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಸುರೇಶ್ ಗುರುತಿಸಿಕೊಂಡಿದ್ದರು. ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿ ರಜೆ ನೀಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕಾಲೇಜು ದಿನಗಳಲ್ಲಿ ಕಿವಿಗೆ ಬಿದ್ದ ಚಪ್ಪಾಳೆಯ ಸದ್ದು ಬಣ್ಣದ ಲೋಕದ ಕಡೆಗೆ ತಿರುಗುವಂತೆ ಮಾಡಿತು. ಬಣ್ಣದ ಲೋಕದಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲ ಸಿನೆಮಾದ ನಾಯಕನನ್ನಾಗಿಸಿತು. ಹೌದು ಕ್ಷೇತ್ರ ಯಾವುದೇ ಇರಲಿ ಆಸಕ್ತಿ ಹಾಗೂ ಛಲವೊಂದಿದ್ದರೆ ಕಂಡ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರದ ಹುಡುಗ, ಸಮಯದ ಹಿಂದೆ ಸವಾರಿ ಚಿತ್ರದ ನಾಯಕ ನಟ ರಾಹುಲ್ ಹೆಗ್ಡೆ. ಪತ್ರಕರ್ತ ಲೇಖಕ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿಯ ಎಳೆಯನ್ನಿಟ್ಟುಕೊಂಡು, ಹೆಸರಾಂತ ಸಂಗೀತಕಾರ, ರಂಗಕರ್ಮಿ ರಾಜ್‌ಗುರು ಹೊಸಕೋಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನೆಮಾ ’ಸಮಯದ ಹಿಂದೆ ಸವಾರಿ. ವಿಭಿನ್ನ ಕಥಾವಸ್ತುವಿನೊಂದಿಗೆ ಪ್ರೇಕ್ಷಕರನ್ನು ಎದಿರುಗೊಳ್ಳಬೇಕು ಎಂಬ ಸಿನೆಮಾ ತಂಡದ ಇಂಗಿತದಂತೆ ಪತ್ತೆದಾರಿ ಎಳೆಯನ್ನು ಹೊಂದಿದೆ. ಕುಂದಾಪುರದ ಹುಡುಗ ರಾಹುಲ್ ನಾಯಕ ನಟನಾಗಿ ಮೊದಲ ಭಾರಿಗೆ ತೆರೆಯ ಮೇಲೆ ರಘುನಂದನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾದಲ್ಲಿ ಸ್ನೇಹಿತನ ಸಾವಿನ ಬಳಿಕ ನಡೆಯುವ…
