Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮಾರ್ಚ್ 31 ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೂಡ ಸೋರಿಕೆಯಾಗಿ ಪರೀಕ್ಷೆ ರದ್ದು ಗೊಳಿಸಿದ್ದರಿಂದ ಕುಪಿತರಾದ ಪರೀಕ್ಷೆ ಬರೆಯಬೇಕಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಿಯು ಇಲಾಖೆಯ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ಮತ್ತೆ ಮತ್ತೆ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತಿರುವುದು ವ್ಯವಸ್ಥೆಯಲ್ಲಿನ ಅತ್ಯಂತ ದೊಡ್ಡ ಹುಳುಕನ್ನು ಎತ್ತಿ ತೋರಿಸುತ್ತಿದೆ. ಈ ಅವಾಂತರಕ್ಕೆ ಇಲಾಖೆಯಲ್ಲಿನ ಅಧಿಕಾರಿಗಳೇ ಕಾರಣ. ಒಂದಷ್ಟು ಹಣದ ಆಸೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಡನೆ ಆಟವಾಡುವ ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಭವಿಷ್ಯದಲ್ಲಿ ಅವರನ್ನು ಯಾವ ಹುದ್ದೆಗಳಿಗೂ ಪರಿಗಣಿಸಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಪರೀಕ್ಷೆ ರದ್ದಾದ ಕಾರಣ ಆಕ್ರೋಶಿತಗೊಂಡಿದ್ದ ವಿದ್ಯಾರ್ಥಿಗಳು ಪಿಯು ಇಲಾಖೆಯ ವಿರುದ್ಧ ಫೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳ ಪರವಾಗಿ ಬಿಂದು ,ವಿಜೇಶ್, ರಾಜು ಮಾತನಾಡಿದರು.ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದರು.

Read More

ಕುಂದಾಪುರ: ಕಚೇರಿಗೆ ಕೆಲಸಕ್ಕಾಗಿ ಬರುವ ಗ್ರಾಮೀಣ ಭಾಗದ ನಾಗರಿಕರಿಗೆ ಕ್ಲಪ್ತ ಹಾಗೂ ಉತ್ತಮ ಗುಣ ಮಟ್ಟದ ಸೇವೆಗೆ ಹೆಚ್ಚಿನ ಪ್ರಾಮುಖ್ಯ ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಕರೆ ಕೊಟ್ಟಿದ್ದಾರೆ. ಕುಂದಾಪುರ ಮಿನಿ ವಿಧಾನಸೌಧ ಮೊದಲ ಮಹಡಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ, ಉಪ ತಹಸೀಲ್ದಾರ್ ಕಚೇರಿ ಹಾಗೂ ದಾಖಲಾತಿ ಕೊಠಡಿಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರರನ್ನು ಜಿ ಲ್ಲಾಧಿಕಾರಿ ಡಾ.ವಿಶಾಲ್ ಆರ್. ಗೌರವಿಸಿದರು. ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್., ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್, ಉಪ ತಹಸೀಲ್ದಾರ್ ರಾಮಚಂದ್ರ ರಾವ್, ಎಸಿ ಕಚೇರಿ ಸಿಬ್ಬಂದಿ ಶಂಕರ್ ಶೆಟ್ಟಿ, ಸುರೇಶ್, ಭಾಗ್ಯಲಕ್ಷ್ಮೀ, ವಿಶಾಲಾಕ್ಷಿ, ಮೊಹಮ್ಚಮದ್ ಸಿಖಂದರ್, ತಾಲೂಕ್ ಕಚೇರಿ ಸಿಬ್ಬಂದಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನೂತನ ಪಿಂಚಣಿ ಯೋಜನೆ ಸರಕಾರಿ ನೌಕರರ ಮತ್ತು ಅವರ ಕುಟುಂಬಕ್ಕೆ ಮಾರಕವಾಗಿದ್ದು, ಈ ಯೋಜನೆ ರದ್ದು ಮಾಡುವಂತೆ ಆಗ್ರಹಿಸಿ ಹಾಗೂ ನಿಶ್ಚಿತ ಪಿಂಚಣಿಗೆ ಒತ್ತಾಯಿಸಿ ಎ.೧ ರಂದು ರಾಜ್ಯಾದ್ಯಂತ ಕರಾಳ ದಿನಾಚರಣೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಸಂಚಾಲಕ ರವಿ ಎಸ್.ಬೈಕಾಡಿ ತಿಳಿಸಿದ್ದಾರೆ. ರಾಜ್ಯದಲ್ಲಿ ೧,೫೧,೫೬೫ ಮತ್ತು ಜಿಲ್ಲೆಯಲ್ಲಿ ೩ ಸಾವಿರ ಎನ್‌ಪಿಎಸ್ ನೌಕರರಿದ್ದು, ನೂತನ ಪಿಂಚಣಿ ಯೋಜನೆ ನೌಕರರಿಗೆ ಮರಣ ಶಾಸನವಾಗಿದೆ. ಇದನ್ನು ವಿರೋಧಿಸಿ ಕರಾಳ ದಿನಾಚರಣೆ ಜೊತೆ ಶಾಸಕರಿಗೆ, ಸಚಿವರಿಗೆ, ಸಂಸದರಿಗೆ ಪತ್ರ ಚಳವಳಿ ಆರಂಭಿಸಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೌಕರರು ನಿವೃತ್ತಿ ನಂತರ ಅವರಿಗೆ ಲಭ್ಯವಿರುವ ಉಪಧನಗಳಿಗಾಗಿ ಷೇರು ಮಾರುಕಟ್ಟೆ ಅವಲಂಭಿಸಬೇಕಾಗುತ್ತದೆ. ಈ ಯೋಜನೆ ಖಾಸಗಿ ಭಂಡವಾಳಶಾಯಿಗಳನ್ನು ಓಲೈಸಲು ಜಾರಿಗೆ ತಂದಿದ್ದು, ನೌಕರರ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಅವರು ಆರೋಪಿಸಿದರು. ಎನ್‌ಪಿಎಸ್ ಯೋಜನೆ ತಕ್ಷಣ ರದ್ದು ಮಾಡಬೇಕು. ನಿಶ್ಚಿತ ಪಿಂಚಣಿ ಯೋಜನೆ…

Read More

ಕುಂದಾಪುರದವರು ಗೇರುಬೀಜ ತೋಟ ವಹಿಸಿಕೊಂಡು ವಿರಾಟ್ ಕೊಹ್ಲಿ ಆಟ ನೋಡಬಾರದಂತೆ! ಯಾಕೆ? ಓದಿ ಮೊನ್ನೆ ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ನೋಡ್ತಿರುವಾಗ ತೋಟ ಕಾಯುವ ಹುಡುಗರು ಬಂದು, ಅಣ್ಣ ತೋಟಕ್ಕೆ ಕಳ್ಳರು ನುಗ್ಗಿದ್ದಾರೆ ಗೇರು ಬೀಜ ಕೊಯ್ತಿದಾರೆ ಅಂದ್ರು. ನನಗೆ ಅವರು ಹೇಳಿದನ್ನು ಕೇಳುವಷ್ಟು ತಾಳ್ವೆ ಇರಲಿಲ್ಲ. ನಾನು ವಿರಾಟ್ ಕೊಯ್ಲಿ ಆಟ ನೋಡುತ್ತಾ ಅದರಲ್ಲಿ ಮುಳುಗಿ ಹೋಗಿದ್ದೆ…  ಕುಂದಾಪ್ರ ಡಾಟ್ ಕಾಂ ಕೊಯ್ಲಿ ಕೊಯ್ಲಿ ಕೊಯ್ಲಿ ಎಂದು ಕೂಗಾಡುತ್ತಾ ಇದ್ದೆ ತೋಟ ಕಾಯುವ ಮಕ್ಕಳು ಸುಮ್ಮನಾದರು. ಬೆಳಿಗ್ಗೆ ನೋಡುವಾಗ ಕಳ್ಳರು ಪೂರ್ತಿ ಗೇರು ಬೀಜ ಕೊಯ್ದುಕೊಂಡು ಹೋಗಿದ್ದಾರೆ!!

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಘೋಷಣೆಯಾಗಿದ್ದು ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹಾಗೂ ಉಡುಪಿ ನಿಸ್ತಂತು ನಿರೀಕ್ಷಕ ಎಸ್.ಸಿ. ಮೋಹನ್ ಅವರಿಗೆ ಈ ಭಾರಿಯ ಪದಕ ಲಭಿಸಿದೆ. ಸೇವಾ ಬದ್ಧತೆ ಹಾಗೂ ಅರ್ಹತೆಯನ್ನು ಆಧರಿಸಿ ಜಿಲ್ಲೆಯಿಂದ ಈರ್ವರ ಹೆಸರು ಶಿಪಾರಸ್ಸು ಮಾಡಲಾಗಿದ್ದು, ಏ.2ರಂದು ನಡೆಯಲಿರುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪದಕ ಸ್ವೀಕರಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸುಬ್ರಹ್ಮಣ್ಯ ಠಾಣೆಯ ಎಸೈ ಆಗಿ ನೇಮಕಗೊಂಡ ಮಂಜುನಾಥ ಶೆಟ್ಟಿ ಅವರು, ಉಪ್ಪಿನಂಗಡಿ, ಬೆಳ್ತಂಗಡಿ, ಬೆಂಗಳೂರು, ಉಡುಪಿ ಮಂಗಳೂರುನಲ್ಲಿ ಸೇವೆ ಸಲ್ಲಿಸಿ, ವೃತ್ತನಿರೀಕ್ಷಕರಾಗಿ ಭಡ್ತಿ ಪಡೆದು ಮುಂದೆ ಡಿವೈಎಸ್ಪಿ ಆಗಿ ಭಡ್ತಿ ಪಡೆದಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು, ಮಾ.30: ದಕ್ಷಿಣ ಭಾರತದ ಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು. ಕ್ಷೇತ್ರದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.23ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಾ.30ರ ಬೆಳಿಗ್ಗೆ ದೇವಳದ ತಂತ್ರಿ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಭೋಜನಾಲದಲ್ಲಿ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ಉಡುಪಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್…

Read More

ದೇವಳದ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಶೋತ್ಸವ ಕುಂದಾಪ್ರ ಡಾಟ್ ಕಾಂ ಸುದ್ದಿ. ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿಗಳು ಮಾರ್ಚ್ 30ರಿಂದ ಏಪ್ರಿಲ್ 1ರ ವರೆಗೆ ಮೂಎಉ ದಿನಗಳ ಕಾಲ ದಿವ್ಯ ಸನ್ನಿಧಿಯಲ್ಲಿ ಜರುಗಲಿದೆ. ಕಾರಣಿಕ ಕ್ಷೇತ್ರ: ಹೇರಂಜಾಲು ದುರ್ಗಾಪರಮೇಶ್ವರಿ ಸನ್ನಿಧಿಯು ನಂಬಿದವರಿಗೆ ಇಂಬು ಕೊಡುವ ಕಾರಣಿಕ ಕ್ಷೇತ್ರ. ಒಂದು ಸಾವಿರ ವರ್ಷಕ್ಕೂ ಸುದೀರ್ಘ ಐತಿಹ್ಯ ಹೊಂದಿರುವ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯು ಅನಾದಿ ಕಾಲದಿಂದಲೂ ಭಕ್ತರ ಇಷ್ಟಾರ್ಷಗಳನ್ನು ನೆರವೇರಿಸುವ ಶೃದ್ಧಾಕೇಂದ್ರವಾಗಿ ಉಳಿದಿದೆ. ಕ್ಷೇತ್ರವನ್ನು ದುರ್ಗಾದೇವಿ ಎಂದು ದಾಖಲೆಗಳಲ್ಲಿ ನಮೂದಿಸಿದ್ದರೂ ಸ್ಥಳೀಯರು ದುರ್ಗಾಪರಮೇಶ್ವರಿ ಎಂದೇ ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ.  ಕುಂದಾಪ್ರ ಡಾಟ್ ಕಾಂ ಸುದ್ದಿ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿಯೇ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿ ಇದೆ. ಎರಡು ಕಡೆಗಳಲ್ಲಿ ನಾಗದೇವರ ಸಾನಿಧ್ಯ, ದೇವಳದ ಆಗ್ನೇಯದಲ್ಲಿ ರಾಮಮಂದಿರ, ಪಶ್ಚಿಮದಲ್ಲಿ ಕೆರೆ, ಪೂರ್ವದಲ್ಲಿ ಅಶ್ವಥ ಕಟ್ಟೆ ಇದ್ದು ಭಕ್ತರನ್ನು ಹರಸಿವೆ. ದೇವಳದ ಆನುವಂಶೀಯ ಮೊಕ್ತೇಸರ ಹಾಗೂ ಪ್ರಧಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಕ್ಕೊಳಪಟ್ಟ ಮೂಡಬಿದ್ರೆಯ ಮಹಾವೀರ ಕಾಲೇಜು ಸಿಬ್ಬಂದಿ ಸಂಘ ಆಯೋಜಿಸಿದ ಅಂತರ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಿಬ್ಬಂದಿಗಳ ತಂಡ ಜಯ ಗಳಿಸಿದೆ. ಅಂತಿಮ ಪಂದ್ಯದಲ್ಲಿ ಎದುರಾಳಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಸಿಬ್ಬಂದಿಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕ ಶರಣ್ ಅವರು ಉತ್ತಮ ಬ್ಯಾಟ್ಸಮನ್ ಮತ್ತು ಅನಂತ ಪೈ ಉತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದುಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ದೇಶದ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತಿಗಳನ್ನು ಉಳಿಸಿ ಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ಇಂದಿನ ಕಾಲದಲ್ಲಿ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ಸಿಗದ ಸಂಸ್ಕಾರ ಸಂಸ್ಕೃತಿಯನ್ನು ಯುವಕ ಮಂಡಲಗಳ ಸ್ನೇಹಿತರು ಜವಾಬ್ದಾರಿಯಿಂದ ನೀಡಿದಲ್ಲಿ ನಮ್ಮ ಪುರಾತನ ಸಂಸ್ಕ್ರತಿಯನ್ನು ಉಳಿಸಲು ಸಾಧ್ಯ ಎಂದು ಉಡುಪಿಯ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಹೇಳಿದರು. ಅವರು ಇತ್ತೀಚಿಗೆ ಸ್ನೇಹ ಯುತ್ ಕ್ಲಬ್ ಹೊಸಪೇಟೆ ತ್ರಾಸಿ ಇವರ ಆಶ್ರಯದಲ್ಲಿ ಜರಗಿದ ಸ್ನೇಹೋತ್ಸವ-2016 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಪಂ ಸದಸ್ಯೆ ಶೋಭಾ ಜಿ. ಪುತ್ರನ್, ಜಿಪಂ ಮಾಜಿ ಸದಸ್ಯ ಅನಂತ ಮೊವಾಡಿ, ತ್ರಾಸಿ ಗ್ರಾಪಂ ಸದಸ್ಯ ರವೀಂದ್ರ ಖಾರ್ವಿ, ಹೊಸಪೇಟೆ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ಚೌಕಿ ಜಗನ್ನಾಥ ಖಾರ್ವಿ ಸ್ನೇಹ ಸಂಘದ ಸ್ಥಾಪಕಾಧ್ಯಕ್ಷ ಗೋಪಾಲ ಖಾರ್ವಿ, ಹೊಸಪೇಟೆ ಮಹಿಳಾ ಹೋಳಿ ಉತ್ಸವ ಸಮಿತಿ ಅಧ್ಯಕ್ಷೆ ಪಾರ್ವತಿ ಬಿ. ಖಾರ್ವಿ, ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ನಾಗರಾಜ ಖಾರ್ವಿ, ಯುತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ತೀವ್ರ ಪೈಪೋಟಿಯಿರುವಂತಹ ಪ್ರಸ್ತುತ ದಿನಗಳಲ್ಲೂ ಸಹ, ಸರಿಯಾದ ಪೂರ್ವ ಸಿದ್ಧತೆಗಳೊಡನೆ ನಾವು ಐಬಿಪಿಎಸ್ ಪರೀಕ್ಷೆಯನ್ನು ಬರೆದದ್ದೇ ಆದಲ್ಲಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಬೆಸೆಂಟ್ ಮ್ಯಾನೇಜ್‌ಮೆಂಟ್ ಕಾಲೇಜಿನ ಕಾಯರ‍್ಕಟ್ಟೆಯ ಡಾ. ನಾರಾಯಣ ಹೇಳಿದರು. ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಡೆದ ಬ್ಯಾಂಕ್ ಪರೀಕ್ಷೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು. ಪ್ರಾಧ್ಯಾಪಕ ರವೀಶ್ ಮಾತನಾಡಿ ಸರಳ ರೀತಿಯಲ್ಲಿ ಸುಲಭ ಮಾರ್ಗದಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತಿತರ ರೀಸನಿಂಗ್ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಲಿತದ್ದೇ ಆದಲ್ಲಿ ಸಮಯದ ಉಳಿತಾಯದೊಡನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯ ಎಂದರು. ಕಾರ್ಯಾಗಾರವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉಮೇಶ್ ಮಯ್ಯ ಸಂಯೋಜಿಸಿದರು. ಪ್ರಾಂಶುಪಾಲ ಪ್ರೊ.ಬಿ.ಎ ಮೇಳಿ ಉಪಸ್ಥಿತರಿದ್ದರು. ಕುಮಾರಿ ಪೂರ್ಣಿಮಾ ಎನ್.ಆರ್ ವಂದಿಸಿದರು.

Read More