ಕುಂದಾಪುರ: ನಮ್ಮ ದೇಶ, ಕಲೆ, ಸಂಸ್ಕೃತಿ, ಜೀವನ ಪದ್ಧತಿಯನ್ನು ಪ್ರೀತಿಸುವ ಸೌಂದರ್ಯ ಪ್ರಜ್ಞೆ ಇದ್ದವರು ದೇಶದ ದೊಡ್ಡ ಸಂಪತ್ತು. ನಾವು ಎಲ್ಲವನ್ನೂ ಗೌರವಿಸುವ ದೇಶದ ಆಸ್ತಿಯಾಗಬೇಕೇ ಹೊರತು ಅಪಾಯಕಾರಿ ವ್ಯಕ್ತಿಯಾಗಬಾರದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಅವರು ಕುಂದಾಪುರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಡಾ. ಸುಭೋದ್ ಕುಮಾರ್ ಮಲ್ಲಿ ಅವರ ‘ಸೃಜನಾ’ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಮಾತನಾಡಿದರು. ಚಿತ್ರಕಲೆ ಸಮಾಜದ ಮೊತ್ತ ಮೊದಲ ಅಭಿವ್ಯಕ್ತಿ ಮಾಧ್ಯಮ. ಇದು ನೃತ್ಯ, ಬರಹ, ಹಾಡು ಎಲ್ಲಕ್ಕಿಂತಲೂ ಭಿನ್ನ. ಚಿತ್ರಕಲೆಯನ್ನು ನೋಡಿದರಷ್ಟೇ ಸಾಲದು ಅದರೊಳಗಿನ ಭಾವವನ್ನು ಕಾಣುವ ದೃಷ್ಟಿಯೂ ಬೇಕಾಗುತ್ತದೆ ಎಂದ ಅವರು, ದೇಶದ ಸಂಪನ್ಮೂಲಗಳ ಬಗ್ಗೆ ಮಾತನಾಡುವ ನಾವುಗಳು ನಮ್ಮೊಳಗಿನ ನಿಜವಾದ ಸಂಪನ್ಮೂಲದ ಬಗ್ಗೆ ತಿಳಿಯುವುದೇ ಇಲ್ಲ. ಏನನ್ನೋ ಕಲಿಯುತ್ತೇನೆ. ಇನ್ನೇನೋ ಆಗುತ್ತೇವೆ. ಇದು ಬದಲಾಗಬೇಕು. ಇಂದಿನ ಶಿಕ್ಷಣ ಜ್ಞಾನವನ್ನು ಕೊಡುತ್ತಿದೆಯೇ ಹೊರತು ಸುಂದರ ಮನಸ್ಸುಗಳನ್ನು ಕಟ್ಟಿಕೊಡುತ್ತಿಲ್ಲ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್…
Author: ನ್ಯೂಸ್ ಬ್ಯೂರೋ
ಕುಂದಾಪುರ: ಸಾಮಾಜಿಕ ಸೇವೆಯಲ್ಲಿ ಅರ್ಪಣಾಭಾವದೊಂದಿಗೆ ತೊಡಗಿಕೊಂಡು ವಿಶ್ವಕ್ಕೆ ವರವಾಗುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಪಾಲಿಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ಗೆ ಆಧಿಕೃತ ಭೇಟಿ ನೀಡಿದ ಸಂದರ್ಭ ಹಂಗಳೂರಿನ ಸಹನಾ ಕನ್ವೆನಶನ್ ಸೆಂಟರ್‌ನಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ದಿನಕರ ಪಟೇಲ್ ಅಧ್ಯಕ್ಷತೆವಹಿಸಿದ್ದರು. 2018-19 ನೇ ಸಾಲಿನ ರೋಟರಿ ಜಿಲ್ಲೆ 3180ಇದರ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಶೆಟ್ಟಿ, ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕೃತ ರೋಷನ್ ಭಾಸ್ಕರ್ ಪೂಜಾರಿ, ಕುಂದಾಪುರ ತಾಲೂಕು ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ ಆರ್. ಶೆಟ್ಟಿಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಮುಖವಾಣಿ ಸುರ್ಯೋದಯವನ್ನು ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಬಿಡುಗಡೆಗೊಳಿಸಿದರು. ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಮಹೇಶ್ ಪೂಜಾರಿ ಮತ್ತು ರವಿ. ಕೆ. ಅವರನ್ನು ಸೇರ್ಪಡೆಗೊಳಿಸಲಾಯಿತು.…
ಗಂಗೊಳ್ಳಿ: ಇತ್ತೀಚೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿದ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಂಡ್ಯ ಪಾಂಡುರಂಗ ಪೈ ,ಡಾ.ಭರತ್ ಕುಮಾರ್ ಭಟ್,ಎನ್ ಸದಾಶಿವ ನಾಯಕ್, ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ಡಾ.ಕಾಶೀನಾಥ ಪೈ ,ವಾಮನದಾಸ ಭಟ್ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲೂರು: ಉತ್ತಮ ಆರೋಗ್ಯ, ಮನರಂಜನೆ ಹಾಗೂ ಯಶಸ್ಸು ಕ್ರೀಡೆಯಿಂದ ಸಿಗುತ್ತದೆ. ಇದರ ಜೊತೆ ತಾಳ್ಮೆ, ಇತರರೊಂದಿಗೆ ಮಧುರ ಬಾಂಧವ್ಯ ಹಾಗೂ ನಿಕಟ ಸಂಪರ್ಕದಿಂದ ನಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ನಿರ್ಮಾಣವಾಗುತ್ತದೆ. ಕ್ರೀಡಾಪಟುಗಳು ಸ್ಪರ್ಧಾತ್ಮಕ ನೀತಿ-ನಿಯಮಗಳಿಗೆ ಬದ್ದರಾಗಿರಬೇಕು. ಈ ತತ್ವಗಳನ್ನು ನಿತ್ಯಜೀವನದಲ್ಲಿಯೂ ಅಳವಡಿಸಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡಾ ಗುರುತಿಸಿಕೊಳ್ಳಲು ಸಾಧ್ಯ ಎಂದು ಕೋಟಾ ವಿವೇಕ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಸಂತ್ ಶೆಟ್ಟಿ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ 2015-16ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಧ್ವಜಾರೋಹಣ ಮಾಡಿದ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದನ್ನು ಧೃಡಚಿತ್ತದಿಂದ ಆಯ್ಕೆ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ದ್ವಂದ್ವ ನಿಲುವು ಬೇಡ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯಿರಲಿ. ಯಾವುದೇ ಕಾರಣಕ್ಕೂ ಆಕರ್ಷಣೆಗೆ ಒಳಗಾಗದೇ ಉತ್ತಮವಾಗಿದ್ದನ್ನೆ ಆಯ್ಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕ್ರೀಡಾ…
ಬೈಂದೂರು: ಇಲ್ಲಿಗೆ ಸಮೀಪದ ಉಪ್ಪುಂದದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಯು. ಕೇಶವ ಪ್ರಭು (65) ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ವರದಿಯಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಕೇಶವ ಪ್ರಭ್ರು ತಮ್ಮ ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ಮಾಡಿದ್ದರು. ಕಳೆದ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆನ್ನಲಾಗಿದೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.
ಕುಂದಾಪುರ: ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಕ್ಷೇತ್ರದಲ್ಲಿ ಚಂಪಾಷಷ್ಠಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆದರೇ, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಸಲ್ಲಿಸಿ ಪುನೀತರಾದರು. ಮೊದಲ ದಿನ ಷಣ್ಣಾಳಿಕೇರ ಗಣಹೋಮ, ಶ್ರೀ ಕಾಳಿಂಗ ದೇವರಿಗೆ ನವಕುಂಭ ಸ್ನಪನ, ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಶ್ರೀ ದುರ್ಗಾದೇವಿಗೆ ಚಂಡಿಕಾ ಪಾರಾಯಣ ನಡೆದವು. ಷಷ್ಠಿಯ ದಿನದಂದು ಸುಬ್ರಹ್ಮಣ್ಯ ಕ್ಷೇತ್ರವೆಂಬ ಪ್ರತೀತಿ ಇರುವ ಕಾಳಾವರ ಕ್ಷೇತ್ರದಲ್ಲಿ ವೇ.ಮೂ ಚೆನ್ನಕೇಶವ ಭಟ್ ಸಾರಥ್ಯದಲ್ಲಿ ದೇವರಿಗೆ ಅಭಿಷೇಕ, ಪಂಚಾಮೃತ ಪೂಜೆ, ತೀರ್ಥಾಭಿಷೇಕ, ಪಲ್ಲಪೂಜೆ ಜರುಗಿದರೇ, ಭಕ್ತರಿಂದ ಉರುಳು ಸೇವೆ ನಡೆಯಿತು. ಸಾರ್ವಜನಿಕರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕುಂದಾಪುರ: ಜಯಪ್ರಕಾಶ್ ಹೆಗ್ಡೆಯವರಿಗೆ ನಾಲ್ಕು ಭಾರಿ ಪಕ್ಷದಿಂದ ಸ್ವರ್ಧಿಸಲು ಅವಕಾಶ ನೀಡಲಾಗಿತ್ತು. ಆದರೆ ಈ ಭಾರಿ ಕಾಂಗ್ರೆಸ್ ಕಾರ್ಯಕರ್ತರ ಒಲವು ಪ್ರತಾಪಚಂದ್ರ ಶೆಟ್ಟಿಯವರ ಪರವಾಗಿತ್ತು. ಹಾಗಾಗಿ ಮತ್ತೆ ಚುನಾವಣೆಗೆ ಸ್ವರ್ಧಿಸಲು ಹೆಗ್ಡೆಯವರಿಗೆ ಟಿಕೆಟ್ ನೀಡಿರಲಿಲ್ಲ. ಇದು ಅವರಲ್ಲಿನ ಅಧಿಕಾರ ದಾಹವನ್ನು ಸೂಚಿಸುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರ ಒಲವು ಪ್ರತಾಪಚಂದ್ರ ಶೆಟ್ಟಿ ಅವರ ಕಡೆಗೆ ಇರುವುದರಿಂದ ಅವರು ಗೆದ್ದೇ ಗೆಲ್ಲುತ್ತಾರಂಬ ವಿಶ್ವಾಸ ನಮಗಿದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಹೆಗ್ಡೆ ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅವರು ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕಳೆದ ಎರಡು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಸದನದ ಒಳಗೆ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದ ಹೆಗ್ಗಳಿಕೆ, ಪ್ರತಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಆ ಭಾಗದ ಸಮಸ್ಯೆಯನ್ನು ಆಲಿಸಿ ನೇರವಾಗಿ ಅನುದಾನ ನೀಡುವ ಕೆಲಸ ಮಾಡಿದ್ದಾರೆ. ಸಿಆರ್‌ಝಡ್, ಕಸ್ತೂರಿ ರಂಗನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಘನತ್ಯಾಜ್ಯ ವಿಲೇವಾರಿ, ವಾರಾಹಿ ನೀರಾವರಿ ವಿಚಾರದಲ್ಲಿ ವಿಧಾನಸೌಧ…
ಬೈಂದೂರು: ಇತ್ತೀಚಿಗೆ ಉಡುಪಿ ರಂಗಭೂಮಿಯ 36ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ’ಲಾವಣ್ಯ’ ತಂಡವು ರಾಜೇಂದ್ರ ಕಾರಂತ ಬೆಂಗಳೂರು ರಚಿಸಿದ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕವನ್ನು ಪ್ರದರ್ಶಿಸಿ ತೃತೀಯ ಬಹುಮಾನ ಗಳಿಸಿದೆ, ’ಮುದ್ದಣ್ಣ’ ಪಾತ್ರ ವಹಿಸಿದ ಬಿ. ಗಣೇಶ ಕಾರಂತ್ ಶ್ರೇಷ್ಟ ಹಾಸ್ಯ ನಟ ಪ್ರಶಸ್ತಿ ಹಾಗೂ ನಾಟಕ ನಿರ್ದೇಶಿಸಿದ ಗಿರೀಶ್ ಬೈಂದೂರು ಶ್ರೇಷ್ಟ ನಿರ್ದೇಶನಕ್ಕೆ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ. ರಾಜೇಂದ್ರ ಕಾರಂತ್ ಬೆಂಗಳೂರು ರಚಿಸಿದ ಈ ನಾಟಕ ರಚಿಸಿದ್ದರು.
ಕುಂದಾಪುರ: ತಾಲೂಕು ಯಡ್ಯಾಡಿ-ಮತ್ಯಾಡಿ ಗ್ರಾಮ ಗುಡ್ಡಟ್ಟು ಬಾವಿಗೆ ರಾತ್ರಿ ವೇಳೆಯಲ್ಲಿ ಬಿದ್ದಿದ್ದ ಹೆಣ್ಣು ಚಿರತೆಯನ್ನು ಸ್ಥಳೀಯರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಕ್ಷಿಸಿದ ಘಟನೆ ವರದಿಯಾಗಿದೆ. ಗುಡ್ಡಟ್ಟುವಿನ ಗುಡ್ಡಿಮನೆ ಸೀತಾ ಮರಕಾಲ್ತಿ ಎಂಬುವವರ ಮನೆಯ ಆವರಣವಿಲ್ಲದ ಸುಮಾರು ೫೦ ಅಡಿ ಆಳದ ಬಾವಿಗೆ ನಿನ್ನೆ ರಾತ್ರಿ ಒಂದು ಹೆಣ್ಣು ಚಿರತೆಯು ಬಿದ್ದಿತ್ತು. ಬೆಳೆಗ್ಗೆ ಹೊತ್ತಿಗೆ ಬಾವಿಗೆ ನೀರನ್ನು ತರಲು ಹೋದಾಗ ಇದು ಗಮನಕ್ಕೆ ಬಂದು, ಅರಣ್ಯಾಧಿಕಾರಿಯವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸಿಬ್ಬಂಧಿಗಳೊಂದಿಗೆ ಸ್ಥಳಕ್ಕಾಗಮಿಸಿದಶಂಕರನಾರಾಯಣ ವಲಯದ ಅರಣ್ಯಾಧಿಕಾರಿ ಬ್ರಿಜೇಶ್ ವಿನಯ ಕುಮಾರ್ ಸುಮಾರು ಐದು ಗಂಟೆಗಳ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಸುರಕ್ಷಿತವಾಗಿ ಹಿಡಿದು, ಬೋನಿನಲ್ಲಿ ಹಾಕಿ ಮೂಕಾಂಬಿಕಾ ಅಭಯಾರಣ್ಯದಲ್ಲಿ ಬಿಟ್ಟಿದ್ದಾರೆ. ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜು ಗಾಣಿಗ, ಹರೀಶ ಕೆ., ಕೆ. ರವಿ, ಕುಮಾರಿ ಆಶಾ, ಅರಣ್ಯ ರಕ್ಷಕರಾದ ಆನಂದ ಬಳೆಗಾರ, ರವಿ, ಶ್ರೀಕಾಂತ, ಗುಂಡೇರಾವ್ ಶಾಖಾ, ಹನುಮಂತರಾಯಪ್ಪ, ಮಂಜುನಾಥ, ಗುರುರಾಜ ಕೆ, ರವೀಂದ್ರ ಮತ್ತು ಅರಣ್ಯ ವೀಕ್ಷಕರಾದ ರವಿ, ವಿಠಲ ನಾಯ್ಕ,…
ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ 2014-15ನೇ ಸಾಲಿನ ಶಾಲೆಯ ಆದರ್ಶ ವಿದ್ಯಾರ್ಥಿನಿ ಸುನೀತಾ ಪೂಜಾರಿ ಅವರಿಗೆ ಬಾಂಡ್ಯ ರಾಮರಾಮ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ಚಿನ್ನದ ಪದಕ ಹಾಗೂ ಬಾಂಡ್ಯ ವರದಾ ಪೈ ಸ್ಮಾರಕ ಅವರ ಮಕ್ಕಳಾದ ಬಾಂಡ್ಯ ಪಾಂಡುರಂಗ ಪೈ ಮತ್ತು ಸಹೋದರರಿಂದ ಕೊಡಲ್ಪಟ್ಟ ನಿಧಿಯನ್ನು ನೀಡಿ ಗೌರವಿಸಲಾಯಿತು. ಇತ್ತೀಚಿಗೆ ಜರಗಿದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮ್ಯಾನೇಜರ್ ಬಾಂಡ್ಯ ಪಾಂಡುರಂಗ ಪೈ ಬೆಂಗಳೂರು ಅವರು ನೀಡಿ ಗೌರವಿಸಿದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಸುರತ್ಕಲ್‌ನ ಶ್ರೀನಿವಾಸ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಭರತ್ ಕುಮಾರ್ ಭಟ್ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಶಾಲೆಯ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್ ಮೊದಲಾದವರು ಉಪಸ್ಥಿತರಿದ್ದರು.
