ಗಂಗೊಳ್ಳಿ: ಮೆಸ್ಕಾಂ ಸಬ್ಸ್ಟೇಶನ್ ಆರಂಭಿಸಲು ಎದುರಾಗಿದ್ದ ತೊಡಕುಗಳು ಇನ್ನೂ ನಿವಾರಣೆಯಾಗದಿರುವುದರಿಂದ ಸಬ್ಸ್ಟೇಶನ್ ಆರಂಭವಾಗುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೆಸ್ಕಾಂ ಸಬ್ಸ್ಟೇಶನ್ ಹೋರಾಟ ಸಮಿತಿ ಅಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನಡುವಿನ ಜಟಾಪಟಿ ಹಾಗೂ ಗೊಂದಲದಿಂದ ಸಬ್ಸ್ಟೇಶನ್ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಸಂಬಂಧ ಸಚಿವರು ಹಾಗೂ ಇಲಾಖಾಧಿಕಾರಿಗಳ ಸಭೆ ನಡೆಸಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಸುಮಾರು ಒಂದು ತಿಂಗಳ ಹಿಂದೆ ಬೈಂದೂರು ಶಾಸಕರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗಿದ್ದು, ಆದರೆ ಈವರೆಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ಮೆಸ್ಕಾಂ ಆಡಳಿತ ನಿರ್ದೇಶಕರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸರಕಾರದ ಎರಡು ಇಲಾಖೆಗಳ ನಡುವಿನ ಗೊಂದಲವನ್ನು ಆದಷ್ಟು ಬೇಗನೇ ಬಗೆಹರಿಸಿ ಗಂಗೊಳ್ಳಿ ಮೆಸ್ಕಾಂ ಸಬ್ಸ್ಟೇಶನ್ ವ್ಯಾಪ್ತಿಯ ನಾಗರಿಕರ, ಗ್ರಾಹಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು. ಗಂಗೊಳ್ಳಿಯಲ್ಲಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ಆಗ ಬೇಕಿ ದ್ದರೆ ಅದು ರಾಜಕೀಯದಿಂದ ಮಾತ್ರ ಸಾಧ್ಯ. ಭಾರತೀಯ ಜನತಾ ಪಕ್ಷಕ್ಕೆ ತನ್ನದೇ ಆದ ತಣ್ತೀ ಸಿದ್ಧಾಂತಗಳಿವೆ. ಪಕ್ಷ ಸಿದ್ಧಾಂತ, ವ್ಯವಸ್ಥೆಯಲ್ಲಿನ ಬದ ಲಾವಣೆ, ಧ್ಯೇಯ, ನಿಷ್ಠೆಗಳ ಅರಿವು ಮೂಡಿಸುವ ಈ ಪ್ರಶಿಕ್ಷಣ ವರ್ಗ ಬಿಜೆಪಿಯ ವೈಶಿಷ್ಟ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ ಹೇಳಿದರು. ಅವರು ಕೋಟೇಶ್ವರದ ಯುವ ಮೆರಿಡಿಯನ್ ಮಿನಿ ಹಾಲ್ನಲ್ಲಿ ಉಡುಪಿ ಜಿಲ್ಲಾ ಬಿಜೆಪಿ, ಪಂ. ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಧ್ಯಾಯದ ಜಿಲ್ಲಾ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ಸೂಕ್ತ ತರಬೇತಿಗಳು ರಾಜಕಾರಣಿಗಳಲ್ಲಿ ಇಲ್ಲದೇ ಇರುವುದರಿಂದ ರಾಜಕೀಯ ಅರ್ಥ ಕಳೆದುಕೊಳ್ಳುತ್ತಿದೆ. ರಾಜಕಾರಣವೆಂದರೆ ಕೇವಲ ಹಣ, ಜನ ಸಂಪರ್ಕ ಎನ್ನುವ ಭ್ರಮೆ ಹುಟ್ಟಿಸುವ ಈ ಕಾಲದಲ್ಲಿ ರಾಜನೀತಿಗೆ ಸರಿಯಾದ ಅರ್ಥ ಕೊಡುವಲ್ಲಿ ಬಿಜೆಪಿಗೆ ಮಾತ್ರ ಸಾಧ್ಯ ಎನ್ನುವುದನ್ನು ಜನರು ತಿಳಿಸಿಕೊಟ್ಟಿದ್ದಾರೆ ಎಂದರು. ಕೇಂದ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದ ಅನಂತರ ದೇಶದ ಚಿತ್ರಣವೇ ಬದಲಾಗಿದೆ. ಭಿಕ್ಷುಕರ…
ಕುಂದಾಪುರ: ಯಕ್ಷಗಾನ ಕ್ಷೇತ್ರದ ಉದಯೋನ್ಮುಕ ಕಲಾವಿದ, ಪ್ರಸಂಗ ಕರ್ತ ಕಾಲ್ತೋಡು ನಿವಾಸಿ ಚಂದ್ರಕಾಂತ ಶೆಟ್ಟಿ(30) ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಮಡ ಘಟನೆ ಮಂಗಳವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಕಾಂತ ಶೆಟ್ಟಿ ಕೆಲವು ವರ್ಷಗಳಿಂದ ಗೋಳಿಗರಡಿ ಹಾಗೂ ಸಿಗಂಧೂರು ಮೇಳದಲ್ಲಿಯೂ ಕಲಾವಿದರಾಗಿ ಸೇವೆ ಸಲ್ಲಿಸಿದವರೆನ್ನಲಾಗಿದ್ದು ಆಜ್ರಿಯ ಚೋನಮನೆ ಶ್ರೀ ಶನೀಶ್ವರ ಯಕ್ಷಗಾನ ಮೇಳದಲ್ಲಿಯೂ ಕಲಾವಿದರಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರೆನ್ನಲಾಗಿದೆ. ಆದರೆ ಈ ಬಾರಿ ಸಿಗಂಧೂರು ಮೆಳದಲ್ಲಿಯೇ ಕಲಾವಿದರಾಗಿ ಮುಂದುವರೆದಿದ್ದರು ಎನ್ನಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಉಡುಪಿಗೆ ಬಂದಿದ್ದರೆನ್ನಲಾಗಿದ್ದು, ಮಂಗಳವಾರ ರಾತ್ರಿ ಇಂದ್ರಾಳಿ ಸಮೀಪ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಚಂದ್ರಕಾಂತ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತರಾಗಿ ಕೆಲವು ಪ್ರಸಂಗಗಳನ್ನು ರಚಿಸಿದ್ದು, ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದರು ಎನ್ನಲಾಗಿದೆ. ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಳಿಸಿ ಮಾತನಾಡಿದ ವಾಟ್ಸಪ್ ಹೀರೋ ಕುಂದಾಪುರ: ಕ್ಷಣಾರ್ಧದಲ್ಲಿ ಸುದ್ದಿಯಲ್ಲಿ ಪ್ರಪಂಚದ ಮೂಲೆ ಮೂಲೆಗಳಿಗೂ ತಲುಪಿಸುವಷ್ಟು ಸಶಕ್ತವಾದ ತಂತ್ರಜ್ಞಾನ ಇಂದು ಬೆಳೆದು ನಿಂತಿದೆ. ದೂರದಲ್ಲಿ ಘಟಿಸುವ ಘಟನೆಗಳು ನಿರೀಕ್ಷೆಗಿಂತ ವೇಗವಾಗಿ ತಲುಪಿ ಚರ್ಚೆಯ ವಸ್ತುವಾಗುತ್ತಿರುವ ಹೊತ್ತಿನಲ್ಲಿ ನಮ್ಮೂರಿನ ವೈಶಿಷ್ಟ್ಯಗಳನ್ನು ಮೊದಲು ನಮ್ಮವರಿಗೆ ತಲುಪಿಸಬೇಕೆಂಬ ತುಡಿತ ವಿಶೇಷವಾದುದು. ಕುಂದಾಪುರದ ಸಂಸ್ಕೃತಿ, ಭಾಷಾ ಸೊಗಡು ಎಲ್ಲವನ್ನು ದಿನನಿತ್ಯದ ಆಗುಹೋಗುಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ಶ್ಲಾಘನೀಯ ಎಂದು ಶಿಕ್ಷಕ, ಸಾಮಾಜಿಕ ತಾಣದ ವಿಶಿಷ್ಟ ಧ್ವನಿ ಮನೋಹರ ಹಂದಾಡಿ(ಮನು ಹಂದಾಡಿ) ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಎ.ವಿ. ಹಾಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಮೊಬೈಲ್ ಇಲ್ಲದ ಕೈಗಳಿಲ್ಲ. ಅದು ನಮ್ಮ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಎಲ್ಲವನ್ನೂ ಮೊಬೈಲ್ ಭಾಷೆಯಲ್ಲಿಯೇ ಸಂವಹನಿಸಬೇಕಾದ ಕಾಲಘಟ್ಟದಲ್ಲಿ ಕುಂದಾಪ್ರ ಡಾಟ್ ಕಾಂ ಮೊಬೈಲ್ ಆಪ್ ಪರಿಚಯಿಸಿ ಕುಂದನಾಡಿನ ಸೊಗಡನ್ನು ಮತ್ತಷ್ಟು ಸುಲಭವಾಗಿ ಓದುಗರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದು…
ಮೂಡುಬಿದಿರೆ: ಒಂದು ರಾಷ್ಟ್ರದ ಅಭಿವೃದ್ಧಿಗೆ, ಶಾಂತಿಗೆ ನೆಮ್ಮದಿಯ ಬದುಕಿಗೆ ಯಾವೆಲ್ಲಾ ರೀತಿಯ ಕಾರ್ಯಗಳನ್ನು ರೂಪಿಸಬೇಕೋ ಅವೆಲ್ಲವನ್ನೂ ಆಳ್ವಾಸ್ ನುಡಿಸಿರಿ ಕಳೆದ ಹನ್ನೊಂದು ವರ್ಷಗಳಿಂದ ಸತತವಾಗಿ ನಿರ್ವಹಿಸಿಕೊಂಡು ಬಂದಿದೆ. ಇದಕ್ಕಾಗಿ ಇದನ್ನು ಜನತಾ ವಿಶ್ವವಿದ್ಯಾಲಯ ಎಂದು ಕರೆದರೂ ತಪ್ಪಾಗದು. ಹೀಗೆಂದು ನುಡಿದವರು ಆಳ್ವಾಸ್ರ ನುಡಿಸಿರಿ 2015ರ ಸರ್ವಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ. ನುಡಿಸಿರಿ ಅಧ್ಯಕ್ಷೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಇಡೀ ನುಡಿಸಿರಿಯಲ್ಲಿ ನಡೆದ ಎಲ್ಲಾ ಗೋಷ್ಠಿಗಳು ಗಂಭೀರವಾಗಿ ತಲಸ್ಪರ್ಶಿಯಾಗಿದ್ದವು. ಶಿಸ್ತುಬದ್ಧ ಮತ್ತು ಉತ್ಕೃಷ್ಟ ಗುಣಮಟ್ಟದ ಕಾರ್ಯಕ್ರಮಗಳಿಗಾಗಿಯೇ ಇಂದು ಆಳ್ವಾಸ್ ನುಡಿಸಿರಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. * ಆಳ್ವಾಸ್ ನುಡಿಸಿರಿ ನನಗೆ ಹೆಮ್ಮೆಯ ಗರಿ ಈ ಸಂದರ್ಭದಲ್ಲಿ ನನ್ನಿಂದ ಮಾತನಾಡಲು ಮಾತುಗಳು ಹೊರಬರುತ್ತಿಲ್ಲ. ಆದ್ದರಿಂದ ಒಂದು ಹಾಡಿನ ಮೂಲಕ ನನ್ನ ಋಣವನ್ನು ಅರ್ಪಿಸುತ್ತೇನೆ. – ವಿದ್ವಾನ್ ಆರ್. ಕೆ. ಪದ್ಮನಾಭ * ಹೊಸತನದ ನಿಜವಾದ ಹುಡುಕಾಟಕ್ಕೆ ಈ ನುಡಿಸಿರಿ ನಾಂದಿಯಾಗಿದೆ. – ಡಾ. ಬನ್ನಂಜೆ ಗೋವಿಂದಾಚಾರ್ಯ * ಕಂಡ ಕನಸುಗಳನ್ನು…
ಬೈಂದೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಕೇವಲ ಲಾಭಗಳಿಸುವ ದೃಷ್ಟಿಯಲ್ಲಿ ಕಾರ್ಯನಿರ್ವಹಿಸದೇ, ಸಂಕಷ್ಟದಲ್ಲಿರುವ ಕೃಷಿಕರು, ಮೀನುಗಾರರು, ಕೂಲಿಕಾರ್ಮಿಕರಿಗೆ ನೆರವು ನೀಡುವುದರ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ ಹೇಳಿದರು. ಅವರು ಬೈಂದೂರು ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ನಾಗೂರು ಶಾಖೆ ಉದ್ಘಾಟಿಸಿ ಮಾತನಾಡಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಸಹಕಾರಿ ಸಂಘಗಳು ರಾಷ್ಟ್ರೀಯ ಬ್ಯಾಂಕುಗಳಿಗೆ ಸರಿಸಮನಾಗಿ ತನ್ನ ಗ್ರಾಹಕರಿಗೆ ಸುಲಭ ದರದಲ್ಲಿ ಸಾಲ ಸೌಲಭ್ಯ ನೀಡುವುದರ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಕೆ. ರಮೇಶ ಗಾಣಿಗ, ಮಹೇಂದ್ರ ಪೂಜಾರಿ, ಸಂಯುಕ್ತ ಸಹಕಾರಿ ಒಕ್ಕೂಟದ ನಿರ್ದೇಶಕ ಭಾಸ್ಕರ್ ಕಾಮತ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ವ್ಯವಸಾಯ…
ಹೊಸಂಗಡಿ: 2015-16ರ ಸಾಲಿನ ಪ್ರೌಢ ಶಿಕ್ಷಣ ಮಂಡಳಿಯ ಹೈಸ್ಕೂಲ್ ಮಟ್ಟದ ಕ್ರೀಡಾ ಕೂಟದಲ್ಲಿ ತಾಲೋಕಿನ ಹೊಸಂಗಡಿ ಪ್ರೌಢ ಶಾಲಾ ವಿಧ್ಯಾರ್ಥಿಗಳು ವಲಯ ,ತಾಲೋಕು ಮಟ್ಟದ ಕ್ರೀಡಾಕೂಟದಲ್ಲಿ ಜಯಭೇರಿ ಸಾದಿಸುತ್ತಾ , ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ,ಈದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ವಿಧ್ಯಾರ್ಥಿಗಳ ಕ್ರೀಡಾ ಸಾಧನೆ ಇಂತಿದೆ : ಬಾಲಕಿಯರ ಖೋ -ಖೋ ತಂಡ ತಾಲೋಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ನಾಲ್ಕು ವಿಧ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಅತ್ಲೆಟಿಕ್ ವಿಭಾಗದಲ್ಲಿ ಶ್ರೀದೇವಿ ಉಡುಪಿ ಜಿಲ್ಲೆಯಲ್ಲಿ ಅತೀ ವೇಗದ ಓಟಗಾರ್ತಿಯಾಗಿ ಮೂಡಿ ಬಂದಿದ್ದಾರೆ. ಕುಮಾರಿ ಸ್ವಾತಿ ಅತೀ ಎತ್ತರ ಜಿಗಿತದ ಕ್ರೀಡಾಳು ಆಗಿದ್ದಾರೆ , ಅರುಣ್ ಕೋಲು ನೆಗೆತದಲ್ಲಿ ಅತೀ ಎತ್ತರಕ್ಕೆ ಹಾರುವ ಕ್ರೀಡಾಪಟುವಾದರೇ ,ದರ್ಶನ್ ಅಡೆ-ತಡೆ ಓಟದಲ್ಲಿ ಜಿಲ್ಲೆಯ ಎರಡನೇ ವೇಗದ ಓಟಗಾರನಾಗಿದ್ದಾನೆ . ರಮ್ಯ ದೂರದ ಓಟದಲ್ಲಿ ಮೂರನೇ ಓಟಗಾರ್ತಿಯ ಸ್ಥಾನ ಪಡೆದಿದ್ದಾಳೆ . ನಾಲ್ಕು ವಿಧ್ಯಾರ್ಥಿಗಳು ಅತ್ಲೆತಿಕ್ ವಿಭಾಗದಲ್ಲಿ…
ಮೂಡುಬಿದಿರೆ: ನುಡಿಸಿರಿ ಎಂದರೆ ಸಾಕು ಕಲೆ, ಸಾಹಿತ್ತಿಕ, ಸಾಂಸ್ಕೃತಿಕ ವಿಚಾರಗಳು ಕಣ್ಮುಂದೆ ಹಾದುಹೋಗುತ್ತವೆ. ಮೂರುದಿನಗಳ ಕಾರ್ಯಕ್ರಮದಲ್ಲಿ ಹತ್ತಾರು ವಿಚಾರಗಳು ಚರ್ಚೆಗೆ ಬರುವುದರೊಂದಿಗೆ ಆಯಾ ವರ್ಷದ ಪರಿಕಲ್ಪನೆಗೊಂದು ಸ್ಪಷ್ಟ ರೂಪು ನೀಡುವ ಪ್ರಯತ್ನ 12 ವರ್ಷಗಳಿಂದಲೂ ನಡೆದು ಬಂದಿದೆ. ಬೆಳೆಗ್ಗೆ 5:30ರ ಉದಯರಾಗದಿಂದ ಆರಂಭಗೊಳ್ಳುವ ಕಾರ್ಯಕ್ರಮ ಸರಣಿ ವಿಚಾರಗೋಷ್ಠಿ, ವಿಶೇಷೋಪನ್ಯಾಸ, ಕವಿಸಮಯ-ಕವಿನಮನ, ಸಂಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ಭರಪೂರ ಸಾಹಿತ್ತಿಕ ಸಾಂಸ್ಕೃತಿಕ ರಸದೌತಣವನ್ನು ನೀಡುತ್ತದೆ. ಏಕಕಾಲದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣವನ್ನು ನೀಡಲು ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆ, ಬಿ.ವಿ. ಕಾರಂತ ವೇದಿಕೆ, ಕೆ.ಎನ್. ಟೈಲರ್ ವೇದಿಕೆ, ಮಾ| ವಿಠಲ ಶೆಟ್ಟಿ ವೇದಿಕೆ-ಡಾ| ವಿ.ಎಸ್. ಆಚಾರ್ಯ ಸಭಾಭವನ, ಕು.ಶಿ. ಹರಿದಾಸ ಭಟ್ಟ ವೇದಿಕೆ ಸೇರಿ ಒಟ್ಟು 8 ವೇದಿಕೆಗಳು ತೆರೆದುಕೊಂದಿದೆ. ಈ ಭಾರಿಯ ಸಮ್ಮೇಳನದ ಮೂರು ದಿನಗಳ ಕಾಲ ಕೃಷಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಮಳಿಗೆಗಳು, 250ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, ವೈವಿಧ್ಯಮಯ ದೇಶೀ ಆಹಾರ ಖಾದ್ಯ ಮಳಿಗೆಗಳಿವೆ.…
ಮೂಡುಬಿದಿರೆ: ಬೆಳಿಗ್ಗೆ 5:30ರ ಉದಯರಾಗದಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ರಾತ್ರಿ 11:30ಕ್ಕೆ ರಘು ದೀಕ್ಷಿತ್ ಅವರ ಸಮಕಾಲೀನ ಜನಪದ ಸಂಗೀತದ ಮೂಲಕ ಸಮಾಪನಗೊಂಡಿತು. ಡಾ| ವಿ. ಎಸ್. ಆಚಾರ್ಯ ಸಭಾಭವನದಲ್ಲಿ ಪಂಡಿತ್ ಅಂಬಯ್ಯನುಲಿ ಮತ್ತು ಬಳಗದಿಂದ ಉದಯರಾಗ, ಬ್ರಹ್ಮಾವರ ರಘುನಾಥ ಭಟ್ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ, ಮೈಸೂರು ಮೈತ್ರಿರಾವ್ ಅವರಿಂದ ಭರತನಾಟ್ಯ, ಸಿ. ಎಂ. ನರಸಿಂಹಮೂರ್ತಿ ಮತ್ತು ಬಳಗದಿಂದ ಜಾನಪದ ಝೇಂಕಾರ, ಶೋಭಾ ಶಶಿಕುಮಾರ್ ಬಳಗದ ಭರತನಾಟ್ಯ, ತಾಳಮದ್ದಳೆ, ನೃತ್ಯರೂಪಕಗಳು ಪ್ರದರ್ಶನಗೊಂಡರೇ, ರತ್ನಾಕರವರ್ಣಿ ವೇದಿಕೆಯಲ್ಲಿ ದಾಸರಪದಗಳು, ನೃತ್ಯ ವೈವಿಧ್ಯಗಳು ಜರುಗಿದವು, ಕೆ. ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಜನಪದ ಗಾಯನ, ಸುಗಮ ಸಂಗೀತ ಜರುಗಿದರೇ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಮ್ಯಾಂಡೋಲಿನ್ ವಾದನ ಜರುಗಿತು, ಬಿ.ವಿ ಕಾರಂತ ವೇದಿಕೆಯಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ರಚನೆಯ, ಹಲುಗಪ್ಪ ಕಟ್ಟೀಮನಿ ನಿರ್ದೇಶನದ ಜತೆಗಿರುವನು ಚಂದಿರ ನಾಟಕವು ಸಂಕಲ್ಪ ಮೈಸೂರು ಹಾಗೂ ಕಾರಾಗೃಹ…
ಮೂಡುಬಿದಿರೆ: ಇಲ್ಲಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಪ್ರಸಿದ್ಧ ಗಾಯಕ ಬೆಂಗಳೂರಿನ ರಘು ದೀಕ್ಷಿತ್ ಅವರಿಂದ ಸಮಕಾಲೀನ ಜನಪದ ಸಂಗೀತ ಗಾಯನ ಕಾರ್ಯಕ್ರಮ ಜರುಗಿತು. ವಿಶಾಲವಾದ ವೇದಿಕೆಯಲ್ಲಿ ನಿಂತ ರಘು ದೀಕ್ಷಿತ್ ಹಾಡುತ್ತಿದ್ದರೇ ನೆರೆದಿದ್ದ ಪ್ರೇಕ್ಷಕರು ಅವರ ಸಂಗೀತಕ್ಕೆ ಮನಸೋತು ಆಲಿಸುತ್ತಿದ್ದುದು ಕಂಡುಬಂತು.
