Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಡೆಯ ಬಾರದ ಕರಾಳ ಘಟನೆಯೊಂದು ನಡೆದು ಹೋಗಿದೆ ಇನ್ನೂ ಅರಳದ ದೇವರ ತೋಟದ ಕುಸಮಗಳು ಮುದುಡಿಹೋಗಿವೆ. ಆ ಮುಗ್ಧ ಕಂದಮ್ಮ ಗಳ ಪುನೀತ ಆತ್ಮಗಳಿಗೆ ದೇವರ ಆಸ್ಥಾನದಲ್ಲಿ ಶಾಂತಿ ಲಭಿಸಲಿ, ಹೊತ್ತಲ್ಲದ ಹೊತ್ತಿನಲ್ಲಿ ತಮ್ಮ ಕರುಳ ಕುಡಿಗಳನ್ನು ಅಗಲಿರುವ ಮಕ್ಕಳ ಹೆತ್ತವರಿಗೆ, ಪೋಷಕರಿಗೆ ಆ ಅಲ್ಲಾಹು ನೋವನ್ನು ಮಣಿಸುವ , ಸಹಿಸುವ ಶಕ್ತಿಯನ್ನು ನೀಡಲಿ ಎಂದು ಕುಂದಾಪುರ ಜಾಮೀಯಾ ಮಸೀದಿಯ ಖತೀಬರಾದ ಜನಾಬ್ ಅಬ್ದುಲ್ ರಹಿಮಾನ್ ಹೇಳಿದರು. ತ್ರಾಸಿ ಶಾಲಾ ಮಕ್ಕಳ ದುರಂತದ ಶುಕ್ರವಾರದ ಜುಮ್ಮಾ ನಮಾಜಿನ ನಂತರ ಖತೀಬರ ಉಪಸ್ಥಿತಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಊರ ಪರವೂರ ಅಸಂಖ್ಯಾತ ಮುಸ್ಲಿಮ್ ಬಾಂಧವರು ಮರೆಯಾದ ಮುಗ್ಧ, ಪುಟ್ಟ ಜೀವಗಳಿಗೆ ಶೃದ್ಧಾಂಜಲಿ ಕೋರಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಅಂಜುಮನ್ ಮುಸ್ಲಿಮೀನ್ ಸಂಸ್ಥೆ, ಜಮ್ಯಿಯತುಲ್, ಫಲ್ಹಾ, ಮುಸ್ಲಿಮ್ ವೆಲ್ ಫೆರ್ ಘಟಕಗಳೂ ಭಾಗವಹಿಸಿ ತಮ್ಮ ಆಶ್ರುತರ್ಪಣವನ್ನು ಸಲ್ಲಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೇರಿಕದ ಜಾರ್ಜಿಯಾ ರಾಜ್ಯದಲ್ಲಿನ ಅಟ್ಲಾಂಟಾ ನಗರದಲ್ಲಿ ಜುಲೈ 1ರಿಂದ ಮೂರು ದಿನ ನಡೆಯಲಿರುವ ’ವಿಶ್ವ ಕೊಂಕಣಿ ಸಮ್ಮೇಳನ 2016’ ರಲ್ಲಿ ಖ್ಯಾತ ಜಾದೂಗಾರ ಚಿತ್ರನಟ ಓಂಗಣೇಶ್ ಉಪ್ಪುಂದ ವಿಶೇಷ ಸಾಂಸ್ಕೃತಿಕ ಅತಿಥಿಯಾಗಿ ಆಹ್ವಾನ ಪಡೆದಿದ್ದಾರೆ. ಕನ್ನಡ ಕೊಂಕಣಿ ಎರಡೂ ಭಾಷೆಯಲ್ಲಿ ಪ್ರವಾಸ ಕಥನ, ಅಂಕಣಗಳಲ್ಲದೆ ಹಲವು ನಾಟಕಗಳ ಅನುವಾದಕರಾಗಿ ರಾಜ್ಯ ಕೊಂಕಣಿ ಅಕಾಡೆಮಿಯ ಪ್ರಶಸ್ತಿ ಪಡೆದ ಸಾಹಿತಿಯಾಗಿ ಮಾನ್ಯರಾದ ಓಂಗಣೇಶ್ ತಮ್ಮ 40 ದೇಶದ ಪ್ರವಾಸಾನುಭವ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿಂದ ಅಮೇರಿಕಾದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರದಲ್ಲೂ ತಮ್ಮ ಭಾಷೆಯ ಮೂಲ ಪರಂಪರೆ ಸಂಸ್ಕೃತಿಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ 1996ರಿಂದ ನ್ಯೂಜರ್ಸಿ, ಚಿಕಾಗೊ, ಹ್ಯೂಸ್ಟನ್, ಲಾಸ್ ಎಂಜಲೀಸ್, ಸಾನ್ ಫ್ರಾನ್ಸಿಸ್‌ಕೊ, ಟೊರೆಂಟೊ ಮುಂತಾದ ನಗರಗಳಲ್ಲಿ ಯಶಸ್ವೀ ಸಮ್ಮೇಳನ ಸಂಘಟಿಸುತ್ತಾ ಬಂದ ’ನಾರ್ತ್ ಅಮೆರಿಕನ್ ಕೊಂಕಣಿ ಅಸೊಶಿಯೆಷನ್’(NAKA) ಈ ಬಾರಿ ದಕ್ಷಿಣದ ಜಾರ್ಜಿಯಾ ಕೊಂಕಣಿ ಸಂಘಟನೆಯ ಸಹಯೋಗದೊಂದಿಗೆ ಅಲ್ಲಿನ ಇಂಟರ್ ನ್ಯಾಷನಲ್ ಕನ್‌ವೆನ್ಷನ್ ಸೆಂಟರ್ ನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ಆ ಪುಟಾಣಿಗಳಿಗೆ ಶಾಲೆಗೆ ಹೋಗುವ ತವಕ. ಅಮ್ಮ ಅಕ್ಕರೆಯಿಂದ ಸ್ನಾನ ಮಾಡಿಸಿ ಮಡಿಸಿಟ್ಟ ಯುನಿಫಾರ್ಮ್ ತೊಡಿಸಿ, ಪ್ರೀತಿಯಿಂದ ತಲೆಬಾಚಿ ಮುಖಕ್ಕೆ ತೆಳ್ಳಗಿನ ಪೌಡರ್ ಲೇಪಿಸಿದಾಗ ಗೋಡೆಗೆ ತಗಲಿಸಿದ್ದ ಗಡಿಯಾರದ ಪುಟ್ಟ ಮುಳ್ಳು 9 ಅಂಕೆಯ ಮೇಲೆ ತಣ್ಣಗೆ ಒರಗಿತ್ತು. ಅಬ್ಬಾ ಶಾಲೆಯ ಕಾರು ಬರುವ ಹೊತ್ತಾಯಿತು, ಮಮ್ಮಿ ಟಿಫನ್ ಬಾಕ್ಸ್ ಎಲ್ಲಿ ಎಂದು ಕೇಳಿದ ಮಗುವಿಗೆ ಇಗೋ ರೆಡಿ ಎನ್ನುವಷ್ಟರಲ್ಲಿ ಹೊರಗೆ ಕಾರಿನ ಸದ್ದು. ಮಮ್ಮಿ ಬಾಯ್.. ಎಂದ ಮಕ್ಕಳು ಕಾರಿನಲ್ಲಿ ಕುಳಿತೇ ಬಿಟ್ಟಿದ್ದವು. ಅದು ಮಕ್ಕಳು ಹೇಳಿದ ಕಟ್ಟಕಡೆಯ ಬಾಯ್.. ಆಗಿತ್ತಾ! ಇನ್ನೆಂದೂ ಆ ನಿಷ್ಪಾಪಿ ಕರುಳಿನ ಕುಡಿಗಳು ಮತ್ತೆ ಮನೆಯ ಹೊಸಿಲಿನ ಒಳಗೆ ಕಾಲಿಡಲಾರವು ಎಂಬ ಒಂದೂ ಶಂಕೆ ಇಲ್ಲದೇ ಮಕ್ಕಳಿಗೆ ಟಾಟಾ ಹೇಳಿದ ಹೆತ್ತವರಿಗೆ ಶಾಲೆಯ ಅನತಿ ದೂರದಲ್ಲಿ ಸಾವೆಂಬ ಸಾವು ಕಕ್ಕರುಗಾಲಿನಲ್ಲಿ ಮಕ್ಕಳಿಗಾಗಿ ಸಹನೆಯಿಂದ ಪಹರೆ ಕುಂತಿರುವ ವಿಷಯವಾದರೂ ಎಲ್ಲಿ ಗೊತ್ತಿತ್ತು? ಎಂದಿನಂತಿರಲಿಲ್ಲಾ ಮುಂದಿನ ಆ ಕರಾಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕಾರಿಗೆಂದು ಒಟ್ಟಿಗೆ ತೆರಳಿದ್ದ ಸ್ನೇಹಿತನನ್ನು ಗುಂಡಿಟ್ಟು ಕೊಂದು ಘಟನೆ ಹೇರೂರು ಗ್ರಾಮದ ಮೇಕೋಡು ಜಕ್ಷನ್ ಬಳಿ ನಡೆದಿದ್ದು, ಘಟನೆಯಲ್ಲಿ ಕಂಬದಕೋಣೆ ಗ್ರಾಮದ ಆಚಾರಬೆಟ್ಟು ನಿವಾಸಿ ಪ್ರಶಾಂತ ಶೆಟ್ಟಿ(24) ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಡಿಕ್ಕಿ ಕೊಂದಿದ್ದಾನೆ ಎನ್ನಲಾಗಿರುವ ಮೇಕೊಡಿನ ಅಂಕಿತ ಶೆಟ್ಟಿ(24) ಹಾಗೂ ಇನ್ನಿರ್ವರನ್ನು ಬಂಧಿಸಲಾಗಿದೆ. ಘಟನೆಯ ವಿವರ: ಸ್ನೇಹಿತರಾದ ಪ್ರಶಾಂತ ಶೆಟ್ಟಿ, ಅಂಕಿತ್ ಶೆಟ್ಟಿ, ಮನೀಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಎಂಬುವವರು ಒಟ್ಟಾಗಿ ಮಧ್ಯಾಹ್ನ ಅಂಕಿತ್ ಶೆಟ್ಟಿಯ ಮನೆಯಲ್ಲಿ ಗಡಿಪೂಜೆ ಊಟವನ್ನು ಮುಗಿಸಿ, ಸಂಜೆಯ ವರೆಗೆ ಮನೆಯ ಸಮೀಪದಲ್ಲಿಯೇ ಕ್ರಿಕೆಟ್ ಆಡಿಕೊಂಡು ಬಳಿಕ ನಾವುಂದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದು ಶಿಕಾರಿಗೆಂದು ತೆರಳುವುದಾಗಿ ನಿರ್ಧರಿಸಿ ಮರಳಿ ಮೇಕೋಡಿನ ಅಂಕಿತನ ಮನೆಗೆ ತೆರಳಿದ್ದಾರೆ. ಮನಿಷ್ ಶೆಟ್ಟಿ ಹಾಗೂ ದೀಪಕ್ ಶೆಟ್ಟಿ ಅಂಕಿರ ಶೆಟ್ಟಿಯ ಇನ್ನೊಂದು ಮನೆಯಲ್ಲಿ ಹೋಗಿ ಮಲಗಿಕೊಂಡರೇ, ಪ್ರಶಾಂತ ಶೆಟ್ಟಿ ಅಂಕಿತ ಶೆಟ್ಟಿಯ ಮನೆಗೆ ತೆರಳಿದ್ದಾನೆ. ಅಲ್ಲಿ ಅಂಕಿತ್ ಬಂದೂಕು ಹಿಡಿಕೊಂಡಿರುವಾಗ ಟ್ರಗರ್ ಮೇಲೆ ಕೈಯಿಟ್ಟಿದ್ದರಿಂದ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ | 17 ಜೂನ್ 2015. ಬೈಂದೂರಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನವದು. ಎಲ್ಲರಂತೆಯೇ ನೂರಾರು ಕನಸು ಹೊತ್ತ ಕಂಗಳು ಅಂದು ಕಮರಿ ಹೋಗಿದ್ದವು. ಮನುಷ್ಯರೂಪಿ ವ್ಯಾಫ್ರನ ಅಟ್ಟಹಾಸಕ್ಕೆ ಆ ಕುಗ್ರಾಮದ ಹುಡುಗಿ ನಲುಗಿ ಹೋಗಿದ್ದಳು. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ದಿಟ್ಟ ಹುಡುಗಿಯ ಬದುಕಿನ ದಾರಿಗೆ ಅಂತ್ಯ ಹಾಡಲಾಗಿತ್ತು. ಹೌದು. ಅಂದು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷತಾ ದೇವಾಡಿಗ ಎಂಬ ಹೆಣ್ಣಮಗಳು ತನ್ನ ಮನೆಗೆ ಸಾಗುವ ಹಾದಿಯಲ್ಲಿಯೇ ವಿಧಿಯ ಕ್ರೂರಲೀಲೆ ಬಲಿಯಾಗಿ ಹೋಗಿದ್ದಳು ಅಕ್ಷತಾಳ ಸಾವಿನ ಕರಾಳತೆಗೆ ಬೈಂದೂರಿನ ಜನತೆ ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿ ಸಮೂಹ ಅಕ್ಷರಶಃ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಕೆಗೆ ಮುಂದಾದರು. ಕೊನೆಗೆ ಆರೋಪಿಯ ಬಂಧನವೂ ಆಯಿತು. ಆದರೆ ಅಕ್ಷತಾ ಮಾತ್ರ ಮರಳಿ ಬರಲಿಲ್ಲ! ಬದುಕಿದ್ದರೆ ಇಂಜಿನಿಯರಿಂಗ್ ಓದುತ್ತಿದ್ದಳು: ಹೇನಬೇರಿನ ಬಾಬು ದೇವಾಡಿಗ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಹೋರ್ಡಿಂಗ್‌ನಲ್ಲಿ ಹಾಕಲಾಗಿದ್ದ ‘ಕಾಂಗ್ರೆಸ್ ಮುಕ್ತ ಭಾರತ’ ಕಾರ್ಟೂನು, ಕುಂದಾಪುರದ ಕಾಂಗೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಪುರಸಭೆಯ ಮೂಲಕ  ಉದ್ದೇಶಪೂರ್ವಕವಾಗಿ ತೆರವುಗೊಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಖಂಡನೆ ಎದುರಾಗಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಶೀರ್ಷಿಕೆಯ ಕಾರ್ಟೂನ್ ಹೋರ್ಡಿಂಗಿನಲ್ಲಿ ದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣ ಹಾಗೂ ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆಯಂತೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿರುವುದನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದ ಕಾರ್ಟೂನ್ ದೇಶದ ವಿವಿಧ ಪತ್ರಿಕೆ ಹಾಗೂ ವೆಬ್ಸೈಟ್‌ಗಳಲ್ಲಿ ಪ್ರಕಟಗೊಂಡು ಭಾರಿ ಜನಪ್ರಿಯತೆ ಗಳಿಸಿತ್ತು. ಹಾಗಾಗಿ ಈ ಕಾರ್ಟೂನು ಪ್ರತಿ ಭಾರಿಯಂತೆ ಸತೀಶ್ ಆಚಾರ‍್ಯ ಅವರ ಮನೆಯ ಮೇಲಿನ ಕಾರ್ಟೂನ್ ಕಾರ್ನರ್‌ನಲ್ಲಿ ಕೂಡ ಜಾಗ ಪಡೆದಿತ್ತು. ಆದರೆ ಕುಂದಾಪುರ ಪುರಸಭೆ ಏಕಾಏಕಿ ಫ್ಲೆಕ್ಸ್ ನಿರ್ಮೂಲನೆಯ ನೆಪವೊಡ್ಡಿ ಈ ಕಾರ್ಟೂನ್ ತೆರವುಗೊಳಿಸಿದೆ. ಇದರ ಹಿಂದೆ ಕಾಂಗ್ರೆಸ್‌ನ ಕೆಲವರ ಒತ್ತಡವೂ ಇದ್ದು ಪುರಸಭೆಯಲ್ಲಿ ಈ ವಿಷಯ ಚರ್ಚೆಗೆ…

Read More

ಕುಂದಾಪ್ರ ಡಾಟ್ ಕಾಂ: ಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಮತ್ತು ಮೌಲ್ಯಪೂರ್ಣ ಶೈಕ್ಷಣಿಕ ಅವಕಾಶಗಳು ವಿಪುಲವಾಗಿ ತೆರೆದುಕೊಳ್ಳದ ಕಾಲಘಟ್ಟದಲ್ಲಿ ಅಂದರೆ 1975ರ ವೇಳೆಗೆ ಹುಟ್ಟಿಕೊಂಡ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ. ಕುಂದಾಪುರದ ಹೃದಯ ಭಾಗದಲ್ಲಿ ತನ್ನ ನೆಲೆಯನ್ನು ಕಂಡುಕೊಂಡ ಈ ಸೊಸೈಟಿ ಮೊದಲು ಆರಂಭಿಸಿದ್ದು ನರ್ಸರಿ ತರಗತಿಯನ್ನು. ಇಂದು ಅದು ಪದವಿ ಶಿಕ್ಷಣದ ವರೆಗೆ ಬೆಳೆದು ನಿಂತು ರಾಜ್ಯದಾದ್ಯಂತ ತನ್ನ ಕೀರ್ತಿಯನ್ನು ಪಸರಿಸುತ್ತಿದೆ. ಕುಂದಾಪುರ ತಾಲೂಕಿನ ವಿಭಿನ್ನ ಗ್ರಾಮೀಣ ಪ್ರದೇಶಗಳ ಬಡಕುಟುಂಬಗಳನ್ನು ಪ್ರತಿನಿಧಿಸುವ ಪ್ರತಿ ಮಗುವಿಗೂ ಆಂಗ್ಲ ಮಾಧ್ಯಮ ಶಿಕ್ಷಣದ ಅವಕಾಶಗಳನ್ನು ತೆರೆದಿಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಜನ್ಮ ತಾಳಿದ ಈ ಸಂಸ್ಥೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿಯೊಂದಕ್ಕೆ ಕಾರಣವಾಗಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಂಸ್ಥೆಗಳಲ್ಲಿ ವಿಪುಲವಾದ ಅವಕಾಶಗಳಿದ್ದು, ಎಲ್ಲಾ ರಂಗದಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ಕುಂದಾಪ್ರ ಡಾಟ್ ಕಾಂ. ಶಿಕ್ಷಣ ಕ್ರಾಂತಿಯ ರೂವಾರಿ ಶ್ರೀ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹೊಸೂರು ಶ್ರೀ ಮಾಕಾಂಬಿಕಾ ದೇವಳ ಪ್ರೌಢಶಾಲೆ ಕನ್ನಡ ಮಾಧ್ಯಮ ವಿದ್ಯಾರ್ಥಿ ಶಶಿಕಾಂತ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 618 ಅಂಕಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾನೆ. ಕನ್ನಡ ಮಾಧ್ಯಮದಲ್ಲಿಯೂ 125ಕ್ಕೆ 125ಅಂಕ ಪಡೆದು ವಿಶೇಷ ಸಾಧನೆಗೈದಿದ್ದಾನೆ. ಹೊಸೂರಿನ ಗೋಪಾಲ ಮತ್ತು ಶಾರದಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ಶಶಿಕಾಂತ್ ಹಿರಿಯವ. ಬೆಂಗಳೂರಿನಲ್ಲಿ ಅಡಿಗೆ ವೃತ್ತಿ ಮಾಡುತ್ತಿರುವ ಗೋಪಾಲ್, ಮನೆಯಲ್ಲಿ ಬೀಡಿ ಕಟ್ಟುವ ತಾಯಿ ಶಾರದಾ ಮಗನ ಓದಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ತಂಗಿ ಸೃಜನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಈ ಭಾರಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು ಆಕೆಯೂ ಕಲಿಕೆಯಲ್ಲಿ ಚುರುಕು. ತನ್ನ ಸಾಧನೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಗೆ ಪ್ರತಿಕ್ರಿಯಿಸಿರುವ ಶಶಿಕಾಂತ್, ದಿನದಲ್ಲಿ ಆರು ಗಂಟೆ ವ್ಯಾಸಂಗ ಮಾಡುತ್ತಿದ್ದೆ. ರಾತ್ರಿ ಓದುತ್ತಿದ್ದು, ಬೆಳಗ್ಗೆ ಓದುತ್ತಿರಲಿಲ್ಲ. ಶಾಲಾ ಆಧ್ಯಾಪಕ ವೃಂದ ಸಪೋರ್ಟ್ ಉತ್ತಮವಾಗಿತ್ತು. ವಿಜ್ಞಾನ ನನ್ನ ನೆಚ್ಚಿನ ಸಬ್ಜೆಕ್ಟ್ ಆಗಿದ್ದು, ಪಿಸಿಎಂಸಿ ತೆಗೆದುಕೊಂಡು ಟೆಕ್ನೀಶನ್ ಆಗಬೇಕು ಎನ್ನೋದು…

Read More

ಕನ್ನಡ ತಿಳಿಯದ ಹುಡುಗಿಯ ಛಲಕ್ಕೆ ದಕ್ಕಿತು ಕನ್ನಡದಲ್ಲಿ 99 ಅಂಕ ! ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಒಂದನೇ ತರಗತಿಯಿಂದ 9ನೇ ತರಗತಿವರೆಗೆ ಪ್ರಪಂಚದ ಆರು ದೇಶಗಳಲ್ಲಿ ಓದಿದ ಹುಡುಗಿ ಹತ್ತನೇ ತರಗತಿ ಓದಿಗೆ ಆಯ್ದುಕೊಂಡದ್ದು ಕುಂದಾಪುರದ ಶಾಲೆಯನ್ನು. ಹನ್ನೊಂದು ವರ್ಷಗಳಿಂದ ಕನ್ನಡ ಓದದೇ ದೇಶ-ವಿದೇಶ ಸುತ್ತಿದ್ದಹುಡುಗಿ ಶ್ರೇಯಾ ಗಣಪತಿ, ಎಸ್.ಎಸ್.ಎಲ್.ಸಿಗೆ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದುಕೊಂಡು 100ರಲ್ಲಿ 99 ಅಂಕಗಳಿಸಿ ಕನ್ನಡ ಪ್ರೀತಿ ಮೆರೆದಿದ್ದಾಳೆ. ಹೆಬ್ರಿ ಸಮೀಪದ ಸಂತೆಕಟ್ಟೆಯ ಗಣಪತಿ ಕಾಮತ್ ಹಾಗೂ ಕುಂದಾಪುರದ ಶುಭಾ ಕಾಮತ್ ಅವರ ಪುತ್ರಿಯಾಗಿರುವ ಶ್ರೇಯಾಗೆ ಎಲ್ಕೆಜಿ ಯಿಂದ ಶಿಕ್ಷಣಾಭ್ಯಾಸವನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ ಭಾರತ ಸೇರಿದಂತೆ ವಿಶ್ವದ ಆರು ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯುವಂತಾಗಿತ್ತು. ಸಾರ್ಕ್ ನಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ತಂದೆ ಗಣಪತಿ ಕಾಮತ್ ಉದ್ಯೋಗ ಕಾರಣದಿಂದ ಕೀನ್ಯಾ, ನೈಜೇರಿಯಾ, ತಾಂಜೇನಿಯಾ, ಭೂತಾನ್, ಉಗಾಂಡದಲ್ಲಿ ವಾಸಿಸುತ್ತಿದ್ದಾಗ ಅವರೊಂದಿಗೆ ಕುಟುಂಬವೂ ತೆರಳಿತ್ತು. ಕುಂದಾಪ್ರ ಡಾಟ್…

Read More

ಕುಂದಾಪ್ರ ಡಾಟ್ ಕಾಂ ವರದಿ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಸಾಂಸ್ಕೃತಿಕ ಸಂಘಟನೆ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಬೆಂಗಳೂರಿನ ಉದ್ಯಮಿ, ಸಮಾಜ ಸೇವಕ ದಿನೇಶ್ ವೈದ್ಯ ಅಂಪಾರು ಅವರಿಗೆ ಲಭಿಸಿದೆ. ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಯಶಸ್ವಿ ಉದ್ಯಮಿ ಕುಂದಾಪುರ ತಾಲೂಕಿನ ಅಂಪಾರಿನ ದಿನೇಶ್ ವೈದ್ಯ ಅವರು ಬೆಂಗಳೂರಿನಲ್ಲಿ ನೆಲೆನಿಂತು ಸ್ವಂತ ಉದ್ಯಮದಲ್ಲಿ ತೊಡಗಿಕೊಂಡು ಇಂದು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಸಾಮಾಜಿಕ ಬದುಕಿನಲ್ಲಿ ಹಲವರಿಗೆ ಬೆಳಕಾದವರು. ಕಳೆದ ಒಂದೂವರೆ ದಶಕಗಳ ಹಿಂದೆ ಹೊಟ್ಟೆಪಾಡಿಗಾಗಿ ಬೆಂಗಳೂರು ನಗರಿಗೆ ತೆರಳಿದ್ದ ದಿನೇಶ್ ವೈದ್ಯ ಅವರು ಹೋಟೆಲ್ ಮುಂತಾದೆಡೆ ಕಾರ್ಯನಿರ್ವಹಿಸಿ ಮುಂದೆ 2002ರಲ್ಲಿ ಇನ್ನಿಬ್ಬರು ಸಹವರ್ತಿಗಳೊಂದಿಗೆ ‘ಬರಕೆ ಶೋಕೇಸ್ ಇಂಕ್’ ಸಂಸ್ಥೆಯನ್ನು ಹುಟ್ಟುಹಾಕಿ ಸ್ವಂತ ಉದ್ಯಮವನ್ನು ಆರಂಭಿಸಿದರು. ಮುಂದೆ ಅದು ಏನ್’ಸೈನ್ ಇಕ್ವಿಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡ ಬಳಿಕ 2012ರಲ್ಲಿ ಸಂಸ್ಥೆಯ ಮುಖ್ಯ…

Read More