Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಕೇವಲ ಲಾಭಗಳಿಸುವ ದೃಷ್ಟಿಯಲ್ಲಿ ಕಾರ್ಯನಿರ್ವಹಿಸದೇ, ಸಂಕಷ್ಟದಲ್ಲಿರುವ ಕೃಷಿಕರು, ಮೀನುಗಾರರು, ಕೂಲಿಕಾರ್ಮಿಕರಿಗೆ ನೆರವು ನೀಡುವುದರ ಮೂಲಕ ಆತ್ಮಸ್ಥೈರ್ಯ ತುಂಬುವ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ ಹೇಳಿದರು. ಅವರು ಬೈಂದೂರು ಶ್ರೀರಾಮ ಸೌಹಾರ್ದ ಸಹಕಾರಿ ಸಂಘದ ನಾಗೂರು ಶಾಖೆ ಉದ್ಘಾಟಿಸಿ ಮಾತನಾಡಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಸಹಕಾರಿ ಸಂಘಗಳು ರಾಷ್ಟ್ರೀಯ ಬ್ಯಾಂಕುಗಳಿಗೆ ಸರಿಸಮನಾಗಿ ತನ್ನ ಗ್ರಾಹಕರಿಗೆ ಸುಲಭ ದರದಲ್ಲಿ ಸಾಲ ಸೌಲಭ್ಯ ನೀಡುವುದರ ಮೂಲಕ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಕೆ. ರಮೇಶ ಗಾಣಿಗ, ಮಹೇಂದ್ರ ಪೂಜಾರಿ, ಸಂಯುಕ್ತ ಸಹಕಾರಿ ಒಕ್ಕೂಟದ ನಿರ್ದೇಶಕ ಭಾಸ್ಕರ್ ಕಾಮತ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ವ್ಯವಸಾಯ…

Read More

ಹೊಸಂಗಡಿ: 2015-16ರ ಸಾಲಿನ ಪ್ರೌಢ ಶಿಕ್ಷಣ ಮಂಡಳಿಯ ಹೈಸ್ಕೂಲ್ ಮಟ್ಟದ ಕ್ರೀಡಾ ಕೂಟದಲ್ಲಿ ತಾಲೋಕಿನ ಹೊಸಂಗಡಿ ಪ್ರೌಢ ಶಾಲಾ ವಿಧ್ಯಾರ್ಥಿಗಳು ವಲಯ ,ತಾಲೋಕು ಮಟ್ಟದ ಕ್ರೀಡಾಕೂಟದಲ್ಲಿ ಜಯಭೇರಿ ಸಾದಿಸುತ್ತಾ , ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ,ಈದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ವಿಧ್ಯಾರ್ಥಿಗಳ ಕ್ರೀಡಾ ಸಾಧನೆ ಇಂತಿದೆ : ಬಾಲಕಿಯರ ಖೋ -ಖೋ ತಂಡ ತಾಲೋಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ನಾಲ್ಕು ವಿಧ್ಯಾರ್ಥಿಗಳು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ . ಅತ್ಲೆಟಿಕ್ ವಿಭಾಗದಲ್ಲಿ ಶ್ರೀದೇವಿ ಉಡುಪಿ ಜಿಲ್ಲೆಯಲ್ಲಿ ಅತೀ ವೇಗದ ಓಟಗಾರ್ತಿಯಾಗಿ ಮೂಡಿ ಬಂದಿದ್ದಾರೆ. ಕುಮಾರಿ ಸ್ವಾತಿ ಅತೀ ಎತ್ತರ ಜಿಗಿತದ ಕ್ರೀಡಾಳು ಆಗಿದ್ದಾರೆ , ಅರುಣ್ ಕೋಲು ನೆಗೆತದಲ್ಲಿ ಅತೀ ಎತ್ತರಕ್ಕೆ ಹಾರುವ ಕ್ರೀಡಾಪಟುವಾದರೇ ,ದರ್ಶನ್ ಅಡೆ-ತಡೆ ಓಟದಲ್ಲಿ ಜಿಲ್ಲೆಯ ಎರಡನೇ ವೇಗದ ಓಟಗಾರನಾಗಿದ್ದಾನೆ . ರಮ್ಯ ದೂರದ ಓಟದಲ್ಲಿ ಮೂರನೇ ಓಟಗಾರ್ತಿಯ ಸ್ಥಾನ ಪಡೆದಿದ್ದಾಳೆ . ನಾಲ್ಕು ವಿಧ್ಯಾರ್ಥಿಗಳು ಅತ್ಲೆತಿಕ್ ವಿಭಾಗದಲ್ಲಿ…

Read More

ಮೂಡುಬಿದಿರೆ: ನುಡಿಸಿರಿ ಎಂದರೆ ಸಾಕು ಕಲೆ, ಸಾಹಿತ್ತಿಕ, ಸಾಂಸ್ಕೃತಿಕ ವಿಚಾರಗಳು ಕಣ್ಮುಂದೆ ಹಾದುಹೋಗುತ್ತವೆ. ಮೂರುದಿನಗಳ ಕಾರ್ಯಕ್ರಮದಲ್ಲಿ ಹತ್ತಾರು ವಿಚಾರಗಳು ಚರ್ಚೆಗೆ ಬರುವುದರೊಂದಿಗೆ ಆಯಾ ವರ್ಷದ ಪರಿಕಲ್ಪನೆಗೊಂದು ಸ್ಪಷ್ಟ ರೂಪು ನೀಡುವ ಪ್ರಯತ್ನ 12 ವರ್ಷಗಳಿಂದಲೂ ನಡೆದು ಬಂದಿದೆ.  ಬೆಳೆಗ್ಗೆ 5:30ರ ಉದಯರಾಗದಿಂದ ಆರಂಭಗೊಳ್ಳುವ ಕಾರ್ಯಕ್ರಮ ಸರಣಿ ವಿಚಾರಗೋಷ್ಠಿ, ವಿಶೇಷೋಪನ್ಯಾಸ, ಕವಿಸಮಯ-ಕವಿನಮನ, ಸಂಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ಭರಪೂರ ಸಾಹಿತ್ತಿಕ ಸಾಂಸ್ಕೃತಿಕ ರಸದೌತಣವನ್ನು ನೀಡುತ್ತದೆ. ಏಕಕಾಲದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣವನ್ನು ನೀಡಲು ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆ, ಬಿ.ವಿ. ಕಾರಂತ ವೇದಿಕೆ, ಕೆ.ಎನ್. ಟೈಲರ್ ವೇದಿಕೆ, ಮಾ| ವಿಠಲ ಶೆಟ್ಟಿ ವೇದಿಕೆ-ಡಾ| ವಿ.ಎಸ್. ಆಚಾರ್ಯ ಸಭಾಭವನ, ಕು.ಶಿ. ಹರಿದಾಸ ಭಟ್ಟ ವೇದಿಕೆ ಸೇರಿ ಒಟ್ಟು 8 ವೇದಿಕೆಗಳು ತೆರೆದುಕೊಂದಿದೆ. ಈ ಭಾರಿಯ ಸಮ್ಮೇಳನದ ಮೂರು ದಿನಗಳ ಕಾಲ ಕೃಷಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಮಳಿಗೆಗಳು, 250ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, ವೈವಿಧ್ಯಮಯ ದೇಶೀ ಆಹಾರ ಖಾದ್ಯ ಮಳಿಗೆಗಳಿವೆ.…

Read More

ಮೂಡುಬಿದಿರೆ: ಬೆಳಿಗ್ಗೆ 5:30ರ ಉದಯರಾಗದಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ರಾತ್ರಿ 11:30ಕ್ಕೆ ರಘು ದೀಕ್ಷಿತ್ ಅವರ ಸಮಕಾಲೀನ ಜನಪದ ಸಂಗೀತದ ಮೂಲಕ ಸಮಾಪನಗೊಂಡಿತು. ಡಾ| ವಿ. ಎಸ್. ಆಚಾರ್ಯ ಸಭಾಭವನದಲ್ಲಿ ಪಂಡಿತ್ ಅಂಬಯ್ಯನುಲಿ ಮತ್ತು ಬಳಗದಿಂದ ಉದಯರಾಗ, ಬ್ರಹ್ಮಾವರ ರಘುನಾಥ ಭಟ್ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ, ಮೈಸೂರು ಮೈತ್ರಿರಾವ್ ಅವರಿಂದ ಭರತನಾಟ್ಯ, ಸಿ. ಎಂ. ನರಸಿಂಹಮೂರ್ತಿ ಮತ್ತು ಬಳಗದಿಂದ ಜಾನಪದ ಝೇಂಕಾರ, ಶೋಭಾ ಶಶಿಕುಮಾರ್ ಬಳಗದ ಭರತನಾಟ್ಯ, ತಾಳಮದ್ದಳೆ, ನೃತ್ಯರೂಪಕಗಳು ಪ್ರದರ್ಶನಗೊಂಡರೇ, ರತ್ನಾಕರವರ್ಣಿ ವೇದಿಕೆಯಲ್ಲಿ ದಾಸರಪದಗಳು, ನೃತ್ಯ ವೈವಿಧ್ಯಗಳು ಜರುಗಿದವು, ಕೆ. ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಜನಪದ ಗಾಯನ, ಸುಗಮ ಸಂಗೀತ ಜರುಗಿದರೇ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಮ್ಯಾಂಡೋಲಿನ್ ವಾದನ ಜರುಗಿತು, ಬಿ.ವಿ ಕಾರಂತ ವೇದಿಕೆಯಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ರಚನೆಯ, ಹಲುಗಪ್ಪ ಕಟ್ಟೀಮನಿ ನಿರ್ದೇಶನದ ಜತೆಗಿರುವನು ಚಂದಿರ ನಾಟಕವು ಸಂಕಲ್ಪ ಮೈಸೂರು ಹಾಗೂ ಕಾರಾಗೃಹ…

Read More

ಮೂಡುಬಿದಿರೆ: ಇಲ್ಲಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಪ್ರಸಿದ್ಧ ಗಾಯಕ ಬೆಂಗಳೂರಿನ ರಘು ದೀಕ್ಷಿತ್  ಅವರಿಂದ ಸಮಕಾಲೀನ ಜನಪದ ಸಂಗೀತ  ಗಾಯನ ಕಾರ್ಯಕ್ರಮ ಜರುಗಿತು. ವಿಶಾಲವಾದ ವೇದಿಕೆಯಲ್ಲಿ ನಿಂತ ರಘು ದೀಕ್ಷಿತ್ ಹಾಡುತ್ತಿದ್ದರೇ ನೆರೆದಿದ್ದ ಪ್ರೇಕ್ಷಕರು ಅವರ ಸಂಗೀತಕ್ಕೆ ಮನಸೋತು ಆಲಿಸುತ್ತಿದ್ದುದು ಕಂಡುಬಂತು.

Read More

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನ.೨೮ ರಂದು ಕನಕದಾಸ ಜಯಂತಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅವರು ಮಾತನಾಡಿ, ಕನಕದಾಸರು ತಮ್ಮ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ.ಮತ, ಮೇಲು- ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಉಪನ್ಯಾಸಕರುಗಳಾದ ಮಂಜುನಾಥ.ಕೆ.ಎಸ್, ಗೀತಾ ಜೋಷಿ, ಹರೀಶ್ ಕಾಂಚನ್, ಗಿರಿಜಾ ಕೊಡೇರಿ, ಜೆಸ್ಸಿ ಡಿಸಿಲ್ವ, ಶ್ರೀಲತಾ.ಕೆ ಉಪಸ್ಥಿತರಿದ್ದರು.

Read More

ಕುಂದಾಪುರ: ಸಮೀಪದ ಮಾವಿನ ಕಟ್ಟೆ ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ಚಿರತೆಯೊಂದು ಗೋಚರಿಸಿ ಗ್ರಾಮಸ್ಥರು ಆತಂಕ್ಕೀಡಾಗಿರುವ ಘಟನೆ ಜರಗಿದೆ. ಕಳೆದ ಕೆಲವು ದಿನಗಳಿಂದಲೂ ಪರಿಸರ ಬೀದಿ ನಾಯಿಗಳು ವಿಕರವಾಗಿ ಅರಚುತ್ತಾ ಅತ್ತಿತ್ತ ಒಡಾಡುತ್ತಿದ್ದರೂ ಅದರ ಬಗ್ಗೆ ಹಚ್ಚೇನು ಗಮನ ಹರಿಸದಿದ್ದ ಗ್ರಾಮಸ್ಥರು ಇಂದು ಮಾತ್ರ ಚಿರತೆ ದರ್ಶನದಿಂದ ಬೆಚ್ಚಿ ಬಿದ್ದಿದ್ದಾರೆ. ಸ್ಥಳಿಯ ಮಸೀದಿಯ ಧರ್ಮಗುರುಗಳು ಇಂದು ಬೆಳಿಗ್ಗೆ ನಮಾಝ್ ನಿರ್ವಹಿಸಲು ಮಸೀದಿಯತ್ತ ತೆರಳುತ್ತಿದ್ದಾಗ, ರಸ್ತೆಯ ಪಕ್ಕದಲ್ಲಿ ನಾಯಿಗಳು ಗುಂಪಾಗಿ ಬೊಗಳುತ್ತಿರುವುದನ್ನು ಗಮನಿಸಿ ಅತ್ತ ಟಾರ್ಚಿನ ಬೆಳಕನ್ನು ಹಾಯಿಸಿದ್ದರು. ಟಾರ್ಚಿನ ಬೆಳಕಿನಲ್ಲಿ ಪೊದೆಯೊಂದರಲ್ಲಿ ಅವಿತು ಕುಳಿತು ಗುರುಗುಡುತ್ತಿದ್ದ ಆಳೆತ್ತರದ ಚಿರತೆಯ ದರ್ಶನ ವಾಗುತ್ತಲೇ ಬೆದರಿ ಹೋದ ಧರ್ಮಗುರುಗಳು ಅಲ್ಲಿಂದ ಲಗುಬಗೆಯಿಂದ ಮಸೀದಿಗೆ ತೆರಳಿ ಚಿರತೆ ಅವಿತು ಕೊಂಡಿರುವ ವಿಚಾರವನ್ನು ಹೇಳಿದ್ದರು. ಅದಾಗಲೇ ಹಲವರು ಒಟ್ಟು ಕೂಡಿ ಬಂದು ನೋಡಿದಾಗ ಚಿರತೆಯು ಪಕ್ಕದ ಹಾಡಿಯೊಳಗೆ ಒಡಿ ಹೋಗಿದ್ದು ಹಿಂಬಾಲಿಸಿದ ನಾಯಿಗಳು ಅಲ್ಲಿಯೂ ಆರ್ಭಟಿಸುತ್ತಿರುವ ದೃಶ್ಯ ಕಂಡು ಬಂದಿತ್ತೆನ್ನಲಾಗಿದೆ. ಚಿರತೆ ಗೋಚರವಾಗಿರುವ ವಿಚಾರ ಇದೀಗ ಗ್ರಾಮದೆಲ್ಲಡೆ ವ್ಯಾಪಿಸಿದ್ದು ಮಕ್ಕಳ…

Read More

ಮೂಡುಬಿದಿರೆ: ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ನಾಡಗೀತೆ, ರೈತಗೀತೆ, ಭಾವೈಕ್ಯ ಗೀತೆಗಳನ್ನು ಹಾಡುವಾಗ ನೆರೆದಿದ್ದ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಾವಿರಾರು ಪ್ರೇಕ್ಷಕರು ಕನ್ನಡ ನಾಡಿನ ಭಾವುಟ, ರೈತ ಧ್ವಜ ಹಾಗೂ ರಾಷ್ಟ್ರ ಧ್ವಜವನ್ನು ಬೀಸಿ ಗೌರವ ಸಲ್ಲಿಸಿದರು. ಪುತ್ತಿಗೆ ನುಡಿಸಿರಿ ಮೈದಾನದಲ್ಲಿ ತುಂಬಿದ್ದ ಪ್ರೇಕ್ಷಕರು ಕೈಯಲ್ಲಿದ್ದ ಧ್ವಜದ ವಿಹಂಗಮ ನೋಟ ವಿಶೇಷ ರಂಗು ನೀಡಿತ್ತು.

Read More

ಮೂಡಬಿದಿರೆ: ಆಳ್ವಾಸ್ ನುಡಿಸಿರಿ 2015ರ ವಿದ್ಯಾರ್ಥಿ ಸಿರಿ ಸಮ್ಮೇಳನದ ಸರ್ವಾಧ್ಯಕ್ಷೆ ಕುಮಾರಿ ಶಾಲಿಕಾ ಎಕ್ಕಾರು ಇವರನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿದರು. ಈ ಸಂದರ್ಭ ವಿದ್ಯಾರ್ಥಿ ಸಿರಿಯ ಉದ್ಘಾಟಕರಾದ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಹಿರಿಯ ವಿದ್ವಾಂಸರಾದ ಪ್ರೊ. ಹಂಪನಾ ಮತ್ತು ಕಮಲಾ ಹಂಪನಾ ಹಾಗೂ ‘ಆಳ್ವಾಸ್ ವಿದ್ಯಾರ್ಥಿ ಸಿರಿ’ ಪ್ರಶಸ್ತಿ ಪುರಸ್ಕøತ ಸಾಗರದ ಕಿನ್ನರ ಮೇಳದ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಟಿ. ಎಸ್. ನಾಗರಾಜ ಶೆಟ್ಟಿ ತಿಪಟೂರು, ವಿದ್ಯಾರ್ಥಿ ಪ್ರತಿಭೆ ಗಗನ್ ಜಿ. ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು.

Read More

ಮೂಡಬಿದಿರೆ: ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ ಆದರೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ನಮ್ಮ ಮಾತೃಭಾಷೆಯೇ ಮೂಲ. ಯಾವುದೇ ವಿಚಾರವು ನಮ್ಮ ಹೃದಯವನ್ನು ತಟ್ಟಿ, ಮನಸ್ಸನ್ನು ಸೇರಿ, ಬುದ್ಧಿಯ ಮೂಲಕ ಚೈತನ್ಯಶೀಲಗೊಳಿಸುವ ಶಕ್ತಿ ನಮ್ಮ ಮಾತೃಭಾಷೆಗಿದೆ. ಕನ್ನಡ ಭಾಷೆಯನ್ನು ಆಸ್ವಾದಿಸಲು ಕಲಿಸುವ ಮೂಲಕ ಮಾತೃಭಾಷೆಯನ್ನು ಪ್ರೀತಿಸುವಂತೆ ಮಾಡಿ ಅದರ ಕಡೆಗೆ ಒಲವು ತೋರಿಸಲು ಸಾಧ್ಯ ಎಂದು ಸಂತ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಶಾಲಿನಿ ಎಕ್ಕಾರು ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿ -2015 ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡವು ತನ್ನ ಕಂಪು ಹಾಗೂ ಇಂಪಿನಿಂದ ಹಲವಾರು ಕವಿಗಳನ್ನು, ಸಾಹಿತಿಗಳನ್ನು ತನ್ನೆಡೆಗೆ ಆಕರ್ಷಿಸಿದೆ. ಕನ್ನಡದ ಈ ಸೊಬಗಿನಿಂದ ಅದು ಕರುನಾಡ ಜನರ ಅತ್ಯಮೂಲ್ಯ ಸಂಪತ್ತಾಗಿದೆ. ಆದ್ದರಿಂದಲೇ ಅದನ್ನು ಸಿರಿಗನ್ನಡ, ಸಿರಿನುಡಿ ಎಂದು ಹಲವಾರು ಕವಿಗಳು ಕರೆದಿರುವರು. ಕನ್ನಡದಲ್ಲೊಂದು ಅಪೂರ್ವ ಶಕ್ತಿಯಿದೆ. ತನ್ನೆಡೆಗೆ ಆಕರ್ಷಿಸುವ, ಜನರ ಮನದ ಬಾಗಿಲ ತಟ್ಟುವ,…

Read More