ಹಸಿರು ಬಣ್ಣದ ಧಿರಿಸು ಧರಿಸಿ, ಹಸಿರು ಶಾಲಿನ ಜೊತೆಯಲ್ಲೊಂದು ಕನ್ನಡದ ಶಾಲು ಹೊದ್ದು, ಬಗಲಿಗೊಂದು ಬ್ಯಾಗು ಸಿಕ್ಕಿಸಿಕೊಂಡು ಅವರು ಹೊರಟರೆಂದರೇ ಎಲ್ಲಿಯೋ ಕನ್ನಡದ ಕಾರ್ಯಕ್ರಮವಿದೇ ಎಂದೇ ಅರ್ಥ. ಅಷ್ಟರ ಮಟ್ಟಿಗೆ ಈ ವ್ಯಕ್ತಿಗೂ ಕನ್ನಡ ಕಾರ್ಯಕ್ರಮಗಳಿಗೂ ಬಿಡಿಸಲಾರದ ನಂಟು ಬೆಳೆದಿದೆ. ಹೌದು ವೀರಣ್ಣ ನಾಗಪ್ಪ ಕುರವತ್ತಿಗೌಡರ ಎಂಬ ಈ ಕಾಯಕಯೋಗಿ, ಬರಿಯ ತನ್ನ ದುಡಿಮೆಗಷ್ಟೇ ಸೀಮಿತವಾಗಿ ಉಳಿಯದೇ ಕನ್ನಡ ರಚನಾತ್ಮಕ ಕಾಯಕದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನಗಳೆಂದರೇ ಯಾರೂ ಬರುವುದಿಲ್ಲ. ಅದು ಒಂದಿಷ್ಟು ಸೀಮಿತ ವರ್ಗಕ್ಕಷ್ಟೇ ಸಂಬಂಧಿಸಿದ್ದು ಎಂಬ ಆರೋಪಗಳಿಗೆ ಅಪವಾದವೆಂಬಂತಿರುವ ವೀರಣ್ಣ ಈವರೆಗೆ 25 ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ, 45ಕ್ಕೂಹೆಚ್ಚು ವಿವಿಧ ಜಿಲ್ಲಾ ತಾಲೂಕು ಸಮ್ಮೇಳನಗಳಲ್ಲಿ, ನೂರಾರು ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತನ್ನ ಕನ್ನಡ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಸಮ್ಮೇಳನಗಳಿಗೆ ಯಾರು ಬರುತ್ತಾರೋ ಇಲ್ಲವೂ ಗೊತ್ತಿಲ್ಲ ವೀರಣ್ಣ ಮಾತ್ರ ಕನ್ನಡದ ಕಾರ್ಯಕ್ರಮಗಳಿಗೆ ಖಾಯಂ ಹಾಜರ್. (ಕುಂದಾಪ್ರ ಡಾಟ್ ಕಾಂ ವರದಿ) ಮೂಲತಃ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದವರಾದ ನಲವತ್ತೈದು ವರ್ಷ ಪ್ರಾಯದ…
Author: ಸುನಿಲ್ ಹೆಚ್. ಜಿ. ಬೈಂದೂರು
ಕನ್ನಡ ಕೃತಿಗಳಿಗೆ ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆ ಇದೆ: ಡಾ. ಯು.ಪಿ.ಉಪಾಧ್ಯಾಯ ಬೈಂದೂರು: ಒಳ್ಳೆಯ ಕೃತಿಗಳಿಗೆ ಒಳ್ಳೆಯ ಓದುಗರು ಇದ್ದೇ ಇರುತ್ತಾರೆ. ಕನ್ನಡದಲ್ಲಿ ಉತ್ತಮ ಕೃತಿಗಳು ಹೊರಬರಬೇಕು. ಆ ಕೃತಿಗಳು ಓದುಗರಿಗೆ ಸಿಗುವಂತಾಗಬೇಕು. ಆಯಾಯ ವಯೋಮಾನದವರನ್ನು ಲಕ್ಷ್ಯವಾಗಿಸಿಟ್ಟುಕೊಂಡು ಕೃತಿಗಳನ್ನು ರಚನೆ ಮಾಡುವ ಪ್ರವೃತ್ತಿ ಬೆಳೆದಾಗ ಕನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ ಡಾ. ಯು.ಪಿ.ಉಪಾಧ್ಯಾಯ ಅಭಿಪ್ರಾಯಪಟ್ಟರು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಂಬದಕೋಣೆ ಆರ್.ಕೆ.ಸಂಜೀವರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮದ ಅಂಗವಾಗಿ ಆರ್.ಕೆ.ಸಂಜೀವ ರಾವ್ ವೇದಿಕೆಯಲ್ಲಿ ನಡೆದ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೇವಲ ಕಥೆ ಕಾದಂಬರಿ ಬರೆದವರು ಮಾತ್ರ ಸಾಹಿತಿಗಳೆಂದು ಪರಿಗಣಿಸಲಾಗದು. ಇತರ ಪ್ರಕಾರಗಳ ಬರಹಗಳು ಸಾಹಿತ್ಯದ ಸಾಲಿಗೆ ಸೇರುತ್ತದೆ. ಕನ್ನಡ ಸಾಹಿತ್ಯಕ್ಕೆ ಭಾರತದಲ್ಲಿ ದೊಡ್ಡ ಸ್ಥಾನಮಾನವಿದೆ. ನೋಬೆಲ್ ಪ್ರಶಸ್ತಿ ಪಡೆಯುವ ಅರ್ಹತೆಯೂ ಇದೆ. ಆದರೆ ಭಾಷಾ ತೊಡಕಿನಿಂದ…
ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಯಗಳ ಸಹಕಾರದೊಂದಿಗೆ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇಂದಿನಿಂದ ಅ.17ರವರೆಗೆ ಹಮ್ಮಿಕೊಂಡಿರುವ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲೈಟ್ಹೌಸ್ ಬಳಿಯ ಶ್ರೀರಾಮ ಅಂಗನವಾಡಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ, ಮಿಷನ್ ಇಂದ್ರಧನುಷ್ ಕಾರ್ಯಕ್ರಮದಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮ ಪ್ರಗತಿ ಉತ್ತಮಪಡಿಸಲು ಇಂದಿನಿಂದ ಅ.17ರವರೆಗೆ ಗುರುವಾರ ಹೊರತುಪಡಿಸಿ೭ ಕರ್ತವ್ಯದ ದಿನಗಳಲ್ಲಿ ಲಸಿಕೆ ವಂಚಿತ, ಲಸಿಕೆ ಪ್ರಾರಂಭಿಸದ, ಲಸಿಕೆ ಪಡೆಯಲು ಅರ್ಹ 0-2 ವರ್ಷದೊಳಗಿನ ಮಕ್ಕಳು ಹಾಗೂ ಟಿ.ಟಿ. ಚುಚ್ಚುಮದ್ದು…
ಕೋಟ: ಕಾರಂತರೊಂದಿಗೆ ಅವರ ಸಿನೆಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡುವಾಗ ನಾನು ಗಮನಿಸಿ ಅಂಶ ಬಹಳಷ್ಟು. ಕಾರಂತರ ಸರಳತೆ ಸರ್ವರೂ ಆದರ್ಶ. ಅವರ ಸಮಯ ಪ್ರಜ್ಞೆಯ ಬಗ್ಗೆ ಎರಡು ಮಾತಿಲ್ಲ. ಅವರ ಅಗಾಧ ಜ್ಞಾನ ಸಂಪತ್ತಿನ ಮುಂದೆ ನಾವೇಲ್ಲರೂ ತೃಣಕ್ಕೆ ಸಮಾನ ಎಂದು ಸಾಂಸ್ಕೃತಿಕ ಚಿಂತಕ ಕಾರಂತರ ಒಡನಾಡಿ ಶೇಖರ ಆಚಾರ್ಯ ಹೇಳಿದರು. ಅವರು ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಅಂಗವಾಗಿ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ(ರಿ.) ಸಾಲಿಗ್ರಾಮ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘ(ರಿ.) ಕೋಟ ಅವರ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಚಲನಚಿತ್ರ ಉತ್ಸವ ಸ್ಮೃತಿ ನನಸುಗಳ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯ ಜಯಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ…
ಕೋಟ: ಸಾಮರ್ಥ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರಷ್ಟು ಉತ್ತಮ ಉದಾಹರಣೆ ಆದರ್ಶ ಇನ್ನೋರ್ವರಿಲ್ಲ. ಸರ್ವೇಂದ್ರೀಯವನ್ನು ನಿಗ್ರಹಿಕೊಂಡು ಅವರು ಮಾಡಿರುವ ಸಾಧನೆಯೇ ಅವರನ್ನು ವಿಶ್ವಮಾನ್ಯರನ್ನಾಗಿಸಿದೆ. ಇಂದಿನ ಮಕ್ಕಳಿಗೆ ಅವರೇ ಆದರ್ಶ ಎಂದು ಮಾಬುಕಳ ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಜಿ. ಅಭಿಪ್ರಾಯಪಟ್ಟರು. ಅವರು ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ 6ನೇ ದಿನದ ಅಂಗವಾಗಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ, ಗಾಣಿಗ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಕೋಟ ಘಟಕ, ಚೇತನ ಪ್ರೌಢಶಾಲೆ ಹಂಗಾರಕಟ್ಟೆ, ಇಂಡಿಕಾ ಬಳಗ ಮಣೂರು ಪಡುಕರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಸದಸ್ಯೆ ಪಾರ್ವತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಜೇಸಿಐ ಸಾಲಿಗ್ರಾಮ ಕೋಟ ಟೆಂಪಲ್ ಸಿಟಿ ಅಧ್ಯಕ್ಷ ಜೇಸಿ ಕೃಷ್ಣ ಪ್ರಸಾದ, ಗಾಣಿಗ ಸಂಘಟನೆಯ ರಾಜೇಶ್ ಗಾಣಿಗ ಅಚ್ಲಾಡಿ, ಚೇತನಾ ಪ್ರೌಢಶಾಲೆಯ ಶಿಕ್ಷಕ ಚಂದನ್…
ಕೋಟ: ಶೈಕ್ಷಣಿಕವಾಗಿ ವರ್ಷವು ಉತ್ತಮ ಫಲಿತಾಂಶವನ್ನು ನೀಡುತ್ತಿರುವ ಉಡುಪಿ ಜಿಲ್ಲೆಯನ್ನು ಹೊರ ಜಿಲ್ಲೆಯವರು ಬುದ್ಧಿವಂತ ಜಿಲ್ಲೆ ಎಂದು ಸಹಜವಾಗಿ ಕರೆಯುತ್ತಾರೆ. ಮುಂದುವರಿದ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಕರೆಯಿಸಿ ಕೊಳ್ಳುತ್ತಾ, ವಿವಿಧ ಅಭಿವೃದ್ಧಿ ಪರ ಯೋಜನೆಯಿಂದ ವಂಚಿತರಾಗುತ್ತಾ ನಾವು ಹಿಂದೆ ಬರುತ್ತಿರುವ ಬಗ್ಗೆ ಗಮನ ಹರಿಸಿಲ್ಲ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ ಜ್ಞಾನದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಾ, ಶಿಕ್ಷಣ ಕ್ಷೇತ್ರದ ಸಮಸ್ಯೆ ಅಗಾಧವಾದದ್ದು, ಅದರಲ್ಲಿ ಶಿಕ್ಷಕರ ಮತ್ತು ಶಿಕ್ಷಣದ ಸಮಸ್ಯೆ ಪ್ರತ್ಯೇಕವಾಗಿ ಗಮನಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದು. ರಾಜ್ಯದ ೪೮ ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 10 ಸಾವಿರ…
ಕೋಟ: ಕೋಟ ಶಿವರಾಮ ಕಾರಂತರು ಓದಿರುವುದು ಕೇವಲ ಮೆಟ್ರಿಕ್ ವರೆಗೆ ಮಾತ್ರ, ಆದರೆ ಅವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಿತಿ ಪಡೆದವರಗಿಂತ ಸಾವಿರ ಪಟ್ಟು ಅಧಿಕಾ ಜೀವನ ಸಾಧನೆ ಮಾಡಿದ್ದಾರೆ. ಅಂದರೆ ಕೇವಲ ಪಠ್ಯ ವಿಷಯಗಳು ಮಾತ್ರ ನಮ್ಮ ಜೀವನಕ್ಕೆ ಸಾಕಾಗುವುದಿಲ್ಲ ಪಠ್ಯೇತರ ಚಟುವಟಿಕೆಗಳು ಕೂಡ ನಮ್ಮ ಜೀವನಕ್ಕೆ ಅಗತ್ಯವಿದೆ ಎಂದು ಕುಂದಾಪುರದ ಸಾಂಸ್ಕೃತಿಕ ಚಿಂತಕ ಡಾ. ವೆಂಕಟರಾಮ ಉಡುಪ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಸಂಜೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಮುದ್ರಣ ಮಾಲಕರ ಸಂಘದ ಅಧ್ಯಕ್ಷ ಚಂದ್ರ ನಾರಿ, ಕಾರ್ಯದರ್ಶಿ ಪ್ರಕಾಶ್ ಜಿ.ಕೊಡವೂರು, ಕೋಶಾಧಿಕಾರಿ ಯತೀಶ್ಚಂದ್ರ, ಯಡ್ತಾಡಿ ಯುವ ವಾಹಿನಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷ ಸಂತೋಷ, ಶ್ರೀವಿನಾಯಕ ಯುವಕ ಮಂಡಲದ ಅಧ್ಯಕ್ಷ ಉಮೇಶ ದೇವಾಡಿಗ,…
ಮುಳ್ಳಿಕಟ್ಟೆ: ಹೊಸಾಡು ಗ್ರಾಮ, ಕಾರಿಕೊಡ್ಲು, ಬಪ್ರಿಕೊಡ್ಲು ದಿ.ಸದಿಯ ದೇವಾಡಿಗ ಪತ್ನಿ ವೆಂಕಮ್ಮ ದೇವಾಡಿಗ (92) ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಅಗಲಿದ್ದಾರೆ. ಹೊಸಾಡು ಗ್ರಾಪಂ ಸದಸ್ಯ ಸೀತಾರಾಮ ಶೆಟ್ಟಿ ಸಹಿತಿ ಊರಿನ ಪ್ರಮುಖರು ಮೃತರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸದಿಯಮ್ಮ ದೇವಾಡಿಗ ಊರಿನಲ್ಲಿ ಜನಾನುರಾಗಿಯಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಪ್ರಸೂತಿ ಪರಿಣಿತರಾಗಿದ್ದು, ಸಾಮಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಗುರಿಸಿಕೊಂಡಿದ್ದರು.
ಕೊಲ್ಲೂರು: ಮನುಷ್ಯನು ಜೀವನದಲ್ಲಿ ಯಾರ ಬಗ್ಗೆಯೂ ಕೀಳು ಭಾವನೆ ಬೆಳೆಸಿಕೊಳ್ಳಬಾರದು. ಎಲ್ಲರೂ ತನ್ನಂತೆಯೇ ಎಂದು ನೋಡುತ್ತಾ, ಮನುಷ್ಯನನ್ನು ಮನುಷ್ಯನಂತೆಯೇ ನೋಡಬೇಕು. ಜೀವನದಲ್ಲಿ ಪರೋಪಕಾರಿ ಮನೋಭಾವನೆ ಬೆಳೆಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಜಡ್ಕಲ್ ಸೈಂಟ್ ಜಾರ್ಜ್ ಚರ್ಚಿನ ಧರ್ಮಗುರು ರೆ.ಫಾ. ಮ್ಯಾಥ್ಯೂ ಹೇಳಿದರು. ಅವರು ಜಡ್ಕಲ್ನ ಸೈಂಟ್ ಜಾರ್ಜ್ ಚರ್ಚಿನ ಸಭಾಂಗಣದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉಡುಪಿ, ಕೆಎಂಸಿ ಆಸ್ಪತ್ರೆ ಮಣಿಪಾಲ, ಕೆಎಸ್ಎಂಸಿಎ ಜಡ್ಕಲ್ ಮತ್ತು ಕೆಸಿವೈಎಂ ಜಡ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕೆಎಸ್ಎಂಸಿಎ ಜಿಲ್ಲಾಧ್ಯಕ್ಷ ಪಿ.ಎಲ್.ಜೋಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಡಿ.ಕೆ., ರೋಟರಿ ಗಂಗೊಳ್ಳಿ ಕಾರ್ಯದರ್ಶಿ ಎಂ.ಜಿ.ರಾಘವೇಂದ್ರ ಭಂಡಾರ್ಕಾರ್ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯೆ ಡಾ.ಸುಧಾ ಮೆನನ್ ಉಪಸ್ಥಿತರಿದ್ದರು. ಕೆಎಸ್ಎಂಸಿಎ ಜಡ್ಕಲ್ನ ದೇವದಾಸ ವಂದಿಸಿದರು. ಸುಮಾರು ೨೦೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ…
ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ವಂದಿಸುವ ಬದಲಿಗೆ, ತಮ್ಮದೇ ದರ್ಬಾರಿನಲ್ಲಿ ಮುಳುಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. ಅವರು ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ – ಶೆಟ್ರಕಟ್ಟೆಯಲ್ಲಿ ಹಾಗೂ ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಟೇಶ್ವರದಲ್ಲಿ ನಡೆದ ಎರಡನೇ ಹಂತದ ರೈತಚೈತನ್ಯ ಯಾತ್ರೆಯನ್ನು ಉದ್ಘಾಟಿಸಿ ಮಾತಾನಾಡಿದರು. ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸಿದ್ದರಾಮಯ್ಯನವರ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ರೈತರ ನೋವಿಗೆ ಸ್ಪಂದಿಸಲು ಬಿಜೆಪಿ ಅಧಿಕಾರಕ್ಕೆ ಬಂದರೇ ಮಾತ್ರ ಸಾಧ್ಯ. ರಾಜ್ಯ ಸರಕಾರವನ್ನು ಕಿತ್ತೆಸೆದು ಮತ್ತೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಸುವರ್ಣ ಯುಗವನ್ನಾಗಿಸುವಲ್ಲಿ ಪ್ರಯತ್ನಗಳು ಸಾಗುತ್ತಿದೆ. ಅದು ಪೂರ್ಣಗೊಳ್ಳುವ ತನಕ ತಾನು ವಿರಮಿಸುವುದಿಲ್ಲ ಎಂದವರು ನುಡಿದರು. ರಾಜ್ಯದ 123 ತಾಲೂಕುಗಳಲ್ಲಿ ಬರಗಾಲ ಇರುವುದನ್ನು ಒಪ್ಪಿಕೊಂಡಿರುವ ಸರಕಾರ, ರೈತರ ಸಾಲದ ಬಡ್ಡಿಯನ್ನು…
