ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅ. ೦೨ರಂದು ಶಾಸ್ತ್ರಿ ಸರ್ಕಲ್‌ನಲ್ಲಿರುವ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸದಸ್ಯರಾದ ಟಿ. ಬಿ. ಶೆಟ್ಟಿ, ವಿ. ಶ್ರೀಧರ ಆಚಾರ್ಯ, ಉದಯಕುಮಾರ್ ಶೆಟ್ಟಿ, ಮನೋಜ್ ನಾಯರ್, ಮುತ್ತಯ್ಯ ಶೆಟ್ಟಿ, ಡಾ| ಬಿ. ಆರ್. ಶೆಟ್ಟಿ, ನೂಜಾಡಿ ಸಂತೋಷ ಕುಮಾರ್ ಶೆಟ್ಟಿ, ಪ್ರದೀಪ ವಾಜ್, ಎಚ್. ಎಸ್. ಹತ್ವಾರ್, ವೆಂಕಟಾಚಲ ಕನ್ನಂತ, ರಂಜಿತ್ ಶೆಟ್ಟಿ, ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ಗೀತಾ ಟಿ. ಬಿ. ಶೆಟ್ಟಿ, ಸಾವಿತ್ರಿ ಕನ್ನಂತ, ವಿದ್ಯಾ ಬಿ. ಆರ್. ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
Author: ಸುನಿಲ್ ಹೆಚ್. ಜಿ. ಬೈಂದೂರು
ಗಂಗೊಳ್ಳಿ: ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಪ್ರತಿಪಾದಿಸಿದ ಮೌಲ್ಯಗಳು ನಮಗೆ ಮುಖ್ಯವಾಗಬೇಕು. ಅವುಗಳ ಅರಿಯುವಿಕೆಗಿಂತ ಆಳವಡಿಕೆ ಪ್ರಮುಖವಾಗಬೇಕು.ಈ ನಿಟ್ಟಿನಲ್ಲಿ ಬೇರೆಯವರನ್ನು ಪ್ರೋತ್ಸಾಹಿಸಬೇಕು ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ ಇಲ್ಲಿನ ರೋಟರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಕಾರ‍್ಯಕ್ರಮದಲ್ಲಿ ದೀಪ ಬೆಳಗಿಸಿ, ಮಹಾತ್ಮರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.ಉಪನ್ಯಾಸಕಿ ಕವಿತಾ ಎಮ್ ಸಿ,ಸರಸ್ವತಿ ವಿದ್ಯಾಲಯ ಫ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್,ಸರಸ್ವತಿ ವಿದ್ಯಾಲಯ ಆಂಗ್ಲ ಮಾದ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಸೇರುಗಾರ್ ,ದೈಹಿಕ ಶಿಕ್ಷಕ ಸದಾನಂದ ವೈದ್ಯ.ಎನ್‌ಸಿಸಿ ಕಾರ‍್ಯಕ್ರಮ ನಿರ್ವಹಣಾಧಿಕಾರಿ ಆದಿನಾಥ ಕಿಣಿ, ಕಛೇರಿ ಪ್ರಬಂಧಕ ಜಿ. ಸದಾಶಿವ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕಿ ಶ್ರೀಲತಾ ಅವರು ಸ್ವಾಗತಿಸಿದರು. ರಾಷ್ಟ್ರೀಯ ಸೇವಾ…
ಕುಂದಾಪುರ: ತಾಲೂಕಿನ ಸಿದ್ದಾಪುರದಲ್ಲಿ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿದ್ದು ಸುಮಾರು ಒಂದು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ. ಸಿದ್ದಾಪುರದ ‘ಕಾಮತ್ ಜನರಲ್ ಸ್ಟೋರ್’ ಬೆಂಕಿಗೆ ಆಹುತಿಯಾದ ಅಂಗಡಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಅಂಗಡಿಯನ್ನು ಆವರಿಸಿದೆ ಎಂದು ಶಂಕಿಸಲಾಗಿದೆ. ಸಿದ್ದಾಪುರ ಪೇಟೆಯಲ್ಲಿರುವ ಈ ಅಂಗಡಿಯಲ್ಲಿ ದಿನಬಳಕೆಯ ವಸ್ತುಗಳಲ್ಲದೆ, ಹಲವಾರು ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತಿತ್ತು. ಶುಕ್ರವಾರ ರಾತ್ರಿ 11.30 ರ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಗೆ ಅಂಗಡಿಯನ್ನು ಸಂಪೂರ್ಣ ಭಸ್ಮ ಮಾಡಿದೆ. ರವೀಂದ್ರನಾಥ್ ಕಾಮತ್ ಒಡೆತನದ ಈ ಅಂಗಡಿ ಇರುವ ಕಟ್ಟಡಕ್ಕೂ ಹಾನಿಯಾಗಿದೆ. ಸ್ಥಳಕ್ಕಾಗಮಿಸಿದ ಕುಂದಾಪುರ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತದ ಹುಟ್ಟೂರಲ್ಲಿ ಅವರ ನೆನಪಿಗಾಗಿ ನಿರ್ಮಾಣಗೊಂಡಿರುವ ಸ್ಮಾರಕ ಭವನ ನಿಜಾರ್ಥದಲ್ಲಿ ಸಾರ್ಥಕ್ಯವನ್ನು ಕಾಣುತ್ತಿದೆ. ಪ್ರತಿ ವಾರವೂ ಭವನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಸುವ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ಕಾರಂತ ಭವವೀಗ (ಕಾರಂತ ಥೀಂ ಪಾರ್ಕ) ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಇದರೊಂದಿಗೆ ಅಕ್ಟೋಬರ್ 1ರಿಂದ ಅಕ್ಟೋಬರ್ 10ರ ವರೆಗೆ ನಡೆಯುತ್ತಿರುವ ವಿವಿಧ ವಿಚಾರಗಳ ‘ಚಿತ್ತಾರ’ ಭವನದ ನಿರ್ಮಾಣದ ಆಶಯಕ್ಕೆ ರೆಕ್ಕೆ ನೀಡಿದೆ. [quote bgcolor=”#ffffff” arrow=”yes” align=”right”]ಅಕ್ಟೋಬರ್ 1ರಿಂದ 10ರ ವರೆಗೆ ಕಾರಂತ ಥೀಂ ಪಾರ್ಕನಲ್ಲಿ ಚಿತ್ತಾರ ಮಾತಿನಾಚೆಯ ಗುರುತು ಕಾರ್ಯಕ್ರಮ ನಡೆಯುತ್ತಲಿದೆ. ಖ್ಯಾತ ರಂಗಕರ್ಮಿ ಛಾಯಾಗ್ರಾಹಕ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಸದಾನಂದ ಸುವರ್ಣ ಅವರಿಗೆ ಅಕ್ಟೋಬರ್ 10ರಂದು ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಾರ್ಟೂನ್ ಹಬ್ಬ ಮತ್ತ ಸಾಂಸ್ಕೃತಿಕ ಸುಗ್ಗಿ 10 ದಿನಗಳ ಕಾಲವೂ ನಡೆಯಲಿದೆ.[/quote] 2011ರಲ್ಲಿ ಕೋಟ ಶಿವರಾಮ ಕಾರಂತ ಕಲಾಭವನವನ್ನು…
ಕುಂದಾಪುರ: ತಾಲೂಕಿನ ಮಡಾಮಕ್ಕಿ ಗ್ರಾಮವನ್ನು ಹೊರತುಪಡಿಸಿ, ಉಳಿದ ೧೦೦ ಗ್ರಾಮಗಳ ವ್ಯಾಪ್ತಿಗೆ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ಈ ಸಂಘವು ಆಯಾ ಗ್ರಾಮಗಳ ನೋಂದಾಯಿತ ಸದಸ್ಯರಿಗೆ ಸೇವೆ ನೀಡುತ್ತಿದೆ. ಸದಸ್ಯತ್ವ ವರ್ಷಂತ್ಯಕ್ಕೆ 31.42 ವೃದ್ಧಿಯಾಗಿದ್ದು, ಪಾಲುಹಣ ಶೇ. 18.19 ರಷ್ಟು, ಶೇ. 17.16 ರಷ್ಟು ವೃದ್ದಿಯಾಗಿ ವೃದ್ಧಿಯಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ತಿಳಿಸಿದರು. ಅವರು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 2014-15 ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಂತೆ ರೂ. 8,85,713 ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 11 ಡಿವಿಡೆಂಡ್ ಘೋಷಿಸಬಹುದು, ಬಾಕಿ ಲಾಭವನ್ನು ಸಹಕಾರಿ ನಿಯಮದಂತೆ ಹಂಚಲಾಗುವುದು ಸಂಘವು ವರದಿ ಸಾಲಿನಲ್ಲಿ ರೂ. 15,76,23,307.45 ವ್ಯವಹಾರ ಮಾಡಿದ್ದು, ಶೇ. 30.42 ರಷ್ಟು ವೃದ್ದಿಯಾಗಿದೆ. ಪ್ರಸಕ್ತ ಸಾಲಿನ ಅಡಿಟ್ ವರ್ಗೀಕರಣವು ’ಎ’ ತರಗತಿಯಲ್ಲಿದೆ ಎಂದರು. ಇದು ಕೇವಲ ಏಳು ವರ್ಷದ ಯಶಸ್ವಿ ಸಾಧನೆ ಎಂದು ಹೇಳಬಹುದು. ಮುಂದಿನ…
ಕುಂದಾಪುರ: ಮಂಗಳೂರಿನ ರೆಡ್ ಎಫ್.ಎಮ್ 93.5 ಪ್ರಸ್ತುತ ಪಡಿಸುವ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪ್ರಾಯೋಜಕತ್ವದಲ್ಲಿ ಅ. 4ರಂದು ಬೆಳಿಗ್ಗೆ 9 ಕ್ಕೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ರೆಡ್ ಸುರಕ್ಷಾ ಅಭಿಯಾನ ಸೀಸನ್-2 ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವಂತಹ ಉಡುಪಿ ಜಿಲ್ಲಾ ಮಟ್ಟದ ಅಂತರ್‌ಕಾಲೇಜು ಸ್ಕಿಟ್ ಕಾಂಪಿಟೇಶನ್ ನಡೆಯಲಿದೆ. ಉಡುಪಿ ಜಿಲ್ಲಾ ಅಧೀಕ್ಷಕರಾದ ಅಣ್ಣಾಮಲೈ ಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಸಂತೋಷ ಕುಮಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಧ ತಡೆ ಕುರಿತು ಮಾಹಿತಿಯನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಪಾಲನೆಯ ಅಗತ್ಯತೆಯ ಅರಿವು, ಮಾಹಿತಿ ಲಭ್ಯವಾಗಲಿದೆ. ಈ ಉಪಯುಕ್ತ ಮಾಹಿತಿ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಪ್ರವೀಣ ಟಿ. ತಿಳಿಸಿದ್ದಾರೆ
[quote bgcolor=”#ffffff” bcolor=”#ffbb00″ arrow=”yes” align=”right”]ಅ.8: ಕಾರ್ಯಕ್ರಮಗಳ ವಿವರ: ವಿಶೇಷ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ-ಸವಾಲುಗಳ ಬಗ್ಗೆ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಲಿದ್ದಾರೆ. ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ತಂಡದವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಳ್ಳಲಿದೆ. ಅಪರಾಹ್ನ 2 ಗಂಟೆಯಿಂದ ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣದಲ್ಲಿ ಡಾ. ಕನರಾಡಿ ವಾದಿರಾಜ ಭಟ್, ಡಾ. ಜಗದೀಶ ಶೆಟ್ಟಿ, ಡಾ. ಪಿ. ಅಮ್ಮಾಜಿ ಭಾಗವಹಿಸಲಿದ್ದಾರೆ. ಮಹಿಳಾ ಸಂವೇದನೆ ಕುರಿತು ಡಾ. ಶುಭಾ ಮರವಂತೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ-ಕೆರೆಗೆ ಹಾರ, ಯಕ್ಷಗಾನ-ಮಾಯಾಪುರಿ ಮಹಾತ್ಮೆ ಹಾಗೂ ಬೈಂದೂರು ರಿದಂ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ.[/quote] ಬೈಂದೂರು: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಆಯೊಜಿಸಲಾಗಿದೆ. ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ…
ಕೊಲ್ಲೂರು: ಇಲ್ಲಿಗೆ ಸಮೀಪದ ಎಲ್ಲೂರು ಸಂತೆಗದ್ದೆ ಎಂಬಲ್ಲಿ ಶಿಲಾ ಶಾಸನ ಪತ್ತೆಯಾಗಿದೆ. ಅದನ್ನು ಪರಿ ಶೀಲಿಸಿದ ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತ ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಲ್ಲಿ ಒಬ್ಬನಾದ ಮೊದಲನೇ ಬುಕ್ಕರಾಯನಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಶಾಸನವನ್ನು ಶಕವರ್ಷ 1275ನೆ ಶುಕ್ಲ ಸಂವತ್ಸರದಲ್ಲಿ ಕೆತ್ತಿದ್ದು, ಅದು ಕ್ರಿ.ಶ. 1353ಕ್ಕೆ ತಾಳೆಯಾಗುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯ 24 ಸಾಲುಗಳಲ್ಲಿರುವ ಶಾಸನವು ಬುಕ್ಕರಾಯನನ್ನು ‘ಮಹಾ ಮಂಡಳೇಶ್ವರ ಅರಿರಾಯ ವಿಭಾಡ ಭಾಷೆಗೆ ತಪ್ಪದ ರಾಯರ ಗಂಡ’ ಎಂಬ ಹೊಗಳಿಕೆಯೊಂದಿಗೆ ಶ್ರೀವೀರ ಬುಕ್ಕಂಣ ಒಡೆಯ ಎಂದು ಸಂಭೋದಿಸಿದೆ. ಬುಕ್ಕರಾಯನ ಆಳ್ವಿಕೆಯ ಕಾಲದಲ್ಲಿ ಮಲೆಯ ದಂಣಾಯಕ ಅವನ ಪ್ರಧಾನಿ ಯಾಗಿರುವ ಉಲ್ಲೇಖವಿದೆ. ಮಾರ ಮುಂಡಿನ ತಂಮ ಹೆಗಡೆ ಮತ್ತು ಎಡವ ಕೊಲ್ಲಿಯ ತಂಮ ಹೆಗಡೆ ಎಂಬ ಇಬ್ಬರು ಮಾಂಡಲೀಕರನ್ನು ಹೆಸರಿಸಲಾಗಿದೆ. ಕೋಟೀಶ್ವರ ದೇವರ ಬದ್ದುರ ರುದ್ರ ಪೂಜೆಗೆ ನೀಡಿದ ದಾನದ ಕುರಿತಾ ಗಿರುವ ಇದು ಒಂದು…
ಬೈಂದೂರು: ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮಣಿಪಾಲ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದುಬೈಯ ದಿನೇಶ ದೇವಾಡಿಗ ಫ್ಯಾಮಿಲಿ ಟ್ರಸ್ಟ್ ಮತ್ತು ನಾವುಂದ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಮಂಜುನಾಥ ಆಸ್ಪತ್ರೆಯ ನೆರವಿನೊಂದಿಗೆ ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶಕೀಲಾ ರಾಜಕುಮಾರ್ ದೇಹದ ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿನ ಆರೋಗ್ಯದ ಕಡೆಗೆ ಎಚ್ಚರ ಇರಬೇಕು. ಆಗಾಗ ತಪಾಸಣೆ ಮಾಡಿಸಿಕೊಂಡು, ಚಿಕ್ಕ ಸಮಸ್ಯೆ ಕಂಡುಬಂದರೂ ತಜ್ಞರ ಸಲಹೆ, ಚಿಕಿತ್ಸೆ ಪಡೆಯಬೇಕು. ಶಿಬಿರಗಳಲ್ಲಿ ತಪಾಸಣೆಯ ಜತೆಗೆ ಕಣ್ಣಿನ ಆರೋಗ್ಯದ ಬಗೆಗೆ ಮಾಹಿತಿ ಸಿಗುವುದರಿಂದ ಅದರ ಬಗ್ಗೆ ಕೀಳಂದಾಜು ಸರಿಯಲ್ಲ. ಮಕ್ಕಳಿಗೆ ವೈದ್ಯರು ಕನ್ನಡಕ ಬಳಸಲು ಹೇಳಿದಾಗ ಅನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದರು. ಸ್ವಾಗತಿಸಿದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಬಿ. ಜಿ. ಮೋಹನದಾಸ್ ಬೆಸ್ಕೂರ್ ’ದೃಷ್ಟಿಗೆ ಆದ್ಯತೆ’ ಎನ್ನುವುದು ಲಯನ್ಸ್ ಸಂಸ್ಥೆಯ ಮಹತ್ವದ ಧ್ಯೇಯ.…
ಕುಂದಾಪುರ: ಮುದ್ರಾ ಯೋಜನೆಯಡಿಯಲ್ಲಿ ಸಮಗ್ರ ಆರ್ಥಿಕತೆಯ ಪ್ರಗತಿಯು ಕೇಂದ್ರ ಸರಕಾರದ ಆಶಯವಾಗಿದೆ. ಪ್ರಸಕ್ತ ಸಾಲಿನ ಅಂತ್ಯದೊಳಗೆ ಕೇಂದ್ರ ಸರಕಾರದ ಆದೇಶದಂತೆ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಮುದ್ರಾ ಯೋಜನೆಯಡಿಲ್ಲಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರಕಾರದ ಯಾವುದೇ ಸಾಲ ಯೋಜನೆ ಅನುಷ್ಠಾನ ಮಾಡುವಲ್ಲಿ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಸಹಾಯಕ ಮಹಾಪ್ರಬಂಧಕ ಇ.ಕೃಷ್ಣರಾಜ್ ಹೇಳಿದರು. ಅವರು ಮಂಗಳವಾರ ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆ ವತಿಯಿಂದ ನೇರಳಕಟ್ಟೆ ಶಾಖೆಯ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಪತ್ರ ವಿತರಿಸಿ ಮಾತನಾಡಿದರು. ಸಾರಿಗೋದ್ಯಮಿ ಸುಧಾಕರ ಶೆಟ್ಟಿ ಬಾಂಡ್ಯ, ಉದ್ಯಮಿ ಚೆರಿಯಬ್ಬ ಸಾಹೇಬ್, ಪ್ರಸಿದ್ಧ ಜ್ಯೋತಿಷಿ ನೇರಳಕಟ್ಟೆ ಶಂಕರ ಪೈ, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕಕುಮಾರ್ ಕೊಡ್ಗಿ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಸತೀಶಬೀಡು ಸ್ವಾಗತಿಸಿ…
