Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಮಂಗಳೂರಿನ ರೆಡ್ ಎಫ್.ಎಮ್ 93.5 ಪ್ರಸ್ತುತ ಪಡಿಸುವ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರದ ಹೋಟೆಲ್ ಪಾರಿಜಾತದ ಪ್ರಾಯೋಜಕತ್ವದಲ್ಲಿ ಅ. 4ರಂದು ಬೆಳಿಗ್ಗೆ 9 ಕ್ಕೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ರೆಡ್ ಸುರಕ್ಷಾ ಅಭಿಯಾನ ಸೀಸನ್-2 ಅಪರಾಧ ತಡೆ ಕುರಿತು ಜಾಗೃತಿ ಮೂಡಿಸುವಂತಹ ಉಡುಪಿ ಜಿಲ್ಲಾ ಮಟ್ಟದ ಅಂತರ್‌ಕಾಲೇಜು ಸ್ಕಿಟ್ ಕಾಂಪಿಟೇಶನ್ ನಡೆಯಲಿದೆ. ಉಡುಪಿ ಜಿಲ್ಲಾ ಅಧೀಕ್ಷಕರಾದ ಅಣ್ಣಾಮಲೈ ಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಸಂತೋಷ ಕುಮಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಧ ತಡೆ ಕುರಿತು ಮಾಹಿತಿಯನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಪಾಲನೆಯ ಅಗತ್ಯತೆಯ ಅರಿವು, ಮಾಹಿತಿ ಲಭ್ಯವಾಗಲಿದೆ. ಈ ಉಪಯುಕ್ತ ಮಾಹಿತಿ ಕಾರ್ಯಕ್ರಮದಲ್ಲಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮ ಸಂಯೋಜಕ ಪ್ರವೀಣ ಟಿ. ತಿಳಿಸಿದ್ದಾರೆ

Read More

[quote bgcolor=”#ffffff” bcolor=”#ffbb00″ arrow=”yes” align=”right”]ಅ.8: ಕಾರ್ಯಕ್ರಮಗಳ ವಿವರ: ವಿಶೇಷ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ-ಸವಾಲುಗಳ ಬಗ್ಗೆ ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಲಿದ್ದಾರೆ. ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ತಂಡದವರಿಂದ ಕನ್ನಡ ಗೀತೆಗಳು ಪ್ರಸ್ತುತಗೊಳ್ಳಲಿದೆ. ಅಪರಾಹ್ನ 2 ಗಂಟೆಯಿಂದ ಸಾಹಿತ್ಯ ಮತ್ತು ಸಂಸ್ಕೃತಿ ಎಂಬ ವಿಚಾರ ಸಂಕಿರಣದಲ್ಲಿ ಡಾ. ಕನರಾಡಿ ವಾದಿರಾಜ ಭಟ್, ಡಾ. ಜಗದೀಶ ಶೆಟ್ಟಿ, ಡಾ. ಪಿ. ಅಮ್ಮಾಜಿ ಭಾಗವಹಿಸಲಿದ್ದಾರೆ. ಮಹಿಳಾ ಸಂವೇದನೆ ಕುರಿತು ಡಾ. ಶುಭಾ ಮರವಂತೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ-ಕೆರೆಗೆ ಹಾರ, ಯಕ್ಷಗಾನ-ಮಾಯಾಪುರಿ ಮಹಾತ್ಮೆ ಹಾಗೂ ಬೈಂದೂರು ರಿದಂ ನೃತ್ಯಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ.[/quote] ಬೈಂದೂರು: ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ ನೂರು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕನ್ನಡ ವರ್ಷಾಚರಣೆ-ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಎಂಬ ಎರಡು ದಿನಗಳ ಸಾಹಿತ್ಯೋತ್ಸವವನ್ನು ಆಯೊಜಿಸಲಾಗಿದೆ. ಆರ್.ಕೆ.ಸಂಜೀವರಾವ್ ಜನ್ಮ ಶತಾಬ್ದಿ ಆಚರಣಾ ಸಮಿತಿಯ…

Read More

ಕೊಲ್ಲೂರು: ಇಲ್ಲಿಗೆ ಸಮೀಪದ ಎಲ್ಲೂರು ಸಂತೆಗದ್ದೆ ಎಂಬಲ್ಲಿ ಶಿಲಾ ಶಾಸನ ಪತ್ತೆಯಾಗಿದೆ. ಅದನ್ನು ಪರಿ ಶೀಲಿಸಿದ ಶಿರ್ವ ಎಂಎಸ್ಆರ್ಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತ ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಲ್ಲಿ ಒಬ್ಬನಾದ ಮೊದಲನೇ ಬುಕ್ಕರಾಯನಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಶಾಸನವನ್ನು ಶಕವರ್ಷ 1275ನೆ ಶುಕ್ಲ ಸಂವತ್ಸರದಲ್ಲಿ ಕೆತ್ತಿದ್ದು, ಅದು ಕ್ರಿ.ಶ. 1353ಕ್ಕೆ ತಾಳೆಯಾಗುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯ 24 ಸಾಲುಗಳಲ್ಲಿರುವ ಶಾಸನವು ಬುಕ್ಕರಾಯನನ್ನು ‘ಮಹಾ ಮಂಡಳೇಶ್ವರ ಅರಿರಾಯ ವಿಭಾಡ ಭಾಷೆಗೆ ತಪ್ಪದ ರಾಯರ ಗಂಡ’ ಎಂಬ ಹೊಗಳಿಕೆಯೊಂದಿಗೆ ಶ್ರೀವೀರ ಬುಕ್ಕಂಣ ಒಡೆಯ ಎಂದು ಸಂಭೋದಿಸಿದೆ. ಬುಕ್ಕರಾಯನ ಆಳ್ವಿಕೆಯ ಕಾಲದಲ್ಲಿ ಮಲೆಯ ದಂಣಾಯಕ ಅವನ ಪ್ರಧಾನಿ ಯಾಗಿರುವ ಉಲ್ಲೇಖವಿದೆ. ಮಾರ ಮುಂಡಿನ ತಂಮ ಹೆಗಡೆ ಮತ್ತು ಎಡವ ಕೊಲ್ಲಿಯ ತಂಮ ಹೆಗಡೆ ಎಂಬ ಇಬ್ಬರು ಮಾಂಡಲೀಕರನ್ನು ಹೆಸರಿಸಲಾಗಿದೆ. ಕೋಟೀಶ್ವರ ದೇವರ ಬದ್ದುರ ರುದ್ರ ಪೂಜೆಗೆ ನೀಡಿದ ದಾನದ ಕುರಿತಾ ಗಿರುವ ಇದು ಒಂದು…

Read More

ಬೈಂದೂರು: ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಮಣಿಪಾಲ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದುಬೈಯ ದಿನೇಶ ದೇವಾಡಿಗ ಫ್ಯಾಮಿಲಿ ಟ್ರಸ್ಟ್ ಮತ್ತು ನಾವುಂದ ಗ್ರಾಮ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಮಂಜುನಾಥ ಆಸ್ಪತ್ರೆಯ ನೆರವಿನೊಂದಿಗೆ ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಶಕೀಲಾ ರಾಜಕುಮಾರ್ ದೇಹದ ಅತ್ಯಂತ ಸೂಕ್ಷ್ಮ ಅಂಗವಾದ ಕಣ್ಣಿನ ಆರೋಗ್ಯದ ಕಡೆಗೆ ಎಚ್ಚರ ಇರಬೇಕು. ಆಗಾಗ ತಪಾಸಣೆ ಮಾಡಿಸಿಕೊಂಡು, ಚಿಕ್ಕ ಸಮಸ್ಯೆ ಕಂಡುಬಂದರೂ ತಜ್ಞರ ಸಲಹೆ, ಚಿಕಿತ್ಸೆ ಪಡೆಯಬೇಕು. ಶಿಬಿರಗಳಲ್ಲಿ ತಪಾಸಣೆಯ ಜತೆಗೆ ಕಣ್ಣಿನ ಆರೋಗ್ಯದ ಬಗೆಗೆ ಮಾಹಿತಿ ಸಿಗುವುದರಿಂದ ಅದರ ಬಗ್ಗೆ ಕೀಳಂದಾಜು ಸರಿಯಲ್ಲ. ಮಕ್ಕಳಿಗೆ ವೈದ್ಯರು ಕನ್ನಡಕ ಬಳಸಲು ಹೇಳಿದಾಗ ಅನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದರು. ಸ್ವಾಗತಿಸಿದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಬಿ. ಜಿ. ಮೋಹನದಾಸ್ ಬೆಸ್ಕೂರ್ ’ದೃಷ್ಟಿಗೆ ಆದ್ಯತೆ’ ಎನ್ನುವುದು ಲಯನ್ಸ್ ಸಂಸ್ಥೆಯ ಮಹತ್ವದ ಧ್ಯೇಯ.…

Read More

ಕುಂದಾಪುರ: ಮುದ್ರಾ ಯೋಜನೆಯಡಿಯಲ್ಲಿ ಸಮಗ್ರ ಆರ್ಥಿಕತೆಯ ಪ್ರಗತಿಯು ಕೇಂದ್ರ ಸರಕಾರದ ಆಶಯವಾಗಿದೆ. ಪ್ರಸಕ್ತ ಸಾಲಿನ ಅಂತ್ಯದೊಳಗೆ ಕೇಂದ್ರ ಸರಕಾರದ ಆದೇಶದಂತೆ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಮುದ್ರಾ ಯೋಜನೆಯಡಿಲ್ಲಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರಕಾರದ ಯಾವುದೇ ಸಾಲ ಯೋಜನೆ ಅನುಷ್ಠಾನ ಮಾಡುವಲ್ಲಿ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಸಹಾಯಕ ಮಹಾಪ್ರಬಂಧಕ ಇ.ಕೃಷ್ಣರಾಜ್ ಹೇಳಿದರು. ಅವರು ಮಂಗಳವಾರ ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆ ವತಿಯಿಂದ ನೇರಳಕಟ್ಟೆ ಶಾಖೆಯ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಮುದ್ರಾ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಪತ್ರ ವಿತರಿಸಿ ಮಾತನಾಡಿದರು. ಸಾರಿಗೋದ್ಯಮಿ ಸುಧಾಕರ ಶೆಟ್ಟಿ ಬಾಂಡ್ಯ, ಉದ್ಯಮಿ ಚೆರಿಯಬ್ಬ ಸಾಹೇಬ್, ಪ್ರಸಿದ್ಧ ಜ್ಯೋತಿಷಿ ನೇರಳಕಟ್ಟೆ ಶಂಕರ ಪೈ, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕಕುಮಾರ್ ಕೊಡ್ಗಿ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು. ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಶಾಖಾ ಪ್ರಬಂಧಕ ಸತೀಶಬೀಡು ಸ್ವಾಗತಿಸಿ…

Read More

ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸಿತು.ಟ್ರೋಫಿಯೊಂದಿಗೆ ವಿಜೇತ ಬ್ಯಾಡ್ಮಿಂಟನ್ ಪಟುಗಳಾದ ಸಚಿನ್,ಸಮಿತ್,ನಿತೇಶ್,ಕಾರ್ತಿಕ್,ನಾಗೇಂದ್ರ,ಚೇತನ್,ಅಕ್ಷಯ್,ಸುಮನ್,ಹೃತಿಕ್ ಮತ್ತು ವಿನ್‌ಸ್ಟನ್.ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇಂದ್ರ ಎಸ್ ಗಂಗೊಳ್ಳಿ

Read More

ಗಂಗೊಳ್ಳಿ: ಕಳೆದ ಸೋಮವಾರ ಇಲ್ಲಿನ ಮ್ಯಾಂಗನೀಸ್ ರಸ್ತೆಯಲ್ಲಿನ ಭಗತ್ ಸಿಂಗ್ ಅಭಿಮಾನಿ ಬಳಗವು ಭಗತ್ ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಿತು.ಗಂಗೊಳ್ಳಿಯ ಉದ್ಯಮಿ ವಿಠಲ್ ಶೆಣೈ ಅವರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ಆ ಬಳಿಕ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮೌನ ಪ್ರಾರ್ಥನೆಯನ್ನು ಮಾಡಲಾಯಿತು, ಅಭಿಮಾನಿ ಬಳಗದ ಅಧ್ಯಕ್ಷ ವಿಶ್ವನಾಥ ಖಾರ್ವಿ ಮತ್ತು ಸರ್ವ ಸದಸ್ಯರು ಹಾಜರಿದ್ದರು. ವರದಿ : ನರೇಂದ್ರ ಎಸ್ ಗಂಗೊಳ್ಳಿ

Read More

 ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ವ್ಯವಸ್ಥಾಪಕ, ಖ್ಯಾತ ಚಂಡೆ ವಾದಕ ಮಿಥುನ್ ಸುವರ್ಣ ಅವರ ಪ್ರತಿಭೆ, ಕಲಾ ಸೇವೆಯನ್ನು ಗುರುತಿಸಿ ಕುಂದಾಪುರದ ಫ್ಯಾಶನ್ ಕೋರ್ಟ್ ವತಿಯಿಂದ ಸಂಮಾನಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಮಿ ಕೆ. ಎಲ್. ಮಧ್ಯಸ್ಥ, ಬೆಂಗಳೂರಿನ ಉದ್ಯಮಿ ನಾಗರಾಜ ಮಧ್ಯಸ್ಥ, ಕುಂಭಾಸಿ ಅನಂತ ಪದ್ಮನಾಭ ಉಪಧ್ಯಾಯ, ಫ್ಯಾಶನ್ ಕೋರ್ಟ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೆ. ಕಾರ್ತಿಕೇಯ ಮಧ್ಯಸ್ಥ, ನಿರ್ದೇಶಕರಾದ ಪ್ರೇಮಲತಾ ಮಧ್ಯಸ್ಥ, ಶಿಲ್ಪಾ ಕೆ. ಮಧ್ಯಸ್ಥ, ನಿವೃತ್ತ ಶಿಕ್ಷಕ ಗುಂಡ್ಮಿ ರಾಮಚಂದ್ರ ಐತಾಳ್, ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ್, ಆಶಾ ಉಪಧ್ಯಾಯ, ರಂಜಿತ್ ಐತಾಳ್, ಕುಂದಾಪುರದ ಶ್ರೀ ಬಗಳಾಂಬ ಚಂಡೆ ಬಳಗದ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪುರ: ಮೂಡುಬಿದ್ರೆ ಆಳ್ವಾಸ್ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿನಿ ಕೊಕ್ಕರ್ಣೆಯ ಶುಭಾಲಕ್ಷ್ಮೀ ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವುದಕ್ಕಾಗಿ ಇತ್ತೀಚೆಗೆ ಮೊಗವೀರಪೇಟೆಯ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರಂಭದಲ್ಲಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ಸನ್ಮಾನಿಸಿ ಗೌರವಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಬಾಬು ಗಾಂಧೀನಗರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೊಗವೀರ ಪೇಟೆ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ಆನಂದ ಮರಕಾಲ ಬೆಂಗಳೂರಿನ ಉದ್ಯಮಿ ಗುಣಕರ್, ಉಪಾಧ್ಯಕ್ಷರಾದ ದೇವಕಿ ಎಸ್. ಕೋಟ್ಯಾನ್, ಸದಸ್ಯರಾದ ರಘುವೀರ ಕಿಣಿ, ರಾಘವೇಂದ್ರ ಕುಂದರ್, ಶ್ರೀಮತಿ ನಿರ್ಮಲ ಜಯಪ್ರಕಾಶ್ ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತ ಶುಭ ಹಾರೈಸಿದರು. ಚಂದ್ರಹಾಸ ಸ್ವಾಗಿಸಿದರೆ, ಪ್ರೀತೇಶ್ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಅಮೀನ್ ವಂದಿಸಿದರು.

Read More

ಗಂಗೊಳ್ಳಿ: ಇತ್ತೀಚೆಗೆ ಬಾರ್ಕೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಟೆನ್ನಿಕಾಯ್ಟ್ ಪ೦ದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ಪ್ರಥಮ ಸ್ಥಾನ ಪಡೆದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೆನ್ನಿಕಾಯ್ಟ್ ಪಂದ್ಯಾಟಕ್ಕೆ ಆಯ್ಕೆಯಾದರು. ಟ್ರೋಫಿಯೊ೦ದಿಗೆ ವಿಜೇತ ಕ್ರೀಡಾಳುಗಳಾದ ಮನಿಷ,ದಿಶಾ ಭಟ್,ಭವಾನಿ ಮಾಧುರಿ ,ಪ್ರಥ್ವಿ ಮತ್ತು ನಾಗರತ್ನ, ಪ್ರಜ್ವಲ್,ನಾಗರಾಜ ನಾಯಕ್,ನವೀಶ್ ಗಾಂವ್ಕರ್,ನಾಗೇಂದ್ರ,ಪ್ರತೀಕ್ ಪ್ರಮೋದ್ ಸರಸ್ವತಿ ವಿದ್ಯಾಲಯ ಆಡಳಿತ ಮಂಡಳಿಯ ಹೆಚ್ ಗಣೇಶ್ ಕಾಮತ್,ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.

Read More