ಕುಂದಾಪುರ: ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವಾಗ ಸಂಭ್ರಮದಿಂದಲೇ ಮಾಡಿ, ಸಂತೋಷವನ್ನು ಹಂಚಿಕೊಳ್ಳಿ ಅದಕ್ಕೆ ಯಾರ ವಿರೋಧವೂ ಇಲ್ಲ ಆದರೆ ಅದು ಇತರರಿಗೆ ತೊಂದರೆಯನ್ನು ಕೊಡುವ ಮಟ್ಟಕ್ಕೆ ಹೋಗುವಂತಿರಬಾರದು ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಹೇಳಿದರು. ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕುಂದಾಪುರ ಶಾಂತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನು ಪ್ರಕಾರ ಧ್ವನಿವರ್ಧಕಗಳು 50ಡೆಸಿಮಲ್ಕಿಂತ ಹೆಚ್ಚು ಸದ್ದು ಮಾಡಲು ಅವಕಾಶವಿಲ್ಲ. 10ಗಂಟೆಯ ನಂತರ ಉಪಯೋಗಿಸುವಂತೆಯೂ ಆದರೆ ಅದು ಸಾಧ್ಯವಿಲ್ಲವೆಂಬುದು ನಮಗೂ ತಿಳಿಯುತ್ತೆ. ಈ ವಿಚಾರದಲ್ಲಿ ಕಾನೂನನ್ನು ಸಡಿಸಿದ್ದೇವೆ. ರಾತ್ರಿ 10ಗಂಟೆಯ ಬಳಿಕ ಸಣ್ಣ ಧ್ವನಿಯನ್ನು ಬಳಸಿಕೊಳ್ಳಬಹುದು. ಉಡುಪಿ ಜಿಲ್ಲೆಯಲ್ಲಿ 406 ಗಣೇಶ ಉತ್ಸವಗಳು ನಡೆಯುತ್ತವೆ. ಪೊಲೀಸರ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡಲು ಸಿದ್ಧರಿದ್ದೇವೆ. ಅದೇ ರೀತಿ ಗಣೇಶೋತ್ಸವ ಸಮಿತಿಗಳು ಕೂಡ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಸಾರ್ವಜನಿಕರು ಅನವಶ್ಯಕವಾಗಿ ಶಾಂತಿ ಕದಡಿದರೇ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಯೊಳಗೊಬ್ಬ ಕಲಾವಿದನಿದ್ದಾನೆ. ಆದರೆ ಎಲ್ಲರಿಗೂ ಅವರಲ್ಲಿನ ಕಲೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಲೆಗೊಂದು ಸೂಕ್ತ ಅವಕಾಶ ಸಿಕ್ಕಾಗ ಅದು ಅರಳುತ್ತದೆ ಎಂದು ಮಣಿಪಾಲದ ಉದ್ಯಮಿ ಬಾಲಕೃಷ್ಣ ಶೆಣೈ ಹೇಳಿದರು. ಕುಂದಾಪುರದ ಸಾಧನ ಸಂಗಮ ಟ್ರಸ್ಟ್ನ ಮೋಹನ ಮುರಳಿ ಕಲಾ ಗ್ಯಾಲರಿ ಹಾಗೂ ಸಿದ್ಧಾರ್ಥ ಮಯ್ಯ ಉಪ್ಪುಂದ ಇವರ ಏಕವ್ಯಕ್ತಿ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಮಾತನಾಡಿ ಅಂಗವಿಕಲತೆ ಇದ್ದರೂ ಸಹ ಅದನ್ನು ಮೀರಿ ಮಾಡುವ ಸಾಧನೆ ಆ ವ್ಯಕ್ತಯ ಎಲ್ಲಾ ವೈಕಲ್ಯಗಳನ್ನು ತೊಡೆದು ಹಾಕುತ್ತದೆ. ಸಿದ್ಧಾರ್ಥ ಮಯ್ಯ ಅವರ ಆಧನೆ ನಿಜಕ್ಕೂ ಶ್ಲಾಘನಾರ್ಹ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕುಂದಾಪುರ ಎಮ್. ಎಮ್ ಶಾಲೆಯ ಪ್ರಾಂಶುಪಾಲೆ ಚಿಂತನ ರಾಜೇಶ್, ಅಂಕಣಕಾರ್ತಿ ಶೋಭಾ ಅರಸ್ ಉಪಸ್ಥಿತರಿರುತ್ತಾರೆ. ಮಂಜುನಾಥ ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನ ಸಂಗಮದ ಅಧ್ಯಕ್ಷ ನಾರಾಯಣ ಐತಾಳ ವಂದಿಸಿದರು. ಶಮಂತ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಚತುರ್ಥಿಯ ಅಂಗವಾಗಿ…
ಗ್ರಾ.ಪಂ. ಪ್ರಜಾಪ್ರಭುತ್ವದ ಯಶಸ್ಸಿಗೆ ಬುನಾದಿ: ಮೊಯ್ಲಿ ಕುಂದಾಪುರ: ಗ್ರಾ.ಪಂ. ವ್ಯವಸ್ಥೆ ಯಶಸ್ವಿಯಾದರೆ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾದಂತೆ, ಇಂದು ಗ್ರಾ.ಪಂ.ಗೆ ಎಲ್ಲಾ ರೀತಿಯ ಹಕ್ಕು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಜಾತಿ, ಪಕ್ಷ ಬೇಧ ಮೆರೆತು ನಿರ್ವಹಿಸಿಸುವ ಕರ್ತವ್ಯ ಗ್ರಾ.ಪಂ. ಸದಸ್ಯರದ್ದಾಗಿದೆ. ಪ್ರಬಲ ರಾಜಕೀಯ ಇಚ್ಚಾಶಕ್ತಿ ಬಳೆಸಿಕೊಂಡಲ್ಲಿ ಎಲ್ಲಾ ಸಮಸ್ಯೆಗಳನ್ನು ಮೀರಿ ಮುನ್ನಡೆಯ ಬಹುದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು. ಅವರು ಕುಂದಾಪುರ ರೋಟರಿ ಲಕ್ಷ್ಮಿನರಸಿಂಹ ಕಲಾಮಂದಿರದಲ್ಲಿ ನಡೆದ ದೇವಾಡಿಗ ಸಮಾಜ ಸೇವಾ ಸಂಘ (ರಿ) ಕುಂದಾಪುರ ಕುಂದಾಪುರ ತಾಲೂಕು ಗ್ರಾ.ಪಂ. ದೇವಾಡಿಗ ಸಮಾಜದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸದಸ್ಯರುಗಳನ್ನು ಅಭಿನಂದಿಸಿ ಮಾತನಾಡಿದರು. ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ನಾನು ಮುಖ್ಯಮಂತ್ರಿಯಾಗಿದ್ದೆ ಈ ಸಂದರ್ಭದಲ್ಲಿ ಗ್ರಾ.ಪಂ. ವ್ಯವಸ್ಥೆ ಬಲಪಡಿಸುವ ಹಾಗೂ ಪಂಚಾಯತ್ಗಳಿಗೆ ಹೆಚ್ಚಿನ ಹಕ್ಕು ಜವಾಬ್ದಾರಿ ನೀಡುವ ವ್ಯವಸ್ಥೆ ರೂಪುಗೊಂಡಿತು. ಅಲ್ಲದೇ ಸಿಇಟಿ ವ್ಯವಸ್ಥೆ ತಂದ ನಂತರ ಎಲ್ಲಾ ವರ್ಗದವರೂ, ಆರ್ಥಿಕವಾಗಿ ಹಿಂದುಳಿದವರೂ ಇಂಜಿನಿಯರ್ ಹಾಗೂ ಮೆಡಿಕಲ್ ಗೆ ಹೋಗಲು ಸಾಧ್ಯವಾಯಿತು ಎಂದರು. ಮುಂಬಯಿಯ…
ಕುಂದಾಪುರ: ಅನಿಯಮಿತ ವಿದ್ಯುತ್ ನಿಲುಗಡೆ ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕುಂದಾಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಕುಂದಾಪುರದಲ್ಲಿ ಪ್ರತಿಭಟನಾ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕುಂದಾಪುರ ವಿಧಾನಸಭಾ ಅಧ್ಯಕ್ಷ ಇಲಿಯಾಸ್ ಸಾಸ್ತಾನ ಮಾತನಾಡಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಬೇರೆಡೆಗಿಂತ ಕುಂದಾಪುರ ಭಾಗದಲ್ಲಿ ಹೆಚ್ಚು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಹೀಗೆ ಮನಬಂದಂತೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕು ಹಾಗೂ ವಿದ್ಯುತ್ ಕಡಿತಗೋಳಿಸುಲು ನಿರ್ದಿಷ್ಟ ಸಮಯವನ್ನು ನಿಗದಿಗೊಳಿಸಬೇಕು ಎಂದವರು ಆಗ್ರಹಿಸಿದರು. ಕುಂದಾಪುರದ ಶಾಸ್ತ್ರೀವೃತ್ತದಿಂದ ಹೊರಟ ಪ್ರತಿಭಟನಾಕಾರರು ಮೆಸ್ಕಾಂ ಮುಖ್ಯ ಕಛೇರಿಗೆ ತೆರಳಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್ಡಿಎಫ್ಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಿರಾಜ್ ಕೋಟೇಶ್ವರ, ನವಾಜ್ ಕುಂದಾಪುರ, ಪಿಎಫ್ಐ ತಾಲೂಕು ಅಧ್ಯಕ್ಷ ಮೌಸಮ್ ಮೌಲಾನ ಮುಂತಾದವರು ಭಾಗವಹಿಸಿದ್ದರು.
ಬೈಂದೂರು: ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆಯ ದಿನದಂದು ಸುತ್ತಮತ್ತಲಿನ ಪರಿಸರದ ಎಲ್ಲಾ ಕಾರ್ಯಕ್ರಮಗಳಲ್ಲಿ ನೀರಾವರಿ ಮಂತ್ರಿ ಎಂದು ಮನೆಮಾತಾಗಿರುವ ಸುಮಾರು 40ವರ್ಷಗಳಿಂದ ಅವಿರತವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಸೇವಕರಾಗಿ ಸಾಮಾಜಿಕ ಸೇವೆ ಸಲ್ಲಿಸುವುದರೊಂದಿಗೆ ಜನಪ್ರೀಯರಾಗಿರುವ ಉಪ್ಪುಂದದ ಪದ್ಮನಾಭ ನಾಯಕ್ ಇವರಿಗೆ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾಸಮಿತಿಯ ವತಿಯಿಂದ ಗುರುತಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ದಾಮೋದರ ಪ್ರಭು, ಉಪಾಧ್ಯಕ್ಷ ಪುಂಡಲೀಕ ನಾಯಕ್, ಕಾರ್ಯದರ್ಶಿ ರಮೇಶ ಪೈ, ಪ್ರಕಾಶ ಭಟ್, ನಾರಾಯಣ ಶ್ಯಾನುಭಾಗ್ ಉಪ್ರಳ್ಳಿ ಹಾಗೂ ಸಮಿತಿಯ ಸದಸ್ಯರು ಮತ್ತು ವರಮಹಾಲಕ್ಷ್ಮೀ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಓಂಗಣೇಶ ಉಪ್ಪುಂದ ಇವರು ಸನ್ಮಾನಿತರ ಪರಿಚಯವನ್ನು ವಿಸ್ತಾರವಾಗಿ ವಿವರಿಸಿದರು. ಪ್ರಮೋದ ಪೈ ಸ್ವಾಗತಿಸಿ, ವಂದಿಸಿದರು.
ಕುಂದಾಪುರ: ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆಯು ದೇವಸ್ಥಾನ ಅರ್ಚಕರಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ವೇದ ಮೂರ್ತಿ ಗಣೇಶ ಭಟ್ ಇವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿತು. ರಾತ್ರಿ ಅಲಂಕಾರ ಪೂಜೆ ಮತ್ತು ದಾನಿಗಳಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯ ಸರ್ವ ಸದಸ್ಯರು ವೆಂಕಟರಮಣ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು. ನಾಯ್ಕನಕಟ್ಟೆ ಜಿ.ಎಸ್.ಬಿ ಮಹಿಳೆಯರಿಂದ ಸಾಮೂಹಿಕ ಚೂಡಿ ಪೂಜೆ ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಜಿ.ಎಸ್.ಬಿ ಮಹಿಳೆಯರಿಂದ ಸಾಮೂಹಿಕ ಚೂಡಿ ಪೂಜೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಕುಂದಾಪುರ: ಸಂಘಟನೆಗಳು ಸಮಾಜದ ಸ್ಯಾಸ್ಥ್ಯ ಕಾಪಾಡಬೇಕೇ ಹೊರತು ಗೊಂದಲ ಸೃಷ್ಟಿಸುವಂತಾಗಬಾರದು. ಈ ನಿಟ್ಟಿನಲ್ಲಿ ಸಂವಿಧಾನ ಹಕ್ಕನ್ನು ಪಡೆದು ಸರ್ವಾಂಗೀಣ ಅಬಿವೃದ್ದಿಯತ್ತ ಸಾಗಲು ದಲಿತರಿಗೆ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಉಡುಪಿ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು. ಅವರು ಕೆರಾಡಿ ಗ್ರಾಮದ ದೀಟಿ ಸಬಾಭವನದಲ್ಲಿ ನೂತನ ದಸಂಸದ ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ದಲಿತರ ಒಗ್ಗಟ್ಟನ್ನು ಮುರಿದು ದಲಿತ ಚಳುವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಮುದಾಯದವರು ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ ಶೋಷಿತರಿಗೆ ಜನಜಾಗ್ರತಿಯನ್ನು ಮೂಡಿಸಬೇಕಾಗಿದೆ ದಲಿತ ಸಂಘಟನೆ ಎಂದರೆ ದಲಿತರ ಸ್ವಾಬಿಮಾನ ಜಾಗೃತಿಯೇ ವಿನಾ: ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಗೊಂದಲವನ್ನು ಸೃಷ್ಟಿಸುವುದಲ್ಲ ಎಂದವರು ದಲಿತ ಸಮುದಾಯಕ್ಕೆ ಕಿವಿಮಾತು ಹೇಳಿದರು. ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿ ಕೊಲ್ಲೂರು ಆರಕ್ಷಕ ಠಾಣಾಧಿಕಾರಿ ಜಯಂತ್ ಅವರು ಡಾ. ಬಿ .ಆರ್. ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಮಾಲಾರ್ಪಣೆ…
ಕುಂದಾಪುರ: ಜೇಸಿ ಸಂಘಟನೆಯಿಂದ ವ್ಯಕ್ತಿತ್ವದ ನವ ನಿರ್ಮಾಣವಾಗುವ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸಿ ಸಮಾಜದ ಬೆಳಕಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾಗೂರಿನ ಕುಸುಮ ಹೋಮ್ಸ್ ಪ್ರೈ. ಲಿ., ವ್ಯವಸ್ಥಾಪಕ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹದ ೨ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಕುಂದಾಪುರದ ಪ್ರೀತಮ್ ಹೇರ್ ಡ್ರೆಸ್ಸಸ್ನ ಮಾಲಕ ಅಣ್ಣಯ್ಯ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ ಅವರು ಸರೋಜಿನಿ ಮಧುಸೂಧನ ಡಿ. ಕುಶೆ ಸರಕಾರಿ ಪ್ರೌಢ ಶಾಲೆ ವಡೇರಹೋಬಳಿಯ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಮಡಿಕೆ ಓಡೆಯುವ ಸ್ಪರ್ಧೆಯ ವಿಜೇತ ಪ್ರಜ್ವಲ್ ಅವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…
ಕುಂದಾಪುರ: ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನವು ಪತ್ರಕರ್ತ ಸಂತೋಷ ಕುಮಾರ ಗುಲ್ವಾಡಿ ಅವರ ಸ್ಮಾರಕ ನೀಡಲಾಗುತ್ತಿರವು ಗುಲ್ವಾಡಿ ಗೌರವ ಪುರಸ್ಕಾರಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆಯಾಗಿದ್ದರೆ. ಸೆ. 13ರಂದು ಅಪರಾಹ್ನ 2:30ಕ್ಕೆ ಗುಲ್ವಾಡಿಯ ತೋಟದ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಗೌರವ ಪುರಸ್ಕಾರ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧನೆಗೈದವರಿಗೆ ಪ್ರತಿಷ್ಠಾನದ ಗೌರವ ಪ್ರಧಾನ ಮಾಡಲಾಗುವುತ್ತಿದೆ. ಈ ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊಹಿದಿನ್ ಬಾವಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯನಿರ್ವಹಕ ಯಾಕೂಬ್ ಖಾದರ್ ಗುಲ್ವಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
