ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಣತಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯವರು ಅಕ್ಟೋಬರ್ ತಿಂಗಳಿನಲ್ಲಿ “ಸೈಬರ್ ಸುರಕ್ಷತಾ ಜಾಗೃತಿ” ಬಗ್ಗೆ ಆಯೋಜಿಸಿದ MEMES ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು, ಪಿಯು ಕಾಲೇಜು ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಎಲ್ಲಾ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಎಸ್.ಬಿ.ಐ ಎಟಿಎಂ ಬಳಿ ಸಿಕ್ಕ ಚಿನ್ನದ ಸರವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿಯೋರ್ವರು, ವಾರೀಸುದಾರರನ್ನು ಪತ್ತೆ ಹಚ್ಚಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಗಂಗಾಧರ್ ಅವರು ಚಿನ್ನದ ಸರ ಬಿದ್ದಿರುವುದನ್ನು ಗಮನಸಿ, ಪರಿಶೀಲಿಸಿ ವಾಸುದಾರರನ್ನು ಪತ್ತೆ ಹಚ್ಚಿ ಸರವನ್ನು ಹಿಂದಿರುಗಿಸಿದ್ದಾರೆ. ಗಂಗಾಧರ್ ಅವರಿಗೆ ಇಲಾಖಾ ಮೇಲಾಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ವಿಶೇಷ ಚೇತನ ಮಕ್ಕಳು ಶಿಕ್ಷಣದ ಕನಸು ಕಾಣುವುದೇ ದೊಡ್ಡ ವಿಚಾರವಾಗಿರುವಾಗ, ಈ ಗ್ರಾಮದ ಮಕ್ಕಳಿಬ್ಬರು ನಿತ್ಯವೂ ಆಂತರಿಕ ಹಾಗೂ ಬಾಹ್ಯ ಬದುಕಿನ ನಡುವೆ ಸಂಘರ್ಷಕ್ಕಿಳಿದು ಶಿಕ್ಷಣದ ಬೆಳಕು ಕಾಣುತ್ತಿದ್ದಾರೆ. ಆದರೆ ಇದಕ್ಕಾಗಿ ಆ ಕುಟುಂಬದ ಪರಿಪಾಠಲು ದೇವರಿಗೆ ಪ್ರೀತಿ! ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಳಜಿತ ಗ್ರಾಮದ ಹುಲ್ಕಡಿಕೆ ಗುಡಿಕೇರಿ ಸುರೇಶ್ ಹಾಗೂ ಸುಜಾತ ಎಂಬುವವರು ಕುಟುಂಬದ್ದು ಕರುಣಾಜನಕ ಕಥೆ. ಯಳಜಿತ ಸರಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾತ್ವಿಕ್ ಹಾಗೂ 7ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಕಾ ಸಹೋದರ ಸಹೋದರಿಯರು 2 ವರ್ಷದವರಿರುವಾಗಲೇ ಎಂಡೋಸಲ್ಪಾನ್ ಪೀಡಿತರಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಕೂಲಿ ಕೆಲಸವನ್ನೇ ಅವಲಂಭಿಸಿ ಬದುಕುತ್ತಿರುವ ಸುರೇಶ್ ಹಾಗೂ ಸುಜಾತ ದಂಪತಿಗಳು ಕಳೆದ 14 ವರ್ಷದಿಂದ ಮಕ್ಕಳ ಪಾಲನೆಯಲ್ಲಿಯೇ ಬಹುಪಾಲು ಸಮಯವನ್ನು ಕಳೆಯುವಂತಾಗಿದೆ. ಕುಟುಂಬದ ಈ ಸಂಕಷ್ಟವನ್ನೂ ದಾಟಿ ಇಬ್ಬರೂ ವಿಕಲಚೇತನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಪಾಲಕರ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರದ ಚಿತ್ರರಸಿಕರನ್ನು ನಾಲ್ಕು ದಶಕಗಳ ಕಾಲ ರಂಜಿಸಿ ಜನಮನ್ನಣೆ ಗಳಿಸಿದ್ದ ಏಕಪರದೆಯ ಶ್ರೀ ವಿನಾಯಕ ಚಿತ್ರಮಂದಿರವು ಇತ್ತಿಚಿಗೆ ಸಿನಿಮಾ ಪ್ರದರ್ಶನವನ್ನು ಖಾಯಂ ಆಗಿ ನಿಲ್ಲಿಸಿದೆ. 1983ರಲ್ಲಿ ಕುಂದಾಪುರದ ಹಂಗಳೂರಿನಲ್ಲಿ ಕೆ. ರಾಮಚಂದ್ರ ರಾವ್ ಅವರು ಆರಂಭಿಸಿದ್ದ ಚಿತ್ರಮಂದಿರವನ್ನು ಮುಂದೆ ಅವರ ಮಗ ಪುಪ್ಪರಾಜ್ ರಾವ್ ಅವರು ಮುನ್ನಡೆಸುತ್ತಿದ್ದರು. ಸಿನಿಮಾ ರಂಗದ ಬಗ್ಗೆ ಇದ್ದ ಆಸಕ್ತಿಯಿಂದಲೇ ಚಿತ್ರಮಂದಿರ ಕಟ್ಟಿದ ರಾಮಚಂದ್ರ ರಾವ್ ಅವರ ವಿನಾಯಕ ಥಿಯೇಟರ್ನಲ್ಲಿ, ಡಾ. ರಾಜಕುಮಾರ್ ಅವರ ಕವಿರತ್ನ ಕಾಳಿದಾಸ ಸಿನಿಮಾ ಮೊದಲ ಪ್ರದರ್ಶನ ಕಂಡಿತ್ತು. ಫಸ್ಟ್ ಕ್ಲಾಸ್ ಸೆಕೆಂಡ್ ಕ್ಲಾಸ್ ಸೇರಿ 250 ಸೀಟು, ಬಾಲ್ಕಾನಿ 176 ಸೀಟು ಸಾಮರ್ಥ್ಯ ಹೊಂದಿದ್ದ ಚಿತ್ರಮಂದಿರದ ಆರಂಭದಲ್ಲಿ ಟಿಕೆಟ್ ಬೆಲೆ ಫಸ್ಟ್ ಕ್ಲಾಸಿಗೆ ರೂ 2.80, ಬಾಲ್ಕನಿಗೆ ರೂ.3.25 ಪೈಸೆಯಾಗಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ/ ಆರಂಭದಲ್ಲಿ ಕನ್ನಡ ಭಾಷೆಯ ಸಿನಿಮಾಗಳಿಗೆ ಸೀಮಿತವಾಗಿದ್ದ ಚಿತ್ರಮಂದಿರ ಕ್ರಮೇಣ ತಮಿಳು, ತೆಲುಗು, ಹಿಂದಿ ಭಾಷಾ ಚಿತ್ರಗಳಿಗೂ ತೆರೆದುಕೊಂಡಿತ್ತು. ಕುಂದಾಪುರದಲ್ಲಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: 19ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕುಪ್ಪಯ್ಯ ಬಿಲ್ಲವ, ಕಾರ್ಯದರ್ಶಿಯಾಗಿ ರಾಘವೇಂದ್ರ ಪೂಜಾರಿ ಅರೆಹೊಳೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಧನಂಜಯ ಗೌಡ ಕೆಂಜಿ, ಉಪಾಧ್ಯಕ್ಷರಾಗಿ ಮಂಜುನಾಥ ಗೌಡ ಪೈನಾಡಿ, ಜೊತೆ ಕಾರ್ಯದರ್ಶಿಯಾಗಿ ಗಂಗಾಧರ, ಕೋಶಾಧಿಕಾರಿ ರಾಧಿಕಾ ಕೊಠಾರಿ, ವಿದ್ಯಾ, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ ಗೌಡ, ದೀಪಕ್ ಗೌಡ, ಸಾಂಸ್ಕೃತಿಕಕಾರ್ಯದರ್ಶಿಯಾಗಿ ಶಾಂತಿವಸಂತಗೌಡ ಜ್ಯೋತಿ ಕೊಠಾರಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಮಂಜಯ್ಯ ಪೂಜಾರಿ ಹೊನ್ನುಮನೆ, ನರಸಿಂಹ ಆಚಾರಿ, ಮಹಾಬಲ ಕೊಠಾರಿ, ಪ್ರಭಾಕರ ಕೊಠಾರಿ, ಗಣಪತಿ ಗೌಡ, ಮುಡುರ ಗೌಡ, ರಮೇಶ ಗೌಡ ಕೆಳತೊಡ, ರಂಗು ಮರಾಠಿ, ಶಿವರಾಜ್ ನಾಯ್ಕ್, ಸಂಜೀವ ಗೌಡ ಅರೆಹೊಳೆ, ರಮೇಶ ಪೂಜಾರಿ ಶಾಂತೇರಿ, ರಾಜೇಶ್ ಕೊಠಾರಿ, ನಾಗರಾಜ ಗೌಡ, ನಾರಾಯಣ ಗೌಡ, ನಾಗೇಶ್ ಕೊಠಾರಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತ್ರಾಸಿ ಮರವಂತೆ ಬೀಚ್ ವೀಕ್ಷಣೆಗೆ ಸಂದರ್ಭ ಪ್ರವಾಸಿಯೊಬ್ಬರು ಸಮುದ್ರ ಬಿದ್ದು ಮೃತಪಟ್ಟ ಹಿನ್ನೆಯಲ್ಲಿ ಸೋಮವಾರ ಎಚ್ಚರಿಕೆ ನಾಮಫಲಕ ಹಾಗೂ ಕೆಂಪು ರಿಬ್ಬನ್ ಟೇಪ್ ಕಟ್ಟುವ ಮೂಲಕ ಜಾಗೃತಿ ಕಾರ್ಯ ಕೈಗೊಳ್ಳಲಾಗಿದೆ. ಬೀಚ್ ತೀರದಲ್ಲಿ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಪ್ರವಾಸಿಗರ ಹುಚ್ಚಾಟ ಎಲ್ಲೆ ಮೀರುತ್ತಿತ್ತು. ಈ ಹಿನ್ನೆಲೆಯಲ್ಲಿ ಗಂಗೋಳ್ಳಿ ಠಾಣಾಧಿಕಾರಿ ಹರೀಶ್ ನಾಯ್ಕ್ ಸ್ಥಳೀಯರ ಸಹಕಾರದಲ್ಲಿ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ರಿಬ್ಬನ್ ಹಾಗೂ ಸೂಚನಾ ಫಲಕ ಅಳವಡಿಸಿದ್ದಾರೆ. ಸಿಬ್ಬಂದಿ ಅಗತ್ಯ:ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವ ಪ್ರವಾಸಿಗರು ನಿರಂತರವಾಗಿ ಮರವಂತೆ ಬೀಚಿಗೆ ಭೇಟಿ ನೀಡುವುದರಿಂದ ಅಲ್ಲಿ ಪೊಲೀಸ್ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆ ಖಾಯಂ ಸಿಬ್ಬಂದಿಗಳನ್ನು ಇರಿಸಿ ಎಚ್ಚಿರಿಕೆ ನೀಡಬೇಕಾದ ಅನಿವಾರ್ಯತೆ ಇದೆ. ನಾಪಫಲಕಗಳು ಹಾಗೂ ರಿಬ್ಬರ್ ತಾತ್ಕಾಲಿಕವಾಗಿ ಅಷ್ಟೇ ಉಳಿಯುವುದರಿಂದ ಪ್ರವಾಸಿಗರನ್ನು ಸಿಬ್ಬಂದಿಗಳ ಮೂಲಕವೇ ಎಚ್ಚರಿಸುವುದು ಅನಿವಾರ್ಯವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ನೇತೃತ್ವದಲ್ಲಿ ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಸಂಘದಲ್ಲಿ ಅದ್ದೂರಿ ಕುಂದಾಪುರ ಕನ್ನಡ ಹಬ್ಬ ಭಾನುವಾರ ಯಶಸ್ವಿಯಾಗಿ ನೆರವೇರಿತು. ಸಾವಿರಾರು ಕುಂದಾಪ್ರ ಕನ್ನಡಿಗರು ಒಂದುಗೂಡಿ ಸಂಭ್ರಮಿಸಿ ಬೆಂಗಳೂರಿನಲ್ಲಿಯೂ ಅಭಿವ್ಯಕ್ತಿಯ ಮೂಲಕವೇ ಕುಂದಾಪುರವನ್ನು ಸೃಷ್ಟಿಸಿದರು. ಬೆಳಿಗ್ಗೆ ಕುಂದಾಪುರದ ರಥವನ್ನು ಶಾಸಕರುಗಳಾದ ಗುರುರಾಜ್ ಗಂಟಿಹೊಳೆ ಕಿರಣ್ ಕುಮಾರ್ ಕೊಡ್ಗಿ , ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರು ಅವರು ಜತೆಯಾಗಿ ಎಳೆದು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮವನ್ನೂ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67728 . ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು ನಾಟಕ ಪ್ರದರ್ಶನಗೊಂಡವು. ನೃತ್ಯ, ಮಾತಿನ ಚಾವಡಿ, ಟೀಮ್ ಕುಂದಾಪುರಿಯನ್ಸ್ ತಂಡದಿಂದ ಮಿಂಚುಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿ, ಬಸ್ರೂರು ಮೂರುಕೈ ಬ್ಯಾಂಕರ್ಸ್ ಕಾಲನಿ ನಿವಾಸಿ ಜಗದೀಶ್ ರಾವ್ ಹಾಗೂ ಸ್ಮಿತಾ ಜೆ.ರಾವ್ ಪುತ್ರಿ ನೇಹಾ ಜೆ. ರಾವ್, ವಿಜ್ಞಾನ ವಿಭಾಗದಲ್ಲಿ 594 ಅಂಕ ಪಡೆದು ತೃತೀಯ ರ್ಯಾಂಕ್ ಪಡೆದರೆ ಉಡುಪಿ ಜಿಲ್ಲೆಗೆ 2ನೇ ರ್ಯಾಂಕ್ ಪಡೆದಿದ್ದಾಳೆ. ರ್ಯಾಂಕ್ ಪಡೆದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ ನೇಹಾ ಕುಂದಾಪ್ರ ಡಾಟ್ ಕಾಂ ಜೊತೆಗೆ ಸಂತಸ ಹಂಚಿಕೊಂಡಿದ್ದು, ನಾನು ಯಾವುದೇ ಟೂಶನ್ ತರಗತಿಗೆ ಹೋಗದೆ, ಕಾಲೇಜು ಶಿಕ್ಷಕರ ತರಬೇತಿ ಹಾಗೂ ಮಾರ್ಗದರ್ಶನದಿಂದ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಟೈಮ್ಟೇಬಲ್ ಪ್ರಕಾರ ಓದುತ್ತಿರಲಿಲ್ಲ. ಓದಿಗೆ ಒತ್ತಡವೂ ಇರಲಿಲ್ಲ. ಹೆಚ್ಚಾಗಿ ಹಗಲಿನ ವೇಳೆ ಓದುತ್ತಿದ್ದೆ ಎಂದಿದ್ದಾಳೆ. ಮುಂದೆ ಕಂಟ್ಯೋಟರ್ ಸೈನ್ ತೆಗೆದುಕೊಂಡು ಇಂಜಿನಿಯರ್ ಮಾಡುವ ಗುರಿ ಇದೆ ಎಂದಿದ್ದಾಳೆ. ನೇಹಾಳಿಗೆ ಟ್ರಾಯಿಂಗ್, ಪೇಂಟಿಂಗ್ ನೆಚ್ಚಿನ ಅವ್ಯಾಸವಾಗಿದ್ದು, ಆಂಕರ್ ಆಸಕ್ತ ಕ್ಷೇತ್ರವಾಗಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡೂವುದೂ ಇಷ್ಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಗಳ್ನು ನಡೆಸಲಾಗುತ್ತಿದ್ದು, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸನ್ನದುದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊದಿಗೆ ಹಾಗೂ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಮದ್ಯ ಮಾರಾಟಗಾರರು ಪ್ರತಿ ದಿನದ ದಾಸ್ತಾನು ಮತ್ತು ಮಾರಾಟದ ವಿವರಗಳ ದಾಖಲೆಗಳನ್ನು ನಿರ್ವಹಿಸುವುದರ ಜೊತೆಗೆ ಅಬಕಾರಿ ಇಲಾಖೆಗೆ ನಿಗಧಿತ ಮಾಹಿತಿಯನ್ನು ಒದಗಿಸಬೇಕು, ಇದರಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಮತ್ತು ನಿಗಧಿತ ಸ್ಥಳವನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಲ್ಲಿ ಅಂತಹ ಸನ್ನದುದಾರರ…
