ಬೆಂಗಳೂರು: ಪ್ರವಾಸಿಗರನ್ನು ಸೆಳೆಯಲು ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯಕ್ಕೆ ನೂತನ ಪ್ರವಾಸೋದ್ಯಮ ನೀತಿ ಸಿದ್ಧಪಡಿಸಲಾಗಿದೆ. ಈ ನೀತಿಗೆ ಸಚಿವ ಸಂಪುಟ ಸಮ್ಮತಿಸಿದ್ದು, ಶೀಘ್ರವೇ ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ವಿದೇಶದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು. ಕಾಂಬೋಡಿಯಾ, ಮಲೇಶ್ಯ, ಸಿಂಗಪುರ, ದುಬೈಗಳಲ್ಲಿ ಶೇ. 18ರಿಂದ 20 ಜಿಡಿಪಿ ಇದೆ. ಭಾರತದಲ್ಲಿ ಪ್ರವಾಸೋದ್ಯಮದಿಂದ ಶೇ. 6.1 ಜಿಡಿಪಿ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಐಟಿ-ಬಿಟಿಯಿಂದ ಎಂಜಿನಿಯರ್ಗಳಿಗೆ ಮಾತ್ರ ಕೆಲಸ ಸಿಗುತ್ತದೆ. ಆದರೆ ಪ್ರವಾಸೋದ್ಯಮ ಬೆಳೆದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಸ್ಥಳೀಯರಿಗೂ ಕೆಲಸ ಸಿಗುತ್ತದೆ ಎಂದರು. ಪ್ರವಾಸಿ ಕೇಂದ್ರಗಳನ್ನು ನಿಯಂತ್ರಿಸಲು ಟೂರಿಸ್ಟ್ ಗೈಡ್ಗಳ ನೇಮಕಕ್ಕೆ ಚಿಂತನೆ ನಡೆಸಲಾಗಿದೆ. ಗೈಡ್ಗಳಿಗೆ ನೋಂದಣಿ, ಲೈಸೆನ್ಸ್, ಯೂನಿಫಾರಂ ನೀಡಲಾಗುತ್ತದೆ. ಪ್ರವಾಸಿ ತಾಣಗಳ ಬಗ್ಗೆ ಮುಂಚಿತವಾಗಿ ಪ್ರವಾಸಿಗರಿಗೆ ಮಾಹಿತಿ ಒದಗಿಸಲು ಟೂರಿಸ್ಟ್ ಮಿತ್ರ ಬರಲಿದ್ದಾರೆ. ವಿದೇಶಗಳಲ್ಲಿ ಇರುವಂತೆ…
Author: Editor Desk
ಕಾರ್ಕಳ: ಭಗವಂತನ ಸೇವೆಯೇ ಮುಕ್ತಿಯ ದಾರಿ. ದ್ವೇಷ ನಾಶ ಮಾಡುವುದೇ ನಿಜವಾದ ಭಕ್ತಿ. ಬದುಕು ಬಂಗಾರಗೊಳಿಸುವುದು ಸನಾತನ ಧರ್ಮ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಮನುಷ್ಯನಾಗಿ ಬದುಕುವುದೇ ದೊಡ್ಡ ಧರ್ಮ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಹೇಳಿದರು. ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 16ರ ವರೆಗೆ ನಡೆೆಯಲಿರುವ ಶಿಲಾಮಯ ಗರ್ಭಗೃಹ, ಸುತ್ತು ಪೌಳಿಯ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಅಷ್ಟಬಂಧ, ಸಹಸ್ರಕಲಶಾಭಿಷೇಕ ಸಹಿತ ಬ್ರಹ್ಮಕಲಶ ಪುಣೊತ್ಸವ, ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎ. 9 ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಹೊಸ ದೇವಸ್ಥಾನ ನಿರ್ಮಾಣಕ್ಕಿಂತ ಹಳೆ ದೇವಸ್ಥಾನ ಜೀರ್ಣೋದ್ಧಾರ ಮಾಡುವುದು ಪುಣ್ಯದ ಕೆಲಸ. ಬ್ರಹ್ಮಕಲಶ ನೋಡುವುದು ಪುಣ್ಯ. ಮಾಡುವುದು ದೊಡ್ಡ ಪುಣ್ಯ ಎಂದರು.
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವಿಶೇಷ ಕುಂದಾಪುರ: ಬೆಂಗಳೂರಿನಲ್ಲಿ ಜರುಗಿದ ಸೌತ್ ಇಂಡಿಯಾ ಕ್ವೀನ್ – 2015 ಸ್ಪರ್ಧೆಯಲ್ಲಿ ಕುಂದಾಪುರದ ಗುಜ್ಜಾಡಿಯ ಬೆಡಗಿ ಸೀಮಾ ಬುತೆಲ್ಲೊ ‘ಸೌತ್ ಇಂಡಿಯಾ ಕ್ವೀನ್ ಮಿಸ್ ಬ್ಯೂಟಿಪುಲ್ ಐಸ್’ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಮಿಂಚಿರುವುದಲ್ಲದೇ ಸೌತ್ ಇಂಡಿಯಾ ಕ್ವೀನ್ ಹಾಗೂ ಮಿಸ್ ಕರ್ನಾಟಕ ದ ಮೊದಲ ರನ್ನರ್ ಆಗಿ ಕೂಡ ಹೊರಹೊಮ್ಮಿದ್ದಾರೆ. ಕುಂದಾಪುರದ ಗುಜ್ಜಾಡಿಯ ವಿ.ವಿ. ಬುತೆಲ್ಲೊ ಹಾಗೂ ಸಿಲೈನ್ ಬುತೆಲ್ಲೊ ದಂಪತಿಗಳ ಮಗಳಾದ ಸೀಮಾ ಸದ್ಯ ಬೆಂಗಳೂರಿನ ಪ್ರಸಿದ್ಧ ಕಂಪೆನಿಯೊಂದರಲ್ಲಿ ಪ್ರೊಡೆಕ್ಷನ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಂಗೊಳ್ಳಿಯಲ್ಲಿ ಪಿಯುಸಿವರೆಗಿನ ಶಿಕ್ಷಣವನ್ನು ಪಡೆದ ಸೀಮಾ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎ ಪದವಿಯ ಪೂರೈಸಿ ಮೈಸೂರು ಮುಕ್ತ ವಿ.ವಿಯಿಂದ ಸ್ನಾತಕೋತ್ತರ ಪದವಿಯನ್ನು ಎಂ.ಬಿ.ಎ.ನೊಂದಿಗೆ ಪೂರೈಸಿದ್ದಾರೆ. ಬಹುಮುಖ ಪ್ರತಿಭೆಯಾದ ಸೀಮಾ 1997ರಲ್ಲಿ ನಡೆದ ಕಲೋತ್ಸವದಲ್ಲಿ ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದದರು. 2006 ಅವಧಿಯಲ್ಲಿ ಸ್ಮೈಲ್ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ವಿನೋದ್ ಗಂಗೊಳ್ಳಿ ನಿರ್ದೇಶನದ ಕೊಂಕಣಿ ಕಿರುಚಿತ್ರ ‘ಡ್ರೀಮ್…
ಗುಣಮಟ್ಟದ ಶಿಕ್ಷಣದ ಮೂಲಕ ಕಳೆದ ಹತ್ತು ವರ್ಷಗಳಿಂದ ಬೈಂದೂರಿನ ಯಡ್ತರೆಯಲ್ಲಿ ಸದ್ದಿಲ್ಲದೇ ಹೆಸರು ಮಾಡಿರುವ ಸಂಸ್ಥೆ ಯುಸ್ಕೋರ್ಡ್ ಕೋಚಿಂಗ್ ಕ್ಲಾಸಸ್. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಗಣಿತ, ಲೆಕ್ಕಶಾಸ್ತ್ರದ ವಿಷಯಗಳಿಗಾಗಿಯೇ ತಗರತಿಗಳನ್ನು ಆರಂಭಿಸಿ ನೂರಾರು ವಿದ್ಯಾರ್ಥಿಗಳ ಆಶಾಕಿರಣವಾಗಿ ನಿಂತಿದೆ. ದುಡ್ಡು ಮಾಡುವ ದಂದೆಗಿಳಿದು ಶಿಕ್ಷಣವನ್ನು ವ್ಯಾಪಾರಿಕರಣಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ, ಖಾಸಗಿ ತರಬೇತಿಗಳನ್ನು ನಡೆಸುತ್ತಿರುವುದನ್ನು ಎಲ್ಲಿಯೂ ಪ್ರಚರ ಪಡಿಸದೇ ಕೇವಲ ತನ್ನ ಹವ್ಯಾಸಕ್ಕಾಗಿ ಎಂ.ಕಾಂ ಪದವೀಧರರಾಗಿರುವ ನಾಗರಾಜ ಪಿ. ಯಡ್ತರೆ ಆರಂಭಿಸಿದ ಈ ಸಂಸ್ಥೆ ಇಂದಿಗೂ ವಿದ್ಯಾರ್ಥಿಗಳ ಬಾಳು ಬೆಳಗಿತ್ತಿದೆ. ಅತಿ ಕಡಿಮೆ ಶುಲ್ಕದಲ್ಲಿ, ನಿಯಮಿತವಾದ ವಿದ್ಯಾರ್ಥಿಗಳಿಗಷ್ಟೇ ತರಗತಿಗಳನ್ನು ನಡೆಸುತ್ತಾ, ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ನಿಂತಿದ್ದಾರೆ. ಎಷ್ಟೋ ಬಾರಿ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿ ಶುಲ್ಕವೆಂಬುದು ಶೂನ್ಯವಾದದ್ದು ಇದೆ. ತರಗತಿಯೂ ಅಷ್ಟೇ ಶಿಸ್ತಿನಿಂದ, ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಇಲ್ಲ ಕಲಿತ ಎಲ್ಲಾ ವಿದ್ಯಾರ್ಥಿಗಳೂ ಅಭಿಪ್ರಾಯ ಪಡುತ್ತಾರೆ. ಪ್ರತಿ ವರ್ಷ ಅತ್ಯಧಿಕ ಅಂಕಗಳಿಸಿದವರಿಗೆ, ಎಲ್ಲಾ ತರಗತಿಯಲ್ಲಿ ಹಾಜರಾದವರಿಗೆ ಬಹುಮಾನಗಳನ್ನು ನೀಡುವ…
ಕುಂದಾಪುರ: ಇಲ್ಲಿನ ಹೆದ್ದಾರಿ ಸಮೀಪದ ಕಾಂಪ್ಲೆಕ್ಸ್ವೊಂದರಲ್ಲಿದ್ದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ ಕಂಪೆನಿಯ ಹಿಂದಿನ ಕಿಟಕಿಯ ಎರಡು ಕಬ್ಬಿಣದ ರಾಡನ್ನು ತುಂಡು ಮಾಡಿ ಒಳ ಪ್ರವೇಶಿಸಿದ ಕಳ್ಳರು ಕನ್ನ ಹಾಕಿದ ಘಟನೆ ಇಂದು ಬೆಳಕಿಗೆ ಬಂದಿದೆ. ಘಟನೆ ವಿವರ: ರಾತ್ರಿ ವೇಳೆಯಲ್ಲಿ ಕಛೇರಿಯ ಹಿಂದಿನ ರಾಡ್ ತುಂಡರಿಸಿ ಬಂದಿದ್ದ ಖದೀಮರು ಕ್ಯಾಶ್ ಬಾಕ್ಸನ್ನು ಒಡೆದು ಅದರಲ್ಲಿದ್ದ 34,857ರೂಪಾಯಿ ಹಾಗೂ ಎಲ್.ಎನ್ ಮುರಳೀಧರರವರ ಛೇಂಬರ್ನ ಡ್ರಾವರ್ನಲ್ಲಿದ್ದ 3500 ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಕಟ್ಟಡದ ಹೊರ ಭಾಗದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇರಲಿಲ್ಲ. ಘಟನೆ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
ಹೌದು ಕಾಣಿ, ನಮ್ ಭಾಷ್ಯಾಗೆ ಹೀಂಗೆ ಅಂದ್ಹೇಳಿ ಒಂದ್ ಮಾತಿತ್ತ್… ಎಂತಕ್ ಗೊತ್ತಿತಾ? ನಾವ್ ಸೆಣ್ಣಕ್ ಇಪ್ಪತಿಗೆ ನಮ್ಮನ್ಯಾಗೆ ನಮ್ಮ್ ಅಕ್ಕ ಕಷ್ಟ ಪಟ್ ಹಲಸಿನಕಾಯಿ ಹಪ್ಪಳ ಮಡೂದ್, ಅದ್ನ ಕಣ್ಣಾಗ್ ವಣ್ಸಿಕಿ ಅಡ್ಗಿ ಮಾಡೂಕ್ ಹಾಪದ್, ಕಾಕಿ-ಕೋಳಿ ಬರ್ದೆ ಇದ್ಹಾಂಗ್ ಕಾಂಬಕೆ ನಮ್ಮನ್ನೆಲ್ಲ ಕೂರ್ಸುದ್, ನಾವ್? ಕೋಳಿನೇನೋ ಓಡ್ಸೂದ್ ಹೌದ್. ಆದ್ರೆ ನಮಗೂ ತೊಡು ಅಲ್ದಾ. ಎದ್ರೀಗ್ ರುಚಿ ರುಚಿ ಹಪ್ಳ, ಬಾಯ್ಯಾಗ್ ನೀರ್ ಬಾರ್ದೆ ಹೋಕಾ ? ಹಾಂಗೆ ಒಂದೋಂದೇ ತಕ್ಕಂಡ್ ತಿಂಬ್ದ್ ಮಡ್ಯ್ ಹೆಡಿ ಮೇಲ್ ಅಲ್ಲಲ್ಲ್ ಜಾಗ ಉಳಿತ್ತಾ? ಅಕ್ಕ ಒಂದ್ ಕಂಡ್ ಸಮಾ ಬೈಯೂದ್. ಆಗಳಿಕ್ ನಮ್ಮ ಅಬ್ಬಿ ಹೇಳೂದ್, ಮಕ್ಳ್ ಅಲ್ದ ಹೆಣೆ ಹಡ್ಯಿಗ್ ಕಟ್ಟದ್ ಗಂಟಿ ಹುಲ್ ತಿಂಬಕ್ ಆಗ ಅಂದ್ರ್ ಆತ್ತಾ ? ಅಂತೂ ನಮ್ ಪರ ಅಬ್ಬಿ ವಕಾಲತ್. ಇರ್ಲಿ ಈ ಹಡ್ಲ್ ಅಂದ್ರ್ ಎಂತ ಗುತಿತ್ತಾ? ಮೊದ್ಲೆಲ್ಲ ಸುಗ್ಗಿ ಹುಲ್ ಜಪ್ಪಿ ಸೂಡಿ ಮಾಡ್ತಿರಲಿಲ್ಲೆ. ಕೊಯ್ಲ್ ಆಯಿ…
ನಮ್ಮೂರಿನ ಚಂದು ಕಾಣ್ಕಾರೆ ನೀವ್ ಕುಂದಾಪ್ರ ಬಸ್-ಸ್ಟಾಂಡ್ಗೆ ಒಂದ್ ಲೋಕಲ್ ಬಸ್ ಹತ್ತಿ ಬೈಂದೂರಿಗೆ ಟಿಕೆಟ್ ಮಾಡಿ ಕೂಕಣಿ. ಶಾಸ್ತ್ರಿ ಪಾರ್ಕ್ ಬಿಟ್ಟ್ ಬಸ್ ಮುಂದ್ ಹೋದಾಗೆ….. ಆಚೀಚೆ ಹೊಳೆ, ಬಯಲು, ಗುಡ್ಡೆ ಎಲ್ಲಾ ಏನ್ ಚಂದ ಅಂತ್ರಿ! ಅದ್ರಾಗೂ ಈ ಪಶ್ಚಿಮ ಘಟ್ಟದಾಗೆ ಇಪ್ಪ ಕೊಡಶಿಗುಡ್ಡೆ(ಕುಟಚಾದ್ರಿ) ನೀವ್ ನಮ್ಮೂರಿಗ್ ಬಂದೇ ಕಾಣ್ಕ್. ಕುಂದಾಪ್ರ ಸೇತುವೆಯಿಂದ್ಲೇ ಈ ಗುಡ್ಡೆ ಕಾಂಬ್ಕ್ ಸುರುವಾತ್ತ್. ಬೈನ್ ಹೊತ್ತಿಗಾಯ್ಲೀ, ಬೆಳ್ಗಿನ್ ಹೊತ್ತಿಗಾಯ್ಲಿ ಅರಾಟೆ ಸೇತುವೆಯಿಂದ ಇದನ್ನ ನೀವ್ ಕಂಡ್ರೆ ಎಷ್ಟ್ ಖುಷಿ ಪಡ್ತ್ಯೋ ಏನೋ. ಎರ್ಡ್ ನದಿ ಒಂದ್ ಸೌಪರ್ಣಿಕಾ ಮತ್ತೊಂದ್ ಚಕ್ರಾ ಇದರ ಸಂಗಮದ ಹಿಂಬದಿಲಿ ಈ ಕೊಡಶಿಗುಡ್ಡೆ ಆಕಾಶಕ್ಕೆ ತಾಗುವಾಂಗೆ ತಲೆ ಎತ್ತಿ ನಿತ್ತದ್ದ್ ಅದೇನ್ ಚಂದ! ಉಳದ್ ಗುಡ್ಡೆ ಈ ಗುಡ್ಡಿ ಇದ್ರ್ ಎದ್ರ್ ಎಂತದೂ ಇಲ್ಲೆ. ಕೊಡಚಾದ್ರಿಯೇ ಭಗವಂತನ ಮೇರು ಸೃಷ್ಟಿ! ಈ ಕೊಡಶಿಗುಡ್ಡೆ ಹೊಕ್ಕಂಬಾಟ ಮಳೆಗಾಲ್ದಗ್ ಕಾಣ್ಕೆ… ಕೆಲು ದಿನ ಸಿಟ್ಟು ಮಾಡ್ಕ ಮೋಡದೊಳ್ಗೆ ಮುಚ್ ಹಾಯ್ಕ ಕೂಕಣ್ಣ್ತ್ತ್.…
ಹೊಸ ವರುಷು ಕಣ್ಣಂಗೆ ಏಪ್ರಿಲ್ ತಿಂಗ್ಳು ಲಾಯಕೇ. ಹೊಸ ವರ್ಷದ್ ದಿನು ಕೇಕ್-ಪಾಕ್ ಕಟ್ ಮಾಡಿ ಗಮ್ಮತ್ ಮಾಡ್ರೆ, ಏಪ್ರಿಲ್ ಒಂದು ದಿನು ಎಲ್ರರನೂ ಮುರ್ಖರನ್ನಾಯ್ ಮಾಡುದ್. ಚಣ್ಣಕಿಪ್ಪೋತ್ತಿಗೆ ಒಂಥರ ಪೂಲ್ ಮಾಡ್ರೆ, ಈಗ ಬಿಡಿ ಇನ್ನೊಂತರ. ಚಣ್ಣಕಿಪ್ಪೊತ್ತಿಗೆ ಕಾಲಡಿ ಹಾವಿತ್ತ ಕಾಣ್, ತಲಿ ಮೇಲ್ ಹುಲ್ಲಿತ್ತ್ ಕಾಣ್ ಅಂದೇಳುವುದು. ಕಡಿಕೆ ಅವರ್ ಎಲ್ಲಾರು ಕಾಲಡಿ ಕಂಡ್ರೆ, ತಲೆ ಮುಟ್ಟಿ ಕಂಡ್ರೆ ಎಪ್ರಿ ಪೂಲ್ ಬೆಟ್ರಿ ಶಲ್ಲ್ ಅಂಬುದ್. ಅಜ್ಜಿ ಹತ್ರ ಹೋಯ್, ಅಜ್ಜಯ್ಯ ಕರೀತ್ರ ಕಾಣಿ ಅಂಬುದ್. ಅಜ್ಜಿ ಹೋಯ್ ಅಜ್ಜನ್ ಹತ್ರ, ಹೋಯ್ ಎಂತಕ್ ಕರದ್ದೇ ಕೇಂಡ್ರೆ ಅಜ್ಜಯ್ಯ ನಾನ್ ಕರೀಲ್ಯೆ ಅಂತ್ರ. ಅಷ್ಟೊತ್ತಿಗ್ ನಾವ್ ಅಜ್ಜಿ ಹತ್ರ ಏಪ್ರಿ ಪೂಲ್ ಏಪ್ರಿ ಪೂಲ್ ಅಂಬುದ್. ಅಜ್ಜಿ ಎನ್ ಸುಮ್ಮನೀರ್ತಾರಾ, ಮಕ್ಕಳಿಗೆ ಅಬ್ಬಿ ಕೊಂಗಾಟ ಜಾಸ್ತಿ ಆಯ್ತು ಅಂದೇಳಿ ಬೈಯ್ಯುದ್. ಅಮ್ಮಾ, ಅಪ್ಪಾ, ಅಕ್ಕಾ, ಅಣ್ಣಾ, ಆಚಿ, ಈಚಿ ಮನೆಯರನೆಲ್ಲಾ ಪೂಲ್ ಮಾಡುದ್, ಅವ್ರಿಗೆ ಪೂಲ್ ಮಾಡುಕ್ ಹೋಯಿ…
ಮೊನ್ನೆ ನಮ್ಮನಿ ಪೈಕಿದ್ ಒಂದ್ ಮದಿ ಇದ್ದಿತ್. ನಾ ಮದಿಗ್ ಹೋಯ್ಕ್ ಅಂದೇಳಿ ತಯಾರ್ ಮಡ್ಕಂಡ್ ಇದ್ದಿ. ನಮ್ಮನಿ ಅಜ್ಜಿ ಕೇಂಡ್ರ್ ‘ಹೆಣಾ, ಮದಿಗ್ ಹೋಯ್ಕ್ ಅಂತೆ, ಕೈಯಂಗ್ ಒಂದ್ ಬಳಿ ಇಲ್ಲಲೇ’ ಅಂತೇಳಿ. ನಾ ಹೇಳ್ದಿ ‘ಅಜ್ಜಿಯಾ, ಬಳಿಗಿಳಿ ಎಲ್ಲಾ ತಕಂಡ್ ಆಯಿತ್, ಅಂಗಿ ಕಲ್ಲರಿದೇ ಬಳಿ ಹ್ವಾಪತಿಗೆ ಕೈಗೆ ಹಾಯ್ಕ ಹ್ವಾಪದ್ ಅಷ್ಟೇ’ ಅಂದಿ. ‘ಏ ದೇವ್ರೇ ಎಂಥಾ ಕಾಲ ಬಂದೀತಪ್ಪಾ’ ಅಂದೇಳಿ ಅಜ್ಜಿ ಸುರು ಮಾಡ್ಕಂಡ್ರ್ ಕಾಣಿ ಹಿಂದಿನ್ ಕತಿ ಹೇಳುಕೆ, ಅವ್ರ್ ಕಾಲ್ದಂಗೆ ಸಣ್ಕಿಪ್ಪತ್ತಿಗೆ ಬಳೆ ಹಾಕುಕ್ ಸುರು ಮಾಡ್ರೆ , ಕಡಿಕ್ ಬಳಿ ತೆಗುದಂದ್ರೆ ಅದ್ ಜೀವನದ ದುರಂತ ಕತಿ ಅಂಬ್ರ್. ಊರಿಗೊಬ್ರ್ ಮಿಡಿಬಾಯಮ್ಮ ಇರ್ತಿದ್ರಂಬ್ರ್. ಯಾರಿಗೂ ಹೆರಿಗೆ ನೋವು ಬಂದ್ರೆ ಅವ್ರ್ ಬತ್ತಿದ್ದೀರಂಬ್ರ್. ಅವ್ರ್ ಕೈಯಂಗೆ ಬಳಿ ಇರುದಿಲ್ಲ ಅಂಬ್ರ್. ಹಾಂಗಾಯಿ ನಾ ಸಣ್ಕಿಪ್ಪತ್ತಿಗೆ ಕೈಯಂಗ್ ಬಳಿ ಇಲ್ದಿರೆ ಅಜ್ಜಿ ಕೇಂತಿದ್ದಿರ್ ‘ಹೆಣಾ, ಬಿಜ್ಜಲ್ತಿಯಾ ನೀನ್’ ಅಂದೇಳಿ. ಅಗಳಿಕೆ… ಮದಿಗ್ ಒಂದ್ ವಾರ…
ಶರಣ್ರಿ….. ಆರಾಮೇನ್ರಿ? ದೂರ ಹೊಂಟಿರಿ? …. ಆಹಾ ಎನ್ ಜನ ಮರ್ರೆ ನೀವ್? ಈ ಭಾಷೆ ಧಾರವಾಡ, ಬಯಲ್ಸೀಮೆ ಬದಿದ್ ಅಂತ್ ಬೇಗ್ ಕಂಡ ಹಿಡುಕಾತ್, ಈ ಭಾಷೇಂಗೆ ಮಾತಾಡ್ರೆ ಕೇಂಬಕೆ ಖುಷಿ ಆತ್ ಅಲ್ದ? ಆರೆ ನನ್ ಬಳಸುದ್ ಕೇಂಡ್ ಕೂಡ್ಲೆ ನಗ್ತ್ರಿ. ನೀವ್ ಹೀಂಗ್ ನಗಾಡಿ ನನ್ ಬದಕ್ಕನೇ ಹಾಳ್ ಮಾಡಿ ಬಿಟ್ಟೀರಿ ಅಲ್ದ? ನಮ್ ಜನ ನನ್ ಮಾತಾಡೋದ್ನೆ ಬಿಟ್ಟೀರ್…… ಹೀಂಗೆ ಆರೆ ನಾನ್ ಬದ್ದುಕೆ ಕಷ್ಟ ಆತ್ ಗೊತಿತಾ? ನಿಮ್ಗೆ ಅದ್ರ್ ಬಗ್ಗೆ ಯೋಚನೆಯೇ ಇಲ್ಲ ಅಲ್ದ….? ನಾನ್ ಸ್ವಲ್ಪಾರೂ ನೆನ್ಪ್ಪಿತ್ ಅನ್ಕಂತೆ…… ನಾನ್ ಹುಟ್ಟಿ ಬೆಳೆದ್ ಎಲ್ಲಾ ಕುಂದಾಪುರದಂಗೆ…. ಆಗಳ್ ನಾನ್ ಎಲ್ಲಾ ಮನಿಯಾಂಗೆ ಚಣ್ಣ ಮಕ್ಕಳಿಂದ್ ಹಲ್ಲಿಲ್ದವರ್ ಬಾಯಲ್ ಎಷ್ಟ್ ಲಾಯ್ಕ ಆಡ್ಕಂಡಿದೆ ಗೊತ್ತಿತಾ? ನನ್ ಬಿಟ್ ಅವ್ರ ಬೇರೆ ಯಾವ್ ಭಾಷೆಂಗಾ ಮಾತಾಡ್ತಿರ್ಲ. ಹೊಗ್ಳುಕು ನಾನೆ ಬೈಯುಕು ನಾನೆ ಆಯ್ದೆ….. ನನ್ ಭಾಷೆಂಗೆ ಎಷ್ಟ್ ಲಾಯ್ಕ ಮಾಡಿ ಹಾಡಿ ಹಾಡ್ತಿದ್ರು ಕೇಂಬುಕೆ…
