ಬೈಂದೂರು: ಕಳೆದ ವರ್ಷ ಅಸಹಜ ಸಾವನ್ನಪ್ಪಿದ ಶಿರೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್‌ನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಶಿರೂರು ಪದವಿ ಪೂರ್ವ ಕಾಲೇಜಿನಲ್ಲಿ ವಿತರಿಸಿದರು. ಈ ಸಂಧರ್ಭ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆದ ಇಂತಹ ಘಟನೆಗಳು ಪಾಲಕರಲ್ಲಿ ಸಹಜವಾಗಿ ಆತಂಕ ಉಂಟು ಮಾಡುತ್ತದೆ. ಗ್ರಾಮೀಣ ಭಾಗದ ವ್ಯವಸ್ಥೆಗಳ ಸುಧಾರಣೆಗೆ ಹಾಗೂ ವಿದ್ಯಾರ್ಥಿಗಳು ಮತ್ತು ಮಹಿಳೆಯರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಲಾಗಿದೆ. ಪ್ರವಾಹ, ಬಿರುಗಾಳಿ ಹಾಗೂ ನರೆ ಹಾವಳಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೂ ಆದ್ಯತೆ ಮೇಲೆ ಪರಿಹಾರ ನೀಡಲು ತಿಳಿಸಲಾಗಿದೆ ಎಂದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ರತ್ನಾ ಕೊಠಾರಿ ಸಾವಿನ ಕುರಿತು ವೈದ್ಯಕೀಯ ವರದಿ ಹಾಗೂ ಇತರ ದಾಖಲೆಗಳು ಜಿಲ್ಲಾ ಹಂತದಲ್ಲಿ ಪರಿಶೀಲನೆಯಿಂದ ವಿಳಂಬವಾಗಿತ್ತು. ಬೆಳಗಾಂ ಅಧಿವೇಶನದಲ್ಲಿ ಗೃಹಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೆ ತಂದು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ…
Author: Editor Desk
ಕುಂದಾಪುರ: ಬೈಕ್ ಹಾಗೂ ಗೂಡ್ಸ್ ಟೆಂಪೋ ನಡುವಿನ ಅಪಘಾತದಲ್ಲಿ ಬೈಕ್ ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಸವಾರನಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರಿನಲ್ಲಿ ಇಂದು ಸಂಜೆಯ ವೇಳೆಗೆ ನಡೆದಿದೆ. ಘಟನೆಯ ವಿವರ: ಹೆಮ್ಮಾಡಿಯವರಾದ ಸುರೇಂದ್ರ ಗಾಣಿಗ(32) ಹಾಗೂ ಸಂಪತ್ ಪೂಜಾರಿ (26) ಎಂಬುವವರು ಪಲ್ಸರ್ ಬೈಕಿನಲ್ಲಿ ಹೆಮ್ಮಾಡಿ ಕಡೆಯಿಂದ ಕೊಲ್ಲೂರು ಕಡೆಗೆ ತೆರಳುತ್ತಿದ್ದ ವೇಳೆಗೆ ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ 407 ಗೂಡ್ಸ್ ಟೆಂಪೋವು ಕಟ್ ಬೆಲ್ತೂರು ರೈಲ್ವೆ ಬ್ರಿಜ್ ಬಳಿ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಕುಳಿತಿದ್ದ ಸುರೇಂದ್ರ ಗಾಣಿಗರ ತಲೆಗೆ ಗಂಭೀರ ಏಟು ಬಿದ್ದುದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟರೇ, ಬೈಕ್ ಚಲಾಯಿಸುತ್ತಿದ್ದ ಸಂಪತ್ ಪೂಜಾರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅವರನ್ನು ಮಣಿಪಾಲಕ್ಕೆ ಕೊಂಡೊಯ್ಯಲಾಗಿದೆ. ಕೊಲ್ಲೂರು ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಸುರೇಂದ್ರ ಸ್ನೇಹಿತನೊಂದಿಗೆ ಪಾಲುದಾರಿಕೆಯಲ್ಲಿ ಶಾಮಿಯಾನದ ವ್ಯವಹಾರ ನಡೆಸುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸಂಪತ್ ದಿನಸಿ…
ಗಂಗೊಳ್ಳಿ: ಕುಂದಾಪುರ ತಾಲೂಕಿನ ಗುಜ್ಜಾಡಿ ನಿವಾಸಿ ರಾಮನಾಥ ಚಿತ್ತಾಲ್ ಎಂಬುವರ ಮನೆಯ ತೋಟದಲ್ಲಿ ಭಾನುವಾರ ರಾತ್ರಿ ಎರಡು ಬ್ರಹ್ಮಕಮಲ ಹೂಗಳು ಅರಳಿ ನಿಂತಿದ್ದು ಎಲ್ಲರ ಗಮನ ಸೆಳೆದಿದೆ.
ಕುಂದಾಪುರ: ಸಾಮಾನ್ಯವಾಗಿ ಬಾಳೆಗಿಡಗಳ ಮೇಲಿನಿಂದ ಬಾಳೆಗೊನೆ ಬಿಡುವುದನ್ನು ನೋಡಿರುತ್ತೇವೆವ. ಆದರೆ ಗಂಗೊಳ್ಳಿಯ ಶ್ರೀನಿವಾಸ ಹೊಳ್ಳ ಎಂಬುವರ ಬಾಳೆ ತೋಟದಲ್ಲಿ ಬೆಳೆದು ನಿಂತಿರುವ ಬಾಳೆ ಗಿಡವೊಂದರಲ್ಲಿ ಗಿಡದ ಮಧ್ಯದಲ್ಲಿ ಬಾಳೆಗೊನೆ ಬೆಳೆದು ನಿಂತಿದೆ. ಈ ಅಪರೂಪದ ದೃಶ್ಯವನ್ನು ನೋಡಿದ ಸ್ಥಳೀಯ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಸುಂದರ ದೃಶ್ಯವನ್ನು ಗಂಗೊಳ್ಳಿಯ ಸುರಭಿ ಸ್ಟುಡಿಯೋ ಮಾಲೀಕರಾಗಿರುವ ಕೃಷ್ಣ ಖಾರ್ವಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಬಳಿಯ ಪಾಳು ಬಿದ್ದಿರುವ ಗದ್ದೆಯಲ್ಲಿ ನಿಂತಿರುವ ನೀರಿನಲ್ಲಿ ಈಜಾಟ ನಡೆಸುತ್ತಿರುವ ಎರಡು ಬಾತುಕೋಳಿಗಳು ಎಲ್ಲರ ಕೂತೂಹಲದ ಕೇಂದ್ರ ಬಿಂದುಗಳಾಗಿವೆ. ಈ ಸುಂದರ ದೃಶ್ಯವನ್ನು ಗಂಗೊಳ್ಳಿಯ ವೆಲ್‌ಕಮ್ ಸ್ಟುಡಿಯೋ ಮಾಲೀಕರಾದ ಗಣೇಶ ಪಿ. ಇವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಹೀಗೆ.
ಬೈಂದೂರು: ಕುಗ್ರಾಮಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುತ್ತಿದ್ದು, ಬೈಂದೂರು ಕ್ಷೇತ್ರದ ಪ್ರತಿ ಊರಿನ ಸರ್ವತೋಮುಖ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಹೇನುಬೇರು ರಸ್ತೆಯ ಪ್ರಮುಖ ಭಾಗಗಳಲ್ಲಿ 2ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ 8 ಸೋಲಾರ್ ಬೀದಿದೀಪವನ್ನು ಹೊತ್ತಿಸಿ ಮಾತನಾಡಿದರು. ಕೇಂದ್ರ ಸಚಿವರಾದ ವೀರಪ್ಪಮೊಯ್ಲಿಯವರ ನಿರ್ದೇಶನದಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸೋಲಾರದ ದೀಪಗಳನ್ನು ಅಳವಡಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ದಿನವೂ ಶಾಲೆಗೆ ತೆರಳಲು ವಾಹನ ಸೌಕರ್ಯವನ್ನು ಮಾಡಲಾಗಿದೆ. ಮುಂದೆ ೧ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿಯವರ ಸಹಕಾರವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ರಾಜು ಪೂಜಾರಿ, ತಾ.ಪಂ ಸದಸ್ಯ ರಾಮ ಕೆ, ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ,…
ಕುಂದಾಪುರ: ತಾಲೂಕಿನ ವಂಡ್ಸೆ ಪೇಟೆಯಲ್ಲಿರುವ ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಭದ್ರ ಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಸುಮಾರು 81,000ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಎಂದಿನಂತೆ ದೇವರ ಪೂಜೆಗಾಗಿ ಅರ್ಚಕರು ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮುಖ್ಯದ್ವಾರವನ್ನು ತೆರೆಯಲು ಬಂದಾಗ ದೇವಳದ ಬಾಗಿಲಿನ ಬೀಗ ಒಡೆದಿರುವುದು ಗೊತ್ತಾಗಿದೆ. ದೇವಳದ ಗರ್ಭಗುಡಿಗೆ ನುಗ್ಗಿದ ಕಳ್ಳರು 1.5ಕೆ.ಜಿ ತೂಕದ ಬೆಳ್ಳಿಯ ಪ್ರಭಾವಳಿ, 1 ಬೆಳ್ಳಿಯ ಕೊಡೆ, 4 ಬೆಳ್ಳಿಯ ಪತಾಕೆ ಕಳುವುಗೈದಿದ್ದಾರೆ. ಒಟ್ಟು 81,000ರೂ. ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆಂದು ಎಂದು ಅಂದಾಜಿಲಾಗಿದೆ. ಬಳಿಕ ಸಮೀಪದ ಭದ್ರ ಮಹಾಕಾಳಿ ದೈವಸ್ಥಾನದ ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿನ ಸುಮಾರು ೧,೦೦೦ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶ್ವಾನದಳ ಆಗಮಿಸಿ ತನಿಕೆ ನಡೆಸಿದೆ. ಕುಂದಾಪುರದ ಡಿವೈಎಸ್ಪಿ ಮಂಜುನಾಥ, ಬೈಂದೂರು ಪೊಲೀಸ್ ವೃತ್ತ…
ಸಂತಿ ನಿಂಬದಿಯಾಂಗ್ ಇತ್ತಲ್ದಾ? ಅಲ್ಲಿ ಎಷ್ಟೆಲ್ಲಾ ಜನ ಸಿಕ್ತ್ರೆ? ಹಳ್ಳಿ ಪೇಟೆ ಮಂದಿಯೆಲ್ಲಾ ಬರ್ತಿತ್ರೆ. ಅವರ್ನೆಲ್ಲ ಒಂದ್ ಕಡಿಗ್ ಕಂಡ್ರೆ ಎಷ್ಟ್ ಖುಷಿ ಆತ್ತ್ ಗೊಯಿತಾ? ಒಬ್ಬ್ರಿಕೊಬ್ರ್ ಭೆಟ್ಟಿ ಆಯಿ ಹ್ವಾಯಿ, ಸಂತಿಗ್ ಬಂದ್ರಿಯಾ? ಹೇಂಗಿದ್ರಿ? ಎಂದ್ ಕೇಂಬದೇನ್? ತಕಂಡ್ ತರಕಾರಿ, ಅದ್ರ ದರದ ಬಗ್ಗೆ ಚರ್ಚಿ ನಡ್ಸುದೇನ್? ಸಂತಿ ಚೆಂದವೇ ಬೇರೆ ನಮೂನಿ ಅಲ್ದಾ? ಅದಿರ್ಲಿ. ನಿಮ್ಗ ಕುಂದಾಪ್ರ ಸಂತಿ ಬಗ್ಗೆ ಗೊಯಿತಾ? ಅದ್ ನಿನ್ನೆ ಮೊನ್ನೆ ಸುರುವಾದ್ದಲ್ಲ ಮರ್ರೆ, ಅದ್ ಅಲ್ಲಿನ ಸಂಸ್ಕೃತಿಯೊಟ್ಟಿಗೇ ನಡ್ಕಂಡ್ ಬರ್ತೆ ಇದ್ದಿತ್, ಅದಕ್ಕ ದೊಡ್ಡ ಇತಿಹಾಸನೇ ಇತ್ತಂಬ್ರ್. ಕುಂದಾಪ್ರ ಸಂತಿ ಹುಟ್ಕಂಡ್ ಬಗ್ಗೆ ಒಂದ್ ಕತಿ ಹೇಳ್ತ್ರಂಬ್ರ್ ಹಳೀಕ್ನರ್. ಅದೆಂತ ಕತಿ ಅಂದ್ ಕೇಣ್ತ್ರಿಯಾ? ಸ್ವಾತಂತ್ರ್ಯ ಸಿಗುಕ್ ಮುಂಚೆ ಬ್ರಿಟಿಷ್ರ್ ಆಡಳಿತ ಇತ್ತಲ್ದ ನಮ ದೇಶದಾಂಗ್? ಸುಮಾರ್ 1870-75 ರ ಹೊತ್ನಲ್ಲ್ ಕುಂದಾಪ್ರದಲ್ ಮಾರ್ಷಲ್ ಕೊಯ್ಲೊ ಅಂದಿಕಿ ತಹಸೀಲ್ದಾರ್ ಇದ್ದಿನಂಬ್ರ್, ಅವಂಗ್ ಒಂದಿನ ಹಸಿ ಶುಂಠಿ ಬೇಕಂದೇಳಿ ಆತ್, ಪೇದೆನ್ ಅಂಗ್ಡಿಗ್ ಕಳ್ಸಿಕೊಟ್ನಂಬ್ರ್.…
ಕುಂದಾಪುರ: ಆ ಊರಿನ ದೇವಸ್ಥಾನಕ್ಕೆ ಬರುವ ಸಹಸ್ರ ಸಂಖ್ಯೆಯ ಭಕ್ತಾದಿಗಳ ಗೋಳು ಹೇಳತೀರದು. ದೇವರ ದರ್ಶನ ಪಡೆಯಲು ತುಂಬಿ ಹರಿಯುವ ಕುಬ್ಜ ನದಿಯಲ್ಲಿ ಮರದ ಕಾಲುಸಂಕ ದಾಟಿ ನಡೆಯುವುದಲ್ಲದೇ, ದುರಸ್ತಿಯಾಗದ ಕಚ್ಚಾ ರಸ್ತೆಯಲ್ಲಿ ಕೆಸರು ಎರೆಚಿಕೊಂಡು ಸಾಗಬೇಕಾದ ಅನಿವಾರ್ಯತೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಆಜ್ರಿ ಚೋನಮನೆ ಶ್ರೀ ಶನೀಶ್ವರ ದೇವಸ್ಥಾನ ಹಾಗೂ ಕಮಲಶಿಲೆಗೆ ಹತ್ತಿರದಿಂದ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವು ಸಂಪೂರ್ಣ ಹದಗೆಟ್ಟಿದ್ದು ವ್ಯವಸ್ಥೆಯಲ್ಲಿನ ಲೋಪಕ್ಕೆ ಹಿಡಿದ ಕೈಗನ್ನಡಿಯಂತಿದೆ. ಶನೀಶ್ವರ ದೇವಸ್ಥಾನಕ್ಕೆ ಹೋಗಲು ಆಜ್ರಿ ಬಸ್ಸು ನಿಲ್ದಾಣದಿಂದ 2-3 ಕೀ.ಮೀ ವಾಹನ ಇಲ್ಲವೇ ನಡೆದುಕೊಂಡು ಸಾಗಬೇಕು. ವಾಹನದ ಮೂಲಕ ಕಿ.ಮೀ ದೂರ ಸಾಗಿ ಬಂದರೂ ಮುಂದೆ ಸುಮಾರು 200 ಮೀ ದೂರ ತೆರಳಲು ಕೆಸರು ತುಂಬಿದ ದಾರಿಯಲ್ಲಿ ಹರಸಾಹಸ ಪಡಲೇಬೇಕು. ಅಲ್ಲಿಂದ ದೇವಸ್ಥಾನಕ್ಕೆ ತಲುಪಲು ಕಬ್ಜಾ ನದಿಯನ್ನು 100 ಮೀ ಉದ್ದದ ಅಪಾಯಕಾರಿ ಮರದ ಸೇತುವೆಯ ಮೂಲಕವೇ ದಾಟಿ ನಡೆಯಬೇಕು. ದೇವಸ್ಥಾನ…
ಕುಂದಾಪುರ: ಶೈಕ್ಷಣಿಕ ಪ್ರಗತಿಯೆನ್ನುವುದು ಶೇಕಡಾ 100ರಷ್ಟು ಫಲಿತಾಂಶ ದಾಖಲಾತಿಗೆ ಮಾತ್ರ ಸೀಮಿತವಾಗಿರದೇ ಮಕ್ಕಳಲ್ಲಿ ಪರಿಪೂರ್ಣತೆ ಹಾಗೂ ವ್ಯಕ್ತಿತ್ವದ ಬೆಳವಣಿಗೆ ಪೂರಕವಾಗಿರಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಎಚ್. ಶಾಂತರಾಮ್ ಹೇಳಿದರು ಅವರು ಕೋಡಿ ಬ್ಯಾರಿಸ್ ಕಾಲೇಜಿನಲ್ಲಿ ಮರುನಿರ್ಮಾಣಗೊಂಡ ಬೀಹೈವ್ ಕನ್ವೆನ್‌ಶನ್ ಹಾಲ್ ಉದ್ಘಾಟಿಸಿ ಬಳಿಕ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ಶಿಕ್ಷಣದಿಂದ ಸ್ವಾವಲಂಬಿಗಳಾಗಿ ಬೆಳೆಯಬೇಕು. ಜೀವನದಲ್ಲಿ ನೈತಿಕತೆ ಹಾಗೂ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದವರು ನುಡಿದರು ವಿಶೇಷವಾಗಿ ಉಪಸ್ಥಿತರಿದ್ದ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬುಸ್ಸಲಾಮ್ ಪುತ್ತಿಗೆ ಮಾತನಾಡಿ, ಈ ಸುಂದರ ಕಡಲ ತಡಿಯ ವಾತವರಣ ಮನುಷ್ಯನಿಗೆ ಜೀವಂತಿಕೆ ನೀಡುತ್ತದೆ. ವಿದ್ಯೆ ಮಾತ್ರ ಗೌರವಕ್ಕೆ ಮಾನದಂಡವಲ್ಲ, ಒಳ್ಳೆಯ ಶಿಕ್ಷಣ, ಜ್ಞಾನ ಜೊತೆಗೆ ಕೌಶಲ್ಯಗಳನ್ನು ನೀಡುವುದರಿಂದ ವಿದ್ಯಾರ್ಥಿಯನ್ನು ಮನುಷ್ಯನನ್ನಾಗಿ ರೂಪಿಸಬಹುದು. ಮಗುವಿನ ಚಾರಿತ್ಯ ನಿರ್ಮಾಣದಲ್ಲಿ ಪೋಷಕರು ಹಾಗೂ ಶಿಕ್ಷಕರು ಕಾಳಜಿ ವಹಿಸಬೇಕಾಗಿದೆ ಎಂದರು. ಬ್ಯಾರೀಸ್ ಶಿಕ್ಷಣ…
