ಕುಂದಾಪುರ: ಇಲ್ಲಿನ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಮೃತಾ ಜಿ. ನಾಯ್ಕ್ ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸುವ(592) ಮೂಲಕ ಉಡುಪಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಕುಂದಾಪುರ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಜಿ.ಬಿ. ನಾಯ್ಕ್ ಹಾಗೂ ಗಾಯತ್ರಿ ನಾಯ್ಕ್ ದಂಪತಿಯ ಪುತ್ರಿಯಾಗಿರುವ ನಮೃತಾ ಮೂಲತಃ ಬೈಂದೂರಿನವರಾಗಿದ್ದು ಪ್ರಸ್ತುತ ಕುಂದಾಪುರ ಚಿಕನ್ ಸಾಲ್ ರಸ್ತೆಯಲ್ಲಿನ ನಿವಾಸದಲ್ಲಿ ತನ್ನ ಅಜ್ಜಿಯಯೊಂದಿಗೆ ವಾಸವಾಗಿದ್ದಾರೆ. ಈಕೆಯ ತಂದೆ ಗೋವಾದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು ತಾಯಿಯೂ ಅವರೊಂದಿಗೆ ನೆಲೆಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವ ನಮೃತಾ, ತನ್ನ ತಂದೆ ತಾಯಿ ಮುಖ್ಯವಾಗಿ ಅಜ್ಜಿಯ ನಿರಂತರ ಪ್ರೋತ್ಸಾಹ ತನ್ನನ್ನು ಕಲಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿತ್ತು ಎಂದಿದ್ದಾರಲ್ಲದೇ, ಕುಂದಾಪುರ ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜಿನ ತನ್ನ ಶಿಕ್ಷಕರ ಸಹಕಾರದಿಂದಾಗಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು…
Author: Editor Desk
ತ್ರಾಸಿ: ಗಂಗೊಳ್ಳಿಯಿಂದ ಮದ್ರಾಸಿಗೆ ತೆರಳಬೇಕಿದ್ದ ಮೀನು ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಕಡಲ ಕಿನಾರೆಯ ಬಳಿ ಸಂಭವಿಸಿದೆ. ಗಂಗೊಳ್ಳಿಯಿಂದ ಮದ್ರಾಸಿಗೆ ತೆರಳಲು ಬೆಳಿಗ್ಗೆ 6ಗಂಟೆಯ ಸುಮಾರಿಗೆ ಲೋಡ್ ಮಾಡಿ ಹೊರಟಿದ್ದ ಮೀನು ಲಾರಿಯು ಮದ್ರಾಸಿಗೆ ಕುಂದಾಪುರ ಮಾರ್ಗವಾಗಿ ತೆರಳಬೇಕಿತ್ತು. ಬದಲಿ ಚಾಲಕನನ್ನು ಕರೆತರುವ ಸಲುವಾಗಿ ಮರವಂತೆ ಮಾರ್ಗವಾಗಿ ಲಾರಿಯನ್ನು ತರಲಾಗಿತ್ತು ಎನ್ನಲಾಗಿದ್ದು ದುರದೃಷ್ಟವಷಾತ್ ಈ ಅವಘಡ ಸಂಭವಿಸಿದೆ. ಲಾರಿ ಪಲ್ಟಿಯಾಗಿ ಕಮರಿಗೆ ಬಿದ್ದಿತ್ತು. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಂಗೊಳ್ಳಿಯ ಮಹೇಶ್ ಅವರಿಗೆ ಸೇರಿದ ಮೀನು ಲಾರಿಯನ್ನು ಸಂಜೆಯ ವೇಳೆಗೆ ಎರಡು ಕ್ರೇನ್ ಬಳಸಿ ಮೇಲೆತ್ತಲಾಯಿತು
ಕೊಲ್ಲೂರು: ಇಲ್ಲಿನ ಹಾಲ್ಕಲ್ನ ಆನೆಝರಿಯ ಸಮೀಪ ಬೈಕ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ನಡೆದ ಅಪಘಾತದಲ್ಲಿ ಟೆಂಪೋ ಟ್ರಾವೆಲ್ ಚಾಲಕನ ನಿಯಂತ್ರಣ ತಪ್ಪಿ 15 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಎರಡೂ ವಾಹನದಲ್ಲಿದ್ದ 7 ಮಂದಿ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಕೊಲ್ಲೂರಿನ ಶ್ರೀ ದೇವರ ದರ್ಶನ ಮುಗಿಸಿದ ಒಂದೇ ಕುಟುಂಬದ 15 ಮಂದಿ ಸದಸ್ಯರು ಟೆಂಪೋ ಟ್ರಾವೆಲ್ ನಲ್ಲಿ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಆನೆಝರಿಯ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಬೈಕ್ಗೆ ಬಡಿದ ಪರಿಣಾಮ ಟೆಂಪೋ ಆಳದ ಕಂದಕಕ್ಕೆ ಬಿತ್ತು. ಟೆಂಪೋ ಟ್ರಾವೆಲ್ಸ್ನಲ್ಲಿದ್ದ ಪ್ರಯಾಣಿಕರಾದ ಗಾಯಾಳುಗಳು ಲಿಂಗಪ್ಪ ಆಚಾರಿ (52. ವ.), ಚಂದ್ರಾವತಿ ಆಚಾರಿ (42. ವ.) ಎಂದು ತಿಳಿದುಬಂದಿದೆ. ಬೈಕ್ ಸವಾರರಾದ ಸತ್ಯನಾರಾಯಣ ಗಾಣಿಗ ಹಾಗೂ ರಂಜನಿ ಗಾಯಗೊಂಡು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ
ಕೋಟ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಬ್ರಹ್ಮಾವರ ಕ್ರಾಸ್ಲ್ಯಾಂಡ್ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಮೇಘಾ ಶೆಟ್ಟಿ (17) ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಶರಣಾದ ಘಟನೆ ಕೋಟ ಸಮೀಪದ ವಡ್ಡರ್ಸೆ ಯಾಳಕ್ಲುವಿನಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಈಕೆ ಸೋಮವಾರ ಪ್ರಕಟವಾಗುವ ಫಲಿತಾಂಶದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣಗೊಳ್ಳುವ ಭಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಫೇಲ್ ಆಗುತ್ತೇನೆ ಎಂದುಕೊಂಡಿದ್ದ ಈಕೆ 358 ಅಂಕ ಪಡೆದು ಪ್ರಥಮ ದರ್ಜೆಯ ಅಂಚಿನಲ್ಲಿ ಉತ್ತೀರ್ಣಳಾಗಿದ್ದಾಳೆ. ಆದರೆ ಪರೀಕ್ಷೆಯಲ್ಲಿ ಪಾಸಾದರೂ ಅವಸರಗೊಂಡು ಜೀವವನ್ನೇ ಕಳೆದುಕೊಂಡಿದ್ದಾಳೆ. ಮೇಘಾಳ ತಂದೆ ತಾಯಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದು, ಈಕೆ ತನ್ನ ಅಜ್ಜ, ಅಜ್ಜಿ, ಅಕ್ಕನೊಂದಿಗೆ ವಡ್ಡರ್ಸೆಯಲ್ಲಿ ನೆಲೆಸಿದ್ದಳು. ಹಾಸ್ಟೇಲ್ನಲ್ಲಿದ್ದು ಪಿಯುಸಿ ವ್ಯಾಸಂಗ ಮಾಡಿದ್ದಳು. ಕಷ್ಟದಲ್ಲಿಯೇ ಜೀವನ ನಡೆಸಿದ್ದಳು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಇಲ್ಲಿನ ಬೇಲಿಕೇರಿ ಸಮೀಪದ ಸಮುದ್ರ ದಡದಲ್ಲಿ ಶುಕ್ರವಾರ ರಾತ್ರಿ ದಿಕ್ಕು ತಪ್ಪಿ ಸಮುದ್ರದ ತೀರಕ್ಕೆ ಬಂದಿದ್ದ ಬೋಟು ಮರಳು ದಿಣ್ಣೆಗೆ ಢಿಕ್ಕಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮಲ್ಪೆ ಬಂದರಿನಿಂದ ಗಂಗೊಳ್ಳಿ ಬಂದರಿನತ್ತ ಬರುತ್ತಿದ್ದ ಬೋಟು ಗಂಗೊಳ್ಳಿ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿ ಚಲಿಸಿದ ಕಾರಣ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ನಂತರ ಅದನ್ನು ದಡಕ್ಕೆ ತರುವ ಪ್ರಯತ್ನವನ್ನು ನಡೆಸಿ ತ್ತಾದರೂ ಸಾಧ್ಯವಾಗಿರಲಿಲ್ಲ. ನಂತರ ರಾತ್ರಿ ಅಲೆಗಳ ಅಬ್ಬರಕ್ಕೆ ಮರಳು ದಿಣ್ಣೆಗೆ ಬಂದು ಢಿಕ್ಕಿ ಹೊಡೆದಿದೆ. ಬೋಟಿನ ಬಹುಭಾಗ ಹಾನಿಯಾಗಿದ್ದು ಸುಮಾರು ರೂ. 30 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿ ಸಲಾಗಿದೆ. ಬೋಟು ಶಾಂತಾ ಶ್ರೀಯಾನ್ ಅವರಿಗೆ ಸೇರಿದ್ದು, ಮಲ್ಪೆ ಬಂದರಿನಿಂದ ಗಂಗೊಳ್ಳಿಯತ್ತ ಸಾಗುತ್ತಿತ್ತು. ಮರಳಿನಲ್ಲಿ ಹೂತಿದ್ದ ಬೋಟನ್ನು ದಡಕ್ಕೆ ತರಲು ಪ್ರಯತ್ನಪಟ್ಟರೂ ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಷ್ಟ ಸಂಭವಿಸಿದೆ. ದಿಕ್ಕು ತಪ್ಪಿದ ಬೋಟಿನಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ: ತಾರಿಬೇರು ಗ್ರಾಮದ ಗಂಗನಕುಂಬ್ರಿಯ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಆಲೂರು ಗಾಣದಡಿ ನಿವಾಸಿ ಶಂಕರ ದೇವಾಡಿಗ ಅವರ ಪುತ್ರ ಅಕ್ಷಯ ದೇವಾಡಿಗ (16) ಮತ್ತು ಚಿಂತಾಮಣಿಯಲ್ಲಿ ಹೊಟೇಲ್ ಉದ್ಯಮ ನಡೆಸಿಕೊಂಡಿದ್ದ ಆಲೂರು ಮೂಲದ ನರಸಿಂಹ ದೇವಾಡಿಗ ಅವರ ಪುತ್ರ ನವೀನ ದೇವಾಡಿಗ (16) ಮೃತಪಟ್ಟ ಬಾಲಕರು. ಇಬ್ಬರೂ ಒಂದೇ ಕುಟುಂಬದವರಾಗಿದ್ದು, ನವೀನ್ ಸಂಬಂಧಿಕರ ಮದುವೆ ಆರತಕ್ಷತೆ ಹಿನ್ನೆಲೆಯಲ್ಲಿ ಆಲೂರಿನ ತನ್ನ ಅಜ್ಜ ಬಚ್ಚು ದೇವಾಡಿಗರ ಮನೆಗೆ ಬಂದಿದ್ದ. ರವಿವಾರ ಮಧ್ಯಾಹ್ನ ತ್ರಾಸಿಯಲ್ಲಿ ನಡೆಯಲಿದ್ದ ಈ ಕಾರ್ಯಕ್ರಮಕ್ಕೆ ಹೊರಧಿಡುವ ಸಿದ್ಧತೆಯಲ್ಲಿದ್ದ ಈ ಬಾಲಕರು ನೆರೆಯ ಗೆಳೆಯರೊಂದಿಗೆ ಬೆಳಗ್ಗೆ ಸ್ನಾನ ಮಾಡಲೆಂದು ಹೊಳೆಗೆ ಹೋಗಿದ್ದರು. ಈ ಸಂದರ್ಭ ದುರಂತ ಸಂಭವಿಧಿಸಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲೆತ್ತಿದರೂ ಜೀವ ಉಳಿಯಲಿಲ್ಲ ಅಕ್ಷಯ ಮತ್ತು ನವೀನ್ ಸೇರಿದಂತೆ ಐದಾರು ಮಕ್ಕಳು ಒಟ್ಟಾಗಿ ಹೊಳೆಗೆ ಸ್ನಾನಕ್ಕೆ ಹೋಗಿದ್ದು,…
ಗಂಗೊಳ್ಳಿ: ಮಾನವಜನ್ಮವನ್ನು ಸತ್ಕರ್ಮಗಳಿಗೆ ಬಳಸಿಕೊಳ್ಳ ಬೇಕು. ನಿರಂತರ ದೇವರ ಅರ್ಚನೆ, ಪೂಜೆ, ಉಪಾಸನೆಗಳನ್ನು ನಿಷ್ಠೆ, ಭಕ್ತಿಯಿಂದ ಮಾಡಬೇಕು. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯ ಪ್ರೇಮ, ಆದರ ಜಾಗೃತ ಗೊಳ್ಳಲು, ಸಮಾಜದಲ್ಲಿ ಸಂಘಟನ ಶಕ್ತಿ ಕೇಂದ್ರೀಕೃತಗೊಳ್ಳಲು ದೇಗುಲ ಗಳು ಸಹಕಾರಿ. ದೇವಸ್ಥಾನಗಳ ಮೂಲಕ ಉತ್ತಮ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದಾನ, ಸೇವಾ ಮನೋಭಾವದಿಂದ ಸಮಾಜ ಅಭಿವೃದ್ಧಿಯಾಗುತ್ತದೆ, ತ್ಯಾಗದಿಂದ ಸಮಾಜದಲ್ಲಿ ವಿಫುಲತೆ, ವಿಶಾಲತೆದೊರೆಯುತ್ತದೆ. ನಿನಾದ ಸಂಸ್ಥೆ ವತಿಯಿಂದ ನಡೆಸಲಾದ ಕಾರ್ಯ ಕ್ರಮಗಳು ಅಭಿಮಾನ ಪೂರ್ವಕ ವಾದುದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್ ವಿದ್ಯಾರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಅವರು ಗಂಗೊಳ್ಳಿಯ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮತ್ ಸುಧೀಂದ್ರ ತೀರ್ಥ ಸಭಾ ವೇದಿಕೆಯಲ್ಲಿ ಜರಗಿದ ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಆಶೀರ್ವಚನ ನೀಡಿದ ಶ್ರೀ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ತೀರ್ಥ ಸ್ವಾಮೀಜಿ, ಕಲಿಯುಗದಲ್ಲಿ ಮನಪೂರ್ವಕವಾಗಿ…
ಕುಂದಾಪುರ: ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 2014-15ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 88 ವಿದ್ಯಾರ್ಥಿಗಳು ಹಾಜರಾಗಿದ್ದು 82 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.93.18ಫಲಿತಾಂಶ ದಾಖಲಾಗಿದೆ. 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 57 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ತಿಳಿಸಿದ್ದಾರೆ.
ಕುಂದಾಪುರ: ಈ ವರ್ಷದ ಶೈಕ್ಷಣಿ ಅವಧಿಯಿಂದ ಶಾಲಾ, ಕಾಲೇಜು, ಮತ್ತು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕೆಂದು ಭಾತರ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕುಂದಾಪುರ ತಾಲೂಕು ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ವಿದ್ಯಾರ್ಥಿ ಸಂಘದ ಚುನಾವಣೆಯ ಅಗತ್ಯತೆಯ ಕುರಿತು ಕಾಲೇಜು ಮತ್ತು ವಿ.ವಿಗಳಲ್ಲಿ ಮುಂಬರುವ ದಿನಗಳಲ್ಲಿ ಅಭಿಯಾನ ನಡೆಸಲು ಎಸ್.ಎಫ್.ಐ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಎಸ್.ಎಫ್.ಐ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯವನ್ನು ತೆಗೆದು ಹಾಕಲು ಕೇಂದ್ರದಲ್ಲಿ ಎನ್.ಡಿ.ಎ ತೋರಿದ ಆಸಕ್ತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಸ್.ಎಮ್ ಕೃಷ್ಣರವರ ಕಾಂಗ್ರೆಸ್ ಸರ್ಕಾರ 2002 ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿಲ್ಲಿಸಿತು. ಅದರ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಕೆಲಸ ರಾಜ್ಯದಲ್ಲಿಯೂ ಆರಂಭವಾಯಿತು. ಕಾಂಗ್ರೇಸ್ ಬಿಜೆಪಿಗಳ ವಿದ್ಯಾರ್ಥಿ ಸಮುದಾಯಕ್ಕೆ ಮಾಡಿದ ದ್ರೋಹದಿಂದಾಗಿ ವಿದ್ಯಾರ್ಥಿ ಪ್ರಾತಿನಿಧ್ಯ ಸಿಗದೆ ಇರುವ ಪರಿಣಾಮವಾಗಿ ವಿವಿಗಳಲ್ಲಿ ಶುಲ್ಕ ಏರಿಕೆ ವ್ಯಾಪಕ ಭ್ರಷ್ಟಚಾರ ನಡೆದು ದಿವಾಳಿ ಅಂಚಿನಲ್ಲಿವೆ. ಸಮಾಜದ ಪ್ರಗತಿಯಲ್ಲಿ ವಿದ್ಯಾರ್ಥಿ-ಯುವಜನರು ತೊಡಗದಂತೆ…
ಮರವಂತೆ: ಕಳೆದ ಹದಿನೈದು ವರ್ಷಗಳಿಂದ ಮರವಂತೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿರುವ ಎಸ್. ಜನಾರ್ದನ ಅಭಿಮಾನಿಗಳ ಬಲವಂತದ ಹೊರತಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ವಯೋಮಾನ ಬಯಸುವ ವಿಶ್ರಾಂತಿ ಮತ್ತು ಅನ್ಯರಿಗೆ ಅವಕಾಶ ಕಲ್ಪಿಸುವ ಅಗತ್ಯ ಮನಗಂಡು ಅವರು ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎರಡು, ಮೂರು ರಾಜಕೀಯ ಪಕ್ಷಗಳ ಬೆಂಬಲಿತ ಸದಸ್ಯರಿಂದ ಕೂಡಿದ್ದ ಮರವಂತೆ ಗ್ರಾಮ ಪಂಚಾಯತ್ ಹದಿನೈದು ವರ್ಷಗಳುದ್ದಕ್ಕೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ರಹಿತವಾಗಿ ಕೆಲಸಮಾಡಿದೆ. ಎಲ್ಲ ಪಕ್ಷಗಳ ಮುಖಂಡರೊಂದಿಗೆ, ಉನ್ನತ ಅಧಿಕಾರಿಗಳೊಂದಿಗೆ ಸಂಬಂಧ ಇರಿಸಿಕೊಂಡು, ಅವರಿಂದ ಅಗತ್ಯವಿರುವ ನೆರವು ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮವಹಿಸಿ ದುಡಿದಿದೆ. ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ, ಅದರ ಆಕರಗಳನ್ನು ಯೋಜನೆ ತಯಾರಿ ಮತ್ತು ಫಲಾನುಭವಿಗಳ ಆಯ್ಕೆಗೆ ಆಧಾರವಾಗಿರಿಸಿಕೊಂಡಿದೆ. ಸಮುದಾಯದ ವಂತಿಗೆ ಸಂಗ್ರಹಿಸಿ ಸ್ವಚ್ಛಗ್ರಾಮ ಮತ್ತು ಸ್ವಜಲಧಾರಾ ಯೋಜನೆ ಅನುಷ್ಠಾನಿಸಿದೆ. ಗ್ರಾಮದ ಎಲ್ಲ…
