ಕುಂದಾಪ್ರ ಡಾಟ್ ಕಾಂ ಲೇಖನ. ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಕೋಟೇಶ್ವರ ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇಲ್ಲಿಯ ಇತಿಹಾಸಕ್ಕಿಂತ ಪುರಾಣ ಹೆಚ್ಚು ಆಕರ್ಷಕವಾದುದು. ಪರಶುರಾಮ ಸೃಷ್ಟಿಯ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದೆ. ಸಹ್ಯಾದ್ರಿಯ ಪರಶುರಾಮ ಕ್ಷೇತ್ರದಲ್ಲಿ ನೂರು ಪವಿತ್ರ ತೀರ್ಥಗಳೂ ಎಂಬತ್ತು ಪುಣ್ಯ ಕ್ಷೇತ್ರಗಳೂ ಇವೆ. ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರನಾರಾಯಣ, ಗೋಕರ್ಣ ಮತ್ತು ಕೊಲ್ಲೂರು ಈ ಏಳು ಕ್ಷೇತ್ರಗಳು ಮೋಕ್ಷದಾಯಕ ಪುಣ್ಯ ಸ್ಥಳಗಳೆಂದು ಪರಿಗಣಿಸಲ್ಪಟ್ಟಿವೆ. ಉಡುಪಿ ಜಿಲ್ಲೆಯ ಉತ್ತರ ತುದಿಯ ತಾಲೂಕು ಕೇಂದ್ರವಾದ ಕುಂದಾಪುರದಿಂದ ಕೋಟೇಶ್ವರವು 4 ಕಿ.ಮೀ. ದಕ್ಷಿಣದಲ್ಲಿದೆ. ಈ ಕ್ಷೇತ್ರದ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಕುಂದಾಪುರ, ಪೂರ್ವದಲ್ಲಿ ಕೋಣಿ-ಕಟ್ಕೆರೆ ಹಾಗೂ ದಕ್ಷಿಣದಲ್ಲಿ ಕುಂಭಾಸಿಯ ಭೌಗೋಳಿಕ ಮೇರೆಗಳಿವೆ. ಪುರಾಣಗಳಲ್ಲಿ ಕೋಟೇಶ್ವರವನ್ನು ಧ್ವಜಪುರವೆಂದು ಕರೆಯಲಾಗಿದೆ. ಈಶ್ವರನು ತ್ರಿಪುರಾರಿ. ಕೋಟೇಶ್ವರವೂ ಸಮೀಪದ ತ್ರಿಪುರಗಳನ್ನು ಗೆದ್ದು ಅಲ್ಲಿಂದ…
Author: Editor Desk
ಸತೀಶ್ ಚಪ್ಪರಿಕೆ. ಕುಂದಾಪ್ರ ಡಾಟ್ ಕಾಂ ಲೇಖನ | ನನ್ನೆದೆಗೆ ಬೆಂಕಿ ಬಿದ್ದಿದೆ. ಎದೆಯೊಳಗಿನ ಗೂಡಲ್ಲಿರುವ ಹೃದಯ ಹೊತ್ತಿ ಉರಿಯುತ್ತಿದೆ. ನನ್ನೊಬ್ಬನ ಹೃದಯ ಮಾತ್ರವಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ‘ಮನುಷ್ಯ’ರ ಹೃದಯ ಕೂಡ ಈಗ ಧಗಧಗಿಸುತ್ತಿದೆ. ಏಕೆಂದರೆ, ನಮ್ಮ ದಕ್ಷಿಣ ಕನ್ನಡದ ಕುರಿತು ಕೇಳಿ ಬರುತ್ತಿರುವ ಮಾತುಗಳಿಂದಾಗಿ. ಆಡಳಿತಾತ್ಮಕ ನೆಲೆಯಲ್ಲಿ ಅವಿಭಜಿತ ಜಿಲ್ಲೆಯೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡಾಗಿ ಹೋಳಾಗಿದ್ದರೂ, ನಮ್ಮೆಲ್ಲರ ಪಾಲಿಗೆ ಅದಿನ್ನೂ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆ ಕೇವಲ ಒಂದು ಭೂಮಿ ತುಂಡಲ್ಲ. ಬದಲಾಗಿ ನಮ್ಮೆಲ್ಲರ ಬದುಕನ್ನು ರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನೆಲೆ. ದಕ್ಷಿಣ ಕನ್ನಡ ರಾಜ್ಯದ ಅತಿ ಹೆಚ್ಚು ವಿದ್ಯಾವಂತರ ನೆಲೆ. ಆದರೆ, ವಿದ್ಯೆ ಇದ್ದ ಕೂಡಲೇ ಪ್ರಜ್ಞೆ ಇರಬೇಕಿಂದಿಲ್ಲ ಎಂದು ದಕ್ಷಿಣ ಕನ್ನಡದ ಬಗ್ಗೆ ರಾಜ್ಯದ ಒಬ್ಬ ‘ಪ್ರಜ್ಞಾವಂತ’ ವ್ಯಕ್ತಿ ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ ನೋಡಿದಾಗ ನಗಬೇಕೋ? ಅಳಬೇಕೋ? ಎಂದು ಅರ್ಥವಾಗಲಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತ…
ಕುಂದಾಪ್ರ ಡಾಟ್ ಕಾಂ ಲೇಖನ. ಮೊದಲಿಂದ್ಲೂ ನಮ್ಮೂರ್ ಮಂದಿ ಮುಂಬೈಗೆ ಹೋಟ್ಲ್ ಕೆಲ್ಸ, ಬ್ಯಾಂಕ್, ಕಛೇರಿ ಕೆಲ್ಸ ಅಂದೇಳಿ ಎಷ್ಟ್ ಜನ ಹೋಯಿರ್ ಗೊತಿತಾ? ಹಾಗಂದ್ಹೇಳಿ ಇವ್ರೆಲ್ಲಾ ಪೂರಾ ಕಲ್ತ್ ಊರ್ ಬಿಟ್ಟರಲ್ಲ. ಅಲ್ಲ್ ಹೋಯಿ ಕಲ್ತ್ ಕೆಲ್ಸದಾಗೆ ಬಡ್ತಿ ತಕಂಡರ್. ಕೆಲವರ್ ಸ್ವಂತ ಅಂಗ್ಡಿ, ಹೋಟ್ಲ ವ್ಯಾಪಾರ ಮಾಡ್ದರ್. ಊರ್ ಬಿಟ್ರೂ ಇಲ್ಲಿ ಜನರನ್ನ ಮರ್ತರಲ್ಲಕಾಣಿ, ಆದ್ ಇವ್ರ ದೊಡ್ಗುಣ. ಇಲ್ಲಿ ಶಾಲೆ, ದೈದ್ ಮನಿ, ದೇವಸ್ಥಾನ ಯಾವ್ದಕ್ಕೇ ಆದ್ರೂ ದುಡ್ಡ್ ಕೊಡ್ತ್ರ್. ಅವ್ರಿಂದ ಎಷ್ಟ್ ಕಡೆ ಜೀರ್ಣೋದ್ಧಾರ ಆಯ್ತ್! ಇನ್ನ್ ಪೈಕಿಯರ್ ಯಾರೇ ಇರ್ಲಿ- ಅವ್ರ ಕಷ್ಟಕ್ಕೆ ಸಹಾಯ ಮಾಡ್ತ್ರ್. ಬಿಟ್ ಕೊಡೂದಿಲ್ಲೆ. ದೂರಿದ್ರು ಹತ್ರ ಇದ್ಹಾಂಗೆ. ಈ ಬ್ಯಾಸ್ಗಿ ರಜೆ ಬಂದ್ರೆ ಇವ್ರೆಲ್ಲ ‘ಒಂದ್ಸಾರಿ ಊರಿಗ್ ಹೋಯಿ ಬಪ್ಪೋ’ ಅಂದ್ಕ ಬಪ್ಪ್ ರಿವಾಜ್. ಈಗಳ್ ನಮ್ಮೂರ ಬಸ್, ಅಂಗ್ಡಿಹೋಟ್ಲ್, ಹಬ್ಬ, ಮಡಿ ಚಪ್ರ ಎಲ್ಲ್ ಕಂಡ್ರೂ ಜಿಗಿ ಗುಟ್ಟೂ ಜನ. ಇವ್ರ ಮಕ್ಳಿಗೆ ಎಲ್ಲಾ ಭಾಷಿಯೂ ಬತ್ತತ್.…
ಏಪ್ರಿಲ್ 10 ಆರ್ ಸಾಕ್ ಮಕ್ಕಳಿಗ್ ಖುಷಿಯೋ ಖುಷಿ. ಪಾಸ್ ಪೈಲ್ ಆ ದಿನ ಗೊತ್ತಾತ್ತ, ಕಡಿಕ್ ರಜಿ ಸಿಕ್ಕತ್ತಲೆ. ಏಪ್ರಿಲ್ 10ರ ಮಧ್ಯಾನು ಬಂದ್ ಮಕ್ಕಳ್ ಶಾಲಿ ಚೀಲು ಬಿಸಾಕ್ರೆ ಕಡಿಕ್ ಜೂನ್ 1ಕ್ಕೆ ಚೀಲ ಮುಟ್ಟೂದ್. ಅವೇನ್ ಮನಿ ಬದೀಯಂಗ್ ಇಪ್ಪೋದಿಲ್ಲಾ ಬಿಡಿ. ಮೀಯೂಕ್ ಹೊಳಿ ಬದೀಗ್ ಹೋಪುದ್. ಅಲ್ಲ್ ಎಲ್ಲಾ ಒಟ್ಟಾಯ್ಕಂಡ್ ಮೀಯೂದ್, ಕಾಣಿ ಹಿಡುದ್, ಹೊಡ್ಕಂಬುದ್, ಬಡ್ಕಂಬುದ್ ಕಡಿಕ್ ಮನಿಗ್ ಬಂದ್ ಅಬ್ಬಿ ಹತ್ರ ಹೇಳಿ ಮರ್ಕುದ್. ಮಕ್ಕಳಿಗ್ ರಜಿ ಸಿಕ್ಕುಕು ಗೋಯ್ಬೀಜು, ಮಾವಿನ್ಹಣ್ಣು, ಹೆಲಸಿನ್ಹಣ್ಣು ಆಪುಕು ಸರಿಯಾತ್ತೆ. ಬೆಳಗ್ಗೆ ಮನಿ ಬಿಟ್ಟ್ ಮಕ್ಕಳ್ ಬಪ್ಪುದ್ ಸಾಯಂಕಾಲವೇ. ಮಧ್ಯಾಹ್ನ ಊಟುಗೀಟು ಮಾಡುದಿಲ್ಲಾ. ಗೋಯ್ ಹಣ್ಣ್, ಮಾವಿನ್ ಹಣ್ಣ್, ಹಲಸಿನ ಹಣ್ಣ್ ತಿಂದ್ಕಂಡ್ ಇರ್ತೋ. ಅವರ ಇವರ್ ಮನಿ ತೋಟದಂಗ್ ಎಂತಾ ಹಣ್ಣ್ ಬಿಟ್ಟಿತ್ ಕಾಂಬುದ್ ಕದ್ದಕಂಡ್ ತಿಂಬುದ್ ಅವರ್ ಮನೆಯವರ್ ಬೆರಸ್ಕಂಡ್ ಬಂದ್ರ್ ಎದ್ದನೋ, ಬಿದ್ದನೋ ಅಂಬಾಂಗೆ ಓಡ್ ಬಪ್ಪುದ್. ಬೆಂಗಳೂರ್ ಇಂದ್ ಊರಿಗ್ ಬಂದ್…
ಕರಾವಳಿ ಜಿಲ್ಲೆಯ ರಾಜಕಾರಣದಲ್ಲಿ ಅಪರೂಪದ ರಾಜಕೀಯ ಚಾಣಾಕ್ಷನಾಗಿ ಸುದೀರ್ಘ 56 ವರ್ಷಗಳ ಕಾಲ ತೊಡಗಿಸಿಕೊಂಡು, ತಾನು ಗುರುತಿಸಿಕೊಂಡ ಪಕ್ಷದಲ್ಲಿ ನಿಷ್ಠೆ ಹಾಗೂ ಬದ್ಧತೆಯನ್ನು ತೋರಿಸಿ, ಪಕ್ಷಕ್ಕೆ ತನ್ನ ಅವಶ್ಯಕತೆಯಿಲ್ಲ ಎಂದೆನಿಸಿದಾಗ ರಾಜಕೀಯದಿಂದಲೇ ನಿವೃತ್ತಿ ಪಡೆದ ಅಪರೂಪದ ಮುತ್ಸದ್ದಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ. ಅವರು ರಾಜಕೀಯದಲ್ಲಿ ಮಾತ್ರ ತೊಡಗಿಸಿಕೊಳ್ಳದೇ ಕೃಷಿ, ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದವರು. 87ರ ವಯಸ್ಸಿನಲ್ಲಿಯೂ ಯುವರನ್ನೂ ನಾಚಿಸುವಂತಹ ಉತ್ಸಹ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಮನ್ನುಗ್ಗುತ್ತಿರುವ ಅವರು ಇದೀಗ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ತನ್ನೂರಿನ ಸರ್ವತೋಮುಖ ಅಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಕುಂದಾಪುರ ತಾಲೂಕು ಅಮಾಸೆಬೈಲು ಕೃಷಿಕ ಕುಟುಂಬದಲ್ಲಿ ಸ್ವಾತಂತ್ರ್ಯಹೋರಾಟಗಾರ ಕೃಷ್ಣರಾಯ ಕೊಡ್ಗಿ ಅವರ ಮಗನಾಗಿ 1929ರ ಅಕ್ಟೋಬರ್ 1 ರಂದು ಜನಿಸಿದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಕಾನೂನು ಪದವಿ ಪಡೆದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸ ರಾವ್ ಅವರೊಂದಿಗೆ ಸ್ವಲ್ಪ ಸಮಯ ವಕೀಲರಾಗಿ ಕೆಲಸ ನಿರ್ವಹಿಸಿದರು. ಬಳಿಕ ಕೃಷಿಯಲ್ಲಿಯೇ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡವರು. ತಾಲೂಕು ಬೋರ್ಡ್…
ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ ಕರಾವಳಿಯ ಯಕ್ಷರಂಗದ ಬಡಗುತಿಟ್ಟಿನ ಕ್ಷೇತ್ರವನ್ನು ಆಳಿದ ದೀಮಂತ ದಿಗ್ಗಜರುಗಳ ಭವ್ಯ ಪರಂಪರೆಯೇ ನಮ್ಮ ನಡುವೆ ಇದೆ. ಅದೀಗ ಇತಿಹಾಸ ಹೌದು. ಆ ಇತಿಹಾಸದ ಪುಟಗಳಿಗೆ ಮತ್ತೆ ಇನ್ನಷ್ಟು ಸಾಧನೆಗಳನ್ನು ಸೇರಿಸಲು ಯಕ್ಷರಂಗದಲ್ಲಿ ಸಾಧನೆಯಿಂದ ಬೆಳೆಯುತ್ತಿರುವ ಕಲಾವಿದರು ನೂರಾರು ಮಂದಿ ನಮ್ಮ ಮುಂದೆ ಕಾಣಸಿಗುತ್ತಾರೆ. ಅದರಲ್ಲೂ ಯುವ ಕಲಾವಿದರ ಸಾಲಿನಲ್ಲಿ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಕೂಡ ಒರ್ವರು. 6 ವರ್ಷದ ಎಳೆ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ತನ್ನದೇ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ಕುಂದಾಪುರ ತಾಲೂಕಿನ ಮಂದಾರ್ತಿ ಗ್ರಾಮದ ತಂತ್ರಾಡಿಯ ಗಂಗಾಧರ ಶೆಟ್ಟಿಗಾರ್ ಮತ್ತು ಸುಲೋಚನಾ ದಂಪತಿಯ 3 ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. 20ನೇ ವಯಸಿನಲ್ಲಿಯೇ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್ ಅವರಿಂದ ಪ್ರಾಥಮಿಕ ನೃತ್ಯಾಭ್ಯಾಸವನ್ನು ಅಭ್ಯಾಸ ಮಾಡಿ, ಅನಂತರ ಮಂದಾರ್ತಿ ಕಲಾಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಭ್ಯಾಸವನ್ನು ಪೂರೈಸಿದರು. ಬಳಿಕ ಪ್ರಥಮ ಬಾರಿಗೆ ರಂಗದ ಮೇಲೆ ಮಿಂಚಿದ್ದು…
ನರೇಂದ್ರ ಎಸ್. ಗಂಗೊಳ್ಳಿ | ಕುಂದಾಪ್ರ ಡಾಟ್ ಕಾಂ ಲೇಖನ. ನಿಜ. ಪ್ರತೀ ವರುಷ ಅಕ್ಟೋಬರ್ ಎರಡು ಬರುತ್ತದೆ. ಅಂದು ನಮಗೆ ಗಾಂಧೀಜಿ ನೆನಪಾಗುತ್ತಾರೆ. ಸತ್ಯಾದರ್ಶಗಳ ನೆನಪಾಗುತ್ತದೆ. ಹಾದಿ-ಬೀದಿ ಗಲ್ಲಿಗಳಲ್ಲೆಲ್ಲಾ ಗಾಂಧೀಜಿ ಸತ್ಯ ಅಹಿಂಸೆ ಅಂತೆಲ್ಲಾ ಭಾಷಣ ಸಮಾರಂಭಗಳನ್ನು ಆಯೋಜಿಸಿ ನಾವು ಪಾವನರಾಗಿಬಿಟ್ಟೆವು ಅಂತ ಸಂಭ್ರಮಿಸತೊಡಗುತ್ತೇವೆ. ಅಷ್ಟಾದರೂ ಮಾಡುತ್ತೀವಲ್ಲಾ ಅಂತ ಅಂದುಕೊಂಡು ಸಮಧಾನಪಟ್ಟಕೊಳ್ಳಬಹುದಾ? ಖಂಡಿತಾ ಇಲ್ಲ. ಯಾಕೆಂದರೆ ಎಲ್ಲರಿಗೂ ತಿಳಿದಿರುವ ಹಾಗೆ ಈ ದಿನ ಎನ್ನುವಂತಾದ್ದು ಭಾರತ ದೇಶ ಕಂಡ ಅಪ್ರತಿಮ ಅದ್ಬುತ ನಾಯಕ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಆದರೂ ನಾವು ಅವರಿಗೆ ಸಲ್ಲಿಸುತ್ತಿರುವ ಗೌರವ ಮಾತ್ರ ಏನೇನೂ ಅಲ್ಲ ಅಂತೆನ್ನಿಸಿಬಿಡುತ್ತಿದೆ. ಅದು ನಾವು ಆ ದೇಶಭಕ್ತ ನಾಯಕನಿಗೆ ಮಾಡುತ್ತಿರುವ ಅವಮಾನವಲ್ಲದೆ ಬೇರೇನೂ? ಜನ್ಮದಿನ ಎಂದಲ್ಲ, ಶಾಸ್ತ್ರೀಜಿ ಯಾವ ಕಾಲಕ್ಕೂ ಸಲ್ಲಬಹುದಾದ ಒಂದು ಮೇರು ಆದರ್ಶವನ್ನು ಕೊಟ್ಟುಹೋದವರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆಗೆ, ಸಜ್ಜನಿಕೆಗೆ ಒಂದು ಭಾಷ್ಯದಂತಿದ್ದವರು. ಪ್ರಾಮಾಣಿಕತೆಗೆ ಅನ್ವರ್ಥರಾಗಿದ್ದರು. ಧೀರತ್ವಕ್ಕೆ ಸಾಕ್ಷೀರೂಪಿಯಾಗಿ, ಬಹದ್ದೂರ್…
ಗುರು ಬ್ರಹ್ಮ ಗುರು ವಿಷ್ಣು ಗುರುದೆವೋ ಮಹೇಶ್ವರ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈಃ ಶ್ರೀ ಗುರವೇ ನಮಃ ಎದೆಯ ಹಣತೆಯಲ್ಲಿ ಅಕ್ಕರದ ದೀಪ ಹೊತ್ತಿಸಿ ನಮ್ಮಂಥ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ, ಗುರುಸಮಾನರಿಗೆ ಈ ದಿನದ ಶುಭಾಶಯಗಳು ಶಿಕ್ಷಣವೆನ್ನುವುದು ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆ ಆಗಿದೆ. ಇದರಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಅತಿ ಮಹತ್ತ್ವದ್ದು. ಆ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ 5 ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ 5, 1962 ರಿಂದ ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ನೆನಪು: ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888 ನೇ ಇಸವಿಯಲ್ಲಿ ಸೆಪ್ಟೆಂಬರ್ 5 ರಂದು ಈಗಿನ ತಮಿಳ್ನಾಡುವಿನ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮ.…
ಶಂಕರನಾರಾಯಣ: ಹಲವು ದ್ವೀಪಗಳೂ, ನದಿಪಾತ್ರಗಳಿಂದ ಸುತ್ತುವರಿದ ಕುಂದಾಪುರ ತಾಲೂಕು, ಇನ್ನು ಹಲವು ಕಡೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಂಕ ದಾಟಿ ಪೇಟೆ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ಇನ್ನು ಹಲವು ಗ್ರಾಮಗಳಲ್ಲಿ ಜೀವಂತವಾಗಿದೆ. ಮಳೆಗಾಲದಲ್ಲಂತೂ, ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಸಂಕ ದಾಟಿ ಶಾಲೆಗೆ ಹೋಗುವ ದಯನೀಯ ಪರಿಸ್ಥಿತಿ. ಹೌದು. ಹಲವು ವರುಷಗಳ ಬೇಡಿಕೆಯಾದ ಸೌಡ – ಶಂಕರನಾರಾಯಣ ಸೇತುವೆ ಭಾಗ್ಯ ಇನ್ನು ಈ ಭಾಗಕ್ಕೆ ಮರೀಚಿಕೆಯಾಗಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಹಾಗೂ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಮಧ್ಯೆ ಸೌಡ ಎಂಬಲ್ಲಿ ವಾರಾಹಿ ನದಿ ಹರಿಯುತ್ತಿದ್ದು, ಹಿಂದೆ ಇಲ್ಲಿ ದೋಣಿ ಸೌಲಭ್ಯವಿದ್ದು, ಅದೂ ಇಲ್ಲವಾಗಿದೆ. ಜನ್ನಾಡಿಯಿಂದ ಕೇವಲ 3-4 ಕೀ.ಮೀ ಒಳಗೆ ಸೌಡ ಸೇತುವೆಯಾದರೆ ಶಂಕರನಾರಾಯಣ ತಲುಪಬಹುದು, ಈಗ ಸುತ್ತು ಬಳಸಿ ಹಾಲಾಡಿ ಮುಖಾಂತರ 8-10 ಕೀ.ಮೀ ದೂರ ಕ್ರಮಿಸಬೇಕು. ಸೌಡ ಸಂಪರ್ಕ ಸೇತುವೆಯಿಂದ ಪ್ರಯೋಜನಗಳು. ಶಿವಮೊಗ್ಗ ಹಾಗೂ ಸಿದ್ಧಾಪುರ, ಶಂಕರನಾ ರಾಯಣ ಭಾಗದ ಜನರಿಗೆ ಜಿಲ್ಲಾ ಕೇಂದ್ರವಾದ ಉಡುಪಿ ಹಾಗೂ ಕುಂದಾಪುರಕ್ಕೆ ಹೋಗಲು…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ನೂಜಾಡಿ – ಕುಂದಾಪುರ ಬಸ್ ಸಂಚಾರಕ್ಕೆ ಇರುವುದು ಒಂದೇ ಪರ್ಮಿಟ್, ಆದರೆ ಪರವಾನಿಗೆ ಇಲ್ಲದೆಯೇ ಈ ಮಾರ್ಗದಲ್ಲಿ ಓಡುತ್ತಿದೆ ಐದು ಖಾಸಗಿ ಬಸ್ಸು. ಆರ್.ಟಿ.ಓ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳೂ ಗಮನ ಹರಿಸಿಲ್ಲ. ಹೆಚ್ಚು ಕಮ್ಮಿಯಾದರೆ ಬಸ್ಸಿನಲ್ಲಿ ಸಂಚರಿಸುವವರ ಜೀವಗಳಿಗೆ ಹೊಣೆಯಾರು ಎಂಬ ಈ ಭಾಗದ ಜನರ ಪ್ರಶ್ನೆಗೂ ಉತ್ತರ ದೊರೆತಿಲ್ಲ. ನೂಜಾಡಿ ಕುಂದಾಪುರ ಕೆಲವು ವರ್ಷಗಳಿಂದ ಸಾರಿಗೆ ಸಂಪರ್ಕ ಸಮಸ್ಯೆಯಿದ್ದು, ಇರುವ ಬಸ್ನಲ್ಲಿ ನಿಯಮಕ್ಕೂ ಮೀರಿದ ಜನರನ್ನು ತುಂಬಲಾಗುತ್ತದೆ. ಶಾಲಾ ಮಕ್ಕಳು ಬಸ್ಸಿನಲ್ಲಿ ನೇತಾಡಿಕೊಂಡು ಹೋಗಬೇಕಾದ ಸ್ಥಿತಿ. ರಸ್ತೆ ಮಧ್ಯೆ ಪೊಲೀಸರು ನೇತಾಡುಕೊಂಡು ಹೋಗುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಶಾಲಾ ಅವಧಿಯಲ್ಲಿ ಬಸ್ ಹೆಚ್ಚಿಸಲು ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಕುಂದಾಪ್ರ ಡಾಟ್ ಕಾಂ ವರದಿ. ನೂಜಾಡಿ ಕುಂದಾಪುರ ಮಾರ್ಗವಾಗಿ ಸಂಚಾರಕ್ಕೆ ಬಸ್ ಬಿಡುವಂತೆ ಈ ಹಿಂದೆ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕುಂದಾಪುರ ನೂಜಾಡಿ ಮಾರ್ಗದಲ್ಲಿ ರಾಜ್ಯ ಸಾರಿಗೆ ವಾಹನ ಸಂಚಾರಕ್ಕೆ…
