Author: Editor Desk

ಕುಂದಾಪುರ: ಪರೀಕ್ಷೆಯ ಭಯದಿಂದಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಸಿದ್ದಾಪುರ ಬಡಾಬಾಳು ಎಂಬಲ್ಲಿ ಸಂಭವಿಸಿದೆ. ಸಿದ್ಧಾಪುರ ಬಡಾಬಾಳು ನಿವಾಸಿ ಬಿಕಾಂ ವಿದ್ಯಾರ್ಥಿ ಸಂತೋಷ್ ಶ್ಯಾನುಭಾಗ್(20) ಆಕಸ್ಮಿಕವಾಗಿ ಕುಸಿದು ಬಿದ್ದು ಸಾವಿಗೀಡಾದ ವಿದ್ಯಾರ್ಥಿ. ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿರುವ ಸಂತೋಷ್ ಪರೀಕ್ಷೆ ವಿಚಾರದಲ್ಲಿ ಟೆನ್ಸನ್ ಮಾಡಿಕೊಂಡು ಕಳೆದ ಕೆಲವು ದಿನಗಳಿಂದ ಸರಿಯಾಗಿ ಊಟ, ನಿದ್ದೆ ಮಾಡದೆ ರಾತ್ರಿ ಕೂಡ ನಿದ್ದೆಬಿಟ್ಟು ಓದುತ್ತಿದ್ದರು. ಸೋಮವಾರ ರಾತ್ರಿ ಮನೆ ಸಮೀಪದ ನಾಗಬ್ರಹ್ಮ ದೇವಸ್ಥಾನದ ಬಳಿ ಓದಲು ಹೋಗಿದ್ದು ಮನೆಗೆ ವಾಪಸ್ ಬರುತ್ತಿರುವ ವೇಳೆ ಕಾಲು ಜಾರಿ ತೋಡಿನಲ್ಲಿ ಕುಸಿದುಬಿದ್ದಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ತಕ್ಷಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೈಂದೂರು: ಸುರಭಿ ಕಲಾ ಸಂಘ, ಬೈಂದೂರು ಯಸ್ಕೋರ್ಡ್ ಟ್ರಸ್ಟ್ ಮತ್ತು ಸೌಜನ್ಯ ಕಲಾ ಸಂಘ ಇದರ ಸಂಯುಕ್ತಾಶ್ರಯದಲ್ಲಿ ಆಶ್ರಮ ಶಾಲೆಯಲ್ಲಿ ಜರುಗಿದ ಹತ್ತು ದಿನಗಳ ಚಿಣ್ಣರ ಚೈತ್ರೋತ್ಸವ ಬೇಸಿಗೆ ಶಿಬಿರ ಸಮಾಪನಗೊಂಡಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜು ಬೈಂದೂರಿನ ಉಪಪ್ರಾಂಶುಪಾಲೆ ಜ್ಯೋತಿ ಮಾತನಾಡಿ ಬೇಸಿಗೆ ಶಿಬಿರಗಳು ಮಕ್ಕಳ ವಿಕಸನಕ್ಕೆ ಸ್ವಚ್ಚಂದ ಪರಿಸರ ಒದಗಿಸಿ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುವಂತೆ ಮಾಡುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ರಾಯಚೂರು, ಚಿತ್ರ ಕಲಾವಿದ ಗಿರೀಶ ತಗ್ಗರ್ಸೆ, ಮಹೇಶ ಪಲ್ಲಕ್ಕಿ ಉಪಸ್ಥಿತರಿದ್ದರು. ಸುಧಾಕರ ಪಿ. ಸ್ವಾಗತಿಸಿ, ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಶ್ಚಿತಾ ವಂದಿಸಿದರು

Read More

ಬೈಂದೂರು: ಇಲ್ಲಿನ ಕಲಾಸಂಸ್ಥೆ ಸುರಭಿಯ ಆಶ್ರಯದಲ್ಲಿ ಬೈಂದೂರಿನ ಮನ್ಮಹಾರಥೋತ್ಸವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ 6 ಕ್ಕೆ ನಾಲ್ಕು ದಿನಗಳ ಸಾಂಸ್ಕ್ರತಿಕ ವೈಭವ (ರಂಗೋತ್ಸವ – ನೃತ್ಯೋತ್ಸವ – ಯಕ್ಷೋತ್ಸವ – ರಂಗವೈಭವ) ಅನಾವರಣಗೊಳ್ಳಲಿದೆ. ಎಪ್ರಿಲ್ 24ರಂದು ಉಡುಪಿಯ ಕೊಡವೂರಿನ ನೃತ್ಯ ನಿಕೇತನ ಕಲಾತಂಡದಿಂದ ನೃತ್ಯ ಸಿಂಚನ, ಎ.25ರಂದು ಬ್ರಹ್ಮಾವರದ ಭೂಮಿಕಾ ಹಾರಾಡಿ ರಂಗತಂಡದಿಂದ ಅಗ್ನಿ ಲೋಕ ನಾಟಕ, ಎ.26 ರಂದು ಸುರಭಿ ಬೈಂದೂರಿನ ಆಯ್ದ ಹಿರಿಯ ಕಲಾವಿದರಿಂದ ವೀರವೃಷಸೇನ ಯಕ್ಷಗಾನ, ದಿನಾಂಕ ೨೯-೦೪-೨೦೧೫ ರಂದು ನೀನಾಸಂ ಪದವೀಧರರ ರಂಗ ತಂಡ ಥಿಯೇಟರ್ ಸಮುರಾಯ್ ಸಾಗರ ಇವರಿಂದ ಹಸಿದ ಕಲ್ಲುಗಳು ನಾಟಕ ನಡೆಯಲಿದ್ದು, ಹಿರಿಯಪತ್ರಕರ್ತ ಶ್ರೀ ಎಸ್ ಜನಾರ್ಧನ ಮರವಂತೆಯವರ ಸಮಾರೋಪ ನುಡಿಗಳೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಸಿನೆಮಾ ಬ್ಯೂರೋ: ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಇತ್ತೀಚಿನ ತಮಿಳು ಚಲನಚಿತ್ರ ‘ಓ ಕಾದಲ್ ಕಣ್ಮಣಿ’ ವಿಶ್ವಾದದ್ಯಂತ ಬಿಡುಗಡೆಯಾಗಿ ನಾಲ್ಕೇ ದಿನದಲ್ಲಿ 14.73 ಕೋಟಿ ರೂಪಾಯಿ  ಗಳಿಸಿದೆ. ತಮಿಳಿನಲ್ಲಿ ನಿರ್ಮಾಣವಾಗಿರುವ ಹಾಗೂ ತೆಲುಗಿನಲ್ಲಿ ಡಬ್ ಆಗಿರುವ ‘ಓ ಕಾದಲ್ ಕಣ್ಮಣಿ’ಯು ‘ಕಾಂಚನ -2’ ರ ಬಿಡುಗಡೆಯ ಹೊರತಾಗಿಯೂ ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು  ಸೆಳೆದಿದೆ ಎನ್ನಲಾಗಿದೆ. ಮುಂಬೈನಲ್ಲಿ  ಯುವ ಜೋಡಿ ಆದಿ ಮತ್ತು ತಾರಾ ಮದುವೆಗೂ ಮುಂಚಿತವಾಗಿ ಒಟ್ಟಿಗೆ ಬದುಕುವ ಕಥೆಯ ಎಳೆಯನ್ನು ಈ ಸಿನೆಮಾ ಹೊಂದಿದೆ. ದಲ್ಕ್ವೆರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವಿದೇಶಗಳಲ್ಲೂ ಈ ಸಿನೆಮಾ ಒಳ್ಳೆಯ ಹಣ ಗಳಿಸಿದೆ ಎನ್ನಲಾಗಿದೆ.

Read More

ವಂಡ್ಸೆ: ಕರಾವಳಿ ಭಾಗದಲ್ಲಿ ಅಗಾಧವಾದ ಸಂಪನ್ಮೂಲವಿದೆ. ಸ್ವ ಉದ್ಯೋಗ, ಕೃಷಿಗೆ ಪೂರಕವಾದ ಅವಕಾಶಗಳಿವೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬನೆ ಸಾಧಿಸುವುದು ನಮ್ಮ ಆದ್ಯತೆ ಆಗಬೇಕು. ಆ ನಿಟ್ಟಿನಲ್ಲಿ ಧ.ಗ್ರಾ. ಯೋಜನೆ ಸದಾ ಸಹಕಾರ ನೀಡುತ್ತದೆ ಎಂದು ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಆಜ್ರಿ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ವಲಯದ ಮಾರ್ಗ ದರ್ಶನದಲ್ಲಿ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಎದುರುಗಡೆ ನಡೆದ ವಂಡ್ಸೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ 10ನೇ ವರ್ಷದ ವಾರ್ಷಿಕೋತ್ಸವ ವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಧ.ಗ್ರಾ. ಯೋಜನೆಯ ಮೂಲ ಆಶಯ ಪ್ರಗತಿ. ಆಸಕ್ತಿಯಿಂದ ಕೆಲಸ ಮಾಡಿದರೆ ಸಾಧನೆ ಸಾಧ್ಯವಿದೆ. ಸಾಧಿಸುವ ಮನೋಭಾವ ನಮ್ಮಲ್ಲಿ ಜಾಗೃತವಾ ಗಬೇಕು ಎಂದರು. ವಂಡ್ಸೆ ಒಕ್ಕೂಟದ ಅಧ್ಯಕ್ಷೆ ಜಯಂತಿ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಂಡ್ಸೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

Read More

ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆ, ಯಸ್ಕೋರ್ಡ್ ಟ್ರಸ್ಟ್ ಹಾಗೂ ಸೌಜನ್ಯ ಕಲಾ ಸಂಘದ ಆಶ್ರಯದಲ್ಲಿ ಬೈಂದೂರು ಆಶ್ರಮ ಶಾಲೆಯಲ್ಲಿ ಹತ್ತು ದಿನಗಳ ಚಿಣ್ಣರ ಚೈತ್ರೋತ್ಸವ ಬೇಸಿಗೆ ಶಿಬಿರಕ್ಕೆ ಚಾಲನೆ ದೊರೆಯಿತು. ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಉಪನ್ಯಾಸಕರು ಹಿರಿಯ ಕಲಾವಿದರಾದ ಪಿ. ಶೇಷಪ್ಪಯ್ಯ ಹೆಬ್ಬಾರ್ ಮಾತನಾಡಿ ಬೇಸಿಗೆ ಶಿಬಿರಗಳು ಮಕ್ಕಳು ಸರ್ವಾಂಗಿಣ ವಿಕಸನಕ್ಕೆ ಪೂರಕವಾಗಿರಬೇಕು ಹಾಗೂ ಕುತೂಹಲ ಕೆರಳಿಸಿ ಕೌಶಲ್ಯಯುತ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಶುಭಹಾರೈಸಿದರು ಮುಖ್ಯ ಅತಿಥಿಗಳಾಗಿ ರಂಗ ಅಧ್ಯಯನ ಕೇಂದ್ರ ಕುಂದಾಪುರದ ನಾಟಕ ನಿರ್ದೇಶಕರು ಹಾಗೂ ಉಪನ್ಯಾಸಕರಾದ ವಿನಾಯಕ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ರಾಯಚೂರು, ಪ್ರಕಾಶ ಕೊಪ್ಪಳ, ಬೈಂದೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಸರ್ವೋತ್ತಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ಸ್ವಾಗತಿಸಿದರು. ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರದ ಕಾರ್ಯಯೋಜನೆಗಳನ್ನು ತಿಳಿಸಿದರು. ಸ.ಹಿ.ಪ್ರಾ. ಶಾಲೆ ಯಳಜಿತ್ ಇಲ್ಲಿಯ ಸಹಶಿಕ್ಷಕಿ ಜ್ಯೋತಿ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಶ್ಚಿತಾ ವಂದಿಸಿದರು.

Read More

ಕುಂದಾಪುರ: ಇಲ್ಲಿನ ಹಂಗ್ಳೂರಿನ ಸಾಗರ್ ಜಾನ್ಸನ್ ತಂಡವು ಪಡುಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಸಮರ್ಥ್ ಟ್ರೋಫಿಯೊಂದಿಗೆ ನಗದು ರೂ.1 ಲಕ್ಷ ತನ್ನದಾಗಿಸಿಕೊಂಡಿದೆ. ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ 6 ಓವರ್‌ಗಳ ಪಂದ್ಯಾಟದಲ್ಲಿ ಟಾಸ್ ಸೋತ ಎಕೆ ಸ್ಪೋರ್ಟ್ಸ್ 7 ವಿಕೆಟ್ ಕಳಕೊಂಡು 44 ರನ್ ಗಳಿಸಿತು. ಗುರಿ ಬೆನ್ನತ್ತಿದ ಜಾನ್ಸನ್ ತಂಡವು 3.5 ಓವರ್‌ಗಳಲ್ಲಿ 1 ವಿಕೆಟ್ ಕಳಕೊಂಡು ವಿಜಯ ಸಾಧಿಸಿತು. ಇದಕ್ಕೆ ಮುನ್ನ ನಡೆದ ಸೆಮಿ ಫೈನಲ್‌ಗಳಲ್ಲಿ ಜಾನ್ಸನ್ ತಂಡವು ಸಿಟಿ ಫ್ರೆಂಡ್ಸ್ ಕೊಲ್ನಾಡು ತಂಡ(43/6)ವನ್ನು 10 ವಿಕೆಟ್‌ಗಳಿಂದಲೂ, ಎಕೆ ತಂಡವು(63/3) ಮಾರುತಿ ಹೆಜಮಾಡಿ(30/6)ವನ್ನು 39 ರನ್‌ಗಳಿಂದಲೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠರಾಗಿ ಜಾನ್ಸನ್ ತಂಡದ ಸ್ವಸ್ತಿಕ್ ನಗರ್, ಅತ್ಯುತ್ತಮ ದಾಂಡಿಗರಾಗಿ ಎಕೆ ತಂಡದ ಮನೋಹರ್ ಹಾಗೂ ಅದೇ ತಂಡದ ಗುರುಪ್ರಸಾದ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು. ಈ ವರ್ಷ ಉದ್ಯಾವರ, ಕಟಪಾಡಿ, ತುಮಕೂರಿನಲ್ಲಿ ನಡೆದ…

Read More

‘ಸರಸ್ವತಿ ಸಮ್ಮಾನ್’ ಕನ್ನಡ ಸಾಹಿತ್ಯಕ್ಕೆ ದೊರೆತರೂ ಸಂಭ್ರಮಿಸದಿರುವುದು ದುರಂತ ಕುಂದಾಪುರ: ದೇಶದ ಅತ್ಯುನ್ನತ ಪುರಸ್ಕಾರಗಳಲ್ಲೊಂದಾದ ಸರಸ್ವತಿ ಸಮ್ಮಾನ್ ಕನ್ನಡ ಸಾಹಿತ್ಯಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕನ್ನಡಿಗರು ಸಂಭ್ರಮಿಸಬೇಕಾದ ಹೊತ್ತಿನಲ್ಲಿ ಮಹಾಕಾವ್ಯ ಬರೆದ ಲೇಖಕನನ್ನು ಲೇಖಕನೇ ಅಲ್ಲ, ಮಹಾಕಾವ್ಯದಲ್ಲಿರುವುದು ಅವರ ಬರಹವೇ ಅಲ್ಲ ಎಂದು ದೂಷಿಸುವುದರ ಕುರಿತು ಉಡುಪಿ ಜಿಲ್ಲಾ ಮಾಜಿ ಕಸಾಪ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು ಅವರು ಕುಂದಪ್ರಭ ಟ್ರಸ್ಟ್ ನ ಆಶ್ರಯದಲ್ಲಿ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಜರುಗಿದ ‘ಮಡಿಕೆ ಮಾರುವ ಹುಡುಗ’ ಕವನ ಸಂಕಲನವನ್ನು ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಪ್ಪ ಮೊಯ್ಲಿ ಒಬ್ಬ ಉತ್ತಮ ಬರಹಗಾರ ಎಂಬುದನ್ನು ಕಾಲೇಜು ದಿನಗಳಿಂದಲೂ ಚನ್ನಾಗಿ ಬಲ್ಲೆ. ಅವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯಕ್ಕೆ ಪ್ರಶಸ್ತಿ ಒಲಿದು ಬಂದಾಗ ಸಾಹಿತ್ಯಲೋಕ ಸಂಭ್ರಮಿಸಬೇಕಿತ್ತು. ಬದಲಿಗೆ ಅವರ ದೂಷಣೆಗೆ ನಿಂತು ಸರಳ ಹಾಗೂ ಆಧುನಿಕ ದೃಷ್ಟಿಕೋನವನ್ನೊಳಗೊಂಡಿರುವ ಅವರ ಕಾವ್ಯದ ಬಗ್ಗೆ ಅಪಪ್ರಚಾರ ಮಾಡಿದರು. ವಿಶಾಲ ಮನಸ್ಸಿನ ಕನ್ನಡಿಗರು ಬರಹಗಾರನೊಬ್ಬನನ್ನು ಈ ರೀತಿಯಲ್ಲಿ ಹೀಗೆಳೆಯುವುದು ತನಗೆ…

Read More

ಓದು ಹಾಗೂ ಗ್ರಹಿಕೆ ಹೆಚ್ಚಿಸಿಕೊಂಡು ಬರಹ ಜನನುಡಿಯಾಗಬಲ್ಲದು: ಡಾ| ರೇಖಾ ಬನ್ನಾಡಿ ಕುಂದಾಪುರ: ಜಾಗತೀಕರಣದ ಪರಿಣಾಮದಿಂದಾಗಿ ಸ್ವರ್ಧೆಗೆ ಬಿದ್ದಿರುವ ಯುವಜನರು ಸೃಜನಶೀಲತೆಯನ್ನೇ ಮರೆತಿದ್ದಾರೆ. ಪೂರ್ತಿ ಗ್ರಾಮೀಣ ಸೊಗಡನ್ನು ಕಳೆದುಕೊಳ್ಳದ, ಸಂಪೂರ್ಣವಾಗಿ ಹೊಸತನಕ್ಕೆ ತೆರೆದುಕೊಳ್ಳದ ಕುಂದಾಪುರದಲ್ಲಿಯೂ ಸಾಹಿತ್ಯದ ಆಸಕ್ತಿ ಕ್ಷೀಣಿಸುತ್ತಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಅಲ್ಲಲ್ಲಿ ಉತ್ತಮವಾದ ಸಾಹಿತ್ಯ ಸೃಷ್ಟಿಯಾಗುತ್ತಿರುವುದು ಅಭಿನಂದನಾರ್ಹ ಎಂದು ಉಪನ್ಯಾಸಕಿ ಡಾ| ರೇಖಾ ವಿ. ಬನ್ನಾಡಿ ಹೇಳಿದರು. ಅವರು ಕುಂದಪ್ರಭ ಟ್ರಸ್ಟ್ ನ ಆಶ್ರಯದಲ್ಲಿ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ‘ಮಡಿಕೆ ಮಾರುವ ಹುಡುಗ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕವಿಯ ದಾರ್ಶನಿಕತೆ ಹಾಗೂ ಜನನುಡಿ ಕವಿತ್ವದಿಂದ ಹೊರಬೇರಬೇಕಾದರೆ ಆತನ ಓದು ಹಾಗೂ ಸಾಹಿತ್ಯ ಗ್ರಹಿಕೆಯ ಮಟ್ಟ ಹೆಚ್ಚಬೇಕು. ಮಡಿಕೆ ಮಾರುವ ಹುಡುಗ ಕೃತಿಯಲ್ಲಿ ಬಾಲ್ಯ ಹಾಗೂ ಬದುಕಿನ ಚಿತ್ರಣವನ್ನು ಕವಿಯು ಸರಳವಾಗಿ ಕಟ್ಟಿಕೊಟ್ಟಿರುವ ಕೆಲಸ ಮಾಡಿದ್ದಾರೆ ಎಂದರು. ಪುಸ್ತಕದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಕೊ. ಶಿವಾನಂದ ಕಾರಂತ, ಮಡಿಕೆ ಮಾರುವ ಹುಡುಗ ಪುಸ್ತಕದ ಹೆಸರೇ…

Read More

ಕುಂದಾಪುರ: ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ, ಜೆಸಿಐ ಕುಂದಾಪುರ ಸಿಟಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ರಂಗರಂಗು ಮಕ್ಕಳ ಉಚಿತ ರಜಾಮೇಳ ವಡೇರಹೋಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಜೆ.ಸಿ.ಐ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಬಣ್ಣಬಳಿದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಮೇಳವು ನಾನು ಭಾಗವಹಿಸುತ್ತಿರುವ ಕಾರ್ಯಕ್ರಮಗಳಲ್ಲೇ ವಿನೂತನವಾದದ್ದು. ರಜಾ ಮೇಳಗಳು ವ್ಯಾಪಾರವಾಗುತ್ತಿರುವ ದಿನಗಳಲ್ಲಿ ಕುಂದಾಪುರ ಸಮುದಾಯವು ಉಚಿತ ಮೇವನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದರು. ಉದ್ಘಾಟನಾ ಸಭೆಯಲ್ಲಿ ವ್ಯಂಗ್ಯಚಿತ್ರಕಾರ ಕೇಶವ ಸಸಿಹಿತ್ಲು, ವಡೇರಹೋಬಳಿ ಸರಕಾರಿ ಶಾಲೆಯ ಮುಖ್ಯಶಿಕ್ಷಕರಾದ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸದಾನಂದ ಬೈಂದೂರು ಸ್ವಾಗತಿಸಿ ನಿರೂಪಿಸಿದರು. ಎಂಟುದಿನಗಳ ಕಾಲ ನಡೆಯುವ ಮೇಳದಲ್ಲಿ ಮಕ್ಕಳು ರಂಗಕರ್ಮಿ ವಾಸುದೇವ ಗಂಗೇರ ನಿರ್ದೇಶನದಲ್ಲಿ ‘ನಕ್ಕಳಾ ರಾಜಕುಮಾರಿ’ ಎಂಬ ನಾಟಕವನ್ನು ಅಭಿನಯಿಸುವರು. ಮೇಳದ ಸಮಾರೋಪದಲ್ಲಿ ನಾಟಕದ ಪ್ರದರ್ಶನವಿರುತ್ತದೆ. ಕುಂಬಾರಿಕೆಯೂ ಸೇರಿದಂತೆ ಶ್ರಮಸಂಸ್ಕೃತಿಯ ಮೂಲಕ ಒಡಮೂಡುವ ಕಲಾಪ್ರಕಾರಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಲಾಗುವುದು. ಉಳಿದಂತೆ,…

Read More