ಮಾತಿಗ್ ಜನ ಹೇಳುದಿತ್ ‘ನಾಟ್ಕದೌರ್ನ್ ನಂಬುಕಾಗ’. ಅದಕ್ ನಾವ್ ಹೇಳುದ್ ‘ನಾವ್ ಬರಿ ವೇದ್ಕಿ ಮೇಲ್ ಮಾತ್ರ ನಾಟ್ಕು ಮಾಡುವರ್… ಹಾಂಗಂಬುಕ್ ಹೋರೆ ಈಗ್ಲಿನ್ ಕಾಲ್ದಾಗೆ ಯಾರನ್ ಯಾರೂ ನಂಬು ಹಾಂಗಿಲ್ಲೆ. ನಾವ್ ನಾಟ್ಕು ಮಾಡುಕ್ ಎಷ್ಟ್ ಕಷ್ಟು ಪಡತ್ ಅಂದ್ಹೇಳಿ ಅವ್ರಿಗ್ ಎಂತ ಗೊತಿತ್. ಒಂದ್ ನಾಟ್ಕು ಮಾಡುಕೆ ಎಷ್ಟ್ ಶ್ರಮು ಹಾಕಕ್. ಆ ಪುಸ್ತಾಕ್ದಾಂಗಿನ್ ಮಾತ್ ಬಾಯಿ ಪಾಟು ಮಾಡ್ಕ್, ದಿನಾ ಬಯ್ಯಾಪತಿಂದ್ ಹಿಡ್ದ್ ರಾತ್ರಿ ಹತ್ ಹನ್ನೂಂದ್ ಗಂಟಿವರಿಗೂ ಯಾವಯದಾರೂ ದೇವಸ್ಥಾನದ್ ಚಾವಡಿಯಾಂಗೂ, ಇಲ್ಲಾ ಯಾರ್ದಾರೂ ಗುರ್ತಿದ್ದರ್ ಮನಿ ಮೆತ್ತಿನ್ ಮ್ಯಾಲೋ ಅಭ್ಯಾಸು ಮಾಡ್ಕಾತ್. ತಿಂಗ್ಳಾನ್ ಗಟ್ಲಿ ಹೀಂಗೆ ಮಾಡ್ರ ಮ್ಯಾಲೆ ಒಂದ್ ನಾಟ್ಕು ತಯರಾತ್. ಕಡೀಕ್ ಒಂದ್ ದಿನು ಅದ್ರ ಪ್ರದರ್ಸನು ಇಟ್ಕಂಡ್ ಅದಕ್ ಗೊಸ್ರಾಯ್ ಅವ್ರ್ ಇವ್ರ್ ಹತ್ರ್ ಹೋಯ್ ದುಡ್ಡ್ ಒಟ್ಟ್ ಹಾಯ್ಕಂಡ್ ಅಂತೂ ಆ ನಾಟ್ಕು ವೇದ್ಕಿ ಮ್ಯಾಲ್ ಆಡುದ್. ಮರ್ ದಿನು ಪ್ಯಾಟಿ ಬದಿ ಬಂದಾಳಿಕೆ ಯಾರಾರು ಸಿಕ್ಕಿ ನಮ್…
Author: Editor Desk
ಜಪಾನಿಗರು ಹಚ್ಚಿಕೊಂಡಿರುವ ಕೆಲಸದ ಗೀಳು ಅಲ್ಲಿನ ಸರಕಾರಕ್ಕೆ ದೊಡ್ಡ ತಲೆನೋವು ತಂದಿದೆ. ಅಷ್ಟೇ ಅಲ್ಲ ಜನರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಅಲ್ಲಿನ ಸರಕಾರ ಕಾನೂನು ತರಲು ಮುಂದಾಗಿದೆ. ಜಪಾನ್‌ನಲ್ಲಿ ಸಾಮಾನ್ಯವಾಗಿ ದುರ್ಬಲರು, ಅಶಕ್ತರು ಹೊರತುಪಡಿಸಿ ಯಾವುದೇ ಉದ್ಯೋಗಿ ರಜೆ ದಿನಗಳನ್ನು ಬಳಸಿಕೊಳ್ಳುತ್ತಿಲ್ಲ. ”ಕಳೆದ ವರ್ಷ 20 ವೇತನ ಸಹಿತ ರಜೆಯಲ್ಲಿ 8 ತೆಗೆದುಕೊಂಡಿದ್ದೆ. ಅದರಲ್ಲಿ 6 ಅನಾರೋಗ್ಯದ ಕಾರಣಕ್ಕೆ ಬಳಕೆಯಾಗಿದೆ. ಯಾರೂ ರಜಾದಿನಗಳನ್ನು ಬಳಸಿಕೊಳ್ಳುತ್ತಿಲ್ಲ ,”ಎಂದು ಪ್ರಮುಖ ಟ್ರೇಡಿಂಗ್ ಕಂಪೆನಿಯಲ್ಲಿ ದಿನದ 14 ಗಂಟೆ ಕಾರ‌್ಯ ನಿರ್ವಹಿಸುತ್ತಿರುವ 36 ವರ್ಷದ ಎರಿಕೊ ಸೆಕಿಗುಚಿ ಹೇಳುತ್ತಾರೆ. ಇದು ಜಪಾನಿಗರು ಹಚ್ಚಿಕೊಂಡಿರುವ ಕೆಲಸದ ಗೀಳಿಗೆ ಸಾಕ್ಷಿ. ಉದ್ಯೊಗಿಗಳಿಗೆ ರಜೆ ಪಡೆಯಲು ಅವಕಾಶ ಕಲ್ಪಿಸುವ ಕಾನೂನನ್ನು ಜ.26ರಂದು ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. ಅಗತ್ಯವಾದರೆ ಉದ್ಯೋಗಿಗಳು ವಿಶ್ರಾಂತಿ ಪಡೆಯಲು ನೆರವಾಗುವ ಜತೆಗೆ ಉದ್ಯೊಗಿಗಳಿಗೆ ರಜೆ ತೆಗೆದುಕೊಳ್ಳಲು ಅವಕಾಶ…
ಭಾರತ ಪುರಾತನಕಾಲದಿಂದಲೂ ಕೂಡ ತನ್ನ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಹೆಸರಾದ ದೇಶ. ಗ್ರೀಕ್, ರೋಮನ್ ನಾಗರೀಕತೆ ಹಾಗೂ ಸಂಸ್ಕೃತಿಗೆ ಸರಿಸಾಟಿ ಎಂಬಂತೆ ಬೆಳೆದ ನಾಗರೀಕತೆ ಭಾರತದ್ದು. ಗ್ರೀಕ್,ರೋಮನ್ ರಂಗಭೂಮಿಯಷ್ಟೇ ಉನ್ನತಕ್ಕೇರಿದ ರಂಗ ಪರಂಪರೆ ಭಾರತಕ್ಕಿದೆ. ಭಾರತೀಯ ರಂಗಭೂಮಿ ಇತರ ರಂಗಭೂಮಿಗಳಿಗಿಂತ ವಿಭಿನ್ನ,ವಿಶಿಷ್ಟ. ಭಾರತೀಯ ರಂಗಭೂಮಿಯ ಮೂಲ ಇರುವುದು ಭಾರತದ ಪುರಾಣ, ಇತಿಹಾಸ ಮತ್ತು ಧಾರ್ಮಿಕತೆಯಲ್ಲಿ. ಇಂದ್ರಾದಿ ದೇವತೆಗಳು ಮನೋರಂಜನೆಗಾಗಿ ಬ್ರಹ್ಮನಿಂದ ಆಜ್ನಾಪಿಸಲ್ಪಟ್ಟು ‘ಸಮುದ್ರ ಮಂಥನ’ ಪ್ರಕರಣವನ್ನು ಅಭಿನಯಿಸಿದರು. ಮತ್ತು ವೇದಗಳು ಕೆಳಜಾತಿಗೆ ನಿಷಿದ್ಧವಾದ್ದರಿಂದ ಎಲ್ಲಾ ವರ್ಣಗಳಿಗೂ ಲಭ್ಯವಾಗುವ, ಕೇಳಲು, ನೋಡಲು ರಂಜಿತವಾಗುವಂಥಹ ಐದನೇಯ ವೇದವನ್ನು ರಚಿಸು ಎಂದು ಬ್ರಹ್ಮನು ಭರತ ಮುನಿಗೆ ಹೇಳಿದನು. ಇವುಗಳೇ ಭಾರತೀಯ ರಂಗಭೂಮಿಯ ಉಗಮದ ಕಾರಣ ಎನ್ನುವ ವಾದ ಮೇಲಿನ ಮಾತನ್ನು ಪುಷ್ಠೀಕರಿದುತ್ತದೆ. ಹೇಗೆ ರೋಮ್ ನಲ್ಲಿ ನಡೆಯುತ್ತಿದ್ದ ಉತ್ಸವಗಳು ರೋಮನ್ ರಂಗಭೂಮಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತೋ ಹಾಗೆಯೇ ಭಾರತೀಯ ರಂಗಭೂಮಿಯ ಮೇಲೆ ನಮ್ಮ ಪುರಾಣ, ಕಥೆಗಳು ಮತ್ತು ಧಾರ್ಮಿಕ ಆಚರಣೆಗಳು ಪ್ರಭಾವ ಬೀರಿದೆ. ರಾಮಾಯಣ,…
14ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ಟರು ಕುಂದಾಪ್ರ ಡಾಟ್ ಕಾಂ ಗೆ ಅವರ ಮನೆಯಲ್ಲಿ ಮಾತಿಗೆ ಸಿಕ್ಕಾಗ ಹಂಚಿಕೊಂಡ ಒಂದಿಷ್ಟು ವಿಚಾರಗಳು: * 14ನೇ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಈ ಬಗ್ಗೆ ತಮಗೆ ಎನೆನ್ನಿಸುತ್ತಿದೆ. ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆ ಮಾಡಿರುವುದು ಸಹಜವಾಗಿ ನನಗೆ ಖುಷಿ ತಂದಿದೆ. ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದಸ್ಯನಾಗಿ, ಕಾರ್ಯದರ್ಶಿಯಾಗಿ, ಸಮ್ಮೇಳನಗಳ ವಿವಿಧ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿರುವುದು ಕನ್ನಡದ ಬಗೆಗೆ ಹಲವು ಅನುಭವಗಳನ್ನು ನೀಡಿದೆ. ನನ್ನ ಸಾಹಿತ್ಯ ಸೇವೆಯನ್ನು ಗುರುತಿಸಿ 14ನೇ ಸಮ್ಮೇಳನದ ಸ್ವಾಗತಿ ಸಮಿತಿ ಹಾಗೂ ಸಾಹಿತ್ಯ ಪರಿಷತ್ ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆಮಾಡಿರುವುದು ನನ್ನು ಒಂದು ಹೊಸ ಅನುಭವಕ್ಕೆ ದಾರಿ ಮಾಡಿಕೊಟ್ಟಿದೆ. * ನಿಮ್ಮ ದೃಷ್ಟಿಯಲ್ಲಿ ಸಾಹಿತ್ಯವೆಂದರೇನು? ಹಿತೇನ ಯುಕ್ತಂ. ಹಿತದಿಂದ ಕೂಡಿರುವುದೇ ಸಾಹಿತ್ಯ. ಅದು ನಮ್ಮ ಬರವಣಿಗೆಯಾಗಿರಬಹುದು ಇಲ್ಲವೇ ಭಾಷೆಯ ಅಭಿವ್ಯಕ್ತಿಯಲ್ಲಾಗಿರಬಹುದು. ಸಾಹಿತ್ಯ ಸೃಷ್ಟಿಸುವಾತ ತನಗೆ ಮತ್ತು…
ಕನ್ನಡ ರಾಜ್ಯೋತ್ಸವವನ್ನು ಕೇವಲ ಆಚರಣೆಗಷ್ಟೇ ಸೀಮಿತಗೋಳಿಸದೇ ನಾಡು–ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾಗಿದೆ. ಕನ್ನಡ ರಾಜ್ಯ ನಿರ್ಮಾಣವಾಗಿ 58 ವರ್ಷಗಳು ಉರುಳಿದರೂ ಇನ್ನೂ ರಾಜ್ಯದಲ್ಲಿ ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಸಿಗಬೇಕಾದ ಸಾರ್ವಭೌಮ ಸ್ಥಾನಮಾನ ಸಿಕ್ಕಿಲ್ಲ. ಜನಜೀವನದ ಎಲ್ಲಾ ವಿಭಾಗದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆನ್ನುವ ಒತ್ತಾಯವನ್ನು ಹೇರಬೇಕಾದ ಸಮಯದಲ್ಲಿ ನಾವಿನ್ನು ಕನ್ನಡ ಶಾಲೆಗಳನ್ನು ಮುಚ್ಚುವವರ ವಿರುದ್ಧ ಧ್ವನಿ ಎತ್ತಬೇಕಾದ ಸ್ಥಿತಿಯಲ್ಲಿದ್ದೆವೆ. ಕನ್ನಡ ನಾಡಿನ ಉದ್ಧಾರಕ್ಕಾಗಿ ಸಿದ್ದಪಡಿಸಿಟ್ಟ ವರದಿಗಳೇಲ್ಲವೂ ಧೂಳು ಹಿಡಿಯುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ, ಪ್ರಭಾವ ಬೀರುವ ಕೆಟ್ಟ ಚಾಳಿ ನಿಂತಿದೆ ಎನ್ನಲಾಗದು. ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್ಯಾಸವೇ ಸರಿ. ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ನಮ್ಮ ನಡುವೆ ಸಾಮಾನ್ಯರ ಭಾವುಕತೆಯನ್ನು ಬಂಡವಾಳ…
ಬೈಂದೂರು: ಕೊಂಕಣ ರೈಲ್ವೇ ಆರಂಭಗೊಂಡಾಗ ಕೇವಲ ಒಂದು ಲೋಕಲ್ ರೈಲು ನಿಲುಗಡೆಗಷ್ಟೇ ಅವಕಾಶವಿದ್ದ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಇಂದು ಹಲವಾರು ಏಕ್ಸಪ್ರೆಸ್ ರೈಲುಗಳು ನಿಲುಗಡೆಯನ್ನು ಕಂಡುಕೊಂಡಿದೆ. ನಿಲುಗಡೆ ನಿಲ್ದಾಣ ಎನಿಸಿಕೊಂಡಿದ್ದ ರೈಲ್ವೇ ನಿಲ್ದಾಣವು ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ಇಲ್ಲಿನ ಜನತೆಯ ಹೋರಾಟದ ಮೂಲಕವೇ ಹತ್ತಾರು ಮಹತ್ತರವಾದ ಸೌಲಭ್ಯಗಳನ್ನು ಪಡೆದುಕೊಂಡ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣವು ಕೊಂಕಣ ರೈಲ್ವೇ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿಯೇ ಕೊನೆಯ ದರ್ಜೆ ನಿಲ್ದಾಣವಾಗಿದ್ದರೂ, ದೇಶದ ಪ್ರಥಮ ದರ್ಜೆ ನಿಲ್ದಾಣಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಏಕೈಕ ರೈಲ್ವೇ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನಿಲ್ದಾಣದಲ್ಲಿ ಸದ್ಯ 24 ಗಂಟೆ ವಿದ್ಯುತ್, ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ವಿಶ್ರಾಂತಿ ಆಸನಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ಪ್ರತ್ಯೇಕವಾದ ಶೌಚಾಲಯ ಇದೆ. ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಕೂಡ ಇದ್ದು ಹದಿಮೂರು ಎಕ್ಸ್‍ಪ್ರೆಕ್ಸ್ ಮತ್ತು ನಾಲ್ಕು ಪ್ಯಾಸೆಂಜರ್ ರೈಲುಗಳಿಗೆ ನಿಲುಗಡೆಯಿದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವಿಶೇಷ ರೈಲು ಸೌಲಭ್ಯ ಇರುತ್ತದೆ. ರಾಜಸ್ಥಾನದ…
ಕುಂದಾಪ್ರ ಡಾಟ್ ಕಾಂ | ಅ.15, 2014 ಕುಂದಾಪುರ: ಕುಂದಾಪ್ರ ಕನ್ನಡದ ಹಾಡಿನ ಮೂಲಕ ಮನೆಮಾತಾಗಿದ್ದ ಪಣ್ಕ ಮಕ್ಕಳ್ ತಂಡ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕುಂದಾಪ್ರ ಕನ್ನಡದಲ್ಲಿಯೇ ಸಿನೆಮಾವೊಂದನ್ನು ತೆರೆಯ ಮೇಲೆ ತರುತ್ತಿದೆ. ಒಟ್ನಾಗ್ ನಾವ್ಯಾರಿಗೂ ಕಮೀ ಇಲ್ಲ ಅಂದೇಳಿ ಕುಂದಾಪ್ರದ ಪಣ್ಕ್ ಮಕ್ಳ್ ಹೇಳೂಕ್ ಹೊರಟಿರ್. ಸಾಮಾಜಿಕವಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕುಂದಾಪುರ ಸಾಕಷ್ಟು ಹೆಸರು ಮಾಡಿದ್ದರೂ ಕೂಡ ಜನರ ನಡುವಿನ ಭಾಷಾಭಿಮಾನದಲ್ಲಿ ಅದೆನೋ ಕೊರತೆ ಕಾಣಿಸುತ್ತಿದೆ. ಕುಂದಾಪುರದವರಿಗೆ ಭಾಷೆಯ ಬಗ್ಗೆ ಕೀಳರಿಮೆ, ಅಸಡ್ಡೆ ಸಹಜವೆಂಬಂತೆ ಬೇರೂರುತ್ತಿದೆ. ಜನರಲ್ಲಿನ ಈ ಮನೋಭಾವ ದೂರವಾಗಬೇಕು, ಭಾಷಾಭಿಮಾನ ಬೆಳೆಯಬೇಕು ಎಂಬ ಸದುದ್ದೇಶದಿಂದ ಕುಂದಾಪ್ರ ಕನ್ನಡದಲ್ಲಿಯೇ ಕಮರ್ಶಿಯಲ್ ಸಿನೆಮಾವೊಂದನ್ನು ತರಲು ಪಣ್ಕ್ ಮಕ್ಕಳ್ ತಂಡ ಸಿದ್ದತೆ ನಡೆಸಿದ್ದು ಬಿಡುಗಡೆಯ ಹಂತ ತಲುಪಿದೆ. ಗರ್‍ಗರ್‍ಮಂಡ್ಲ (GarGarMandla). ಪಣ್ಕ್ ಮಕ್ಕಳ್ ಮೂವಿಸ್ ಹಾಗೂ ಇನ್‌ಫೈನೆಟ್ ಪಿಚ್ಚರ್ಸ ಪ್ರಸ್ತುತ ಪಡಿಸುತ್ತಿರುವ ಸಿನೆಮಾವನ್ನು ಸಂಗೀತ ನಿರ್ದೇಶಕರಾದ ರವಿ ಬಸ್ರೂರು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ತನ್ನ ಸುತ್ತಮುತ್ತ ಘಟಿಸುವ…
ಸ್ವಾತಂತ್ರ್ಯ ಎಂಬ ಆಸ್ತಿಯನ್ನು ನಮ್ಮದಾಗಿಸಿಕೊಂಡು ಅರವತ್ತಾರು ವರ್ಷಗಳು ಸರಿದು ಹೋಯಿತು. ವರ್ಷಗಳು ಸರಿದಂತೆಲ್ಲಾ ಪ್ರಶ್ನೆಯೊಂದು ಕಾಡಲಾರಂಭಿಸಿದೆ; ನಿಜಕ್ಕೂ ನಾವು ಸ್ವತಂತ್ರರಾ? ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅನಾಚಾರ, ಅತ್ಯಾಚಾರ, ಅಸಮಾನತೆ, ಅಭದ್ರತೆಯ ಪಿಡುಗು ಇಂತಹದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಿಹಿ ತಿಂದು ಸಂಭ್ರಮಿಸಿ ಮಲಗಿದರೆ ಏನು ಬಂತು? ಸ್ವಾತಂತ್ರ್ಯ ದಿನಕ್ಕೊಂದು ನಿಜವಾದ ಅರ್ಥ ಕಟ್ಟಿಕೊಡೋದು ಬೇಡವೇ? ನಮ್ಮ ದೇಶ ಇನ್ನದೇಷ್ಟೋ ರಂಗಗಳಲ್ಲಿ ಅಭಿವೃದ್ಧಿ ಕಾಣಬೇಕಿದೆ. ನಮ್ಮನ್ನಾವರಿಸಿರುವ ರಾಜಕೀಯದೊಳಗಿನ ಹೊಲಸು , ಭ್ರಷ್ಟಾಚಾರ ತೊಲಗಬೇಕಿದೆ. ಸಾಫ್ಟ್ ಸಂಸ್ಕ್ರತಿಯ ಯುಗದಲ್ಲೂ ಇರುವ ಮೂಢನಂಬಿಕೆ, ಸಾಮಾಜಿಕ ಅನಿಷ್ಠಗಳಿಗೆ ಅಂತ್ಯ ಹಾಡಬೇಕಿದೆ. ಬಡವ-ಬಲ್ಲಿದನ ನಡುವಿನ ಅಂತರ ಅಳಿಯಬೇಕಿದೆ. ಹೀಗೆ ನಮ್ಮ ನಡುವಿನ ಮುಲಭೂತ ಸಮಸ್ಸೆಗಳಿಗೊಂದು ಪರಿಹಾರ ಕಂಡುಕೊಂಡಾಗಲೇ ನಾವು ದಕ್ಕಿಸಿಕೊಂಡ ಸ್ವಾತಂತ್ರ್ಯಕ್ಕೊಂದು ನಿಜಾರ್ಥದಲ್ಲಿ ನಮ್ಮದಾಗುವುದು. ಕುಂದಾಪ್ರ ಡಾಟ್ ಕಾಂ ಓದುಗರೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಇಂದು ಕಾರ್ಗಿಲ್ ಯುದ್ಧ ಗೆದ್ಧ 15ನೇ ವರ್ಷಾಚರಣೆ. ‘ಕಾರ್ಗಿಲ್ ವಿಜಯ್ ದಿವಸ್’… 1999 ರಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ನಡೆದ ಕಾಳಗದಲ್ಲಿ ಮಡಿದವರನ್ನು ನೆನೆಸಿಕೊಳ್ಳುವ ದಿನವಿದು. ಯುದ್ಧದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಆ ಸಮಯಕ್ಕೆ ನಮ್ಮ ಮೈಯಲ್ಲಿ ಅದೆಂಥಾ ಉತ್ಕರ್ಷ ಭೋರ್ಗರೆದಿತ್ತು ಎಂಬುದು ನೆನಪಿಗೆ ಬರುತ್ತದೆ. ಅಂದು ನಡೆದದ್ದು ಬರಿಯ ಯುದ್ಧವೇ ಆಗಿರದೆ ಭಾರತೀಯರ ಕೆಚ್ಚನ್ನು, ನಮ್ಮ ಸೈನಿಕರ ಶೌರ್ಯ, ಸಾಹಸವನ್ನು ವಿಶ್ವಕ್ಕೆ ತಿಳಿಯಪಡಿಸಿದ ಅಸಮಾನ್ಯ ಘಟನೆಯಾಗಿತ್ತು. ಹಿಮಾಲಯದ ತಪ್ಪಲಿನಲ್ಲಿ ಸುಮಾರು -15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸುಮಾರು 60 ದಿನಗಳ ನಡೆದ ಕಾರ್ಗಿಲ್ ಯುದ್ಧ ಜುಲೈ 26, 1999ರಂದು ಕೊನೆಗೊಂಡಿತ್ತು. ಆಪರೇಷನ್ ವಿಜಯ್ ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿತ್ತು. ದೇಶಕ್ಕಾಗಿ ಜೀವವನ್ನು ಕೊಟ್ಟ ಆ ಸೈನಿಕರ ಕೊಡುಗೆ ನಿಜಕ್ಕೂ ಕೊಂಡಾಡುವಂತದ್ದು. ಲೆ. ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಯೋಗೆಂದ್ರ ಸಿಂಗ್, ಸಂಜಯ್ ಕುಮಾರ್, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಬಲ್ವಾನ್ ಸಿಂಗ್, ಮೇಜರ್ ಸರವಣನ್, ಲೆಫ್ಟಿನೆಂಟ್ ಕಣಾದ್ ಭಟ್ಟಚಾರ್ಯ(22ವರ್ಷ),…
ಪತ್ರಿಕಾ ದಿನಾಚರಣೆಯ ಮನ್ನಾ ದಿನ ಡಾ| ಕೆ. ಎಂ. ರಾಘವ ನಂಬಿಯಾರ್ ಅವರಿಗೆ ಪತ್ರಿಕಾ ದಿನದ ಗೌರವ ಸಮರ್ಪಣೆ ಉಡುಪಿ: ಪತ್ರಕರ್ತರು ಸಹಕಾರಿ ಸಂಘಗಳನ್ನು ತೆರೆದು ಪತ್ರಿಕಾ ಕಂಪೆನಿಗಳನ್ನು ಸ್ಥಾಪಿಸಿ ನ್ಯಾಯನಿಷ್ಠ ಪತ್ರಕರ್ತರನ್ನು ಸೇರಿಸಿಕೊಂಡು ಸಮಾನತೆಯ ತಳಹದಿಯಲ್ಲಿ ಸಮಾಜದ ಆಶೋತ್ತರಗಳನ್ನು ಬಿಂಬಿಸುವ ಸಾಧನವಾಗಿ ಹೊಸ ದೃಷ್ಟಿಯ ಪತ್ರಿಕೆಗಳನ್ನು ತರಲು ಶ್ರಮಿಸಬೇಕು ಎಂದು ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಡಾ. ಕೆ. ಎಂ. ರಾಘವ ನಂಬಿಯಾರ್ ಹೇಳಿದರು. ಅವರು ಪತ್ರಕರ್ತರ ವೇದಿಕೆ (ರಿ). ಬೆಂಗಳೂರು, ಉಡುಪಿ ಜಿಲ್ಲಾ ಘಟಕ, ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆಯ ಏಳನೇ ಕಾರ್ಯಕ್ರಮದಲ್ಲಿ ಪತ್ರಿಕಾ ದಿನದ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು. ಹಿರಿಯ ಪತ್ರಕರ್ತ ನಾದವೈಭವಂ ವಾಸುದೇವ ಭಟ್ ಮಾತನಾಡಿ ಲೋಕ ಉಪಕಾರ ಅರಿಯದು ಎಂಬುದು ಸಹಜ, ಅದೆಷ್ಟೋ ಜನರ ಬದುಕನ್ನು ಹಸನಾಗಿಸಿದ ಪತ್ರಕರ್ತರ ಸೇವೆಯನ್ನು ಸಮಾಜ ಸ್ಮರಿಸುವುದು ಕಡಿಮೆ, ರಾಘವ ನಂಬಿಯಾರ್ ಅವರನ್ನು ಗುರುತಿಸುವ ಮೂಲಕ ಒಳ್ಳೆಯ ಕೆಲಸ ನಡೆದಿದೆ…
